ಧೂಳುಜಾಡಿನ ರೇಸಿಂಗ್(ಓಟದ ಸ್ಪರ್ಧೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವು ವಾಹನಗಳ ಓಟಸ್ಪರ್ಧೆ(ರೇಸಿಂಗ್)ಗೆ ಸೀಮಿತವಾಗಿದೆ; ಮೋಟರ್ ಸೈಕಲ್ ಗಳು, ಕುದುರೆಗಳು, ಮತ್ತು ನಾಯಿಗಳ ರೇಸ್ ಗಳನ್ನೂ ಈ ಧೂಳುಜಾಡುಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.

ಟೆಂಪ್ಲೇಟು:Dtracing ಧೂಳುಜಾಡಿನ ರೇಸಿಂಗ್ ಅಂಡಾಕಾರದ ಜಾಡುಗಳಲ್ಲಿ ಪ್ರದರ್ಶಿತವಾಗುವ ಒಂದು ವಿಧವಾದ ಆಟೋ ರೇಸಿಂಗ್ (ವಾಹನ ಓಟ ಸ್ಪರ್ಧೆ) ಆಗಿದೆ. ಈ ಕ್ರೀಡೆಯು ಯುನೈಟೆಡ್ ಸ್ಟೇಟ್ಸ್ ನಲ್ಲಿ ಮೊದಲನೆಯ ಮಹಾಯುದ್ಧಕ್ಕೂ ಮುನ್ನ ಆರಂಭವಾಯಿತು ಹಾಗೂ ೧೯೨೦ ಮತ್ತು ೧೯೩೦ ರ ದಶಕಗಳಲ್ಲಿ ಎಲ್ಲೆಡೆಯೂ ವ್ಯಾಪಕವಾಗಿ ಹರಡಿತು. ಎರಡು ವಿಭಿನ್ನ ರೀತಿಯ ರೇಸ್ ಕಾರ್ ಗಳು ಇಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತಿದ್ದವು - ಮುಕ್ತಚಕ್ರಗಳುಳ್ಳ ರೇಸರ್ ಗಳು ಈಶಾನ್ಯ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಮತ್ತು ಸ್ಟಾಕ್ ಕಾರ್ ಗಳು ದಕ್ಷಿಣ ಪ್ರಾಂತ್ಯಗಳಲ್ಲಿ. ಮುಕ್ತಚಕ್ರದ ರೇಸ್ ಕಾರ್ ಗಳು ರೇಸ್ ನ ಉದ್ದೇಶಕ್ಕಾಗಿಯೇ ತಯಾರಿಸಲ್ಪಟ್ಟ ಕಾರ್ ಗಳು, ಸ್ಟಾಕ್ ಕಾರ್ ಗಳು (ಇವನ್ನು ಫೆಂಡರ್ಡ್ ಕಾರ್ ಗಳು ಎಂದೂ ಕರೆಯುತ್ತಾರೆ) ಉದ್ದೇಶ-ನಿರ್ಮಿತವಾದ ರೇಸ್ ಕಾರ್ ಗಳೂ ಆಗಬಹುದು ಅಥವಾ ಮಾಮೂಲಿ ರಸ್ತೆಯಲ್ಲಿ ಬಳಸುವ ಕಾರ್ ಗಳೇ ಹಲವಾರು ರೀತಿಯಲ್ಲಿ ರೇಸ್ ಉದ್ದೇಶಕ್ಕಾಗಿ ಮಾರ್ಪಡಿಸಲ್ಪಟ್ಟ ಕಾರ್ ಗಳಾಗಬಹುದು.

ಧೂಳು ಜಾಡಿನ ರೇಸಿಂಗ್ ಯುನೈಟೆಡ್ ಸ್ಟೇಟ್ಸ್ ನ ಏಕೈಕ, ಬಹು ಪ್ರಚಲಿತವಾದ ವಾಹನ ರೇಸಿಂಗ್ ನ ಕ್ರಮವಾಗಿದೆ. ಇಲ್ಲಿ ಸ್ಥಳೀಯವಾಗಿ ಮತ್ತು ಪ್ರಾದೇಶಿಕವಾಗಿ ನೂರಾರು ಧೂಳುಜಾಡುಗಳಿವೆ; ಒಂದು ಅಂದಾಜಿನ ಪ್ರಕಾರ ಈ ಸಂಖ್ಯೆ ೧೫೦೦. ಈ ಕ್ರೀಡೆಯು ಆಸ್ಟ್ರೇಲಿಯಾ ಮತ್ತು ಕೆನಡಾಗಳಲ್ಲೂ ಜನಪ್ರಿಯವಾಗಿದೆ. ರೇಸಿಂಗ್ ಋತುವಿನಲ್ಲಿ ಹಲವಾರು ಕಾರ್ ಗಳು ಟಾರ್ ಲೇಪಿತ ಸಣ್ಣ ಜಾಡುಗಳಲ್ಲಿಯೂ/ರಸ್ತೆಗಳಲ್ಲಿಯೂ ಓಡುತ್ತವೆ.

ರೇಸ್ ನ ಜಾಡು[ಬದಲಾಯಿಸಿ]

ಧೂಳು ಆಧುನಿಕ ನಮೂನೆ ದರ್ಜೆಯ ಚಾಲಕರು ತಿರುವುಗಳ ಸುತ್ತಲೂ ಧೂಳುಜಾಡಿನ ಕಾರ್ ಚಾಲಕರು ಹೇಗೆ ತಮ್ಮ ಕಾರ್ ಗಳನ್ನು ಜಾರಿಸುತ್ತಾ ಓಡಿಸುವರು ಎಂದು ತೋರಿಸುತ್ತಿದ್ದಾರೆ.ವಿವಿಧ ಚಾಲಕರು ತಿರುವಿನ ವಿಭಿನ್ನ ಕೇಂದ್ರಗಳಲ್ಲಿ ಕಾರ್ ಗಳು ಯಾವ ಕೋನದಲ್ಲಿರುತ್ತವೆ ಎಂಬುದನ್ನು ತೋರಿಸುತ್ತಿದ್ದಾರೆ.

ಉತ್ತರ ಅಮೆರಿಕಾ[ಬದಲಾಯಿಸಿ]

ಸಾಮಾನ್ಯವಾಗಿ ಎಲ್ಲಾ ಜಾಡುಗಳೂ ಅಂಡಾಕಾರವಾಗಿದ್ದು, ಒಂದು ಮೈಲಿಗಿಂತಲೂ (೧.೬ ಕಿಲೋಮೀಟರ್ ಗಳು) ಕಡಿಮೆ ಉದ್ದವಿರುತ್ತವೆ; ಬಹುತೇಕ ಜಾಡುಗಳು ½ ಮೈಲಿ (೮೦೪ ಮೀ.) ಅಥವಾ ಅದಕ್ಕೂ ಕಡಿಮೆ ಉದ್ದ ಇರುತ್ತವೆ. ಯು.ಎಸ್. ನಲ್ಲಿ ಕಾಣಬರುವ ಕ್ರಮಶಃ ಹೆಚ್ಚಿನ ಉದ್ದದ ಜಾಡುಗಳ ಅಳತೆ ಹೀಗಿದೆ; ½ ಮೈಲಿ, ⅜ ಮೈಲಿ (೬೦೩ ಮೀ.), ⅓ ಮೈಲಿ (೫೩೬ ಮೀ.), ¼ ಮೈಲಿ (೪೦೨ ಮೀ.), ಮತ್ತು ⅛ ಮೈಲಿ (೨೦೧ ಮೀ.). ಜಾಡುಗಳು ಉದ್ದವಾಗಿದ್ದಷ್ಟೂ ರೇಸ್ ಕಾರ್ ಗಳು ಹೆಚ್ಚಿನ ವೇಗದಲ್ಲಿ ಚಲಿಸಲು ಸಾಧ್ಯವಾಗುತ್ತದೆ ಹಾಗೂ ಕಾರ್ ಗಳ ನಡುವಿನ ಅಂತರವೂ ಹೆಚ್ಚುತ್ತದೆ. ಅಂತರ ಹೆಚ್ಚಿದಂತೆ ಕಾರ್ ಗಳು ಪರಸ್ಪರ ಡಿಕ್ಕಿ ಹೊಡೆಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ, ಆದರೆ ಕಾರ್ ಗಳು ಕ್ರ್ಯಾಷ್ (ಗೋಡೆಗೋ, ಪರಸ್ಪರವೋ ಡಿಕ್ಕಿ ಹೊಡೆದಾಗ) ಆದಾಗ, ವೇಗ ಹೆಚ್ಚಾಗಿರುವುದರ ಕಾರಣ, ಹೆಚ್ಚು ಜಖಂ ಆಗುತ್ತವೆ ಮತ್ತು ಚಾಲಕರಿಗೆ ಗಾಯಗಳಾಗುವ ಸಾಧ್ಯತೆಗಳೂ ಹೆಚ್ಚುತ್ತವೆ.

ಜಾಡು ಯಾವುದೇ ಮಣ್ಣಿನದಾಗಿರಬಹುದಾದರೂ, ಜಿಗುಟುಮಣ್ಣಿನ ಜಾಡುಗಳನ್ನು ಹೆಚ್ಚಿನ ರೇಸರ್ ಗಳು ಇಷ್ಟ ಪಡುತ್ತಾರೆ. ಜಾಡಿನ ಮೇಲ್ವಿಚಾರಕರು ಸಾಮಾನ್ಯವಾಗಿ ಜಾಡು ಜಿಗುಟಾಗಿಯೇ ಇರುವಂತೆ ನೋಡಿಕೊಳ್ಳುತ್ತಾರೆ ಹಾಗೂ ಈ ಕಾರಣಕ್ಕಾಗಿಯೇ ನೆಲ ಒಣಗತೊಡಗಿದರೆ ನೀರನ್ನು ಸಿಂಪಡಿಸುತ್ತಾರೆ. ಕೆಲವು ವ್ಯವಸ್ಥಾಪಕರು ಸಮತಟ್ಟಾದ ಅಂಡಾಕಾರಗಳನ್ನು ನಿರ್ಮಿಸುತ್ತಾರೆ, ಆದರೆ ಹಲವಾರು ಜನರು ಏರುತಗ್ಗಿನ, ಇಕ್ಕೆಲಗಳನ್ನು ಭದ್ರಗೊಳಿಸಿದ ಜಾಡುಗಳನ್ನು ನಿರ್ಮಿಸುತ್ತಾರೆ.

ಯುನೈಟೆಡ್ ಕಿಂಗ್ಡಂ[ಬದಲಾಯಿಸಿ]

ಗ್ರೇಟ್ ಬ್ರಿಟನ್ ನಲ್ಲಿ ಅಂಡಾಕಾರದ ಜಾಡುಗಳು ಸಾಮಾನ್ಯವಾಗಿ ಹುಲ್ಲಿನಿಂದ ಆವೃತವಾಗಿದ್ದು, ಇವುಗಳ ಉದ್ದ ೪೦೦ ಮೀಟರ್ (¼ ಮೈಲಿ) ನಿಂದ ೮೦೦ ಮೀಟರ್ (½ ಮೈಲಿ)ಗಳಷ್ಟು ಇರುತ್ತದೆ. ರೇಸ್ ನಲ್ಲಿ ಹಲವಾರು ಅರ್ಹತಾ ಹೀಟ್ ಗಳು(ಅರ್ಹತೆಯನ್ನು ತೋರ್ಪಡಿಸುವ ಸುತ್ತುಗಳು - ಗೆದ್ದವರು ಮುಂದುವರಿಯುವರು) ಇದ್ದು, ಪ್ರತಿ ಸುತ್ತೂ ನಾಲ್ಕು ಬಾರಿ ಜಾಡನ್ನು ಕ್ರಮಿಸುವಂತಹುದಾಗಿರುತ್ತದೆ; ಈ ಸುತ್ತುಗಳಲ್ಲಿ ಗೆದ್ದವರು ಅಂತಿಮಹಂತ (ಫೈನಲ್ಸ್) ತಲುಪುತ್ತಾರೆ.

ಹುಲ್ಲಿನ ಜಾಡುಗಳು ಕೌಟುಂಬಿಕ ಕ್ರೀಡೆಗಳಿಗೆ ಅನುಗುಣವಾಗಿದ್ದು ಇವು ಎಲ್ಲಾ ವಯಸ್ಸಿನವರಿಗೆ ಹಾಗೂ ವಿಭಿನ್ನ ಹಂತದ ಸಾಮರ್ಥ್ಯಗಳಿರುವವರಿಗೆ ಅನುಕೂಲಕರವಾಗಿರುತ್ತದೆ. ಸ್ವಯಂಚಾಲಿತ ವಾಹನಗಳ ಮೇಲೆ ಕುಳಿತ ಆರು ವರ್ಷದ ಬಾಲಕ, ಬಾಲಕಿಯರು ಸಹ ಈ ಕ್ರೀಡೆಯಲ್ಲಿ ಸ್ಪರ್ಧಿಸಬಹುದು. ವಯಸ್ಕರ ಮಟ್ಟದ ವರೆಗೆ ಹಲವಾರು ವಯಸ್ಸಿನ ಮತ್ತು ಸಾಮರ್ಥ್ಯದ ಆಧಾರದ ಮೇಲಿನ ವರ್ಗಗಳಿವೆ. ಹುಲ್ಲಿನ ಜಾಡಿನ ವರ್ತುಲಗಳಲ್ಲಿ ಮೋಟೋಕ್ರಾಸ್ ಯಂತ್ರದ ವಾಹನಗಳನ್ನು ಚಲಾಯಿಸಲು ಅನುವಾಗುವ ವರ್ಗಗಳು ಯುವಕ ಹುಲ್ಲು ಜಾಡು ಸ್ಪರ್ಧೆಗಳಲ್ಲಿವೆ. ಯುವ ಸ್ಪರ್ಧಿಗಳಿಗೆ ಒಳ್ಳೆಯ ರೇಸಿಂಗ್ ಕಲ್ಪಿಸಲು ಯುವ ಸ್ಪರ್ಧೆಗಳನ್ನು ಎಚ್ಚರಿಕೆಯಿಂದ ನಿಭಾಯಿಸಲಾಗುತ್ತದೆ.

ಯೂರೋಪ್ ನ ಇತರ ಭಾಗಗಳು[ಬದಲಾಯಿಸಿ]

ಪ್ರಮುಖ ಯೂರೋಪ್ ನಲ್ಲಿ ಉದ್ದವಾದ ಜಾಡುಗಳನ್ನು ಹುಲ್ಲಿನ ಅಥವಾ ಮರಳಿನ ಮೇಲೆಯೇ ಬಳಸಬಹುದು ಹಾಗೂ ಇವುಗಳ ಉದ್ದ ೧ ಕಿಲೋಮೀಟರ್ (೦.೬೨೧ ಮೈಲಿಗಳು) ವರೆಗೆ ಇರಬಹುದು.

ರೇಸ್ ವಾಹನ[ಬದಲಾಯಿಸಿ]

ಒಂದು ಧೂಳುಜಾಡಿನ "ಸ್ಟ್ರೀಟ್ ಸ್ಟಾಕ್" ಲಕ್ಷಣದ ಕಾರ್ ಯುಎಸ್ಎ ಯಲ್ಲಿರುವ ವಿಸ್ಕಾನ್ಸಿನ್ ನಲ್ಲಿ ರೇಸ್ ಮಾಡುತ್ತಿರುವ ದೃಶ್ಯ.

ಪ್ರತಿ ರೇಸ್ ಜಾಡು ಅಥವಾ ಪ್ರಾಯೋಜಕ ಸಂಸ್ಥೆಯು ಒಂದು ನಿಯಮಗಳ ಪುಸ್ತಕವನ್ನು ಹೊಂದಿದ್ದು, ಅದರಲ್ಲಿ ರೇಸ್ ನಲ್ಲಿ ಭಾಗವಹಿಸುವ ಕಾರ್ ಗಳ ವರ್ಗಗಳು, ಅವುಗಳ ಅಳತೆ, ಎಂಜಿನ್ ಅಳತೆ, ಅಗತ್ಯವಾದ ಸಲಕರಣೆಗಳು, ನಿಷೇಧಗಳು, ಇತ್ಯಾದಿಗಳು ನಮೂದಿತವಾಗಿರುತ್ತವೆ. ಪ್ರತಿ ವರ್ಗಕ್ಕೆ ಬೇಕಾದ ಸಲಕರಣೆಗಳ ಬಗ್ಗೆ ಇತರ ರೇಸ್ ಜಾಡುಗಳು ಮತ್ತು ಸಂಘಗಳ ಸಹಮತದೊಂದಿಗೆ ನಿರ್ಧರಿಸಲಾಗುತ್ತದೆ; ಈ ರೀತಿಯ ಹೊಂದಾಣಿಕೆಯಿಂದ ಪ್ರತಿ ವಿಧದ ಕಾರ್ ಗೂ ವ್ಯಾಪಕವಾಗಿ ಲಭ್ಯವಾಗುವ ಜಾಡು/ಸ್ಥಳಗಳನ್ನು ನಿರ್ಧರಿಸಲು ಅನುಕೂಲವಾಗುತ್ತದೆ. ಈ ಕೈಗೂಡಿಸುವಿಕೆಯು ಚಾಲಕರು ವಿವಿಧ ರೇಸ್ ಜಾಡುಗಳಲ್ಲಿ ಪ್ರವೇಶಿಸಲು ಅನುಕೂಲಕರವಾಗುತ್ತದೆ ಹಾಗೂ ಈ ರೀತಿ ಹೆಚ್ಚಿನ ಅವಕಾಶ ದೊರೆತ ಚಾಲಕರಿಗೆ ಗೆಲುವಿನ ಸಾಧ್ಯತೆಗಳು ಹೆಚ್ಚುತ್ತವೆ; ರೇಸ್ ಜಾಡಿನಲ್ಲಿ ಹಿಡಿಸುವಷ್ಟೂ ಕಾರ್ ಗಳನ್ನು ಓಡಿಸಲು ರೇಸ್ ಜಾಡಿನಲ್ಲಿ ಅವಕಾಶವಾಗುತ್ತದೆ; ಹಲವಾರು ರೇಸಿಂಗ್ ಸರಣಿಗಳನ್ನು ಹಮ್ಮಿಕೊಳ್ಳಲು ರೇಸಿಂಗ್ ಸಂಸ್ಥೆಗಳಿಗೆ ಅವಕಾಶ ಸಿಗುತ್ತದೆ; ಹಾಗೂ ಅಭಿಮಾನಿಗಳ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಹಲವಾರು ಅಭಿಮಾನಿಗಳು ವಿಭಿನ್ನ ರೀತಿಯ ಕಾರ್ ಗಳಲ್ಲಿ ಒಂದಲ್ಲ ಒಂದನ್ನು ಇಷ್ಟ ಪಡುತ್ತಾರೆ. ಮುಕ್ತ ಚಕ್ರದ ಅಭಿಮಾನಿಗಳು "ನಿಜವಾದ ರೇಸ್ ಕಾರ್ ಗಳಿಗೆ ಫೆಂಡರ್ ಗಳು ಇರುವುದಿಲ್ಲ" ಎನ್ನುತ್ತಾರೆ. ಸ್ಟಾಕ್ ಕಾರ್ (ಬಲಗಡೆ ಮತ್ತು ಮೇಲಿನ ಚಿತ್ರಗಳಲ್ಲಿರುವಂತಹವು) ಅಭಿಮಾನಿಗಳು ಮುಕ್ತ ಚಕ್ರಗಳ ಕಾರ್ ಗಳನ್ನು ಓಡಿಸುವ ರೇಸರ್ ಗಳು ಕೊಂಚವೇ ಒಂದಕ್ಕೊಂದು ತಗುಲಿದರೂ ಎರಡೂ ಕಾರ್ ಗಳು ನಿಷ್ಕ್ರಿಯವಾಗುವುವೆಂಬ ಅಂಶವನ್ನು ಬೆಟ್ಟು ಮಾಡಿ ತೋರಿಸುತ್ತಾರೆ. ವಾಸ್ತವವಾಗಿ ಎರಡು ವಿಧದ ವಾಹನಗಳಲ್ಲೂ ಸಬಲ ಮತ್ತು ದುರ್ಬಲ ಅಂಶಗಳಿವೆ. ಮುಕ್ತಚಕ್ರದ ರೇಸರ್ ಗಳು ಸಾಮಾನ್ಯವಾಗಿ ಲಘುವಾಗಿಯೂ, ವೇಗವಾಗಿಯೂ ಇರುತ್ತವೆ. ಸ್ಟಾಕ್ ಕಾರ್ ಗಳು ನೂಕಿಕೊಂಡು, ತಳ್ಳಿಕೊಂಡು ಪ್ರಗತಿಯನ್ನು ಸಾಧಿಸಬಹುದು.

ಹಲವಾರು ಜಾಡುಗಳು ಎರಡೂ ವಿಧದ ಕಾರ್ ಗಳು ಸ್ಪರ್ಧಿಸಲು ಬೆಂಬಲಿಸುವ ರೀತಿಯವಾಗಿರುತ್ತವೆ. ಎರಡೂ ವಿಧದ ಕಾರ್ ಗಳ ಎಂಜಿನ್ ಗಳು ಶಕ್ತಿಯುತವಾದ V೮ ನಿಂದ ಹಿಡಿದು, ಚಿಕ್ಕದಾದ, ಆದರೂ ಸಶಕ್ತವಾದ ೪ - ಸಿಲಿಂಡರ್ ಎಂಜಿನ್ ಗಳವರೆಗೆ ವಿವಿಧ ಶಕ್ತಿಯವಾಗಿರುತ್ತವೆ. ಕೆಲವು ಚಿಕ್ಕ ಮುಕ್ತಚಕ್ರದ ರೇಸರ್ ಗಳು ಏಕ-ಸಿಲಿಂಡರ್ ಶಕ್ತಿಕೇಂದ್ರಗಳಲ್ಲಿ ವರ್ಗೀಕರಣವನ್ನು ಹೊಂದಿವೆ. ವರ್ಗೀಕರಣದ ಆಧಾರದ ಮೇರೆಗೆ, ಹೆಚ್ಚಿನ ವೇಗಗಳನ್ನು ನಿಭಾಯಿಸಲು ಈ ಕಾರ್ ಗಳಿಗೆ ರೆಕ್ಕೆಗಳನ್ನೂ ತೊಡಿಸಲಾಗಬಹುದು.

ಮುಕ್ತ ಚಕ್ರದ ಕಾರ್ ಗಳು[ಬದಲಾಯಿಸಿ]

ಡರ್ಟ್ ಸ್ಪ್ರಿಂಟ್ ಕಾರ್ ಗಳು

ಮುಕ್ತಚಕ್ರದ ಕಾರ್ ಗಳು ಸಾಮಾನ್ಯವಾಗಿ ಕೊಳವೆಗಳಿಂದ ಮಾಡಿದ ಚೌಕಟ್ಟುಗಳನ್ನು ಹೊಂದಿರುತ್ತವೆ ಹಾಗೂ ಉದ್ದೇಶಿತ ವರ್ಗಕ್ಕೆ ಹೊಂದುವಂತಹ ಆಕಾರ(ಮೈ)ದ ವಾಹನವನ್ನು ಕೊಳ್ಳಲಾಗುತ್ತದೆ. ವರ್ಗಗಳು ಈ ಕೆಳಕಂಡವನ್ನು ಒಳಗೊಂಡಿವೆ:

 • ಡ್ವಾರ್ಫ್ (೧೯೨೮ ರಿಂದ೧೯೪೮ ರವರೆಗಿನ ಕೂಪ್ ಗಳು ಮತ್ತು ಸೆಡಾನ್ ಗಳ ೫/೮ ಪ್ರತಿರೂಪಗಳು)
 • ಕಾರ್ಟ್ (ಗೋ ಕಾರ್ಟ್)
 • ಮಿನಿ ಸ್ಪ್ರಿಂಟ್
 • ಸ್ಪ್ರಿಂಟ್
 • ಮಿಡ್ಜೆಟ್ (ಸ್ಪೀಡ್ ಕಾರ್)
 • ಕ್ವಾರ್ಟರ್ ಮಿಡ್ಜೆಟ್
 • ಮೈಕ್ರೋ ಸ್ಪ್ರಿಂಟ್

ಇವುಗಳನ್ನು ಮಂಜೂರು ಮಾಡುವ ಅಧಿಕಾರವನ್ನು ಹೊಂದಿರುವ ಸಂಸ್ಥೆಗಳ ಪೈಕಿ ಇರುವುವೆಂದರೆ:

 • ಯುಎಸ್ಎಸಿ - ದ ಯುನೈಟೆಡ್ ಸ್ಟೇಟ್ಸ್ ಆಟೋಮೊಬೈಲ್ ಕ್ಲಬ್
 • ವರ್ಲ್ಡ್ ಆಫ್ ಔಟ್ಲಾಸ್ ಚಿಮ್ಮಿ ಓಡುವ ಕಾರ್ ಗಳು (ಸ್ಪ್ರಿಂಟ್ ಕಾರ್ ಗಳು)

ಮಾರ್ಪಡಿಸಿದ ಕಾರ್ ಗಳು[ಬದಲಾಯಿಸಿ]

ಐಎಂಸಿಎ ಮಾರ್ಪಡಿಸಲ್ಪಟ್ಟ ಕಾರ್

ಮಾರ್ಪಡಿಸಿದ ಕಾರ್ ಗಳು ಮುಕ್ತ ಚಕ್ರದ ಕಾರ್ ಗಳು ಮತ್ತು ಸ್ಟಾಕ್ ಕಾರ್ ಗಳ ಸಂಕರದಿಂದ ಬಂದಂತಹವು - ಈ ವರ್ಗದ ಕಾರ್ ಗಳಲ್ಲಿ ಸ್ಟಾಕ್ ಕಾರ್ ನ ಗುಣವಿಶೇಷಗಳಿದ್ದು, ಹಿಂದಿನ ಚಕ್ರಗಳಿಗೆ ಫೆಂಡರ್ ನ ರಕ್ಷಣೆ ಇರುತ್ತದೆ ಹಾಗೂ ಮುಂದಿನ ಚಕ್ರಗಳು ಮುಕ್ತವಾಗಿರುತ್ತವೆ. ಈ ವಿಧವಾದ ವಾಹನ ಜಾಡುಗಳನ್ನು ನಿಯಂತ್ರಸಲು ಯಾವುದೇ ಮಂಜೂರಾತಿ ಮಂಡಳಿಗಳಿಲ್ಲ. ಪ್ರತಿ ಮಂಜೂರಾತಿ ಪ್ರಾಧಿಕಾರವೂ ತನ್ನದೇ ಆದ ಗೊತ್ತುವಳಿಗಳನ್ನು ಹೊಂದಿರುತ್ತದೆ ಹಾಗೂ ಇದು ಆ ಮಂಡಳಿಯ ವಾರ್ಷಿಕ ನಿಯಮ-ಪುಸ್ತಕದಲ್ಲಿ ಬರೆಯಲಾಗಿರುತ್ತದೆ; ಪ್ರತಿ ಮಂಜೂರಾತಿ ಪ್ರಾಧಿಕಾರವೂ ತನ್ನದೇ ಆದ ನೋಂದಣಿ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತದೆ. ಮಂಜೂರಾತಿ ಮಂಡಳಿಗಳಲ್ಲಿ ಈ ಕೆಳಕಂಡವೂ ಇವೆ:

 • ಅಡ್ವಾನ್ಸ್ ಆಟೋ ಪಾರ್ಟ್ಸ್ ಸೂಪರ್ ಡಸ್ಟ್ ಸರಣಿ
 • ಐಎಂಸಿಎ (ಇಂಟರ್ನ್ಯಾಷನಲ್ ಮೋಟಾರ್ ಕಾಂಟೆಸ್ಟ್ ಅಸೋಸಿಯೇಷನ್)
 • ಯುಎಂಪಿ (ಯುನೈಟೆಡ್ ಮಿಡ್ ವೆಸ್ಟ್ರನ್ ಪ್ರೊಮೋಟರ್ಸ್)
 • ಯುಎಸ್ಆರ್ಎ (ಯುನೈಟೆಡ್ ಸ್ಟೇಟ್ಸ್ ರೇಸಿಂಗ್ ಅಸೋಸಿಯೇಷನ್)
 • ಯುಎಸ್ಎಂಟಿಎಸ್ (ಯುನೈಟೆಡ್ ಸ್ಟೇಟ್ಸ್ ಮಾಡಿಫೈಡ್ ಟೂರಿಸಂ ಸೀರೀಸ್)
 • ವಿಸ್ಸೋಟಾ (ವಿಸ್ಸೋಟಾ ಪ್ರೊಮೋಟರ್ಸ್ ಅಸೋಸಿಯೇಷನ್)

ಸ್ಟಾಕ್ ಕಾರ್ ಗಳು[ಬದಲಾಯಿಸಿ]

ಸ್ಟಾಕ್ ಕಾರ್ ಗಳು ಸಾಮಾನ್ಯವಾಗಿ ಪ್ರಮುಖ ವಾಹನ ತಯಾರಕರು ತಯಾರಿಸಿದ ವಾಹನಗಳಾಗಿದ್ದು, ಕಾರ್ ಗಳು ಯಾವ ವರ್ಗಕ್ಕೆ ಸೇರುತ್ತವೆಯೋ ಆ ವರ್ಗಕ್ಕೆ ತಕ್ಕ ನಿರ್ದಿಷ್ಟ ಮಾರ್ಪಾಡುಗಳನ್ನು ಹೊಂದಿದಂತಹವಾಗಿರುತ್ತವೆ. ಇದರಲ್ಲಿ ಹಲವಾರು ಸಾಮಾನ್ಯ ರೀತಿಯವಿವೆ:

ಉತ್ಪಾದನಾ-ರಹಿತ ಕಾರ್ ಗಳು[ಬದಲಾಯಿಸಿ]

ಈ ಕಾರ್ ಗಳು ರೇಸಿಂಗ್ ಗೆಂದೇ ಹೇಳಿಮಾಡಿಸಿದ ಸ್ಟಾಕ್ ಕಾರ್ ಗಳು. ಇವುಗಳು ಸಾಮಾನ್ಯವಾಗಿ ಕೊಳವೆ ಚೌಕಟ್ಟುಗಳನ್ನು ಮತ್ತು ಉದ್ದೇಶಕ್ಕೆ ತಕ್ಕಂತೆ ನಿರ್ಮಿಸಿದ ಅಥವಾ ಖರೀದಿಸಿದ ಶರೀರ(ಆಕಾರ)ಗಳನ್ನು ಹೊಂದಿರುತ್ತವೆ.

ಧೂಳು ಜಾಡಿನಲ್ಲಿ ಓಡುವ ಕಾರ್ ಗಳ ಪೈಕಿ ಬಹಳ ಜನಪ್ರಿಯವಾದವು ಅತ್ಯಾಧುನಿಕ ನಮೂನೆಯ ಕಾರ್ ಗಳು. ಸ್ಪರ್ಧಿಸಬೇಕಾದ ಅಥವಾ ಓಡಬೇಕಾದ ಜಾಡುಗಳ ಮತ್ತು ಸರಣಿಗಳ ಆಧಾರದ ಮೇಲೆ ಈ ಕಾರ್ ಗಳನ್ನು ವರ್ಗೀಕರಿಸಲಾಗುತ್ತದೆ. ಯಾವ ಅತ್ಯಾಧುನಿಕ ನಮೂನೆಯ ಕಾರ್ ಗಳು ರೇಸ್ ನಲ್ಲಿ ಭಾಗವಹಿಸಬಹುದೆಂಬುದನ್ನು ರೇಸ್ ನ ಜಾಡು ನಿರ್ಧರಿಸುತ್ತದೆ, ಆದರೆ ಸಾಮಾನ್ಯವಾಗಿ ಈ ಅತ್ಯಾಧುನಿಕ ನಮೂನೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು:

ಉತ್ಕೃಷ್ಟ ಆತ್ಯಾಧುನಿಕ ನಮೂನೆ[ಬದಲಾಯಿಸಿ]
2006 ನ್ಯಾಷನಲ್ ಡರ್ಟ್ ಲೇಟ್ ಮಾಡಲ್ ಹಾಲ್ ಆಫ್ ಫೇಮ್ ಗೆ ಸೇರಿಸಲ್ಪಟ್ಟ ಪೀಟೆ ಪಾರ್ಕರ್ ರ #10 ವಿಸ್ಸೋಟಾ ಧೂಳುಜಾಡಿನ ಆಧುನಿಕ ನಮೂನೆಯ ಕಾರ್

ಇಂದಿಗೆ ಪ್ರಸ್ತುತವಾಗಿರುವ ಧೂಳು ಉತ್ಕೃಷ್ಟ ಅತ್ಯಾಧುನಿಕ ನಮೂನೆಯ ಕಾರ್ ನಲ್ಲಿ ಉಕ್ಕಿನಿಂದ ನಿರ್ಮಿಸಲ್ಪಟ್ಟ ಕೊಳವೆ ಚೌಕಟ್ಟಿನ ಚಾಸೀಸ್ ಇದ್ದು, ಅಲ್ಯೂಮಿನಿಯಮ್ ಶರೀರವಿದ್ದು, ಮೆರುಗಿನಿಂದ ವಾಯುಪಥದಲ್ಲಿ ಚಲಿಸುವಂತೆ ಗೋಚರಿಸುವ ಸ್ಟಾಕ್ ಕಾರ್ ನಂತೆ ಕಾಣುವ ರೇಸ್ ಕಾರ್ ನ ಅಂದವಿದೆಯಾದರೂ ಈ ೨೩೦೦ ಪೌಂಡ್ ತೂಕದ ಯಂತ್ರ ಯಾವ ವಿಧದಲ್ಲೂ ಸ್ಟಾಕ್ ಕಾರ್ ಅನ್ನು ಹೋಲುವುದಿಲ್ಲ. ಈ ಕಾರ್ ಗಳು 800 horsepower (600 kW) ಶಕ್ತಿಯ ಮೋಟಾರ್ ನಿಂದ ಚಾಲಿತವಾಗುತ್ತವೆ ಹಾಗೂ ಇವು ೯,೦೦೦ RPM ಗಿಂತಲೂ ಹೆಚ್ಚಿನ ವೇಗದಲ್ಲಿ ತಿರುಗಬಲ್ಲವು. ಇವುಗಳ ಎಂಜಿನ್ ಗಳು V-೮ ಚೆವರ್ಲೆ, ಫೋರ್ಡ್ ಮತ್ತು MOPAR ಶಕ್ತಿ ಕೈಗಾರಿಕೆಗಳಿಂದ ಆಧರಿಸಲ್ಪಟ್ಟಿವೆ.

ಬಹುತೇಕ ರೇಸಿಂಗ್ ಸರಣಿಗಳು ಮತ್ತು ವಿಶೇಷ ಸ್ಪರ್ಧೆಗಳು ಎಲ್ಲರಿಗೂ ಸಮವಾದ ಗೆಲುವಿನ ಅವಕಾಶ ಸೃಷ್ಟಿಸುವ ಸಲುವಾಗಿ ತೂಕದ ಬ್ರೇಕ್ ಗಳನ್ನು ಬಳಸಿದ ಮೂರು ಮೋಟಾರ್ ಗಳ ಆಯ್ಕೆಯನ್ನು ಸ್ಪರ್ಧಿಗಳಿಗೆ ನೀಡುತ್ತವೆ:

 1. ಮುಕ್ತ ಮೋಟಾರ್ - ಈ ವಿಧದ ಮೋಟಾರ್ ನಲ್ಲಿ ಸ್ಥಾನಾಂತರಕ್ಕೆ ಯಾವುದೇ ಮಿತಿಯಿಲ್ಲ. ಬಹುತೇಕ ಮುಕ್ತ ಮೋಟಾರ್ ಗಳು ೪೦೦ ಘನ ಇಂಚ್ ಗಳಿಗಳನ್ನು ಮೀರುತ್ತವೆ, ಆದರೆ ೩೮೦ ಚಿಕ್ಕ ಪಡಿ ಸಾಮಾನ್ಯವಾಗಿ ಬಳಸಲ್ಪಡುವ ಮುಕ್ತ ಮೋಟಾರ್ ಆಗಿದೆ. ಈ ಮೋಟಾರ್ ಗಳು ಅಲ್ಯೂಮಿನಿಯಮ್ ಬ್ಲಾಕ್ ಗಳನ್ನು ಮತ್ತು ಹೆಡರ ಗಳನ್ನು ಬಳಸುತ್ತವೆ ಮತ್ತು ಆಗಾಗ್ಗೆ ವಿಶೇಷವಾಗಿ ವೆಲ್ಡ್ ಮಾಡಿದ ಕ್ಯಾಮ್ ಗಳನ್ನು ಹೊಂದಿರುತ್ತವೆ. ಈ ಮೋಟಾರ್ ಅನ್ನು ಆಯ್ಕೆ ಮಾಡಲ್ಪಟ್ಟ ಕಾರ್ ಗಳ ತೂಕ ಕಡಿಮೆಯೆಂದರೆ 2,300 lb (1,000 kg) ಇರಬೇಕು.
 2. ಸ್ಪೆಕ್ ಮೋಟಾರ್- ರೇಸಿಂಗ್ ನಲ್ಲಿ ಎರಡು ಅತಿ ಜನಪ್ರಿಯವಾದ ಸರಣಿಗಳೆಂದರೆ SAS (ಸದರನ್ ಆಲ್ ಸ್ಟಾರ್ಸ್) ಮತ್ತು SURR (ಸದರನ್ ಯುನೈಟೆಡ್ ಪ್ರೊಫೆಷನಲ್ ರೇಸಿಂಗ್). ಸ್ಪೆಕ್ ಮೋಟಾರ್ ಗಳನ್ನು ಈ ಸರಣಿಗೆ ಬೇಕಾದ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತದೆ. ಈ ಮೋಟಾರ್ ಸಂಪೂರ್ಣ ಉಕ್ಕಿನದು, ಸಂಪೂರ್ಣ ಅಲ್ಯೂಮಿನಿಯಂನದು ಅಥವಾ ಇವೆರಡರ ಮಿಶ್ರಣದ್ದು ಆಗಿರಬಹುದು. ಈ ಮೋಟಾರ್ ಗಳನ್ನು ಹೊಂದಿದ ಕಾರ್ ಗಳ ತೂಕ ೨೨೦೦ ಪೌಂಡ್ ಗಳಿರುತ್ತದೆ ಹಾಗೂ೧೦ ಅಥವಾ 12-inch (300 mm) ಸ್ಪಾಯ್ಲರ್ ನಷ್ಟು ಓಡುತ್ತವೆ. ಸ್ಪೆಕ್ ಮೋಟಾರ್ ಗಳು ೩೫೮ ಘನ ಇಂಚ್ ಗಳಿಗಿಂತಲೂ ಹೆಚ್ಚಿನ ಅಳತೆಯನ್ನು ಹೊಂದುವುದು ಸಾಧ್ಯವಿಲ್ಲ.
 3. ಸಂಪೂರ್ಣ ಉಕ್ಕಿನ ಮೋಟಾರ್ - ಉಕ್ಕಿನ ಬ್ಲಾಕ್ ಮತ್ತು ಹೆಡ್ ಗಳು, ಗರಿಷ್ಠ ೩೬೨ ಘನ ಇಂಚ್ ಗಳಿರುತ್ತವೆ, ಹಾಗೂ ಸರಣಿಯ ಆಧಾರದ ಮೇರೆಗೆ ೨೨೦೦ ಅಥವಾ ೨೧೫೦ ಪೌಂಡ್ ತೂಕ ಇರುತ್ತವೆ. ಸಂಪೂರ್ಣ ಉಕ್ಕಿನ ಮೋಟಾರ್ ಹೊಂದಿರುವ ಕಾರ್ ಗಳು೧೦ ಅಥವಾ 12-inch (300 mm) ಸ್ಪಾಯ್ಲರ್ ನಷ್ಟು ಓಡಲೇಬೇಕು.
ಸ್ಟಾಕ್ ನ ಅತ್ಯಾಧುನಿಕ ನಮೂನೆ/ನಿಯಮಿತ ಅತ್ಯಾಧುನಿಕ ನಮೂನೆ[ಬದಲಾಯಿಸಿ]

ಸ್ಟಾಕ್ ನ ಅತ್ಯಾಧುನಿಕ ನಮೂನೆ/ನಿಯಮಿತ ಅತ್ಯಾಧುನಿಕ ನಮೂನೆಗಳು ಉತ್ಕೃಷ್ಟ ಅತ್ಯಾಧುನಿಕ ನಮೂನೆಯ ಕಾರ್ ಗಳ ಆಕಾರ(ಶರೀರ)ಕ್ಕೆ ಅನ್ವಯಿಸುವ ನಿಯಮಗಳಿಗೇ ಬದ್ಧವಾಗಿರುತ್ತವೆ. ಈ ಎರಡು ವರ್ಗಗಳ ಪ್ರಮುಖ ವ್ಯತ್ಯಾಸ ಮೋಟಾರ್ ಗಳ ಆಯ್ಕೆಯಲ್ಲಿರುತ್ತದೆ, ಅದರಲ್ಲೂ ವಿಶೇಷತಃ ಸ್ಥಾನಾಂತರದ ವಿಷಯವಾಗಿ.

ಎಂಜಿನ್ ಆಯ್ಕೆಗಳು: ೧.

ಎಂಜಿನ್ ಗಳು: ಚೆವರ್ಲೆ ೩೫೦, ಕ್ರಿಸ್ಲರ್ ೩೬೦, ಫೋರ್ಡ್ ೩೫೧ ಎಂಜಿನ್ ಗಳು. ಇನ್ ಟೇಕ್ (ಒಳಹರಿವು) ಹೊರತಾಗಿ ಮಿಕ್ಕೆಲ್ಲವೂ ಉಕ್ಕಿನದ್ದಾಗಿರಬೇಕು.

೨.

ಎಂಜಿನ್ ನ ಗರಿಷ್ಠ ಸ್ಥಾನಾಂತರ ೩೬೨ ಘನ ಇಂಚ್ ಗಳು.

೩.

ಮಾರುಕಟ್ಟೆಯಲ್ಲಿ ಪಡೆದು ಬದಲಾಯಿಸಬಹುದಾದ ಕಾರ್ಬೊರೇಟರ್, ಒಳಹರಿವಿನ ಮ್ಯಾನಿಫೋಲ್ಡ್ ಮತ್ತು ಹೊರಕೊಳವೆಯ ಹೆಡರ್ ಗಳ ಹೊರತಾಗಿ ಎಂಜಿನ್ ಗಳನ್ನು ಯಾವುದೇ ವಿಧದಲ್ಲಿ ಮಾರ್ಪಡಿಸಲು ಸಾಧ್ಯವಿಲ್ಲ.

ಕ್ರೇಟ್ ಎಂಜಿನ್ ಗಳಲ್ಲಿ ಒಳಹರಿವಿನ ಮ್ಯಾನಿಫೋಲ್ಡ್, ಸಿಲಿಂಡರ್ ಹೆಡ್, ಮುಂದಿನ ಕವಚ ಮತ್ತು ತೈಲಥಾಲಿಗಳು ವಿಶೇಷವಾದ ಟ್ವಿಸ್ಟ್ ಆಫ್ ಬೋಲ್ಟ್ ಗಳನ್ನು ಬಳಸಿ ಭದ್ರಗೊಳಿಸಲ್ಪಟ್ಟಿರುತ್ತವೆ. ಕ್ರೇಟ್ ಎಂಜಿನ್ ಗಳನ್ನು ಕಾರ್ಖಾನೆಯಲ್ಲಿ ತಯಾರಾದಾಗ ಸೂಚಿಸಿದ ನಿರ್ದಿಷ್ಟ ರೀತಿಯಲ್ಲೇ ಹೊಂದಬೇಕೇ ವಿನಹ ಅದನ್ನು ಮಾರ್ಪಡಿಸುವುದು, ಬದಲಾಯಿಸುವುದು, ಅಳತೆ ವ್ಯತ್ಯಾಸಗೊಳಿಸುವುದು ಇತ್ಯಾದಿಗಳನ್ನು ಮಾಡಬಾರದು.

ಸಾಮಾನ್ಯ ಸ್ಪೆಕ್ ಮೋಟಾರ್ ಗಳನ್ನು ಮಾತ್ರ ಅನುಮತಿಸುವಂತಹ ಜಾಡುಗಳಲ್ಲಿ ಈ ನಿಯಮಾವಳಿಗಳಲ್ಲಿ ಕೊಂಚ ವಿಭಿನ್ನತೆಗಳು ಕಂಡುಬರುತ್ತವೆ; ಆದರೆ, ಕ್ರೇಟ್ ಮೋಟಾರ್ ಗಳು ಮಾರುಕಟ್ಟೆಯನ್ನು ಆಕ್ರಮಿಸಲಾರಂಭಿಸಿದಂದಿನಿಂದ ಈ ಮೇಲ್ಕಂಡ ನಿಯಮಾವಳಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಕ್ರೇಟ್ ಆಧುನಿಕ ನಮೂನೆಗಳು[ಬದಲಾಯಿಸಿ]
ಒಂದು ಫಾಸ್ಟ್ರ್ಯಾಕ್ ಆಧುನಿಕ ನಮೂನೆ

GM ಸೀಲ್ ಆಗಿರುವ (ಮೊಹರಿರುವ) ಕ್ರೇಟ್ ಮೋಟಾರ್ ಗಳನ್ನು ಬಳಸಿರಿ ಮತ್ತು ಅವರದೇ ಆದ ಎತಡು ರಾಷ್ಟ್ರೀಯ ಪ್ರವಾಸಿ ಸರಣಿಗಳಲ್ಲಿ ಭಾಗವಹಿಸಿ: ತನೆಸ್ಮಿತ್ ಚೆವರ್ಲೆ ಡರ್ಟ್ ಲೇಟ್ ಮಾಡೆಲ್ ಸರಣಿ ಮತ್ತು ಫಾಸ್ಟ್ರ್ಯಾಕ್ ಕ್ರೇಟ್ ಲೇಟ್ ಮಾಡೆಲ್ ಸರಣಿ. ಸಧ್ಯದಲ್ಲಿ ಫೋರ್ಡ್ ಮತ್ತು ಕ್ರಿಸ್ಲರ್ ಗಳಿಗೆ ನೆಸ್ಮಿತ್ ಅಥವಾ ಫಾಸ್ಟ್ರ್ಯಾಕ್ ಸರಣಿಗಳಿಗೆ ಪ್ರವೇಶಿಸುವ ಆಲೋಚನೆಯಿಲ್ಲ.

ಜನಪ್ರಿಯ ರೇಸಿಂಗ್ ಸರಣಿಗಳು[ಬದಲಾಯಿಸಿ]
ವರ್ಲ್ಡ್ ಆಫ್ ಔಟ್ಲಾಸ್ ಆಧುನಿಕ ನಮೂನೆ
 • ವರ್ಲ್ಡ್ ಆಫ್ ಔಟ್ಲಾಸ್
 • ಲ್ಯೂಕಾಸ್ ತೈಲ ಲೇಟ್ ಮಾಡೆಲ್ ಡರ್ಟ್ ಸರಣಿ
 • ಒರೀಲಿ ಆಟೋ ಪಾರ್ಟ್ಸ್ ದಕ್ಷಿಣದ ಸರ್ವತಾರೆಯರು
 • ಅಂತರರಾಷ್ಟ್ರೀಯ ಮೋಟಾರ್ ಸ್ಪರ್ಧೆ ಸಂಘ
 • ಯುನೈಟೆಡ್ ಮಿಡ್ ವೆಸ್ಟ್ರನ್ ಪ್ರೊಮೋಟರ್ಸ್
 • ಅಡ್ವಾನ್ಸ್ ಆಟೋ ಪಾರ್ಟ್ಸ್ ಸೂಪರ್ ಡಸ್ಟ್ ಸರಣಿ
 • ದಕ್ಷಿಣ ಪ್ರಾಂತ್ಯದ ರೇಸಿಂಗ್ ಸರಣಿ
 • ಅಡ್ವಾನ್ಸ್ ಆಟೋ ಪಾರ್ಟ್ಸ್ ಥಂಡರ್ ಸರಣಿ
 • ಒರೀಲಿ ಆಟೋ ಪಾರ್ಟ್ಸ್ ದಕ್ಷಿಣ ಯುನೈಟೆಡ್ ವೃತ್ತಿಪರ ರೇಸಿಂಗ್

ವರ್ಷದ ಎಲ್ಲಾ ಕಾಲಗಳಲ್ಲೂ ಅಕ್ಷರಶಃ ಮಂಜೂರಾಗದ ನೂರಾರು ಪ್ರಾದೇಶಿಕ ಮತ್ತು ರಾಷ್ಟ್ರೀಯ ವಿಶೇಷ ಸ್ಪರ್ಧೆಗಳು ನಡೆಯುತ್ತಲೇ ಇರುತ್ತವೆ.

ಇತರ ಪ್ರಮುಖ ವಾರ್ಷಿಕ ಕಾರ್ಯಕ್ರಮಗಳ/ಸ್ಪರ್ಧೆಗಳ ಪೈಕಿ ಈ ಕೆಳಕಂಡವು ಇವೆ:

 • ವಿಶ್ವ ೧೦೦
 • ಐಸ್ ಬೋವ್ಲ್
 • ಡಾರ್ಟ್ ವಿಂಟರ್ ನ್ಯಾಷನಲ್ಸ್
 • ದ ಷೋ ಮಿ ೧೦೦
 • ಮ್ಯಾಗ್ನೋಲಿಯಾ ರಾಜ್ಯ ೧೦೦
 • ಧೂಳುಜಾಡಿನ ವಿಶ್ವ ಚಾಂಪಿಯನ್ ಷಿಪ್
 • ಟಾಪ್ ಲೆಸ್ ೧೦೦
 • ಹಿಲಿಬಿಲಿ ೧೦೦
 • ಸೂಪರ್ ಧೂಳು ಸಪ್ತಾಹ
 • ಯುಎಸ್ಎ ನ್ಯಾಷನಲ್ಸ್
 • ಪೂರ್ವರಾಜ್ಯಗಳ ವಾರಾಂತ್ಯ
 • ಚಾರ್ಲೊಟ್ಟೆಯಲ್ಲಿ ವಿಶ್ವ ಫೈನಲ್ಸ್

ಮಾರ್ಪಡಿಸಲ್ಪಟ್ಟ ಉತ್ಪಾದನಾ ಕಾರ್ ಗಳು[ಬದಲಾಯಿಸಿ]

ಒಂದು 4 ಸಿಲಿಂಡರ್ ಮಾರ್ಪಡಿಸಿದ ಉತ್ಪಾದನಾ ಕಾರ್, ಕಡಿಮೆ ಮಾರ್ಪಾಡುಗಳೊಂದಿಗೆ(ಎಡಗಡೆleft), ಮತ್ತು ಒಂದು ಬಹಳವೇ ಮಾರ್ಪಡಿಸಲ್ಪಟ್ಟ 8 ಸಿಲಿಂಡರ್ ಕಾರ್ (ಬಲಗಡೆ)

ಈ ಕಾರ್ ಗಳು ಉತ್ಪಾದನಾನಂತರ ಮಾರ್ಪಡಿಸಲ್ಪಟ್ಟ ವಾಹನಗಳು. ಮಾರ್ಪಡಿಸಲ್ಪಟ್ಟ ಕಾರ್ ಗಳ ವರ್ಗಗಳಲ್ಲಿ ತೀವ್ರ ಪ್ರಮಾಣದ ಭೇದಗಳಿವೆ. ಮಾರ್ಪಡಿಸಲ್ಪಟ್ಟ ಕಾರ್ ಗಳಲ್ಲಿ ಕನಿಷ್ಟವಾದುವೆಂದರೆ ಸಂಪೂರ್ಣವಾಗಿ ಸ್ಟಾಕ್ ಕಾರ್ ಗಳಂತೆಯೇ ಇದ್ದು, ಕೇವಲ ಒಳಭಾಗ ಅಥವಾ ವಿಂಡ್ ಷೀಲ್ಡ್ ಅನ್ನು ತೆಗೆಯಲ್ಪಟ್ಟ ಉತ್ಪಾದನಾ ಕಾರ್ ಗಳು. ಮಾರ್ಪಡಿಸಿದ ಕಾರ್ ಗಳ ವಿಭಾಗದಲ್ಲಿ ಗರಿಷ್ಠವಾದುವೆಂದರೆ ಕೆಲವೇ ಮೂಲ ಸ್ಟಾಕ್ ಭಾಗಗಳನ್ನು ಉಳಿಸಿಕೊಂಡಿರುವ ಕಾರ್ ಗಳು; ಈ ಕಾರ್ ಗಳು ಲೇಟ್ ಮಾಡಲ್ ರೇಸ್ ಕಾರ್ ಗಳಷ್ಟು ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಬಲ್ಲವು. ಬಹುತೇಕ ಕಾರ್ ಗಳ ಒಳಭಾಗಗಳನ್ನು ಕಿತ್ತುಹಾಕಲಾಗುತ್ತದೆ ಮತ್ತು ವಿಂಡ್ ಷೀಲ್ಡ್ ಗಳನ್ನು ತೆಗೆದುಬಿಡಲಾಗುತ್ತದೆ. ಕೆಳವರ್ಗದ ಮಾರ್ಪಟ್ಟ ಕಾರ್ ಗಳಲ್ಲಿ ಮೂಲ ಸೀಟ್ ಗಳನ್ನು ಬಳಸಲು ಅನುಮತಿಸಲಾಗುತ್ತದೆ, ಆದರೆ ಉತ್ತಮ ಮಾಡಲ್ ಗಳಲ್ಲಿ ರೇಸಿಂಗ್ ಸೀಟ್ ಮತ್ತು ಸುರುಳಿ ಪಂಜರವನ್ನು ಅಳವಡಿಸುವುದು ಅವಶ್ಯಕ. ಉತ್ತಮ ದರ್ಜೆಯ ಕಾರ್ ಗಳಿಗೆ ಇತರ ಭದ್ರತಾ ಹಾಗೂ ಕಾರ್ಯಶೀಲ ಅಳವಡಿಕೆಗಳನ್ನು ಸೇರಿಸಲಾಗುತ್ತದೆ. ಕೆಳದರ್ಜೆಯಲ್ಲಿ ಎಂಜಿನ್ ಗಳು ಸಂಪೂರ್ಣ ಸ್ಟಾಕ್ ಆಗಿರುತ್ತವೆ ಹಾಗೂ ಮೇಲ್ದರ್ಜೆಯ ವಿಭಾಗದಲ್ಲಿನ ಎಂಜಿನ್ ಗಳು ಮಾರ್ಪಡಿಸಲ್ಪಟ್ಟು, ಉತ್ತಮಗೊಳಿಸಲ್ಪಟ್ಟವಾಗಿರುತ್ತವೆ. ಬಹುತೇಕ ಮಾರ್ಪಡಿಸಲ್ಪಟ್ಟ ಉತ್ಪಾದನಾ ಕಾರ್ ಗಳು ಸಂಪೂರ್ಣ ಹೊರಕೊಳವೆಯ ಪದ್ಧತಿಯನ್ನು ಬಳಸುತ್ತವೆ. ಎಂಜಿನ್ ಗಳು ಬದಲಾಯಿಸದ ೪ ಸಿಲಿಂಡರ್ ನಿಂದ ಹಿಡಿದು ಶ್ರೇಷ್ಠಮಟ್ಟಕ್ಕೆ ಬದಲಾಯಿಸಲ್ಪಟ್ಟ V೮ ವರೆಗೆ ವಿಭಿನ್ನ ದರ್ಜೆಯವಾಗಿರುತ್ತವೆ. ಕೆಳದರ್ಜೆಯಲ್ಲಿನ ಕಾರ್ ಗಳು ಸ್ಟಾಕ್ ಟೈರ್ ಗಳನ್ನು ಬಳಸುತ್ತವೆ, ಹಾಗೂ ಮೇಲ್ದರ್ಜೆಯ ಕಾರ್ ಗಳು ನಿರ್ದೇಶಿತವಾದ, ಉದ್ದೇಶಿತವಾಗಿ ನಿರ್ಮಿಸಿದ ರೇಸಿಂಗ್ ಟೈರ್ ಗಳನ್ನು ಬಳಸುತ್ತವೆ.

ಮಾರ್ಪಡಿಸಿದ ಉತ್ಪಾದನಾ ಕಾರ್ ವಿಭಾಗಗಳ ಸಾಮಾನ್ಯ ಹೆಸರುಗಳು:

 • ಫ್ಯಾಕ್ಟರಿ ಸ್ಟಾಕ್ ಗಳು
 • ಮಿನಿ ಸ್ಟಾಕ್ ಗಳು
 • ಹಾರ್ನೆಟ್ ಗಳು
 • ಬಾಂಬರ್ ಗಳು
 • ಕ್ರೂಯಿಸರ್ ಗಳು
 • ಹಾಬಿ ಸ್ಟಾಕ್ ಗಳು
 • ಸ್ಟಾಕ್ ಕಾರ್ ಗಳು
 • ಪ್ಯೂರ್ ಸ್ಟ್ರೀಟ್ ಗಳು
 • ಪ್ಯೂರ್ ಸ್ಟಾಕ್ ಗಳು
 • ಸ್ಟ್ರೀಟ್ ಸ್ಟಾಕ್ ಗಳು
 • ಸೂಪರ್ ಸ್ಟ್ರೀಟ್ ಗಳು
 • ಸೂಪರ್ ಸ್ಟಾಕ್ ಗಳು
 • ಪ್ರೋ ಸ್ಟಾಕ್ ಗಳು
 • ರೆನೆಗೇಡ್ ಗಳು

ಮಾರ್ಪಡಿಸದ ಉತ್ಪಾದನಾ ಕಾರ್ ಗಳು[ಬದಲಾಯಿಸಿ]

ಈ ಕಾರ್ ಗಳು ಮಾಮೂಲಿ ರಸ್ತೆಗಳಲ್ಲಿ ಓಡುವಂತಹ ಕಾರ್ ಗಳಂತೆಯೇ ಇರುವ ವಾಹನಗಳಾಗಿದ್ದು, ಇವುಗಳ ಮೂಲ ಆಂತರಿಕ ವಿನ್ಯಾಸವೂ ಮಾಮೂಲು ಕಾರ್ ಗಳಂತೆಯೇ ಇರುತ್ತದೆ. ವಿವಿಧ ನಿಯಮಗಳಿಗೆ ಅನುಸಾರವಾಗಿ ಎಂಜಿನ್ ಗಳಲ್ಲಿ ಮಾರ್ಪಾಟನ್ನು ಹೊಂದಬಹುದಾಗಿದೆ:

 • ಸಲೂನ್ ಕಾರು‌‌

ಮೋಟಾರ್‌ ಸೈಕಲ್ ಗಳು[ಬದಲಾಯಿಸಿ]

ಸಮತಟ್ಟು ಜಾಡಿನ ಮೋಟರ್ ಸೈಕಲ್ ಗಳು

ಧೂಳು ಮತ್ತು ಹುಲ್ಲಿನ ಜಾಡುಗಳಲ್ಲಿ ಓಡುವ ಬೈಕ್ ಗಳು ಏಕಾಂಗಿ ವರ್ಗಗಳಲ್ಲಿ ೨೫೦, ೩೫೦ ಮತ್ತು ೫೦೦ cc ಸಾಮರ್ಥ್ಯವುಳ್ಳವಾಗಿರುತ್ತವೆ ಹಾಗೂ ನೇರವಾದ ಹಾದಿಗಳಲ್ಲಿ, ಯಂತ್ರಕ್ಕೆ ಬ್ರೇಕ್ ಗಳನ್ನು ಅಳವಡಿಸಿಲ್ಲದ ಸಂದರ್ಭಗಳಲ್ಲಿ, ಗರಿಷ್ಠವಾದ 80 mph (130 km/h) ವೇಗವನ್ನು ತಲುಪಲು ಶಕ್ತವಾಗಿರುತ್ತವೆ. ಸೈಡ್ ಕಾರ್ ಗಳಲ್ಲಿ ಮೂರು ಶ್ರೇಣಿಗಳಿವೆ. ಕಾಂಟಿನೆಂಟಲ್ ಶ್ರೇಣಿಯ ಕಾರ್ ಗಳು ಒಂದು ೫೦೦ cc ಏಕ ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತವೆ, ಅಲ್ಲದೆ, ಗ್ರೇಟ್ ಬ್ರಿಟನ್ ನಲ್ಲಿ ಎಡ ಮತ್ತು ಬಲಗೈ ಚಾಲಿತ ಸೈಡ್ ಕಾರ್ ಯಂತ್ರಗಳಿದೆ, ಇವುಗಳ ಎಂಜಿನ್ ಸಾಮರ್ಥ್ಯ ೧೦೦೦ cc. ಸೈಡ್ ಕಾರ್ ರೇಸ್ ಗಳು ಹುಲ್ಲುಜಾಡಿನ ಕ್ರೀಡೆಗಳಲ್ಲಿ ಅತಿ ಆಸಕ್ತಿ ಕೆರಳಿಸುವಂತಹವಾಗಿವೆ; ಈ ಕ್ರೀಡೆಯಲ್ಲಿ ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಒಟ್ಟಿಗೆ ಕಾರ್ಯನಿರತರಾಗಿ ತಿರುವುಗಳಲ್ಲಿ ಅತ್ಯುತ್ತಮ ಹಿಡಿತ ಮತ್ತು ವೇಗವನ್ನು ಗಳಿಸಲು ಯತ್ನಿಸುತ್ತಾರೆ.

ವಿಂಟೇಜ್ ರೇಸಿಂಗ್[ಬದಲಾಯಿಸಿ]

ಕೊಟ್ಟಿಗೆಗಳಲ್ಲಿ ಇನ್ನು ಬಳಸಲಾಗದೆಂದೂ, ಹಳೆಯಕಾಲಕ್ಕೆ ಸೇರಿದವೆಂದೂ ತುಕ್ಕು ಹಿಡಿಯಲು ಬಿಟ್ಟಿದ್ದ ಹಲವಾರು ನಿರುಪಯುಕ್ತವಾಗಿದ್ದ ರೇಸ್ ವಾಹನಗಳನ್ನು ತಮ್ಮ ಗತವೈಭವದ ಸ್ಥಿತಿಗೆ ಮತ್ತೆ ತರಲಾಗುತ್ತಿದೆ. ಹೀಗೆ ಗತವೈಭವದ ಹಂತವನ್ನು ತಲುಪಿದ ವಾಹನಗಳನ್ನು ಕಾರ್ ಪ್ರದರ್ಶನಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ ಹಾಗೂ ಕೆಲವೊಮ್ಮೆ ರೇಸ್ ಗಳಲ್ಲೂ ಓಡಿಸಲಾಗುತ್ತದೆ. ವಿಂಟೇಜ್ ರೇಸ್ (ಹಳೆಯ ಕಾರ್ ಗಳ ರೇಸ್) ನಲ್ಲಿ ಸ್ಪರ್ಧಿಸುವ ಕಾರ್ ಗಳು ೧೯ ನೆಯ ಶತಮಾನದ ಅಂತ್ಯಭಾಗದಿಂದ ಕೆಲವು ವರ್ಷಗಳ ಹಿಂದೆ ಇತಿಹಾಸ ಸೇರಿದ ಕಾರ್ ಗಳವರೆಗಿನ ಅವಧಿಯವಾಗಿರುತ್ತವೆ. ಉತ್ತರ ಅಮೆರಿಕದಲ್ಲಿ ೧೭೦ ಕ್ಕೂ ಹೆಚ್ಚು ರೇಸ್ ಗಳಿವೆ ಹಾಗೂ ನೂರಾರು ಕ್ಲಬ್ ಗಳು ಸಾವಿರಾರು ವಿಂಟೇಜ್ ರೇಸ್ ಗಳನ್ನು ಮಂಜೂರು ಮಾಡುತ್ತಲೇ ಇರುತ್ತವೆ.[೧]

ರೇಸ್ ಕಾರ್ಯವೈಖರಿ[ಬದಲಾಯಿಸಿ]

1950 ರ ದಶಕದಿಂದ 1970 ರ ದಶಕದವರೆಗೆ ವಿಸ್ಕಾನ್ಸಿನ್ (ಯುಎಸ್ಎ)ನಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ವಿಂಟೇಜ್ ಮುಕ್ತ ಕಾರ್ ರೇಸ್ ನಲ್ಲಿನ ನಾಲ್ಕು ಕಾರ್ ಗಳ ಹೀಟ್ ರೇಸ್ ನ ದೃಶ್ಯ.

ಸಾಮಾನ್ಯವಾದ ರೇಸ್ ಕಾರ್ಯಕ್ರಮವು ಹಲವಾರು ದರ್ಜೆಗಳನ್ನು ಹೊಂದಿರುತ್ತದೆ ಹಾಗೂ ಬಹಳ ಜಾಡುಗಳು ಮುಕ್ತ ಚಕ್ರ ಮತ್ತು ಸ್ಟಾಕ್ ಕಾರ್ ಗಳೆರಡಕ್ಕೂ ಸ್ಪರ್ಧಾವಕಾಶ ಕಲ್ಪಿಸುತ್ತವೆ. ಕಾರ್ಯಕ್ರಮಗಳು ವಿಧವಿಧಾನಗಳಲ್ಲಿ ಹಲವಾರು ಬಗೆಗಳಿವೆ.

ಅರ್ಹತೆ ಪಡೆಯುವಿಕೆ[ಬದಲಾಯಿಸಿ]

ಯಾವುದೇ ಸ್ಪರ್ಧೆ ಆರಂಭವಾಗುವ ಮುನ್ನ ಅದಕ್ಕೆ ಅರ್ಹತೆಯನ್ನು ನಿರ್ಧರಿಸುವಂತಹ ಒಂದು ಸುತ್ತು ಪರೀಕ್ಷೆಗಳು ನಡೆಯಬಹುದು. ಈ ಪರೀಕ್ಷಾವಧಿಯು ಹೀಟ್ ರೇಸ್ ಗಳಲ್ಲಿ (ಪೂರ್ವಭಾವಿ ರೇಸ್ ಗಳು) ಯಾರು ಆರಂಭದ ಸ್ಥಾನವನ್ನು ತಲುಪುವರು ಅಥವಾ ಪ್ರಮುಖ ಸ್ಪರ್ಧೆಯಲ್ಲಿ ಯಾರು ಆರಂಭಿಕ ಸ್ಥಾನದಲ್ಲಿರುವರು ಎಂಬುದನ್ನು ನಿರ್ಧರಿಸುತ್ತದೆ. ಹೀಟ್ ಅಥವಾ ಪ್ರಮುಖ ಸ್ಪರ್ಧೆಗಳಲ್ಲಿ ಆರಂಭದ ಹಂತದಲ್ಲಿ ಯಾರ್ಯಾರು ಇರಬೇಕೆಂಬುದನ್ನು ನಿರ್ಧರಿಸಲು ಬೇರೆ ವಿಧಾನಗಳೂ ಇವೆ; ಆ ಋತುವಿನಲ್ಲಿ ಗಳಿಸಿದ ಪಾಯಿಂಟ್ ಗಳ ಆಧಾರದ ಮೇಲೆ ಹಾಗೂ ಅನಿಶ್ಚಿತಕ್ರಮದ ಆಯ್ಕೆಯಿಂದಲೂ ಸ್ಪರ್ಧಿಗಳನ್ನು ಆರಿಸಲಾಗುತ್ತದೆ.

ಹೀಟ್ ರೇಸ್ ಗಳು (ಪೂರ್ವಭಾವಿ ರೇಸ್ ಗಳು)[ಬದಲಾಯಿಸಿ]

ಎಲ್ಲಾ ವರ್ಗದ ರೇಸ್ ಗಳಿಗೂ ಪೂರ್ವಭಾವಿಯಾಗಿ ನಡೆಸುವ ರೇಸ್ ಗಳೇ ಹೀಟ್ ರೇಸ್ ಗಳು; ಸಾಮಾನ್ಯವಾಗಿ ಈ ರೇಸ್ ನಿಂದಲೇ ದೊಡ್ಡ ಸ್ಪರ್ಧೆಗಳ ಕ್ರಮಾವಳಿ ನಿರ್ಧಾರವಾಗುತ್ತದೆ. ಹೀಟ್ ರೇಸ್ ಗಳು ಪ್ರಮುಖ ಸ್ಪರ್ಧೆಯಲ್ಲಿನ ಆರಂಭಿಕ ಸ್ಥಾನಗಳನ್ನು ನಿರ್ಧರಿಸಲು ಅನುವಾಗುತ್ತವೆ ಮತ್ತು ಸಾಮಾನ್ಯವಾಗಿ ಋತುವಿನ ಚಾಂಪಿಯನ್ ಷಿಪ್ ಪಾಯಿಂಟ್ ಗಳನ್ನಿ ಇಲ್ಲಿಯೇ ಸಂಪಾದಿಸುವಂತಹುದಾಗಿದೆ. ಹೀಟ್ ರೇಸ್ ಗಳು ಪ್ರಮುಖ ರೇಸ್ ಗಳಿಗಿಂತ ಚಿಕ್ಕದಾಗಿರುತ್ತವೆ ಹಾಗೂ ಈ ರೇಸ್ ನಲ್ಲಿ ಪ್ರಮುಖ ರೇಸ್ ನಲ್ಲಿ ಭಾಗವಹಿಸುವಷ್ಟು ಸಂಖ್ಯೆಯ ಕಾರ್ ಗಳು ಭಾಗವಹಿಸುವುದಿಲ್ಲ. ಪ್ರಮುಖ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲು ಅನೇಕ ವಿಧಿವಿಧಾನಗಳಿವೆ.

"ವರ್ಧಿಸುವ ರೇಸಿಂಗ್" ನಲ್ಲಿ ಹೀಟ್ ರೇಸ್ ನ ಆರಂಭದ ಸಾಲಿನಲ್ಲಿರಬೇಕಾದ ಸ್ಪರ್ಧಿಗಳನ್ನು ಕ್ರಮರಹಿತವಾಗಿ ಆಯ್ಕೆಮಾಡಲಾಗುತ್ತದೆ ಹಾಗೂ ಮೊದಲೇ ನಿರ್ಧರಿಸಲಾದ ಸಂಖ್ಯೆಯಷ್ಟು ಚಾಲಕರು ಪ್ರತಿ ಹೀಟ್ ರೇಸ್ ನಿಂದಲೂ ನೇರವಾಗಿ ಪ್ರಮುಖ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತಾರೆ.

ಹೀಟ್ ವಿಜೇತರು ಅಥವಾ ಋತುವಿನ ಗರಿಷ್ಠ ಪಾಯಿಂಟ್ಸ್ ವಿಜೇತರು ಸ್ಪರ್ಧಿಸಿ ಒಂದು ಟ್ರೋಫಿ ಅಥವಾ ಬಹುಮಾನವನ್ನು ಗೆಲ್ಲಲು ಅನುವಾಗಲು ಸ್ಪರ್ಧಾಸಮಯದಲ್ಲೇ "ಟ್ರೋಫಿ ಡ್ಯಾಷ್" ಸಹ ಏರ್ಪಾಡಾಗಬಹುದು. ಬಹುಮಾನವು ಹಣದ ರೂಪದಲ್ಲಿದ್ದರೆ ಆ ರೇಸ್ ಅನ್ನು "ಡ್ಯಾಷ್ ಫಾರ್ ದ ಕ್ಯಾಷ್" ಅಥವಾ "ರನ್ ಫಾರ್ ದ ಮನಿ" ಎಂದೋ ಕರೆಯಲಾಗುತ್ತದೆ. ಕೆಲವು ಜಾಡುಗಳಲ್ಲಿ ಹೀಟ್ ರೇಸ್ ನ ಬದಲಾಗಿ ಈ ಅರ್ಹತಾ ಡ್ಯಾಷ್ ಅನ್ನೇ ಪ್ರಮುಖ ರೇಸ್ ನಲ್ಲಿ ಯಾವ ಯಾವ ಕಾರ್ ಗಳು ಎಲ್ಲೆಲ್ಲಿ ನಿಂತು ಭಾಗವಹಿಸಬೇಕೆಂದು ನಿರ್ಧರಿಸುವುದಕ್ಕೆ ಮಾನದಂಡವಾಗಿ ಬಳಸಿಕೊಳ್ಳಲಾಗುತ್ತದೆ.

ಬಹುತೇಕ ಮಂಜೂರಾದ ರೇಸ್ ಗಳಲ್ಲಿ ಅಥವಾ ದೊಡ್ಡ ರೇಸ್ ಗಳಲ್ಲಿ ಅರ್ಹತಾ ಸುತ್ತೊಂದು ಇದ್ದು, ಅದರಲ್ಲಿ ಹೀಟ್ ರೇಸ್ ನ ಸಾಲಿನಲ್ಲಿ ಇರಬೇಕಾದ ರೇಸರ್ ಗಳು ಯಾರ್ಯಾರೆಂಬುದನ್ನು ನಿರ್ಧರಿಸಲಾಗುತ್ತದೆ. ಅನೇಕ ರೇಸ್ ಗಳಲ್ಲಿ ಒಂದು ನಿರ್ದಿಷ್ಟ ಸಂಖ್ಯೆಯಷ್ಟು (ಸಾಮಾನ್ಯವಾಗಿ ಆರು) ಚಾಲಕರನ್ನು ಮಾತ್ರ ಸ್ಪರ್ಧೆಗೆ ಆಯ್ದುಕೊಳ್ಳಲಾಗುತ್ತದೆ; ಇತರ ಜಾಡುಗಳಲ್ಲಿ (ಬಹುತೇಕ A ದರ್ಜೆಯ ಸ್ಪರ್ಧೆಯಲ್ಲಿ) ಅತಿ ವೇಗಿ ಎಂಬ ಅರ್ಹತೆ ಪಡೆದವರು ಕ್ರಮರಹಿತ ಆಯ್ಕೆಯಲ್ಲಿ ನಿರ್ಧರಿತವಾದ ಸಂಖ್ಯೆಯಷ್ಟು ಕಾರ್ ಗಳೊಡನೆ ಆ ಸರಣಿಯಲ್ಲಿ ಸ್ಪರ್ಧಿಸುತ್ತಾರೆ.

ಅರೆ-ಪ್ರಮುಖ/B ಮೇಯ್ನ್[ಬದಲಾಯಿಸಿ]

ಪ್ರಮುಖ ಸ್ಪರ್ಧೆಯ ಪ್ರಾರಂಭದ ಸಾಲಿನಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬುವ ಸಲುವಾಗಿ ಅರೆ-ಪ್ರಮುಖ ರೇಸ್ ನಲ್ಲಿ ಭಾಗವಹಿಸುವ ಮೂಲಕ ಅರ್ಹತಾರಹಿತ ರೇಸರ್ ಗಳೂ ಆ ಸ್ಥಾನಗಳಿಗೆ ಆಯ್ಕೆಯಾಗಬಹುದು. ಪ್ರತಿ ವರ್ಗದಲ್ಲಿನ ಕಾರ್ ಗಳ ಸಂಖ್ಯೆಯ ಆಧಾರದ ಮೇಲೆ, ಒಂದಕ್ಕಿಂತಲೂ ಹೆಚ್ಚಿನ ಪ್ರಮುಖ ರೇಸ್ ಹಮ್ಮಿಕೊಳ್ಳುವ ಸಾಧ್ಯತೆಗಳಿವೆ (C ದರ್ಜೆ; ಹೀಟ್ ರೇಸ್ ನಲ್ಲಿ ಮೂರನೆಯ ಸ್ಥಾನ ಗಳಿಸಿದವರು, B ದರ್ಜೆ: ಹೀಟ್ ರೇಸ್ ನಲ್ಲಿ ಎರಡನೆಯ ಸ್ಥಾನ ಗಳಿಸಿದವರು, ಇತ್ಯಾದಿ) ಹಾಗೂ ಈ ದರ್ಜೆಗಳಲ್ಲಿ ಗೆದ್ದವರು ಪ್ರಮುಖ ಸ್ಪರ್ಧೆಯಲ್ಲಿ ಭಾಗವಹಿಸಲು ಬಡ್ತಿ ಪಡೆಯುತ್ತಾರೆ(A ದರ್ಜೆ). ಇತರ ಜಾಡುಗಳು ವಿವಿಧ ಅರೆ-ಪ್ರಮುಖ ರೇಸ್ ಗಳನ್ನು ಬಳಸಿಕೊಂಡು, ಈ ಹಂತದಿಂದ ಪೂರ್ವನಿರ್ಧರಿತ ಸಂಖ್ಯೆಯಷ್ಟು ಕಾರ್ ಗಳನ್ನು ಪ್ರಮುಖ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರೆಂದು ನಿರ್ಧರಿಸಿ ಕಳುಹಿಸುತ್ತವೆ. ಈ ಅರೆ-ಪ್ರಮುಖ ರೇಸ್ ನಲ್ಲಿ ಗೆದ್ದು ಪ್ರಮುಖ ರೇಸ್ ಗೆ ಅರ್ಹತೆ ಪಡೆದ ಕಾರ್ ಗಳು ಸಾಮಾನ್ಯವಾಗಿ ಅವುಗಳು ಅರೆ-ಪ್ರಮುಖ ಸ್ಪರ್ಧೆಯಲ್ಲಿ ಗಳಿಸಿದ ಜಯದ ಆಧಾರದ ಮೇರೆಗೆ ಹಿಂದಿನ ಸಾಲಿನಲ್ಲಿ ಸಾಲುಗಟ್ಟಿ ನಿಲ್ಲುವುವು.

ಪ್ರಮುಖ/ಮುಖ್ಯ[ಬದಲಾಯಿಸಿ]

A ದರ್ಜೆ ಅಥವಾ ಪ್ರಮುಖ ಸ್ಪರ್ಧೆಯನ್ನು ಪ್ರತಿ ವಿಭಾಗದಲ್ಲೂ ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿನ ಶ್ರೇಷ್ಠ ಕಾರ್ ಗಳು ಈ ರೇಸ್ ನಲ್ಲಿ ಸ್ಪರ್ಧಿಸುತ್ತವೆ. ಮೊದಲ ಸಾಲಿನಲ್ಲಿನ ಸ್ಥಾನಗಳನ್ನು ಋತುವಿನಲ್ಲಿ ಪಡೆದ ಪಾಯಿಂಟ್ ಗಳ ಆಧಾರದ ಮೇಲೆ ಅಥವಾ ಹೀಟ್/ಟ್ರೋಫಿ ಡ್ಯಾಷ್/ಅರೆ-ಪ್ರಮುಖ ರೇಸ್ ಗಳಲ್ಲಿ ಪಡೆದ ಪಾಯಿಂಟ್ ಗಳ ಸಂಯುಕ್ತ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದು ಸ್ಪರ್ಧೆಯಲ್ಲೇ ಬಹಳ ಉದ್ದದ ರೇಸ್ ಆಗಿರುತ್ತದೆ. ಪಾಯಿಂಟ್ ಗಳು, ಟ್ರೋಫಿ, ಹಾಗೂ ಸಾಮಾನ್ಯವಾಗಿ ಒಂದಿಷ್ಟು ಹಣವನ್ನು ಬಹುಮಾನವಾಗಿ ವಿಜೇತರಿಗೆ ನೀಡಲಾಗುತ್ತದೆ; ವಿಜೇತರ ಸ್ಥಾನದ ಆಧಾರದ ಮೇಲೆ (ಮೊದಲ ಸ್ಥಾನಕ್ಕೆ ಹೆಚ್ಚು ಹಣ, ೨ನೆಯದಕ್ಕೆ ಕೊಂಚ ಕಡಿಮೆ, ಇತ್ಯಾದಿ) ನೀಡುವ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಪ್ರಮುಖ ಸ್ಪರ್ಧೆಯಲ್ಲಿ ಗೆದ್ದವರನ್ನು ಇಡೀ ಕಾರ್ಯಕ್ರಮದ ವಿಜೇತರೆಂದು ಪರಿಗಣಿಸಲಾಗುತ್ತದೆ.

ವಿಶೇಷ ಘಟನೆಗಳು[ಬದಲಾಯಿಸಿ]

ಅನೇಕ ಜಾಡುಗಳಲ್ಲಿ ಇತರ ವಿಶೇಷ ಘಟನೆಗಳು ನಡೆಯುತ್ತವೆ. ಒಮ್ಮೊಮ್ಮೆ ಜಾಡೊಂದು "ಪೌಡರ್-ಪಫ್" ರೇಸ್ ಪ್ರಾಯೋಜಿಸಿ ಕೆಲವು ಲ್ಯಾಪ್ ಗಳಷ್ಟು ದೂರ ರೇಸ್ ಕಾರ್ ಗಳನ್ನು ರೇಸಿಂಗ್ ನಲ್ಲಿ ಓಡಿಸಲು ಮಹಿಳೆಯರಿಗೆ ಅವಕಾಶ ಮಾಡಿಕೊಡುತ್ತದೆ. ಸಾಕಷ್ಟು ಮಹಿಳಾ ಚಾಲಕಿಯರು ತಮಗಾಗಿಯೇ ಒಂದು ವಿಶೇಷ ಕಾರ್ಯಕ್ರಮ ನಡೆಸಬೇಕೆಂದು ಆಸಕ್ತಿ ತೋರಿದರೆ ಜಾಡಿನ ವ್ಯವಸ್ಥಾಪಕರು ಪೌಡರ್ ಪಫ್ ಅನ್ನು ತಮ್ಮ ನಿಯಮಿತ ರೇಸ್ ವೇಳಾಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು; ಇಲ್ಲವಾದರೆ, ರೇಸ್ ಆಡಲೇಬೇಕೆಂದು ನಿರ್ಧರಿಸಿದ ಅನೇಕ ಮಹಿಳೆಯರು ಪುರುಷರ ಕಾರ್ಯಕ್ರಮಗಳಲ್ಲಿಯೇ ತಾವೂ ಪಾಲ್ಗೊಳ್ಳುತ್ತಾರೆ.

ರೇಸರ್ ಗಳನ್ನು ಆಕರ್ಷಿಸಲು ಮತ್ತು ಇವರೊಂದಿಗೆ ಸ್ಪರ್ಧಿಸುವ ಇತರ ಜಾಡುಗಳಿಂದ ಅಭಿಮಾನಿಗಳನ್ನು ಸೆಳೆಯಲು, ಕೆಲವು ಜಾಡುಗಳು ಆಗಾಗ್ಗೆ "ಬೋನಸ್ ಪಾಯಿಂಟ್" ಗಳನ್ನು ನೀಡುವ ಕ್ರಮವಿದೆ. ಅನೇಕ ವೇಳೆ ಜಾಡಿನ ವ್ಯವಸ್ಥಾಪಕರು ಈ ರೇಸ್ ಗಳನ್ನು ಗೆದ್ದರೆ ಹೆಚ್ಚಿನ ಮೊತ್ತ ನೀಡುವುದಾಗಿಯೂ ವಾಗ್ದಾನ ನೀಡುತ್ತಾರೆ.

ಅಲ್ಲದೆ ಹಲವಾರು ಜಾಡುಗಳು ಪ್ರವಾಸಿ ರೇಸಿಂಗ್ ಅಸೋಸಿಯೇಷನ್ ಗಳೊಡನೆ ಒಪ್ಪಂದ ಮಾಡಿಕೊಂಡು ಆ ಅಸೋಸಿಯೇಷನ್ ಗಳು ಮಂಜೂರು ಮಾಡಿದ ಸ್ಪರ್ಧೆಗಳನ್ನು ಏರ್ಪಡಿಸುತ್ತವೆ. ಈ ಸ್ಪರ್ಧೆಗಳಲ್ಲಿನ ರೇಸರ್ ಗಳು ಅಸೋಸಿಯೇಷನ್ ನಲ್ಲಿ ಶ್ರೇಣೀಕೃತವಾಗಲು ಪಾಯಿಂಟ್ ಗಳನ್ನು ಸಂಪಾದಿಸುತ್ತಾರೆ. ಅಸೋಸಿಯೇಷನ್ ಸಹ ಮಂಜೂರಾದ ಸ್ಪರ್ಧೆಗಳ ವಿಜೇತರಿಗೆ ನೀಡುವ ಸಲುವಾಗಿ ಜಾಡಿನ ವ್ಯವಸ್ಥಾಪಕರು ಒಂದು ಗೊತ್ತುಪಡಿಸಿದ ಮೊತ್ತವನ್ನು ನಿರೀಕ್ಷಿಸುತ್ತದೆ.

ಅನೇಕ ಜಾಡುಗಳು "ರನ್-ವಾಟ್-ಯೂ-ಬ್ರಂಗ್" ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತವೆ (ಅಲ್ಲದೆ "ವೀಕ್ಷಕರ ವರ್ಗ/ವಿಭಾಗ" ಸ್ಪರ್ಧೆ ಸಹ). ಈ ಸ್ಪರ್ಧೆಯಲ್ಲಿ ವೀಕ್ಷಕರ ವಿಭಾಗದಿಂದ ಇಬ್ಬರು ಚಾಲಕರು ಬಂದು, ಕರಾರುಗಳಿಗೆ ಸಹಿ ಹಾಕಿದನಂತರ, ತಮ್ಮ ವೈಯಕ್ತಿಕ ವಾಹನಗಳನ್ನು ಪರಸ್ಪರರ ವಿರುದ್ಧ ಒಂದು ಅಥವಾ ಎರಡು ಸುತ್ತಿನ ತೀವ್ರ ಪೈಪೋಟಿಯಲ್ಲಿ ಭಾಗವಹಿಸಬಹುದು.

ಧೂಳುಜಾಡುಗಳು ಬದಲಾವಣೆಗೆ ಅನುಕೂಲಕರವಾಗಿರುತ್ತದೆ ಮತ್ತು ಟಾರ್ ಮತ್ತು ಇತರ ಮೇಲ್ವಾಸುಗಳನ್ನು ಹೊಂದಿದ ದಾರಿಗಳಿಗಿಂತಲೂ ವಿವಿಧೋದ್ದೇಶಗಳಿಗೆ ಪೂರಕವಾಗಿರುತ್ತವೆ ಹಾಗೂ ಇವುಗಳನ್ನು ಇತರ ಮೋಟಾರ್ ಕ್ರೀಡೆಗಳಿಗೆ ಅನುಗುಣವಾಗುವಂತೆ ಮಾರ್ಪಡಿಸುವುದು ಶಕ್ಯ. ಉದಾಹರಣೆಗೆ, ಲಿಟಲ್ ವ್ಯಾಲಿ ಸ್ಪೀಡ್ ವೇ ಎಂಬ ನ್ಯೂ ಯಾರ್ಕ್ ನ ಲಿಟಲ್ ವ್ಯಾಲಿಯಲ್ಲಿರುವ ಜಾಡು ಅರ್ಧ ಮೈಲಿ ಉದ್ದ ಧೂಳುಜಾಡಾಗಿದ್ದು, ಇದನ್ನು ಒಂದು ಫಿಗರ್-೮ ಜಾಡು, ಅಥವಾ ಡಿಮಾಲಿಷನ್ ಡರ್ಬಿ ಪಿಟ್, ಅಥವಾ ಒಂದು ಟ್ರ್ಯಾಕ್ಟರ್ ಪುಲ್ ಆಗಿ ಬೇಕೆನಿಸಿದಾಗ ಬದಲಾಯಿಸಬಹುದಾಗಿದೆ.

ಚಾಂಪಿಯನ್‌ಷಿಪ್‌ಗಳು[ಬದಲಾಯಿಸಿ]

ಅಸೋಸಿಯೇಟೆಡ್ ನಿಯಮಾವಳಿ ಪುಸ್ತಕದಲ್ಲಿ ನಮೂದಿಸಿದಂತೆ ಹಾಗೂ ಆ ಕಟ್ಟುಪಾಡುಗಳೇ ನಿರ್ಧರಿಸುವುದಕ್ಕೆ ಅನುಗುಣವಾತಿ ರೇಸ್ ಜಾಡುಗಳು ಮತ್ತು ರೇಸಿಂಗ್ ಅಸೋಸಿಯೇಷನ್ ಗಳು ಚಾಂಪಿಯನ್ ಷಿಪ್ ಬಹುಮಾನಗಳನ್ನು ವಿಜೇತರಿಗೆ ನೀಡುತ್ತವೆ. ಈ ಬಹುಮಾನಗಳು ಸಾಮಾನ್ಯವಾಗಿ ಪ್ರತಿ ವರ್ಗದ ಮೊದಲ ಹತ್ತು ರೇಸ್ ವಿಜೇತರಿಗೆ ನೀಡಲಾಗುವುದು; ಒಂದು ಟ್ರೋಫಿ, ಒಂದು ಜ್ಯಾಕೆಟ್ ಮತ್ತು ಹಣವನ್ನು ಬಹುಮಾನವಾಗಿ ನೀಡಲಾಗುವುದು.

ಜಾಡು ಚಾಂಪಿಯನ್ ಷಿಪ್ ಗಳನ್ನು ಋತುವಿನಲ್ಲಿ ಗಳಿಸಿದ ಪಾಯಿಂಟ್ ಗಳ ಆಧಾರದ ಮೇಲೆ ನೀಡಲಾಗುತ್ತದೆ. ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದುದಕ್ಕೆ ಒಂದು ನಿರ್ದಿಷ್ಟ ಸಂಖ್ಯೆಯಷ್ಟು ಪಾಯಿಂಟ್ ಗಳನ್ನು ನೀಡಬಹುದು ಹಾಗೂ ಹೆಚ್ಚುವರಿ ಪಾಯಿಂಟ್ ಗಳನ್ನು ಪ್ರತಿ ರೇಸ್ ನ ಅಂತ್ಯದ ಸಾಲಿನಲ್ಲಿ ಯಾವ ರೇಸರ್ ಎಲ್ಲಿದರೆಂಬುದರ ಮೇಲೆ ನೀಡಲಾಗುವುದು. ಒಂದು ಜಾಡಿನಲ್ಲಿ ಸಂಪಾದಿಸಿದ ಪಾಯಿಂಟ್ ಗಳು ಸಾಮಾನ್ಯವಾಗಿ ಇನ್ನೊಂದು ಜಾಡಿನಲ್ಲಿ ನಡೆಯುವ ಚಾಂಪಿಯನ್ ಷಿಪ್ ನಲ್ಲಿ ಗಣನೆಗೆ ಬರುವುದಿಲ್ಲ.

ರಾಜ್ಯಾದ್ಯಂತ ಹಾಗೂ ಪ್ರಾಂತ್ಯಗಳಲ್ಲಿ ನಡೆಯುವ ವೆಲೆನ್ ಆಲ್-ಅಮೆರಿಕನ್ ಸರಣಿಚಾಂಪಿಯನ್ ಷಿಪ್ ನಲ್ಲಿ NASCAR ಮಂಜೂರು ಮಾಡಿದ ಧೂಳುಜಾಡುಗಳಲ್ಲಿ ಚಾಲಕರು ಇತರ NASCAR-ಮಂಜೂರಾತಿ ಪಡೆದ ಜಾಡುಗಳಲ್ಲಿನ ಚಾಲಕರೊಸನೆ ಸ್ಪರ್ಧಿಸಬಹುದು; ಆ ಜಾಡುಗಳು ಟಾರ್/ಕಾಂಕ್ರೀಟ್ ಹೊದಿಕೆಯಿರುವುವೂ ಆಗಿರಬಹುದು ಅಥವಾ ಧೂಳಿನವೇ ಆಗಿರಬಹುದು.ರಾಜ್ಯಾದ್ಯಂತ ಹಾಗೂ ಪ್ರಾಂತ್ಯಗಳಲ್ಲಿ ನಡೆಯುವ ಚಾಂಪಿನ್ ಷಿಪ್ ನಲ್ಲಿ ಅತ್ಯಂತ ಶ್ರೇಷ್ಠ ಪ್ರದರ್ಶನ ನೀಡಿದವರು ನ್ಯಾಷನಲ್ (ರಾಷ್ಟ್ರೀಯ) ಚಾಂಪಿಯನ್ ಷಿಪ್ ಅನ್ನು ಪಡೆಯುತ್ತಾರೆ. ೧೯೮೨ ರಲ್ಲಿ ಧೂಳುಜಾಡಿನ ಆಧುನಿಕ ನಮೂನೆಯ ಚಾಲಕರು NASCARನ ಮೊದಲ ಚಾಂಪಿಯನ್ ಷಿಪ್ ಅನ್ನು ಗೆದ್ದರು ಹಾಗೂ ಇದೇ ಚಾಲಕರೇ NASCAR ನ ಚಿಕ್ಕ ಜಾಡಿನ ಚಾಂಪಿಯನ್ ಷಿಪ್ ನ ಮೂವತ್ತು ವರ್ಷಗಳ ಇತಿಹಾಸದಲ್ಲಿ ಅನೇಕ ಬಾರಿ ಹಾಗೂ ಆಗಾಗ್ಗೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಚಾಂಪಿಯನ್ ಷಿಪ್ ಗಳನ್ನು ಗೆದ್ದಿದ್ದಾರೆ; ಈ ಚಾಂಪಿಯನ್ ಷಿಪ್ ಕೇವಲ ಸ್ಥಳೀಯ (ಪ್ರವಾಸಿ ಅಲ್ಲದ) ರೇಸಿಂಗ್ ವಿಭಾಗಗಳಿಗೆ ಮಾತ್ರ ಸೀಮಿತವಾಗಿದೆ.

ರೇಸಿಂಗ್ ಅಸೋಸಿಯೇಷನ್ ಗಳು ಕೆಲವು ಪ್ರಾಯೋಜಿತ ರೇಸ್ ಗಳಲ್ಲಿ ಜಾಡುಗಳಲ್ಲಿ ಸಂಪಾದಿಸಿದ ಪಾಯಿಂಟ್ ಗಳನ್ನು ಏಕಪ್ರಕಾರದಲ್ಲಿ ಲೆಕ್ಕ ಹಾಕುತ್ತಾರೆ. ಅಲ್ಲದೆ, ಇತರ ಅನೇಕ ಸ್ಪರ್ಧೆಗಳಲ್ಲೂ ಈ ಅಸೋಸಿಯೇಷನ್ ಗಳು ವಿಜೇತರನ್ನೂ, ಚಾಲಕರನ್ನೂ ಸ್ಪರ್ಧಿಸಲು ಪ್ರೋತ್ಸಾಹಿಸಬಹುದು.

ಇವನ್ನೂ ಗಮನಿಸಿ‌[ಬದಲಾಯಿಸಿ]

 • ನ್ಯಾಷನಲ್ ಡರ್ಟ್ ಲೇಟ್ ಮಾಡಲ್ ಹಾಲ್ ಆಫ್ ಫೇಮ್
 • ಯುನೈಟೆಡ್ ಸ್ಟೇಟ್ಸ್ ನಲ್ಲಿ ಧೂಳು ಜಾಡಿನ ರೇಸಿಂಗ್
 • ಎ.ಎಂ.ಎ. ಗ್ರ್ಯಾಂಡ್ ನ್ಯಾಷನಲ್ ಚಾಂಪಿನಷಿಪ್

ಉಲ್ಲೇಖಗಳು‌‌[ಬದಲಾಯಿಸಿ]

 1. ಟು ಗೆಟ್ ಸ್ಟಾರ್ಟೆಡ್ ರೇಸಿಂಗ್ Archived 2011-05-28 ವೇಬ್ಯಾಕ್ ಮೆಷಿನ್ ನಲ್ಲಿ. at ವಿಕ್ಟರಿ ಲೇನ್ ಮ್ಯಾಗಝೀನ್ ನಲ್ಲಿ.