ದಿ ಮದರ್ಸ್ ಅಜೆಂಡಾ
ದಿ ಮದರ್ಸ್ ಅಜೆಂಡಾ - ಶ್ರೀ ಅರವಿಂದಾಶ್ರಮದ 'ಶ್ರೀ ಮಾತೆ' ಎಂದು ಪ್ರಸಿದ್ಧರಾದ ಮೀರಾ ಅಲ್ಫಾಸ ರವರ ಅಧ್ಯಾತ್ಮಿಕ ಅನುಭವಗಳ ಸಂವಾದಗಳ ಸಂಕಲನ. ಇವು ೧೩ ಸಂಪುಟಗಳಲ್ಲಿ ಪ್ರಾನ್ಸಿನ ಇನ್ ಸ್ಟಿಟ್ಯೂಟ್ ಆಫ್ ಎವಲ್ಯೂಷನರಿ ರಿಸರ್ಚ್ ಮತ್ತು ಮೈಸೂರಿನ ಮೀರಾ ಅದಿತಿಯಿಂದ ಪ್ರಕಾಶಿತ ವಾಗಿರುವುದು
ಸಂವಾದಗಳ ಒಕ್ಕಣಿಕೆ ಮತ್ತು ಸಂಪಾದನೆ
[ಬದಲಾಯಿಸಿ]ಶ್ರೀ ಮಾತೆಯವರ ಶಿಷ್ಯರಾದ ಸತ್ಪ್ರೇಮ್ ರವರೊಡನೆ ೧೯೫೭ರಿಂದ ೧೯೭೩ರ ವರೆಗೆ ಅನೇಕ ಬಾರಿ ನಡೆದ ಮಾತುಕತೆಗಳನ್ನು ಟೇಪ್ ರೆಕಾರ್ಡ್ ಮಾಡಲಾಗಿತ್ತು. ಹೆಚ್ಚು ಕಡಿಮೆ ಸಂಪೂರ್ಣವಾಗಿ ಫ್ರೆಂಚ್ ಭಾಷೆಯಲ್ಲೇ ಇದ್ದ ಈ ಸಂಭಾಷಣೆಗಳನ್ನು ಶ್ರೀ ಮಾತೆಯವರು ಅತೀತ ಮಾನಸಿಕ ಯೋಗದಲ್ಲಿನ ತಮ್ಮ ಕಾರ್ಯದ 'ಕಾರ್ಯಸೂಚಿ' (ಅಜೆಂಡಾ) ಎಂದು ಕರೆಯುತ್ತಿದ್ದರು. ಈ ಸಂಭಾಷಣೆಗಳ ಕೆಲವು ಭಾಗಗಳನ್ನು ಶ್ರೀ ಮಾತೆಯವರ ಜೀವಿತಕಾಲದಲ್ಲಿಯೇ ಆಶ್ರಮದ ನಿಯತಕಾಲಿಕೆಗಳನ್ನು ಪ್ರಕಟಗೊಳಿಸಲಾಗಿದ್ದಿತು (ಇವುಗಳನ್ನು 'ನೋಟ್ಸ್ ಆನ್ ದಿ ವೇ' ಎಂಬ ಪುಸ್ತಕದಲ್ಲಿ ಕಾಣಬಹುದು). ಅವರ ದೇಹಾಂತವಾದ ನಂತರ ಸತ್ಪ್ರೇಮ್ ರವರು ತಮ್ಮ ಸಂಭಾಷಣೆಗಳ ಎಲ್ಲ ಒಕ್ಕಣಿಕೆಗಳನ್ನು ಸಂಪಾದಿಸಿ ೧೩ ಸಂಪುಟಗಳಲ್ಲಿ (ಸುಮಾರು ೬,೦೦೦ ಪುಟಗಳು) ಪ್ರಕಟಪಡಿಸಿದರು