ದೊಡ್ಡಕಣಗಾಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡಕಣಗಾಲು ಹಾಸನ ಜಿಲ್ಲೆ ಆಲೂರು ತಾಲೂಕಿನ ಒಂದು ದೊಡ್ಡ ಗ್ರಾಮವಾಗಿದೆ. ಯಗಚಿ ನದಿಯ ದಂಡೆಯಿಂದ ಸುಮಾರು ಒಂದು ಫರ್‌ಲಾಂಗಿನಷ್ಟು ದೂರದಲ್ಲಿದೆ. ಇದು ಆಲೂರು ತಾಲೂಕಿನಲ್ಲಿಯೆ ಅತ್ಯಂತ ದೊಡ್ಡ ಗ್ರಾಮವಾಗಿದ್ದು ಸುಮಾರು ನಾಲ್ಕುನೂರಕ್ಕಿಂತ ಹೆಚ್ಚಿನ ಮನೆಗಳನ್ನು ಹೊಂದಿದೆ ಹಾಗು ಸುಮಾರು ಎರಡು ಸಾವಿರ ಜನ ಸಂಖೆಯನ್ನು ಹೊಂದಿದೆ. ಇತಿಹಾಸ ಪ್ರಸಿದ್ದವಾದ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದಂತಹ ಹಲವಾರು ದೇವಾಲಯಗಳನ್ನು ಈ ಊರಿನಲ್ಲಿ ಕಾಣಬಹುದಾಗಿದೆ. ಹೊಯ್ಸಳರ ಕಾಲಘಟ್ಟದ ಶಿಲಾಶಾಸನಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ.ಈ ಊರಿನಲ್ಲಿ ಪ್ರಮುಖವಾಗಿ ಆಹಾರದ ದಾನ್ಯಗಳು ಹಾಗು ವಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಪ್ರಮುಖವಾಗಿ ಬತ್ತ ರಾಗಿ ಹಾಗು ದ್ವಿದಳ ದಾಣ್ಯಗಳನ್ನು ಆಹಾರದ ಬೆಳೆಗಳಾಗಿ ಹಾಗು ಮುಸುಕಿನ ಜೊಳ ಆಲುಗೆಡ್ಡೆ ಶುಂಠಿ ಮುಂತಾದವುಗಳನ್ನು ವಣಿಜ್ಯ ಬೆಳೆಗಳಾಗಿ ಬೆಳೆಯಲಾಗುತ್ತದೆ. ಈ ಊರಿನ ಮುಖ್ಯ ದೇವರು ವೀರಭದ್ರೇಶ್ವರ ಊರಿನ ಮುಖ್ಯ ಬಿದಿಯಲ್ಲಿಯೆ ಸುಂದರವಾದ ದೇವಸ್ತಾನವಿದೆ

'ಜಂಪೋತ್ಸವ[ಬದಲಾಯಿಸಿ]

ದೊಡ್ಡಕಣಗಾಲಿನ ವಿಶೇಷವೆಂದರೆ ಊರಿನಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ನೆಡೆಯುವ ಜಂಪೋತ್ಸವ ಈ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಸೊಂಪುರ,ಹೊಸಪುರ, ಬಸವನಪುರ, ರಾಜನಹಳ್ಳಿ, ಮುದಿಗೆರೆ,ಉಮ್ಮದೆವರಹಳ್ಳಿ, ಕಾಟಿಹಳ್ಳಿ,ಹುಣಸವಳ್ಳಿ ಮುಂತಾದ ಊರುಗಳಿಂದ