ವಿಷಯಕ್ಕೆ ಹೋಗು

ದೀಪಕ್ ಗಂಗಾಧರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೀಪಕ್ ಗಂಗಾಧರ್, ಪ್ರಮುಖವಾಗಿ ಕನ್ನಡ ಚಲನಚಿತ್ರರಂಗದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ ಹಾಗೂ ವಿತರಕರಾಗಿ ಗುರುತಿಸಿಕೊಂಡಿರುತ್ತಾರೆ.ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದ ಲವ್ ಮೀ ಓರ್ ಹೇಟ್ ಮೀ ಚಲನಚಿತ್ರವನ್ನು ನಿರ್ಮಿಸಿ ನಿರ್ದೇಶಸಿದ್ದಾರೆ. ವಿತರಕರಾಗಿ ಯಜಮಾನ(2019),ಕಾಳಿದಾಸ ಕನ್ನಡ ಮೇಸ್ಟ್ರು(2019), ಕ್ರಾಂತಿ(2023), ಸೈರಾ ನರಸಿಂಹ ರೆಡ್ಡಿ(2019),ಅಮರ್(2019) ,ಲಕ್ಕಿ ಮ್ಯಾನ್(2022), ದಿಲ್ ಪಸಂದ್(2022),ಫಾರ್ ರಿಜಿಸ್ಟ್ರೇಷನ್(2024) ಸೇರಿ 150 ಕ್ಕೂ ಚಿತ್ರಗಳನ್ನು ವಿತರಿಸಿದ್ದಾರೆ.


ಜನನ :24 ಜೂನ್

ಜನ್ಮಸ್ಥಳ:ಬೆಳಲೆ ಗ್ರಾಮ, ಶಿರಸಿ ತಾಲೂಕ, ಉತ್ತರ ಕನ್ನಡ ಜಿಲ್ಲೆ

ವರ್ಷಗಳ ಸಕ್ರಿಯ : 2012-ಇಂದಿನವರೆಗೆ

ಸಂಸ್ಥೆ: ದೀಪಕ್ ಗಂಗಾಧರ್ ಮೂವೀಸ್, ದೀಪಕ್ ಗಂಗಾಧರ್ ಫಿಲಂಮಿಸ್ಪೀಯರ್(DGF)

ವೃತ್ತಿ: ಚಲನಚಿತ್ರ ನಿರ್ಮಾಪಕ, ನಿರ್ದೇಶಕ,ವಿತರಕ

ಆರಂಭಿಕ ಜೀವನ

ದೀಪಕ್ ಗಂಗಾಧರ್ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಳಲೆ ಎಂಬ ಗ್ರಾಮದಲ್ಲಿ ಗಂಗಾಧರ್ ಹಾಗೂ ಸುಭದ್ರಾ ದಂಪತಿಗಳಿಗೆ ಜನಿಸಿದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೆಳಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಂಕನಾಳ ದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಶ್ರೀ ಶಾರದಾಂಬ ಪ್ರೌಢಶಾಲೆ bhairumbe ಯಲ್ಲಿ ಪ್ರೌಢ ಶಿಕ್ಷಣ ಪಡೆದರು.ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಬೆಂಗಳೂರಿನಲ್ಲಿ ಬಿ.ಎಸ್ಸಿ (ಅಗ್ರಿಕಲ್ಚರ್) ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಪಾಸಾಗಿ, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ಸೈನ್ಸ್ ನಲ್ಲಿ ಎಂ. ಬಿ.ಎ ಸ್ನಾತಕೋತ್ತರ ಪದವಿ ಪಡೆದರು.

ವೃತ್ತಿ

ಎಂ.ಡಿ.ಶ್ರೀಧರ್ ನಿರ್ದೇಶನದ, ರಾಮು ಫಿಲಂಸ್ ನಿರ್ಮಾಣದ ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್ ಅಭಿನಯದ ಸಾಗರ್ (2012) ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದರು. 2013 ರಲ್ಲಿ ಬಿಡುಗಡೆಯಾದ ದರ್ಶನ್ ತೂಗುದೀಪ, ಅಂಬರೀಷ್, ರಚಿತಾ ರಾಮ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ತೂಗುದೀಪ ಪ್ರೊಡಕ್ಷನ್ ಹಾಗೂ ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಸಂಸ್ಥೆ ಪ್ರವೇಶಿಸಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. 2017 ರಲ್ಲಿ ಸಿತಾರ ಎಂಬ ಚಲನಚಿತ್ರದ ಮೂಲಕ ದೀಪಕ್ ಗಂಗಾಧರ್ ಮೂವೀಸ್ ಎಂಬ ಸ್ವಂತ ವಿತರಣಾ ಸಂಸ್ಥೆಯನ್ನು ಆರಂಭಿಸಿ ಕನ್ನಡ, ತುಳು, ತೆಲುಗು ಭಾಷೆಯಲ್ಲಿ 150 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿದ್ದಾರೆ. ಯಜಮಾನ, ಅಮರ್, ಕಾಳಿದಾಸ ಕನ್ನಡ ಮೇಸ್ಟ್ರು, ಒಡೆಯ, ಸೈರಾ, ನರಸಿಂಹ ರೆಡ್ಡಿ, ದಗಲ್ಬಾಜಿಲು, ರಂಗ್ ರಂಗದ ದಿಬ್ಬಣ, ಲಕ್ಕಿ ಮ್ಯಾನ್, ದಿಲ್ ಪಸಂದ್, ಕ್ರಾಂತಿ, ಫಾರ್ ರಿಜಿಸ್ಟ್ರೇಷನ್ ಮತ್ತಿತರ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುತ್ತಾರೆ.2018 ರಲ್ಲಿ ನವೋದಯ ಡೇಸ್ ಎಂಬ ಚಿತ್ರವನ್ನು ಬರೆದು ಸಹ ನಿರ್ಮಾಣ ಮಾಡಿರುತ್ತಾರೆ. ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದ ಲವ್ ಮೀ ಓರ್ ಹೇಟ್ ಮೀ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡುತ್ತಿರುತ್ತಾರೆ.

ಉಲ್ಲೇಖಗಳು

1.https://cinibuzz.in/deepak-gangadhar/ 2.https://vijaykarnataka.com/entertainment/news/love-mocktail-movie-actor-darling-krishna-new-movie-with-deepak-gangadhar/articleshow/80168976.cms 3.https://www.prajavani.net/entertainment/cinema/new-film-of-darling-krishna-deepak-gangadhar-action-cut-795701.html