ದೇವಿ ತಲಾಬ್ ಮಂದಿರ, ಜಲಂಧರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವಿ ತಲಾಬ್ ಮಂದಿರ ಹೆಸರಾಂತ ಧಾರ್ಮಿಕ ಕೇಂದ್ರವಾಗಿದ್ದು ಜಲಂಧರ ರೈಲು ನಿಲ್ದಾಣದಿಂದ ಕಿಲೋಮೀಟರ್ ದೂರದಲ್ಲಿದೆ. ಇದನ್ನು 51 ಶಕ್ತಿ ಪೀಠಗಳಲ್ಲಿ ಒಂದು ಎನ್ನಲಾಗುತ್ತದೆ. ದಂತಕಥೆಯ ಪ್ರಕಾರ ಈ ದೇವಾಲಯವಿರುವ ಜಾಗದಲ್ಲಿ ಸಾತಿ ದೇವಿಯ ಬಲಸ್ಥನದ ಭಾಗವು ಇಲ್ಲಿ ಬಿದ್ದಿತ್ತು ಎಂದು.[೧] ಇದನ್ನು ದೇಶದ 51 ಶಕ್ತಿ ಪೀಠಗಳಲ್ಲಿ ಒಂದು ಎನ್ನಲಾಗುತ್ತದೆ. ಈ ದೇವಾಲಯಕ್ಕೆ ಇನ್ನೂರು ವರ್ಷಗಳ ಇತಿಹಾಸವಿದ್ದು ದುರ್ಗಾ ದೇವಿಯ ಮಂದಿರವಾಗಿದೆ, ಇಲ್ಲಿರುವ ಪವಿತ್ರ ಪುಷ್ಕರಣಿ ಹಿಂದೂಗಳಿಗೆ ಪವಿತ್ರವಾಗಿದೆ.[೨]

ಇದಲ್ಲದೇ ಈ ದೇವಾಲಯದಲ್ಲಿ ಭೀಷಣ್ ಭೈರವ್ (ಶಿವ ದೇವರು) ವಿಗ್ರಹವೂ ಇದೆ. ಪ್ರತೀ ಡಿಸೆಂಬರ್ ತಿಂಗಳಲ್ಲಿ ಹರಿವಲ್ಲಭ್ ಸಂಗೀತ ಸಮ್ಮೇಳನ ಆಯೋಜಿಸಲಾಗುತ್ತದೆ, ಅದು ಅಸಂಖ್ಯಾತ ಸಂಗೀತ ಕಲಾವಿದರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇವಾಲಯದ ಹಿಂದೆ ಕಾಳಿ ಮಾತೆಯ ದೇವಾಲಯವಿದ್ದು ಮೂಲ ದೇವಿ ತಲಾಬ್ ಮಂದಿರಕ್ಕೆ ಇದು ರಕ್ತಸಂಬಂಧಿ ದೇವಾಲಯ ಎನ್ನಲಾಗುತ್ತದೆ. ಈ ದೇವಾಲಯದ ವಿನ್ಯಾಸವು ಅಮರನಾಥ್ ಗುಹಾಂತರ ದೇವಾಲಯದ ಮಾದರಿಯಲ್ಲಿದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-07-09. Retrieved 2016-07-02.
  2. http://www.mapsofindia.com/my-india/travel/devi-talab-mandir-a-must-see-temple-in-jalandhar
  3. http://www.indianmirror.com/temples/devi-talab.html