ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ನಿರ್ವಾತ ಬಟ್ಟೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೂನ್ಯತೆಯಲ್ಲಿ ಡೈಮೀಥೈಲ್ ಸಲ್‍ಫೋಕ್ಸೈಡ್‍ಅನ್ನು ಕುದಿಸುತ್ತಿರುವುದು

ಸಂಯುಕ್ತವಸ್ತುಗಳನ್ನು ಅಧಿಕ ಶೂನ್ಯತೆ ಮತ್ತು ಕಡಿಮೆ ಉಷ್ಣತೆಯ ಮಟ್ಟದಲ್ಲಿ ಭಟ್ಟಿ ಇಳಿಸುವ ಕ್ರಮವನ್ನು ಅಣುಭಟ್ಟಿ ಇಳಿಸುವ ವಿಧಾನ ಎನ್ನುತ್ತಾರೆ. ಇದರ ಮತ್ತೊಂದು ಹೆಸರು ಅಣುಭಟ್ಟೀಕರಣ. ಇಂಗ್ಲಿಷ್‍ನಲ್ಲಿ ಇದನ್ನು ವ್ಯಾಕ್ಯೂಮ್ ಡಿಸ್ಟಿಲೇಷನ್ ಎನ್ನುತ್ತಾರೆ. ಹೀಗೆ ಮಾಡುವಾಗ ವಸ್ತುವಿನ ರಚನೆ ಮತ್ತು ಸ್ವರೂಪಕ್ಕೆ ಅಪಾಯ ಸಂಭವಿಸದಂತೆ ಎಚ್ಚರವಹಿಸಲಾಗುವುದು. ಈ ಪದ್ಧತಿಯಲ್ಲಿ ದ್ರವೀಕರಿಸುವ ಮೇಲ್ಮೈ ಬಟ್ಟಿ ಇಳಿಸಲಾಗುವ ದ್ರವಕ್ಕೆ (ಡಿಸ್ಟಿಲೆಂಡ್) ಸಾಧ್ಯವಾದ ಮಟ್ಟಿಗೆ ಸಮೀಪದಲ್ಲಿರುವಂತೆ ಮಾಡಲಾಗುವುದು. ಇದರಿಂದಾಗಿ ನಿರ್ಗಮಿಸುವ ಅಣುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಮತ್ತೆ ದ್ರವ ರೂಪಕ್ಕೆ ಹಿಂದಿರುಗುವುದಕ್ಕೆ ಬದಲಾಗಿ ಸಾಂದ್ರಕ (ಕಂಡೆನ್ಸರ್) ಮುಖಾಂತರ ಜಾಡಿಯನ್ನು ಪ್ರವೇಶಿಸುತ್ತವೆ. []

ವಿಧಾನ

[ಬದಲಾಯಿಸಿ]

ಅಣುಭಟ್ಟಿ ಇಳಿಸುವುದಕ್ಕೆ ಉಪಯೋಗಿಸುವ ಸಲಕರಣೆಗೆ ಮೊಲೆಕ್ಯೂಲರ್ ಸ್ಟಿಲ್ ಎಂದು ಹೆಸರು. ಇವುಗಳಲ್ಲಿ ಎರಡು ಬಗೆಗಳಿವೆ-ಒಂದು ತೆರೆದ ಮಾರ್ಗದ ಭಟ್ಟಿಯಂತ್ರ (ಓಪನ್ ಪಾತ್ ಸ್ಟಿಲ್) ಮತ್ತೊಂದು ಹ್ರಸ್ವ ಮಾರ್ಗದ ಭಟ್ಟಿಯಂತ್ರ (ಷಾರ್ಟ್ ಪಾತ್ ಸ್ಟಿಲ್). ಸಾಮಾನ್ಯವಾಗಿ ತೆರೆದ ಮಾರ್ಗದ ಸಲಕರಣೆ ದೀರ್ಘಮಾರ್ಗದ್ದಾಗಿದ್ದು ಹ್ರಸ್ವಮಾರ್ಗದ್ದನ್ನೂ ಒಳಗೊಂಡಿರುತ್ತದೆ.

ಬಹಳ ಉಪಯುಕ್ತವಾದ ಈ ಯಂತ್ರ ಪ್ರಯೋಗಶಾಲೆಯಲ್ಲಿ ನಿತ್ಯಬಳಕೆಯಲ್ಲಿದೆ. ಈ ಸಲಕರಣೆಯಲ್ಲಿ ಸಾಂದ್ರಕವನ್ನು ಭಟ್ಟಿಇಳಿಸಬೇಕಾದ ದ್ರವದ ಸಮೀಪದಲ್ಲಿ ಇಡಲಾಗುತ್ತದೆ. ದ್ರವೀಕರಿಸುವ ಮೇಲ್ಮೈಗೂ ಭಟ್ಟಿಇಳಿಸಬೇಕಾದ ದ್ರವಕ್ಕೂ ನಡುವಣ ಅಂತರ ಕಡಿಮೆಯಾದಂತೆ ಭಟ್ಟಿಯಂತ್ರದ ದಕ್ಷತೆ ಹೆಚ್ಚುತ್ತದೆ. ಈ ರೀತಿ ಮಾಡುವುದರಿಂದ ಅಣುಭಟ್ಟಿ ಇಳಿಸುವ ವೇಗ ಹೆಚ್ಚಾಗಿ ಕನಿಷ್ಠಪಕ್ಷ ೯೦%ರಷ್ಟು ಅಣುಗಳನ್ನು ಅವು ನಿರ್ಗಮಿಸುವ ಮೊದಲೇ ದ್ರವೀಕರಿಸಬಹುದು.

ಸ್ಥಿರವಲ್ಲದ ಅನೇಕ ಸಂಯುಕ್ತವಸ್ತುಗಳನ್ನು ಅವುಗಳ ರಚನೆಗೆ ಸ್ವಲ್ಪವೂ ಧಕ್ಕೆ ಬಾರದಂತೆ ಈ ಭಟ್ಟಿಯಂತ್ರದಲ್ಲಿ ಕಾಯಿಸಬಹುದು. ಆದರೆ, ಇತರ ಅಣುಭಟ್ಟಿ ಯಂತ್ರಗಳಲ್ಲಿ ಅವು ತಮ್ಮ ಸ್ವರೂಪವನ್ನು ಕಳೆದುಕೊಳ್ಳಬಹುದು ಇಲ್ಲವೇ ಆಸ್ಫೋಟನೆ ಹೊಂದಲೂಬಹುದು.

ಉಪಯೋಗಗಳು

[ಬದಲಾಯಿಸಿ]
ತೈಲ ಘಟಕಗಳಲ್ಲಿ ಶುದ್ಧೀಕರಣ ವಿಧಾನ
ತೈಲ ಘಟಕಗಳಲ್ಲಿ ಶುದ್ಧೀಕರಣ ವಿಧಾನ
  • ಅಣುಭಟ್ಟಿ ಇಳಿಸುವ ಈ ವಿಧಾನವನ್ನು ಕಡಿಮೆ ಬಾಷ್ಪಶೀಲ (ಲೋ ವೊಲಟೈಲ್) ಸಂಯುಕ್ತವಸ್ತುಗಳನ್ನು ಶುದ್ಧೀಕರಿಸಲು ಇಲ್ಲವೇ ಪೂರ್ವಭಾವಿಯಾಗಿ ಬೇರ್ಪಡಿಸಲು ಬಳಸಿಕೊಳ್ಳಬಹುದು. ಕಡಿಮೆ ಬಾಷ್ಪಶೀಲ ಅಂದರೆ ಪದಾರ್ಥವೊಂದು ಸಾಧಾರಣ ಉಷ್ಣತೆಗಳಲ್ಲಿಯೇ ಬೇಗ ಆವಿಯಾಗುವ ಗುಣ. ಉದಾಹರಣೆಗಾಗಿ, ಎ ಅನ್ನಾಂಗ ಮತ್ತು ಬಿ ಅನ್ನಾಂಗಗಳೆಂಬ ಸೂಕ್ಷ್ಮ ಸಂಯುಕ್ತವಸ್ತುಗಳನ್ನು ಮೀನೆಣ್ಣೆ ಮತ್ತು ಸಸ್ಯಸಂಬಂಧವಾದ ಎಣ್ಣೆಗಳಿಂದ ಅನುಕ್ರಮವಾಗಿ ಬೇರ್ಪಡಿಸಲು ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
  • ಅಣುಭಟ್ಟಿ ಇಳಿಸುವ ವಿಧಾನವನ್ನು ಮುಖ್ಯವಾಗಿ ತೈಲ ಶುದ್ಧೀಕರಣ ಘಟಕಗಳಲ್ಲಿ ಉಪಯೋಗಿಸುತ್ತಾರೆ. ಇಲ್ಲಿ ಮಾತ್ರ ಇದು ತುಂಬಾ ದೊಡ್ಡ ಮಟ್ಟದಲ್ಲಿ ಉಪಯೋಗಕ್ಕೆ ಬರುತ್ತದೆ. ದೊಡ್ಡ ಭಟ್ಟಿ ಯಂತ್ರದಲ್ಲಿ ಕಚ್ಚಾ ತೈಲವನ್ನು ತೆಗೆದುಕೊಂಡು ಅದನ್ನು ಇಲ್ಲಿ ತೋರಿಸಿದ ಚಿತ್ರದ (GIF) ರೀತಿಯಲ್ಲಿ ಶುದ್ಧೀಕರಣ ಗೊಳಿಸುತ್ತಾರೆ.
ತೈಲಘಟಕದ ಶುದ್ಧೀಕರಣ ಘಟಕದ ಚಿತ್ರ

ಉಲ್ಲೇಖ

[ಬದಲಾಯಿಸಿ]