ವಿಷಯಕ್ಕೆ ಹೋಗು

ನಾಗಂದಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೆಲ್ಫು ಅಥವಾ ನೇತಾಡುವ ವಸ್ತುಗಳಿಗಾಗಿ ನಾಗಂದಿಗೆ

ನಾಗಂದಿಗೆಯು (ಚಾಚುಪೀಠ) ಒಂದು ವಾಸ್ತುಶಾಸ್ತ್ರೀಯ ಘಟಕವಾಗಿರುತ್ತದೆ: ರಾಚನಿಕ ಅಥವಾ ಅಲಂಕಾರಿಕ ಸದಸ್ಯವಾಗಿರುತ್ತದೆ. ಇದನ್ನು ಕಟ್ಟಿಗೆ, ಕಲ್ಲು, ಪ್ಲಾಸ್ಟರ್, ಲೋಹ ಅಥವಾ ಇತರ ಮಾಧ್ಯಮಗಳಿಂದ ತಯಾರಿಸಬಹುದು. ಇದು ಒಂದು ಗೋಡೆಯಿಂದ ಮುಂದೆ ಚಾಚಿಕೊಂಡಿರುತ್ತದೆ, ಸಾಮಾನ್ಯವಾಗಿ ತೂಕವನ್ನು ಹೊರಲು ಮತ್ತು ಕೆಲವೊಮ್ಮೆ "...ಒಂದು ಕೋನವನ್ನು ಬಲಪಡಿಸಲು".[][] ಕಾರ್ಬೆಲ್ಲು ಅಥವಾ ಆನುದಂಡೆಯು ನಾಗಂದಿಗೆಗಳ ಬಗೆಗಳಾಗಿರುತ್ತವೆ.

ಯಂತ್ರ ಶಿಲ್ಪವಿಜ್ಞಾನದಲ್ಲಿ ನಾಗಂದಿಗೆಯು ಒಂದು ಭಾಗವನ್ನು ಮತ್ತೊಂದು, ಸಾಮಾನ್ಯವಾಗಿ ಹೆಚ್ಚು ದೊಡ್ಡದಾದ ಭಾಗಕ್ಕೆ ಜೋಡಿಸುವ ಯಾವುದೇ ಮಧ್ಯದ ಘಟಕವಾಗಿರುತ್ತದೆ. ನಾಗಂದಿಗೆಗಳು ಆಕಾರದಲ್ಲಿ ವ್ಯಾಪಕವಾಗಿ ಬದಲಾಗುತ್ತವೆ, ಆದರೆ ಒಂದು ಮಾದರಿ ನಾಗಂದಿಗೆಯು ಶೆಲ್ಫನ್ನು (ಸಣ್ಣದಾದ ಘಟಕ) ಗೋಡೆಗೆ (ದೊಡ್ಡ ಘಟಕ) ಜೋಡಿಸುವ L-ಆಕಾರದ ಲೋಹದ ತುಂಡಾಗಿರುತ್ತದೆ: ಅದರ ಲಂಬ ಬಾಹುವು (ಸಾಮಾನ್ಯವಾಗಿ ದೊಡ್ಡದಾದ) ಒಂದು ಘಟಕಕ್ಕೆ ಭದ್ರಪಡಿಸಲಾಗಿರುತ್ತದೆ, ಮತ್ತು ಅದರ ಅಡ್ಡಡ್ಡವಾಗಿರುವ ಬಾಹುವು ಹೊರಚಾಚಿಕೊಂಡು ಮತ್ತೊಂದು (ಸಾಮಾನ್ಯವಾಗಿ ಸಣ್ಣದಾದ) ಘಟಕವನ್ನು ಹೊರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Bracket | Definition of Bracket by Merriam-Webster". Merriam-Webster.com. Retrieved 13 July 2017.
  2. "Brass,Bronze,Iron Hand rail Brackets". Archived from the original on 23 February 2005. Retrieved 19 June 2008.