ನಾನಾಜಿ ದೇಶಮುಖ್

ವಿಕಿಪೀಡಿಯ ಇಂದ
Jump to navigation Jump to search

ಅಂಬಾದಾಸ್ ಅಮೃತರಾವ್ (ನಾನಾಜಿ) ದೇಶಮುಖ್ (ಅಕ್ಟೋಬರ್ ೧೧, ೧೯೧೬ - ಫೆಬ್ರುವರಿ ೨೭, ೨೦೧೦) ಇವರು ಭಾರತ ದೇಶದ ಒಬ್ಬ ಅತ್ಯುನ್ನತ ಸಮಾಜಸೇವಕರಾಗಿದ್ದರು. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಅಮ್ರಿಥ್‍ರಾವ್ ಧೆಶ್‍ಮುಖ್ ಮತ್ತು ತಾಯಿ ರಾಜಬಾಯ್ ಅಮ್ರಿಥ್‍ರಾವ್ ಧೆಷ್‍ಮುಖ್. ಆತ್ಮೀಯತೆಯಿಂದ ನಾನಾಜಿ ಎಂದು ಕರೆಯಲಾಗುವ ಇವರು ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಸಬಲೀಕರಣದ ಕ್ಷೇತ್ರಗಳಲ್ಲಿ ಆದರ್ಶಪ್ರಾಯ ಕೆಲಸವನ್ನು ಮಾಡಿದ್ದಾರೆ. ಈ ಕಾರ್ಯಕ್ಕಾಗಿ ಇವರಿಗೆ ಭಾರತ ಸರಕಾರವು ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನಾನಾಜಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕರಾಗಿದ್ದರು. ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ಇವರು ರಾಜ್ಯಸಭೆಯ ಮಾನ್ಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.[೧]

ಆಕರಗಳು[ಬದಲಾಯಿಸಿ]