ದ್ವಾದಶಾಹ

ವಿಕಿಪೀಡಿಯ ಇಂದ
Jump to navigation Jump to search

ದ್ವಾದಶಾಹ ಅಂದರೆ ಅಕ್ಷರಶಃ ಹನ್ನೆರಡು ದಿನದ ಯಾಗ.

ಹನ್ನೆರಡು ದಿನ ನಡೆಯುವ ಸೋಮ ಯಾಗವನ್ನು ದ್ವಾದಶಾಹ ಎಂದು ಕರೆಯಲಾಗುತ್ತದೆ. ಇದರಲ್ಲಿ ದಾಶ ರಾತ್ರ ಎಂದು ಕರೆಯಲಾದ ಹತ್ತು ದಿನದ ಕ್ರಮಾಗತಿಯು ಅತಿರಾತ್ರಗಳು ಎಂದು ಕರೆಯಲಾದ ಎರಡು ತೀವ್ರ ದಿನ ಹಾಗೂ ರಾತ್ರಿಯ ಯಾಗಗಳಿಂದ ಸುತ್ತುವರಿಯಲ್ಪಟ್ಟಿದೆ. ಅತಿರಾತ್ರಗಳು ಆರಂಭ ಮತ್ತು ಮುಕ್ತಾಯದ ದಿನಗಳು.[೧] ಅಗ್ನಿಷ್ಟೋಮವು ಹನ್ನೆರಡು ದಿನಗಳೊಳಗಿನ ಎಲ್ಲ ಸೋಮ ಯಾಗಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ, ದ್ವಾದಶಾಹ ಸೋಮ ಯಾಗವು ಹನ್ನೆರಡು ಅಥವಾ ಹೆಚ್ಚಿನ ದಿನಗಳ ಸೋಮ ಯಾಗಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ. ಋಗ್ವೇದಕ್ಕೆ ಸೇರಿದ ಐತರೇಯ ಬ್ರಾಹ್ಮಣ ಮತ್ತು ಕೌಷೀತಕಿ ಬ್ರಾಹ್ಮಣಗಳೆರಡೂ ಈ ಋಗ್ವೈದಿಕ ವಿಧಿಯನ್ನು ಸಂರಕ್ಷಿಸುತ್ತವೆ. ಐತರೇಯ ಬ್ರಾಹ್ಮಣವು (IV.25) ದ್ವಾದಶಾಹ ಯಾಗವನ್ನು ಪ್ರಜಾಪತಿಯ ಯಾಗವೆಂದು ಕರೆಯುತ್ತದೆ, ಮತ್ತು ಜೈಮಿನೀಯ ಬ್ರಾಹ್ಮಣವು (III.302) ದ್ವಾದಶಾಹದ ಷ್ಟೋಮಗಳನ್ನು ಪ್ರಜಾಪತಿಯ ಬಲಿಷ್ಠ ಮಕ್ಕಳು ಎಂದು ಕರೆಯುತ್ತದೆ.

ಹನ್ನೆರಡು ದಿನದ ಸೋಮ ಯಾಗಗಳನ್ನು ಅಹೀನಗಳು ಎಂದು ಕರೆಯಲಾಗುತ್ತದೆ, ಮತ್ತು ಹೆಚ್ಚು ಉದ್ದನೆಯ ಯಾಗಗಳನ್ನು ಸತ್ತ್ರಗಳು ಎಂದು ಕರೆಯಲಾಗುತ್ತದೆ. ಐತರೇಯ ಬ್ರಾಹ್ಮಣವು ಈ ಯಾಗದ ಮೂಲ ಮತ್ತು ಆರಂಭಿಕ ವಿಧಿಯಿಂದ ಶುರುಮಾಡಿ ತನ್ನ ಪಂಚಿಕಾ IV.iv.23 ರಿಂದ V.iv.25 ದಲ್ಲಿ ದ್ವಾದಶಾಹ ಯಾಗವನ್ನು ವಿವರಿಸುತ್ತದೆ. ದ್ವಾದಶಾಹ ಯಾಗದ ಮೊದಲ ಆರು ಪೃಷ್ಠ ದಿನಗಳು ಬಾಯಿಯನ್ನು ಪ್ರತಿನಿಧಿಸುತ್ತವೆ, ಏಳರಿಂದ ಒಂಭತ್ತನೆ ದಿನಗಳು ಚಂದೋಮಾ ದಿನಗಳು ಇವು ಬಾಯಿಯಲ್ಲಿರುವ ನಾಲಿಗೆಯ ಅಂಗುಳು ಮತ್ತು ಹಲ್ಲುಗಳನ್ನು ಪ್ರತಿನಿಧಿಸುತ್ತವೆ; ಆದರೆ ಹತ್ತನೆ ದಿನ ಹರ್ಷದ ದಿನವು ಸ್ಫುಟ ಧ್ವನಿಗಳನ್ನು ಉತ್ಪತ್ತಿಮಾಡುವ ಅಥವಾ ಸಿಹಿ ಮತ್ತು ಸಿಹಿಯಲ್ಲದ್ದನ್ನು ವ್ಯತ್ಯಾಸಮಾಡಲು ಬಳಸುವ ಅಂಗವನ್ನು ಪ್ರತಿನಿಧಿಸುತ್ತದೆ. ಸಮೃದ್ಧಿಯನ್ನು ಬಯಸುವವರು ಈ ಆಚರಣೆಯನ್ನು ಮಾಡುತ್ತಾರೆ. ಸತ್ತ್ರಗಳ ಮೂಲಭೂತ ಯೋಜನೆ ದ್ವಾದಶಾಹದಂತೆಯೇ ಇದೆ. ಇದರಲ್ಲಿ ಅತಿರಾತ್ರ, ಪೃಷ್ಠ ದಿನಗಳು, ಚಂದೋಮಾ ದಿನಗಳು, ಅವಿವಾಕ್ಯ, ಮತ್ತು ಉದಯನೀಯ ಅತಿರಾತ್ರ (ಒಂದು ದಿನ) ಇರುತ್ತವೆ, ಈ ಕಾರ್ಯಕ್ರಮವನ್ನು ಸೂಕ್ತವಾಗಿ ವಿಸ್ತರಿಸಬಹುದು.

ದ್ವಾದಶಾಹ ಯಾಗವು ಅಹೀನ ಮತ್ತ ಸತ್ತ್ರ ಎರಡೂ ಬಗೆಯ ಸೋಮ ಯಾಗವಾಗಿದೆ. ಅಹೀನ ಬಗೆಯು ವಾಯುಧವಾದರೆ, ಸತ್ತ್ರ ಬಗೆಯು ಸಮುಧ. ಸತ್ತ್ರ ರೀತಿಯ ಅವಧಿಯಲ್ಲಿ, ಬಲಿಯಿರುವುದಿಲ್ಲ, ಕೇವಲ ಬ್ರಾಹ್ಮಣರು ಈ ವಿಧಿಯನ್ನು ನೆರವೇರಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. The Supreme Wisdom of the Upanishads. Motilal Banarsidass. p. 270.