ವಿಷಯಕ್ಕೆ ಹೋಗು

ದೈಹಿಕ ಶ್ರಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೈಹಿಕ ಶ್ರಮವೆಂದರೆ ಜನರು ಮಾಡುವ ದೈಹಿಕ ಕೆಲಸ, ವಿಶೇಷವಾಗಿ ಯಂತ್ರಗಳಿಂದ ಮತ್ತು ಕೆಲಸದ ಪ್ರಾಣಿಗಳಿಗೆ ವ್ಯತಿರಿಕ್ತವಾಗಿ ಮಾಡುವ ಕೆಲಸ. ಅಕ್ಷರಶಃ ಇದರ ಅರ್ಥ ಕೈಯಿಂದ ಮಾಡುವ ಕೆಲಸ, ಮತ್ತು ಸಾಂಕೇತಿಕ ವಿಸ್ತರಣೆಯಿಂದ ಇದರರ್ಥ ದೇಹದ ಯಾವುದೇ ಸ್ನಾಯುಗಳು ಮತ್ತು ಮೂಳೆಗಳಿಂದ ಮಾಡಲಾದ ಕೆಲಸ. ಮಾನವ ಪ್ರಾಗಿತಿಹಾಸ ಮತ್ತು ಇತಿಹಾಸದ ಬಹುತೇಕ ಕಾಲದಲ್ಲಿ, ದೈಹಿಕ ಶ್ರಮ ಮತ್ತು ಇದರ ನಿಕಟ ಒಡನಾಡಿಯಾದ ಪಶುಶ್ರಮವು ದೈಹಿಕ ಕೆಲಸವನ್ನು ನೆರವೇರಿಸಲು ಬಳಸಲಾದ ಪ್ರಾಥಮಿಕ ವಿಧಾನಗಳಾಗಿವೆ. ಉತ್ಪಾದನೆಯಲ್ಲಿ ಮಾನವ ಮತ್ತು ಪಶುಶ್ರಮದ ಅಗತ್ಯವನ್ನು ಕಡಿಮೆಮಾಡುವ ಯಾಂತ್ರೀಕರಣ ಮತ್ತು ಸ್ವಯಂಚಲನೀಕರಣಗಳು ಶತಮಾನಗಳಿಂದ ಅಸ್ತಿತ್ವದಲ್ಲಿವೆ, ಆದರೆ ಕೇವಲ ೧೮ನೇ ಮತ್ತು ೧೯ನೇ ಶತಮಾನಗಳಲ್ಲಿ ಶುರುವಾಗಿ ಇವು ಮಾನವ ಸಂಸ್ಕೃತಿಯನ್ನು ಗಣನೀಯವಾಗಿ ವಿಸ್ತರಿಸಲು ಮತ್ತು ಬದಲಾಯಿಸಲು ಆರಂಭಿಸಿದವು. ಕಾರ್ಯಗತಗೊಳಿಸಲು, ಅವುಗಳಿಗೆ ಸಾಕಷ್ಟು ತಂತ್ರಜ್ಞಾನ ಅಸ್ತಿತ್ವದಲ್ಲಿರುವುದು ಮತ್ತು ಅದರ ಬಂಡವಾಳವೆಚ್ಚಗಳು ಅವುಗಳು ತಪ್ಪಿಸುವ ಭವಿಷ್ಯದ ವೇತನಗಳ ಪ್ರಮಾಣದಿಂದ ಸಮರ್ಥಿತವಾಗಿರಬೇಕಾದ ಅಗತ್ಯವಿರುತ್ತದೆ.

ಬಹುತೇಕ ಯಾವುದೇ ಕೆಲಸಕ್ಕೆ ಸಂಭಾವ್ಯವಾಗಿ ಕೌಶಲ ಮತ್ತು ಬುದ್ಧಿಶಕ್ತಿಯನ್ನು ಅನ್ವಯಿಸಬಹುದಾದರೂ, ಬಹುತೇಕವಾಗಿ ದೈಹಿಕ ಶ್ರಮವನ್ನು ಒಳಗೊಳ್ಳುವ ಅನೇಕ ಕೆಲಸಗಳನ್ನು (ಉದಾಹರಣೆಗೆ ಹಣ್ಣು ಮತ್ತು ತರಕಾರಿಗಳನ್ನು ಆರಿಸುವುದು, ಕೈಯಿಂದ ಸಾಮಾನುಗಳನ್ನು ನಿಭಾಯಿಸುವುದು - ಉದಾ. ಶೆಲ್ಫುಗಳ ಮೇಲೆ ಸಾಮಾನು ಜೋಡಿಸುವುದು, ಕೈಯಿಂದ ಗುಂಡಿ ತೋಡುವುದು, ಅಥವಾ ಭಾಗಗಳ ದೈಹಿಕ ಜೋಡಣೆ) ಹಲವುವೇಳೆ ಕೌಶಲ್ಯರಹಿತ ಅಥವಾ ಅರೆಕುಶಲ ಕಾರ್ಮಿಕರು (ಕುಶಲವಾಗಿ ಅಲ್ಲದಿದ್ದರೂ) ಯಶಸ್ವಿಯಾಗಿ ಮಾಡಬಹುದು. ಹಾಗಾಗಿ ದೈಹಿಕ ಶ್ರಮ ಮತ್ತು ಕೌಶಲ್ಯರಹಿತ ಅಥವಾ ಅರೆಕುಶಲ ಕಾರ್ಮಿಕರ ನಡುವೆ ಭಾಗಶಃ ಆದರೆ ಗಣನೀಯವಾದ ಪರಸ್ಪರ ಸಂಬಂಧವಿದೆ. ಆರ್ಥಿಕ ಮತ್ತು ಸಾಮಾಜಿಕ ಆಸಕ್ತಿ ಸಂಘರ್ಷವನ್ನು ಆಧರಿಸಿ, ಜನರು ಹಲವುವೇಳೆ ಭಾಗಶಃ ಪರಸ್ಪರ ಸಂಬಂಧವನ್ನು ದೈಹಿಕ ಶ್ರಮವನ್ನು ಕೌಶಲ್ಯದ ಅಭಾವಕ್ಕೆ; ಕೌಶಲ್ಯವನ್ನು ಒಂದು ಕಾರ್ಯಕ್ಕೆ ಅನ್ವಯಿಸುವ ಅಥವಾ ಕಾರ್ಮಿಕನಲ್ಲಿ ಕೌಶಲ್ಯವನ್ನು ಅಭಿವೃದ್ಧಿಗೊಳಿಸುವ ಯಾವುದೇ ಸಂಭವನೀಯತೆಯ ಅಭಾವಕ್ಕೆ; ಮತ್ತು ಕೆಳಗಿನ ಸಾಮಾಜಿಕ ವರ್ಗಕ್ಕೆ ಸಮವೆಂದು ನಿರೂಪಿಸುವ ಉತ್ಪ್ರೇಕ್ಷೆಯಾಗಿ ವಿರೂಪಗೊಳಿಸಬಹುದು; ಮಾನವನ ಅಸ್ತಿತ್ವದಾದ್ಯಂತ, ಎರಡನೆಯದು (ಗುಲಾಮರನ್ನು ಕೀಳುಮಾನವರೆಂದು ನಿಂದಿಸುವುದು ಸೇರಿದ) ಗುಲಾಮಗಿರಿಯಿಂದ, ಜಾತಿ ಅಥವಾ ಜಾತಿಯಂಥ ಪದ್ಧತಿಗಳು, ಅಸಮಾನತೆಯ ಹೆಚ್ಚು ಸೂಕ್ಷ್ಮ ರೂಪಗಳವರೆಗಿನ ರೂಪಾಂತರಗಳ ಪಟ್ಟಿಯನ್ನು ಒಳಗೊಂಡಿದೆ.

ಆರ್ಥಿಕ ಸ್ಪರ್ಧೆಯಿಂದ ಹಲವುವೇಳೆ ಉದ್ಯಮಗಳು ಕಾರ್ಮಿಕರನ್ನು ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಖರೀದಿಸಲು ಪ್ರಯತ್ನಿಸುವುದು (ಉದಾಹರಣೆಗೆ, ಕಡಲಾಚೆ ಅಥವಾ ವಿದೇಶದಲ್ಲಿ ಉತ್ಪಾದನೆ ಅಥವಾ ವಿದೇಶಿ ಕಾರ್ಮಿಕರ ನೇಮಕಾತಿ ಮೂಲಕ) ಅಥವಾ (ಯಾಂತ್ರೀಕರಣ ಮತ್ತು ಸ್ವಯಂಚಲನೀಕರಣದ ಮೂಲಕ) ಅದನ್ನು ಸಂಪೂರ್ಣವಾಗಿ ನಿವಾರಿಸುವುದು ಆಗುತ್ತದೆ.