ವಿಷಯಕ್ಕೆ ಹೋಗು

ನವಾಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನವಾಬ ಎಂದರೆ ರಾಜ. ಈ ಪದವು ಹಲವುವೇಳೆ ದಕ್ಷಿಣ ಏಷ್ಯಾದ ಒಂದು ರಾಜ್ಯದ ಸಾರ್ವಭೌಮ ಆಳ್ವಿಕೆಗಾರನನ್ನು ಸೂಚಿಸುತ್ತದೆ. ಇವನು ಸಾಮ್ರಾಟನ ಕೈಕೆಳಗೆ ಕೆಲಸಮಾಡುತ್ತಿದ್ದನು.[] ಮುಂಚಿನ ಕಾಲದಲ್ಲಿ ಈ ಬಿರುದನ್ನು ಆಳುತ್ತಿದ್ದ ಮುಘಲ್ ಸಾಮ್ರಾಟನು ಮೊಘಲ್ ಸಾಮ್ರಾಜ್ಯಕ್ಕೆ ನಿಷ್ಠಾವಂತವಾದ ಭಾರತೀಯ ಉಪಖಂಡದಲ್ಲಿನ ವಿಭಾಗಗಳು ಅಥವಾ ದೇಶಿ ರಾಜ್ಯಗಳ ಅರೆಸ್ವತಂತ್ರ ಮುಸ್ಲಿಮ್ ರಾಜರಿಗೆ ಸ್ಥಿರೀಕರಿಸಿ ನೀಡುತ್ತಿದ್ದನು, ಉದಾಹರಣೆಗೆ ಬಂಗಾಳದ ನವಾಬರು. ಈ ಬಿರುದು ದಕ್ಷಿಣ ಏಷ್ಯಾದ ಮುಸ್ಲಿಮ್ ರಾಜರುಗಳಲ್ಲಿ ಸಾಮಾನ್ಯವಾಗಿದೆ ಮತ್ತು ಮಹಾರಾಜ ಪದವಿಗೆ ಸಮಾನವಾಗಿದೆ. ಆದರೆ ಈ ಪದವಿಯು ಕೇವಲ ಮುಸ್ಲಿಮರಿಗೆ ಸೀಮಿತವಾಗಿಲ್ಲ.

"ನವಾಬ್" ಪದವು ಸಾಮಾನ್ಯವಾಗಿ ಪುರುಷ ರಾಜರನ್ನು ಸೂಚಿಸುತ್ತದೆ; "ಬೇಗಮ್" ಅಥವಾ "ನವಾಬ್ ಬೇಗಮ್" ಸ್ತ್ರೀ ಸಮಾನ ಪದವಾಗಿದೆ. ಮುಘಲ್ ಸಾಮ್ರಾಟನ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಜೊತೆಗೆ ಒಂದು ನಿರ್ದಿಷ್ಟ ಪ್ರಾಂತ್ಯದ ಆಡಳಿತವು ನವಾಬನ ಮುಖ್ಯ ಕರ್ತವ್ಯವಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. Sir Robert, Lethbridge (1893). The Golden Handbook of India. p. x.
"https://kn.wikipedia.org/w/index.php?title=ನವಾಬ&oldid=978547" ಇಂದ ಪಡೆಯಲ್ಪಟ್ಟಿದೆ