ವಿಷಯಕ್ಕೆ ಹೋಗು

ನಿರೂಪ ರಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

(ದಪ್ಪಗಿನ ಅಕ್ಷರಜನವರಿ,೪, ೧೯೩೧-ಅಕ್ಟೋಬರ್, ೧೩, ೨೦೦೪)

ನಿರೂಪ ರಾಯ್ ರವರು ಹಿಂದಿ ಚಲನಚಿತ್ರಗಳಲ್ಲಿ ತಮಗೆ ಒಪ್ಪಿಸಿದ ಪಾತ್ರಗಳನ್ನು ಅತ್ಯಂತ ಸೊಗಸಾಗಿ ನಿಭಾಯಿಸಿದ ನಟಿಯೆಂದು ರಸಿಕರು ಮನಗಂಡಿದ್ದಾರೆ. ಬಾಲಿವುಡ್ ನ ಎಲ್ಲ ನಾಯಕ ನಟರೂ ನಿರೂಪರವರೇ ತಮ್ಮ ತಾಯಿಯಾಗಲು ಇಚ್ಛಿಸುತ್ತಾರೆ. ತ್ಯಾಗ, ಬಲಿದಾನ, ಮತ್ತು ಅನುಪಮ ಪ್ರೀತಿಯ ಪ್ರತೀಕವಾದ ತಾಯ್ತನವನ್ನು ತೆರೆಯಮೇಲೆ ಅವರಷ್ಟು ಸೊಗಸಾಗಿ ಅಭಿನಯಿಸುವ ನಟಿಯರು ವಿರಳ. ಹಿಂದಿನ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ನಾಯಕ ನಟರೆಲ್ಲಾ ಬೇಡುವುದು ತಮಗೆ ನಿರೂಪರವರೇ ತಾಯಿಯಾಗಲೆಂದು[ಬದಲಾಯಿಸಿ]

೧೯೭೦ ಮತ್ತು ೮೦ ರ ಸಮಯದಲ್ಲಿ ನಾಯಕ ನಟರ ತಾಯಿಯ ಪಾತ್ರವನ್ನು ಸಮರ್ಥವಾಗಿಯೂ ನೈಜವಾಗಿಯೂ ಅಭಿನಯಿಸಿ, ರಸಿಕರ ಮನಸ್ಸನ್ನು ಸಂತೋಷಪಡಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ೫೦ ವರ್ಷಗಳ ರಂಗಭೂಮಿಯ ಸೇವೆಯಲ್ಲಿ ಸುಮಾರು ೨೫೦ ಚಲನಚಿತ್ರಗಳಲ್ಲಿ ತಮ್ಮ ಅನುಪಮ ಪ್ರದರ್ಶನವನ್ನು ಕೊಟ್ಟಿದ್ದಾರೆ. ಹಿಂದಿ ಚಿತ್ರವಲಯದಲ್ಲಿ ಅತಿಯಾದ ಕಷ್ಟ, ಕಾರುಣ್ಯಗಳಲ್ಲಿ ಬಳಲಿದ ಪಾತ್ರಗಳನ್ನು ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.