ವಿಷಯಕ್ಕೆ ಹೋಗು

ದೇವಾಲಯಗಳ ಚಕ್ರವರ್ತಿಯ ಉತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವಾಲಯಗಳ ಚಕ್ರವರ್ತಿ ಎಂದು ಕರೆಯಲ್ಪಡುವ ಇಟಗಿಯಲ್ಲಿ, ಸ್ಥಳೀಯರ ನೆರವಿನಿಂದ ಖಾಸಗಿ ಸಂಸ್ಥೆಯೊಂದರಿಂದ ಇಟಗಿ ಉತ್ಸವ ಕೂಡಾ ನೆಡೆಸಲಾಗುತ್ತಿದೆ. ಪ್ರತಿ ಎಳ್ಳು ಅಮಾವಾಸ್ಯೆ ದಿನ ಜಾತ್ರೆ ಮತ್ತು ರಥೋತ್ಸವ ಜರುಗುತ್ತದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮವು ಕೊಪ್ಪಳದಿಂದ ಸುಮಾರು ೨೦ ಕೀ.ಮಿ ಅಂತರದಲ್ಲಿದೆ.ಕೊಪ್ಪಳ ಹಾಗೂ ಭಾನಪುರಗಳು ಇಟಗಿ ಗ್ರಾಮದ ಹತ್ತಿರದ ರೇಲ್ವೆ ನಿಲ್ದಾಣ ತಾಣಗಳಾಗಿವೆ.

ಇತಿಹಾಸ

[ಬದಲಾಯಿಸಿ]

ಭಾರತದ ಇತಿಹಾಸ ಪರಂಪರೆಯಲ್ಲಿ ಈ ಇಟಗಿ ದೇವಾಲಯಗಳು ವಿಶಿಷ್ಟ ಗುರುತನ್ನು ಹೊಂದಿವೆ ಹಾಗೂ ಸಂಕೀರ್ಣ ಮತ್ತೂ ಸೂಕ್ಷ್ಮ ವಾದ ಕೆತ್ತನೆಯ ಕಲಾತ್ಮಕತೆಗೆ ಹೆಸರುವಾಸಿಯಾಗಿವೆ. ಇಟಗಿ ಯ ದೇವಾಲಯಗಳು ಕಲ್ಯಾಣ ಚಾಲುಕ್ಯರ ಕಾಲದ ಮೇರು ಕೃತಿಗಳಾಗಿವೆ ಎಂದು ನಂಬಲಾಗಿದೆ. ಇದನ್ನು "ದೇವಾಲಯಗಳ ಚಕ್ರವರ್ತಿ"ಎಂದು ಬಣ್ಣಿಸಲಾಗಿದೆ.ದೇವಾಲಯಗಳ ನಿರ್ಮಾಣ ವ್ಯವಸ್ಥೆಯು ಕಪ್ಪು ಮತ್ತೂ ನೀಲಿ ಮಿಶ್ರಿತ ಬಣ್ಣದ ಕ್ಲೋರಿಟಿಕ್ ನಿಂದಾಗಿದೆ.ಈ ದೇವಸ್ಥಾನಗಳು ಕ್ರಿ.ಶ.೧೧೨೧ ರ ಅವಧಿಯಲ್ಲಿ ಚಾಲುಕ್ಯ ಚಕ್ರವರ್ತಿ ವಿಕ್ರಮಾಧಿತ್ಯನ ದಂಡನಾಯಕ ಮಹಾದೇವನಿಂದ ನಿರ್ಮಿಸಲಾಯಿತು.ಶ್ರೀ ಮಹದೇವ(ಶಿವ) ಚಾಲುಕ್ಯ ರ ಕಾಲದ ಮುಖ್ಯ ದೇವರಾಗಿತ್ತು.

ದೇವಾಲಯದ ಯೋಜನೆ

[ಬದಲಾಯಿಸಿ]

ದೇವಾಲಯಗಳ ಯೋಜನೆಯು ಒಂದು ಮುಚ್ಚಿದ ಮಂಟಪಕ್ಕೆ ಜೋಡಿಸಲ್ಪಟ್ಟ ಒಂದು ಪುಣ್ಯ ಕ್ಷೇತ್ರವನ್ನು ಒಳಗೊಂಡಿದೆ.

ಕಲಾತ್ಮಕ ಮೌಲ್ಯ ಮಾಪನ

[ಬದಲಾಯಿಸಿ]

ಇಟಗಿಯ ದೇವಾಲಯಗಳು ಸುಂದರವಾಗಿಯೂ ಮತ್ತು ಎಲ್ಲಾ ರೀತಿಯಲ್ಲಿ ಸಂಪೂರ್ಣವಾಗಿ ಅಚ್ಚು ಕಟ್ಟಿನಿಂದ ನಿರ್ಮಾಣವಾಗಿವೆ.

ಉತ್ಸವ ವಿಶೇಷ

[ಬದಲಾಯಿಸಿ]

ಇಟಗಿ ಉತ್ಸವವು ಸುಮಾರು ೧೩ ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಉತ್ಸವದಲ್ಲಿ ನಾಡಿನ ಪರಂಪರೆಯನ್ನು ಬೆಳೆಸಲು ನೆರವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಕವಿಗೋಷ್ಠಿ,,ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ,ಸಾಧಕರಿಗೆ ಸನ್ಮಾನ,ಕಲಾವಿದರಿಗೆ ಗೌರವ ಅರ್ಪಣೆ,ಹಾಗೂ ರಾಜ್ಯದ ನಾನಾ ಜಿಲ್ಲೆಯ ಸಾಂಸ್ಕೃತಿಕ ಕಲಾ ತಂಡಗಳಿಗೆ ಮಹಾದೇವ ದಂಡ ನಾಯಕ ವೇಧಿಕೆಯಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಿ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಲಾಗುತ್ತಿದೆ.