ದೇವರಬೆಟ್ಟ
ಗೋಚರ
ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸುತ್ತಲಿನ ಬೆಟ್ಟಗಳಲ್ಲಿ ಮಾಕಳಿ ಬೆಟ್ಟದ ನಂತರದ ಸ್ಥಾನ ದೇವರಬೆಟ್ಟದ್ದು. ಬೆಟ್ಟದ ಗುಹೆಯಲ್ಲಿ ಹರಿಹರೇಶ್ವರ ದೇವಸ್ಥಾನ ಇದೆ. ಬೆಟ್ಟದ ಮೇಲೆ ಅಷ್ಟೇನೂ ವಿಶಾಲ ಭೂ ಪ್ರದೇಶ ಇಲ್ಲವಾದರೂ ಅಲ್ಲಲ್ಲಿ ಇರುವ ಸಮತಟ್ಟಾದ ಭೂಮಿಯಲ್ಲಿಯೇ ಜಾಲಾರಿ ಗಿಡ, ಬಂಧರೆ, ತಂಗಡಿ, ಅಶ್ವಗಂದಿ, ಕಕ್ಕೆಕಾಯಿ, ಶ್ರೀಗಂಧ ಸೇರಿದಂತೆ ಹಲವಾರು ಔಷಧಿ ಗಿಡಗಳನ್ನು ಕಾಣಬಹುದಾಗಿದೆ.