ನಿಗೆಲ್ಲ ಲಾಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಗೆಲ್ಲ ಲಾಸನ್
Nigella Lawson booksigning.jpg
At a Borders book-signing in 2004
ಜನನ
ನಿಗೆಲ್ಲ ಲೂಸಿ ಲಾಸನ್

(1960-01-06) ೬ ಜನವರಿ ೧೯೬೦ (ವಯಸ್ಸು ೬೩)[೧]
London, United Kingdom
ರಾಷ್ಟ್ರೀಯತೆBritish
ವಿದ್ಯಾರ್ಹತೆMA in mediæval and modern languages
ಹಳೆ ವಿದ್ಯಾರ್ಥಿLady Margaret Hall, University of Oxford
ಉದ್ಯೋಗFood writer, journalist and broadcaster
ಸಕ್ರಿಯ ವರ್ಷಗಳು1983–present
ಉದ್ಯೋಗದಾತರುBBC
ಇದಕ್ಕೆ ಖ್ಯಾತರುTV presenting, cookery
ಎತ್ತರ{{convert/{{{d}}}2|5|7|(5*12+7)*0.0254|1|cm||||s=|r={{{r}}}

|U=ft |N=ft |L=ft |T=Foot (unit) |a=n |u=in |n=in |l=in |o=m

|j=-2+0}}
TitleThe Honourable
ಜೀವನ ಸಂಗಾತಿJohn Diamond (ವಿವಾಹ 1992–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".)
Charles Saatchi (ವಿವಾಹ 2003)
ಮಕ್ಕಳುCosima and Bruno
ಪೋಷಕರುNigel Lawson
Vanessa Salmon (deceased)
ನೆಂಟರುSir A.J. Ayer (mother's widower)
Dominic Lawson (brother)
ಜಾಲತಾಣwww.nigella.com

ನಿಗೆಲ್ಲ ಲೂಸಿ ಲಾಸನ್ (ಜನವರಿ 6 ,1960ರಲ್ಲಿ ಜನನ.) ಆಕೆ ಆಹಾರದ ಬಗ್ಗೆ ಲೇಖನಗಳನ್ನು ಬರೆಯುವ ಬ್ರಿಟಿಷ್ ಲೇಖಕಿ, ಪತ್ರಿಕೋದ್ಯಮಿ ಹಾಗು ಉದ್ಘೋಷಕಿ. ಲಾಸನ್ , ಹಿಂದಿನ ಹಣಕಾಸಿನ ಸಚಿವರಾದ ನೆಗೆಲ್ ಲಾಸನ್ ಹಾಗು ವನೆಸ್ಸ ಸಲ್ಮಾನ್ ರ ಪುತ್ರಿಯಾಗಿ ಜನಿಸಿದಳು. ಆಕೆ ಕುಟುಂಬ J. ಲಯನ್ಸ್ ಅಂಡ್ Co. ಸಾಮ್ರಾಜ್ಯದ ಒಡೆತನ ಹೊಂದಿತ್ತು. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಲೇಡಿ ಮಾರ್ಗರೇಟ್ ಹಾಲ್ ಕಾಲೇಜಿನಿಂದ ಪದವಿ ಪಡೆದ ನಂತರ, ಲಾಸನ್ ಪುಸ್ತಕ ವಿಮರ್ಶಕಿಯಾಗಿ ಹಾಗು ರೆಸ್ಟಾರಂಟ್ ನ ಮೌಲ್ಯ ಮಾಪಕಿಯಾಗಿ , ತರುವಾಯ 1986 ರಲ್ಲಿ ದಿ ಸಂಡೇ ಟೈಮ್ಸ್ ಪತ್ರಿಕೆಯ ಸಾಹಿತ್ಯ ವಿಭಾಗದ ಉಪ ಸಂಪಾದಕಿಯಾಗಿ ತನ್ನ ವೃತ್ತಿಯನ್ನು ಪ್ರಾರಂಭಿಸಿದಳು. ತರುವಾಯ ಆಕೆ ಅಸಂಖ್ಯಾತ ವೃತ್ತ ಪತ್ರಿಕೆಗಳಿಗೆ ಹಾಗು ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ಸ್ವತಂತ್ರ ಪತ್ರಿಕೋದ್ಯಮಿಯಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದಳು. ಲಾಸನ್ ತನ್ನ ಮೊಟ್ಟ ಮೊದಲನೆಯ ಪಾಕಶಾಸ್ತ್ರದ ಪುಸ್ತಕವಾದ ಹೌ ಟು ಈಟ್ ಪುಸ್ತಕವನ್ನು 1998 ರಲ್ಲಿ ಹೊರತಂದಳು. ಈ ಪುಸ್ತಕದ 300,000 ಪ್ರತಿಗಳು ಮಾರಾಟವಾಗಿದ್ದು ,ಇದು ಅತ್ಯಂತ ಹೆಚ್ಚು ಮಾರಾಟವಾಗಿರುವ ಪುಸ್ತಕವಾಗಿದೆ. ಆಕೆ ತನ್ನ ಎರಡನೇ ಪುಸ್ತಕವನ್ನು 2000 ಇಸವಿಯಲ್ಲಿ ಹೌ ಟು ಬಿ ಅ ಡೋಮೆಸ್ಟಿಕ್ ಗಾಡಿಸ್ ಎಂಬ ಶೀರ್ಷಿಕೆಯಲ್ಲಿ ಬರೆದಳು. ಈ ಪುಸ್ತಕವು ವರ್ಷದ ಲೇಖಕರಿಗೆ ಕೊಡುವಂತಹ ಬ್ರಿಟಿಷ್ ಬುಕ್ ಅವಾರ್ಡ್ ಎಂಬ ಪ್ರಶಸ್ತಿಯನ್ನು ತನಗೆ ತಂದುಕೊಟ್ಟಿತ್ತು.

ಲಾಸನ್ ಚಾನಲ್ 4ನಲ್ಲಿ ನಿಗೆಲ್ಲ ಬೈಟ್ಸ್ ಎಂಬ ತನ್ನದೇ ಪಾಕಶಾಸ್ತ್ರದ ಸರಣಿಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ಲಾಸನ್ ಳ ವೃತ್ತಿಜೀವನದಲ್ಲಿ ಪ್ರಮುಖ ಬದಲಾವಣೆ ಉಂಟಾಯಿತು.ಈ ಕಾರ್ಯಕ್ರಮ ಹೆಚ್ಚು ಮಾರಾಟವಾಗಿರುವ ಇತರ ಪಾಕಶಾಸ್ತ್ರದ ಪುಸ್ತಕಗಳನ್ನು ಒಳಗೊಂಡಿತ್ತು. ನಿಗೆಲ್ಲ ಬೈಟ್ಸ್ ಸರಣಿಕಾರ್ಯಕ್ರಮ ಲಾಸನ್ ಗೆ ಗಿಲ್ಡ್ ಆಫ್ ಫುಡ್ ರೈಟರ್ಸ್ ಅವಾರ್ಡ್ ಆನ್ನು ಗೆದ್ದುಕೊಡುವ ಮೂಲಕ ಯಶಸ್ವಿ ಕಾರ್ಯಕ್ರಮವಾಯಿತು. ಆದರೂ 2005ರಲ್ಲಿ ಆಕೆ ITV ಡೇ ಟೈಮ್ ಚಾಟ್ ಪ್ರದರ್ಶನವು ಟೀಕೆಗಳಿಗೊಳಗಾಯಿತಲ್ಲದೇ, ಕಡಿಮೆ ವೀಕ್ಷಕರನ್ನು ಪಡೆದ ಕಾರಣ ಪ್ರದರ್ಶನವನ್ನು ರದ್ದುಮಾಡಲಾಯಿತು. ಲಾಸನ್ , ಅಮೇರಿಕ ಸಂಯುಕ್ತ ಸಂಸ್ಠಾನದಲ್ಲಿ ನಿಗೆಲ್ಲ ಫೀಸ್ಟ್ಸ್ ಎಂಬ ಫುಡ್ ನೆಟ್ ವರ್ಕ್ ಅನ್ನು 2006ರಲ್ಲಿ ಪ್ರಾರಂಭಿಸಿದಳು.ಇದು BBC ಟು ಸರಣಿಯ ಮೂರು ಭಾಗಗಳಲ್ಲಿ ಹಾಗು ಯುನೈಟೈಡ್ ಕಿಂಗ್ಡಮ್ ನಲ್ಲಿ ನಿಗೆಲ್ಲಳ ಕ್ರಿಸ್ ಮಸ್ ಕಿಚನ್ ಆಗಿ ಮುಂದುವರೆಯಿತು. ಇದು 2007 ರಲ್ಲಿ BBC Two ಚಾನಲ್ ನಲ್ಲಿ ನಿಗೆಲ್ಲ ಎಕ್ಸ್ ಪ್ರೆಸ್ ಕಾರ್ಯಕ್ರವನ್ನು ಪ್ರಾರಂಭಿಸಲು ಕಾರಣವಾಯಿತು. ತನ್ನ ಕುಕ್ ವೇರ್ ರೇಂಜ್ , ಲಿವಿಂಗ್ ಕಿಚನ್, £7 ಮಿಲಿಯನ್ ನಷ್ಟು ಬೆಲೆಬಾಳುತ್ತದಲ್ಲದೇ, ಆಕೆ ಪ್ರಪಂಚಾದಾದ್ಯಂತ ಮೂರು ಮಿಲಿಯನ್ ನಷ್ಟು ಪಾಕಶಾಸ್ತ್ರದ ಪುಸ್ತಕಗಳನ್ನು ಮಾರಾಟಮಾಡಿದ್ದಾಳೆ.

ಕಾರ್ಯಕ್ರಮವನ್ನು ವಯ್ಯಾರವಾಗಿ ನಡೆಸಿಕೊಡುವಂತಹ ತನ್ನ ಶೈಲಿಯಿಂದ ಪ್ರಖ್ಯಾತಳಾದದ್ದಲ್ಲದೇ,"ಫುಡ್ ಪೋರ್ನ್ನ ರಾಣಿ"ಎಂದು ಕರೆಯಲ್ಪಟ್ಟಳು. ಆಕೆ ಪರಿಣಿತ ಷೆಫ್(ಮುಖ್ಯ ಬಾಣಸಿಗ)ವು ಅಲ್ಲ ಕುಕ್ ಕೂಡ ಅಲ್ಲ. ಆದರೆ ಆಕೆ ತನ್ನ ಅಡಿಗೆಯಲ್ಲಿ ಆರಾಮದಾಯಕ ಸಲೀಸತೆಯನ್ನು ತೋರುತ್ತಾಳೆ. ಲಾಸನ್ ಆಹಾರ ನಿರೂಪಕಿಯಾಗಿ ತನ್ನ ಪ್ರಭಾವ ಬೀರಿದ್ದಳಲ್ಲದೇ, ಕೆಲವು ಉತ್ಪನ್ನಗಳನ್ನು ತನ್ನ ಕಾರ್ಯಕ್ರಮಗಳಲ್ಲಿ ಬಳಸಿದ ನಂತರ ಅವುಗಳ ಮಾರಾಟದಲ್ಲಿ ಗಣನೀಯ ಏರಿಕೆಯನ್ನು ಕಾಣಲಾಯಿತು.

ಹಿನ್ನೆಲೆ[ಬದಲಾಯಿಸಿ]

ಲಾಸನ್ ನ ಹೆಸರು ತನ್ನ ಅಜ್ಜಿ ಅಲೋಚಿಸಿ ಇಟ್ಟ ಹೆಸರಾಗಿದೆ.[೨] ನಿಗೆಲ್ಲ ಲಾಸನ್ , ಕನ್ಸರ್ವಟಿವ್ MPಯಾಗಿದ್ದ , ಹಾಗು ಮಾರ್ಗರೇಟ್ ಥ್ಯಾಚರ್ ನ ಕ್ಯಾಬಿನೆಟ್ ನಲ್ಲಿ ಹಣಕಾಸಿನ ಮಂತ್ರಿಯಾಗಿದ್ದ ನಿಗೆಲ್ ಲಾಸನ್ (ಬರೊನ್ ಲಾಸನ್ ಆಫ್ ಬ್ಲೇಬಿ),[೩] ಹಾಗು ಸಮಾಜದ ಪ್ರಮುಖ ವ್ಯಕ್ತಿ ,"ಪ್ರಖ್ಯಾತ ಸುಂದರಿ"[೪] ಮತ್ತು J. ಲಯನ್ಸ್ & Co. ಯ ಸಂಪತ್ತಿನ ಉತ್ತರಾಧಿಕಾರಿಣಿಯಾಗಿದ್ದ )(ದಿವಂಗತ)ಲೇಟ್ ವೆನೆಸ್ಸ ಸಾಲ್ಮನ್,[೫] ರ ಪುತ್ರಿಯಾಗಿ ಜನಿಸಿದಳು.[೬] ಇವರ ಕುಟುಂಬವು ಕೆನ್ಸಿಂಗ್ ಟನ್ ಹಾಗು ಚೆಲ್ಸಿಯಾದಲ್ಲಿ ನೆಲೆಸಿತ್ತು. ಆದರೆ ಲಾಸನ್ ಳ ತಂದೆತಾಯಿ 1980ರಲ್ಲಿ ವಿವಾಹವಿಚ್ಛೇದನ ಪಡೆದರು.[೭] ಅವರಿಬ್ಬರೂ ಪುನರ್ವಿವಾಹವಾದರು; ತನ್ನ ತಂದೆ ಹೌಸ್ ಆಫ್ ಕಾಮನ್ಸ್ ನ ಸಂಶೋಧಕನಾಗಿದ್ದಾಗ 1980 ರಲ್ಲಿ ಥೆರೆಸೆ ಮ್ಯಾಕ್ಲರ್ (ಈಗಲೂ ಒಟ್ಟಿಗಿದ್ದಾರೆ) ಎಂಬುವಳನ್ನು ಮದುವೆಯಾದ.ತನ್ನ ತಾಯಿ 1980 ರ ಪೂರ್ವಾರ್ದದಲ್ಲಿ ,ತತ್ತ್ವಶಾಸ್ತ್ರಜ್ಞ ಸರ್ A.J. ಅಯೆರ್ (ತನ್ನ ತಾಯಿ ಮರಣಿಸುವ ವರೆಗೂ ಒಟ್ಟಿಗಿದ್ದರು) ನಂತರ ಮದುವೆಯಾದಳು.[೬] ಲಾಸನ್ ನಳ ತಂದೆ ಪ್ರಮುಖ ರಾಜಕಾರಣಿಯಾದ ಕಾರಣ ತನ್ನ ಬಗ್ಗೆ ಅನೇಕ ಪೂರ್ವಾಗ್ರಹ ಪೀಡಿತ ಕಲ್ಪನೆಗಳನ್ನು ನಿರ್ಣಯಗಳನ್ನು ಮಾಡಲಾಗುತ್ತಿತ್ತು. ಇದು ತನಗೆ ಅತ್ಯಂತ ಕಿರಿಕಿರಿಯನ್ನುಂಟು ಮಾಡುತ್ತಿತ್ತು[೨] ಒಂದು ಕಾಲದಲ್ಲಿ ಲಾಸನ್ ತನ್ನ ತಂದೆಯೊಡನೆ ಒಳ್ಳೆಯ ಬಾಂಧವ್ಯ ಹೊಂದಿರಲಿಲ್ಲ. ಇದು ಅವರ ತಂದೆತಾಯಿಗಳ ವಿಚ್ಛೇದನವಾದ ಸಮಯದಲ್ಲಾಗಿರಬಹುದು. ಅಲ್ಲದೇ ಆಕೆ ವಯಸ್ಕಳಾದಾಗಲೇ ತನ್ನ ತಾಯಿಯೊಡನೆ ಸ್ನೇಹದಿಂದಿದಿದ್ದದು.[೮] ಆಕೆ ತನ್ನ ತಾಯಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರದಿದ್ದ ಕಾರಣ ಆಕೆ ಮಗುವಾಗಿದ್ದಾಗ ಸಂತೋಷವಾಗಿರಲಿಲ್ಲ ಎಂದು ಲಾಸನ್ ಹೇಳಿದ್ದಾಳೆ.[೭]

ಲಾಸನ್ ಳ ವಿದ್ಯಾಭ್ಯಾಸದ ಸಮಯವು ಕಷ್ಟಕರವಾಗಿತ್ತು; ವೆಲ್ಶ್ ಟೌನ್ ನ ತನ್ನ ಬಾಲ್ಯದ ಸ್ವಲ್ಪಕಾಲವನ್ನು ಕಳೆಯುವ ಮೂಲಕ, ಆಕೆ 9 ರಿಂದ 18ನೇ ವಯಸ್ಸಿನ ವರೆಗೆ ಒಂಭತ್ತು ಸಲ ತನ್ನ ಶಾಲೆಗಳನ್ನು ಬದಲಾಯಿಸಬೇಕಾಯಿತು. "ನಾನು ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಿದ್ದೆ, ಆದರೆ ಒರಟಾಗಿದ್ದೆ, ನನ್ನನ್ನು ಅನುಮಾನಿಸಲಾಗಿತ್ತು, ಅಲ್ಲದೇ ಹೆಚ್ಚು ಗೊಂದಲದಲ್ಲಿರುತ್ತಿದ್ದೆ", ಎಂದು ಲಾಸನ್ ಹೇಳಿದ್ದಾರೆ.[೯] ಆಕೆಯ ತಂದೆ ತನ್ನ ವಿಚಿತ್ರ ನಡವಳಿಕೆಯ ವರದಿಯನ್ನು ನಂಬಲು ಸಿದ್ಧವಿರಲಿಲ್ಲ ಹಾಗು ತನ್ನನ್ನು ಆ ಶಾಲೆಗೆ ಸೇರಿಸಬಾರದಿತ್ತೆಂದು ಭಾವಿಸಿದರು.[೮] ಲಾಸನ್ ಮನಸ್ಸಿಲ್ಲದಿದ್ದರೂ ಮಿಡ್ ಲ್ಯಾಂಡ್ಸ್ ನಲ್ಲಿದ್ದಂತಹ ಖಾಸಗಿ ಶಾಲೆಗೆ ಹೋದಳು.ನಂತರ ಲಂಡನ್ನಿನ ಗೊಡಲ್ ಫಿನ್ ಹಾಗು ಲ್ಯಾಟಿಮರ್ ಶಾಲೆಯಲ್ಲಿ ಆರನೆಯ ತರಗತಿಗೆ ಸೇರಿಕೊಂಡಳು. ಇಲ್ಲಿಂದ ಆಕೆ ತನ್ನ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಳು.[೮] ಆಕೆ ಲಂಡನ್ನಿನ ಅನೇಕ ಮಳಿಗೆಗಳಲ್ಲಿ ಕೆಲಸಮಾಡಿದಳಲ್ಲದೇ,[೧೦] ಆಕ್ಸ್ ವರ್ಡ್ ವಿಶ್ವವಿದ್ಯಾನಿಲಯದ ಲೇಡಿ ಮಾರ್ಗರೇಟ್ ಹಾಲ್[೧೦] ನಿಂದ ಮಧ್ಯಕಾಲೀನ ಹಾಗು ಆಧುನಿಕ ಭಾಷೆಗಳ ಮೇಲೆ ಪದವಿ ಪಡೆದು ಹೊರಬಂದಳು.[೧೧] ಆಕೆ ಕೆಲ ಕಾಲದ ವರೆಗೆ ಫ್ಲಾರೆನ್ಸ್ ನಲ್ಲಿಯೂ ಕೂಡ ವಾಸವಾಗಿದ್ದಳು.[೧೨]

ಲಾಸನ್ ಗೆ 25 ವರ್ಷವಿದ್ದಾಗ ಲಾಸನ್ ನಳ ತಾಯಿ ಲಂಡನ್ನಿನ ವೆಸ್ಟ್ ಮಿನ್ಸ್ಟರ್ ನಲ್ಲಿ 1985 ರಲ್ಲಿ ಲಿವರ್ ಕ್ಯಾನ್ಸರ್ ಕಾಯಿಲೆಯಿಂದ ಸಾವನ್ನಪ್ಪಿದರು. ಆಗ ಅವರಿಗೆ 48 ವರ್ಷವಾಗಿತ್ತು[೬][೧೨] ಮಿನ್ಸ್ಟ್ ತನ್ನ ಸ್ವಂತ ತಂಗಿಯಾದ ಥಾಮ್ಸಿನ , ತನ್ನ ಮೂವತ್ತನೆಯ ವಯಸ್ಸಿನಲ್ಲಿ (ಸ್ತನ)ಬ್ರೆಸ್ಟ್ ಕ್ಯಾನ್ಸರ್ ನಿಂದ 1993ರಲ್ಲಿ ಸಾವನ್ನಪ್ಪಿದಳು;[೯][೧೩] ತನ್ನ ಮತ್ತೊಬ್ಬ ತಂಗಿ ಹೊರ್ಯಾಟಿಯ; ಹಾಗು ಆಕೆಯ ತಮ್ಮ,ಡೊಮಿನಿಕ್,ದಿ ಸಂಡೇ ಟಿಲಿಗ್ರಾಫ್ ನಲ್ಲಿ ಸಂಪಾದಕನಾಗಿದ್ದ. .[೧೪] ಆಕೆ ಟಾಮ್ ಹಾಗು ಎಮಿಲಿ ಎಂಬ ಮಲ ಸಹೋದರ- ಸಹೋದರಿಯನ್ನು ಹೊಂದಿದ್ದಳು.ಇವರು ಆಕೆಯ ಮಲತಾಯಿಯ ಮಕ್ಕಳು. ತಾಯಿಯಾದ ಸಾಲ್ಮನ್ ನಳ ಕಡೆಯಿಂದ ಆಕೆ ಜಾರ್ಜ್ ಮಾನಬಿಯಾತ್ ಹಾಗು ಫಿಯಾನ ಶಕ್ ಲೆಟನ್ ಇಬ್ಬರಿಗೂ ಸೋದರ ಸಂಬಂಧಿಯಾದಳು .[೧೫]

BBCಯ ಕುಟುಂಬ-ಇತಿಹಾಸದ ಬಗೆಗಿನ ಸಾಕ್ಷ್ಯಚಿತ್ರವಾದ ಹು ಡು ಯು ಥಿಂಕ್ ಯು ಆರ್? ನ ಮೂರನೇ ಸರಣಿಯಲ್ಲಿ ಭಾಗವಹಿಸುವ ಮೂಲಕ ಲಾಸನ್ ತನ್ನ ಕುಟುಂಬದ ಪೂರ್ವಿಕರನ್ನು ಹುಡುಕಲು ಪ್ರಯತ್ನಿಸಿದಳು. ಪೂರ್ವ ಯುರೋಪಿನ ಹಾಗು ಜರ್ಮನಿಯ ಮೂಲದ ಅಶಕೆನ್ಜಿ ಜೂಗಳು ತನ್ನ ಪೂರ್ವಿಕರು ಎಂಬುದನ್ನು ತಿಳಿದುಕೊಂಡಳು. ಲಾಸನ್ ಐಬಿರಿಯನ್-ಸಿಫಾರ್ಡಿಗಳು ತನ್ನ ಪೂರ್ವಿಕರು ಎಂದು ನಂಬಿದ್ದವಳಿಗೆ ಅವರು ತನ್ನ ಕುಟುಂಬವರ್ಗದ ಪೂರ್ವಿಕರಲ್ಲವೆಂದು ತಿಳಿದು ಆಶ್ಚರ್ಯವಾಯಿತು.[೧೬] 1830ರಲ್ಲಿ ಕಳ್ಳತನದ ಆರೋಪದ ಮೇಲೆ ಅಮ್ ಸ್ಟ್ರಡಮ್ನಿಂದ ಇಂಗ್ಲೆಂಡ್ ಗೆ ಓಡಿ ಹೋಗಿದ್ದ ತನ್ನ ತಾಯಿಯ ಅಜ್ಜನಾದ ಕೊಎನ್ ರಾಡ್ ಸ್ಯಾಮೆಸ್ (ನಂತರ ಕೋಲೆಮನ್ ಜೋಸೆಫ್) ನ ಬಗ್ಗೆ ಬಹಿರಂಗಪಡಿಸಿದಳು(,[೧೬][೧೭] ಮಾವ ಹಾಗು ವ್ಯವಹಾರದ ಪಾಲುದಾರನಾದ ಬರ್ನೆಟ್ ಸಾಲ್ಮನ್ ನ ಪುತ್ರಿ ಹನ್ನಹ್ ಸ್ಯಾಮ್ಯುಅಲ್ ಗ್ಲ್ಯೂಸ್ಟೀನ್ ನನ್ನು ಮದುವೆಯಾದಳು ,ಅವರು ಬರ್ನೆಟ್ ನ ಜೊತೆಗೂಡಿ J. ಲಯನ್ಸ್ ಅಂಡ್ Co. ಅಲ್ಲದೇ ಇಸ್ಡೊರೆನ ಜೊತೆಗೂಡಿ ಸ್ವಂತ ಉದ್ಯೋಗವನ್ನು 1887 ರಲ್ಲಿ ಸ್ಥಾಪಿಸಿದರು.[೧೬][೧೮] ಇದೇ ಮುಂದೆ ಅವರ ಕೌಟಂಬಿಕ ವ್ಯವಹಾರಕ್ಕೆ ನಾಂದಿಯಾಯಿತು.

ವೃತ್ತಿ ಜೀವನ[ಬದಲಾಯಿಸಿ]

ಆರಂಭಿಕ ಕಾರ್ಯ[ಬದಲಾಯಿಸಿ]

ನೈಮ್ ಅಟ್ಲ ಎಂಬ ಪ್ರಕಾಶಕನಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಕೆಲಸಕ್ಕೆ ಸೇರುವ ಮೂಲಕ ಆಕೆ ಮೊದಲು ಪ್ರಕಾಶನದಲ್ಲಿ ಕೆಲಸ ಮಾಡಿದಳು.[೧೦] ದಿ ಸ್ಪೆಕ್ಟರ್ ನಿಯತಕಾಲಿಕೆಗೆ ಲೇಖನ ಬರೆಯಲು ಚಾಲ್ಸ್ ಮೋರ್ತನ್ನನ್ನು ಆಹ್ವಾನಿಸಿದಾಗ ತನ್ನ 23 ನೇ ವರ್ಷದಿಂದ ಆಕೆ ತನ್ನ ಪತ್ರಿಕೋದ್ಯಮದ ವೃತ್ತಿಜೀವನ ಪ್ರಾರಂಭಿಸಿದಳು.[೧೦] ನಿಯತಕಾಲಿಕೆಯಲ್ಲಿ ಕೆಲಸ ಪ್ರಾರಂಭಿಸಿದಾಗ ಪುಸ್ತಕಗಳ ಮೇಲೆ ವಿಮರ್ಶೆ ಬರೆದಳು,[೧೯][೨೦] ಅಲ್ಲಿಂದ 1985 ರಷ್ಟರಲ್ಲಿ ಆಕೆ ರೆಸ್ಟಾರಂಟ್ ಗಳ ವಿಮರ್ಶಕಿಯಾದಳು.[೯] 1986 ರಲ್ಲಿ ಅವಳ 26ನೇ ವಯಸ್ಸಿಗೆ ದಿ ಸಂಡೇ ಟೈಮ್ಸ್ ಪತ್ರಿಕೆಯ ಸಾಹಿತ್ಯದ ವಿಭಾಗದಲ್ಲಿ ಉಪ ಸಂಪಾದಕಿಯಾದಳು.[೯][೨೧] ಲಾಸನ್ 1989ರಲ್ಲಿ ತನ್ನ ತಂದೆ ಪಕ್ಷವಾದ ಕನ್ಸರ್ವೇಟಿವ್ ಪಕ್ಷದ ಪ್ರತಿಪಕ್ಷವಾದ ಲೇಬರ್ ಪಕ್ಷಕ್ಕೆ ಮತ ಚಲಾಯಿಸಿದ್ದಾಳೆಂದು ಹೇಳುವ ಮೂಲಕ ಹಾಗು ಮಾರ್ಗರೇಟ್ ಥ್ಯಾಚರ್ ನನ್ನು ಪ್ರಕಟನೆಯಲ್ಲಿ ಟೀಕಿಸುವ ಮೂಲಕ ಕುಖ್ಯಾತಿ ಪಡೆದಳು.[೬] ತನ್ನ ತಂದೆ ಜೊತೆಯಲ್ಲಿ ಆಕೆಯ ರಾಜಕೀಯ ಸಂಬಂದದ ಬಗ್ಗೆ ಲಾಸನ್, "ನನ್ನ ತಂದೆಯೊಂದಿಗೆ ಎಂದಿಗೂ ಯಾವುದರ ಬಗ್ಗೆಯೂ ನಾನು ಅವರೊಡನೆ ರಾಜಿಮಾಡಿಕೊಳ್ಳಬೇಕೆಂದು ಬಯಸುವುದಿಲ್ಲ. ನಿಜವಾಗಿಯೂ,ತಾನು ರಾಜಕೀಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲವೆಂದು ಹೇಳಿಕೊಂಡಿದ್ದಾಳೆ."[೨೨]

ದಿ ಸಂಡೇ ಟೈಮ್ಸ್ ನಲ್ಲಿ ತನ್ನ ಕೆಲಸ ಪೂರ್ಣಗೊಳಿಸಿದ ನಂತರ , "ತಾನು ತಪ್ಪು ದಾರಿಯಲ್ಲಿದ್ದೇನೆಂಬುದರ ಅರಿವಾದಾಗ ಲಾಸನ್ ಸ್ವತಂತ್ರ ಬರಹದ ವೃತ್ತಿ ಜೀವನದ ಕಡೆಗೆ ಗಮನ ಹರಿಸಿದಳು. ಚಿಂತನೆಗಿಂತ ಚಿಂತೆಗೆ ಒತ್ತುಕೊಡುವ ಕೆಲಸವನ್ನು ಮಾಡಲು ನನಗೆ ಇಷ್ಟವಿಲ್ಲ ".[೭] ಯುನೈಟೈಡ್ ಕಿಂಗ್ಡಮ್ ನಲ್ಲಿ ದಿ ಡೈಲಿ ಟೆಲಿಗ್ರಾಫ್ , ದಿ ಈವ್ ನಿಂಗ್ ಸ್ಟಾಂಡರ್ಡ್ , ದಿ ಆಬ್ಸರ್ವರ್ ಪತ್ರಿಕೆಗಳಿಗಾಗಿ ಬರೆದಿದ್ದಾಳೆ. ವೋಗ್ [೨೩] ಪತ್ರಿಕೆಗಾಗಿ ಆಹಾರ ಅಂಕಣವನ್ನು ಬರೆದಿದ್ದಾಳೆ. ಅಲ್ಲದೇ ದಿ ಟೈಮ್ಸ್ ಮ್ಯಾಗಜೀನ್ ಗಾಗಿ ಸೌಂದರ್ಯದ ವಿಷಯವನ್ನಾಧರಿಸಿದ ಅಂಕಣ ಬರೆದಿದ್ದಾಳೆ ,[೭] ಅಲ್ಲದೇ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಗೌರ್ಮೆಟ್ ಹಾಗು ಬಾನ್ ಅಪೆಟೈಟ್ ಗಳ ಜೊತೆ ಕಾರ್ಯವಿರ್ವಹಿಸಿದ್ದಾಳೆ.[೨೪] 1995 ರಲ್ಲಿ ಟಾಕ್ ರೇಡಿಯೊನಲ್ಲಿ ಎರಡು ವಾರಗಳ ಕಾಲ ಕೆಲಸ ಮಾಡಿದ ನಂತರ, ಆಕೆ ತನ್ನ ಕೆಲಸ ಮುಗಿದ ನಂತರ ಇನ್ನೂ ಇಲ್ಲಿ ಮುಂದುವರೆಯ ಬೇಕಿಲ್ಲವೆಂಬುದು "ಸಾಮಾನ್ಯ ಪ್ರಜ್ಞೆ"ಯಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದರಿಂದ ರೇಡಿಯೊ ಕಾರ್ಯಕ್ರಮದ ಮೂಲಕ ಆಕೆ ತನ್ನ ವೈಯಕ್ತಿಕ ವಹಿವಾಟಿಗೆ ಕುಮ್ಮಕ್ಕು ನೀಡಿದಳು ಎಂಬ ಕಾರಣಕ್ಕೆ ಅವಳನ್ನು ಕೆಲಸದಿಂದ ತೆಗೆದುಹಾಕಲಾಯಿತು.[೬]

1998–2002: ಪಾಕಶಾಸ್ತ್ರದ ಬರಹ ಹಾಗು ನಿಗೆಲ್ಲ ಬೈಟ್ಸ್ (ವಿವರಗಳು)[ಬದಲಾಯಿಸಿ]

ಅಡುಗೆ ಮಾಡುವುದನ್ನು ಇಷ್ಟಪಡುತ್ತಿದ್ದ ತಾಯಿಯ ಜೊತೆಯಲ್ಲಿ ಲಾಸನ್ ಬಾಲ್ಯದಿಂದಲೇ ಅಡುಗೆ ಮಾಡುವಂತಹ ಕಲೆಯನ್ನು ಕರಗತ ಮಾಡಿಕೊಂಡಿದ್ದಳು, .[೭] ಒಂದು ರಾತ್ರಿಭೋಜನ ಕೂಟದಲ್ಲಿ ಸರಿಯಾಗಿ ತಯಾರಿಸದ ಕ್ರೀಂ ಕಾರ್ಮೆಲ್ ಅನ್ನು ತಿಂದ ನಂತರ ಲಾಸನ್ ಗೆ ಪಾಕಶಾಸ್ತ್ರದ ಬಗ್ಗೆ ಪುಸ್ತಕ ಬರೆಯುವ ಅಲೋಚನೆ ಮೂಡಿತು.[೨೫] ತರುವಾಯ 1998 ರಲ್ಲಿ ಹೌ ಟು ಈಟ್ ಪುಸ್ತಕವನ್ನು ಬರೆದಳು. ಈ ಪುಸ್ತಕದಲ್ಲಿ ಅಡುಗೆ ಮಾಡಲು ಹಾಗು ಸಮಯವನ್ನು ಉಳಿಸಲು ಬೇಕಾದ ಸೂಚನೆಗಳನ್ನು ನೀಡಲಾಗಿತ್ತು.[೨೫] ಈ ಪುಸ್ತಕ ಪ್ರಖ್ಯಾತವಾಯಿತು ಅಲ್ಲದೇ UKಯಲ್ಲಿ ಇದರ 300,000 ಪ್ರತಿಗಳು ಮಾರಾಟವಾದವು;[೧೯] ದಿ ಸಂಡೇ ಟೆಲಿಗ್ರಾಫ್ ಇದರ ಬಗ್ಗೆ "ಈ ಶತಮಾನದಲ್ಲಿ ಪ್ರಕಟಿಸಲಾಗಿರುವ ಅತ್ಯಂತ ಅಮೂಲ್ಯವಾದ ಪಾಕಶಾಸ್ತ್ರದ ಮಾರ್ಗದರ್ಶಕವಾಗಿದೆ".[೨೬]

ನಂತರ ಲಾಸನ್ 2000ದಲ್ಲಿ ಹೌ ಟು ಬಿ ಅ ಡೋಮ್ಯಾಸ್ಟಿಕ್ ಗಾಡಿಸ್ ಎಂಬ ಪುಸ್ತಕವನ್ನು ಬರೆದಳು.ಈ ಪುಸ್ತಕ ಬೇಕಿಂಗ್ (ಬ್ರೆಡ್ ಬೇಯಿಸುವುದು)[೧೨] ನ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಅಲ್ಲದೇ ಹೆಚ್ಚು ಮಾರಾಟವಾಗಿದೆ ಪುಸ್ತಕದ ಬಗ್ಗೆ ಹಾಗು ಲಾಸನ್ ಳ ಬರಹದ ಬಗ್ಗೆ "ಹೌ ಟು ಬಿ ಅ ಡೋಮ್ಯಾಸ್ಟಿಕ್ ಗಾಡಿಸ್ ... ಪುಸ್ತಕವು ಸಮಗ್ರ, ಸ್ನೇಹಪರ ಬರಹದಿಂದ ಮೂಡಿ ಬಂದಿದೆ,ಎಂದು ದಿ ಟೈಮ್ಸ್ ಪತ್ರಿಕೆ ಬರೆದಿದೆ. ಪುಸ್ತಕದಲ್ಲಿ ಡೆಲಿಯನಂತಹ(ಫ್ಯಾಶನ್ ಬಟ್ಟೆಗಳ ಬಗ್ಗೆ) ಗಂಭೀರವಾದ ಸೂಚನೆಗಳನ್ನು ನೀಡದೇ; ಕೇವಲ ಸ್ನೇಹಪರ ಸೂಚನೆಗಳನ್ನು ನೀಡಿದ್ದಾಳೆ".[೭] ತನ್ನ ಪುಸ್ತಕದಲ್ಲಿ ಸ್ತ್ರೀವಾದಿ ವಿಮರ್ಶೆಯನ್ನು ಮಾಡಲಾಗಿದೆ, ಎಂಬುದನ್ನು ಲಾಸನ್ ನಿರಾಕರಿಸಿದಳಲ್ಲದೇ [೨೭],"ಕೆಲವು ಜನರು ತನ್ನ ಪುಸ್ತಕ ಡೋಮ್ಯಾಸ್ಟಿಕ್ ಗಾಡಿಸ್ ಅನ್ನು ಸಾಹಿತ್ಯಿಕವಾಗಿ ತೆಗೆದುಕೊಳ್ಳುವುದರ ಬದಲು ವ್ಯಂಗ್ಯವಾಗಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾಳೆ. ನಿಜವಾಗಿ ಇರುವುದನ್ನು ಅದಕ್ಕಿಂತ ಬೇರೆಯೇ ರೀತಿಯಲ್ಲಿ ನೋಡುವ ಭಾವನೆಯಾಗಿದೆ".[೩]........ ನಾಲ್ಕು ತಿಂಗಳಿನಲ್ಲಿ ಪುಸ್ತಕದ 180,000 ಪ್ರತಿಗಳು ಮಾರಾಟವಾದವು.[೨೫] ಲಾಸನ್ 2001[೧೯] ರಲ್ಲಿ ವರ್ಷದ ಲೇಖಕರಿಗೆ ಕೊಡುವ ಪ್ರಶಸ್ತಿಯಲ್ಲಿ J. K. ರೌಲಿಂಗ್ ನಂತಹ ಲೇಖಕನೊಡನೆ ಸ್ಪರ್ಧಿಸಿ ಬ್ರಿಟಿಷ್ ಬುಕ್ ಅವಾರ್ಡ್ ಪ್ರಶಸ್ತಿ ಗೆದ್ದುಕೊಂಡಳು.[೨೮] ತನ್ನ ಗಂಡ ಕ್ಯಾನ್ಸರ್ ನಿಂದ ಸಾಯಲ್ಲಿದ್ದಾನೆ ಎಂಬ ಕಾರಣವೇ ಆಕೆಯ ಅತ್ಯುತ್ಸಾಹದ ದುಡಿಮೆಗೆ ಕಾರಣವಾಗಿ ಇದನ್ನು ಗೆದ್ದು ಕೊಂಡಳು ಎಂದು ಒಬ್ಬ ನಿರೂಪಕ ಹೇಳಿದ್ದಾನೆ .[೧೯] ಇದಕ್ಕೆ ಪ್ರತ್ಯುತ್ತರವಾಗಿ ಲಾಸನ್ "ನಾನು ದಾಯೆಯ ವಿರೋಧಿಯಲ್ಲ, ಆದರೆ ದುರಂತವಾಗಲಿ ಎಂಬ ಆಸೆಯೂ ನನಗಿಲ್ಲ".[೧೯] ಹೌ ಟು ಈಟ್ ಅಂಡ್ ಹೌ ಟು ಬಿ ಅ ಡೊಮೇಸ್ಟಿಕ್ ಗಾಡಿಸ್ ಪುಸ್ತಕವನ್ನು 2000 ಮತ್ತು 2001 ರಲ್ಲಿ ಅಮೇರಿಕಾದಲ್ಲಿ ಪ್ರಕಟಿಸಲಾಯಿತು.[೨೯] ಪುಸ್ತಕದ ಯಶಸ್ಸಿನಿಂದ ದಿ ಅಬ್ಸರ್ವರ್ ಪತ್ರಿಕೆಯು ಲಾಸನ್ ಳನ್ನು ಸಾಮಾಜಿಕ ಘಟನೆಗಳ ಬಗ್ಗೆ ಅಂಕಣವನ್ನು ಬರೆಯಲು ಅಂಕಣ ಬರಹಗಾರ್ತಿಯಾಗಿ ತೆಗೆದುಕೊಂಡಿತ್ತು.[೯]

ತರುವಾಯ ದೂರದರ್ಶನದಲ್ಲಿ ಲಾಸನ್ ತನ್ನದೇ ಪಾಕಶಾಸ್ತ್ರದ ಸರಣಿಕಾರ್ಯಕ್ರಮ ಆರಂಭಿಸಿದಳು. ಈ ಸರಣಿ ಕಾರ್ಯಕ್ರಮದ ಹೆಸರು ನಿಗೆಲ್ಲ ಬೈಟ್ಸ್ , ಇದು 2000 ರಿಂದ 2001 ವರೆಗೆ ಚಾನಲ್ 4ನಲ್ಲಿ ಪ್ರಸಾರವಾಯಿತು,[೩೦][೩೧] 2001ರಲ್ಲಿ ಕ್ರಿಸ್ ಮಸ್ ನ ವಿಶೇಷ ಕಾರ್ಯಕ್ರಮವಾಗಿ ಮುಂದುವರೆಯಿತು.[೩೨] ಕಟುವಾಗಿ ಟೀಕಿಸುವ ಟೀಕಾಕಾರನಾದ ವಿಕ್ಟರ್ ಲೆವಿಸ್-ಸ್ಮಿತ್, ಲಾಸನ್ "ಅದ್ಭುತ ಶಕ್ತಿ" ಹೊಂದಿದ್ದಾಳೆಂದು ಟಿಪ್ಪಣಿ ಮಾಡಿದ್ದಾನೆ.[೩] ನಿಗೆಲ್ಲ ಬೈಟ್ಸ್ ಕಾರ್ಯಕ್ರಮದ ಮೊದಲನೆಯ ಸರಣಿ ಸುಮಾರು 1.9 ಮಿಲಿಯನ್ ವೀಕ್ಷಕರನ್ನು ಹೊಂದಿತು,[೩೩] ಹಾಗು ಪಾಕಶಾಸ್ತ್ರದ ಬರಹಗಾರರ ಸಂಘದಿಂದ ವರ್ಷದ ಪ್ರಶಸ್ತಿ ಗೆಲ್ಲುವ ಮೂಲಕ ದೂರದರ್ಶನ ಪ್ರಸಾರಕಿಯಾದಳು [೩೪]. ಅಲ್ಲದೇ 2001 ರಲ್ಲಿ ಪ್ರಪಂಚದ ಫುಡ್ ಮೀಡಿಯ ಪ್ರಶಸ್ತಿಯಲ್ಲಿ, ದೂರದರ್ಶನದಲ್ಲಿ ಪ್ರಸಾರವಾದ ಉತ್ತಮ ಪಾಕಶಾಸ್ತ್ರ ಪ್ರದರ್ಶನ ಕಾರ್ಯಕ್ರಮವಾಯಿತು.[೩೫] ಪ್ರದರ್ಶನವು ಅತ್ಯತ್ತಮವಾಗಿ ಮಾರಾಟವಾದ ಪಾಕಸೂತ್ರಗಳ ಪುಸ್ತಕವನ್ನು ಒಳಗೊಳ್ಳುವ ಮೂಲಕ ನಿಗೆಲ್ಲ ಬೈಟ್ಸ್ ಎಂಥಲೂ ಕರೆಯಲ್ಪಟ್ಟಿತು,[೩೬] ವಾಟರ್ ಸ್ಟೋನ್ಸ್ ಪುಸ್ತಕ ಮಳಿಗೆ UK ಯಲ್ಲಿ ಈ ಪುಸ್ತಕದ ಸುಮಾರು 300,000 ಪ್ರತಿಗಳು ಮಾರಾಟವಾಗಿವೆ ಎಂದು ವರದಿಮಾಡಿದೆ.[೩೭] ಪುಸ್ತಕವು ಲೈಫ್ ಸ್ಟೈಲ್ ಬುಕ್ ಆಫ್ ದಿ ಯಿಯರ್(ಜೀವನ ಶೈಲಿಗೆ ಕೊಡುವ ವರ್ಷದ ಪ್ರಶಸ್ತಿ) ಗೆ ಕೊಡುವ ಡ್ಬ್ಲ್ಯೂ ಎಚ್ ಸ್ಮಿತ್ ಅವಾರ್ಡ್ ಅನ್ನು ಗೆದ್ದುಕೊಂಡಿತು.[೩೮]

ದಿ ನಿಗೆಲ್ಲ ಬೈಟ್ಸ್ ಸರಣಿಯು, ಆಕೆ ಹುಟ್ಟಿದ ಸ್ಥಳವಾದ ಪಶ್ಚಿಮ ಲಂಡನ್ ನಲ್ಲಿ ಚಲನಚಿತ್ರವಾಗಿ ರೂಪುಗೊಂಡಿತಲ್ಲದೇ , ತರುವಾಯ ಅಮೇರಿಕದ ದೂರದರ್ಶನದ ಚಾನಲ್ಸ್ E![೩೯] ನಲ್ಲಿ ಹಾಗು ಸೈಲ್ ನೆಟ್ ವರ್ಕ್ ನಲ್ಲಿ ಪ್ರಸಾರವಾಯಿತು.[೧೯] US ನ ಪ್ರದರ್ಶನವನ್ನು ಕುರಿತಂತೆ ಲಾಸನ್ , "UK ಯಲ್ಲಿ ನಾನು ಅವರ ಹೊರೆಯನ್ನು ಕಡಿಮೆ ಮಾಡಿತ್ತಿದ್ದೇನೇಯೇ ಹೊರತು ಹೆಚ್ಚು ಮಾಡುತ್ತಿಲ್ಲವೆಂಬ ಸತ್ಯಕ್ಕೆ ನನ್ನ ವೀಕ್ಷಕರು ನನಗೆ ಪ್ರತಿಕ್ರಿಯಿಸಬೇಕು ಅಲ್ಲದೇ ನಾನು ಈ ಪ್ರತಿಕ್ರಿಯೆಯನ್ನು US ನ ಸ್ಟೈಲ್ ವೀಕ್ಷಕರೊಂದಿಗೆ ಸೇರಿಸಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳಿದಳು.[೩೯] ಒಟ್ಟಿನಲ್ಲಿ ಲಾಸನ್ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದಳು[೨೨] ಅವಳನ್ನು ಟೀಕಿಸಿದವರೂ ಆಕೆ ಕೇವಲ ತೋರಿಕೆಗಾಗಿ ನಟಿಸುತ್ತಾಳೆಂದು ಹೆಚ್ಚಾಗಿ ಹೇಳುತ್ತಾರೆ;"ಲಾಸನ್ ಳ ಮೋಹಕ ಸೌಂದರ್ಯದ ಜೊತೆಯಲ್ಲಿ ಅವಳ ಅಸಾಧಾರಣ ವೇಗದ ವಿಧಾನಗಳು ಸೇರಿ ಅಡುಗೆ ಮಾಡುವುದರ ಜೊತೆಯಲ್ಲಿ ನಿಗೆಲ್ಲ ಉನ್ಮತ್ತೋತ್ಸವವನ್ನು ಪ್ರಾರಂಭಿಸುತ್ತಿರುವವಳಂತೆ ಕಾಣಿಸುತ್ತಾಳೆಂದು"ದಿ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.[೧೯] ನಿಗೆಲ್ಲ ಬೈಟ್ಸ್ ಪುಸ್ತಕವು ಅಮೇರಿಕಾದಲ್ಲಿ ಕ್ರಿಸ್ ಮಸ್ 2002 ರ ವೇಳೆಯಲ್ಲಿ ಅತ್ಯಂತ ಹೆಚ್ಚು ಮಾರಾಟವಾಗಿರುವ ಪಾಕಶಾಸ್ತ್ರದ ಪುಸ್ತಕವಾಗಿದೆ.[೪೦] ಸರಣಿಗಳು 2002 ರಲ್ಲಿ ಚಾನಲ್ 4 ನಲ್ಲಿ ಫರೆವರ್ ಸಮ್ಮರ್ ವಿತ್ ನಿಗೆಲ್ಲ ಕಾರ್ಯಕ್ರಮದಲ್ಲಿ ಮುಂದುವರೆಯಿತು, "ನೀವು ಅಡುಗೆ ಮಾಡುವಾಗ ಇನ್ನೂ ರಜೆಯಲ್ಲಿರುವಂತೆ ನಿಮಗೆ ಅನ್ನಿಸ ಬೇಕು " ಎಂಬ ವಿಚಾರದ ಬಗ್ಗೆ ಈ ಸರಣಿಯನ್ನು ನಿರ್ಮಿಸಲಾಗಿತ್ತು.[೨೨] 2002ರಲ್ಲೂ , ಪಾಕಶಾಸ್ತ್ರಕ್ಕೆ ಸಂಬಂಧಿಸಿದ್ದಂತೆ ಹದಿನೈದು ದಿನಗಳಿಗೊಮ್ಮೆ ದಿ ನ್ಯೂಯಾರ್ಕ್ ಟೈಮ್ಸ್ ಗಾಗಿ ಲೇಖನ ಬರೆಯಲು ಪ್ರಾರಂಭಿಸಿದಳಲ್ಲದೇ ,[೫] ಅಡುಗೆ ಪಾತ್ರೆಗಳ ಲಾಭದಾಯಕ ವ್ಯಾಪಾರವನ್ನು ಆರಂಭಿಸಿದಳು. ಇದು ಲಿವಿಂಗ್ ಕಿಚನ್ ರೇಂಜ್ ಎಂಬ ಹೆಸರಿನಲ್ಲಿ ಕರೆಯಲ್ಪಟ್ಟಿತ್ತು, ಅಲ್ಲದೇ ಅನೇಕ ಚಿಲ್ಲರೆ ವ್ಯಾಪಾರಿಗಳಿಂದ ಮಾರಾಟವಾಯಿತು.[೨೩] ಅವಳ ಕಿಚನ್ ರೇಂಜ್ ಗಳ ಬೆಲೆಯು ಹೆಚ್ಚಾಗುತ್ತಾ ಹೋಯಿತು. ಪ್ರಾರಂಭದಲ್ಲಿ ಅಂದಾಜು ಮಾಡಲಾದಂತೆ 2003ರಲ್ಲಿ £2 ಮಿಲಿಯನ್ ಇದ್ದದ್ದು ,[೪೧] 2007 ರಲ್ಲಿ £7 ಮಿಲಿಯನ್ ನಷ್ಟು ಹೆಚ್ಚಳವಾಯಿತು.[೪೨]

2003–2006: ನಿಗೆಲ್ಲ ಫೀಸ್ಟ್ಸ್(ಹಬ್ಬದೂಟಗಳು) ಹಾಗು BBC ಒಪ್ಪಂದ[ಬದಲಾಯಿಸಿ]

ನವೆಂಬರ್ 2003ರಲ್ಲಿ ,ಜಾರ್ಜ್ ಡ್ಬ್ಯೂ. ಬುಶ್ ಹಾಗು ಆತನ ಪತ್ನಿ UK ಗೆ ಭೇಟಿನೀಡಿದ್ದಾಗ ಟೋನಿ ಬ್ಲೇರ್ ಅವರ ಸಲುವಾಗಿ ಡೌನಿಂಗ್ ಸ್ಟ್ರೀಟ್ ನಲ್ಲಿ ಜೌತಣಕೂಟ ಏರ್ಪಡಿಸಿದ್ದರು. ಈ ಜೌತಣಕೂಟದ ಮೇಲ್ವಿಚಾರಣೆಯನ್ನು ಲಾಸನ್ ನೋಡಿಕೊಂಡಿದ್ದಳು.[೪೩] ಲಾರಾ ಬುಶ್ ಲಾಸನ್ ಳ ಅಡುಗೆಯ ಅಭಿಮಾನಿ ಎಂದು ಹೇಳಿಕೊಂಡಿದ್ದಾಳಲ್ಲದೇ, ಅವಳ ಸೂಪ್ ಗಳಲ್ಲಿ ಒಂದು ಸೂಪ್ ಅನ್ನು 2002 ರ ಅಧ್ಯಕ್ಷಕೀಯ ಕ್ರಿಸ್ ಮಸ್ ಜೌತಣಕೂಟದಲ್ಲಿ ಸೇರಿಸಲಾಯಿತು.[೪೦] ಲಾಸನ್ ಳ ಐದನೇ ಪುಸ್ತಕವಾದ , ಫೀಸ್ಟ್ ಪುಡ್ ದ್ಯಾಟ್ ಸೆಲಬರೇಟ್ಸ್ ಲೈಫ್ ,2004 ರಲ್ಲಿ ಬಿಡುಗಡೆಯಾಯಿತು[೪೪]. ಅಲ್ಲದೇ £3 ಮಿಲಿಯನ್ ಮೌಲ್ಯದಷ್ಟು ಮಾರಾಟವಾಯಿತು.[೪೫] ಲಂಡನ್ ನ ಈವ್ ನಿಂಗ್ ಸ್ಟಾಂಡರ್ಡ್ ಪತ್ರಿಕೆ, ಪುಸ್ತಕ " ಪ್ರಾಯೋಗಿಕವಾಗಿ, ಶಾರೀರಿಕವಾಗಿ ಎರಡೂ ರೀತಿಯಲ್ಲಿಯೂ ಹಾಗು ಓದಿನಲ್ಲಿ ತಲ್ಲೀನಗೊಳಿಸುವಂತೆ ಕೆಲಸ ಮಾಡುತ್ತದೆ, . ... ಎಂದು ಬರೆಯುವ ಮೂಲಕ ಒಳ್ಳೆಯ ವಿಮರ್ಶೆ ನೀಡಿತು. ಆಹಾರದ ಭಾವನಾತ್ಮಕತೆಯ ಬಗ್ಗೆ ಯಾರು ಇಷ್ಟು ಮುಕ್ತವಾಗಿ ಬರೆದಿಲ್ಲ ".[೪೬] ದಿ ಎಲೆನ್ ಡಿಜನರಸ್ ಪ್ರದರ್ಶನ ದಂತಹ ಮಾತನಾಡುವ ಕಾರ್ಯಕ್ರಮಗಳಲ್ಲಿ ಕುಕ್ಕೆರಿ ಸ್ಲಾಟ್ ಸ್ಪರ್ಧೆಯನ್ನು ನಡೆಸಿಕೊಡುವುದರ ಮೂಲಕ 2004ರಲ್ಲಿ ಲಾಸನ್ ಅಮೇರಿಕನ್ ದೂರದರ್ಶನದಲ್ಲಿ ಸತತವಾಗಿ ಕಾಣಿಸಿಕೊಂಡಳು.[೪೭]

ಲಾಸನ್ ITV1 ಚಾನಲ್ ನಲ್ಲಿ ಹಗಲು ಹೊತ್ತಿನಲ್ಲಿ ಮಾಡುವಂತಹ ಚಾಟ್ ಕಾರ್ಯಕ್ರಮವನ್ನು ನಡೆಸಿಕೊಡಲು ಪ್ರಾರಂಭಿಸಿದಳು.ನಿಗೆಲ್ಲ ಎಂದು ಕರೆಯಲ್ಪಟ್ಟ, ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ವ್ಯಕ್ತಿಗಳು ಅತಿಥಿಗಳಾಗಿ ಸ್ಟೂಡಿಯೋ ಅಡುಗೆಮನೆಗೆ ಬಂದು ಲಾಸನ್ ಳೊಡನೆ ಸಂವಾದ ನಡೆಸುತ್ತಿದ್ದರು.[೧೭] ಮೊದಲನೇ ಎಪಿಸೋಡ್ 800,000 ವೀಕ್ಷಕರನ್ನು ನಿರಾಸೆಗೊಳಿಸುವುದರ ಮೂಲಕ ತನ್ನ ಮೊದಲ ಪ್ರದರ್ಶನ ನೀಡಿತು.[೪೮] ಈ ಕಾರ್ಯಕ್ರಮದ ಬಗ್ಗೆ ಕಟು ಟೀಕೆಗಳು ಕೇಳಿಬಂದವು.[೪೯] ಅಲ್ಲದೇ ಮೊದಲನೆಯ ವಾರದಲ್ಲೇ 40 ಪ್ರತಿಶತ ವೀಕ್ಷಕರನ್ನು ಕಳೆದುಕೊಂಡನಂತರ ಕಾರ್ಯಕ್ರಮವನ್ನು ರದ್ದುಮಾಡಲಾಯಿತು.[೫೦] ತರುವಾಯ ರೇಡಿಯೊ ಟೈಮ್ಸ್ ನ ಸಂದರ್ಶನದಲ್ಲಿ ಲಾಸನ್, ತನ್ನ ಮೊದಲನೆಯ ಕಾರ್ಯಕ್ರಮದಲ್ಲಿ ಆಕೆ ಅಲಂಕಾರ ಮಾಡಿಕೊಳ್ಳುವ ಕೊಠಡಿಯಿಂದ ಹೊರಗೆ ಬರಲು ಹೆದರಿಕೊಂಡಿದ್ದಳು ಎಂದು ಹೇಳಿಕೊಂಡಿದ್ದಾಳೆ.[೫೧] ಇದಷ್ಟೇ ಅಲ್ಲದೇ ಲಾಸನ್ ಗೆ ತನ್ನ ಕಾರ್ಯಕ್ರಮದಲ್ಲಿ ಪ್ರಸಿದ್ಧ ವ್ಯಕ್ತಿಗಳ ಜೀವನದ ಬಗ್ಗೆ ಆಸಕ್ತಿ ಇರುವಂತೆ ನಟಿಸುವುದು ಕಷ್ಟಕರವಾಗಿತ್ತು ಎಂದು ಹೇಳಿಕೊಂಡಿದ್ದಾಳೆ.[೧೭] ಇಷ್ಟೇ ಅಲ್ಲದೇ,"ನಾನು ಯಾವಾಗಲೂ ನಿರೂಪಕಿಯಾಗಿರಲು ಸಾಧ್ಯವಿಲ್ಲ,ಅಲ್ಲದೇ ಮೂಲಪ್ರತಿಯನ್ನು ಬರೆಯುವುದಿಲ್ಲ".[೫೨] ಎಂಬುದನ್ನು ಆಕೆ ತಿಳಿಸಿದಳು.

ನಿಗೆಲ್ಲ ಫೀಸ್ಟ್ಸ್ ಎಂದು ಕರೆಯಲ್ಪಟ್ಟ, ಅವಳ ಆಹಾರ ಆಧಾರಿತ ದೂರದರ್ಶನದ ಮೂರನೆಯ ಸರಣಿಕಾರ್ಯಕ್ರಮದ ಮೊದಲ ಪ್ರದರ್ಶನವನ್ನು 2006 ಶರತ್ಕಾಲದಲ್ಲಿ US ನ ಫುಡ್ ನೆಟ್ ವರ್ಕ್ ನಲ್ಲಿ ಪ್ರಸಾರಮಾಡಲಾಯಿತು.ಇದನ್ನು 13 ವಾರಗಳ ಕಾಲ ಪ್ರಸಾರಮಾಡಲಾಯಿತು.[೫೦] ಟೈಮ್ ನಿಯತಕಾಲಿಕೆ ಈ ಕಾರ್ಯಕ್ರಮದ ಬಗ್ಗೆ ಒಳ್ಳೆಯ ವಿಮರ್ಶೆ ನೀಡಿತು; "ಫೀಸ್ಟ್ಸ್ ಹೇಗಿತ್ತೆಂದರೆ ಮನರಂಜಿಸುವ ಹಾಗು ಉತ್ತಮ ಆಹಾರದ ನಿರೂಪಣೆಯನ್ನು ಆಕೆ ಅತಿಶಯೋಕ್ತಿಯಿಲ್ಲದೇ ,ಸಹಜವಾದ ರೀತಿಯಲ್ಲಿ ನೀಡಿದಳು. ಮನೋಹರ ದೃಶ್ಯಗಳು ಹಾಗು ಲಾಸನ್ ಳ ತಿನ್ನುವುದರ ಬಗೆಗಿನ ತೃಪ್ತಿ, ಫೀಸ್ಟ್ಸ್ ಗೆ ನಮ್ಮನ್ನು ಆಹ್ವಾನಿಸಲಿ ಎಂಬ ಆಸೆಯನ್ನು ಹುಟ್ಟಿಸುತ್ತದೆ".[೫೩] ಕಾರ್ಯಕ್ರಮವು ಅಮೇರಿಕಾದಲ್ಲಿ ಯಶಸ್ವಿಯಾದ ಕಾರಣ, ಲಾಸನ್ ಪ್ರಪಂಚದಾದ್ಯಂತ ಇತರ ಹತ್ತು ರಾಷ್ಟ್ರಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡುವ £2.5 ಮಿಲಿಯನ್ ಒಪ್ಪಂದಕ್ಕೆ ಸಹಿಹಾಕಿದಳು.[೫೪]

ಲಾಸನ್ ನಂತರ BBC Two ಚಾನಲ್ ಗಾಗಿ ನಿಗೆಲ್ಲಾಳ ಕ್ರಿಸ್ ಮಸ್ ಕಿಚನ್ ಎಂಬ ಹೆಸರಿನಲ್ಲಿ ಮೂರು-ಭಾಗಗಳಿರುವ ಪಾಕಶಾಸ್ತ್ರದ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿದಳು. ಇದನ್ನು 2006 ಡಿಸೆಂಬರ್ 6 ರಲ್ಲಿ ಪ್ರಾರಂಭಿಸಿ ಅದನ್ನು ವಾರಕೊಮ್ಮೆ ಪ್ರಸಾರಮಾಡಲಾಯಿತು. ಮೊದಲನೆಯ ಎಪಿಸೋಡ್ 3.5 ಮಿಲಿಯನ್ ವೀಕ್ಷಕರನ್ನು ಹೊಂದುವ ಮೂಲಕ ಮೊದಲ ಎರಡು ಎಪಿಸೋಡ್ ಗಳು BBC Two ನ ವಾರದ ವೀಕ್ಷಕರ ಪ್ರಮಾಣದಲ್ಲಿ ಎರಡನೇ ಸ್ಥಾನ ಗಳಿಸಿದವು.[೫೫][೫೬] ಕೊನೆಯ ಎಪಿಸೋಡ್ ವಾರದಲ್ಲಿ ಪ್ರದರ್ಶನಗೊಂಡಂತಹ BBC Two ಚಾನಲ್ ನ ಅತ್ಯುತ್ತಮ ಪ್ರದರ್ಶನವಾಯಿತು.[೫೫] ನಿಗೆಲ್ಲಾಳ ಕ್ರಿಸ್ ಮಸ್ ಕಿಚನ್ ಲಾಸನ್ ಳಿಗೆ ಪ್ರಪಂಚದ ಎರಡನೇ ಮೀಡಿಯ ಪ್ರಶಸ್ತಿಯನ್ನು 2007 ರಲ್ಲಿ ತಂದುಕೊಟ್ಟಿತ್ತು.[೫೭] ಅಡುಗೆಯ ನಿರೂಪಕಿಯಾಗಿ ತನ್ನ ಪ್ರಭಾವನ್ನು 2006 ರ ಉತ್ತರಾರ್ಧದಲ್ಲಿಯೂ ಕೂಡ ತೋರ್ಪಡಿಸಿದಳು. ಕ್ರಿಸ್ ಮಸ್ ನ ತಿನಿಸುಗಳಲ್ಲಿ ಬಾತುಕೋಳಿಯ ಕೊಬ್ಬನ್ನು ಬಳಸುವ ಮೂಲಕ ಅದನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದಳು. ಇದರಿಂದ UKಯಲ್ಲಿ ಆ ತಿನಿಸುಗಳ ಮಾರಾಟದ ಪ್ರಮಾಣ ಹೆಚ್ಚಾಯಿತು. ಬಾತುಕೋಳಿಯ ಕೊಬ್ಬಿನ ಮಾರಾಟ ದ್ವಿಗುಣಗೊಂಡಿರುವುದಲ್ಲದೇ ಅಸಾಡ (ಬ್ರಿಟನ್ನಿನ ಕಿರುಕಳ ಆಹಾರ ವಹಿವಾಟು ಕೇಂದ್ರ)ಬಾತುಕೋಳಿಯ ವ್ಯಾಪಾರವು ಕಳೆದ ವಾರಕ್ಕಿಂತ 65 ಪ್ರತಿಶತ ಹೆಚ್ಚಿದೆ ಎಂದು ವೇಟ್ ರೋಸ್ ಅಂಡ್ ಟೈಸ್ಕೊ ಮಳಿಗೆಗಳು ತಿಳಿಸಿದವು.[೫೮] ಇದೇ ರೀತಿಯಲ್ಲಿ ಆಕೆ ಒಣಗಿದ ಪ್ಲಮ್ ಹಣ್ಣುಗಳನ್ನು ನಿಗೆಲ್ಲಾಳ ಕ್ರಿಸ್ ಮಸ್ ಕಿಚನ್ ಅಡುಗೆಯಲ್ಲಿ ಬಳಸಲು ಸೂಚಿಸಿದ ನಂತರ, ವೇಟ್ ರೋಸ್ ನ ಮಾರಾಟವು ವರ್ಷದಿಂದ ವರ್ಷಕ್ಕೆ 30 ಪ್ರತಿಶತ ದಷ್ಟು ಹೆಚ್ಚಾಯಿತು.[೫೯][೬೦]

2007–2009: ನಿಗೆಲ್ಲ ಎಕ್ಸ್ ಪ್ರೆಸ್ ಹಾಗು ನಿಗೆಲ್ಲಾಳ ಕ್ರಿಸ್ ಮಸ್[ಬದಲಾಯಿಸಿ]

ನಿಗೆಲ್ಲಾಳ ಕ್ರಿಸ್ ಮಸ್ ಕಿಚನ್ , ನಿಗೆಲ್ಲ ಎಕ್ಸ್ ಪ್ರೆಸ್ ಎಂಬ ಹೆಸರಿನಲ್ಲಿ ಪಾಕಶಾಸ್ತ್ರದ ಸರಣಿ ಕಾರ್ಯಕ್ರಮ 13 ಭಾಗಗಳಲ್ಲಿ ಪ್ರಸಾರವಾಗಲು ಕಾರಣವಾಯಿತು.[೬೧] ಈ ಸರಣಿ ಕಾರ್ಯಕ್ರಮದ ಪ್ರದರ್ಶನವನ್ನು BBC Two ಚಾನಲ್ ನಲ್ಲಿ 2007 ಸೆಪ್ಟೆಂಬರ್ 3 ರಂದು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸರಳ ಹಾಗು ಅತಿ ಶೀಘ್ರದಲ್ಲಿ ಮಾಡುವ ಅಡುಗೆಗಳ ವಿಧಾನದ ಬಗ್ಗೆ ಸೂಚನೆಗಳನ್ನು ನೀಡಲಾಗಿತ್ತು.[೬೨] ಲಾಸನ್ "ವಿಶೇಷವಾಗಿ ಆರೋಗ್ಯಕರ"ವಲ್ಲದ ಅಡುಗೆಗಳನ್ನು(ಕುರುಕಲು ತಿಂಡಿಯಂತಹವು) ಆಕೆ ಸೇರಿಸಿಕೊಂಡಳು,[೬೩] ಹಾಗು , "ಅವು ಕೆಟ್ಟ ಆಹಾರವೆಂದು ನಾನು ಹೇಳುವುದಿಲ್ಲ" ಎಂದು ಹೇಳಿದ್ದಳು.[೬೪] ಪ್ರದರ್ಶನವು ಮತ್ತಷ್ಟು ಯಶಸ್ವಿಯಾಯಿತು.ಅಲ್ಲದೇ ಪ್ರತಿ ವಾರ BBC Two ನ ಅತ್ಯಂತ ಹೆಚ್ಚು ವೀಕ್ಷಕರ ಪ್ರಮಾಣ ದರವನ್ನು ಪಡೆದಿರುವ ಪ್ರದರ್ಶನವಾಯಿತು.[೬೫] ಮೊದಲನೇ ಎಪಿಸೋಡ್ 2.85 ಮಿಲಿಯನ್ ವೀಕ್ಷಕರೊಂದಿಗೆ ತನ್ನ ಮೊದಲನೆಯ ಪ್ರದರ್ಶನ ನೀಡಿತು.[೬೫] ಇದು ಚಾನಲ್ ಸ್ಲಾಟ್(ಸ್ಥಾನ)ನ ಸಾಮಾನ್ಯ ವೀಕ್ಷಕರಿಗಿಂತ ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿತು.[೬೬] ಎರಡನೇ ಎಪಿಸೋಡ್ ಅನ್ನು 3.3 ಮಿಲಿಯನ್ ವೀಕ್ಷಕರು ವೀಕ್ಷಿಸಿದರು.[೬೭] ಅಲ್ಲದೇ ಸರಣಿಗಳು 2007 ಅಕ್ಟೋಬರ್ 22 ರಂದು 3.4 ಮಿಲಿಯನ್ ನಷ್ಟು ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿದವು.[೬೮] ಅವಳ ನಿಗೆಲ್ಲ ಎಕ್ಸ್ ಪ್ರೆಸ್ ಕಾರ್ಯಕ್ರಮದಲ್ಲಿ ಕೊಕ್ ಔ ರೀಸ್ಲಿಂಗ್ (ತುಪ್ಪದಲ್ಲಿ ಮಾಡಿದ ಸೇವಿಗೆ)ಅಡುಗೆಯ ಜೊತೆಯಲ್ಲಿ ರೀಸ್ಲಿಂಗ್ ವೈನ್ ಅನ್ನು ಸೇರಿಸಿಕೊಂಡ ನಂತರ UK ಯಲ್ಲಿ ಅದರ ಮಾರಾಟದ ಪ್ರಮಾಣ 30 ಪ್ರತಿಶತದಷ್ಟು ಹೆಚ್ಚಿದಾಗ ಸಾರ್ವಜನಿಕರ ಮೇಲೆ ಆಕೆ ಬೀರಿದ ಪ್ರಭಾವ ಮತ್ತೊಮ್ಮೆ ಸಾಬೀತಾಯಿತು.[೬೯] ತರುವಾಯ ಇದೇ ರೀತಿಯಲ್ಲಿ ಮತ್ತೊಂದು ಸಂದರ್ಭದಲ್ಲಿ, ಲಾಸನ್ ತನ್ನ ಪ್ರದರ್ಶನದಲ್ಲಿ ಲಿಕ್ಯೂರ್ ಅಡ್ವಕಾಟ್(ಇದು ಮೊಟ್ಟೆಗಳು,ಸಕ್ಕರೆ ಮತ್ತು ಬ್ರಾಂಡಿ ಸೇರಿಸಿದ ಮದ್ಯ)ಮದ್ಯವನ್ನು ಸೇರಿಸಿಕೊಂಡ ನಂತರ ಈ ಮದ್ಯಗಳ ಮಾರಾಟ ದರ ಹೆಚ್ಚಿತು.

ದೂರದರ್ಶನದಲ್ಲಿ ಪ್ರಸಾರವಾದ ನಿಗೆಲ್ಲ ಎಕ್ಸ್ ಪ್ರೆಸ್ ನ ಸರಣಿಗಳು ಡೇಲಿ ಮೇಲ್ ಪತ್ರಿಕೆಗೆ ವಿಮರ್ಶೆಯ ವಿಷಯವಾದವು.ಈ ಕಾರ್ಯಕ್ರಮವನ್ನು ನಡೆಸಲು ಲಾಸನ್ ಬಾಡಿಗೆಗೆ ತೆಗೆದುಕೊಂಡಿದ್ದ ಬಸ್ಸನಲ್ಲಿ ಕಾರ್ಯಕ್ರಮಕ್ಕೆ ಸಂಬಂಧ ಪಡದವರು ಇದ್ದರು ಎಂದು ಟೀಕಿಸಲಾಯಿತು.[೪೨] ನಿರ್ಮಾಪಕರು ಈ ಟೀಕೆಗಳಿಗೆ ಪ್ರತಿಕ್ರಿಯಿಸುತ್ತ "ಈ ಸರಣಿಗಳು ಮನರಂಜನೆಗೋಸ್ಕರ ನಿಜವಾಗಿ ಅಡುಗೆಮಾಡುವ ಕಾರ್ಯಕ್ರಮವಾಗಿದೆಯೇ, ಹೊರತು ಕೇವಲ ವೀಕ್ಷಿಸುವ ಸಾಕ್ಷ್ಯಚಿತ್ರವಲ್ಲ. ಅಲ್ಲದೇ ಇದು ಸರಿಯಾದ ವಿಧಾನದಲ್ಲಿ ನಡೆಯುತ್ತಿದೆ" ಎಂದು ಹೇಳಿಕೊಂಡರು.[೪೨] ಲಾಸನ್ ಅಡುಗೆಮಾಡುತ್ತಿರುವ ದೃಶ್ಯಗಳಲ್ಲಿದ್ದ ಅಡುಗೆ ಮನೆಗಳು ಎರಡು ವಿಭಿನ್ನ ಸ್ಥಳಗಳಲ್ಲಿವೆ ಎಂಬುದನ್ನು ಬಹಿರಂಗಪಡಿಸಿದಾಗ ಅದು ವಿವಾದಕ್ಕೆ ಗುರಿಯಾಯಿತು;ಒಂದು ತನ್ನ ಮನೆಯಲ್ಲಿದೆ ಹಾಗು ಮತ್ತೊಂದು ಲಂಡನ್ನಿನ ದೂರದರ್ಶನದ ಸ್ಟೂಡಿಯೋದಲ್ಲಿದೆ.[೪೨] ಲಾಸನ್ ಸರಣಿಕಾರ್ಯಕ್ರಮದ ಮೊದಲನೇ ಎಪಿಸೋಡ್ ನ ಬಳಿಕ ದಪ್ಪಗಾಗಿದ್ದಾಳೆ ಎಂದು ವೀಕ್ಷಕರು ದೂರು ನೀಡಿದಾಗ ಆಕೆ ಟೀಕೆಗೆ ಒಳಪಟ್ಟಿದ್ದಳು.[೭೦] ವಿಮರ್ಶಕರು ಕುಕಿ ಮಾನ್ ಸ್ಟರ್"[೭೧] ನ ಸ್ವರ್ಣಯುಗದ ಕಾಲದಿಂದ ಹೊಟ್ಟೆಬಾಕತನದ ದೃಶ್ಯಗಳನ್ನು ತೋರಿಸಿಲ್ಲವೆಂದು ಈ ಸರಣಿಗಳ ಮೇಲೆ ಅರೋಪಿಸಿದ್ದಾರೆ.ಅಲ್ಲದೇ "ಅವಳ ಧಾರಾಳತನವು ಆಕೆಯ ಗಾತ್ರವನ್ನು ಸ್ವಲ್ಪ ದೊಡ್ಡದಾಗಿ ಮಾಡಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.[೭೧] ದಿ ಗಾರ್ಡಿಯನ್ ಪತ್ರಿಕೆ "ಅಡುಗೆ ಅವಳ ಅಸ್ತಿತ್ವದಂತೆ, ಆಕೆಯ ನಾಜೂಕಿನ ಕಳಂಕವಿಲ್ಲದ ವ್ಯಕ್ತಿತ್ವದಂತೆ ಇರುತ್ತದೆ " ಎಂದು ಬರೆದಿದೆ.[೭೨] ನಿಗೆಲ್ಲ ಎಕ್ಸ್ ಪ್ರೆಸ್ ನ ಹಕ್ಕುಗಳನ್ನು ಅಮೆರಿಕಾದ ಪುಡ್ ನೆಟ್ ವರ್ಕ್ ಗೆ ,[೪೨] ಹಾಗು ಡಿಸ್ಕವರಿ ಏಷ್ಯಾಗೆ ಮಾರಲಾಯಿತು.[೭೩] ಈ ಸರಣಿಗಳು ಅಮೇರಿಕಾದಲ್ಲಿ ಅತ್ಯುತ್ತಮ ಜೀವನಶೈಲಿ ಕಾರ್ಯಕ್ರಮಗಳಿಗೆ ಕೊಡುವಂತಹ 35ನೇಯ ಡೆ ಟೈಮ್ ಎಮ್ಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡವು. ಅಲ್ಲದೇ ಲಾಸನ್ ಅತ್ಯುತ್ತಮ ಜೀವನಶೈಲಿ ಕಾರ್ಯಕ್ರಮಗಳ ನಿರೂಪಕಿ ಪ್ರಶಸ್ತಿಯನ್ನು ಪಡೆದುಕೊಂಡಳು.[೭೪]

ನಿಗೆಲ್ಲ ಎಕ್ಸ್ ಪ್ರೆಸ್ ಅನ್ನು ಒಳಗೊಂಡಿರುವ ಪುಸ್ತಕವು UK ಯಲ್ಲಿ 2007 ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಯಿತು.ಅಮೇರಿಕಾದಲ್ಲಿ 2007 ನವೆಂಬರ್ ನಲ್ಲಿ ,[೪೨] ಬಳಿಕ 2008ರಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಕಟಿಸಲ್ಪಟ್ಟಿತು.[೭೫] ದೂರದರ್ಶನದ ಸರಣಿಗಳ ಹೆಸರನ್ನೇ ಇಟ್ಟುಕೊಳ್ಳುವ ಮೂಲಕ UKಯಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮತ್ತೊಂದು ಪುಸ್ತಕವಾಯಿತಲ್ಲದೇ,[೭೬] ವಾಟರ್ ಸ್ಟೋನ್ ಪುಸ್ತಕ ಮಳಿಗೆಯ ಪ್ರಕಾರ ಈ ಪುಸ್ತಕದ 100,೦೦೦ ಪ್ರತಿಗಳನ್ನು ದೂರದರ್ಶನದ ಮತ್ತೊಬ್ಬ ಷೆಫ್ ಆದ ಜಮೈ ಆಲಿವರ್ ಅತ್ಯಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದನು.[೩೭] UK ಯಲ್ಲಿ ಡಿಸೆಂಬರ್ ತಿಂಗಳಿನ ಮಧ್ಯಾವಧಿಯಲ್ಲಿ ಪುಸ್ತಕದ, ಸುಮಾರು 490,000 ಪ್ರತಿಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.[೩೭] ಮುಂದೆ ,ಅಮಸಾನ್ UKಯ ವರ್ಷದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗಿರುವ ಪುಸ್ತಕಗಳಲ್ಲಿ ಮೊದಲನೇ ಸ್ಥಾನವನ್ನು ಪಡೆದ ಹೆಗ್ಗಳಿಕೆ ಪಡೆಯಿತು,[೩೭] ಅಲ್ಲದೇ ಎಲ್ಲಾ ವಿಭಾಗಕ್ಕೆ ಸಂಬಂಧಿಸಿದಂತೆ ಕ್ರಿಸ್ ಮಸ್ ನ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗಿರುವ ಪುಸ್ತಕಗಳಲ್ಲಿ ಒಂಭತ್ತನೆಯ ಸ್ಥಾನ ಪಡೆದುಕೊಂಡಿತು.[೭೭] ದಿ ಗಾರ್ಡಿಯನ್ ಪತ್ರಿಕೆಯ ಪೌಲ್ ಲೆವಿ ಎಂಬುವವನು ಅಡುಗೆ ವಿಧಾನಗಳ ಶೈಲಿಯು "ಸರಿಯಾಗಿದೆ ಎಂದು ಬರೆದಿದ್ದಾನೆ. ನಿಗೆಲ್ಲಾಳಲ್ಲಿ ಎದ್ದು ಕಾಣುವ ಗುಣವೇನೆಂದರೆ ಪ್ರತಿಯೊಂದು ಕಾರ್ಯಕ್ರಮದ ಪರಿಚಯದಲ್ಲೂ ಆಕೆ ಕೇವಲ ತಾನು ಅಡುಗೆ ಮಾಡುವವಳೆಂದು ಮಾತ್ರ ಯೋಚಿಸದೇ ಅದನ್ನು ತಿನ್ನುವವಳೆಂದು ಪ್ರಸ್ತುತಪಡಿಸುತ್ತಾಳೆ. ಅಲ್ಲದೇ ಅದು ಶುಚಿಯಾಗಿಲ್ಲವೇ, ಅಂಟಂಟಾಗಿದೆಯೇ ಅಥವಾ ಚೆನ್ನಾಗಿಲ್ಲವೆ" ಎಂಬುದನ್ನು ನಿಮಗೆ ತಿಳಿಸುತ್ತಾಳೆ.[೭೨] ಇದು ವರೆಗೆ ಸನ್ ಪ್ರಪಂಚದಾದ್ಯಂತ 3 ಮಿಲಿಯನ್ ಪುಸ್ತಕಗಳನ್ನು ಮಾರಾಟಮಾಡಿದ್ದಾಳೆಂದು ಅಂದಾಜು ಮಾಡಲಾಗಿದೆ.[೭೮] ಅವಳ ಕ್ರಿಸ್ ಮಸ್ ಪುಸ್ತಕ 2008 ರ ಅಕ್ಟೋಬರ್ ನಲ್ಲಿ ಬಿಡುಗಡೆಹೊಂದಿತು.ಅಲ್ಲದೇ ಅದೇ ವರ್ಷದ ಡಿಸೆಂಬರ್ ನಲ್ಲಿ ದೂರದರ್ಶನ ಕಾರ್ಯಕ್ರಮವೂ ಪ್ರಸಾರವಾಯಿತು. ಅನೇಕ US ನಗರಗಳ ಪ್ರವಾಸವನ್ನೊಳಗೊಂಡ, ಹಾಗು USನ ಲ್ಲಿರುವ ಫುಡ್ ನೆಟ್ ವಾರ್ಕ್ ನ ಬಗ್ಗೆ ವಿಶೇಷ ಮಾಹಿತಿಯನ್ನೊಳಗೊಂಡ ಪುಸ್ತಕದ ಜೊತೆಯಲ್ಲಿ, ಮುಖಪುಟದಲ್ಲಿ ವಿಭಿನ್ನ ಚಿತ್ರಗಳನ್ನು ಒಳಗೊಂಡ "ನಿಗೆಲ್ಲ ಕ್ರಿಸ್ ಮಸ್" ಪುಸ್ತಕದ ಅಮೇರಿಕನ್ ಆವೃತ್ತಿಯನ್ನು 2009 ರ ನವೆಂಬರ್ ನಲ್ಲಿ ಬಿಡುಗಡೆಮಾಡಲಾಯಿತು.

ನಿರೂಪಣೆಯ ಶೈಲಿ ಮತ್ತು ಉತ್ತಮ ಚಿತ್ರಣ[ಬದಲಾಯಿಸಿ]

ಪಾಕಶಾಸ್ತ್ರದಲ್ಲಿ ಲಾಸನ್ ಯಶಸ್ವಿ ವೃತ್ತಿ ಜೀವನವನ್ನು ಪಡೆದರೂ, ಆಕೆ ಪರಿಣತ ಷೆಫ್ ಆಗಿರಲಿಲ್ಲ,[೭೯] ಹಾಗು "ಪ್ರಸಿದ್ಧ ಷೆಫ್" ಎಂದು ಕರೆಸಿಕೊಳ್ಳಲು ಇಷ್ಟಪಟ್ಟಿರಲಿಲ್ಲ.[೨] ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಆಕೆ ಅಡುಗೆ ಮಾಡುವವಳಂತೆ ಅಥವಾ ತನ್ನ ಕ್ಷೇತ್ರದಲ್ಲಿ ಅವಳು ಪರಿಣತಳೆಂಬಂತೆ ಎಂದಿಗೂ ಭಾವಿಸಿರಲಿಲ್ಲ.[೧೨] ಪ್ರಪಂಚದಾದ್ಯಂತ ಪ್ರಸಾರವಾದ ಲಾಸನ್ ಳ ದೂರದರ್ಶನ ಕಾರ್ಯಕ್ರಮಗಳಲ್ಲಿ,[೮೦] ಆಕೆ ತನ್ನ ಆನಂದಕ್ಕಾಗಿ,[೭] ಸಂತೋಷಕ್ಕಾಗಿ ಅಡುಗೆ ಮಾಡುತ್ತಾಳೆಂದು ತಿಳಿಸಿದ್ದಾಳೆ,[೩] ಆದ್ದರಿಂದ ಆಕೆ ಅಡುಗೆ ಮಾಡುವುದರಲ್ಲಿ ಚಿಕಿತ್ಸಾತ್ಮಕ ಅನುಭವವನ್ನು ಪಡೆಯುತ್ತಾಳೆ.[೧೨] ಆಕೆಯ ಪುಸ್ತಕದಲ್ಲಿರುವ ಯಾವ ಅಡುಗೆಯನ್ನು ಪ್ರದರ್ಶಿಸಬೇಕೆಂಬುದನ್ನು ನಿರ್ಧರಿಸುವಾಗ, ತಿನ್ನುವವನ ಸಲಹೆಯಯನ್ನು ತೆಗೆದುಕೊಳ್ಳುತ್ತಾಳೆಂದು ಹೇಳುವ ಮೂಲಕ "ನನಗೆ ಹೊಟ್ಟೆ ತುಂಬಿದ್ದರೆ ನಾನು ಅದನ್ನು ತಿನ್ನಲು ಬಯಸುವುದಿಲ್ಲ ಅಲ್ಲದೇ ನನಗೆ ಅದನ್ನು ಮಾಡುವ ವಿಧಾನವೂ ಬೇಕಿಲ್ಲ.. ನಾನು ಮತ್ತೆ ಅದನ್ನು ಮಾಡಬೇಕು ಎಂದು ನನಗೆ ಅನ್ನಿಸಬೇಕು" ಎಂದು ಹೇಳಿಕೊಂಡಿದ್ದಾಳೆ.[೧೨]

"ನನಗನ್ನಿಸುವ ಪ್ರಕಾರ ಅಡುಗೆ ಮಾಡುವುದು ಸಂತೋಷಕ್ಕಾಗಿ ಹಾಗು ಕುಟುಂಬಕ್ಕಾಗಿ ಎಂದು ಹೇಳುವ ಮೂಲಕ ಲಾಸನ್ ಅಡುಗೆಯ ಬಗ್ಗೆ ಸಹಜ ಧೋರಣೆ ತಾಳುತ್ತಾಳೆ. ನಾನು ಅಡುಗೆ ಮಾಡುವ ರೀತಿ ಆರಾಮದಾಯಕ ವಾಗಿರಬೇಕೇ ಹೊರತು ಆಯಾಸದಾಯಕ ವಾಗಿರಬಾರದು ಎಂದು ಹೇಳುತ್ತಾಳೆ. ನನ್ನ ಕಿಚನ್(ಅಡುಗೆಮನೆ)ನಲ್ಲಿ ಯಾವುದೇ ನಿಯಮಗಳಿಲ್ಲ".[೭೯] "ಬಹುಪಾಲು TV ಷೆಫ್ ಗಳು ಅಡುಗೆ ತಯಾರಿಸುವುದರ ಬಗ್ಗೆ ಹೇಳುವಂತೆ ಆಕೆಯ ಅಡುಗೆಗಳಲ್ಲಿ ಅಡುಗೆ ತಯಾರಿಸಲು ದೀರ್ಘ ವಿವರಣೆ ಇರುವುದಿಲ್ಲ" ಎಂದು ಹೇಳುವ ಮೂಲಕ ಒಬ್ಬ ಸಂಪಾದಕ ಲಾಸನ್ ಳ ಅಡುಗೆಮಾಡುವ ವಿಧಾನದ ಸರಳತೆಯ ಮೇಲೆ ಬೆಳಕುಚೆಲ್ಲಿದ್ದಾನೆ.[೮೧]

ಪೌಲ್ ಹಾರ್ವೇ ನಿಂದ ನಿಗೆಲ್ಲ ಲಾಸನ್ ಳ ಒಂದು ಕಲಾತ್ಮಕ ಚಿತ್ರ

ಲಾಸನ್ ಕಾರ್ಯಕ್ರಮವನ್ನು ನಿರೂಪಿಸುವ ಅವಳ ವಯ್ಯಾರದ ಭಂಗಿಗೆ ಪ್ರಸಿದ್ಧಳಾಗಿದ್ದರೂ ಕೂಡ ಅದನ್ನು ಕುರಿತಂತೆ "ಇದು ವ್ಯಯ್ಯಾರ ತೋರುವುದಲ್ಲ ಎಂದು ಆಕೆ ವಾದಿಸಿದ್ದಾಳೆ. ತನ್ನದಲ್ಲದ ವಿಭಿನ್ನ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳುವಂತಹ ಬುದ್ಧಿವಂತಿಕೆ ನನ್ನಲ್ಲಿಲ್ಲ. ಇದು ನಿಕಟತೆಯೇ ಹೊರತು, ನಾಟಕವಲ್ಲ".[೧೭] ಕಾರ್ಯಕ್ರಮವನ್ನು ಪ್ರದರ್ಶಿಸುವಾಗ ಆಕೆ ತೋರುವ ವಯ್ಯಾರದಿಂದಾಗಿ ಲಾಸನ್ ಳನ್ನು " ಫುಡ್ ಪೋರ್ನ್ ನ ರಾಣಿ"ಎಂದು ಕರೆಯಲಾಗುತ್ತದೆ.[೮][೮೨][೮೩] ಅನೇಕ ಟೀಕಾಕಾರರು ಲಾಸನ್ ಳ ಆಕರ್ಷಕತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ, ಅಲ್ಲದೇ ಒಮ್ಮೆ ಪ್ರಪಂಚದ ಅತ್ಯಂತ ಸುಂದರ ಮಹಿಳೆಯರಲ್ಲಿ ಆಕೆಯೂ ಒಬ್ಬಳು ಎಂದು ಅವರಿಂದ ಕರೆಯಲ್ಪಟ್ಟಿದ್ದಾಳೆ.[೧೨] ಆಕೆ "ಕಣ್ಮನ ಸೆಳೆಯುವಷ್ಟು ಸುಂದರವಾಗಿದ್ದಾಳೆ, ಪ್ರೀತಿತುಂಬಿದ, ಪ್ರಾಮಾಣಿಕ, ಇಷ್ಟವಾಗುವಂತಹ ಹಾಗು ಆಶ್ಚರ್ಯಕರವಾದಷ್ಟು ಸಹಜವಾಗಿದ್ದಾಳೆ",[೯] ಅಲ್ಲದೇ "ಚಿಕ್ಕ ಕಲೆಯೂ ಇಲ್ಲದ ಚರ್ಮವನ್ನು, ಸರಿಯಾದ ಬಿಳಿಯ ದಂತಪಂಕ್ತಿಗಳನ್ನು, ಆಹ್ಲಾದವನ್ನುಂಟು ಮಾಡುವ ದೇಹರಚನೆಯನ್ನು, ದಡೂತಿ ಎತ್ತರವನ್ನು ಹಾಗು, ಕಂದು ಬಣ್ಣದ ಕೂದಲನ್ನು ಹೊಂದಿದ್ದಾಳೆ" ಎಂದು ವರ್ಣಿಸಲಾಗಿದೆ .[೭೯] ಸಮೂಹ ಮಾಧ್ಯಮವು, ಲಾಸನ್ ಳ ಮಹಿಳಾ ಹಾಗು ಪುರುಷ ವೀಕ್ಷಕರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಕೂಡ ಗುರುತಿಸಿದೆ;[೩][೨೦][೮೪] ದಿ ಗಾರ್ಡಿಯನ್ ಎಂಬ ಪತ್ರಿಕೆ , "ಪುರುಷರು ಅವಳನ್ನು ಇಷ್ಟಪಡುತ್ತಾರೆ ಏಕೆಂದರೆ ಅವರು ಅವಳ ಜೊತೆಯಲ್ಲಿ ಇರಲು ಬಯಸುತ್ತಾರೆ. ಮಹಿಳೆಯರು ಆಕೆಯನ್ನು ಇಷ್ಟಪಡುತ್ತಾರೆ ಏಕೆಂದರೆ ಅವರು ಅವಳಂತಾಗಲು ಬಯಸುತ್ತಾರೆ" ಎಂದು ಬರೆಯಲಾಗಿದೆ.[೨] ಗ್ಯಾರಿ ರಾಡೆಸ್ ಎಂಬ ಷೆಫ್ (ಮುಖ್ಯ ಬಾಣಸಿಗ) ವೀಕ್ಷಕರು ಅವಳ ಅಡುಗೆಗಿಂತ ಹೆಚ್ಚು ಆಕೆಯ ನಗುವಿಗೆ ಪ್ರಾಮುಖ್ಯತೆ ಕೊಡುತ್ತಾರೆ ಎಂದು ಅವಳ ವಿರುದ್ಧವಾಗಿ ಹೇಳಿಕೆಯನ್ನು ನೀಡಿದ್ದಾನೆ.[೮೫] ಡೊಮೆಸ್ಟಿಕ್ ಗಾಡಿಸ್(ಅಡುಗೆಮನೆಯ ದೇವತೆ)ಎಂದು ಕರೆಸಿಕೊಂಡರೂ ಕೂಡ,[೮೬] ಈ ಬಿರುದನ್ನು ಪಡೆಯುವಷ್ಟು ಆಕೆ ದೊಡ್ಡವಳಲ್ಲವೆಂದು ಹೇಳಿಕೊಂಡಿದ್ದಾಳೆ.[೨೦][೨೨]

ಲಾಸನ್ ಪುಸ್ತಕಗಳಲ್ಲಿ ಹಾಗು ದೂರದರ್ಶನದ ಕಾರ್ಯಕ್ರಮಗಳಲ್ಲಿ ಎರಡರಲ್ಲಿಯೂ ಆಕೆಯ ಸ್ಪಷ್ಟ ಹಾಗು ಗುಣವಿಶೇಷಣಗಳಿಂದ ತುಂಬಿರುವ ಅಡುಗೆಯ ವರ್ಣನೆಗೆ ಹೆಸರುವಾಸಿಯಾಗಿದ್ದಾಳೆ.[೮೭]"ಆಕೆಯ ಅಡುಗೆಯ ವರ್ಣನೆ ವಿಶೇಷಣಗಳ ಗೋಜಲಾಗಿದೆ" ಎಂದು ಒಬ್ಬ ಟೀಕಾಕಾರ ಹೇಳಿದ್ದಾನೆ.[೨೯] ವಿವಿಧ ಅಡುಗೆಗಳ ವಿಧಾನ ಓದಲು ಸರಾಗವಾಗಿರುವಿಕೆಯ ಮೇಲೆ 2007ರಲ್ಲಿ ಮಾಡಲಾದ ಅಧ್ಯಯನದಲ್ಲಿ, ಅರಳು ಹುರಿದಂತೆ ಮಾತಾನಾಡವ ಹಾಗು ಅತ್ಯಲಂಕಾರಿಕ ರೀತಿಯಲ್ಲಿ ಪ್ರದರ್ಶಿಸುವ ಲಾಸನ್ ಳ ಅಡುಗೆ ವಿಧಾನಗಳು, ಕಡಿಮೆ ಸಾಮರ್ಥ್ಯದ ಓದುಗರಿಗೆ ಗೊಂದಲವನ್ನು ಉಂಟುಮಾಡುತ್ತವೆ ಎಂದು ನಿರ್ಣಯಿಸಲಾಯಿತು.[೮೮] ಆಕೆಯ ವೈಶಿಷ್ಟತೆಯ ಬಗ್ಗೆ ಹಾಗು ಉಚ್ಚರಣೆಯ ಶೈಲಿಯ ಬಗ್ಗೆ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಎಷ್ಟೊಂದು ವಿಮರ್ಶೆಗಳು ಬಂದಿವೆ, ಎಂಬುದರ ಬಗ್ಗೆ ಲಾಸನ್ ಆಶ್ಚರ್ಯಪಟ್ಟಿದ್ದಾಳೆ.[೬]

ಹಾಸ್ಯಗಾರರು ಹಾಗು ಟೀಕಾಕಾರರು ಲಾಸನ್ ಳ ನಿರೂಪಣಾ ಶೈಲಿಯನ್ನು ಆಡಿಕೊಂಡಿದ್ದಾರೆ, ವಿಶೇಷವಾಗಿ ದಿನವೂ ಪ್ರಸಾರವಾಗುತ್ತಿದ್ದ ಡೈಡ್ ರಿಂಗರ್ಸ್ ಎಂಬ BBC ಹಾಸ್ಯ ಸರಣಿಕಾರ್ಯಕ್ರಮದಲ್ಲಿ ಆಕೆಯ ನಿರೂಪಣ ಶೈಲಿಯನ್ನು ಟೀಕಿಸಿದ್ದಾರೆ. ಏಕೆಂದರೆ ವೀಕ್ಷಕರನ್ನು ಆಕೆಯ ಪಾಕಶಾಸ್ತ್ರದ ಕಾರ್ಯಕ್ರಮದಲ್ಲಿ ಹಿಡಿದಿಡಲು ಆಕೆ ಅವಳ ಆಕರ್ಷಕತೆಯನ್ನು ಹಾಗು ಮೋಹಕತೆಯನ್ನು ಎದ್ದು ಕಾಣುವಂತೆ ಪ್ರದರ್ಶಿಸಿದ್ದಾಳೆ ಎಂಬುದನ್ನು ಗ್ರಹಿಸಿ ಆಕೆಯನ್ನು ಟೀಕಿಸಲಾಗಿದೆ.[೮೯] BBC One ಚಾನೆಲ್ ನಲ್ಲಿ ಲಾಸನ್ ಳ ನಿರೂಪಣೆಯ ಶೈಲಿಯ ಬಗ್ಗೆ ರೊನ್ನಿ ಅಂಕೋನಳ ನೀಡಿದ್ದ ಅಭಿಪ್ರಾಯವನ್ನು ಮುಂದೆ ದಿ ಬಿಗ್ ಇಂಪ್ರೆಷನ್ ಎಂಬ ಶೀರ್ಷಿಕೆಯಡಿಯಲ್ಲಿ ಅಣಕಬರಹವನ್ನಾಗಿಸಲಾಯಿತು.[೨೨]

ವೈಯಕ್ತಿಕ ಜೀವನ[ಬದಲಾಯಿಸಿ]

ಲಾಸನ್ ಜಾನ್ ಡೈಮಂಡ್ ಎಂಬ ಪತ್ರಿಕೋದ್ಯಮಿಯನ್ನು 1986ರಲ್ಲಿ ಅವರಿಬ್ಬರು ದಿ ಸನ್ ಡೇ ಟೈಮ್ಸ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಬೇಟಿಯಾದಳು.[೯] ತರುವಾಯ 1992ರಲ್ಲಿ ವೆನ್ನಿಸ್ ನಲ್ಲಿ ಮದುವೆಯಾದರು.[೮] ಅಲ್ಲದೇ ಎರಡು ಮಕ್ಕಳನ್ನು ಪಡೆದರು. ಇಬ್ಬರು ಮಕ್ಕಳು ಲಂಡನ್ನಿನ ಹ್ಯಾಮರ್ ಸ್ಮಿಥ್ಎಂಬಲ್ಲಿ ಜನಿಸಿದರು: ಕೊಸಿಮ ಥಾಂಸಿನ( 1993ರ ಉತ್ತರಾರ್ಧದಲ್ಲಿ/1994ರ ಪೂರ್ವಾರ್ಧದಲ್ಲಿ ಹುಟ್ಟಿದನು) ಹಾಗು ಬ್ರುನೊ ಪೌಲ್ (1996 ರಲ್ಲಿ ಜನಿಸಿದನು).[೯೦] ಡೈಮಂಡ್, ತ್ರೋಟ್ ಕ್ಯಾನ್ಸರ್ ಗೆ ತುತ್ತಾಗಿದ್ದಾನೆಂದು 1997ರಲ್ಲಿ ತಿಳಿದುಬಂದಿತು. ಅವನ 47 ನೇ ವಯಸ್ಸಿನಲ್ಲಿ 2001ರ ಮಾರ್ಚ್ ತಿಂಗಳಿನಲ್ಲಿ ಸಾವನ್ನಪ್ಪಿದ.[೧೯] ಲಾಸನ್ ಗೆ ಅವನ ಕೊನೆಯ ಸಂದೇಶವೆಂದರೆ,"ನಾನು ನಿನ್ನ ಬಗ್ಗೆ ಹಾಗು ನಿನ್ನ ಸಾಧನೆಯ ಬಗ್ಗೆ ಹೆಮ್ಮೆಪಡುತ್ತೇನೆ. ನಾವು ಏನೆಂಬುದನ್ನು ನಾವು ಮಾಡಿ ತೋರಿಸಿದ್ದೇವೆ ಇದು ನಮ್ಮಿಬ್ಬರ ಸಾಧನೆಯಾಗಿದೆ."[೩] ನಿಗೆಲ್ಲ ಬೈಟ್ಸ್ ಚೀತ್ರಿಕರಣದ ಸಮಯದಲ್ಲಿ ಅವನು ಸಾವನ್ನಪ್ಪಿದ; "ಹದಿನೈದು ದಿನಗಳ ಕಾಲ ನಾನು ರಜೆ ತೆಗೆದುಕೊಂಡೆ. ಅವಳ ಹಾಗು ಅವನ ಸಂಬಂಧ ಒಡೆದು ಹೋಗಿದೆ ಎಂದು ಅವಳಿಗೆ ಅನ್ನಿಸಲಿಲ್ಲ," [೩] ಆದರೂ ಕೂಡ ಆಕೆ ತೀವ್ರ ಖಿನ್ನತೆಯನ್ನು ಅನುಭವಿಸಿದಳು[೨] ಎಂಬುದನ್ನು ಲಾಸನ್ ವಿವರಿಸಿದ್ದಾಳೆ. ಅವನ ಮರಣದ ನಂತರ, ಪತ್ರಿಕೆಗಳಿಂದ ತೆಗೆದ ಎಲ್ಲಾ ಲೇಖನಗಳನ್ನು ಲಾಸನ್ ಆಕೆಯ "ಮೊರ್ ಬಿಡೊಬಾಕ್ಸ್" ನಲ್ಲಿ(ಆಂತರ್ಯದ ಭಾವನೆಗಳ ಕಪಾಟಿನಲ್ಲಿ) ಇರಿಸಿದಳು.[೩]

ತರುವಾಯ ಸೆಪ್ಟೆಂಬರ್ 2003ರಲ್ಲಿ ಲಾಸನ್ ಕಲಾತ್ಮಕ ವಸ್ತುಗಳ ಸಂಗ್ರಹಕಾರ ಚಾರ್ಲ್ಸ್ ಸಾಟ್ಚಿಯನ್ನು ಮದುವೆಯಾದಳು.[೯೧] ಡೈಮಂಡ್ ಸತ್ತ ಒಂಭತ್ತು ತಿಂಗಳಿಗೆಲ್ಲಾ ಮದುವೆಯಾಗದೆ ಲಾಸನ್ ಚಾಲ್ಸ್ ನ ಜೊತೆಯಲ್ಲಿ ಇರಲು ತೊಡಗಿದ್ದನ್ನು ಆಕ್ಷೇಪಿಸಲಾಯಿತು.[೮] ಡೈಮಂಡ್ ನ ಸಾವಿನ ಮೊದಲೇ ಸಾಟ್ಚಿಯೊಡನೆ ಆಕೆಗೆ ಸಂಬಂಧವಿತ್ತು ಎಂಬುದನ್ನು ತಿಳಿಸಿದಾಗ ಲಾಸನ್ ತೀವ್ರ ಟೀಕೆಗೆ ಗುರಿಯಾದಳು.[೯೨] ಪ್ರಸ್ತುತದಲ್ಲಿ ಲಂಡನ್ ನ ಹೊರಗಿರುವ ಬೆಲ್ ಗ್ರೇವಿಯ ಜಿಲ್ಲೆಯಲ್ಲಿರುವ ಈಟನ್ ಸ್ಕ್ವೇರ್ ನಲ್ಲಿ £7 ಮಿಲಿಯನ್ ಮೌಲ್ಯದ ಮನೆಯಲ್ಲಿ ಅವರು ವಾಸವಾಗಿದ್ದಾರೆ.[೪೨] 2007ರಲ್ಲಿ ಸಾಟ್ಚಿ £100 ಮಿಲಿಯನ್ ಹೊಂದಿದ್ದರೆ ,[೯೩] ಲಾಸನ್ £15 ಮಿಲಿಯನ್ ಹೊಂದಿದ್ದಳು,ಇದರಲ್ಲಿ £8 ಮಿಲಿಯನ್ ಪುಸ್ತಕದ ಮಾರಾಟದಲ್ಲಿ ಗಳಿಸಿದ್ದಾಗಿದೆ.[೫೪] ಲಾಸನ್,ಆಕೆಯ ಎರಡು ಮಕ್ಕಳು ಅವುಗಳ ತಂದೆಯಿಂದ ಯಾವುದೇ ಆಸ್ತಿಯನ್ನು ಪಡೆದಿಲ್ಲ ಎಂದು ಹೇಳಿದ ಹೇಳಿಕೆಯು ಎಲ್ಲಾ ಸಮೂಹ ಮಾಧ್ಯಮಗಳಲ್ಲೂ ಹರಡಿತು.[೯೩] ಆಕೆ ತನ್ನ ವೈಯಕ್ತಿಕ ವೆಬ್ ಸೈಟ್ ನಲ್ಲಿ ಈ ಹೇಳಿಕೆಯಲ್ಲಿರುವ ಆಲೋಚನೆಗಳನ್ನು ನಿರಾಕರಿಸಿದ್ದಾಳೆ, "ನನ್ನ ಮಕ್ಕಳನ್ನು ಹೊಟ್ಟೆಗಿಲ್ಲದೆ ಉಪವಾಸದಿಂದ ಬಳಲಲು ಅಥವಾ ಏನು ಗತಿಯಿಲ್ಲದಂತೆ ಬಿಟ್ಟುಬಿಡುವ ಉದ್ದೇಶ ನನಗಿಲ್ಲ— ನಿಜವಾಗಿ ಹೇಳಬೇಕೆಂದರೆ ಇದು,ಹಣದ ಬೆಲೆಯನ್ನು ತಿಳಿದುಕೊಳ್ಳಲು ನೀವು ಕೆಲಸಮಾಡಬೇಕು ಎಂಬ ನನ್ನ ನಂಬಿಕೆಯ ಬಗ್ಗೆ ನಾನು ನೀಡಿದ ಹೇಳಿಕೆಯ ಮೇಲೆ ಕಟ್ಟಲಾಗಿರುವ ಕಥೆಯಾಗಿದೆ".[೯೪]

ಪ್ರಸಿದ್ಧ ಪಾಕಶಾಸ್ತ್ರತಜ್ಞೆಯಾದರೂ ಲಾಸನ್ ಒಂದು ಕುಕಿ ಸಂದರ್ಶನದಲ್ಲಿ , ಆಕೆ "ಸನ್ಯಾಸಿಯಂತಹ" ಜೀವನವನ್ನು ನಡೆಸುತ್ತಿದ್ದಾಳೆಂದು ಹೇಳಿಕೊಂಡಳು. ಈ ಹೇಳಿಕೆ ಟ್ಯಾಬ್ಲಾಯ್ಡ್ ಪತ್ರಿಕೆಯ ಆಹಾರವಾಯಿತು . ಶಾಲಾದಿನಗಳ ಸಂದರ್ಭದಲ್ಲಿ, ಆಕೆಯ ಮಕ್ಕಳನ್ನು ಶಾಲೆಗೆ ಬಿಟ್ಟುಬಂದು ಅವರು ಮನೆಗೆ ಹಿಂದಿರುಗುವವರೆಗೂ ಪುಸ್ತಕಗಳ ಹಾಗು ಪಾಕಶಾಸ್ತ್ರದ ಅಂಕಣಗಳ ಮೇಲೆ ಕೆಲಸಮಾಡುತ್ತಿದ್ದಳು. ವರ್ಷದ 10ನೇ ವಾರದಲ್ಲಿ ಸಮಯವನ್ನು ಚಿತ್ರೀಕರಣದಲ್ಲಿ ಕಳೆಯುತ್ತಿದ್ದಳು,ಇದರಿಂದ ಸಮಯದ ಅಭಾವವಾದರೂ ಆಕೆ ಬೇಗ ತಯಾರಿಸಬಹುದಾದ ಅಡುಗೆಗಳನ್ನು ಮಾಡುತ್ತಿರಲಿಲ್ಲ: "KFCಯಲ್ಲಿ ಎಷ್ಟು ರುಚಿಕರವಾಗಿರುತ್ತದೆ ಎಂಬುದು ನಿನಗೆ ಗೊತ್ತಿಲ್ಲವೆಂದು ನನ್ನ ಮಗ ಇತ್ತೀಚಿಗಷ್ಟೇ ಹೇಳಿದ. ಅದಕ್ಕೆ ನಾನು 'ನೀನು ಹೇಳಿದ್ದು ಸರಿ, ಆದರೆ ನಾನು ನಿನಗೆ ಅದನ್ನು ಕೊಡುವುದಿಲ್ಲ' ಎಂದು ಹೇಳಿದೆ."[೯೫][೯೫]

ಲಾಸನ್ ಳ ತಂದೆತಾಯಿಗಳಿಬ್ಬರು ಯಹೂದೀಗಳಾದರು, ಯಹೂದಿಧರ್ಮ ಆಕೆಯ ಜೀವನದಲ್ಲಿ ಧಾರ್ಮಿಕವಾಗಿ ಯಾವುದೇ ಪ್ರಮುಖ ಪಾತ್ರವನ್ನು ವಹಿಸಿಲ್ಲ, ಆದರೆ ಆಕೆ ಸ್ವಲ್ಪ "ಯಹೂದಿಗಳ ನಡವಳಿಕೆಯನ್ನು" ಅಳವಡಿಸಿಕೊಂಡಿದ್ದಾಳೆಂದು ಭಾವಿಸುತ್ತಾಳೆ.[೨] ಆಕೆ ಯಾವುದೇ ಧರ್ಮವಿಲ್ಲದೇ ಬೆಳೆದಳಲ್ಲದೇ, ತನ್ನನ್ನು ತಾನು ನಾಸ್ತಿಕಳೆನ್ನುತ್ತಾಳೆ.[೮][೯೬] ಅವಳ ಒಂದು ವೃತ್ತಪತ್ರಿಕೆಯ ಲೇಖನದಲ್ಲಿ ಲೈಂಗಿಕತೆಯ ಬಗ್ಗೆ ಬಿಚ್ಚುಮನಸ್ಸಿನ ಮನೋವೃತ್ತಿಯನ್ನು ತೋರಿಸಿದ್ದಾಳೆ ("ಬಹುಪಾಲು [ಮಹಿಳೆಯರು] ಜನರಲ್ಲಿ ಸಾಮಾನ್ಯವಾಗಿ ತಮ್ಮ ಪತಿಯಂದರು ಇತರ ಮಹಿಳೆಯರೊಡನೆ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಕಲ್ಪನೆ ಇರುತ್ತದೆ").[೯೭] ಆಕೆ ಯಾವಾಗಲೂ ಫುಟ್ ಬಾಲ್ ಪಂದ್ಯವನ್ನು ವೀಕ್ಷಿಸುತ್ತಾಳೆ. ಅಲ್ಲದೇ ಚೆಲ್ಸಿವೆಬ್ ಸೈಟ್ ನ ಬೆಂಬಲಿಗಳಾಗಿದ್ದಾಳೆ.[೯೮]

ಲಾಸನ್ ಬ್ರೆಸ್ಟ್ ಕ್ಯಾನ್ಸರ್ ನಿಂದ ನರಳುತ್ತಿರುವ ಯುವತಿಯರಿಗೆ ಸಹಾಯಮಾಡವ ಲ್ಯಾವೆಂಡರ್ ಟ್ರಸ್ಟ್ ನ ಬೆಂಬಲಿಗಳಾಗಿದ್ದಾಳೆ. ಆಕೆ ಕೆಲವು ಲ್ಯಾವೆಂಡರ್ ಕಪ್ ಕೇಕ್ ಗಳನ್ನು ಹರಾಜಿನಲ್ಲಿ ನಡೆಯುತ್ತಿದ್ದ ದುಡ್ಡೆತ್ತುವ ಸಂದರ್ಭಕ್ಕಾಗಿ ಮಾಡಿದ್ದಳು, ಆ ಕೇಕ್ ಗಳನ್ನು ನಿರ್ದಿಷ್ಟ ಮೊತ್ತದ ಹಣಕ್ಕಾಗಿ ಮಾರಾಟಮಾಡಲಾಯಿತು. ಈ ರೀತಿಯಲ್ಲಿ ಆಕೆ ಮೊಟ್ಟ ಮೊದಲನೆಯ ಬಾರಿಗೆ 2002ರಲ್ಲಿ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದಳು. ಬಳಿಕ ಅವಳ ಪುಸ್ತಕವಾದ, ಫರೆವರ್ ಸಮ್ಮರ್ ವಿತ್ ನಿಗೆಲ್ಲ ದಲ್ಲಿ ಆ ಕೇಕ್ ನ ತಯಾರಿಸುವ ವಿಧಾನ ಬರೆದಿದ್ದಾಳೆ.[೯೯]

2001ರಲ್ಲಿ ಲಾಸನ್ ಎಲಿಜಬೆತ್ ರಾಣಿ II ಹೊರಡಿಸಿದಂತಹ OBEಯನ್ನು ತಿರಸ್ಕರಿಸಿದಳು ಎಂಬ ವಿಷಯ 2003ರಲ್ಲಿ ವೈಟ್ ಹಾಲ್ ನ ಕಾಗದ ಪತ್ರಗಳು ಬಯಲಾಗುವ ಮೂಲಕ ಬಹಿರಂಗವಾಯಿತು.[೧೦೦] ಲೈಫ್ ಪಿಯರ್(ಜೀವವಾಧಿ ಸಮಾನಸ್ಕಂದ),ನ ಮಗಳೆಂದು ನಿಗೆಲ್ಲಗೆ ಗೌರವ ಬಿರುದಾ ದ "ದಿ ಆನರಬಲ್" ಬಿರುದನ್ನು ನೀಡಲಾಯಿತು. ದಿ ಹಾನ್.ಈಗ ನಿಗೆಲ್ಲ ಲಾಸನ್ ಎಂದು ಕರೆಯಲ್ಪಟ್ಟಿದೆ. ಅದೇನೇ ಇದ್ದರೂ ಆಕೆ ಈ ಗೌರವ ಬಿರುದನ್ನು ಬಳಸುವುದಿಲ್ಲ.

ತುಪ್ಪಳದ ಉಡುಪನ್ನು ಧರಿಸಲು ಪ್ರೋತ್ಸಾಹಿಸುವ ಮೂಲಕ ಲಾಸನ್ ಡಿಸೆಂಬರ್ 2008 ರಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದಳು. ಅಲ್ಲದೇ ಇದನ್ನು ಅನೇಕ ಪತ್ರಿಕೆಗಳಲ್ಲಿ ಬರೆಯಲಾಯಿತು. ಲಾಸನ್ ಳಿಗೆ ಕರಡಿಯನ್ನು ಸಾಯಿಸಿ ಅದರ ತುಪ್ಪಳದಲ್ಲಿ ಮಾಡಿದ ಉಡುಪನ್ನು ಧರಿಸುವುದೂ ಕೂಡ ಇಷ್ಟವೆಂದು ತಿಳಿಸಿದ್ದಾಳೆ.[೧೦೧][೧೦೨] ನಿಗೆಲ್ಲ ಆಕೆಯ ಕೂದಲನ್ನು ವಾರದಲ್ಲಿ ಕೇವಲ ಒಂದು ಬಾರಿ ತೊಳೆಯುತ್ತಾಳೆಂದು, ಅವಳ ಕೇಶರಾಶಿಯ ಬಗ್ಗೆ ಹೆಚ್ಚು ಗಮನವಹಿಸಬೇಕಿಲ್ಲವೆಂಬುದನ್ನು 2009 ರಲ್ಲಿ ಬಹಿರಂಗಪಡಿಸಿದಳು.

"ದಿ ಸೂಪರ್ ಷೆಫ್ ಬ್ಯಾಟಲ್" ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಸಲಾದ ಐರನ್ ಷೆಫ್ ಅಮೇರಿಕ ವೆಂಬ ವಿಶೇಷವಾದ ಸ್ಪರ್ಧೆಯಲ್ಲಿ ಇದ್ದ ಮೂರುಜನ ತೀರ್ಪುಗಾರರಲ್ಲಿ ಲಾಸನ್ ಳೂ ಒಬ್ಬಳಾಗಿದ್ದಳು. ಈ ಸ್ಪರ್ಧೆಯಲ್ಲಿ ಸೂಪರ್ ಷೆಫ್ ಎಮ್ ರಿಲ್ ಲಾಗಸ್ಸೆ ಹಾಗು ಐರನ್ ಷೆಫ್ ಮರಿಯೋ ಬಟಲಿಯ ವಿರುದ್ದ ವೈಟ್ ಹೌಸ್ ಕಾರ್ಯನಿರ್ವಾಹಕ ಷೆಫ್ ಆದಂತಹ ಕ್ರಿಸ್ಟೆಟ ಕಮರ್ ಫೊರ್ಡ್ ಹಾಗು ಐರನ್ ಷೆಫ್ ಬಾಬಿ ಫ್ಲೆ ಪ್ರತಿಸ್ಪರ್ಧಿಸಿದ್ದರು. ಇದು 2010 ಜನವರಿ 3 ರಂದು ಪ್ರಸಾರವಾಯಿತು.

ದೂರದರ್ಶನದ ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಕಾರ್ಯಕ್ರಮ ಸಂಚಿಕೆಗಳು ಅವಧಿ
2000 ನಿಗೆಲ್ಲ ಬೈಟ್ಸ್ 5 ಎಪಿಸೋಡ್, ಸರಣಿ 1 30 ನಿಮಿಷಗಳು
2001 ನಿಗೆಲ್ಲ ಬೈಟ್ಸ್ 10 ಎಪಿಸೋಡ್, ಸರಣಿಗಳು 2 30 ನಿಮಿಷಗಳು
2001 ನಿಗೆಲ್ಲ ಬೈಟ್ಸ್ ಕ್ರಿಸ್ ಮಸ್ ವಿಶೇಷ 1 ಪ್ರಸಂಗ 60 ನಿಮಿಷಗಳು
2002 ಫರೆವರ್ ಸಮ್ಮರ್ 6 ಸಂಚಿಕೆಗಳು 30 ನಿಮಿಷಗಳು
2005 ನಿಗೆಲ್ಲ 6 ಸಂಚಿಕೆಗಳು 60 ನಿಮಿಷಗಳು
2006 ನಿಗೆಲ್ಲ ಫೀಸ್ಟ್ಸ್ (ಭೋಜನಕೂಟ) 6 ಸಂಚಿಕೆಗಳು 30 ನಿಮಿಷಗಳು
2006 ನಿಗೆಲ್ಲಾಳ ಕ್ರಿಸ್ ಮಸ್ ಕಿಚನ್ 3 ಎಪಿಸೋಡ್, ಸರಣಿಗಳು 1 30 ನಿಮಿಷಗಳು
2007 ನಿಗೆಲ್ಲ ಎಕ್ಸ್ ಪ್ರೆಸ್ 6 ಸಂಚಿಕೆಗಳು 30 ನಿಮಿಷಗಳು
2008 ನಿಗೆಲ್ಲಾಳ ಕ್ರಿಸ್ ಮಸ್ ಕಿಚನ್(ಅಡುಗೆಮನೆ) 3 ಎಪಿಸೋಡ್, ಸರಣಿಗಳು 2 30 ನಿಮಿಷಗಳು
2009 ಟಾಪ್ ಷೆಫ್ (ಸೀಸನ್ 6) 1 ಪ್ರಸಂಗ 42 ನಿಮಿಷಗಳು
2010 ಐರನ್ ಷೆಫ್ ಅಮೇರಿಕ: ಸೂಪರ್ ಷೆಫ್ ಬ್ಯಾಟಲ್ 1 ಪ್ರಸಂಗ 120 ನಿಮಿಷಗಳು
2010 ನಿಗೆಲ್ಲಾಳ ಕಿಚನ್(ಅಡುಗೆಮನೆ) 6 ಸಂಚಿಕೆಗಳು 30 ನಿಮಿಷಗಳು

ಪ್ರಶಸ್ತಿಗಳು[ಬದಲಾಯಿಸಿ]

 • 2000: ಬ್ರಿಟಿಷ್ ಬುಕ್ ಪ್ರಶಸ್ತಿ — ಹೌ ಟ್ ಬಿ ಅ ಡೊಮೆಸ್ಟಿಕ್ ಗಾಡಿಸ್ ಗೆ ವರ್ಷದ ಲೇಖಕ ಪ್ರಶಸ್ತಿ
 • 2001: WH ಸ್ಮಿತ್ ಬುಕ್ ಪ್ರಶಸ್ತಿ — ಹೌ ಟು ಬಿ ಅ ಡೊಮೆಸ್ಟಿಕ್ ಗಾಡಿಸ್ ವರ್ಷದ ಕೀವನ ವಿಧಾನದ ಪುಸ್ತಕಕ್ಕೆ ನಾಮ ನಿರ್ದೇಶನಗೊಂಡಿತು.
 • 2001: ಗಿಲ್ಡ್ ಆಫ್ ಫುಡ್ ರೈಟರ್ಸ್ (ಪಾಕಶಾಸ್ತ್ರದ ಬರಹಗಾರರ ಸಂಘ) — ನಿಗೆಲ್ಲ ಬೈಟ್ಸ್ ದೂರದರ್ಶನದ ವರ್ಷದ ಕಾರ್ಯಕ್ರಮ
 • 2001: ವಲ್ಡ್ ಫುಡ್ ಮೀಡಿಯ ಪ್ರಶಸ್ತಿ — ನಿಗೆಲ್ಲ ಬೈಟ್ಸ್ ಗೆ ಗೋಲ್ಡ್ ಲೇಡಲ್ ದೂರದರ್ಶನದಲ್ಲಿ ಪ್ರಸಾರವಾದ ಅತ್ಯತ್ತಮ ಪಾಕಶಾಸ್ತ್ರದ ಕಾರ್ಯಕ್ರಮ
 • 2002: WH ಸ್ಮಿತ್ ಬುಕ್ ಪ್ರಶಸ್ತಿಗಳು — ನಿಗೆಲ್ಲ ಬೈಟ್ಸ್ ಗೆ ವರ್ಷದ ಜೀವನ ವಿಧಾನ ಪುಸ್ತಕ
 • 2007: ವಲ್ಡ್ ಫುಡ್ ಮೀಡಿಯ ಪ್ರಶಸ್ತಿ — ನಿಗೆಲ್ಲಾಳ ಕ್ರಿಸ್ ಮಸ್ ಕಿಚನ್ ಗೆ ಗೋಲ್ಡ್ ಲೇಡಲ್ ದೂರದರ್ಶನದ ಅತ್ಯುತ್ತಮ ಆಹಾರ ಹಾಗು/ಅಥವಾ ಪಾನೀಯದ ಕಾರ್ಯಕ್ರಮ

ಗ್ರಂಥಸೂಚಿ[ಬದಲಾಯಿಸಿ]

 • ಹೌ ಟು ಈಟ್: ಪ್ಲೆಷರ್ ಅಂಡ್ ಪ್ರಿನ್ಸಿಪಲ್ಸ್ ಆಫ್ ಗುಡ್ ಫುಡ್ , ಚಾಟೊ ಅಂಡ್ ವಿಂಡಸ್, ಜಾನ್ ವಿಲ್ಲೇ & ಸನ್ಸ್, (ISBN 0-471-25750-8, 1998)
 • ಹೌ ಟು ಬಿ ಅ ಡೊಮೆಸ್ಟಿಕ್ ಗಾಡಿಸ್: ಬೇಕೆಂಗ್ ಅಂಡ್ ದಿ ಆರ್ಟ್ ಆಫ್ ಕಂಫರ್ಟ್ ಕುಕಿಂಗ್ , ಚಾಟೊ ಅಂಡ್ ವಿಂಡಸ್, (ISBN 0-7011-6888-9, 2000)
 • ನಿಗೆಲ್ಲ ಬೈಟ್ಸ್ , ಚಾಟೊ ಅಂಡ್ ವಿಂಡಸ್, (ISBN 0-7011-7287-8, 2001)
 • ಫರೆವರ್ ಸಮ್ಮರ್ ವಿತ್ ನಿಗೆಲ್ಲ , ಚಾಟೊ ಅಂಡ್ ವಿಂಡಸ್, (ISBN 0-7011-7381-5, 2002)
 • ಫೀಸ್ಟ್: ಫುಡ್ ಟು ಸೆಲಬ್ರೇಟ್ ಲೈಫ್ , ಚಾಟೊ ಅಂಡ್ ವಿಂಡಸ್, (ISBN 0-7011-7521-4, 2004) ಅಥವಾ ಹೈಪರಿಯಾನ್ (ISBN 1-4013-0136-3, 2004)
 • ನಿಗೆಲ್ಲ ಲಾಸನ್, ಅ ಬಯೋಗ್ರಫಿ , ಗಿಲ್ಲಿ ಸ್ಮಿತ್ (ISBN 1-56980-299-8, 2006)
 • ನಿಗೆಲ್ಲ ಎಕ್ಸ್ ಪ್ರೆಸ್ ,ಚಾಟೊ ಅಂಡ್ ವಿಂಡಸ್, (ISBN 0-7011-8184-2, 2007)
 • ನಿಗೆಲ್ಲ ಕ್ರಿಸ್ ಮಸ್ , ಚಾಟೊ ಅಂಡ್ ವಿಂಡಸ್ (ISBN 0-7011-8322-5, 2008)
 • ಕಿಚನ್(ಅಡುಗೆಮನೆ): ರೆಸಿಪಿ ಫ್ರಮ್ ದಿ ಹಾರ್ಟ್ ಆಫ್ ದಿ ಹೋಮ್ , ಚಾಟೊ ಅಂಡ್ ವಿಂಡಸ್ (ISBN 0-7011-8460-4, 2010)

ಉಲ್ಲೇಖಗಳು[ಬದಲಾಯಿಸಿ]

 1. Pesce, Nicole Lyn. Celebrity milestones this week Archived 2011-01-03 ವೇಬ್ಯಾಕ್ ಮೆಷಿನ್ ನಲ್ಲಿ.. Daily News, 5 January 2008. Retrieved on 25 July 2008.
 2. ೨.೦ ೨.೧ ೨.೨ ೨.೩ ೨.೪ ೨.೫ ಹ್ಯಾಟನ್ ಸ್ಟೋನ್, ಸ್ಯಾಮ್. ರಿಯಾಲಿಟಿ ಬೈಟ್ಸ್. ದಿ ಗಾರ್ಡಿಯನ್ , 2002 ಸೆಪ್ಟೆಂಬರ್ 2. 2008 ಫೆಬ್ರುವರಿ 12 ರಲ್ಲಿ ಪುನಃ ಸಂಪಾದಿಸಲಾಯಿತು.
 3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ ಫ್ರ್ಯಾಂಡಲೆ, ನಿಗೆಲ್. ಅ ವುಮನ್ ಆಫ್ ಎಕ್ಸ್ ಟ್ರೀಮ್ಸ್[ಶಾಶ್ವತವಾಗಿ ಮಡಿದ ಕೊಂಡಿ]. ದಿ ಡೇಲಿ ಟೆಲಿಗ್ರಾಫ್ , 2001. 2007 ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 4. ನಿಗೆಲ್ಲ ಲಾಸನ್: ಅ ಸ್ವೀಟ್ ಅಂಡ್ ಸೌಅರ್ ಲೈಫ್ BBC ನ್ಯೂಸ್ ಶುಕ್ರವಾರ, 2001 ರ ಮೇ 18 , 16:05 GMT 17:05 UK
 5. ೫.೦ ೫.೧ ಪೀಟರ್ ಸನ್, ತೇನ್. ಚೂವಿಂಗ್ ದಿ ಫ್ಯಾಟ್ ವಿತ್ ನಿಗೆಲ್ಲ ಲಾಸನ್. businessweek.com, 2002 ರ ಅಕ್ಟೋಬರ್ 19. 2007 ರ ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 6. ೬.೦ ೬.೧ ೬.೨ ೬.೩ ೬.೪ ೬.೫ ಬ್ಲಿಮ್ಸ್, ಅಲೆಕ್ಸ್. ಸೇ ವಾಟ್ ಯು ಲೈಕ್ ಅಬೌಟ್ ನಿಗೆಲ್ಲ ಲಾಸನ್ Archived 2005-03-07 ವೇಬ್ಯಾಕ್ ಮೆಷಿನ್ ನಲ್ಲಿ.. Q , 2001. nigella.com ನಿಂದ 2007 ರ ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 7. ೭.೦ ೭.೧ ೭.೨ ೭.೩ ೭.೪ ೭.೫ ೭.೬ ಒಬ್ರಿಯನ್, ಕ್ಯಾಥರಿನ್. ಅ ಮಾಡೆಸ್ಟ್ ಗಾಡಿಸ್. ದಿ ಟೈಮ್ಸ್ , 2000 ದ ಅಕ್ಟೋಬರ್ 13. 2008 ಜುಲೈ16 ರಂದು ಪುನಃ ಸಂಪಾದಿಸಲಾಗಿದೆ.
 8. ೮.೦ ೮.೧ ೮.೨ ೮.೩ ೮.೪ ೮.೫ ೮.೬ ಸ್ಯಾಂಡ್ಸ್, ಸಾರಾಹ. ಐ ಡೋಂಟ್ ವಾಂಟ್ ಟು ಬಿ ಸಮ್ ಕಿಚನ್ ಬ್ಲೊ-ಅಪ್ ಸೆಕ್ಸ್ ಡಾಲ್. ಡೇಲಿ ಮೇಲ್ ,2006 ರ ಡಿಸೆಂಬರ್ 1. 2008 ರ ಫೆಬ್ರವರಿ 22 ರಂದು ಪುನಃ ಸಂಪಾದಿಸಲಾಯಿತು.
 9. ೯.೦ ೯.೧ ೯.೨ ೯.೩ ೯.೪ ೯.೫ ೯.೬ ಜಾನ್ಸ್, ಕ್ರಿಸ್. ನಿಗೆಲ್ಲ ಲಾಸನ್: ಅ ಸ್ವೀಟ್ ಅಂಡ್ ಸೌಅರ್ ಲೈಫ್. BBC ನ್ಯೂಸ್ ಆನ್ ಲೈನ್ , 2001 ರ ಮೇ 18. 2007 ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 10. ೧೦.೦ ೧೦.೧ ೧೦.೨ ೧೦.೩ ವಾಟ್ಸ್ ಸಾಸ್ ಫಾರ್ ದಿ ಗೂಸ್ ಈಸ್ ಸಾಸ್ ಫಾರ್ ಅ ಟೇಸ್ಟಿ ಎಂಪೈರ್. ದಿ ಟೈಮ್ಸ್ ,2006 ರ ಡಿಸೆಂಬರ್ 24. 2008 ರ ಜುಲೈ 19 ರಂದು ಪುನಃ ಸಂಪಾದಿಸಲಾಯಿತು.
 11. ಯು ಆಸ್ಕ್ ದಿ ಕ್ವೆಸ್ಚನ್ Archived 2008-12-22 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಇಂಡಿಪೆಂಡೆಂಟ್ , 2002 ರ ಸೆಪ್ಟೆಂಬರ್ 12. 2008 ರ ಜುಲೈ 16 ರಂದು ಪುನಃ ಸಂಪಾದಿಸಲಾಯಿತು.
 12. ೧೨.೦ ೧೨.೧ ೧೨.೨ ೧೨.೩ ೧೨.೪ ೧೨.೫ ೧೨.೬ ಲೇನ್, ಹ್ಯಾರಿಟ್. ಎನ್ ಏಂಜಲ್ ಅಟ್ ಅವರ್ ಟೇಬಲ್. ದಿ ಗಾರ್ಡಿಯನ್ , 2000 ದ ಡಿಸೆಂಬರ್ 17. 2007 ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 13. ಟರ್ನರ್, ಜ್ಯಾನಿಸ್. ದಿ ಎನ್ ಫ್ಯಾಕ್ಟರ್. ದಿ ಟೈಮ್ಸ್ , 2007 ರ ಸೆಪ್ಟೆಂಬರ್ 1. 2007ರ ಅಕ್ಟೋಬರ್ 1ರಂದು ಪುನಃ ಸಂಪಾದಿಸಲಾಯಿತು.
 14. ರಿಚ್, ಕ್ರೀಮಿ ಅಂಡ್ ಚಾಕ್ ಲೆಟಿ[ಶಾಶ್ವತವಾಗಿ ಮಡಿದ ಕೊಂಡಿ]. ದಿ ಡೇಲಿ ಟೆಲಿಗ್ರಾಫ್ ,2005 ರ ಸೆಪ್ಟೆಂಬರ್ 25 . 2008 ರ ಫೆಬ್ರುವರಿ 1 ರಂದು ಪುನರ್ ಸಂಪಾದಿಸಲಾಯಿತು.
 15. ಪ್ರೊಫೈಲ್: ಫಿಯಾನೊ ಶಾಕೆಲ್ಟನ್. ದಿ ಟೈಮ್ಸ್ , 2008 ಮಾರ್ಚ್ 23. 2008 ರ ಜುಲೈ 22 ರಂದು ಪುನಃ ಸಂಪಾದಿಸಲಾಯಿತು.
 16. ೧೬.೦ ೧೬.೧ ೧೬.೨ ನಿಗೆಲ್ಲ ಲಾಸನ್. BBC ಹು ಡು ಯು ಥಿಂಕ್ ಯು ಆರ್? , 2006 ರ ಸೆಪ್ಟೆಂಬರ್ 26 . 2008ರ ಅಕ್ಟೋಬರ್ 15ರಂದು ಪುನಃ ಸಂಪಾದಿಸಲಾಯಿತು.
 17. ೧೭.೦ ೧೭.೧ ೧೭.೨ ೧೭.೩ ವಿಲಿಯಮಸ್, ಅಂಡ್ರೀವ್. 60 ಸೆಕೆಂಡ್ಸ್: ನಿಗೆಲ್ಲ ಲಾಸನ್ Archived 2013-01-14 at Archive.is. ಮೆಟ್ರೊ , 2006 ಡಿಸೆಂಬರ್ 5. 2007 ಸೆಪ್ಟೆಂಬರ್ 30 ರಂದು ಪುನಃ ಸಂಪಾದಿಸಲಾಯಿತು.
 18. ಆರಿಜಿನ್ ಆಫ್ ದಿ ಕಂಪೆನಿ. J. ಲೋಅನ್ಸ್ ಅಂಡ್ Co. . 2008ರ ಅಕ್ಟೋಬರ್ 5 ರಂದು ಪುನಃ ಸಂಪಾದಿಸಲಾಯಿತು.
 19. ೧೯.೦ ೧೯.೧ ೧೯.೨ ೧೯.೩ ೧೯.೪ ೧೯.೫ ೧೯.೬ ೧೯.೭ ಹರ್ಚ್ ಬರ್ಗ್, ಲಿನ್. ಹಾಟ್ ಡಿಷ್. ದಿ ನ್ಯೂ Yಅಥವಾk ಟೈಮ್ಸ್ ,2001 ರ ನವೆಂಬರ್ 18 2007 ರ ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 20. ೨೦.೦ ೨೦.೧ ೨೦.೨ ವಾರೇನ್, ಜೇನ್. ಎನ್ವಿ, ಲಸ್ಟ್ ಅಂಡ್ ಗ್ಲಟನಿ - ದಿ ಫರ್ಫಿಕ್ಟ್ ರೆಸಿಪಿ. ಡೇಲಿ ಎಕ್ಸ್ ಪ್ರೆಸ್ , 2007 ಸೆಪ್ಟೆಂಬರ್ 20 2007ರ ಅಕ್ಟೋಬರ್ 3ರಂದು ಪುನಃ ಸಂಪಾದಿಸಲಾಯಿತು.
 21. ಕೇಬಲ್,ಸಿಮನ್. ಐ ವೋಂಟ್ ಬಿ ಲಿವಿಂಗ್ ಮೈ ಚಿಲ್ಡ್ರನ್ ಅ ಪೆನ್ನಿ, ಸೇಸ್ ನಿಗೆಲ್ಲ ಲಾಸನ್. ಡೇಲಿ ಮೇಲ್ ,2008 ರ ಜನವರಿ 29. 2008 ರ ಜುಲೈ 18 ಪುನಃ ಸಂಪಾದಿಸಲಾಗಿದೆ.
 22. ೨೨.೦ ೨೨.೧ ೨೨.೨ ೨೨.೩ ೨೨.೪ ಎಲ್ಲಿಸ್, ಜೇಮ್ಸ್. ನಿಗೆಲ್ಲ ಲಾಸನ್ Archived 2009-11-10 ವೇಬ್ಯಾಕ್ ಮೆಷಿನ್ ನಲ್ಲಿ.. ಮೆಟ್ರೊ , 2002 ರ ಸೆಪ್ಟೆಂಬರ್ 4. 2007 ರ ಅಕ್ಟೋಬರ್ 3 ರಂದು ಪುನಃ ಸಂಪಾದಿಸಲಾಯಿತು.
 23. ೨೩.೦ ೨೩.೧ ಬಿರ್ನೆ, ಸಿಯಾರ್ ಅಂಡ್ ಮೋರಿಸ್, ಸೂಪಿ. ಇನ್ ಸೈಡ್ ಸ್ಟೋರಿ :ಸೆಲಬ್ರಿಟಿ ಷೆಫ್ಸ್ Archived 2008-12-20 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಇಂಡಿಪೆಂಡೆಂಟ್ , 2005 ಜುಲೈ 4. 2008 ಜನವರಿ 31 ರಂದು ಪುನಃ ಸಂಪಾದಿಸಲಾಯಿತು.
 24. ನಿಗೆಲ್ಲ ಲಾಸನ್ ಬಯೋಗ್ರಫಿ Archived 2008-02-03 ವೇಬ್ಯಾಕ್ ಮೆಷಿನ್ ನಲ್ಲಿ.. ಫುಡ್ ನೆಟ್ ವರ್ಕ್. 2008 ರ ಜನವರಿ 31ರಂದು ಪುನಃ ಸಂಪಾದಿಸಲಾಯಿತು.
 25. ೨೫.೦ ೨೫.೧ ೨೫.೨ ಡಾಲ್ಸ್, ಜೋ. ಇಂಗ್ಲೆಂಡ್ 'ಸ್ ಗರ್ಲ್, ಗೌರ್ಮೆಟ್ , 2001. 2008 ಜನವರಿ 31 ರಂದು ಪುನಃ ಸಂಪಾದಿಸಲಾಯಿತು.
 26. ಹೌ ಟು ಈಟ್: ಪ್ಲೆಷರ್ ಅಂಡ್ ಪ್ರಿನ್ಸಿಪಲ್ಸ್ ಆಫ್ ಗುಡ್ ಫುಡ್ (ಕುಕರಿ). ಆಮಸಾನ್ UK. 2008 ರ ಜುಲೈ 26 ರಂದು ಪುನಃ ಸಂಪಾದಿಸಲಾಯಿತು.
 27. ವೀಕರ್ಸ್, ಅಮಿ. 'ಐಆಮ್ ನೋ ಗಾಡಿಸ್' ಸೇಸ್ ನಿಗೆಲ್ಲ. ದಿ ಗಾರ್ಡಿಯನ್ , 2001 ಜೂನ್ 5. 2008 ರ ಫೆಬ್ರವರಿ 2 ರಂದು ಪುನಃ ಸಂಪಾದಿಸಲಾಯಿತು.
 28. ಲಾಸನ್ ಬೀಟ್ಸ್ ಪಾಟರ್ ಮ್ಯಾಜಿಕ್, BBC ನ್ಯೂಸ್ ಆನ್ ಲೈನ್ , 2001 ರ ಫೆಬ್ರವರಿ 23. 2007 ರ ಸೆಪ್ಟೆಂಬರ್ 30 ರಂದು ಪುನಃ ಸಂಪಾದಿಸಲಾಯಿತು.
 29. ೨೯.೦ ೨೯.೧ ಹೆಸರ್, ಅಮಾನ್ಡ. ಕ್ಯೂಲಿನರಿ ಕ್ರಿಟೀಕ್; ಸೆಕ್ಸ್ ಅಂಡ್ ದಿ ಕಿಚನ್. ದಿ ನ್ಯೂಯಾರ್ಕ್ ಟೈಮ್ಸ್ ,2002 ರ ಜನವರಿ 9. 2008 ರ ಫೆಬ್ರವರಿ 2 ರಂದು ಪುನಃ ಸಂಪಾದಿಸಲಾಯಿತು.
 30. ಪ್ರೆಟ್ಟಿ, ಜ್ಯಾಕ್ಯೂಸ್. ಟೂ ಹಾಟ್ ಟು ಹ್ಯಾಂಡಲ್. ದಿ ಗಾರ್ಡಿಯನ್ , 2000 ದ ಆಗಸ್ಟ್ 30. 2008 ರ ಫೆಬ್ರುವರಿ 1 ರಂದು ಪುನಃ ಸಂಪಾದಿಸಲಾಯಿತು.
 31. ವ್ಯಾಟ್ ಸನ್, ಶೇನ್. ಅ ಗರ್ಲ್ ಇಸ್ ಅ ಗಲ್ಸ್ ಬೆಸ್ಟ್ ಫ್ರೆಂಡ್. ದಿ ಗಾರ್ಡಿಯನ್ ,2001 ರ ಮೇ 18. 2008 ರ ಫೆಬ್ರುವರಿ 1 ರಂದು ಪುನಃ ಸಂಪಾದಿಸಲಾಯಿತು.
 32. ಡೀನ್ಸ್, ಜಾಸನ್. ಆಲಿವರ್ ವಿಪ್ಸ್ ಲಾಸನ್ ಇನ್ ಬ್ಯಾಟಲ್ ಆಫ್ TV ಷೆಫ್ಸ್. ದಿ ಗಾರ್ಡಿಯನ್ , 2001 ರ ಸೆಪ್ಟೆಂಬರ್ 21. 2008 ಫೆಬ್ರುವರಿ 1 ರಂದು ಪುನಃ ಸಂಪಾದಿಸಲಾಯಿತು.
 33. ಹೂಸ್ ಕುಕಿಂಗ್? TV's ಆರ್ಮಿ ಆಫ್ ಷೆಫ್ಸ್. ದಿ ಗಾರ್ಡಿಯನ್ , 2000ದ ಸೆಪ್ಟೆಂಬರ್ 26 . 2008 ರ ಫೆಬ್ರುವರಿ 5 ರಂದು ಪುನಃ ಸಂಪಾದಿಸಲಾಯಿತು.
 34. ಗಿಲ್ಡ್ ಆಫ್ ಫುಡ್ ರೈಟರ್ಸ್ ಅವಾರ್ಡ್ ವಿನ್ನರ್ಸ್ 2001. ಗಿಲ್ಡ್ ಆಫ್ ಫುಡ್ ರೈಟರ್ಸ್ . 2007 ರ ಅಕ್ಟೋಬರ್ 9 ರಂದು ಪುನಃ ಸಂಪಾದಿಸಲಾಯಿತು .
 35. 2001 ಜ್ಯಾಕೋಬ್ಸ್ ಗ್ರೀಕ್ ವಲ್ಡ್ ಫುಡ್ ಮೀಡಿಯ ಅವಾರ್ಡ್ಸ್ ವಿನ್ನರ್ಸ್ Archived 2019-10-23 ವೇಬ್ಯಾಕ್ ಮೆಷಿನ್ ನಲ್ಲಿ.. ವಲ್ಡ್ ಫುಡ್ ಮೀಡಿಯ ಅವಾರ್ಡ್ಸ್. 2008 ಜುಲೈ 18 ರಂದು ಪುನಃ ಸಂಪಾದಿಸಲಾಯಿತು.
 36. ನಿಗೆಲ್ಲ ಬೈಟ್ಸ್ ಬೈ ನಿಗೆಲ್ಲ ಲಾಸನ್. ದಿ ಗಾರ್ಡಿಯನ್,2001 ರ ಜೂನ್ 9. 2007 ರ ಅಕ್ಟೋಬರ್ 1ರಂದು ಪುನಃ ಸಂಪಾದಿಸಲಾಯಿತು.
 37. ೩೭.೦ ೩೭.೧ ೩೭.೨ ೩೭.೩ ಜಾನ್ಸ್, ಸ್ಯಾಮ್. ನಿಗೆಲ್ಲ ಟಾಪ್ಸ್ ಬುಕ್ ಲಿಸ್ಟ್. ದಿ ಗಾರ್ಡಿಯನ್, 2007 ಡಿಸೆಂಬರ್ 12. 2008 ಜನವರಿ 31 ರಂದು ಪುನಃ ಸಂಪಾದಿಸಲಾಯಿತು.
 38. ಶಾನಾನ್, ಸಾರಾಹ್. ವ್ಯೂವರ್ ಲೂಸ್ ದ್ಯೇರ್ ಹಂಗರ್ ಫಾರ್ ಕುಕರಿ ಶೋಸ್. ದಿ ಡೇಲಿ ಟೆಲಿಗ್ರಾಫ್,2002 ಏಪ್ರಿಲ್ 25. 2008 ರ ಜುಲೈ 16 ರಂದು ಪುನಃ ಸಂಪಾದಿಸಲಾಯಿತು.
 39. ೩೯.೦ ೩೯.೧ ಡೀನ್ಸ್, ಜಾಸನ್. ನಿಗೆಲ್ಲ ಗೆಟ್ಸ್ ಕುಕಿಂಗ್ ಇನ್ ಅಮೇರಿಕ. ದಿ ಗಾರ್ಡಿಯನ್ , 2001 ರ ಆಗಸ್ಟ್ 9. 2008 ರ ಫೆಬ್ರವರಿ 1 ಪುನಃ ಸಂಪಾದಿಸಲಾಯಿತು.
 40. ೪೦.೦ ೪೦.೧ ಚಿಟ್ಟೆನ್ಡೆಂಡ್, ಮೌರಿಸ್. ನಿಗೆಲ್ಲ ಡಿಷಸ್ ಅಪ್ ಹರ್ ಗಾಡಿಸ್ ಡಿಪ್ಲೊಮಸಿ. ದಿ ಟೈಮ್ಸ್ , 2003 ರ ನವೆಂಬರ್ 16. ೨೦೦೮ ರ ಜುಲೈ 22.
 41. ಗ್ರಾಸ್ಮಾನ್ಸ್ ಸಾಸ್ ಟಾಪ್ ಬ್ರಾಂಡ್ ಲೀಗ್. BBC ನ್ಯೂಸ್ ಆನ್ ಲೈನ್ , 2003 ಜೂನ್ 30. 2007 ರ ಸೆಪ್ಟೆಂಬರ್ 30 ರಂದು ಪುನಃ ಸಂಪಾದಿಸಲಾಯಿತು.
 42. ೪೨.೦ ೪೨.೧ ೪೨.೨ ೪೨.೩ ೪೨.೪ ೪೨.೫ ೪೨.೬ ಬೊಶೋಫ್, ಅಲಿಸನ್. ನ್ಯೂನಿಗೆಲ್ಲ ಫೇಕ್: ಶಿ ಟೇಕ್ಸ್ ಅಸ್ ಆಲ್ ಫಾರ್ ಅ ರೈಡ್ ವಿತ್ ಬೋಗಸ್ ಬಸ್ ಟ್ರಿಪ್ ಟು ದಿ ಶಾಪ್ಸ್. ಡೇಲಿ ಮೇಲ್ , 2007 ಸೆಪ್ಟೆಂಬರ್ 29. 2007 ರ ಸೆಪ್ಟೆಂಬರ್ 30 ರಂದು ಪುನಃ ಸಂಪಾದಿಸಲಾಯಿತು.
 43. ಇನ್ ಪಿಕ್ಚರ್ಸ್: ಬುಷ್ ವಿಸಿಟ್ ಡೇ ಟು (ಗೊ ಟು ಪಿಕ್ಚರ್ 9), BBC ನ್ಯೂಸ್ ಆನ್ ಲೈನ್ ,2003 ರ ನವೆಂಬರ್ 20. 2007 ರ ಡಿಸೆಂಬರ್ 4 ರಂದು ಪುನಃ ಸಂಪಾದಿಸಲಾಯಿತು.
 44. ಫೋರ್ಟ್, ಮ್ಯಾಥ್ಯೂ. ಬ್ಯೂಟಿ ಅಂಡ್ ದಿ ಫೀಸ್ಟ್. ದಿ ಗಾರ್ಡಿಯನ್ , 2004 ರ ಅಕ್ಟೋಬರ್ 31. 2007 ರ ಅಕ್ಟೋಬರ್ 3 ರಂದು ಪುನಃ ಸಂಪಾದಿಸಲಾಯಿತು.
 45. ಇಸಾರ್ಡ್, ಜಾನ್. ಕುಕರಿ ಅಂಡ್ ಚಿಲ್ಡ್ರನ್ಸ್ ಟೈಟಲ್ಸ್ ಸರ್ಜ್ ಇನ್ ಪಾಪ್ಯೂಲಾರಿಟಿ. ದಿ ಗಾರ್ಡಿಯನ್ , 2005 ನವೆಂಬರ್ 19. 2007 ರ ಅಕ್ಟೋಬರ್ 1 ರಂದು ಪುನಃ ಸಂಪಾದಿಸಲಾಯಿತು.
 46. ನಿಗೆಲ್ಲ ಸರ್ವ್ಸ್ ಅಪ್ ಅ ಫೀಸ್ಟ್. ಈವ್ ನಿಂಗ್ ಸ್ಟ್ಯಾಂಡರ್ಡ್ , 2004 ರ ಏಪ್ರಿಲ್ 10. 2008 ರ ಜುಲೈ 19 ರಂದು ಪುನಃ ಸಂಪಾದಿಸಲಾಯಿತು.
 47. Nigella — interview Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ.. Nigella.com. 2007 ರ ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 48. ಡೀನ್ಸ್, ಜಾಸನ್. ನಿಗೆಲ್ಲ ಫೇಲ್ಸ್ ಟು ಕುಕ್ ಅಪ್ ರೇಟಿಂಗ್ಸ್ ಫೀಸ್ಟ್. ದಿ ಗಾರ್ಡಿಯನ್ , 2005 ಜುಲೈ 5. 2008 ರ ಫೆಬ್ರುವರಿ 5 ರಂದು ಪುನಃ ಸಂಪಾದಿಸಲಾಯಿತು.
 49. ನಿಗೆಲ್ಲ TV ರೇಟಿಂಗ್ಸ್ ಟೇಕ್ ಅ ಟಂಬಲ್, BBC ನ್ಯೂಸ್ ಆನ್ ಲೈನ್ , 2005 ರ ಜುಲೈ 15. 2008 ರ ಜುಲೈ 20 ರಂದು ಪುನಃ ಸಂಪಾದಿಸಲಾಯಿತು.
 50. ೫೦.೦ ೫೦.೧ ಬಸ್ ಫೀಲ್ಡ್ , ಸ್ಟೀವ್. ನಿಗೆಲ್ಲ ಜಾಯಿನ್ಸ್ ದಿ BBC. ದಿ ಗಾರ್ಡಿಯನ್ , 2006 ಸೆಪ್ಟೆಂಬರ್ 7. 2007 ಸೆಪ್ಟೆಂಬರ್ 30 ರಂದು ಪುನಃ ಸಂಪಾದಿಸಲಾಯಿತು.
 51. ಬರ್ಡ್, ಸ್ಟೀವ್. ನಿಗೆಲ್ಲ ಕ್ಲೈಮ್ಸ್ ಅಸ್ ರೈವಲ್ ಹ್ಯಾಸ್ ‘ಸಾಫ್ಟ್ ಸ್ಪಾಟ್’ ಫಾರ್ ಹರ್ ಹಸ್ ಬೆಂಡ್. ದಿ ಟೈಮ್ಸ್ ,2007 ರ ಆಗಸ್ಟ್ 28. 2007 ರ ಅಕ್ಟೋಬರ್ 1ರಂದು ಪುನಃ ಸಂಪಾದಿಸಲಾಯಿತು.
 52. ಬ್ಯಾಕ್ ಆಫ್ ಮಾರ್ಥ! ನಿಗೆಲ್ಲ ಕ್ಲೈಮ್ಸ್ ಅಸ್ ರೈವಲ್ ಫ್ಯಾನ್ಸಿಸ್ ಹರ್ ಹಸ್ ಬೆಂಡ್. ಡೇಲಿ ಮೇಲ್ , 2007 ರ ಆಗಸ್ಟ್ 28. 2007 ರ ಅಕ್ಟೋಬರ್ 6 ರಂದು ಪುನಃ ಸಂಪಾದಿಸಲಾಯಿತು.
 53. [202] ^ ಪೊನೀವೊಝಿಕ್, ಜೇಮ್ಸ್. 5 TV ಫುಡ್ ಶೋಸ್ ಟು ಸಿಂಕ್ ಯೋರ್ ಟೀತ್ ಇನ್ ಟು Archived 2008-04-08 ವೇಬ್ಯಾಕ್ ಮೆಷಿನ್ ನಲ್ಲಿ.. ಟೈಮ್ ,2006 ರ ಅಕ್ಟೋಬರ್ 22. 200ರ ಜುಲೈ 16 ರಂದು ಪುನಃ ಸಂಪಾದಿಸಲಾಯಿತು.
 54. ೫೪.೦ ೫೪.೧ ನಿಕೋಲ್, ಕಟೆ. ನಿಗೆಲ್ಲ ಲಾಸನ್ ಪಾಕೆಟ್ಸ್ £15m ಇನ್ ವಲ್ಡ್ ವೈಡ್ ಸಿಡಿಂಕೇಷನ್ ಡೀಲ್. ಡೇಲಿ ಮೇಲ್ , 2007 ನವೆಂಬರ್ 17. 2009 ಡಿಸೆಂಬರ್ 12 ರಂದು ಪುನಃ ಸಂಪಾದಿಸಲಾಯಿತು.
 55. ೫೫.೦ ೫೫.೧ ವೀಕ್ಲಿ ವ್ಯೂವಿಂಗ್ ಸಮ್ಮರಿ (w.e 10/12/06 – 24/12/06) Archived 2008-07-12 ವೇಬ್ಯಾಕ್ ಮೆಷಿನ್ ನಲ್ಲಿ.. ಬ್ರಾಡ್ ಕ್ಯಾಸ್ಟರ್ ' ಆಡಿಯನ್ಸ್ ರಿಸರ್ಚ್ ಬೋರ್ಡ್ . 2006 ಡಿಸೆಂಬರ್ 12 ರಂದು ಪುನಃ ಸಂಪಾದಿಸಲಾಯಿತು.
 56. ಕಾನ್ ಲಾನ್, ಟರ. ನಿಗೆಲ್ಲ ಟೇಸ್ಟಸ್ ಫೆಸ್ಟಿವ್ ಸಕ್ಸ್ ಸ್. ದಿ ಗಾರ್ಡಿಯನ್ , 2006 ರ ಡಿಸೆಂಬರ್ 7 . 2007 ಸೆಪ್ಟೆಂಬರ್30 ರಂದು ಪುನಃ ಸಂಪಾದಿಸಲಾಯಿತು.
 57. 2007 ಲೇ ಕಾರ್ಡನ್ ಬ್ಲೂ ವಲ್ಡ್ ಫುಡ್ ಮೀಡಿಯ ಅವಾರ್ಡ್ಸ್ ವಿನ್ನರ್ಸ್ Archived 2008-07-05 ವೇಬ್ಯಾಕ್ ಮೆಷಿನ್ ನಲ್ಲಿ.. ವಲ್ಡ್ ಫುಡ್ ಮೀಡಿಯ ಅವಾರ್ಡ್ಸ್ . 2008 ರ ಜುಲೈ 18 ರಂದು ಪುನಃ ಸಂಪಾದಿಸಲಾಯಿತು.
 58. ಸ್ಮಿಥರ್ಸ್, ರೆಬೇಕಾ. ನಿಗೆಲ್ಲ ಎಫೆಕ್ಟ್ ಸೀಸ್ ಗೂಸ್ ಫ್ಯಾಟ್ ಸೇಲ್ಸ್ ಸೋರ್. ದಿ ಗಾರ್ಡಿಯನ್ , 2006 ಡಿಸೆಂಬರ್ 12. 2007 ಸೆಪ್ಟೆಂಬರ್30 ರಂದು ಪುನಃ ಸಂಪಾದಿಸಲಾಯಿತು.
 59. ಸೇಲ್ಸ್ ಸೋರ್ ಅಸ್ ನಿಗೆಲ್ಲ ಪ್ಲಂಪ್ಸ್ ಫಾರ್ ಪ್ರೂನ್ಸ್. ಡೇಲಿ ಮೇಲ್ , 2006 ಡಿಸೆಂಬರ್ 18. 2007 ರ ಅಕ್ಟೋಬರ್ 1ರಂದು ಪುನಃ ಸಂಪಾದಿಸಲಾಯಿತು.
 60. ಕ್ಲಾಟ್, ಲಾರಾ. ನಿಗೆಲ್ಲ ಸೆಂಡ್ಸ್ ಪ್ರೂನ್ಸ್ ಫ್ಲೈಯಿಂಗ್ ಆಫ್ ದಿ ಷೆಲ್ವಸ್ Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಡೇಲಿ ಟೆಲಿಗ್ರಾಫ್ , 2006 ರ ಡಿಸೆಂಬರ್ 20. 2007 ರ ಅಕ್ಟೋಬರ್ 2 ರಂದು ಪುನಃ ಸಂಪಾದಿಸಲಾಯಿತು.
 61. ರೆನಾಲ್ಡ್ಸ್, ನಿಗೆಲ್. ಫಾಸ್ಟ್ ಅಂಡ್ ಫ್ಯಾಟಿ, ನಿಗೆಲ್ಲ'ಸ್ 'uಅನ್ ಹೆಲ್ತಿ' ಕಮ್ ಬ್ಯಾಕ್ Archived 2008-05-14 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಡೇಲಿ ಟೆಲಿಗ್ರಾಫ್ , 2007 ಜೂನ್ 27. 2008 ಎಅ ಜುಲೈ 26 ರಂದು ಪುನಃ ಸಂಪಾದಿಸಲಾಯಿತು.
 62. ಎಡಿಟರ್ಸ್ ಅಟ್ ಡೇಲಿ ಎಕ್ಸ್ ಪ್ರೆಸ್ . ಫುಡ್: ನಿಗೆಲ್ಲ ಎಕ್ಸ್ ಪ್ರೆಸ್ , 8.30pm, BBC2. ಡೇಲಿ ಎಕ್ಸ್ ಪ್ರೆಸ್ , 2007 ಸೆಪ್ಟೆಂಬರ್ 3. 2007 ಅಕ್ಟೋಬರ್ 3 ರಂದು ಪುನಃ ಸಂಪಾದಿಸಲಾಯಿತು.
 63. ನಿಗೆಲ್ಲ'ಸ್ ಬ್ಯಾಕ್ ಟು ಟರ್ನ್ ವರ್ಕಿಂಗ್ ಮದರ್ಸ್ ಇನ್ ಟು ಫಾಸ್ಟ್ ಫುಡ್ ಗಾಡಿಸಸ್. ದಿ ಡೇಲಿ ಮೇಲ್ , 2007 ಜೂನ್ 26. 2008 ರ ಫೆಬ್ರವರಿ 3 ರಂದು ಪುನಃ ಸಂಪಾದಿಸಲಾಯಿತು.
 64. ಡೀಡ್ಸ್, ಹೆನ್ರಿ. ಕಮೀಡಿಯನ್ ಸಫರ್ಸ್ ಫ್ರಮ್ ಕ್ಲಾರ್ಕ್ಸ್ ಐಡೆಂಟಿ ಕ್ರೈಸಿಸ್[ಶಾಶ್ವತವಾಗಿ ಮಡಿದ ಕೊಂಡಿ]. ದಿ ಇಂಡಿಪೆಂಡೆಂಟ್ , 2007 ರ ಮೇ 3. 2008 ಜೂನ್ 29 ರಂದು ಪುನಃ ಸಂಪಾದಿಸಲಾಯಿತು.
 65. ೬೫.೦ ೬೫.೧ ವೀಕ್ಲಿ ವ್ಯೂವಿಂಗ್ ಸಮ್ಮರಿ (w.e 09/09/07 – 16/12/07) Archived 2008-07-12 ವೇಬ್ಯಾಕ್ ಮೆಷಿನ್ ನಲ್ಲಿ., ಬ್ರಾಡ್ ಕ್ಯಾಸ್ಟರ್ಸ್ ಆಡಿಯನ್ಸ್ ರಿಸರ್ಚ್ ಬೋರ್ಡ್ . 2008 ರ ಜನವರಿ 31 ಪುನಃ ಸಂಪಾದಿಸಲಾಯಿತು.
 66. ಹಾಲ್ಮ್ ಹುಡ್, ಲೇಗ್. ಟೆಪಿಡ್ ರೆಸ್ಪಾನ್ಸ್ ಟು ಹೆಲ್ಸ್ ಕಿಚನ್. ದಿ ಗಾರ್ಡಿಯನ್ ,2007 ರ ಸೆಪ್ಟೆಂಬರ್ 4. 2007 ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 67. ಟ್ರೇಹಾರ್ನ್, ಕ್ರಿಸ್. ಹೇಲ್ಸ್ ಕಿಚನ್ ಟರ್ನ್ಸ್ ಅಪ್ ದಿ ಹೀಟ್. ದಿ ಗಾರ್ಡಿಯನ್ , 2007 ಸೆಪ್ಟೆಂಬರ್ 11. 2007 ರ ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 68. ವೀಕ್ಲಿ ವ್ಯೂವಿಂಗ್ ಸಮ್ಮರಿ (w.e 28/10/07) Archived 2008-07-12 ವೇಬ್ಯಾಕ್ ಮೆಷಿನ್ ನಲ್ಲಿ.. ಬ್ರಾಡ್ ಕ್ಯಾಸ್ಟ್' ಆಡಿಯನ್ಸ್ ರಿಸರ್ಚ್ ಬೋರ್ಡ್ . 2008 ರ ಜನವರಿ 29 ರಂದು ಪುನಃ ಸಂಪಾದಿಸಲಾಯಿತು.
 69. ವಾಲೋಪ್, ಹ್ಯಾರಿ. ನಿಗೆಲ್ಲ ರೆಸಿಪಿ ಪ್ರಾಮ್ಟ್ಸ್ ತರ್ಸ್ಟ್ ಫಾರ್ ರೀಸ್ ಲಿಂಗ್ Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಡೇಲಿ ಟೆಲಿಗ್ರಾಫ್ , 2007 ರ ಅಕ್ಟೋಬರ್ 1. 2007 ರ ಅಕ್ಟೋಬರ್ 2 ರಂದು ಪುನಃ ಸಂಪಾದಿಸಲಾಯಿತು.
 70. ಹಿಲ್ಟನ್, ಬಿಥ್. ನಿಗೆಲ್ಲ ಲಾಸನ್ ಕ್ರಿಟಿಸೈಸ್ಡ್ ಫಾರ್ ವ್ಯೈಟ್ ಗ್ಯೇನ್. ಡಿಜಿಟಲ್ ಸ್ಪೈ , 2007 ಅಕ್ಟೋಬರ್ 27. 2008 ರ ಫೆಬ್ರುವರಿ 3 ರಂದು ಪುನಃ ಸಂಪಾದಿಸಲಾಯಿತು.
 71. ೭೧.೦ ೭೧.೧ ಮೂಡಿ, ಕ್ಲೇಮೀ. Iಇಸ್ ನಿಗೆಲ್ಲ ಗೆಟ್ಟಿಂಗ್ ಟು ಬಿ ಆನ್ ಈವನ್ ಬಿಗ್ಗರ್ ಸ್ಟಾರ್ ಅಸ್ ದಿ ವೀಕ್ಸ್ ಗೊ ಬೈ?. ಡೇಲಿ ಮೇಲ್ , 2007 ಅಕ್ಟೋಬರ್ 24. 2008 ರ ಫೆಬ್ರವರಿ 3 ರಂದು ಪುನಃ ಸಂಪಾದಿಸಲಾಯಿತು.
 72. ೭೨.೦ ೭೨.೧ ಲೆವಿ, ಪೌಲ್. ಟೇಕ್ ದಿ ರಫ್ ವಿತ್ ದಿ ಸ್ಮೂತ್. ದಿ ಗಾರ್ಡಿಯನ್ , 2007 ರ ಸೆಪ್ಟೆಂಬರ್ 16. 2008 ಜುಲೈ 16 ರಂದು ಪುನಃ ಸಂಪಾದಿಸಲಾಯಿತು.
 73. ವೆಸ್ಟ್, ಡೇವ್. ನಿಗೆಲ್ಲ ಎಕ್ಸ್ ಪ್ರೆಸ್ ಸೋಲ್ಡ್ ಟು ಏಷಿಯಾ. ಡಿಜಿಟಲ್ ಸ್ಪೈ , 2007 ನವೆಂಬರ್ 21. 2008 ರ ಫೆಬ್ರವರಿ 3 ರಂದು ಪುನಃ ಸಂಪಾದಿಸಲಾಯಿತು.
 74. ಡೇಟೈಮ್ ಎಮ್ಮಿ ನಾಮಿನೇಷನ್ಸ್. ಲಾಸ್ ಏಂಜಲ್ಸ್ ಟೈಮ್ಸ್ , 2008 ಏಪ್ರಿಲ್ 30. 2008 ರ ಮೇ 4 ಪುನಃ ಸಂಪಾದಿಸಲಾಯಿತು.
 75. ಆಸ್ಟಿನ್, ಕೆಥ್. ಫ್ಯಾನ್ಸ್ ರಿಫೈನ್ಸ್ ಧ್ಯೇರ್ ಟೇಸ್ಟ್ ಫಾರ್ ನಿಗೆಲ್ಲ. ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ , 2008 ರ ಏಪ್ರಿಲ್ 1. 2008 ರ ಏಪ್ರಿಲ್ 9 ರಂದು ಪುನಃ ಸಂಪಾದಿಸಲಾಯಿತು.
 76. ಸ್ಯಾಬ್ಬಗ್, ಡ್ಯಾನ್. HMV 'ಸೀಸ್ ನೊ ಸೈನ್ ಆಫ್ ಸ್ಲೊಡೌನ್' ಅಸ್ ಸೇಲ್ಸ್ ರೈಸ್ ನಿಗೆಲ್ಲ ಎಕ್ಸ್ ಪ್ರೆಸ್ . ದಿ ಟೈಮ್ಸ್ , 2008 ರ ಜನವರಿ 17. 2008 ರ ಜನವರಿ 31 ರಂದು ಪುನಃ ಸಂಪಾದಿಸಲಾಯಿತು.
 77. ಅಮಜಾನ್ಸ್ UK ಕ್ರಿಸ್ ಮಸ್ ಬಿಸ್ಟ್ ಸೆಲ್ಲರ್ಸ್. ದಿ ಗಾರ್ಡಿಯನ್ ,2007 ರ ಡಿಸೆಂಬರ್ 27. 2008 ರ ಜನವರಿ 31 ರಂದು ಪುನಃ ಸಂಪಾದಿಸಲಾಯಿತು.
 78. Cleland, Gary (30 January 2008). "Nigella Lawson 'will leave children penniless'". The Daily Telegraph. Archived from the original on 3 ಏಪ್ರಿಲ್ 2008. Retrieved 11 November 2009.
 79. ೭೯.೦ ೭೯.೧ ೭೯.೨ ಕಾನಿ, ಬೆಥ್. ಬ್ರಿಟಿಷ್ ಸೆನ್ ಸೇಷನ್ ಲಾಸನ್ ಸೇಸ್ ಕುಕಿಂಗ್ ಶುಡ್ ಬಿ ಅಬೌಟ್ ಫನ್, ಫ್ಯಾಮಿಲಿ Archived 2009-09-17 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಒಕ್ ಲ್ಯಾಂಡ್ ಟ್ರಿಬ್ಯೂನ್ , 2003 ಜೂನ್ 4. findarticles.com ನಿಂದ 2008 ರ ಫೆಬ್ರವರಿ 22 ರಂದು ಪುನಃ ಸಂಪಾದಿಸಲಾಯಿತು.
 80. TV ಅಂಡ್ DVD Archived 2009-12-05 ವೇಬ್ಯಾಕ್ ಮೆಷಿನ್ ನಲ್ಲಿ., ನಿಗೆಲ್ಲ ಲಾಸನ್ ಳ ಅಧಿಕೃತ ವೆಬ್ ಸೈಟ್. 2009 ರ ಡಿಸೆಂಬರ್ 12 ರಂದು ಕೊನೆಯ ಬಾರಿ ಪ್ರವೇಶಿಸಲಾಯಿತು.
 81. ರೋಸ್, ಚಾರ್ಲಿ. ನಿಗೆಲ್ಲ ಬೈಟ್ಸ್ Archived 2008-09-03 ವೇಬ್ಯಾಕ್ ಮೆಷಿನ್ ನಲ್ಲಿ., CBS ನ್ಯೂಸ್ , 2003 ರ ಜುಲೈ 16. 2008 ರ ಜುಲೈ 17 ರಂದು ಪುನಃ ಸಂಪಾದಿಸಲಾಗಿದೆ.
 82. ಡಫ್, ಆಲಿವರ್. ಡೇವಿಸ್ ಅವೈಟ್ಸ್ 'ಚಾಟ್' ವಿಥ್ ರಿಸರ್ಚರ್ಸ್ ಲಾಯರ್ಸ್[ಶಾಶ್ವತವಾಗಿ ಮಡಿದ ಕೊಂಡಿ], ದಿ ಇಂಡಿಪೆಂಡೆಂಟ್ , 2007 ಜುಲೈ 20. 2008 ರ ಏಪ್ರಿಲ್ 1 ರಂದು ಪುನಃ ಸಂಪಾದಿಸಲಾಯಿತು.
 83. ಗಾಡ್ರಾನ್, ಮೆಲಿಸ್ಸ. ನಿಗೆಲ್ಲ ಫೀಸ್ಟ್ಸ್ , ದಿ ಏಜ್ ,2007 ರ ನವೆಂಬರ್ 20. 2008 ರ ಏಪ್ರಿಲ್ 1 ಪುನಃ ಸಂಪಾದಿಸಲಾಯಿತು.
 84. ನಿಗೆಲ್ಲ ವಿಲ್ ನೆವರ್ ಬಿ ಟು ಎವ್ ರಿ ವನ್ ಟೇಸ್ಟ್[ಶಾಶ್ವತವಾಗಿ ಮಡಿದ ಕೊಂಡಿ]. ದಿ ಡೇಲಿ ಟೆಲಿಗ್ರಾಫ್ , 2007 ಸೆಪ್ಟೆಂಬರ್ 13. 2008 ರ ಜುಲೈ 17 ರಂದು ಪುನಃ ಸಂಪಾದಿಸಲಾಯಿತು.
 85. ಸೆಲ್ಯಾಂಡ್, ಗ್ಯಾರಿ. ಗ್ಯಾರಿ ರೋಡ್ಸ್ ಅಟ್ಯಾಕ್ಸ್ ರೈವಲ್ ನಿಗೆಲ್ಲ ಲಾಸನ್. ದಿ ಡೇಲಿ ಟೆಲಿಗ್ರಾಫ್ , 2007 ನವೆಂಬರ್ 20. 2008 ಜುಲೈ 21 ರಂದು ಪುನಃ ಸಂಪಾದಿಸಲಾಯಿತು.
 86. ನಿಗೆಲ್ಲ'ಸ್ ಕ್ರಿಸ್ ಮಸ್ ಕಿಚನ್, BBC ನ್ಯೂಸ್ ಆನ್ ಲೈನ್ , 2006 ಡಿಸೆಂಬರ್ 20. 2008 ರ ಜುಲೈ 23 ರಂದು ಪುನಃ ಸಂಪಾದಿಸಲಾಯಿತು.
 87. ಲೆಟ್ಟ್ಸ್, ಕ್ವೇಂಟೀನ್. ನಿಗೆಲ್ಲ ಲಾಸನ್'ಸ್ ರೆಸಿಪಿ ಲುಕ್ ಈಸಿ ಅಸ್ ಪೈ, ಸೊ ಹೌ ಡಿಡ್ ಕ್ವೇಂಟೀನ್ ಲೆಟ್ಟ್ಸ್ ಗೊ ಸೊ ರಾಂಗ್?. ಡೇಲಿ ಮೇಲ್ , 2007 ಸೆಪ್ಟೆಂಬರ್ 15. 2007 ಅಕ್ಟೋಬರ್ 1 ರಂದು ಪುನಃ ಸಂಪಾದಿಸಲಾಯಿತು.
 88. ಕ್ಯಾಮ್ ಬರ್. ರೆಬೇಕಾ. ನಿಗೆಲ್ಲ ಅಂಡ್ ಡೆಲಿಯಾಸ್ ರೆಸಿಪೀಸ್ ಆರ್ 'ಟೂ ಟ್ರಿಕಿ ಟು ಫಾಲೋ'. ಡೇಲಿ ಮೇಲ್ , 2007 ಸೆಪ್ಟೆಂಬರ್ 10. 2007 ರ ಅಕ್ಟೋಬರ್ 1 ರಂದು ಪುನಃ ಸಂಪಾದಿಸಲಾಯಿತು.
 89. BBC ಪ್ರೆಸ್ ರಿಲೀಸ್. ಡೆಡ್ ರಿಂಗರ್ಸ್ — ಸರಣಿಗಳು 1, BBC ವಲ್ಡ್ ವೈಡ್ , 2003 ರ ಮೇ 30. 2007 ರ ಸೆಪ್ಟೆಂಬರ್ 30 ರಂದು ಪುನಃ ಸಂಪಾದಿಸಲಾಯಿತು.
 90. ಹಿಲ್ಟನ್, ಬೆಥ್. ಲಾಸನ್ ವೋಂಟ್ ಲೀವ್ ಚಿಲ್ಡ್ರನ್ ಅ ಪೆನ್ನಿ', ಡಿಜಿಟಲ್ ಸ್ಪೈ ,2008 ರ ಜನವರಿ 29. 2008 ರ ಜನವರಿ 31 ರಂದು ಪುನಃ ಸಂಪಾದಿಸಲಾಯಿತು.
 91. ಜಾನ್ ಥನ್ ರೋಸ್ ಕುಕ್ಸ್ ಅಪ್ ಅ ಸ್ಟೋರ್ಮ್ ವಿತ್ ನಿಗೆಲ್ಲ ಲಾಸನ್. BBC ಪ್ರೆಸ್ ಆಫೀಸ್ , 2003 ಅಕ್ಟೋಬರ್ 10. 2007 ರ ಸೆಪ್ಟೆಂಬರ್ 30 ರಂದು ಪುನಃ ಸಂಪಾದಿಸಲಾಯಿತು.
 92. ವಿನರ್, ಬ್ರೈನ್. 'ಮೈ ಚಿಲ್ಡ್ರನ್ ವುಡ್ ಲೈಕ್ ಮಿ ಟು ರೀಮ್ಯಾರಿ' Archived 2008-10-23 ವೇಬ್ಯಾಕ್ ಮೆಷಿನ್ ನಲ್ಲಿ.. ಸ್ಯೇನ್ಸ್ ಬ್ಯೂರೀಸ್ ಮ್ಯಾಗಜೀನ್ , 2002. 2007 ಸೆಪ್ಟೆಂಬರ್ 29 ರಂದು nigella.com ನಿಂದ ಪುನಃ ಸಂಪಾದಿಸಲಾಯಿತು.
 93. ೯೩.೦ ೯೩.೧ ಲೆವೆಲಿನ್ ಸ್ಮಿತ್, ಜೂಲಿಯ. ನಿಗೆಲ್ಲ ಲಾಸನ್'ಸ್ ಪುವರ್ ಲಿಟ್ಟಲ್ ರಿಚ್ ಕಿಡ್ಸ್ Archived 2008-06-08 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಡೇಲಿ ಟೆಲಿಗ್ರಾಫ್ , 2008 ರ ಫೆಬ್ರವರಿ 4. 2008 ರ ಜುಲೈ 25 ರಂದು ಪುನಃ ಸಂಪಾದಿಸಲಾಯಿತು.
 94. ನಿಗೆಲ್ಲ ಲಾಸನ್ ಹಿಟ್ಸ್ ಬ್ಯಾಕ್ ಅಟ್ ಕ್ಲೈಮ್ಸ್ ಶಿ ಪ್ಲ್ಯಾನ್ಸ್ ಟು ಗೆಟ್ ಚಿಲ್ಡ್ರನ್ ಜೌಟ್ ಆಫ್ ವಿಲ್ಲ್. ಡೇಲಿ ಮೇಲ್ , 2008 ರ ಫೆಬ್ರವರಿ 3. 2008 ರ ಫೆಬ್ರವರಿ 2 ರಂದು ಪುನಃ ಸಂಪಾದಿಸಲಾಯಿತು.
 95. ೯೫.೦ ೯೫.೧ "Nigella Lawson celebrity parent profile". Cookie. 8 January 2009. Archived from the original on 27 ಜೂನ್ 2009. Retrieved 11 May 2009.
 96. "ನಾನು ನಾಸ್ತಿಕಳಾಗಿ ಬೆಳೆದೆ ಹಾಗು ನಾಸ್ತಿಕಳಾಗಿಯೇ ಉಳಿದೆ. ಆದರೆ ಯಾವುದೇ ಸಂದರ್ಭವು , ಧರ್ಮ ಮುಖ್ಯವಲ್ಲ ಎಂದಾಗಲಿ ಅಥವಾ ಒಳ್ಳೆಯದು ಕೆಟ್ಟದು ಇಲ್ಲವೆಂದಾಗಲಿ ನನ್ನನ್ನು ನಂಬುವಂತೆ ಮಾಡಲಿಲ್ಲ. ನಾನು ಸರಿ ತಪ್ಪುಗಳ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಯುವ ಅವಶ್ಯಕತೆಯನ್ನು ನಂಬುತ್ತೇನೆ.ಅಲ್ಲದೇ ಇದನ್ನು ಮಾಡಲು ನನಗೆ ದೇವರು ಬೇಕು ಜೀಸಸ್ ಅಥವಾ ಕ್ಲರ್ಜಿಮನ್ ಆಗಿರಬಹುದು ಎಂದು ಹೇಳುವ ಮೂಲಕ ನಾನು ಅವಮಾನಿತಳಾದೆ." ನಿಗೆಲ್ಲ ಲಾಸನ್,ನಾಸ್ತಿಕರಾದ ನಾವು ಸರಿಯನ್ನು ತಪ್ಪಿನಿಂದ ತಿಳಿದುಕೊಳ್ಳಬಲ್ಲೆವು, ದಿ ಟೈಮ್ಸ್ , 1996 ರ ಜೂನ್ 29. ವಿಶೇಷ ಲೇಖನ ವಿಭಾಗ.
 97. ಲಾಸನ್, ನಿಗೆಲ್ಲ. ಸ್ಯಾಪಿಸಮ್ ಇಸ್ ಮೋರ್ ಥ್ಯಾನ್ ಡಿಸೈನರ್-ಡಿಕೆರಿ. ದಿ ಗಾರ್ಡಿಯನ್ , 2000 ದ ಡಿಸೆಂಬರ್ 31. 2007 ಸೆಪ್ಟೆಂಬರ್ 29 ರಂದು ಪುನಃ ಸಂಪಾದಿಸಲಾಯಿತು.
 98. ನಿಗೆಲ್ಲ ರಿವೀಲ್ಸ್ ಸೆಡಕ್ಷನ್ ಸೀಕ್ರೆಟ್ ... ಸ್ಟಾಕಿಂಗ್ಸ್, ಸಸ್ಪೆಂಡರ್ಸ್ ಅಂಡ್ ಹೈ-ಹೀಲ್ಸ್ ಇನ್ ಬೆಡ್. ಡೇಲಿ ಮೇಲ್ , 2007 ಅಕ್ಟೋಬರ್ 10. 2007 ರ ಅಕ್ಟೋಬರ್ 9 ರಂದು ಪುನಃ ಸಂಪಾದಿಸಲಾಯಿತು.
 99. ಸ್ವೀಟ್ ಚಾರಿಟಿ Archived 2008-08-01 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಡೇಲಿ ಟೆಲಿಗ್ರಾಫ್ ಮ್ಯಾಗಜೀನ್ , 2004 ಫೆಬ್ರವರಿ 28. 2008 ರ ಜುಲೈ 21 ರಂದು nigella.com ನಿಂದ ಪುನಃ ಸಂಪಾದಿಸಲ್ಪಟ್ಟಿತು.
 100. ದಿ ರಿಫ್ಯೂಸನಿಕ್ ಅಂಡ್ ದಿ ಹಾನರ್ಸ್ ದೇ ಟರ್ನ್ಡ್ ಡೌನ್. ದಿ ಟೈಮ್ಸ್ , 2003 ಡಿಸೆಂಬರ್ 21. 2008 ರ ಅಕ್ಟೋಬರ್ 5 ರಂದು ಪುನಃ ಸಂಪಾದಿಸಲಾಯಿತು.
 101. "Nigella Lawson criticised for bear fur comments". The Daily Telegraph. 11 December 2008. Archived from the original on 10 ಫೆಬ್ರವರಿ 2009. Retrieved 11 May 2009.
 102. Jones, Liz (12 December 2008). "Nigella may think fur's fair... but now the claws are out for her". Daily Mail. Retrieved 11 May 2009.

ಬಾಹ್ಯ ಕೊಂಡಿಗಳು[ಬದಲಾಯಿಸಿ]