ವಿಷಯಕ್ಕೆ ಹೋಗು

ನಾಲ್ಕು ಏಷ್ಯನ್ ಹುಲಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಾಲ್ಕು ಏಷ್ಯನ್ ಹುಲಿ ಇಂದ ಪುನರ್ನಿರ್ದೇಶಿತ)

೪ ಏಷ್ಯನ್ ಹುಲಿಗಳು ಎಂದು ತೈವಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಹಾಂಗ್ ಕಾಂಗ್ ಗಳನ್ನು ಕರೆಯಲಾಗುತ್ತದೆ. ೧೯೫೦-೯೦ರ ಅವಧಿಯಲ್ಲಿ ಆರ್ಥಿಕ, ಔದ್ಯೋಗಿಕ ಮತ್ತು ತಾಂತ್ರಿಕ ಪ್ರಗತಿ, ಮಾನವ ಸಂಪನ್ಮೂಲ, ತಲಾವಾರು ಆದಾಯ ಇವನ್ನು ಹಲವು ಪಟ್ಟು ಹೆಚ್ಚಿಸಿಕೊಂಡದ್ದು ಈ ರಾಷ್ಟ್ರಗಳ ಹೆಗ್ಗಳಿಕೆ.[]

ಮುನ್ನೋಟ

[ಬದಲಾಯಿಸಿ]

ಸರಿಸುಮಾರು ೧೯೫೦ರ ಹೊತ್ತಿಗೆ ತೈವಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಹಾಂಗ್ ಕಾಂಗ್ ಸ್ವಯಮಾಡಳಿತವನ್ನು ಪಡೆದುಕೊಂಡವು. ಆಮದು ನಿರ್ಬಂಧ, ದೇಶೀ ಉದ್ಯಮಗಳಿಗೆ ಆದ್ಯತೆ, ತಂತ್ರಜ್ಞಾನದ ಆಳವಡಿಕೆಯಲ್ಲಿ ಹಿಂಜರಿಕೆ ಹೀಗೆ ತೃತೀಯ ಜಗತ್ತಿನ ದೇಶಗಳ ಕಟ್ಟುಪಾಡುಗಳನ್ನು ಈ ನಾಲ್ಕು ರಾಷ್ಟ್ರಗಳು ಪಾಲಿಸಲಿಲ್ಲ.[] ಮುಕ್ತ ಮಾರುಕಟ್ಟೆಯ ನಿಯಮಗಳು, ಮೂಲತಃ ರಫ಼್ಹ್ತು ಆಧಾರಿತ ಉದ್ದಿಮೆಗಳು, ಕಟ್ಟುನಿಟ್ಟಿನ ಹಣಕಾಸು ನೀತಿ, ಪ್ರಾಥಮಿಕ ಶಿಕ್ಷಣ ಇವುಗಳಿಗೆ ಆದ್ಯತೆಯನ್ನು ಈ ದೇಶಗಳ ಸರ್ಕಾರಗಳು ನೀಡಿದವು. ಮಾನವ ಸಂಪನ್ಮೂಲದಲ್ಲಿ (ಶಿಕ್ಷಣ, ತರಬೇತಿ ಮತ್ತು ಕಾರ್ಯದಕ್ಷತೆ (Productivity)) ಎಂಬ ಮೂರು ಅಂಶಗಳಿಗೆ ಒತ್ತು ನೀಡಲಾಯಿತು.[] ಆಡಳಿತದಲ್ಲಿ ಸ್ಥಿರತೆ, ಏಕಮುಖೀ ನಿಯಮಗಳನ್ನು ಪಾಲಿಸಿದ್ದು, ಉದ್ಯಮ ವಲಯದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲದ್ದು, ಖಾಸಗಿ ವಲಯದ ಉದ್ಯಮಗಳಿಗೆ ಯಾವುದೇ ಬಗೆಯ ಕಟ್ಟುಪಾಡುಗಳನ್ನು ವಿಧಿಸದಿದ್ದದ್ದು ಮತ್ತು ಸರಳ ತೆರಿಗೆ ನಿಯಮಗಳು ಈ ನಾಲ್ಕೂ ರಾಷ್ಟ್ರಗಳ ಆರ್ಥಿಕವಿಧಿಗಳ ಮೂಲಲಕ್ಷಣಗಳು.[] ಇವುಗಳ ಬಲದಿಂದಲೇ ೧೯೯೭ರ ಏಷ್ಯನ್ ಆರ್ಥಿಕ ಬಿಕ್ಕಟ್ಟಿನ ನಂತರ ಕೂಡಾ ಈ ರಾಷ್ಟ್ರಗಳು ತಮ್ಮ ತಲಾವಾರು ಬೆಳವಣಿಗೆಯನ್ನು ಮೂರುಪಟ್ಟು ವೃದ್ಧಿ ಮಾಡಿಕೊಂಡಿವೆ.[]

ಹಾಂಗ್ ಕಾಂಗ್

[ಬದಲಾಯಿಸಿ]

೧೯೫೦ ದಶಕದಲ್ಲಿ ರಫ಼್ತು ಆಧಾರಿತ ಜವಳಿ-ಮಳಿಗೆ ಉದ್ಯಮಗಳು ಹಾಂಗ್ ಕಾಂಗ್ ನಲ್ಲಿ ಹೆಚ್ಚು ಕ್ರಿಯಾಶೀಲವಾಯಿತು.<br> ೧೯೬೦ರ ಹೊತ್ತಿಗೆ ಜವಳಿ, ಎಲೆಕ್ಟ್ರಾನಿಕ್ಸ್ ಮತ್ತು ಪ್ಲಾಸ್ಟಿಕ್ ಉದ್ಯಮಗಳು ರಫ಼್ತು ಉದ್ದೇಶಕ್ಕೆ ಹಾಂಗ್ ಕಾಂಗ್ ನಲ್ಲಿ ನೆಲೆಗೊಂಡವು. <br>ವಿದೇಶೀ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ಮತ್ತು ತೆರಿಗೆ ವಿನಾಯಿತಿಯನ್ನು ಈಯಲಾಯಿತು. ಔದ್ಯಮಿಕ ಬೆಳವಣಿಗೆಗೆ ಸಹಕಾರವಾಗಲಿಕ್ಕೆ ತರಬೇತಿ ಕೌಶಲ ತರಗತಿಗಳನ್ನು ತೆರೆಯಲಾಯಿತು. ಇದರ ಫಲವಾಗಿ ಕಾರ್ಮಿಕರು ಜವಳಿ ಉದ್ಯಮದಿಂದ ಹೆಚ್ಚು ಸಂಬಳ ನೀಡುವ ಎಲೆಕ್ಟ್ರಾನಿಕ್ಸ್ ಮತ್ತು ಪ್ಲಾಸ್ಟಿಕ್ ಉದ್ಯಮಗಳಿಗೆ ಜಿಗಿಯಲು ಅನುವಾದರು.[] ರಾಷ್ಟ್ರೀಯ ವಿತ್ತೀಯ ಕೊರತೆಯನ್ನು ಹತೋಟಿಯಲ್ಲಿಟ್ಟದ್ದು, ದೇಶೀಯ ಉಳಿತಾಯ ಶೇ ೩೫ಕ್ಕಿಂತಲೂ ಹೆಚ್ಚು ಇದ್ದ ಕಾರಣ ದೇಶದ ಹೊರಗಿನಿಂದ ಸಾಲದ ಅಗತ್ಯ ಬೀಳದಿದ್ದದ್ದು ಮತ್ತು ದೇಶೀ ಕರೆನ್ಸಿಯ ಅಪಮೌಲ್ಯಗಳ ಮೂಲಕ ಗಣನೀಯ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಅನುವಾಯಿತು.

೧೯೬೫ರ ಹೊತ್ತಿಗೆ ಹಾಂಗ್ ಕಾಂಗ್ ಸಂಪೂರ್ಣ ಸಾಕ್ಷರವಾಯಿತು. ಇದರ ಫಲವಾಗಿ ಕಾರ್ಮಿಕ ವರ್ಗ, ಹೆಚ್ಚು ಬುದ್ಧಿಮತ್ತೆ ಬೇಡುವ ಕೈಗಾರಿಕೆಗಳಲ್ಲಿಯೂ ಉದ್ಯೋಗ ಹೊಂದಲು ಅನುಕೂಲವಾಯಿತು. ಮಹಿಳಾ ಸಾಕ್ಷರತೆಯೂ ಹೆಚ್ಚಾದ ಕಾರಣ ಕುಟುಂಬಯೋಜನೆ ಯಶಸ್ವಿಯಾಗಲು ಮತ್ತು ಜನಸಂಖ್ಯಾಸ್ಫೋಟ ತಡೆಯಲು ಅನುವಾಯಿತು.

ದಕ್ಷಿಣ ಕೊರಿಯಾ

[ಬದಲಾಯಿಸಿ]

೧೯೬೫ರ ಒಳಗೆ ದಕ್ಷಿಣ ಕೊರಿಯಾ ಸಂಪೂರ್ಣ ಸಾಕ್ಷರನಾಡಾಯಿತು.[] ವಿಯೆಟ್ನಾಂ ಯುದ್ಧದ ಸಮಯದಲ್ಲಿ ೩ ಲಕ್ಷಕ್ಕಿಂತಲೂ ಅಧಿಕ ದಕ್ಷಿಣ ಕೊರಿಯಾ ಯೋಧರು ಅಮೇರಿಕದ ಪರವಾಗಿ ಹೋರಾಡಿದರು. []ಇದರ ಫಲವಾಗಿ ಅಮೇರಿಕ ವಿಫುಲವಾಗಿ ತಂತ್ರಜ್ಞಾನದ ನೆರವು, ಬಂಡವಾಳ ಹೂಡಿಕೆ ಮತ್ತು ಔದ್ಯೋಗಿಕ ನೆರವನ್ನು ನೀಡಿತು. ಬಿಲಿಯನ್ ಗಟ್ಟಲೆ ನೆರವಿನ ಅನುಕೂಲ ದಕ್ಷಿಣ ಕೊರಿಯಾದ ಅಭಿವೃದ್ದಿಗೆ ಹೆಚ್ಚಿನ ಮಟ್ಟಿಗೆ ಸಹಾಯವಾಯಿತು.

ಸಿಂಗಾಪುರದಂತೆ ರಫ಼್ತು ಆಧಾರಿತ ಉದ್ಯಮಗಳಿಗೆ ದಕ್ಷಿಣ ಕೊರಿಯಾ ಸರ್ಕಾರ ಹೆಚ್ಚು ತೆರಿಗೆ ವಿನಾಯಿತಿಯನ್ನು ನೀಡಿತು. ಸರ್ಕಾರಿ ಅನುವು ಮತ್ತು ಸವಲತ್ತುಗಳು ಖಾಸಗೀ ಕಂಪನಿಗಳಿಗೆ ಯಥೇಚ್ಚವಾಗಿ ನೀಡಲಾಯಿತು. []ಇದರ ಫಲವಾಗಿ ದಕ್ಷಿಣ ಕೊರಿಯಾದ ಕಂಪನಿಗಳಿಗೆ ದೇಶೀ ಮಾರುಕಟ್ಟೆಯಲ್ಲಿ ಜಯ ಸಾಧಿಸಿ, ತದ್ನಂತರ ವಿದೇಶಿ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಾಧ್ಯವಾಯಿತು. ದಕ್ಷಿಣ ಕೊರಿಯಾದ ಕಂಪನಿಗಳಾದ ಸ್ಯಾಂಸಂಗ್, ಹ್ಯುಂಡೈ ಮುಂತಾದುವು ಅಮೇರಿಕದ ಮಾರುಕಟ್ಟೆಯನ್ನು ಪ್ರವೇಶಿಸಿ, ಅಲ್ಲಿನ ಉತ್ಪಾದನೆ, ಬಳಕೆದಾರರ ಸೇವೆ, ತೆರಿಗೆ, ಜಾಹೀರಾತು ಇವೇ ಮುಂತಾದ ಕ್ಷೇತ್ರಗಳ ಉತ್ತಮ ಕ್ರಮ(Best Practices) ಗಳನ್ನು ಅಳವಡಿಸಿಕೊಂಡವು. ಇಂದು ಇಂತಹ ಉದ್ದಿಮೆಗಳನ್ನು ದಕ್ಷಿಣ ಕೊರಿಯಾದ ಚಾವ್ ಬೊಲ್ ಗಳು ಎಂದೇ ಕರೆಯಲಾಗುತ್ತದೆ. ದಕ್ಷಿಣ ಕೊರಿಯಾದ ಬಹುತೇಕ ಉದ್ದಿಮೆಗಳು, ಬಹುರಾಷ್ಟ್ರೀಯ ಕಂಪನಿಗಳಾಗಿ ಮಾರ್ಪಟ್ಟಿವೆ.

ತೈವಾನ್

[ಬದಲಾಯಿಸಿ]

೧೯೪೯ರಲ್ಲಿ ಚೀನಾದಲ್ಲಿ ಆಂತರಿಕ ಯುದ್ಧದಲ್ಲಿ ಕಮ್ಮ್ಯೂನಿಸ್ಟರು ಗೆಲುವು ಸಾಧಿಸಿದ ಮೇಲೆ ತೈವಾನಿಗೆ ಪಲಾಯನ ಮಾಡಿದ ಕುವಾಮಿನ್ ಟಾಂಗ್ ಆಡಳಿತದ ರೂವಾರಿ ಚೆನ್ ಯೀ ಭೂಸುಧಾರಣೆ ಕಾಯ್ದೆಯನ್ನು ಮತ್ತು ಕರೆನ್ಸಿ ಸುಧಾರಣೆಗಳನ್ನು ತಂದರು. ಮಾರ್ಷಲ್ ಪೆರಿನ್ ಜಪಾನಿನಲ್ಲಿ ತಂದ ಭೂಸುಧಾರಣೆಯ ಅನುಗುಣವಾಗಿ ಊಳಿಗಮಾನ್ಯ ಜಮೀನುದಾರಿ ಪದ್ಧತಿಯನ್ನು ಹಿಮ್ಮೆಟಿಸಿ, ಕೂಲಿಕಾರ್ಮಿಕರಿಗೆ ಜಮೀನು ಹಂಚಿಕೆ ಮಾಡಲಾಯಿತು. ಶ್ರಮದುಡಿಯೆಗೆ ಫಲವನ್ನು ತಾವೇ ಪಡೆಯಬಹುದು ಎಂಬುದನ್ನು ಕಂಡುಕೊಂಡ ಕೂಲಿಕಾರ್ಮಿಕರು ಶ್ರಮವಹಿಸಿ ದುಡಿದ ಕಾರಣ ಸುಭಿಕ್ಷವಾಗಿ ಕೃಷಿ ಚಟುವಟಿಕೆಗಳು ನಡೆದವು.[೧೦] ಚೀನಾದಿಂದ ಪಲಾಯನ ಮಾಡುವ ವೇಳೆ ೧೭೦ ಮಿಲಯನ್ ಅಮೇರಿಕನ್ ಡಾಲರ್ ಗಳಷ್ಟು ಮೊತ್ತದ ಮೊತ್ತವನ್ನು ಚಿನ್ನದ ಮೇಲೆ ಅವಲಂಬಿತವಾದ ನಗದು ವ್ಯವಸ್ಥೆಯನ್ನು ಆಚರಣೆಗೆ ತರಲಾಯಿತು. ಅಮೇರಿಕದ ಯು ಎಸ್ ಏಡ್ ಕಾರ್ಯಕ್ರಮದ ಅಡಿಯಲ್ಲಿ ಕೈಗಾರಿಕಾ ಸವಲತ್ತು, ಸಂಪರ್ಕ ಸಾಧನ ಮತ್ತು ಶೈಕ್ಷಣಿಕ ಅನುಕೂಲವನ್ನು ತೈವಾನ್ ದೇಶಕ್ಕೆ ವಿಸ್ತರಿಸಲಾಯಿತು.ಇದರ ಸದುಪಯೋಗ ಪಡೆದ ತೈವಾನ್ ರಫ಼್ಹ್ತು ಅಧಾರಿತ ಉದ್ಯಮಗಳನ್ನು ಹೆಚ್ಚುಹೆಚ್ಚಾಗಿ ಆರಂಬಿಸಿತು. [೧೧]೧೯೫೯ರಲ್ಲಿ ೧೯ ಅಂಶದ ಆರ್ಥಿಕ ಮತ್ತು ಹಣಕಾಸು ಸುಧಾರಣೆಗಳನ್ನು ಜಾರಿಗೆ ತರಲಾಯಿತು. ವಿದೇಶಿ ಬಂಡವಾಳ, ತಂತ್ರಜ್ಞಾನ ಅಳವಡಿಕೆ ಇವುಗಳಿಗೆ ಮುಕ್ತ ಅವಕಾಶವನ್ನು ಸರ್ಕಾರ ನೀಡಿತು. ಕಓಸಿಉಂಗ್, ವಾಂಗ್ ಹುವಾ ಮುಂತಾದೆಡೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತಲೆ ಎತ್ತಲು ಸಹಾಯವಾಯಿತು. ೧೯೬೫ರ ವೇಳೆಗೆ ತೈವಾನ್ ಸಂಪೂರ್ಣ ಸಾಕ್ಷರರಾಷ್ಟ್ರವಾಯಿತು.[೧೨] ಇದರ ಫಲವಾಗಿ ಕಾರ್ಮಿಕಕ್ಷಮತೆ ಮತ್ತು ಬುದ್ದಿಮತ್ತೆ ಹೆಚ್ಚಿ ಏಸರ್, ಕೊಬಿಯನ್, ಏಸಸ್ ಇವೇ ಮೊದಲಾದ ಎಲೆಕ್ಟ್ರಾನಿಕ್ಸ್ ಉದ್ಯಮಗಳು ಜಗತ್ತಿನ ಎಲ್ಲೆಡೆ ತಮ್ಮ ಉತ್ಪನ್ನಗಳನ್ನು ಮಾರಲಿಕ್ಕೆ ಶುರುವಿಟ್ಟವು.[೧೩] ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯತ್ವವನ್ನು ಪಡೆದು ತೈವಾನ್ ಇನ್ನೂ ಹೆಚ್ಚಿನ ಮಟ್ಟಿನ ಆರ್ಥಿಕ ಸ್ವಾಯತ್ತತೆ ಪಡೆದವು[೧೪] ಪೈಪೋಟಿಯನ್ನು ಎದುರಿಸಲು ಗುಣಮಟ್ಟದ ವೃದ್ಧಿ ಮತ್ತು ಬಳಕೆದಾರರ ಸೇವಾಕಾಯ್ದೆಗಳನ್ನು ಸಶಕ್ತವಾಗಿ ಜಾರಿಗೆ ತಂದವು. ಇಂದು ಇವೆಲ್ಲವೂ ಬಹುರಾಷ್ಟ್ರೀಯ ಕಂಪನಿಗಳಾಗಿ ತಮ್ಮ ಬಹುಪಾಲು ಆದಾಯವನ್ನು ತೈವಾನಿನಿಂದ ಹೊರಗೆ ಸಂಪಾದಿಸುತ್ತವೆ.

ಸಿಂಗಾಪುರ

[ಬದಲಾಯಿಸಿ]

೧೯೬೫ರ ಮುನ್ನವೇ ಸಿಂಗಾಪುರ ಸಂಪೂರ್ಣ ಸಾಕ್ಷರದೇಶವಾಯಿತು. ಹಡಗು ಉದ್ದಿಮೆ, ಹಣಕಾಸು ಸೇವೆ, ಪೆಟ್ರೋಲ್ ರಿಫ಼ೈನರಿ, ಜವಳಿ ಮಳಿಗೆಗಳು, ಶಿಕ್ಷಣಸಂಸ್ಥೆಗಳು ಇವೇ ಮೊದಲಾದ ರಫ಼್ಹ್ತು ಆಧಾರಿತ ಉದ್ದಿಮೆಗಳಿಗೆ ಪ್ರೋತ್ಸಾಹವನ್ನು ಕೊಟ್ಟ ಲೀ ಕ್ವಾನ್ ಯೀವ್ ನೇತೃತ್ವದ ಸರ್ಕಾರ, ಯಾವುದೇ ಬಗೆಯ ಸರ್ಕಾರಿ ಉದ್ದಿಮೆಗಳನ್ನು ನಿರ್ವಹಿಸಲಿಲ್ಲ. ಸಿಂಗಾಪುರದ ಮೂಲದ ಯಾವುದೇ ಬಹುರಾಷ್ಟ್ರೀಯ ಕಂಪನಿ ಇಂದೂ ಕೂಡ ಇಲ್ಲ.[೧೫]


ಸಾಂಸ್ಕೃತಿಕ ಕಾರಣ

[ಬದಲಾಯಿಸಿ]

ಸಂತ ಕನ್ಫ಼್ಯೂಷಿಯಸ್ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡದ್ದು, ಶ್ರಮದ ದುಡಿಮೆ, ಶಿಕ್ಷಣ, ನಿಯಮನಿಷ್ಠೆ ಮತ್ತು ಕೌಟುಂಬಿಕ ಮೌಲ್ಯಗಳನ್ನು ಈ ನಾಲ್ಕು ರಾಷ್ಟ್ರಗಳ ಅಭಿವೃದ್ಧಿಗೆ ಕಾರಣ ಎಂಬುದೂ ಒಂದು ವಾದ.[೧೬] ಬಹುಕಾಲ ಸಿಂಗಾಪುರದ ಪ್ರಧಾನಿಯಾಗಿದ ಲೀ ಕ್ವಾನ್ ಯೀವ್ ಕೂಡಾ ಏಷ್ಯಾದ ಮೌಲ್ಯಗಳ ಕಾರಣದಿಂದಲೇ ಈ ಮಟ್ಟಿನ ಅಭಿವೃದ್ದಿಯನ್ನು ಸಾಧ್ಯವಾಯಿತು ಎಂದು ಬಣ್ಣಿಸುತ್ತಾರೆ. ಆದರೆ ಚೈನಾ ೧೮೫೦-೧೯೫೦ರವರೆಗೆ ಪ್ರಪಂಚದಿಂದ ವಿಮುಖವಾಗಲು ಮತ್ತು ಅಭಿವೃದ್ದಿ-ವಂಚಿತವಾಗಲಿಕ್ಕೆ ಕೂಡಾ ಕನ್ಫ಼್ಯೂಷಿಯಸ್ ವಿಚಾರಗಳು ಕಾರಣ ಎಂಬ ವಾದವನ್ನು ಮುಂದಿಡಲಾಗುತ್ತದೆ.[೧೭]


ಆರ್ಥಿಕತೆ

[ಬದಲಾಯಿಸಿ]
ರಾಷ್ಟ್ರ
ಅಂದಾಜು ಜಿಡಿಪಿ ಅನುಸಾರ ರಾಷ್ಟ್ರಗಳ ಪಟ್ಟಿ
ಮಿಲಿಯನ್ ಅಮೇರಿಕನ್ ಡಾಲರ್ ಗಳಲ್ಲಿ (೨೦೧೪)
ತಲಾವಾರು ಜಿಡಿಪಿ ಅನುಸಾರ ರಾಷ್ಟ್ರಗಳ ಪಟ್ಟಿ
ಅಮೇರಿಕನ್ ಡಾಲರ್ ಗಳಲ್ಲಿ (೨೦೧೪)
ಅಂದಾಜು ತಲಾವಾರು ಜಿಡಿಪಿ ಅನುಸಾರ ರಾಷ್ಟ್ರಗಳ ಪಟ್ಟಿ
ಅಮೇರಿಕನ್ ಡಾಲರ್ ಗಳಲ್ಲಿ(೨೦೧೫)
ಅಂದಾಜು ತಲಾವಾರು ಜಿಡಿಪಿ /ಬಂಡವಾಳದ ಅನುಸಾರ ರಾಷ್ಟ್ರಗಳ ಪಟ್ಟಿ
ಅಮೇರಿಕನ್ ಡಾಲರ್ ಗಳಲ್ಲಿ(೨೦೧೪)
ಅಂತರ್ರಾಷ್ಟ್ರೀಯ ವ್ಯಾಪಾರ ವಹಿವಾಟು ಅನುಸಾರ ರಾಷ್ಟ್ರಗಳ ಪಟ್ಟಿ
ಅಮೇರಿಕನ್ ಡಾಲರ್ ಗಳಲ್ಲಿ(೨೦೧೪)
ರಫ಼್ಹ್ತು/ಆಮದು ಅನುಸಾರ ರಾಷ್ಟ್ರಗಳ ಪಟ್ಟಿ
ಮಿಲಿಯನ್ ಅಮೇರಿಕನ್ ಡಾಲರ್ ಗಳಲ್ಲಿ (೨೦೧೪)
ಆಮದು ಅನುಸಾರ ರಾಷ್ಟ್ರಗಳ ಪಟ್ಟಿ
ಮಿಲಿಯನ್ ಅಮೇರಿಕನ್ ಡಾಲರ್ ಗಳಲ್ಲಿ(೨೦೧೪)
ಹಾಂಗ್ ಕಾಂಗ್ ೨೯೦,೮೯೬ ೪೦೦,೩೬೨ ೪೨,೦೯೭ ೫೫,೦೯೭ ೧,೦೮೮.೪ ೫೧೯,೨೦೦ ೫೬೦,೨೦೦
ಸಿಂಗಾಪುರ ೩೦೭,೮೭೨ ೪೫೪,೩೪೬ ೫೩,೨೨೪ ೮೩,೦೬೬ ೯೨೪.೬ ೪೩೭,೧೦೦ ೩೭೫,೫೦೦
ದಕ್ಷಿಣ ಕೊರಿಯಾ ೧,೪೧೦,೩೮೩ ೧,೭೮೩,೯೫೦ ೨೭,೫೧೩ ೩೫,೩೭೯ ೧,೧೭೦.೯ ೫೭೨,೩೦೦ ೫೪೨,೯೦೦
ತೈವಾನ್ ೫೨೯,೫೯೭ ೧,೦೭೮,೭೯೨ ೨೨,೦೮೩ ೪೬,೦೩೬ ೫೯೫.೫ ೩೧೧,೩೦೦ ೨೭೭,೫೦೦

ವಿಶ್ವದ ಎಲ್ಲಾ ಮಾಧ್ಯಮಗಳು ಏಷ್ಯನ್ ಹುಲಿಗಳ ಸಾಧನೆಯನ್ನು ಕೊಂಡಾಡಿವೆ.[೧೮]

ಉಲ್ಲೇಖಗಳು

[ಬದಲಾಯಿಸಿ]
  1. www.investopedia.com/terms/f/four-asian-tigers.asp
  2. developmentandglobalisation.weebly.com/the-asian-tigers.html
  3. https://books.google.com/books/about/The_East_Asian_Development_Experience.html?id=nSqXpDiQ4ggC&redir_esc=y
  4. "ಆರ್ಕೈವ್ ನಕಲು" (PDF). Archived from the original (PDF) on 2012-04-26. Retrieved 2016-12-02.
  5. http://search.proquest.com/docview/223983240?accountid=14656
  6. http://eh.net/encyclopedia/economic-history-of-hong-kong/
  7. https://web.archive.org/web/20090422054358/http://www.korea.net/news/news/newsView.asp?serial_no=20080301004&part=103
  8. https://en.wikipedia.org/wiki/South_Korea_in_the_Vietnam_War
  9. "ಆರ್ಕೈವ್ ನಕಲು". Archived from the original on 2008-12-16. Retrieved 2016-12-02.
  10. http://www.historycooperative.org/journals/lab/85/minns.html#FOOT16
  11. "ಆರ್ಕೈವ್ ನಕಲು". Archived from the original on 2006-12-30. Retrieved 2016-12-02.
  12. http://www.androidauthority.com/taiwan-next-billion-dollar-app-market-700239/
  13. scholar.harvard.edu/barro/files/98_0427_easiantigers_bw.pdf
  14. "ಆರ್ಕೈವ್ ನಕಲು". Archived from the original on 2012-02-10. Retrieved 2016-12-02.
  15. http://www.forbes.com/sites/forbesasia/2014/07/10/what-makes-an-asian-tiger-singapores-unlikely-economic-success-lies-in-its-history/
  16. https://books.google.com/books?id=7NH4Jeh5QG4C&pg=PA227
  17. https://books.google.com/books?id=rxzJoskK_rwC&pg=PA107
  18. http://www.economist.com/blogs/graphicdetail/2012/04/daily-chart-16