ದೃಢನಿಶ್ಚಯ
ಗೋಚರ
ದೃಢನಿಶ್ಚಯವು (ಛಲ) ಒಂದು ಧನಾತ್ಮಕ ಭಾವನೆಯಾಗಿದ್ದು, ಅಡೆತಡೆಗಳ ಹೊರತಾಗಿಯೂ ಒಂದು ಕಷ್ಟಕರ ಗುರಿಯತ್ತ ಪಟ್ಟು ಹಿಡಿದು ಮುಂದುವರಿಯುವ ಕೌಶಲ್ಯವನ್ನು ಒಳಗೊಂಡಿರುತ್ತದೆ.[೧][೨] ದೃಢನಿಶ್ಚಯವು ಗುರಿ ಸಾಧನೆಯ ಮೊದಲು ಅಸ್ತಿತ್ವದಲ್ಲಿರುತ್ತದೆ ಮತ್ತು ಒಬ್ಬರ ಗುರಿಯನ್ನು ಸಾಧಿಸಲು ನೆರವಾಗಬಲ್ಲ ವರ್ತನೆಯನ್ನು ಪ್ರೇರೇಪಿಸುವ ಕಾರ್ಯನಿರ್ವಹಿಸುತ್ತದೆ. ಜನರು ದೃಢನಿಶ್ಚಯವನ್ನು ಒಂದು ಭಾವನೆಯೆಂದು ಪರಿಗಣಿಸುತ್ತಾರೆ ಎಂದು ಅನುಭವಾತ್ಮಕ ಸಂಶೋಧನೆಯು ಸೂಚಿಸುತ್ತದೆ; ಬೇರೆ ರೀತಿಯಲ್ಲಿ ಹೇಳುವುದಾದರೆ, ದೃಢನಿಶ್ಚಯವು ಕೇವಲ ಅರಿವು ಸಂಬಂಧಿ ಸ್ಥಿತಿಯಲ್ಲ, ಬದಲಾಗಿ ಭಾವಾತ್ಮಕ ಸ್ಥಿತಿಯಾಗಿರುತ್ತದೆ.[೩] ಮನೋವಿಜ್ಞಾನದ ಸಾಹಿತ್ಯದಲ್ಲಿ, ಸಂಶೋಧಕರು ದೃಢನಿಶ್ಚಯವನ್ನು ಸವಾಲು ಮತ್ತು ನಿರೀಕ್ಷಣಾತ್ಮಕ ಉತ್ಸಾಹ ಸೇರಿದಂತೆ, ಇತರ ಪದಗಳಡಿ ಅಧ್ಯಯನ ಮಾಡಿದ್ದಾರೆ; ಇದು ಇತರ ಧನಾತ್ಮಕ ಭಾವನೆಗಳಿಗೆ ಹೋಲಿಸಿದರೆ ದೃಢನಿಶ್ಚಯದ ಬಗ್ಗೆ ಸಂಶೋಧನೆಯ ತುಲನಾತ್ಮಕ ಕೊರತೆಯ ಒಂದು ಕಾರಣವನ್ನು ವಿವರಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Kirby, L.D., Morrow, J., & Yih, J. (2014). The challenge of challenge: Pursuing determination as an emotion. In M. M. Tugade, M. N. Shiota, & L. D. Kirby (Eds.), Handbook of Positive Emotions. New York: Guilford Publications, Inc.
- ↑ Smith, C. A. (1991). The self, appraisal, and coping. In C. R. Snyder & D. R. Forsyth (Eds.), Handbook of Social and Clinical Psychology: The Health Perspective. New York: Pergamon press.
- ↑ Clore, G. L., Ortony, A., & Foss, M. A. (1987). The psychological foundations of the affective lexicon. Journal of Personality and Social Psychology, 53(4), 751-766.