ನಿಕೊಲಾಸ್ ಲಿಯೊನಾರ್ಡ್ ಸಾಡಿ ಕಾರ್ನೋ

ವಿಕಿಪೀಡಿಯ ಇಂದ
Jump to navigation Jump to search
Sadi Carnot
Sadi Carnot.jpeg
Nicolas Léonard Sadi Carnot in 1813 at age of 17 in the traditional uniform of a student of the École Polytechnique
ಜನನ1 ಜೂನ್ 1796
Palais du Petit-Luxembourg, Paris, France
ಮರಣ24 August 1832 (age 36)
Paris, France
ರಾಷ್ಟ್ರೀಯತೆFrance
ಕಾರ್ಯಕ್ಷೇತ್ರPhysicist and engineer
ಸಂಸ್ಥೆಗಳುFrench army
ಅಭ್ಯಸಿಸಿದ ವಿದ್ಯಾಪೀಠÉcole Polytechnique
École Royale du Génie
Sorbonne
Collège de France
ಶೈಕ್ಷಣಿಕ ಸಲಹೆಗಾರರುSiméon Denis Poisson
André-Marie Ampère
François Arago
ಪ್ರಸಿದ್ಧಿಗೆ ಕಾರಣCarnot cycle
Carnot efficiency
Carnot theorem
Carnot heat engine
ಪ್ರಭಾವಿತರುÉmile Clapeyron
Rudolf Clausius
Lord Kelvin
ಟಿಪ್ಪಣಿಗಳು
He was the brother of Hippolyte Carnot, his father was the mathematician Lazare Carnot, and his nephews were Marie François Sadi Carnot and Marie Adolphe Carnot.

ನಿಕೊಲಾಸ್ ಲಿಯೊನಾರ್ಡ್ ಸಾಡಿ ಕಾರ್ನೋ(1 ಜೂನ್ 1796 – 24 ಆಗಸ್ಟ್ 1832) ಫ್ರಾನ್ಸಿನ ಭೌತಶಾಸ್ತ್ರಜ್ಞ. ಉಷ್ಣಬಲ ಶಾಸ್ತ್ರದ (thermodyanamics)ನ ಜನಕನೆಂದು ಪ್ರಸಿದ್ಧ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಜನನ ಪ್ಯಾರಿಸಿನಲ್ಲಿ ಜೂನ್ 1, 1796ರಲ್ಲಿ. ಈಕೊಲ್ ಪಾಲಿಟೆಕ್ನಿಕಿನಲ್ಲಿ ವ್ಯಾಸಂಗಮಾಡಿ 1814ರಲ್ಲಿ ಮಿಲಿಟರಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ. ಆ ಗುಂಪಿನ ಕ್ಯಾಪ್ಟನ್ ಆಗಿ 1827ರಲ್ಲಿ ಬಡ್ತಿ ಬಂದರೂ ಮರುವರ್ಷವೇ ಆತ ಮಿಲಿಟರಿ ಹುದ್ದೆ ತ್ಯಜಿಸಿದ.

ವೈಜ್ಞಾನಿಕ ಸಂಶೋಧನೆ[ಬದಲಾಯಿಸಿ]

ತನ್ನ ಸಂಶೋಧನೆಗಳೆಲ್ಲವನ್ನೂ ಒಂದೇ ಒಂದು ಪುಸ್ತಕದಲ್ಲಿ ಕಾರ್ನೋ ಬರೆದು ಇಟ್ಟಿದ್ದಾನೆ. ಉಷ್ಣಯಂತ್ರಗಳ ವಿಷಯದಲ್ಲಿ ಕಾರ್ನೋ ನಡೆಸಿದ ಸಂಶೋಧನೆಗಳನ್ನು ಒಳಗೊಂಡಿರುವ ಈ ಅತ್ಯಮೂಲ್ಯ ಗ್ರಂಥವನ್ನು ಆತ ಬರೆದದ್ದು 1824ರಲ್ಲಿ. ಆದರೆ ಇದರ ಮೌಲ್ಯ ಆತ ಗತಿಸಿದ ಸುಮಾರು 16 ವರ್ಷಗಳ ಅನಂತರ ಎಂದರೆ 1848-49ರಲ್ಲಿ ಆಸಕ್ತರಿಗೆ ತಿಳಿಯಿತು. ಕೆಲ್ವಿನ್ ತೋರಿಸಿಕೊಡುವವರೆಗೂ ವಿಜ್ಞಾನಿಗಳ ಗಮನಕ್ಕೆ ಬಂದಿರಲಿಲ್ಲ. ಅದೃಷ್ಟವಶಾತ್ ಆತನ ಕೈಬರಹವನ್ನು ಜೋಪಾನವಾಗಿಟ್ಟದ್ದರಿಂದ ಇದರ ಪ್ರಕಟಣೆ ಸಾಧ್ಯವಾಯಿತು. ಈ ಗ್ರಂಥವೊಂದರಿಂದಲೇ ಕಾರ್ನೋನನ್ನು ಸುಪ್ರಸಿದ್ಧ ಭೌತಶಾಸ್ತ್ರಜ್ಞರ ಗುಂಪಿಗೆ ಸೇರಿಸಬಹುದು. ಆತನ ಬರಹದಿಂದ ಕಾರ್ನೋ ಉಷ್ಣದ ನಿಜಸ್ವರೂಪದ ಬಗ್ಗೆ ಎಷ್ಟು ಆಳವಾಗಿ ಅಧ್ಯಯನ ನಡೆಸಿದ್ದನೆಂಬುದರ ಜೊತೆಗೆ ಉಷ್ಣದ ಯಾಂತ್ರಿಕ ಸಾಮ್ಯ ಕಂಡುಹಿಡಿಯಲು ನಾವು ಈಗ ಆಧುನಿಕವೆಂದು ಉಪಯೋಗಿಸುತ್ತಿರುವ ಉತ್ತಮ ಪ್ರಯೋಗಗಳ ಪ್ರಯತ್ನಗಳನ್ನು ಆಗಲೇ ಅವನು ಮಾಡಿದ್ದನೆಂಬುದೂ ತಿಳಿಯಿತು. ಉದಾಹರಣೆಗೆ ಜೌಲ್ ಮತ್ತು ಕೆಲ್ವಿನ್‍ರವರ ಪ್ರಸಿದ್ಧ ಸರಂಧ್ರಪ್ಲಗ್ ಪ್ರಯೋಗದ ಪ್ರಯತ್ನ ಮುಂತಾದುವುಗಳೂ ಅಲ್ಲಿದ್ದುವು. ಕಾರ್ನೋ ನೀಡಿರುವ ಉಷ್ಣಯಂತ್ರ ಪ್ರಮೇಯ ಹೀಗಿದೆ: ಯಾವ ಉಷ್ಣ ಎಂಜಿನ್ನೂ ಅದೇ ಉಷ್ಣತೆಗಳ ನಡುವೆ ಕ್ರಿಯಾಶೀಲವಾಗಿರುವ ವಿಪರ್ಯಶೀಲ ಎಂಜಿನ್‍ಗಿಂತ ದಕ್ಷತರವಾಗಿರಲಾರದು. ಆದ್ದರಿಂದ ವಿಪರ್ಯಶೀಲ (ರಿವರ್ಸಿಬಲ್) ಎಂಜಿನ್‍ನ ದಕ್ಷತೆ ಕ್ರಿಯಾನಿರತ ಪದಾರ್ಥವನ್ನು ಅವಲಂಬಿಸಿಲ್ಲ. ಬದಲು, ಅದು ವರ್ತಿಸುತ್ತಿರುವ ಉಷ್ಣತಾಮಿತಿಗಳನ್ನು ಮಾತ್ರ ಅವಲಂಬಿಸಿದೆ. ಇದು ಉಷ್ಣಚಲನಶಾಸ್ತ್ರದ ಅಡಿಗಲ್ಲಾಗಿದೆ.

ನಿಧನ[ಬದಲಾಯಿಸಿ]

ಆಗಸ್ಟ್ 24, 1832ರಲ್ಲಿ ಕಾರ್ನೋ ಗತಿಸಿದ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]