ವಿಷಯಕ್ಕೆ ಹೋಗು

ನೀತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ನೀತು ಇವರು ಉತ್ತರ ಕರ್ನಾಟಕದಲ್ಲಿ ಜನಿಸಿದರು. ಪ್ರಸ್ತುತ ಇವರು ಬೆಂಗಳೂರಿನಲ್ಲಿ ತಮ್ಮ ಕಾರ್ಯನಿರ್ವಹಿಸುತ್ತಲಿದ್ದಾರೆ. ಇವರಿಗೆ ಭಾರತದ ಮೊದಲ ಮಂಗಳಮುಖಿ ಟೇಟೋ ಆರ‍್ಟಿಸ್ಟ್ ಎಂದು ಬಿರುದು ಸಿಕ್ಕಿದೆ. ಬಾಲ್ಯದಿಂದ ಹಲವಾರು ಕಷ್ಟಗಳನ್ನು ಎದುರಿಸಿದ ನೀತು ಅವರು ಇದೀಗ ಭಾರತದಲ್ಲಿಯೇ ತಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಮಂಗಳಮುಖಿಯರಿಗೆ ಸಮಾಜದಲ್ಲಿ ಅವಕಾಶಗಳು ಸಿಗುವುದು ಕಡಿಮೆ ಎನ್ನುವುದನ್ನು ಸುಳ್ಳು ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇನ್ನು ಇವರು ಟ್ಯಾಟೂ ಶಾಪ್ ತೆರೆದು ೭ ವರ್ಷಗಳೇ ಆಗುತ್ತಾ ಬಂದಿದೆ. ಇದರೊಂದಿಗೆ ಬ್ಯೂಟಿ ಪಾರ್ಲರ್ ಕೂಡ ಇವರಿಗಿದೆ. ತನ್ನ ತಾಯಿಗೆ ಅಡುಗೆಯಲ್ಲಿ ಬಹಳ ಆಸಕ್ತಿಯಿತ್ತಂತೆ ಆದುದರಿಂದ ರೆಸ್ಟೊರೆಂಟ್ ತೆರೆದಿದ್ದಾರೆ. ಇವರು ಸುಮಾರು ೪೦ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಕೊಟ್ಟಿರುವುದು ವಿಶೇಷ.

ವಿದ್ಯಾಬ್ಯಾಸ[ಬದಲಾಯಿಸಿ]

ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರಗೆ ಮೋಡಲ್ ಹೈ ಸ್ಕೂಲ್. ದ್ವಿತಿಯ ಪಿಯೂಸಿ ವಿಜಯ ರಥ ಮಂದಿರ ಗದಗ. ಬಿ.ವಿ.ಎ ಏನಿಮೇಶನ್ ಡಿಪ್ಲೊಮೊ.

ಸಾದನೆ[ಬದಲಾಯಿಸಿ]

ಫಸ್ಟ್ ಟ್ರಾಸ್ಸ್ ಟ್ಯಾಟೊ ಆರ‍್ಟಿಸ್ಟ್ ಇನ್ ದಿ ವಲ್ಡ್, ಮಿಸ್ ಟ್ರಾಸ್ಸ್ ಬಂಗಾರದ ಪದಕ ೨೦೧೭, ಮಿಸ್ ಟ್ರಾಸ್ಸ್ ಕ್ವೀನ್, ೨೦೧೯ ಟಾಲೆಂಟ್ ಮಿಸ್ ಮತ್ತು ಮಿಸ್ಟರ್ ಬೆಂಗಳೂರುನಲ್ಲಿ ಪ್ರಥಮ ಸ್ಥಾನ.

ಪ್ರಸ್ತುತ ಕೆಲಸಗಳು[ಬದಲಾಯಿಸಿ]

೩ ಟ್ಯಾಟೂ ಸ್ಟೂ /ಯೂ , ರೆಸ್ಟೊರೆಂಟ್, ಬ್ಯೂಟಿ ಪಾರ್ಲರ್.

ಜೀವನ[ಬದಲಾಯಿಸಿ]

ಇವರು ಗದಗದಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ. ಇವರ ಜೀವನ ಶೈಲಿಯೇ ಬೇರೆ ನಾನು ಅನ್ನದೆ ನನ್ನವರಿಗಾಗಿ ಬದುಕುವವರು ಇವರು. ಭಾರತದ ಮೊದಲ ಮಂಗಳ ಮುಖಿ ಟ್ಯಾಟೋ ರ‍್ಟಿಸ್ಟ್ ಎನ್ನುವ ಹೆಗ್ಗಳಿಕೆ ಇವರದು. ತನ್ನ ಬಾಲ್ಯದಲ್ಲಿ ಹೂ ಕಟ್ಟಿ, ಉಪ್ಪಿನಕಾಯಿ ಪ್ಯಾಕಿಂಗ್ ಮಾಡಿ ತಮ್ಮ ವಿದ್ಯಾಬ್ಯಾಸವನ್ನು ಮಾಡಿದವರು ಇವರು. ತಮ್ಮ ಎಳೆ ವಯಸ್ಸಿನಲ್ಲಿ ಇವರಿಗೆ ತಾನು ಅವನಲ್ಲ ಅವಳು ಎಂದು ಮನವರಿಕೆಯಾದಾಗ ಸಮಾಜದತ್ತ ನೋಡಿ ತನ್ನ ಭಾವನೆಗಳನ್ನು ಮುಚ್ಚಿಡಲು ಪ್ರಯತ್ನಿಸಿದರು ತಮ್ಮ ದೈಹಿಕ ಪ್ರತಿಕ್ರಿಯೆಗಳನ್ನು ಇವರಿಂದ ಹಿಡಿದಿಡ ಲಾಗಿರಲಿಲ್ಲ.[೧] ಆದರೆ ಇವರ ತಂದೆ ತಾಯಿಯರು ಇವರನ್ನು ಯಾವುದೇ ಕಾರಣಕ್ಕು ಬಿಟ್ಟು ಕೊಡಲಿಲ್ಲ ಆದರೆ ಆರ್ಥಿಕವಾಗಿ ನೀತು ಅವರಿಗೆ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಅವರು ಇರಲಿಲ್ಲ. ತಮ್ಮ ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಗಳಲ್ಲಿ ಬಹಳ ಆಸಕ್ತಿ ಇದ್ದುದರಿಂದ ಇವರ ಜೀವನಕ್ಕೂ ಸಹಾಯ ವಾಯಿತು ಇವರು ಬೆಂಗಳೂರಿನಲ್ಲಿ ಟ್ಯಾಟೂ ಶಾಪ್ ಅನ್ನು ಇಟ್ಟುಕೊಂಡು ಏಳು ವರ್ಷಗಳಾದವು. ಇದರೊಂದಿಗೆ ಇವರ ಅಮ್ಮ ಅಡುಗೆಯಲ್ಲಿ ಎತ್ತಿದ ಕೈ ಹೀಗೆ ಒಂದು ರೆಸ್ಟೋರೆಂಟ್ ಕೂಡ ತೆರೆದು ಸುಮಾರು ನಲ್ವತ್ತು ಕುಟುಂಬಗಳಿಗೆ ಇವರಿಂದಾಗಿ ಉದ್ಯೋಗಾವಕಾಶಗಳು ಇದಗಿ ಬಂದಿದೆ.

ಪ್ರಶಸ್ತಿ[ಬದಲಾಯಿಸಿ]

ತಮ್ಮ ಸೌಂದರ್ಯವನ್ನು ನೋಡಿ ಅಚ್ಚರಿ ಪಡದ ಜನರಿಲ್ಲ ಇವರು ಹಲವಾರು ಫ್ಯಾಷನ್ ಶೋ ಗಳಲ್ಲಿ ಭಾಗವಹಿಸಿದ್ದು ಮಿಸ್ ಟ್ರಾನ್ಸ್ ವಲ್ಡ್ ೨೦೧೭, ಮಿಸ್ ಟ್ರೇನ್ಸ್ ಕ್ವೀನ್ ಇಂಡಿಯಾ ಟೇಲೆಂಟೆಡ್ ೨೦೧೮, ಮಿಸ್ ಆಂಡ್ ಮಿಸ್ಟರ್ ಬೆಂಗಳೂರು, ಟೆಸ್ಕೊ ರ‍್ವೀಸ್ ಅಚೀವರ್ ಪ್ರಶಸ್ತಿ ಹೀಗೆ ಹಲವಾರು ಬಿರುದುಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಇದರೊಂದಿಗೆ ತಮ್ಮ ಸಾಧನೆಗಳಿಗೆ ಮತ್ತು ತಮ್ಮ ಸಮಾಜ ಸೇವೆಗಳನ್ನು ಗುರುತಿಸಿ ಕೊಪ್ಪಳದಲ್ಲಿ ಅಚೀವ್ ಮೆಂಟ್ ಅವರ‍್ಡ್ ನೀಡಲಾಗಿದೆ. ಮಂಗಳ ಮುಖಿಯರ ಕುರಿತು ಸಂಶೂದನೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಅವಕಾಶ ಗಳನ್ನು ನಾವು ಹುಡುಕಿಕೊಂಡು ಹೋಗಬಾರದು ಅವಕಾಶಗಳೇ ನಮ್ಮನ್ನು ಹುಡುಕಿ ಕೊಂಡು ಬರಬರಬೇಕು. ಇದು ನೀತು ಅವರ ಮಾತು ಇವರನ್ನು ಸಮಾಜ ನಿರಾಕರಿಸಿದಾಗ ಇವರೊಂದಿಗೆ ಇದ್ದದ್ದು ಇವರ ಕುಟುಂಬ. ಇಷ್ಟೋಂದು ಅವಕಾಶಗಳು ಇವರಿಗೆ ಸಿಕ್ಕಿರುವಾಯ ಬೇರೆ ಮಂಗಳಮುಖಿಯರಿಗೆ ಅವಕಾಶ ಸಿಗುವುದಿಲ್ಲವೇ? ಕಂಡಿತವಾಗಿಯು ಸಿಕ್ಕೇ ಸಿಗುತ್ತದೆ ಎಲ್ಲಾದಕ್ಕೂ ಆಸಕ್ತಿ ಮುಖ್ಯ. ಮಂಗಳಮುಖಿಯರು ತಮ್ಮನ್ನು ಓಳ್ಳೆಯ ಕೆಲಸಗಳಲ್ಲಿ ರೂಪಿಸಿಕೊಳ್ಳಬೇಕು ಇವರಿಗೆಲ್ಲಾ ನೀತು ಮಾದರಿಯಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2020-01-27. Retrieved 2020-01-27.
"https://kn.wikipedia.org/w/index.php?title=ನೀತು&oldid=1204862" ಇಂದ ಪಡೆಯಲ್ಪಟ್ಟಿದೆ