ದೊಡ್ಡ ಆಲದ ಮರ
ದೊಡ್ಡ ಆಲದ ಮರ | |
---|---|
Species | (ಫಿಕಸ್ ಬೆಂಗಲೆನ್ಸಿಸ್) |
Location | ಕೇತೋಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ, ಕರ್ನಾಟಕ, ಭಾರತ |
Coordinates | no12°54′34″N 77°23′44″E / 12.90944°N 77.39556°E |
Date seeded | 17 ನೇ ಶತಮಾನ |
Custodian | no |
ದೊಡ್ಡ ಆಲದ ಮರ ಬೆಂಗಳೂರಿನಿಂದ ೨೮ ಕಿ.ಮೀ. ದೂರವಿರುವ . ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ ೩ ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದ ಮರವಾಗಿದೆ. ೪೦೦ ವರ್ಷಗಳಷ್ಟು ವಯಸ್ಸಾಗಿರುವ ಈ ವಿರಳ ಆಲದ ಮರಕ್ಕೆ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ.ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ.ಆಲದ ಮರದ ಎತ್ತರ ೯೫ ಅಡಿ. ಕೊಂಬೆಗಳು. ದೈತ್ಯ ಮರ ನಾಲ್ಕು ೩ ಎಕರೆಯಲ್ಲಿ ಆವರಿಸಿದೆ. ಜೋಲಾಡುವ ಸಾವಿರಾರು ಬೇರುಗಳದ್ದೇ ವಿಶಿಷ್ಟ ಆಕರ್ಷಣೆ. ಅವುಗಳ ಒಂದು ಭಾಗವನ್ನೇ ಚಚರವಾಗಿಸಿಕೊಂಡ ಮುನೇಶ್ವರ ಸ್ವಾಮಿ ದೇವಾಲಯ. ಹೆಮ್ಮರ ವೀಕ್ಷಿಸಲು ಬರುವವರು ದಣಿವಾರಿಸಿಕೊಳ್ಳಲು ಕಲ್ಲು ಬೆಂಚುಗಳು ಇವೆ. . ೨೦೦೦ರಲ್ಲಿ ಮರದ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತು. ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ. ಕೊಂಬೆಗಳು ನಿರಂತರ ಜಟೆಯಂತೆ ಬೇರು ಅರ್ಥಾತ್ ಬಿಳಲುಗಳನ್ನು ನೆಲದಾಳಕ್ಕೆ ಇಳಿಬಿಟ್ಟಿವೆ .[೧]
ಇತಿಹಾಸ
[ಬದಲಾಯಿಸಿ]ಸ್ಥಳೀಯರು ಹೇಳುವ ಬಾಯಿಮಾತಿನ ಕಥೆಯ ಪ್ರಕಾರ ಹಿಂದೆ ಈಗಿರುವ ಆಲದಮರದ ಜಾಗದಲ್ಲಿ ಧಾನ್ಯದ ಕಣ ಮಾಡುತ್ತಿದ್ದರಂತೆ, ಕಣವನ್ನು ಹದಗೊಳಿಸಿ ಕಣದ ಮೇಟಿಯಾಗಿ ಆಲದ ಕಡ್ಡಿಯನ್ನು ನೆಟ್ಟಿದ್ದರು (ಮೇಟಿಯನ್ನು ಕಣದ ಮಧ್ಯಭಾಗದಲ್ಲಿ ನೆಟ್ಟಿರುತ್ತಾರೆ. ಮೇಟಿಯ ಸುತ್ತಲೂ ಹಗ್ಗದಿಂದ ಕಟ್ಟಿರುವ ಎತ್ತುಗಳನ್ನು ತಿರಿಗಿಸುತ್ತಾರೆ. ಈ ರೀತಿ ಎತ್ತುಗಳ ಕಾಲ್ತುಳಿತಕ್ಕೆ ಸಿಕ್ಕಿದ ರಾಗಿ ತೆನೆಯಲ್ಲಿನ ರಾಗಿ ತೆನೆಯಿಂದ ಪ್ರತ್ಯೇಕಗೊಳ್ಳುತ್ತದೆ. ರಾಗಿ ತುಳಿಸುವ ಈ ದೃಶ್ಯವನ್ನು ರೈತರು ಸುಗ್ಗಿ ಕಾಲದಲ್ಲಿ ಕಣಗಳಲ್ಲಿ ಕೆಲಸ ಮಾಡುವಾಗ ಕಾಣಬಹುದು). ಮೇಟಿಕಡ್ಡಿಯು ಒಂದೇ ರಾತ್ರಿಯಲ್ಲಿ ಆಶ್ಚರ್ಯಕರವಾಗಿ ಚಿಗುರಿ ಬೆಳೆದಿತ್ತು ಇದನ್ನು ನೋಡಿದ ಜಮೀನಿನ ಮಾಲೀಕ ಸಂಪ್ರದಾಯದಂತೆ ದೇವರುಗಳಲ್ಲಿ ಶಾಸ್ತ್ರ ಕೇಳಿದಾಗ ಅದು ದೇವರ ಮಹಿಮೆ ಎಂದು ತಿಳಿಯಲ್ಪಟ್ಟಿತು. ಹೀಗಿರುವಾಗ ಮಾಲೀಕನಿಗೆ ಕನಸಿನಲ್ಲಿ ಮುನೇಶ್ವರ ದೇವರು ಕಂಡು ಆಲದ ಸಸಿಯ ಬಗ್ಗೆ ತಿಳಿಸುತ್ತ ಆ ಜಾಗದಲ್ಲಿ ತಾನು ನೆಲೆಸುವುದಾಗಿ ತಿಳಿಸಿದನು. ಆಗಿನಿಂದ ದೇವರ ಆಜ್ಞೆಯಂತೆ ಅಲ್ಲೇ ಮುನೇಶ್ವರ ದೇವರ ಕಲ್ಲಿನ ಬೆನಕ (ಚೂರು ಕಲ್ಲುಗಳು) ಪೂಜೆ ಮಾಡುತ್ತ ಮರವನ್ನು ಕಡಿಯದೆ ಸಂರಕ್ಷಿಸಿದರು. ಅದೇ ಮರ ಇಂದು ಬೃದಾಕಾರವಾಗಿ ಬೆಳೆದು ದೊಡ್ಡ ಆಲದಮರವೆಂದು ವಿಶ್ವ ಪ್ರಸಿದ್ದವಾಗಿದೆ.
ಸಂರಕ್ಷಣೆಯ ಹೊಣೆ
[ಬದಲಾಯಿಸಿ]ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಆಲದ ಮರದ ಸಂರಕ್ಷಣೆಯ ಹೊಣೆ ವಹಿಸಿಕೊಂಡಿದೆ. ನಾಲ್ಕು ಎಕರೆ ಪ್ರದೇಶಕ್ಕೆ ಸುತ್ತ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವೆಂದು ಸಾರಿದೆ. ಕೇಂದ್ರ ಸರ್ಕಾರಕ್ಕೂ ಪ್ರದೇಶವನ್ನು ಸರ್ವತೋಮುಖ ಅಭಿವೃದ್ಧಿಗೆ ಪರಿಗಣಿಸಬೇಕೆಂದು ಶಿಫಾರಸು ಮಾಡಿದೆ.ಕುಡಿಯುವ ನೀರಿನ ವ್ಯವಸ್ಥೆಯಿದೆ. ಕೋತಿಗಳ ಕಾಟ ಜೋರಾಗಿ ಇದೆ.[೨]
ಬಸ್ ಸೇವೆ
[ಬದಲಾಯಿಸಿ]ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜ ಮಾರ್ಕೆಟ್ನಿಂದ ನೇರವಾಗಿ ಈ ಪ್ರೇಕ್ಷಣೀಯ ಸ್ಥಳಕ್ಕೊಯ್ಯುವ ಬಿಎಂಟಿಸಿ ಬಸ್ಸುಗಳಿವೆ.
ಬಸ್ ಸಂಖ್ಯೆ ಮಾರುಕಟ್ಟೆಯಿಂದ- 227 A,B, E,F,K,L,N,S
ಬಸ್ ಸಂಖ್ಯೆ ಕೆಂಪೇಗೌಡ ಬಸ್ ನಿಲ್ದಾಣ- 227 P
ಗ್ಯಾಲರಿ
[ಬದಲಾಯಿಸಿ]-
ಮರದ ಮೇಲೆ ಮಂಗಗಳು
-
ಮರದ ಸುತ್ತಮುತ್ತಲಿನ ಮಂಗಗಳು
-
ಆಲದ ಮರದ ಮೇಲೆ ಮಂಗಗಳು
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ದೊಡ್ಡ ಆಲದ ಜಟಾ ಜಾಲ". www.prajavani.net/news ,29 June 2017.[ಶಾಶ್ವತವಾಗಿ ಮಡಿದ ಕೊಂಡಿ]
- ↑ Dodda Alada Mara Big Banyan Tree ದೊಡ್ಡ ಆಲದ ಮರ
೩. https://ogatugaadegalu.blogspot.com/2018/02/3.html