ದ್ಯುತಿ ಅವಧಿತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿನಂಪ್ರತಿ ಸಸ್ಯಗಳಿಗೆ ದೊರೆಯುವ ಬೆಳಕು ಮತ್ತು ಕತ್ತಲಿನ ಅವಧಿಯು ಅವುಗಳ ಬೆಳವಣಿಗೆ ಮತ್ತು ಹೂವು ಬಿಡುವಿಕೆಗಳ ಮೇಲೆ ಪರಿಣಾಮ ಬೀರುತ್ತದೆ.ಈ ವಿಷಯವನ್ನು ಡಬ್ಲ್ಯು ಡಬ್ಲ್ಯು ಗಾರ್ನರ್ ಮತ್ತು ಎಚ್.ಎ.ಎಲ್ಲಾರ್ಡ್ ರು ೧೯೨೦ರಲ್ಲಿ ಕಂಡುಹಿಡಿದರು.ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿವಿಧ ಋತುಗಳಲ್ಲಿ ದೈನಂದಿನ ಹಗಲು ಮತ್ತು ರಾತ್ರಿಗಳ ಅವಧಿ ವ್ಯತ್ಯಾಸವಾಗುತ್ತದೆ.ಉದಾಹರಣೆಗೆ,ಸಮಶೀತೋಷ್ಣವದ ಕೆಲವು ದೇಶಗಳಲ್ಲಿ ಬೇಸಿಗೆಯಲ್ಲಿ ೧೫ ಗಂಟೆ ಹಗಲು,೯ ಗಂಟೆ ರಾತ್ರಿ ಇದ್ದರೆ,ಚಳಿಗಾಲದಲ್ಲಿ ೯ ಗಂಟೆ ಹಗಲು,೧೫ ಗಂಟೆ ರಾತ್ರಿ ಇರುತ್ತದೆ.ಬೆಳಕು ಕತ್ತಲೆಗಳ ಈ ಅವಧಿಯು ವಿಶೇಷವಾಗಿ ಸಸ್ಯಗಳ ಹೂವು ಬಿಡುವಿಕೆಯ ಮೇಲೆ ಗಾಢ ಪ್ರಭಾವ ಬೀರುತ್ತವದೆ.ಮೂಲಂಗಿ,ಲೆಟ್ಯೂಸ್ನಮತಹ ಸಸ್ಯಗಲು ೧೨ ಗಂಟೆಗಿಂತ ಅಧಿಕ ಹಗಲು ಸಿಗುವ ಸಮಯದಲ್ಲಿ ಹೂವು ಬಿಡುವುವು.ಇವುಗಳನ್ನು ಉದ್ದ ಹಗಲಿನ ಸಸ್ಯಗಳು (ಲಾಂಗ್-ಡೇ ಪ್ಲಾಂಟ್ಸ್) ಎನ್ನುವರು.ಇದಕ್ಕೆ ಪ್ರತಿಯಾಗಿ ಸೇವಂತಿಗೆ,ಏಸ್ಟರ್,ಕಾಸ್ಮಾಸ್ ಸಸ್ಯಗಳು ಕಡಿಮೆ ಹಗಲಿನ ಸಮಯವಿದ್ದಾಗಲೇ ಹೂವು ಬಿಡುವುವು.ಇವುಗಳನ್ನು ಗಿಡ್ಡ ಹಗಲಿನ ಸಸ್ಯಗಳು(ಷಾರ್ಟ್-ಡೇ ಪ್ಲಾಂಟ್ಸ್ ) ಎಂದು ಕರೆಯುವರು.ಇನ್ನು ಹೂವು ಬಿಡುವಿಕೆಯಲ್ಲಿ ದ್ಯುತಿ ಅವಧಿಯು ಯಾವುದೇ ಪರಿಣಾಮ ಬೀರದ ಟೊಮೇಟೊ,ಕುಂಬಳದಂತಹ ಸಸ್ಯಗಳನ್ನು ಹಗಲು ತಟಸ್ಥ ಸಸ್ಯಗಳು (ಡೇ-ನ್ಯೂಟ್ರಲ್ ಪ್ಲಾಂಟ್ಸ್)ಎನ್ನುವರು. ಇದೇ ಕಾರಣದಿಂದ ಕೆಲವು ಸಸ್ಯಗಳು ಬೇಸಿಗೆಯಲ್ಲಿ,ಇನ್ನು ಕೆಲವು ಚಳಿಗಾಲದಲ್ಲಿ ಹೂವು ಬಿಟ್ಟರೆ, ಮತ್ತೆ ಕೆಲವು ವರ್ಷವಿಡೀ ಹೂವು ಬಿಡುವುವು.ಗಿಡ್ಡ ಹಗಲಿನ ಗಿಡಗಳನ್ನು ಉದ್ದ ಹಗಲಿನ ಪರಿಸ್ಥಿತಿಯಲ್ಲಿ ಬೆಳೆಸಿದರೆ ಅವು ದೈಹಿಕವಾಗಿ ಬೆಳೆಯುತ್ತಾ ಹೋದರೂ ಹೂವು ಬಿಡಲಾರವು. ಹಾಗೆಯೇ ಉದ್ದ ಹಗಲಿನ ಗಿಡಗಳನ್ನು ಗಿಡ್ಡ ಹಗಲಿನ ಪರಿಸ್ಥತಿಯಲ್ಲಿ ಬೆಳೆಸಿದರೆ ಅವು ಕೃಶಕಾಯವಾಗಿ ಬೆಳೆದು ಹೂವು ಬಿಡಲಾರವು.ಹಗಲಿನ ಉದ್ದದ ಆಧಾರದಲ್ಲಿ ಈ ಮೇಲಿನ ಮೂರು ಗುಂಪುಗಳನ್ನು ಗುರುತಿಸಿದರೂ ಕ್ರಮೇಣ,ಗಿಡಗಳ ಹೂವು ಬಿಡುವಿಕೆಗೆ ಅವುಗಳಿಗೆ ದೊರೆಯುವ ಕತ್ತಲೆಯ ಅವಧಿಯೇ ಹೊರತು ಬೆಳಕಿನ ಅವಧಿಯಲ್ಲ.