ವಿಷಯಕ್ಕೆ ಹೋಗು

ದಿಶಾಧ್ವನಿಕ ಶಬ್ದಚಿತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿಶಾಧ್ವನಿಕ ಶಬ್ದಚಿತ್ರಣ ವು ಸಾಮಾನ್ಯವಾಗಿ ಸ್ಟಿರಿಯೊ ಅಥವಾ ಧ್ವನಿಯ ಪುನರುತ್ಥಾನದ ಕ್ರಿಯೆಯೆನಿಸಿದೆ.ಎರಡು ಅಥವಾ ಅದಕ್ಕಿಂತ ಹೆಚ್ಚು ಸ್ವತಂತ್ರ ಆಡಿಯೊ ಚಾನಲ್ ಗಳಿಂದ ಶಬ್ದದ ಪ್ರತಿಧ್ವನಿಗೆ ಪೂರಕವಾಗಲಿದೆ.ಇಲ್ಲಿ ಸುಸಾಂಗತ್ಯ ಸಂಗೀತ ಧ್ವನಿಗಾಗಿ ಧ್ವನಿವರ್ಧಕಗಳನ್ನು (ಲೌಡ್ ಸ್ಪೀಕರ್)ಬಳಸಲಾಗುತ್ತದೆ.ಹೀಗೆ ವಿವಿಧೆಡೆಯಿಂದ ಈ ಸಮ್ಮೀತಿಯ ಶಬ್ದಚಿತ್ರಣವು ಶ್ರವಣಕ್ಕೆ ನೈಸರ್ಗಿಕವಾಗಿ ಬರುವಂತೆ ಮಾಡುವ ವಿಧಾನವೇ ಸ್ಟೀರಿಯೊಫೊನಿಕ್ ಎನ್ನಲಾಗಿದೆ. ಇದಕ್ಕೆ ಹೋಲಿಕೆ ಎನ್ನುವಂತೆ ಇದನ್ನು ಬಹುತೇಕ ಮೊನೊಫೊನಿಕ್ ಅಥವಾ "ಮೊನೊ" ಪೂರಕ ಧ್ವನಿತ್ವದ ಪರಿಣಾಮವಾಗಿದೆ.ಈ ಆಡಿಯೊ ಒಂದು ವಾಹಕ ರೂಪವಾಗಿರುತ್ತದೆ.ಅಂದರೆ ಧ್ವನಿಯ ವಲಯದ (ಈ ಪುರಾತನ ದೃಶ್ಯ ವಲಯದ ವಿಜಿವಲ್ ಫೀಲ್ಡ್ ತೋರಿಸುತ್ತದೆ.)

ಈ ಸ್ಟಿರಿಯೊ ರೆಕಾರ್ಡಿಂಗ್ ನ್ನು ಎಫ್ ಎಂ ಪ್ರಸಾರ ಮತ್ತು ಡಿಜಿಟಲ್ ಆಡಿಯೊ ಪ್ರಸಾರ (DAB)ಗಳಲ್ಲಿಯಲ್ಲದೇ ವಿವಿಧ ಟೆಲೆವಿಜನ್ ವಿಧಾನಗಳಲ್ಲಿ ಉಪಯೋಗಿಸಲಾಗುತ್ತದೆ. ಸ್ಟಿರಿಯೊಗಳಲ್ಲಿ ಧ್ವನಿಮುದ್ರಣದಲ್ಲಿ ಧ್ವನಿ ಎಂಜನೀಯರ್ ಪರಿಣತರು ವಿವಿಧ ವಿಧಾನಗಳನ್ನು ಬಳಸುತ್ತಾರೆ.ಎರಡು ದಿಶೆಗಳಲ್ಲಿ ಮೈಕ್ರೊಫೊನ್ ಗಳನ್ನು ಬಳಸಲಾಗುತ್ತದೆ.ಇದರೊಂದಿಗೆ ಸಮಾನಾಂತರ ಆಡಿಯೊಗಳಲ್ಲಿ ಸರ್ವದಿಕ್ಕುಗಳಲ್ಲಿ ಮೈಕ್ರೊಫೊನ್ ಗಳು ಅಥವಾ ಅತ್ಯಧಿಕ ಸಂಕೀರ್ಣ ತಂತ್ರಜ್ಞಾನವನ್ನು ಇದಕ್ಕೆ ಬಳಸಲಾಗುತ್ತದೆ. ಹಲವು ಮೊನೊಫೊನಿಕ್ ಧ್ವನಿಮುದ್ರಣಗಳಾದ ಮೂಲ ಬ್ರಾಡ್ವೆ ಕಾಸ್ಟ್ ನ ಒಕ್ಲಾಹೊಮಾ !ದ ಧ್ವನಿಮುದ್ರಿಕೆಗಳನ್ನು ಇದೇ ಪದ್ದತಿಯಲ್ಲಿ ಅಳವಡಿಸಲಾಗಿದೆ. ಆಗ (1943) ಕಾರೌಸೆಲ್ (1945) ಅಲ್ಲದೇ ಸೌತ್ ಪ್ಯಾಸಿಫಿಕ್ (1949)ಇವುಗಳನ್ನು ಮತ್ತೆ ಧ್ವನಿಮುದ್ರಣಗಗೊಳಿಸಲಾಗಿರುವಂತೆ "ಮೋಸ"ದ ಧ್ವನಿಮುದ್ರಣವೆನ್ನುವಂತಾಗಿತ್ತು.ಈ ಸ್ಟಿರಿಯೊಗಳನ್ನು ಮೂಲದಲ್ಲಿಂದಲೇ ಸಿದ್ದಪಡಿಸಲಾಗಿದೆ ಎಂಬ ಭಾಸ ಉಂಟಾಗುತಿತ್ತು.

ಮೊದಲ ಸ್ಟಿರಿಯೊ ಧ್ವನಿಗ್ರಹಣವನ್ನು ಟೆಲೆಫೊನಿಕ್ ವಿಧಾನದ ಮೂಲಕ ಕ್ಲೆಮೆಂಟ್ ಅಡೆರ್ ಅವರು 1881 ರಲ್ಲಿ ಇದನ್ನು ಪುನರ್ ಧ್ವನಿಗ್ರಹಣ ಸೃಷ್ಟಿಸಿದ್ದರು. ಈಗ ಈ BBC ಯು ಮೊದಲ ಬಾರಿಗೆ ರೇಡಿಯೊದ ಸ್ಟಿರಿಯೊ ಪ್ರಸಾರವನ್ನು ಡಿಸೆಂಬರ್ 1925 ರಲ್ಲಿ ಮಾಡಿತ್ತು. ನಂತರ 1930 ರಲ್ಲಿ EMI ನ ಅಲನ್ ಬ್ಲುಮ್ಲೆಯಿನ್ ಅವರು ಸ್ಟಿರಿಯೊ ರೆಕಾರ್ಡ್ಸ್,ಸ್ಟಿರಿಯೊ ಫಿಲ್ಮ್ಸ್ ಮತ್ತು ಸುತ್ತಮುತ್ತಲಿನ ಸರ್ವದಿಕ್ಕು ಶಬ್ದಕ್ಕಾಗಿ ಹಕ್ಕುಸ್ವಾಮ್ಯಪಡೆದರು.[] ಬೆಲ್ ಲ್ಯಾಬ ರೊಟೀರೀಸ್ ನ ಹಾರ್ವೆ ಫ್ಲೆಚರ್ ಅವರು ಸ್ಟಿರಿಯೊಫೊನಿಕ್ ರೆಕಾರ್ಡಿಂಗ್ ಮತ್ತು ಮರುಪ್ರಸಾರದ ತಂತ್ರಜ್ಞಾನ ಬಳಸುವ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡರು. ಮೊದಲ ಬಾರಿಗೆ ಕಮರ್ಸಿಯಲ್ ಮೊಶನ್ ಪಿಕ್ಚರ್ ಅಂದರೆ ವಾಲ್ಟ್ ಡಿಸ್ನಿಫಾಂಟಾಸಿಯಾ ವನ್ನು (1940)ಸ್ಟಿರಿಯೊಫೊನಿಕ್ ಧ್ವನಿ ಮೇಲೆ ಪ್ರದರ್ಶಿಸಲಾಯಿತು. ಹೀಗೆ 1950-ರ ಮಧ್ಯದ ಅವಧಿಗೆ ವಿವಿಧಚಾನಲ್ ಧ್ವನಿ ಅಳವಡಿಕೆಯು ದೊಡ್ಡ ಮೊತ್ತದ ಚಿತ್ರಗಳಿಗೆ ಹಾಲಿಯುಡ್ ನಲ್ಲಿ ಪ್ರಖ್ಯಾತವಾಯಿತು.[] ರೆಮಿಂಗ್ಟನ್ ರೆಕಾರ್ಡ್ಸ್ 1953 ರಲ್ಲಿ ಅದರ ಕೆಲವು ಸಂಗೀತ ಚಟುವಟಿಕೆಗಳನ್ನು ಧ್ವನಿಮುದ್ರಿಸಿಕೊಂಡಿತು.ಇದರ ಮೊದಲ ಸ್ಟಿರಿಯೊಫೊನಿಕ್ ಫೊನೊಗ್ರಾಫ್ ಡಿಸ್ಕ್ಸ್ ಗಳನ್ನು ಸಾರ್ವಜನಿಕರಿಗಾಗಿ 1958 ರಲ್ಲಿ ಬಿಡುಗಡೆ ಮಾಡಿತು. U.S.ನ ಫೆಡೆರಲ್ ಕಮ್ಯುನಿಕೇಶನ್ಸ್ ಕಮೀಶನ್ ಸ್ಟಿರಿಯೊಫೊನಿಕ್ ಎಫ್ ಎಂ ಪ್ರಸಾರವನ್ನು ತಂತ್ರಜ್ಞಾನದ ಗುಣಮಟ್ಟದ ಮೇಲೆ 1961 ಏಪ್ರಿಲ್ ನಲ್ಲಿ ಘೋಷಿಸಿತು.ಅದೇ ರೀತಿ ನಿಯಮಿತವಾಗಿ ಸ್ಟಿರಿಯೊಫೊನಿಕ್ ಎಫ್ ಎಂ ರೇಡಿಯೊಗಳಿಗಾಗಿ ಅದೇ ವರ್ಷ ಲೈಸನ್ಸ್ ನೀಡಲು ನಿರ್ಧರಿಸಿತು. ನಂತರ 1984 ರಲ್ಲಿ ವಿವಿಧ ಚಾನಲೆ ಟೆಲಿವಿಜನ್ ಧ್ವನಿಯನ್ನು FCCಅಳವಡಿಸಿಕೊಂಡಿತು.ಯುನೈಟೈಡ್ ಸ್ಟೇಟ್ಸ್ ನ ಗುಣದರ್ಜೆ ಪ್ರಕಾರ ಸ್ಟಿರಿಯೊ ಟೆಲೆವಿಜನ್ ಪ್ರಸಾರ ಕೈಗೊಳ್ಳಲಾಯಿತು.

ವಿವರಣೆ

[ಬದಲಾಯಿಸಿ]

ಈ ಪದ ಸ್ಟಿರಿಯೊಫೊನಿಕ್ ನ್ನು ಗ್ರೀಕ್ "στερεός" ನ (ಸ್ಟಿರೊಸ್ ),"ಗಟ್ಟಿ, ಘನ"[] + "φωνή"(ಫೊನ್ ),"ಶಬ್ದ, ಧ್ವನಿಗ್ರಾಹಿ, "[] ಎನ್ನಲಾಗುತ್ತದೆ.ಇದನ್ನು 1927 ರಲ್ಲಿ ವೆಸ್ಟರ್ನ್ ಎಲೆಕ್ಟ್ರಿಕ್,ತನ್ನ ಶಬ್ದದೊಂದಿಗೆ"ಸೇರಿಸಿ ಸ್ಟಿರಿಯೊಸ್ಕೊಪಿಕ್"ನೊಂದಿಗೆ ಚಾಲ್ತಿಗೆ ತಂದಿತು. ಸ್ಟಿರಿಯೊ ಅಂದರೆ ಹೆಚ್ಚಾಗಿ ಎರಡು ಚಾನಲ್ ಗಳ ಧ್ವನಿ ಮುದ್ರಣ ಮತ್ತು ಧ್ವನಿ ಪುನರ್ ಮುದ್ರಣವನ್ನು ಒಂದೇ ಸಂದರ್ಭದಲ್ಲಿ ಹಲವು ಬಾರಿ ಸ್ಪೀಕರ್ ಬಳಸಿ ಮಾಡುವ ಕ್ರಮವಾಗಿದೆ. ತಾಂತ್ರಿಕ ವ್ಯಾಖ್ಯಾನದಂತೆ ಸ್ಟಿರಿಯೊ ಅಥವಾ ಸ್ಟಿರಿಯೊಫೊನಿ ಅಂದರೆ ಧ್ವನಿಗ್ರಹಣದ ಮರುಮುದ್ರಣ ಇದು ಸ್ಟಿರಿಯೊಗ್ರಾಫಿಕ್ ಪ್ರೊಜೆಕ್ಶನ್ ನನ್ನು ಒಳಗೊಳ್ಳುತ್ತದೆ.ಆಯಾ ಸಂದರ್ಭಗಳಲ್ಲಿನ ವಸ್ತುವಿಷಯಗಳ ಮುದ್ರಣ ದಾಖಲೆಯೇ ಇದರ ಉದ್ದೇಶವಾಗಿದೆ. ಈ ಸ್ಟಿರಿಯೊ ವಿಧಾನವು ಎಷ್ಟೇ ಚಾನಲ್ ಗಳನ್ನು ಹೊಂದಿರಬಹುದಾದ ಸಾಧ್ಯತೆ ಇದೆ.ಉದಾಹರಣೆಗೆ ಸರೌಂಡ್ ಸೌಂಡ್ 5.1-ಅಲ್ಲದೇ 6.1 ಚಾನಲ್ ವಿಧಾನಗಳನ್ನು ಅತ್ಯುನ್ನತ ಶ್ರೇಣಿಯ ಚಿತ್ರಗಳು ಮತ್ತು ಟೆಲೆವಿಜನ್ ನಿರ್ಮಾಣಗಳಲ್ಲಿ ಬಳಸಬಹುದಾಗಿದೆ. ಸಾಮಾನ್ಯ ಉಪಯೋಗದಲ್ಲಿ ಇದು ಕೇವಲ ಎರಡು ಚಾನಲ್ ಗಳಿಗೆ ಉಲ್ಲೇಖವಾಗುತ್ತದೆ. ಹಿನ್ನಲೆಯ ಸ್ಟಿರಿಯೊ ಶಬ್ದ ಗ್ರಹಣವನ್ನು ಎಲೆಕ್ಟ್ರಾನಿಕ್ ವಿಧಾನದ ಮೂಲಕ ಮಾಡಲಾಗುತ್ತಿದ್ದು ಇದನ್ನು "ಸ್ಟಿರಿಯೊ" ಎನ್ನಲಾಗುತ್ತದೆ.

ಎರಡು ಚಾನಲ್ ಸ್ಟಿರಿಯೊ ಮುದ್ರಣದಲ್ಲಿ ಎರಡು ಮೈಕ್ರೊಫೊನ್ಸ್ ಗಳನ್ನು ಇಡಲಾಗುತ್ತದೆ.ಧ್ವನಿಯ ಮೂಲ ಗುರುತಿಸಿ ಅದರ ಧ್ವನಿಯನ್ನು ಎಲ್ಲೆಡೆ ಪಸರಿಸಲು ಸಂಭಂಧಪಟ್ಟಂತೆ ಅನುಕ್ರಮವಾದ ಮುದ್ರಣಗಳನ್ನು ಇಡಲಾಗುತ್ತದೆ. ಮುದ್ರಿಸಿದ ಈ ಎರಡು ಚಾನಲ್ ಗಳು ಒಂದೇ ರೀತಿಯಾಗಿರುತ್ತವೆ.ಇವೆರಡರಲ್ಲಿನ ಅವಧಿ ಮತ್ತು ಶಬ್ದಗ್ರಹಣದ ಅವಧಿಯು ಶಬ್ದದ ಒತ್ತಡ ಅವಲಂಬಿಸಿರುತ್ತದೆ. ಹಿನ್ನಲೆ ಗಾಯನದಲ್ಲಿ ಶ್ರೋತೃ ತನ್ನ ಕೇಳುವ ವಿಭಿನ್ನತೆಯನ್ನು ಅದರ ಶಬ್ದ ಗ್ರಹಣಕ್ಕೆ ತಕ್ಕಂತೆ ಪಡೆದು ಆಸ್ವಾದಿಸುತ್ತಾನೆ.ಇಲ್ಲಿ ಮೂರು ಕಡೆಯಿಂದ ತ್ರೀಕೋನೀಯ ಧ್ವನಿಯ ಜಾಗೆಯನ್ನು ಆತ ಗುರುತಿಸುತ್ತಾನೆ. ಈ ಸ್ಟಿರಿಯೊ ಧ್ವನಿಮುದ್ರಣವನ್ನು ಒಂದೇ ಕಿವಿಗೆ ಕೇಳುವ ಹಾಗೆ ಮಾಡಲಾಗದು.ಆದರೆ ಅದರ ಶ್ರೇಣಿ ಮೂಲಕ ಅದರ ಸತ್ಯಾಸತ್ಯತೆನಷ್ಟವಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿ ಮೈಕ್ರೊಫೊನ್ ಮುದ್ರಣಗಳು ತರಂಗಾಂತರದ ಮುಂಚೂಣಿಯನ್ನು ಅದರ ಅಲ್ಪಾವಧಿಯಲ್ಲಿಯೇ ಈ ಅಲೆಗಳ ಹರಿಯು ಹಂತದಿಂದ ಇದನ್ನು ನಿಗದಿ ಮಾಡುತ್ತವೆ.ಇದರಿಂದಾಗಿ ಶಬ್ದದ ನಿರ್ಮಾಣ ಮತ್ತು ಅದರ ವಿನಾಶದ ಮುಖಾಮುಖಿಯು ಎರಡೂ ಟ್ರ್ಯಾಕ್ ನಲ್ಲಿ ಅದೇ ಸ್ಪೀಕರ್ ಬಳಸಿ ಧ್ವನಿ ಮುದ್ರಣ ಮಾಡಲಾಗುತ್ತದೆ. ಈ ವಿದ್ಯಮಾನ ವನ್ನು ಹಂತ ರದ್ದತಿಎನ್ನಲಾಗುತ್ತದೆ.

ಧ್ವನಿಮುದ್ರಣದ ವಿಧಾನಗಳು

[ಬದಲಾಯಿಸಿ]

X-Y ತಂತ್ರಜ್ಞಾನ: ತೀವ್ರತೆಯ ಸ್ಟಿರಿಯೊಫೊನಿ

[ಬದಲಾಯಿಸಿ]
X-Y ಸ್ಟಿರಿಯೊ ಮೈಕ್ರೊಫೊನ್ ಪ್ಲೇಸ್ ಮೆಂಟ್.

ಇಲ್ಲಿ ಎರಡು ನಿರ್ದೇಶಿತ ಮೈಕ್ರೊಫೊನ್ ಗಳನ್ನು ಒಂದೇ ಜಾಗದಲ್ಲಿಡಲಾಗುತ್ತದೆ.ಇದನ್ನು 90° ಮತ್ತು 135°ಡಿಗ್ರಿ ಮಧ್ಯ ಒಂದೊಕ್ಕೊಂದು ಸೇರುವಂತೆ ಕೋನೀಯ ರೀತಿ ಇಡಲಾಗುತ್ತದೆ.(ದಿ "ಸ್ಟಿರಿಯೊಫೊನಿಕ್ ಝೂಮ್ Archived 2011-05-31 ವೇಬ್ಯಾಕ್ ಮೆಷಿನ್ ನಲ್ಲಿ." ಮೈಕೆಲ್ ವಿಲಿಯಮ್ಸ್ ಅವರಿಂದ) ಇಲ್ಲಿ ಸ್ಟಿರಿಯೊ ಪರಿಣಾಮವನ್ನು ವಿವಿಧ ಹಂತಗಳಲ್ಲಿ ಧ್ವನಿ ಒತ್ತಡಗಳ ಈ ಮೈಕ್ರೊಫೊನ್ ಗಳು ಪ್ರತಿಧ್ವನಿಸುತ್ತವೆ. ಈ ಅಂತರವು 18 dB (16 ರಿಂದ 20 dB)ಯ ಹಂತವನ್ನು ತಲುಪಿದಾಗ ಮಾತ್ರ ಇದು ಕೇಳಲು ಸೂಕ್ತವಾಗಿರುತ್ತದೆ.ಧ್ವನಿವರ್ಧಕಗಳ ದಿಕ್ಕನ್ನು ಪರಿಗಣಿಸಿ ಇವುಗಳ ಧ್ವನಿ ನಿಯಂತ್ರಿಸಲಾಗುತ್ತದೆ. ಶಬ್ದ ತಲುಪುವ ಅವಧಿಯ ವ್ಯತ್ಯಾಸ -ಹಂತದ ಗುರುತಿಗೆ ಇಲ್ಲಿನ ಧ್ವನಿ ಗ್ರಹಣದ ಶಕ್ತಿಯನ್ನು X-Y ಧ್ವನಿಮುದ್ರಣದ ಮೂಲಕ ಪರಿಚಯಿಸಲಾಗುತ್ತದೆ.ಇಲ್ಲಿ A-B ಸ್ಥಾಪನೆ ಮೂಲಕ ಧ್ವನಿಮೂಲವನ್ನು ಸೆರೆಹಿಡಿಯಲಾಗುತ್ತದೆ.ಇದರ ಧ್ವನಿಮುದ್ರಣಗಳ ಹೋಲಿಕೆಯನ್ನು ಕಡಿಮೆ ವಾಹಕದ ಸುರಳಿಯಲ್ಲಿ ಮಾಡಲಾಗುತ್ತದೆ. ಯಾವಾಗ ಎರಡು ಪ್ರಕಾರದ-ಎಂಟು ಮೈಕ್ರೊಫೊನ್ಸ್ ಗಳ ಬಳಕೆ ಮಾಡಿ, ಅವು ±45° ಧ್ವನಿಗ್ರಹಣದ ಮೂಲದಿಂದ ಉಪಯೋಗಿಸಲ್ಪಟ್ಟಾಗ ಅವುಗಳನ್ನು ಬ್ಲುಮ್ಲೆನ್ ಜೋಡಿ ಎನ್ನಲಾಗುತ್ತದೆ. ಆಗ ಧ್ವನಿ ತರಂಗಗಳನ್ನು ಹೊರಡಿದಾಗ ಅದು ಬಹುತೇಕ "ಪೂರ್ಣಲೇಖೀ"ಅಥವಾ ಹಾಲೊಗ್ರ್ಯಾಫಿಕ್ ಪ್ರತಿಬಿಂಬವಾಗುತ್ತದೆ. (ಇದರೊಂದಿಗೆ ಧ್ವನಿ ತರಂಗದ ತೀವ್ರತೆ)ನೋಡಿ.

A-B ತಾಂತ್ರಿಕತೆ:ಸ್ಟಿರಿಯೊಫೊನಿಯ ತಲುಪುವ ಅವಧಿ

[ಬದಲಾಯಿಸಿ]
A-B ಸ್ಟಿರಿಯೊ ಮೈಕ್ರೊಫೊನ್ ಪ್ಲೇಸ್ ಮೆಂಟ್.

ಇದು ಎರಡು ಸಮಾನಾಂತರ ಸ್ಟಿರಿಯೊಫೊನ್ಸ್ ಗಳನ್ನು ಒಂದೇ ದಿಕ್ಕಿನಲ್ಲಿ ಬಳಸುವ ವಿಧಾನವಾಗಿದೆ.ಸ್ಟಿರಿಯೊ ಮುಖಾಂತರ ಧ್ವನಿ ತರಂಗಗಳು ಹೇಗೆ ವ್ಯಾಪಿಸುತ್ತವೆ ಎಂಬುದನ್ನು ಅದರ ಹಂತ (ಧ್ವನಿವರ್ಧಕತೆ)ವ್ಯತ್ಯಾಸವನ್ನು ಗುರುತಿಸಬಹುದಾಗಿದೆ.ಇದನ್ನು ಧ್ವನಿ ಮೂಲ(ಗಳ)ದ ನಿಕಟತೆಯಲ್ಲಿ ಸ್ಥಾಪಿಸಿದಾಗ ಅದು ಹೆಚ್ಚು ಪರಿಣಾಮಕಾರಿ. ಒಂದು ಅಂತರದಲ್ಲಿ ಸುಮಾರು 60ಸೆಂಮೀ (23 1/2 ಇಂಚ್ ಗಳು)ಅದರ ಅವಧಿ ವಿಳಂಬತೆ (ಅಲ್ಲಿ ತಲುಪುವ ವೇಳೆಯ ಅಂತರ)ಅಂದರೆ ಮೊದಲ ಮೈಕ್ರೊಫೊನ್ ಗೆ ಅದು ತಲುಪುವ ಸಂಜ್ಞೆಯಾಗಿದೆ.ಇನ್ನೊಂದು ಅದರ ಬದಿಯಿಂದ ಬರುವ ಧ್ವನಿ ತರಂಗವಾಗಿದ್ದು ಸುಮಾರು1.5ಮಿಸೆಂ (1ರಿಂದ2 ಮಿಸೆಂ)ಆಗಿರುತ್ತದೆ. ನೀವು ಒಂದು ವೇಳೆ ಮೈಕ್ರೊಫೊನ್ಸ್ ಗಳ ಅಂತರ ಹೆಚ್ಚಿಸಿದರೆ ಅದರ ಧ್ವನಿ ತರಂಗಗಳ ಅವಧಿಯನ್ನು ಕಡಿಮೆ ಮಾಡಿದಂತಾಗುತ್ತದೆ. ಅಂದರೆ ಒಂದು 70 ಸೆಂಮೀ (27 1/2 ಇಂಚ್ ಗಳು)ಈ ಅಂತರವು ಸಾಮಾನ್ಯವಾಗಿ ಅದಕ್ಕೆ ಸಮನಾದ ORTF ನ ಸ್ಥಾಪನೆಗೆ ಸಂಜ್ಞೆ ಕಳಿಸುವ ವ್ಯವಸ್ಥೆಯಾಗಿದೆ.

ಈ ತಂತ್ರಜ್ಞಾನವು ಹಂತವಾಗಿದ್ದ ಸ್ಟಿರಿಯೊ ಸಂಜ್ಞೆಗಳನ್ನು ಮಿಶ್ರಿತ ಏಕ ಧ್ವನಿ ವಿಧಾನಕ್ಕೆ ತಲುಪಿಸುತ್ತದೆ.

M/S ತಾಂತ್ರಿಕತೆ: ಮಧ್ಯ/ಬದಿಯ ಸ್ಟಿರಿಯೊಫ್ರಾಫಿ

[ಬದಲಾಯಿಸಿ]
ಮಿಡ್-ಸೈಡ್ ಸ್ಟಿರಿಯೊ ಮೈಕ್ರೊಫೊನ್ ಟೆಕ್ನಿಕ್.

ಈ ಸಮಾನಾಂತರ ತಂತ್ರಜ್ಞಾನವು ಎರಡು ದಿಕ್ಕಿನಲ್ಲಿರುವ ಮೈಕ್ರೊಫೊನ್ ಗಳು ಪರಸ್ಪರ ಎದುರಾಗಿರುವ ಬದಿಗಳನ್ನು ತೋರಿಸುತ್ತದೆ.ಇನ್ನೊಂದು ಮೈಕ್ರೊಫೊನ್ 90°ಕೋನೀಯವಾಗಿ ಧ್ವನಿ ಮೂಲವನ್ನು ಎದುರಾಗಿಸುತ್ತದೆ. ಇನ್ನೊಂದು ಮೈಕ್ರೊಫೊನ್ ನಿಶ್ಚಿತವಾಗಿಯೂ ಹೃದಯಭಾಗವನ್ನು ತೋರಿಸುತ್ತದೆ.ಆದರೆ ಅಲನ್ ಬ್ಲುಮ್ಲೆನ್ ಇದನ್ನು ತಮ್ಮ ನೇರ ಧ್ವನಿ ತರಂಗ ಹಿಡಿದು ಇಡುವ ಚಟುವಟಿಕೆ ಬಗೆಗಿನ ಹಕ್ಕುಸ್ವಾಮ್ಯದಲ್ಲಿ ತಿಳಿಸಿದ್ದಾರೆ.

ಎಡ ಮತ್ತು ಬಲಬದಿಯ ಚಾನಲ್ ಗಳು ಸಾಮಾನ್ಯ ಮಾನದಂಡದ ಮೂಲಕ ಉತ್ಪನ್ನವಾಗುತ್ತವೆ:ಎಡ=ಮಧ್ಯ+ಬದಿ; ಬಲ=ಮಧ್ಯ-ಬದಿ (ಅಂದರೆ ಧ್ವನಿ ಹುಟ್ಟುವ-ಮರುಹುಟ್ಟುವ ಬದಿ ಸಂಜ್ಞೆ) ಈ ಸಮೀಕರಣವು ಸಂಪೂರ್ಣವಾದ ಏಕೈಕ ಸಂಜ್ಞಾಧಾರಕ ಧ್ವನಿ ಹೊರಡಿಸುವಲ್ಲಿ ಸಫಲವಾಗುತ್ತದೆ.ಒಂದು ವೇಳೆ ಮಧ್ಯ-ಬದಿ ಸಂಜ್ಞೆಗಳನ್ನು ಧ್ವನಿಮುದ್ರಿಸಿದರೆ(ಆಗ ಅದು ಎಡ ಮತ್ತು ಬಲ ದಿಕ್ಕುಗಳಲ್ಲಿರುತ್ತದೆ)ಅದರ ನಂತರ ಸ್ಟಿರಿಯೊದ ಅಗಲವನ್ನು ಅದರ ಮುದ್ರಣದ ಮೇಲೆ ಅವಲಂಬಿತವಾಗಿದೆ ಎಂಬುದನ್ನು ತಿಳಿಯಬಹುದು. ಈ ವಿಧಾನವು ಬಹುತೇಕ ಚಿತ್ರಗಳ ಹಿನ್ನಲೆ ಧ್ವನಿಗೆ-ಮೂಲಾಧಾರವಾಗಿದೆ

ನಿಕಟ-ಒಂದೇ ಬಿಂದುವಿನಲ್ಲಿ ಸೇರುವ ತಂತ್ರಜ್ಞಾನ: ಮಿಶ್ರಿತ ಸ್ಟಿರಿಯೊಫೊನಿ

[ಬದಲಾಯಿಸಿ]
ORTF ಸ್ಟಿರಿಯೊ ಮೈಕ್ರೊಫೊನ್ ಟೆಕ್ನಿಕ್.

ಈ ತಂತ್ರಜ್ಞಾನವು ಎರಡೂ ತತ್ವಗಳಾದ A-B ಮತ್ತು X-Y (ಸಮಬಿಂದು ಸೇರುವ ಜೋಡಿ) ತಂತ್ರಜ್ಞಾನವನ್ನೊಳಗೊಂಡಿದೆ. ORTF ಸ್ಟಿರಿಯೊ ತಂತ್ರಜ್ಞಾನ ಉದಾಹರಣೆಗೆ ಆಫೀಸ್ ಡೆ ರೇಡಿಯೊ ಡಿಫುಜನ್ ಟೆಲೆವಿಜನ್ ಫ್ರಾಂಕೇಸ್ ನ(ರೇಡಿಯೊ ಫ್ರಾನ್ಸ್) ORTF ಸ್ಟಿರಿಯೊ ತಂತ್ರಜ್ಞಾನಇದನ್ನು ಹೃದಯಾಕಾರದ ಮೈಕ್ರೊಫೊನ್ಸ್ ಗಳ ಇಟ್ಟಿರುವ 17 ಸೆಂಮೀ ದೂರದ ಒಟ್ಟು ಕೋನೀಯ 110°ದ ಮೈಕ್ರೊಫೊನ್ಸ್ ಗಳ ಅಂತರವನ್ನು ಸೂಚಿಸುತ್ತದೆ.ಇದು 96°ಸಂಜ್ಞಾ ಧ್ವನಿ ತರಂಗಗಳ (ಸ್ಟಿರಿಯೊ ರೆಕಾರ್ಡಿಂಗ್ ಕೋನ ವಾಗಿರುತ್ತದೆ.ಅಥವಾ SRA)ಎನಿಸುತ್ತದೆ.[] ಅಂದರೆ ನೆದರ್ ಲೆಂಡ್ಸೆ ಒಮ್ರೆಎಪ್ ಸ್ಟಿಚಿಂಗ್ (ಹಾಲೆಂಡ್ ರೇಡಿಯೊ)ದ NOS ಸ್ಟಿರಿಯೊ ತಂತ್ರಜ್ಞಾನದಲ್ಲಿ ಮೈಕ್ರೊಫೊನ್ಸ್ ಗಳ 90° ಕೋನೀಯ ಅಂಚುಗಳಲ್ಲಿ ಇದರ ಅಂತರ 30ಸೆಂಮೀ ಆಗಿರುತ್ತದೆ.ಇದು ಧ್ವನಿ ತರಂಗಗಳ ತಲುಪುವ ಅವಧಿಯನ್ನು ಹಿಡಿದಿಡುವ ಮಾಹಿತಿ ನೀಡುತ್ತದೆ.ಅದರೊಂದಿಗೆ ಯಾವ ಹಂತದ ಮಾಹಿತಿಯನ್ನಾದರೂ ಅದು ನೀಡುತ್ತದೆ. ಇಲ್ಲಿ ಗಮನಿಸಬೇಕಾದುದೆಂದರೆ ಮನುಷ್ಯರ ಶ್ರವಣ ಅಂತರ 17 ಸೆಂಮೀ ಎಂಬುದು ಇಲ್ಲಿ ಪರಿಗಣಿಸಲ್ಪಡುವುದಿಲ್ಲ. ಅಂದರೆ ಇಲ್ಲಿ ಮುದ್ರಿತ ಸಂಜ್ಞೆಗಳು ಸಾಮಾನ್ಯವಾಗಿ ಹಿನ್ನಲೆ ಸಂಗೀತವಾಗಿರುವುದಲ್ಲದೇ ಸ್ಟಿರಿಯೊ ಧ್ವನಿವರ್ಧಕಗಳೇ ಹೊರತು ಕಿವಿಮೂಲಕ ಒಳಸೇರುವ ಸಂಜ್ಞಾ ತರಂಗಗಳಲ್ಲ.

ಹುಸಿಭಾಷಾ-ಸ್ಟಿರಿಯೊ

[ಬದಲಾಯಿಸಿ]

ಕೆಲವು ವೇಳೆ ಮೊನೊಫೊನಿಕ್ ಗಳ ಮುದ್ರಣದ ಸಮಯದಲ್ಲಿ ಅಥವಾ ಅವುಗಳ ಮರು ಶ್ರವಣಕ್ಕೆ ಸಜ್ಜುಗೊಳಿಸಿದಾಗ ಹಲವು "ಹುಸಿ ಭಾಷಾ-ಸ್ಟಿರಿಯೊ"ತಂತ್ರಜ್ಞಾನ ಬಳಸಲಾಗುತ್ತದೆ.ಇದು "ಅರೆ-ಸ್ಟಿರಿಯೊ"ಅಥವಾ ಮರುಚಾನಲ್ ಗೊಳಿಸಿದ ಸ್ಟಿರಿಯೊ"ಬಳಸಿ ಈ ಧ್ವನಿ ತರಂಗವನ್ನು ಮೂಲದಿಂದಲೇ ಹೊರಡಿಸಲಾಗುತ್ತದೆ ಎಂಬ ಭಾಸ ಉಂಟಾಗುವಂತೆ ಮಾಡಲಾಗುತ್ತದೆ. ಈ ತಂತ್ರಜ್ಞಾನಗಳು ಮೊದಲು ಹಾರ್ಡ್ ವೇರ್ ವಿಧಾನಗಳನ್ನೊಳಗೊಂಡಿದ್ದವು.(ನೋಡಿ ಡ್ಯುಯೊಫೊನಿಕ್)ಅಥವಾ ಇತ್ತೀಚಿನ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ನ ಸಮ್ಮಿಳಿತ. ಬ್ರೆಮ್ಮೆರ್ಸ್ ಆಡಿಯೊ ಡಿಸೈನ್ (ದಿ ನೆದರ್ ಲೆಂಡ್ಸ್)[] ಇದರ ಮಲ್ಟಿಟ್ರ್ಯಾಕ್ ಸ್ಟುಡಿಯೊ ಹುಸಿಭಾಷಾ ಪರಿಣಾಮಗಳ ಗಟ್ಟಿಗೊಳಿಸಲು ವಿಶೇಷ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ."ಇಲ್ಲಿ ಧ್ವನಿ ಕೋಶೀಯ ಪರಿಣಾಮಕ್ಕೆ ಎಡ ಚಾನಲ್ ಗೆ ಕಡಿಮೆ ಮತ್ತು ಬಲಬದಿಗೆ ಹೆಚ್ಕು ತರಂಗಾಂತರದ ವ್ಯತ್ಯಾಸ ಇಡಲಾಗುತ್ತದೆ.ಇದರಲ್ಲಿನ ವಿಳಂಬವನ್ನು ಕಿವಿ ಗಮನಿಸಲಾಗದು.(ಇಲ್ಲಿನ ಧ್ವನಿವಾಹಕವು ಶ್ರವಣ ಶಕ್ತಿಯು 0ದಿಂದ 100 ಮಿಲಿಸೆಕೆಂಡ್ಸ್) ಗಳಾಗಿರುತ್ತದೆ.ಆದರೆ ಇದು "ಮೂಲ ವಿಸ್ತೀರ್ಣ"ದ ಧ್ವನಿ ಮೂಲದ ಮೊನೊ ಮುದ್ರಣಕ್ಕೆ "ಧೃಡತೆ" ತರುವ ಯತ್ನ ಮಾಡುತ್ತದೆ.[][]

ಈ ವಿಶೇಷ ಹುಸಿಭಾಷಾ-ಸ್ಟಿರಿಯೊವನ್ನು ಜಪಾನಿನ ಕಿಶಿ ಮತ್ತು ನೊರೊ ಅವರು ಸಂಶೋಧಿಸಿದ್ದು ಇದನ್ನು 2003 ರಲ್ಲಿ [] ಯುನೈಟೆಡ್ ಸ್ಟೇಟ್ಸ್ ನಲ್ಲಿ ಹಕ್ಕು ಸ್ವಾಮ್ಯ ಪಡೆದಿದ್ದಾರೆ.ಈಗಾಗಲೇ ಈ ವಿಧಾನಕ್ಕೆ ಕೆಲವು ಹಕ್ಕು ಸ್ವಾಮ್ಯಗಳನ್ನು ಕೆಲವರು ಪಡೆದುಕೊಂಡಾಗಿತ್ತು.[೧೦] ಮೊನೊಫೊನಿಕ್ ಧ್ವನಿಮುದ್ರಣಗಳ ಅನುಭವ ಕೇಳಿಸಲು ಕೃತಕ ಸ್ಟಿರಿಯೊ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.ಅಥವಾ ಇಂದಿನ ಮಾರುಕಟ್ಟೆಯಲ್ಲಿ ಜನರು ಅಂತಹ ಸ್ಟಿರಿಯೊ ವಿಧಾನ ಬಳಕೆಯನ್ನು ಅಪೇಕ್ಷಿಸುತ್ತಾರೆ. ಆದರೆ ಕೆಲವು ವಿಮರ್ಶಕರು ಇಂತಹ ಬಳಕೆ ವಿಧಾನದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.[೧೧]

ಉಭಯಕರ್ಣೀಯ ಶ್ರವಣೀಯ ಧ್ವನಿಮುದ್ರಣ

[ಬದಲಾಯಿಸಿ]

ಈ ಧ್ವನಿ ಮುದ್ರಣದಲ್ಲಿ "ಉಭಯ ಕರ್ಣೀಯ"ಮತ್ತು "ಸ್ಟಿರಿಯೊಫೊನಿಕ್"ತಂತ್ರಜ್ಞಾನದ ಬಳಕೆ ಬಗ್ಗೆ ಕೆಲವು ಎಂಜನೀಯರ್ ಗಳು ವ್ಯತ್ಯಾಸ ಗುರ್ತಿಸುತ್ತಾರೆ. ಇದರಲ್ಲಿ, ಎರಡೂ ಬದಿ ಧ್ವನಿ ಮುದ್ರಣ ಇದು ಮೊದಲ ತಂತ್ರವಾದಸ್ಟಿರಿಯೊಸ್ಕೊಪಿಕ್ ಫೊಟೊಗ್ರಾಫಿಒಳಗೊಂಡಿದೆ. ಈ ಉಭಯರೀತ್ಯಾ ಧ್ವನಿಮುದ್ರಣದಲ್ಲಿ ಮನುಷ್ಯನ ಮಾದರಿ ಮೆದುಳಿನಲ್ಲಿ ಜೋಡಿ ಮೈಕ್ರೊಫೊನ್ಸ್ ಗಳನ್ನಿಡಲಾಗುತ್ತದೆ.ಇದು ಹೊರಕಿವಿಗಳು ಮತ್ತು ಆಂತರಿಕ ಶ್ರವಣೀಯ ಮಾರ್ಗಗಳನ್ನೊಳಗೊಂಡಿರುತ್ತದೆ.ಪ್ರತಿ ಮೈಕ್ರೊಫೊನ್ ಒಂದು ಕಿವಿ ಪರದೆಯಂತೆ ಕೆಲಸ ಮಾಡುತ್ತದೆ. ನಂತರ ಈ ಧ್ವನಿಮುದ್ರಣವು ಹಿನ್ನಲೆಯಾಗಿ ಹೆಡ್ ಫೊನ್ ಮುಖಾಂತರ ಚಾನಲ್ ನೊಳಗಡೆ ಸೇರಿಸಲಾಗುತ್ತದೆ.ಇಲ್ಲಿ ಸ್ವತಂತ್ರವಾಗಿ ಮಿಶ್ರಣ ಅಥವಾ ಅಡ್ಡಶಬ್ದಗ್ರಹಣದ ಅವಶ್ಯಕತೆ ಇರುವುದಿಲ್ಲ. ಹೀಗೆ ಕೇಳುಗನ ಕಿವಿಪದರೊಳಗಿನ ವ್ಯವಸ್ಥೆಯು ಅದರ ಮೂಲತಃ ಶ್ರವಣಕ್ಕೆ ಪೂರಕವಾಗಿರುವಂತೆಯೇ ಈ ಧ್ವನಿ ಮುದ್ರಣ ಮಾಡಲಾಗುತ್ತದೆ.ಅದು ಮುದ್ರಣದ ಸ್ಥಳೀಯತೆಯನ್ನು ಗುರುತಿಸುತ್ತದೆ. ಇದರಲ್ಲಿ ಸ್ಥಳೀಯ ಧ್ವನಿಯ ಮರುಕಳಿಕೆಯನ್ನು ಅದರ ಭಾಗವನ್ನಾಗಿ ಕೇಳಿಸುವ ವ್ಯವಸ್ಥೆ ಮಾಡಲಾಗುತ್ತದೆ.ಆತ ಅಥವಾ ಆಕೆ ತನ್ನ ಮೆದುಳಿನ ಒಳಭಾಗದಲ್ಲಿ ಈ ಶ್ರವಣದ ಪರಿಣಾಮ ಗಮನಿಸಬಹುದಾಗಿದೆ. ಏಕೆಂದರೆ ಈ ಹೆಡ್ ಫೊನ್ಸ್ ಗಳ ಧರಿಸುವುದರಿಂದುಂಟಾಗುವ ಅನನಕೂಲತೆಯು ಧ್ವನಿಮುದ್ರಣದ ವೇಳೆ ಉತ್ತಮ ಸ್ಥಳೀಯತೆಯನ್ನು ಇಲ್ಲಿ ಗುರುತಿಸಿ ಉಳಿದದನ್ನು ಅದರ ಮುದ್ರಣದ ಕೇಂದ್ರದಲ್ಲಿ ಮಾಡಲಾಗುತ್ತದೆ. ಹೀಗೆ "ಧ್ವನಿವರ್ಧಕ-ಸ್ಥಳೀಯತೆ"ಶ್ರವಣವು ಆಂಬಿಯೊಫೊನಿಕ್ಸ್ ನಿಂದ ಸಾಧ್ಯಗೊಳಿಸಲಾಗುತ್ತದೆ.

ಮರುಚಾಲಿಸುವಿಕೆ

[ಬದಲಾಯಿಸಿ]

ಇಲ್ಲಿ ಸ್ಟಿರಿಯೊಫೊನಿಕ್ ಧ್ವನಿಯು ವಿವಿಧ ಸ್ಥಳೀಯತೆಯನ್ನು ಗುರುತಿಸುವ ಧ್ವನಿಗಳ ಮೂಲ ಜಾಡನ್ನು ತೋರಿಸುತ್ತದೆ.(ಧ್ವನಿಗಳು,ವಾದ್ಯಗಳು ಇತ್ಯಾದಿ)ಅದರೊಳಗಿನ ಮೂಲ ಧ್ವನಿಮುದ್ರಣಕ್ಕೆ ಸಂಭಂಧಿತವಾಗಿದೆ.) ಧ್ವನಿಮುದ್ರಣ ಮಾಡುವ ಎಂಜನೀಯರ್ ನ ಗುರಿ ಯೆಂದರೆ ಸ್ಟಿರಿಯೊ "ಇಮೇಜ್"ನ್ನು ಸೃಷ್ಟಿಸುವುದಾಗಿದೆ. ಯಾವಾಗ ಈ ಸ್ಟಿರಿಯೊಫೊನಿಕ್ ಮುದ್ರಣವು ಧ್ವನಿವರ್ಧಕ ವಿಧಾನದಿಂದ ಕೇಳಿ ಬಂದಾಗ ಅದು ಕಿವಿಗೆ ತಲುಪುತ್ತದೆಯಲ್ಲದೇ(ಹೆಡ್ ಫೊನ್ ಗಿಂತ ಉತ್ತಮ) ಎರಡೂ ಸ್ಪೀಕರ್ ಗಳಿಂದ ಧ್ವನಿ ಕೇಳಲು ನೆರವಾಗುತ್ತದೆ. ಈ ಶ್ರವಣವಿಧಾನದ ಎಂಜನೀಯರ್ ಸುಮಾರಾಗಿ ಎರಡಕ್ಕಿಂತ ಹೆಚ್ಚು ಮೈಕ್ರೊಫೊನ್ಸ್ (ಒಮ್ಮೊಮ್ಮೆ ಹಲವು) ಬಳಕೆಗೆ ಶಿಫಾರಸು ಮಾಡುತ್ತಾರೆ.ಅವುಗಳ ಧ್ವನಿಗಳನ್ನು ವಿಭಿನ್ನ ರೀತಿಯಲ್ಲಿ ಮಿಶ್ರಣ ಮಾಡಲು ಯತ್ನಿಸುತ್ತಾರೆ.ಇಲ್ಲಿ ವಾದ್ಯಗಳ ಶಬ್ದೀಯ ಗ್ರಹಣವು ಪ್ರತ್ಯೇಕವಾಗಿ ಕೇಳಿಸುತ್ತದೆ.ಅಂದರೆ ಸ್ಪೀಕರ್ ಮೂಲಕ ಸ್ಪಷ್ಟವಾಗಿ ಕೇಳಿಸಬಹುದಾದ ಅವಕಾಶ ಇಲ್ಲಿರುತ್ತದೆ.

ಆಯಾ ಸ್ಥಳೀಯತೆಯಲ್ಲಿನ ಪ್ರತಿ ವಾದ್ಯವನ್ನೂ ಅಲ್ಲಿ ಗುರುತಿಸಿ ಇಲ್ಲಿ ಧ್ವನಿ ಗುರುತಿಸುವ ಕೆಲಸ ನಡೆಸಲಾಗುತ್ತದೆ.ಯಾವಾಗ ಇದನ್ನು ಕಾಳಜೀ ಪೂರ್ವಕವಾಗಿ ವ್ಯವಸ್ಥೆಗೊಳಿಸಿದಾಗ ಆ ಧ್ವನಿ ಗುರುತನ್ನು ಆಸ್ವಾದಿಸಿ ಸಂಜ್ಞಾ ರೂಪಗೊಳಿಸಬಹುದಾಗಿದೆ.ಇದರಲ್ಲಿ ಸಂಸ್ಥಾಪಿತ ವಿಧಾನ" ಬಳಸಬಹುದಾಗಿದೆ. ನಿಜವಾಗಿ ಹೇಳಬೇಕೆಂದರೆ ಈ ಹಿನ್ನಲೆ ಸಂಗೀತದ ವಿಧಾನಗಳಲ್ಲಿ ಎಲ್ಲಾ-ಒಂದೆಡೆ-ಸಂಗಮಿತ ಬೂಮ್ ಬಾಕ್ಸ್ ಘಟಕಗಳನ್ನು ಅದರಂತೆ ನೋಡಿಕೊಳ್ಳಲಾಗುತ್ತದೆ.ಇದರಿಂದ ಸ್ಟಿರಿಯೊ ಪ್ರತಿಬಿಂಬವನ್ನೂ ಪಡೆಯಬಹುದಾಗಿದೆ. ಮೂಲದಲ್ಲಿ 1950 ಮತ್ತು 1960 ರ ಸುಮಾರಿಗೆ ಸ್ಟಿರಿಯೊಫೊನಿಕ್ ಧ್ವನಿಯನು "ಶ್ರೀಮಂತ"ಧ್ವನಿ ಅಥವಾ ಪೂರ್ಣಪ್ರಮಾಣದ-ಧ್ವನಿಹಿಡಿದಿಡುವಿಕೆ"ಮೊನೊಫೊನಿಕ್ ಆಗಿ ಪರಿವರ್ತಿತವಾಗಿರುತ್ತದೆ.ಏಕೆಂದರೆ ಈ ಧ್ವನಿ ಗ್ರಹಣವು ಆಯಾ ವಾದ್ಯ ಅಥವಾ ಪರಿಕರದ ಉಪಯೋಗದ ಕಾರಣವೂ ಆಗಿದೆ. ಮೂಲದಲ್ಲಿ ಕಳಪೆಯಾಗಿ ಮುದ್ರಣಗೊಂಡ ಅಥವಾ ಮರುಉತ್ಪಾದಿತ ಸ್ಟಿರಿಯೊಫೊನಿಕ್ ಧ್ವನಿಯು ಈ ಮೊದಲಿನ ಮೊನೊಫೊನಿಕ್ ಧ್ವನಿಮೂಲಕ್ಕಿಂತ ಕಳಪೆ ಮಟ್ಟದ್ದಾಗಿರುತ್ತದೆ. ಸ್ಟಿರಿಯೊ ಮುದ್ರಣಗಳನ್ನು ಹಾಕುವಾಗ ಎರಡು ಸಮರೂಪದ ಸ್ಪೀಕರ್ ಗಳನ್ನು ಅಳವಡಿಸಬೇಕಾಗುತ್ತದೆ.ವಾದ್ಯದ ಎದುರು ಒಂದು ಕೇಳುಗನ ಎದುರು ಮತ್ತೊಂದನ್ನು ಇರಿಸಲಾಗುತ್ತದೆ.ಇಲ್ಲಿ ಕೇಳುಗರ ಸ್ಥಳೀಯತೆಯನ್ನೂ ಈ ಮುದ್ರಣದ ಅಗತ್ಯತೆ ಕಾಣಿಸುತ್ತದೆ. ಈ ಧ್ವನಿ ಪರಿಣಾಮದ ಪ್ರಭಾವದಲ್ಲಿ ಒಂದು ಸಮಭಾಜಕ ತ್ರಿಕೋನದಲ್ಲಿ ರೂಪಿತವಾಗಿರುತ್ತದೆ.ಇದು ಎರಡು ಸಮರೂಪೀಯ ಸ್ಪೀಕರ್ ಗಳನ್ನು ಇಡಲಾಗುತ್ತದೆ.ಸುಮಾರು 60 ಡಿಗ್ರೀ ಅಂತರದ ಕೇಳುಗನ ಸ್ಥಳದಿಂದ ಇದು ವ್ಯಕ್ತವಾಗುತ್ತದೆ.

ಸಂಯುಕ್ತ ಮುದ್ರಣಗಳ ಸೌಕರ್ಯ

[ಬದಲಾಯಿಸಿ]

ಬೃಹತ್ ಪ್ರಮಾಣದ ಧ್ವನಿ ಸಂಯೋಜಿತಕ್ಕೆ ಎರಡು-ಚಾನಲ್ ಮುದ್ರಣಕ್ಕೆ ಮೊದಲ ಸಮೂಹ 1958 ರಲ್ಲಿ ತನ್ನ ಪ್ರಯೋಗಕ್ಕೆ ಮುಂದಾಯಿತು.USA ಮತ್ತು ಬ್ರಿಟನ್ ನ ಪೈಯೆನಲ್ಲಿನ ಆಡಿಯೊ ಫಿಡಿಲಿಟಿ ಬಗ್ಗೆ ವೆಸ್ಟ್ರೆಕ್ಸ್ "45/45"ಏಕೈಕ ಧ್ವನಿಸುರಳಿ ಒಳಗೊಳ್ಳುವಿಕೆ ವಿಧಾನ ಬೆಳೆದು ಬಂತು. ಗ್ರಾಮಾಫೊನ್ ನಲ್ಲಿನ ಗಾನಸೂಚಿಯ ಚಲನೆಯಂತೆ ಅದರ ಸಂಗೀತ ಮರುಪ್ರಸರಣಗೊಳ್ಳುವ ವಿಧಾನ ಮೊನೊಫೊನಿಕ್ ಮುದ್ರಣಕ್ಕೆ ದಾರಿಯಾಗುತ್ತದೆ.ಹೀಗೆ ಆ ಗಾನಸೂಚಿ ಮುಳ್ಳು ಲಂಬವಾಗಿ ಮತ್ತೊಮ್ಮೆ ಸಮಾನಾಂತರವಾಗಿ ಚಲಿಸುತ್ತಿರುತ್ತದೆ. ಈ ವಿಧಾನದಲ್ಲಿ ಎಡ ಚಾನಲ್ ನಲ್ಲಿನ ಮುದ್ರಣವು ನಂತರ ನ್ಡೆದರೂ ಅದರ ಬಲ ಚಾನಲ್ ನಲ್ಲಿ ಅದೇ ತೆರನಾದ ಧ್ವನಿಗ್ರಹಣದ ಮುದ್ರಿಕೆ ಕಾಣಿಸುತ್ತದೆ.ಅದನ್ನೇ "ಹಿಲ್ ಮತ್ತು ಡೇಲ್"ಆಚೀಚೆ ಓಲಾಡುವ ಈ ಲಂಬೀಯ ಚಲನೆಯು ಅದರ ದಾಖಲೆಯ ಮುದ್ರಣದ ಸಂಜ್ಞೆಯಾಗಿದೆ.ಅಸ್ತಿತ್ವದಲಿನ ಫೊನೊ ಒಮ್ಮೆ ಗ್ರಹಿಕೆ ನಂತರ ಅದರ ಬೆಳವಣಿಗೆ ತೋರುತ್ತದೆ.(ಕೆಳಭಾಗದಲ್ಲಿ ನೋಡಿ) ಪ್ರತಿ ವೆಸ್ಟ್ರೆಕ್ಸ್ ವಿಧಾನದಲ್ಲಿ ಪ್ರತಿ ಚಾನಲ್ ಹೆಡ್ ನ್ನು ಮುನ್ನೂಕಿ 45-ಡಿಗ್ರೀ ಅಂಶದಲ್ಲಿ ಸಮಾನಾಂತರದ ಪರ್ಯಾದಲ್ಲಿರುತ್ತದೆ. ಹಿನ್ನಲೆಯ ಸಂಯೋಜನೆಯಲ್ಲಿ ಸಂಜ್ಞೆ ಬರುವ ಧ್ವನಿ ಸರಳತೆಯು ಎಡ ಚಾನಲ್ ನ ಕೊಯಿಲ್ ಮೇಲೆ ಅದು ಉರುಳುತ್ತಾ ಸಾಗಿದಂತೆ ಅದರೊಳಗಿನ ಬಲ ಕೊಯಿಲ್ ಹೊರಭಾಗದ ಮುದ್ರಣ ಕೊಂಡಿಗೆ ಸೇರಿದಾಗಿರುತ್ತದೆ.[೧೨]

ಒಟ್ಟು ಸೇರಿದ ಈ ಚಲನೆಯು ಧ್ವನಿ ಮೊತ್ತದ ಅಂತರವನ್ನು ಎರಡು ಸ್ಟಿರಿಯೊ ಚಾನಲ್ ಮೂಲಕ ಹೊರಗೆಡುವುತ್ತದೆ. ಪರಿಣಾಮಕಾರಿಯಾಗಿ ಈ ಲಂಬೀಯ ಧ್ವನಿ ಪ್ರಕಾರದ ಹೊರಬರುವ ಚಲನೆಯು L+R ಸಂಜ್ಞೆಗೆ ಪೂರಕವಾಗಿರುತ್ತದೆ.ಇಲ್ಲಿ L−R ನ ಅಂತರಕ್ಕೆ ಹೊಂದಿಕೆಯಾಗುತ್ತದೆ. ಇದರಲ್ಲಿ 45/45 ವಿಧಾನ ಬಳಕೆಯ ಪ್ರಯೋಜನವೆಂದರೆ ಮೂಫೊನಿಕ್ ಮುದ್ರಣದ ಗಟ್ಟಿಯಾದ ಧ್ವನಿಗ್ರಹಣ ಮತ್ತು ಹಿನ್ನಲೆಯ ವಿಧಾನ ಬಳಕೆಯಾಗಿದೆ. ಮೊನೊಫೊನಿಕ್ ಮುದ್ರಣ ಪರಿಕರದ ಮೂಲಕ ಅದೇ ರೀತಿಯ ಧ್ವನಿ ಪ್ರಕ್ರಿಯೆ ಹೊರಬಂದು ಎಡ ಮತ್ತು ಬಲ ಚಾನಲ್ ಗಳಲ್ಲಿ ಇದು ಹರಿದು ಒಂದೇ ವಾಹಕದಲ್ಲಿ ಹರಿಯುವುದಿಲ್ಲ. ಈ ಸ್ಟಿರಿಯೊ ಕಾರ್ಟ್ರಿಜ್ ಮೊನೊಫೊನಿಕ್ ಮುದ್ರಣಗಳನ್ನು ನಂತರ ಮರುಧ್ವನಿಗೆ ಅಳವಡಿಸಲಾಗುತ್ತದೆ.ಕೇವಲ ಒಂದಕ್ಕಿಂತ ಇಲ್ಲಿ ಎರಡೂ ಚಾನಲ್ ಗಳ ಬಳಕೆ ಸಹಜವಾಗಿದೆ. ಅದಲ್ಲದೇ ಈ ಎರಡೂ ಚಾನಲ್ ಗಳು ಸಮಪ್ರಮಾಣದ ಧ್ವನಿಸಂಜ್ಞೆಗಳನ್ನು ನೀಡುತ್ತವೆ.(ಒಂದು ಹೆಚ್ಚು ಧ್ವನಿಶಬ್ದ ಹೊರಡಿಸುವುದು ಮತ್ತೊಂದು ಕಡಿಮೆ ತರಂಗಾಂತರ ಹೊರಡಿಸುವುದನ್ನು ಇಲ್ಲಿ ತಪ್ಪಿಸಬಹುದು) ಒಟ್ಟಾರೆ ಈ ವಿಧಾನವು ಉನ್ನತ ಶ್ರೇಣಿಯ ಶಬ್ದಗ್ರಹಿಕೆಗೆ ದಾರಿ ಮಾಡುತ್ತದೆ.ಯಾಕೆಂದರೆ "ಅಂತರ" ವ್ಯತ್ಯಾಸವು ಇಲ್ಲಿ ಕಡಿಮೆ ಪರಿಣಾಮ ತೋರಿಸುತ್ತದೆ.ಅದೇ "ಹಿಲ್ ಮತ್ತು ಡೇಲ್"ಗ್ರಹಣದ ಶೈಲಿಯ ಮುದ್ರಣವನ್ನು ಇದು ಒಳಗೊಂಡಿದೆ.

ಈ ವಿಧಾನವನ್ನು EMI ನ ಅಲನ್ ಬ್ಲುಮ್ಲೆನ್ 1931 ರಲ್ಲಿ ಕಂಡು ಹಿಡಿದರಲ್ಲದೇ ಅದೇ ವರ್ಷ ಹಕ್ಕು ಸ್ವಾಮ್ಯ ಪಡೆದುಕೊಂಡರು. ಈ EMI ಮೊದಲ ಬಾರಿಗೆ ಸ್ಟಿರಿಯೊ ಪರೀಕ್ಷೆಯನ್ನು ಈ ವಿಧಾನದ ಮೂಲಕ 1933 ರಲ್ಲಿ ಬಳಸಲಾಯಿತು.ಆದರೆ ಇದನ್ನು ವಾಣಿಜ್ಯಿಕವಾಗಿ ಬಳಸಲು ಸುಮಾರು ಕಾಲುಶತಮಾನ ಅವಧಿ ಬೇಕಾಯಿತು. ಸ್ಟಿರಿಯೊ ಶಬ್ದಗ್ರಹಣವು ಅತಿಹೆಚ್ಚು ನೈಸರ್ಗಿಕ ಶ್ರವಣ ಅನುಕೂಲ ಒದಗಿಸುತ್ತದೆ.ಇಲ್ಲಿನ ಈ ಶಬ್ದ ಗ್ರಹಣದ ಸ್ಥಳೀಯತೆಯು ಅಲ್ಲಿನ ಮೂಲ ಧ್ವನಿಗೆ ಪೂರಕವಾಗಿರುತ್ತದೆ.(ಕೊನೆ ಪಕ್ಷ ಭಾಗಶಃ)ಮರುಪ್ರಸಾರವಾಗಿದ್ದು. ಆಗ 1960 ರ ಸುಮಾರಿಗೆ ಮೊನೊಫೊನಿಕ್ ಮಾಸ್ಟರ್ ಟೇಪ್ ಮೂಲಕ ಸ್ಟಿರಿಯೊ ಆವೃತ್ತಿ ಬಳಕೆ ಸಾಮಾನ್ಯವಾಗಿತ್ತು.ಇದನ್ನು ಸಹಜವಾಗಿ ಎನ್ನುವಂತೆ "ಎಲೆಕ್ಟ್ರಾನಿಕಲ್ಲೀ ರಿಪ್ರೊಸೆಸ್ಡ್ "ಎನ್ನಲಾಗುತ್ತದೆ. ಇಂತಹ ವಿಧಾನಗಳನ್ನು ಬೇರೆ ಬೇರೆ ಧ್ವನಿಮುದ್ರಿಕೆಯಲ್ಲಿ ವಿಭಿನ್ನ ತಂತ್ರಜ್ಞಾನದ ನೆರವಿನೊಂದಿಗೆ ಪೂರೈಸಲಾಗುತ್ತದೆ.ಕೆಲವೆಡೆ ಧ್ವನಿ ಪರಿಣಾಮಗಳ ಅಂಶಗಳನ್ನು ಅಲ್ಪಾವಧಿಗೆ ಶೇಖರಿಸಿ ಅದನ್ನು ಸಂಗ್ರಹಿಸಲಾಗುತ್ತದೆ.ಇದನ್ನು ಸಂಪೂರ್ಣವಾಗಿ "ಹಂತ"ವಾಗಿ ಪರಿಗಣಿಸಲಾಗುತ್ತದೆ.

ಧ್ವನಿತರಂಗಗಳ ಚತುರ್ಮಾರ್ಗಗಳ ಮುದ್ರಣದ ಅಭಿವೃದ್ಧಿಯನ್ನು 1971 ರಲ್ಲಿ ಮಾಡಲಾಯಿತು. ಇವು ನಾಲ್ಕು ಪ್ರತ್ಯೇಕ ಧ್ವನಿ ಸಂಜ್ಞೆಗಳನ್ನೊಳಗೊಂಡಿವೆ. ಇದನ್ನು ಎರಡು ಸ್ಟಿರಿಯೊ ಚಾನಲ್ ಮೂಲಕ ಎಲೆಕ್ಟ್ರಾನಿಕ್ ಅಳತೆಯ ಮ್ಯಾಟ್ರಿಸ್ಕಿಂಗ್ ಮಾಡಬಹುದಾಗಿದೆ.ಹೆಚ್ಚುವರಿ ಚಾನಲ್ ಗಳನ್ನು ಪ್ರಮುಖ ಸಂಜ್ಞೆಗಳ ಒಟ್ಟುಗೂಡಿಸಲಾಗುತ್ತದೆ. ಮುದ್ರಿತ ಧ್ವನಿಸುರುಳಿ ಚಾಲಿತಗೊಂಡಾಗ ಅದು ನಾಲ್ಕು ವಿಭಾಗಗಳಲ್ಲಿ ಹರಿದು ಸಂಗೀತ ಸುಧೆಗೆ ದಾರಿಯಾಗುತ್ತದೆ. ಇಲ್ಲಿ ಪ್ರಮುಖ ಎರಡು ಮ್ಯಾಟ್ರಿಕ್ಸಿಸ್ಡ್ಡ್ ಚತುರ್ಕೋನೀಯ ಮುದ್ರಣಗಳ ಪುನುರುತ್ಪಾದನಾ ವಿಧಾನಗಳಿವೆ.ಅವನ್ನು SQ (CBSಯಿಂದ) ಮತ್ತು QS (by ಸ್ಯಾನ್ ಸ್ಯುಯಿ)ಎನ್ನುತ್ತಾರೆ. ಆದರೆ ಇವು ವಾಣಿಜ್ಯಿಕವಾಗಿ ಯಶಸ್ವಿಯಾಗಿಲ್ಲ,ಆದರೆ ಅವು ಮೊದಲು ಮಹತ್ವದ ಸುತ್ತಮುತ್ತಲಿನ ಧ್ವನಿ ಪರಿಕರ ಪೂರಕಗಳಾಗಿವೆ.ಇದನ್ನು ಇಂದು ನಾವು SACD ಮತ್ತು ಹೋಮ್ ಸಿನೆಮಾಗಳಲ್ಲಿ ಅಳವಡಿಕೆ ಮಾಡಲಾಗುತ್ತದೆ. ಇಲ್ಲಿ ಆಕಾರದ ಪ್ರತಿರೂಪದ CD-4 (ಇದನ್ನು ಕಾಂಪ್ಯಾಕ್ಟ್ ಡಿಸ್ಕ್ ಗೆ ಹೋಲಿಸಿ ಗೊಂದಲಕ್ಕೀಡಾಗಬಾರದು)ಇಲ್ಲಿ RCAನಿಂದ ಪುನರ್ ಉತ್ಪಾದನೆಯಾಗುತ್ತದೆ.ವಿಭಿನ್ನ ಧ್ವನಿ ಸಂಜ್ಞೆಗಳ ಹೊತ್ತೊಯ್ಯುವ ವೈಡ್ ಬ್ಯಾಂಡ್ ಕಾರ್ಟ್ರಿಜಿಸ್ ಮೂಲಕ ಇದನ್ನು ಹಿಡಿದಿಡುವ ಕ್ರಮವಿದೆ.ಇದರಲ್ಲಿ ಆರ್ಮ್/ಮರುಧ್ವನಿಯ ಒಟ್ಟುಗೂಡುವಿಕೆ ಇಲ್ಲಿ ಅಸ್ತಿತ್ವಕ್ಕೆ ಬರುತ್ತದೆ. ಅದೇ ರೀತಿ ಉನ್ನತ-ತರಂಗಾಂತರ ಮಾಹಿತಿ ಈ ಮೂಲಕ LPs ಗಳು ಆವರಿಸಿ ಕೆಲವೇ ಮರುಪ್ರಸಾರದಲ್ಲಿ ಕಾಣುತ್ತದೆ.ಇದು CD-4 ಗೆ ನಿಕಟವಾಗಿರುತ್ತದೆ.ಎರಡು ಮ್ಯಾಟ್ರಿಕ್ಸ್ ಗೊಳಿಸಿದ ಧ್ವನಿಮುದ್ರಣಗಿಂತ ಕಡಿಮೆ ಯಶಸ್ಸು ಕಾಣಿಸಬಹುದು.

ಕಾಂಪ್ಯಾಕ್ಟ್‌ ಡಿಸ್ಕ್

[ಬದಲಾಯಿಸಿ]

ಇದರಲ್ಲಿ ರೆಡ್ ಬುಕ್ CD ವಿಶಿಷ್ಟತೆಯು ಎರಡು ಚಾನಲ್ ಗಳನ್ನು ಪಡೆದಿರುತ್ತದೆ.ಹೀಗೆ CD ಮೇಲೆ ಮೊನೊ ಮುದ್ರಣ ಪೂರ್ಣವಾಗಿ ಒಂದು ಚಾನಲ್ ಖಾಲಿ ಉಳಿಯಬಹುದು ಅಥವಾ ಅದೇ ಸಂಜ್ಞೆಗಳ ಬಳಸಿ ಅದೇ ಚಾನಲ್ ಒಂದೇ ಸಮವಾಗಿ ಮುಂದುವರಿಯಬಹುದು.

ಪ್ರಸರಣಾ ಕಾರ್ಯ

[ಬದಲಾಯಿಸಿ]

ರೇಡಿಯೊ

[ಬದಲಾಯಿಸಿ]

ಎಫ್ ಎಂ ಪ್ರಸಾರದಲ್ಲಿ ಝೆನಿತ್-GE ಪೈಲೆಟ್-ಟೋನ್ ಧ್ವನಿಯ ಪ್ರಾಮುಖ್ಯತೆಯ ವಿಧಾನವನ್ನು ವಿಶ್ವಾದ್ಯಾಂತ ಬಳಸಲಾಗುತ್ತದೆ.

ಈ AM ವಾಹಕಗಳ ರೀಸೀವರ್ ಗಳ ಸೀಮಿತ ಸಾಮರ್ಥ್ಯದಿಂದಾಗಿ ಅದರ ಆಡಿಯೊ ಗುಣಮಟ್ಟ ಬಹುತೇಕ ತೃಪ್ತಿಕರವಾಗಿರಲಾರದು.ಅದಲ್ಲದೇ ಈ AM ರಿಸೀವರ್ ಗಳು ಸಂಭಂಧಿಸಿದಂತೆ ವಿರಳವಾಗಿರುತ್ತವೆ.ಅದೇ ರೀತಿ ಧ್ವನಿಗ್ರಹಣದ ಮೂಲಕ ಇದನ್ನು ಕೇಂದ್ರಗಳಲ್ಲಿ ಅನುಕರಿಸಬಹುದಾಗಿದೆ. ವಿವಿಧ ಧ್ವನಿ ಅಲೆ ಪರಿವರ್ತನೆಗಳು AM ಸ್ಟಿರಿಯೊದಲ್ಲಿ ಬಳಸಲಾಗುತ್ತದೆ.ಅದರಲ್ಲಿ ಪ್ರಮುಖವೆಂದರೆ ಮೊಟೊರೊಲಾದಲ್ಲಿ ಬಳಕೆಯಾಗುವ C-QUAMವಿಧಾನ ಚಾಲ್ತಿಯಲ್ಲಿದೆ.ವಿಶ್ವದಲ್ಲಿ ಅಧಿಕೃತವಾಗಿ ಇದೇ ಧ್ವನಿಗ್ರಹಣ C-QUAMವಿಧಾನಕ್ಕೆ ಒಗ್ಗಿಕೊಳ್ಳಲಾಗಿದೆ. ಹೆಚ್ಚೆಚ್ಚು AM ಕೇಂದ್ರಗಳು ಡಿಜಿಟಲ್ HD ರೇಡಿಯೊಪದ್ದತಿಯನ್ನಳವಡಿಸಿಕೊಂಡಿವೆ.ಇದು AM ಕೇಂದ್ರಗಳಲ್ಲಿ ಅಧಿಕ ಪ್ರಸರಣಕ್ಕೆ ಅನುಕೂಲ ಮಾಡಿಕೊಡುತ್ತದೆ. ಡಿಜಿಟಲ್ ಆಡಿಯೊ ಪ್ರಸಾರಕ್ಕಾಗಿ ಸಾಮಾನ್ಯವಾಗಿ, MP2 ಆಡಿಯೊ ಸ್ಟ್ರೀಮ್ಸ್ ಗಳ ಬಳಕೆ ಮಾಡಲಾಗುತ್ತದೆ. ಇಲ್ಲಿ DAB ಕೂಡಾ ಡಿಜಿಟಲ್ ರೇಡಿಯೊ ರೂಪಗಳಲ್ಲೊಂದಾಗಿದೆ.ಇದನ್ನು ಡಿಜಿಟಲ್ ಆಡಿಯೊ ಪ್ರಸಾರದಲ್ಲಿ ಆಯಾ ಸ್ಥಳೀಯತೆ ಆಧರಿಸಿ ಅನುಸರಣೆ ಮಾಡಲಾಗುತ್ತದೆ.ಇಲ್ಲಿ ಅಲ್ಲಿನ ಪ್ರಸಾರ ಜಾಲ ತಾಣ ಅಥವಾ ಉಪಗ್ರಹ ಪ್ರಸರಣದಲ್ಲಿ ಉಪಯೋಗಿಸಲಾಗುತ್ತದೆ. ಸದ್ಯ ಈ DAB ಯನ್ನು ವಿಡಿಯೊಗಳಿಗೆ ವಿಸ್ತರಿಸಲಾಗಿದೆ.ಅದರ ಹೊಸ ರೂಪವನ್ನು DMB ಎಂದು ಕರೆಯಲಾಗುತ್ತದೆ.

ಕಿರುತೆರೆ

[ಬದಲಾಯಿಸಿ]

ಕೆಲವು ಹೊಸ ಟೀವಿ ಸೆಟ್ ಗಳಲ್ಲಿ (PAL ಮತ್ತು NTSC)ಗಳಲ್ಲಿನ ಧ್ವನಿ ವ್ಯತ್ಯಾಸಗಳ ವಿಭಾಗಗಳನ್ನು ವಿಶ್ವಾದ್ಯಾಂತದ ಪ್ರಸಾರ ಟೀವಿಗಳಲ್ಲಿ ಗುರುತಿಸಬಹುದಾಗಿದೆ.ಒಂದಕ್ಕಿಂತ ಹೆಚ್ಚು ಶಬ್ದ ತರಂಗಗಳನ್ನು ಪಡೆಯಬಹುದಾಗಿದೆ. ಇವುಗಳನ್ನು ಎರಡು ಮೊನೊ ಧ್ವನಿ ಚಾನಲ್ ಗಳಲ್ಲಿ ಬಳಸಲಾಗುತ್ತದೆ.ಅಂದರೆ ಇದು ವಿಭಿನ್ನ ಭಾಷಾ ವಾಹಕಗಳ ಸ್ಟಿರಿಯೊ ಮುಖಾಂತರ ಇದನ್ನು ಸಾಧಿಸಬಹುದಾಗಿದೆ. ಮಲ್ಟಿಚಾನಲ್ ಟೆಲೆವಿಜನ್ ಸೌಂಡ್ ವಿಧಾನವನ್ನು ಪ್ರಮುಖವಾಗಿ ಅಮೆರಿಕಾದಲ್ಲಿ ಅನುಕರಿಸಲಾಗುತ್ತದೆ. NICAM ನ್ನು ಯುರೊಪ್ ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.ಜರ್ಮನಿಯಲ್ಲಿ ಮಾತ್ರ ಝೆಕಂನ್ಲ್ಟೊನ್ವಿಧಾನ ಬಳಕೆಯಾಗುತ್ತದೆ. ದಿ EIAJ FM/FM ಸಬ್ ಕ್ಯಾರಿಯರ್ ಉಪಸಂವಹನ ಪದ್ದತಿಯನ್ನು ಜಪಾನ್ ನಲ್ಲಿ ಬಳಸಲಾಗುತ್ತದೆ. ಆದರೆ ಡಿಜಿಟಲ್ TV,ನಲ್ಲಿ MP2 ಆಡಿಯೊ ಹರಿವನ್ನು ವ್ಯಾಪಕ ಪ್ರಮಾಣದಲ್ಲಿ MPEG-2 ಯೋಜನೆಯಡಿ ಬಳಸುತ್ತಾರೆ.

ಇತಿಹಾಸ

[ಬದಲಾಯಿಸಿ]
ಪ್ಯಾರಿಸ್ ನಲ್ಲಿ ನಡೆದ ವರ್ಲ್ಡ್ ಎಕ್ಶಿಬಿಶನ್ (1881)ರೇಖಾಚಿತ್ರ ಕ್ಲೆಮೆಂಟ್ ಅಡೆರ್ಸ್ ಥೆಯೆಟ್ರೊಫೊನ್ ರೀತಿಯದನ್ನು ಒಪೆರಾದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಕ್ಲೆಮೆಂಟ್ ಅಡೆರ್ ಇದರ ಎರಡು-ಚಾನಲ್ ಆಡಿಯೊ ವಿಧಾನವನ್ನು 1881 ರಲ್ಲಿ ಪ್ಯಾರಿಸ್ ನಲ್ಲಿ ಟೆಲಿಫೊನಿಕ್ ಪದ್ದತಿಯ ಪ್ರದರ್ಶಿಸಿದ.ಇದು ಪ್ಯಾರಿಸ ಒಪೆರಾದಲ್ಲಿನ ಧ್ವನಿತರಂಗಗಳನ್ನು ಅಲ್ಲಿನ ಪ್ರಸಾರಕ್ಕೆ ತಕ್ಕಂತೆ ಹೊಂದಿಸಲು ಸಮರ್ಥವಾಗಿತ್ತು.ಈ ಎಲೆಕ್ಟ್ರಿಕ್ ಪ್ರದರ್ಶನ ಪ್ರೇಕ್ಷಕರಲ್ಲಿ ಪುಳಕ ತಂದಿತ್ತು.ಇಲ್ಲಿನ ರಿಸೀವರ್ಸ್ ಗಳ ಮೂಲಕ ಶ್ರೋತೃಗಳು ಸಂಗೀತ ಆಸ್ವಾದಿಸಿದರು. ವೈಜ್ಞಾನಿಕ ಅಮೆರಿಕನ್ ಯೊಬ್ಬರು ವರದಿ ಮಾಡಿದಂತೆ,

"ಆದರೆ ಈ ಟೆಲೆಫೊನಿಕ್ ಸಂಭಾಷಣೆಯನ್ನು ಕಿವಿಗಳಲ್ಲಿ ಎರಡೂ ಬದಿಗಳಲ್ಲಿ ಕೇಳಿಸುವಿಕೆ ಕೂಡ ಕೇಳುಗರಲ್ಲಿ ಕೌತುಕ ಮೂಡಿಸಿತು.ಸ್ಥಳೀಯ ಈ ಧ್ವನಿ ಗ್ರಾಹಕಗಳನ್ನು ತರಂಗಾಂತರದ ಮುಖಾಂತರ ಎಲ್ಲರಿಗೂ ಗುರುತಿಸುವಂತಾಗಲು ಈ ಅನುಕೂಲ ಮಾಡಿಕೊಡಲಾಯಿತು.ಎರಡು ದೂರವಾಣಿ ಸಂವಾಹಕಗಳ ಏಕಕಾಲದ ಧ್ವನಿ ಪಡೆಯುವಿಕೆ ಹೊಸ ರಯೋಗಕ್ಕೆ ನಾಂದಿಯಾಯಿತು.ಅದನ್ನೇ ಶ್ರೋತೃಗಳ ಮುಂದುವರಿಕೆ ಭಾಗದ ಪ್ರಗತಿ ಎನ್ನಲಾಯಿತು."[೧೩]

ಈ ಟೆಲೆಫೊನಿಕ್ ಸಂಸ್ಕರಣ ವಿಧಾನವನ್ನು ಫ್ರಾನ್ಸ್ ನಲ್ಲಿ 1890 ರಿಂದ 1932 ರ ಹೊತ್ತಿಗೆ ಥೆಯೆಟರೊಫೊನ್ ಎಂದು ವಾಣೀಜ್ಯೀಕರಿಸಲಾಯಿತು.ಅದೇ ರೀತಿ ಇಂಗ್ಲೆಂಡ್ ನಲ್ಲಿ ಎಲೆಕ್ಟ್ರೊಫೊನ್ ಎಂದು ಕರೆಯಲಾಯಿತು. ಇವೆರಡೂ ನಾಣ್ಯದ ಮೂಲಕ ಚಾಲಿತ ಟೆಲಿಫೊನ್ ಮೂಲಕ ಲಭ್ಯಗೊಳಿಸಲಾಗಿದೆ.ಅಥವಾ ಖಾಸಗಿಯಾಗಿ ಗೃಹಬಳಕೆಗೆ ಇವನ್ನು ಚಂದಾದಾರಿಕೆ ಮೂಲಕ ನೀಡಲಾಗುತ್ತದೆ.[೧೪]

1930 ರ ಅವಧಿಯಲ್ಲಿ

[ಬದಲಾಯಿಸಿ]

ಆಗ EMIನಲ್ಲಿದ್ದ ಅಲನ್ ಬ್ಲುಮ್ಲೆನ್ 1930 ರಲ್ಲಿ ಸ್ಟಿರಿಯೊ ರೆಕಾರ್ಡ್ಸ್ ಗಳನ್ನು ಸ್ಟಿರಿಯೊ ಚಿತ್ರಗಳನ್ನು ಹಕ್ಕು ಸ್ವಾಮ್ಯ ಪಡೆದರು. ಇವೆರಡೂ ಸ್ಟಿರಿಯೊಫೊನಿಕ್ ಧ್ವನಿಮುದ್ರಣ ಪದ್ದತಿಗಳು ಎರಡು ಚಾನಲ್ ಗಳ ಬಳಕೆ ಮುಖಾಂತರ ಮತ್ತು ಒಂದೇ ರೀತಿಯ ಮೈಕ್ರೊಫೊನಿಕ್ ತಂತ್ರಗಳ (X-Y ಜೊತೆ ಎರಡು ದಿಶಾಶ್ವನಿ ನಿರ್ದೇಶಿತ ಪ್ರಸರಣಗಳ/ಬ್ಲುಮ್ಲೆನ್ ಸ್ಥಾಪಿತ ತತ್ವ /+ M/S ಸ್ಟಿರಿಯೊಗ್ರಾಫಿ ಬಳಸಲಾಗುತ್ತದೆ.)ಇದನ್ನು ಬ್ಲುಮ್ಲೆನ್ EMIನಲ್ಲಿ 1931-1933 ರಲ್ಲಿ ಹಕ್ಕು ಸ್ವಾಮ್ಯ ಪಡೆದುಕೊಂಡರು. ಇಲ್ಲಿ ಒಂದು ಸ್ಟಿರಿಯೊ ಡಿಸ್ಕ್ ಬಳಸಿ ಎರಡೂ ಪದರುಭಿತ್ತಿಯಲ್ಲಿ ಎರಡು ಚಾನಲ್ ಗಳಲ್ಲಿನ ಬಲಬದಿಯ ಧ್ವನಿ ಬಲಕ್ಕೆ ಇದು ಬಳಸಿಕೊಳ್ಳಲು ಸಾಧ್ಯತೆ ಒದಗಿಸಿತು.ಇದು 1933 ರಲ್ಲಿ EMI ನಲ್ಲಿ ಇಪ್ಪೈತ್ತೈದು-ವರ್ಷಗಳ ಮುಂಚೆಯೇ ಈ ವಿಧಾನಕ್ಕೆ ಆರಂಭ ದೊರಕಿತ್ತು. ಬೆಲ್ ಲ್ಯಾಬ್ ರೊಟರಿಯ ಹಾರ್ವೆಯ್ ಫ್ಲೆಚರ್ ಸ್ಟಿರಿಯೊಫೊನಿಕ್ ಧ್ವನಿಮುದ್ರಣ ಮತ್ತು ಮರು ಮುದ್ರಣಕ್ಕಾಗಿ ಹೊಸ ತಂತ್ರಗಳನ್ನು ಕಂಡು ಹಿಡಿದರು. ಇದರಲ್ಲಿನ ಒಂದು ಹೊಸ ತಂತ್ರಗಾರಿಕೆಯೆಂದರೆ "ವಾಲ್ ಆಫ್ ಸೌಂಡ್" ಅಂದರೆ ವಾದ್ಯಗೋಷ್ಟಿ ಎದುರಲ್ಲೇ ಸಾಲಾಗಿ ಜೋಡಿಸಿದ ಈ ಉಪಕರಣವು ಧ್ವನಿಗ್ರಹಣಕ್ಕೆ ಅನುಕೂಲ ಮಾಡಿಕೊಡುತ್ತದೆ. ಇದರಲ್ಲಿ ಸುಮಾರು 80 ಮೈಕ್ರೊಫೊನ್ ಗಳ ಬಳಕೆ ಮಾಡಲಾಗಿತ್ತು,ಪ್ರತಿಯೊಂದೂ ಅದಕ್ಕೆ ಪೂರಕ ಧ್ವನಿವರ್ಧಕಗಳನ್ನು ಪಡೆದಿತ್ತು.ಇದನ್ನು ಏಕರೂಪದ ಕೇಳುಗ ಕೊಠಡಿಯಲ್ಲಿ ಮಧ್ಯ ಭಾಗದಲ್ಲಿಡಲಾಗಿತ್ತು. ಹಲವು ಸ್ಟಿರಿಯೊಫೊನಿಕ್ ಪರೀಕ್ಷಾ ಮುದ್ರಣಗಳಿಗಾಗಿ ಎರಡು ಮೈಕ್ರೊಫೊನ್ ಗಳನ್ನು ಪ್ರತ್ಯೇಕವೆನ್ನುವಂತೆ ಜೋಡಿಸಲಾಗುತ್ತದೆ.ಇದನ್ನು ಮೇಣದ ಡಿಸ್ಕ್ ನಲ್ಲಿ ಸೇರಿಸಿಡಬಹುದಾಗಿದೆ.ಲೆಯೊಪೊಲ್ಡ್ ಸ್ಟಾಕೊವ್ಸಿಕ್ ಮತ್ತು ಫಿಲಿಡೆಲ್ಫಿಯಾ ಆರ್ಕೆಸ್ಟ್ರಾ ಅಕಾಡೆಮಿ ಆಫ್ ಮ್ಯುಜಿಕ್ ಪ್ರದೇಶದಲ್ಲಿ ಮಾರ್ಚ್ 1932 ರಲ್ಲಿ ಆಯೋಜಿಸಲಾಗಿತ್ತು. ಮೊದಲ ಬಾರಿಗೆ (ಮಾರ್ಚ್ 12,1932 ರಲ್ಲಿ ಮಾಡಿದ್ದು)ಸ್ಕ್ರಿಯಾಬಿನ್ಸ್ Prometheus: Poem of Fire ಎಂಬುದಾಗಿದ್ದು ಅದು ಮೊದಲ ಸ್ಟಿರಿಯೊ ಮುದ್ರಣವಾಗಿತ್ತು.[೧೫]

ಬೆಲ್ ಲ್ಯಾಬ್ ರೊಟರೀಸ್ ಮೂರು-ಚಾನಲ್ ನಸ್ಟಿರಿಯೊಫೊನಿಕ್ ಧ್ವನಿಯ ಪ್ರಾತ್ಯಕ್ಷಿಕೆಯನ್ನು ಏಪ್ರಿಲ್ 27,1933 ರಲ್ಲಿ ನೀಡಿತು.ಇದರಲ್ಲಿ ಫಿಲಿಡೆಲ್ಫಿಯಾ ಆರ್ಕೆಸ್ಟ್ರಾದಿಂದ ಫಿಲಿಡೆಲ್ಫಿಯಾಗೆ ಕನ್ ಸ್ಟಿಟುಶನ್ ಹಾಲ್ ಇದು ವಾಶಿಂಗ್ಟನ್ ಡಿಸಿ ಲೆಯೊಪೊಲ್ಡ್ ಸ್ಟೊಕೊವಸ್ಕಿ ಸಾಮಾನ್ಯವಾಗಿ ಈ ವಾದ್ಯಗೋಷ್ಟಿಯ ಆಯೋಜನೆ ಇದರ ಸ್ಟಿರಿಯೊಫೊನಿಕ್ ವಿಧಾನದಲ್ಲೇ ನಡೆದಿದ್ದು ಅವಿಸ್ಮರಣೀಯವಾಗಿದೆ.ಇಲ್ಲಿ ಮಿಶ್ರಣ ಸಂಗೀತದ ನಿಯಂತ್ರಣ ಸಾಧನಗಳ ಬಳಕೆಯು ಹೊಸ ಬಗೆಯದಾಗಿತ್ತು. ಬೆಲ್ ಲ್ಯಾಬ್ಸ್ ಸ್ಥಳೀಯ ಧ್ವನಿಗ್ರಹಣದ ಬಗ್ಗೆಯೂ ಪ್ರದರ್ಶನ ನೀಡಿತು.ಮೈಕ್ರೊಫೊನ್ ನೊಂದಿಗೆ ಪ್ರತಿರೂಪವಾದ ಕಿವಿಗಳ ಚಿಕ್ಯಾಗೊ ವರ್ಲ್ಡ್ಸ್ ಫೇರ್ ನಲ್ಲಿ 1933ರಲ್ಲಿ ನಡೆಸಿತು.[೧೬] ಎರಡು ಸಂಕೇತಗಳನ್ನು ಪ್ರತ್ಯೇಕ AMಕೇಂದ್ರ ಬ್ಯಾಂಡ್ ಗಳಿಗೆ ರವಾನಿಸಲಾಯಿತು.[೧೭]

1940 ರಿಂದ 1970

[ಬದಲಾಯಿಸಿ]

ಕಾರ್ನೆಗೆ ಹಾಲ್ ಪ್ರದರ್ಶನ 1940 ರಲ್ಲಿ

[ಬದಲಾಯಿಸಿ]

ಬೆಲ್ ಲ್ಯಾಬ್ ರೊಟರೀಸ್ ಅವರಿಂದ ಕಾರ್ನೆಗೆ ಹಾಲ್ ನಲ್ಲಿ ಏಪ್ರಿಲ್ 9 ಮತ್ತು 10 ರ 1940 ರಲ್ಲಿ ನಡೆದ ಪ್ರದರ್ಶನದಲ್ಲಿ ಮೂರು ದೊಡ್ಡ ಸ್ಪೀಕರ್ ಗಳ ಬಳಕೆ ಮಾಡಲಾಗಿತ್ತು. ಮೂರು ಮೋಷನ್ ಪಿಕ್ಚರ್ ಗಳಲ್ಲಿ ಧ್ವನಿಪಥಗಳನ್ನು ಧ್ವನಿಮುದ್ರಿಸುವ ಮೂಲಕ ಧ್ವನಿ ಸಮಗ್ರತೆಯನ್ನು ಸಾಧಿಸಲಾಯಿತು. ಯಾಕೆಂದರೆ ಇಲ್ಲಿ ಕ್ರಿಯಾಶೀಲ ಶ್ರೇಣಿಯ ಸೀಮಿತವಲಯಗಳು,ಧ್ವನಿ ಪ್ರಮಾಣದ ನಿಯಂತ್ರಣಗಳನ್ನು ಉಪಯೋಗಿಸಲಾಗಿತ್ತು.ಇಲ್ಲಿ ನಾಲ್ಕು ಮಾರ್ಗಗಳ ಮೂಲಕ ಇದನ್ನು ಧ್ವನಿಪ್ರಮಾಣದ ದರವನ್ನು ನಿಗಾವಹಿಸಲಾಗುತ್ತಿತ್ತು. ಆಗ ಡೊಲ್ಬೆಯ್ ಗದ್ದಲ ಕಡಿಮೆ ಮಾಡುವ ವಿಧಾನ 1970 ರಲ್ಲಿ ಅತ್ಯಂತ ಆಧುನಿಕವೆನಿಸಿತ್ತು.ಆವೃತ್ತಿಯಲ್ಲಿ ಅದೇ ರೀತಿಯ ತಂತ್ರಜ್ಞಾನ ಬಳಸಲಾಗಿತ್ತು. ಶಬ್ದಗ್ರಹಣ ಮತ್ತು ಅದರ ಹೆಚ್ಚಳ ಪೂರ್ಣವಾಗಿ ಸ್ವಯಂನಿಯಂತ್ರಣದಲ್ಲಿರಲಿಲ್ಲ.ಆದರೆ ಅವರು ತಮ್ಮದೇ ಕೈಯಿಂದ ಸೂಚಿಯನ್ನು ತಯಾರಿಸುತ್ತಿದ್ದರು.ಅದನ್ನು "ಹೆಚ್ಚಳ"ಅಂದರೆ ಇದು ಉದಾಹರಣೆಗಾಗಿ ಒಂದು ಧ್ವನಿಯ ಏರಿಳಿತಗಳ ಮಾರ್ಗವನ್ನು ಪ್ರತ್ಯೇಕವಾಗಿ ನೋಡಬೇಕಾಗುತ್ತಿತ್ತು. ಇದರ ಧ್ವನಿಮುದ್ರಣವನ್ನು ಫಿಲಿಡೆಲ್ಫಿಯಾ ಆರ್ಕೆಸ್ಟ್ರಾ ಅವರಿಂದ ಮಾಡಿದ್ದು ಲೆಯೊಪೊಲ್ಡ್ ಸ್ಟೊಕೊವ್ಸಿಕಿ ಇದರ ನಿರ್ವಹಣೆ ಮಾಡಿತು. ಸ್ಟೊಕೊವ್ಸ್ಕಿ ವೈಯಕ್ತಿಕವಾಗಿ ಈ "ಹೆಚ್ಚಳ"ದಲ್ಲಿ ಪಾಲ್ಗೊಂಡರು.

ಇದರಲ್ಲಿ ಉಪಯೋಗಿಸಿದ ಸ್ಪೀಕರ್ ಗಳು 1,500 ಒಟ್ಟು ಶಕ್ತಿ ಮೂಲದ ವ್ಯಾಟ್ ಬಳಸಿದವು.ಇದರಿಂದ ಸುಮಾರು 100 ಡೆಸಿಬಲ್ಸ್ ನಷ್ಟು ಧ್ವನಿ ಹೊರಹಾಕಿದವು.ಈ ಪ್ರದರ್ಶನವು ಇಡೀ ಪ್ರೇಕ್ಷಕವರ್ಗ "ಮೂಕವಿಸ್ಮಿತರನ್ನಾಗಿ" ಮಾಡಿತು.ವರದಿ ಪ್ರಕಾರ ಇದು ಸಂಗೀತ ಲೋಕದಲ್ಲಿ ದೊಡ್ಡ ಪ್ರಮಾಣದ ವಿಸ್ಮಯ ಮಾಡಿತು.[೧೮] ಸೆರ್ಗೆಯ್ ರಾಚ್ಮನಿನೊಫ್ ಅವರ ಪ್ರಕಾರ ಇದು ಅತ್ಯಂತ"ರೋಮಾಂಚಕ,ಅದ್ಭುತ"ಆದರೆ "ಇದು ಸಂಗೀತಲೋಕದಿಂದ ಆಚೆ ಇತ್ತು.ಯಾಕೆಂದರೆ ಇದರ ಗದ್ದಲದ ಧ್ವನಿ ಮತ್ತು ಅರಚಾಟವಾಗಿತ್ತು." "ಈ ಸಂದರ್ಭದಲ್ಲಿ ಈ ಪ್ರದರ್ಶನದಲ್ಲಿನ ಚಿತ್ರಗಳ ತೆಗೆಯಿರಿ ", ಎಂದು ಆತ ಹೇಳಿದರು. "ಅವರು ಆ ಸಂಗೀತ ಲೋಕದ ತುಣುಕಿನೊಳಗೆ ಹೋಗುವ ಮುಂಚೆ ಅದೇನೆಂದು ನನಗೆ ಗೊತ್ತಾರಿರಲಿಲ್ಲ "ಬಹಳಷ್ಟು 'ಹೆಚ್ಚಳ' ಅತಿಹೆಚ್ಚು ಸ್ಟೊಕೊವ್ಸ್ಕಿ" ಎಂದು ಆತ ಉದ್ಘರಿಸಿದ್ದರು.

ಚಲನಚಿತ್ರಗಳ ಯುಗ

[ಬದಲಾಯಿಸಿ]

ಬೆಲ್ ಲ್ಯಾಬ್ ರೊಟರೀಸ್ 1937 ರಲ್ಲಿ ನ್ಯುಯಾರ್ಕ್ ಸಿಟಿಯಲ್ಲಿ ಎರಡು-ಚಾನಲ್ ಗಳ ಸ್ಟಿರಿಯೊಫೊನಿಕ್ ಚಲನಚಿತ್ರಗಳ ಧ್ವನಿಮುದ್ರಣದ ಪ್ರದರ್ಶನ ನೀಡಿದರು.ಈ ಪರಿಷ್ಕೃತ ವಿಧಾನವನ್ನು ಬೆಲ್ ಲ್ಯಾಬ್ಸ್ ಮತ್ತು ಎಲೆಕ್ಟ್ರಿಕಲ್ ರಿಸರ್ಚ್ ಪ್ರಾಡಕ್ಟ್ಸ್ ಇಂಕಾ.ಜಂಟಿಯಾಗಿ ಅಭಿವೃದ್ಧಿಪಡಿಸಿದರು.[೧೯] ಅದರ ನಿರ್ವಾಹಕ ಲೆಯೊಪೊಲ್ಡ್ ಸ್ಟೊಕೊವ್ವ್ಸಿಕಿ ಫಿಲಿಡೆಲ್ಫಿಯಾದಲ್ಲಿನ ಅಕಾಡಮಿ ಆಫ್ ಮ್ಯುಜಿಕ್ ನಲ್ಲಿ ಒಂಭತ್ತು-ಮಾರ್ಗಗಳ ಧ್ವನಿ ವಿಧಾನವನ್ನು ಸಂಯೋಜಿಸಿದ್ದರು.ಆಗ 1937 ರಲ್ಲಿ ಯುನಿವರ್ಸಲ್ ಪಿಕ್ಚರ್ಸ್ ಗಾಗಿ ಒನ್ ಹಂಡ್ರೆಡ್ ಮೆನ್ ಅಂಡ್ ಎ ಗರ್ಲ್ ಚಲನಚಿತ್ರದ ಚಿತ್ರೀಕರಣ ಮಾಡಿದಾಗ ಈ ಪ್ರಯೋಗ ನಡೆಸಿದ್ದರು. ಧ್ವನಿಪಥಗಳನ್ನು ಒಟ್ಟು ಸೇರಿಸಿ ಅಂತಿಮ ಧ್ವನಿಪಥ ನಿರ್ಮಾಣ ಮಾಡಲಾಗಿತ್ತು.[೨೦][೨೧] ಮೆಟ್ರೊ-ಗೊಲ್ಡ್ವಿನ್-ಮೇಯೊರ್ ಕೂಡಾ ಚಲನಚಿತ್ರಗಳ ಧ್ವನಿಪಥಗಳಲ್ಲಿ ಒಂದರ ಬದಲಾಗಿ ಮೂರನ್ನು ಉಪ್ಯೋಗಿಸಲಾರಂಭಿಸಿದರು.1938 ರಲ್ಲಿ ಚಲನಚಿತ್ರಕ್ಕಾಗಿ ಈ ಪ್ರಯೋಗ ಮಾಡಿದ ಅವರು ನಂತರ ಸುಧಾರಿತ ನಾಲ್ಕು ಟ್ರ್ಯಾಕ್ ಬಳಸಲಾರಂಭಿಸಿದರು. ಒಂದು ಟ್ರ್ಯಾಕ್ ಸಂಭಾಷಣೆಗೆ,ಎರಡು ಸಂಗೀತಕ್ಕೆ ಮತ್ತು ಒಂದು ಧ್ವನಿ ಪರಿಣಾಮಗಳಿಗಾಗಿ ಬಳಸಿಕೊಳ್ಳಲಾಯಿತು. ಈ ಬಹುಮಾರ್ಗೀಯ ಧ್ವನಿ ಮುದ್ರಣದ ಉದ್ದೇಶವೆಂದರೆ ಏಕೈಕ ಆಪ್ಟಿಕಲ್ ಟ್ರ್ಯಾಕ್ ನ್ನು ಸೂಕ್ತವಾಗಿ ಭಟ್ಟಿ ಇಳಿಸುವುದೇ ಆಗಿತ್ತು.ಇಲ್ಲಿ ಸ್ಟಿರಿಯೊಫೊನಿಕ್ ಉದ್ದೇಶಗಳನ್ನು ಸಾರ್ಥಕಗೊಳಿಸಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಮೊದಲ ಬಾರಿಗೆ ಸ್ಥಳೀಯವಾಗಿ MGM ಧ್ವನಿಮುದ್ರಣ ಮಾಡಲಾಯಿತು.(ಇದು ಮೊನೊದಲ್ಲಿಯೇ ಬಿಡುಗಡೆಯಾದರೂ)ಅಲ್ಲಿ "ಇಟ್ ನೆವರ್ ರೇನ್ಸ್ ಬಟ್ ವಾಟ್ ಇಟ್ ಪೌರ್ಸ್"ಇದನ್ನು ಜುಡಿ ಗಾರ್ಲೆಂಡ್ ಅವರು ನಿರ್ಮಿಸಿದ್ದರು.ಅಲ್ಲದೇ ಜೂನ್ 21,1938 ರಲ್ಲಿ ಧ್ವನಿಮುದ್ರಣಗೊಳಿಸಲಾಗಿತ್ತು.ಲೌ ಫೈಂಡ್ಸ್ ಆಂಡಿ ಹಾರ್ಡಿ ಚಲನಚಿತ್ರಕ್ಕಾಗಿ ಇದರ ಧ್ವನಿ ಟ್ರ್ಯಾಕ್ ನಿರ್ಮಾಣವಾಗಿತ್ತು.

ಮೊದಲ ಬಾರಿಗೆ ವಾಣಿಜ್ಯೋದ್ದೇಶದ ಚಲನಚಿತ್ರ ಮತ್ತು ಸ್ಟಿರಿಯೊಫೊನಿಕ್ ಧ್ವನಿಯೊಳಗೊಂಡದ್ದೆಂದರೆ ವಾಲ್ಟ್ ಡಿಸ್ನಿಫಾಂಟಾಸಿಯಾ ,ಇದು ನವೆಂಬರ್ 1940 ರಲ್ಲಿ ಬಿಡುಗಡೆಯಾಯಿತು.ಇದಕ್ಕಾಗಿ ಧ್ವನಿ ಸಂಸ್ಕರಣವನ್ನು (ಫಾಂಟಾಸೌಂಡ್)ನಿರ್ಮಿಸಿತ್ತು. ಫಾಂಟಾಸೌಂಡ್ ಇದಕ್ಕಾಗಿ ಪ್ರತ್ಯೇಕ ಚಿತ್ರದ ನಾಲ್ಕು ದೃಷ್ಟಿಗೋಚರ ನಾಲ್ಕು ಧ್ವನಿಟ್ರ್ಯಾಕ್ ಗಳನ್ನು ಪಡೆದಿತ್ತು. ಮೂರು ಟ್ರ್ಯಾಕ್ ಗಳು ಕೇಳಿಸಲಾದರೆ ಇನ್ನೊಂದು ಚಲನಚಿತ್ರ ಮಂದಿರದಲ್ಲಿನ ಧ್ವನಿವರ್ಧಕಗಳ ಧ್ವನಿಯ ಪ್ರಮಾಣದ ನಿಯಂತ್ರಣ ಮಾಡುತಿತ್ತು.[೨೨] ಈ ಚಿತ್ರ ಹಣಕಾಸಿನಲ್ಲಿ ಯಶಸ್ವಿಯಾಗಲಿಲ್ಲ.ಇದರ ಸಂಗೀತವನ್ನು ಸೌಂಡ್ ಟ್ರ್ಯಾಕ್ ನ್ನು ಮಿಶ್ರಣದ ಧಾಟಿಯಲ್ಲಿ ಮಾಡಲು ಆಯ್ಕೆ ಮಾಡಿ ಅದನ್ನು ಸಾಮಾನ್ಯವಾಗಿ ಸಂಗೀತಕ್ಕಾಗಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಮುಂದಾಲೋಚನೆಯ ಅಲ್ಫ್ರೆಡ್ ನಿವ್ಮನ್ ರಂಗಮಂಚದ ಮೇಲಿನ ಸೌಂಡ್ ಟ್ರ್ಯಾಕ್ ಗಳಿಗಾಗಿ ಹೊಸ ವಿಧಾನವನ್ನು 1940 ರಲ್ಲಿ ಜಾರಿಗೆ ತಂದರು.20 ನೆಯ ಶತಮಾನದ ಫಾಕ್ಸ್ ಸ್ಟುಡಿಯೊಗೆ ಇದು ಹೇಳಿ ಮಾಡಿಸಿದಂತಿತ್ತು.ಇದು ಬಹುಚಾನಲ್ ಧ್ವನಿಮುದ್ರಣಕ್ಕೆ ದಾರಿ ಮಾಡಿತ್ತು. ಈ ಯುಗದ ಹಲವಾರು ಧ್ವನಿಪಥದ ಮುದ್ರಣಗಳು ಇಂದಿಗೂ ಅಸ್ತಿತ್ವದಲ್ಲಿವೆ.ಮಲ್ಟಿಚಾನಲ್ ನ ಇವುಗಳಲ್ಲಿನ ಕೆಲವನ್ನು ಡಿವಿಡಿ ಬಿಡುಗಡೆ ಮಾಡಲಾಗಿದೆ.ಅದರಲ್ಲಿ ಹೌ ಗ್ರೀನ್ ವಾಜ್ ಮೈ ವ್ಯಾಲ್ಲಿ ,ಅನ್ನಾ ಅಂಡ್ ಕಿಂಗ್ ಆಫ್ ಸಿಯಾಮ್ ,ಸನ್ ವ್ಯಾಲ್ಲಿ ಸಿರೆನೆಯೆಡ್ ಮತ್ತು ದಿ ಡೇ ದಿ ಅರ್ಥ್ ಸ್ಟುಡ್ ಸ್ಟಿಲ್ ಇತ್ಯಾದಿ.

ಮ್ಯಾಗ್ನೆಟ್ ಟೇಪ್ ಮುದ್ರಣದ ಸಾಹಸ ಮಲ್ಟಿಚಾನಲ್ ನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ.ಆದರೆ ನೇರವಾದ ಈ ತಂತ್ರಜ್ಞಾನವು ಸ್ವಲ್ಪಮಟ್ಟಿಗೆ ವೆಚ್ಚದಾಯಕವೂ ಹೌದು. ಆಗ 1950 ಆರಂಭದಲ್ಲಿ ಬಹುತೇಕ ಸ್ಟುಡಿಯೊಗಳು ಮಿಶ್ರಣ ಉದ್ದೇಶಕ್ಕಾಗಿ 35ಎಂಎಂ ಮ್ಯಾಗ್ನೆಟಿಕ್ ಟೇಪ್ ಧ್ವನಿಮುದ್ರಣ ಮಾಡುತ್ತಿದ್ದವು. ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕರಿಗಾಗಿ ಸ್ಟಿರಿಯೊಫೊನಿಕ್ ಧ್ವನಿ ವಿಧಾನ ಪರಿಚಿತಗೊಂಡಿತು. ಈ ಸ್ಟಿರಿಯೊ ಧ್ವನಿಯು ಉತ್ತಮ-ಅನುಕೂಲಕರವೆಂದು ದಿಸ್ ಈಸ್ ಸಿನೆರಮಾ 1952 ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾದಾಗಲೇ ಸಾಬೀತಾಯಿತು. ಈ ಸಿನೆರಮಾವು ವಿಶಾಲ ಪರದೆ ಮೇಲೆ ಅಂದರೆ ಈಗಿನ IMAXಚಿತ್ರಕ್ಕೆ ಹೋಲಿಸಬಲ್ಲ ಪ್ರಕ್ರಿಯೆಯಾಗಿತ್ತು.ಚಲನಚಿತ್ರಮಂದಿರವೊಂದಕ್ಕೆ ಸಿನೆರಮಾನಿಗದಿತ ವಿನ್ಯಾಸ ಮಾಡಬೇಕೆಂಬುದನ್ನು ತಿಳಿಸುವಂತಿತ್ತು. ಸಿನೆರಮಾದ ಆಡಿಯೊ ಸೌಂಡ್ ಟ್ರ್ಯಾಕ್ ನ್ನು ಏಳು ಮ್ಯಾಗ್ನೆಟಿಕ್ ಧ್ವನಿಪಥಗಳಲ್ಲಿ ವಿಭಾಗಿಸಲಾಯಿತು.ಐದು ಪರದೆಯ ಹಿಂದೆ,ಇನ್ನೆರಡು ಸುತ್ತಲಿನ ದ್ವನಿಗ್ರಹಣಕ್ಕೆ ಮೀಸಲಾಗಿದ್ದವು. ಈ ತಂತ್ರಜ್ಞಾನ ವಿಧಾನ ಮ್ಯಾಗ್ನೆಟಿಕ್ ಧ್ವನಿಮುದ್ರಣದ ಪ್ರವರ್ತಕ ಹಜಾರ್ಡ್ ಇ.ರೀವೆಸ್ ಅವರಿಂದ ಅಭಿವೃದ್ಧಿಪಡಿಸಲ್ಪಟ್ಟಿತು. ಇವೆಲ್ಲ ಮೂಲ ಲೆಕ್ಕಾಚಾರಗಳ ಪರಿಗಣಿಸಿದರೆ (ಅದರಲ್ಲಿ ಕೆಲವು ಧ್ವನಿಮುದ್ರಣದ ಸಾಕಷ್ಟು ಅನುಭವ ಪಡೆದ ಇತ್ತೀಚಿನ ಪ್ರಯೋಗಶೀಲತೆಯೂ ಸೇರಿತ್ತು)ಇಲ್ಲಿ ಧ್ವನಿಪಥದ ಜಾಡಿನೊಂದಿಗೆ ಸಿನೆಮಾದ ಉತ್ತಮ ಗೋಚರತೆಗೂ ಆದ್ಯತೆ ನೀಡಲಾಗುತಿತ್ತು.

ದಿಸ್ ಈಸ್ ಸಿನೆರಮಾ ಎಂಬುದು ನ್ಯುಯಾರ್ಕ್ ಸಿಟಿಯಲ್ಲಿ ಏಪ್ರಿಲ್ 1953 ರಲ್ಲಿ ಇನ್ನೂ ಅಸ್ತಿತ್ವ ಪಡೆದಿತ್ತು.ಹಲವು ಸಿನೆಮಾ ನೋಡುಗರು ಈ ಧ್ವನಿಪಥದ ಮುದ್ರಣವನ್ನು ಮೊದಲ ಬಾರಿಗೆ ವಾರಂಟ್ ಬ್ರದರ್ಸ್ ನಲ್ಲಿ ಸ್ಟಿರಿಯೊಫೊನಿಕ್ ಶಬ್ದಕ್ಕೆ ಕಿವಿಗೊಟ್ಟರು.ಇದರಲ್ಲಿ ಹೌಸ್ ಆಫ್ ವ್ಯಾಕ್ಸ್ ನ 3-ಡಿ ಫಿಲ್ಮ್ಪ್ರಮುಖವಾಗಿತ್ತು ಅದರಲ್ಲಿ ವಿನ್ಸೆಂಟ್ ಪ್ರೈಸ್ ಅವರ ಅಭಿನಯವಿತ್ತು. ಆಗಿನ ಧ್ವನಿಪಥ ವಿಧಾನ ವಾರ್ನರ್ ಫೊನಿಕ್ 35 ಎಂಎಂ ನ ಮ್ಯಾಗ್ನೆಟಿಕ್ ಪೂರ್ಣ ಹೊದಿಕೆಯ ಎಡ-ಕೇಂದ್ರ-ಬಲಬದಿಯಲ್ಲಿ ಒಳಭಾಗದಲ್ಲಿ ಬಂಧಿಯಾದ ಈ ಟ್ರ್ಯಾಕ್ ವಿಧ ಎರಡು ಜೋಡಿ-ಪಟ್ಟಿ ಪೊಲರೈಡ್ ಪ್ರೊಜೆಕ್ಟರ್ ಗಳ ವಿಧಾನ ಹೊಂದಿತ್ತು.ಇವುಗಳಲ್ಲಿ ಒಂದು ದೃಶ್ಯಗೋಚರವಾದರೆ ಇನ್ನೊಂದು ಸುತ್ತಲಿನ ಧ್ವನಿ ಪಸರಿಸಲು ಸೌಂಡ್ ಟ್ರ್ಯಾಕ್ ಪಡೆದಿತ್ತು. ಕೇವಲ ಇನ್ನೆರೆಡು ಚಿತ್ರಗಳು ವಾರ್ನೆರ್ ಫೊನಿಕ್ ಸೌಂಡ್ ಧ್ವನಿಯೊಳಗೊಂಡಿದ್ದವು.ಅದರಲ್ಲಿ 3-ಡಿ ನಿರ್ಮಾಣಗಳಾದ ದಿ ಚಾರ್ಜ್ ಆಟ್ ಫೀದರ್ ರಿವರ್ ಮತ್ತು ಐಲೆಂಡ್ ಇನ್ ದಿ ಸ್ಕೈ . ಈ ಚಿತ್ರಗಳ ಮ್ಯಾಗ್ನೆಟಿಕ್ ಟ್ರ್ಯಾಕ್ಸ್ ಗಳು ಕಳೆದುಹೋದವೆಂದು ಪರಿಗಣಿಸಲಾಗಿದೆ. ಬೃಹತ್ ಪ್ರಮಾಣದ 3-ಡಿ ಚಿತ್ರಗಳು ಥ್ರೀ-ಟ್ರ್ಯಾಕ್ ಮ್ಯಾಗ್ನೆಟಿಕ್ ಧ್ವನಿಪಥದಲ್ಲಿ ಏರಿಳಿಕೆ ಕಂಡವು. ಅವುಗಳಲ್ಲಿ ಇಟ್ ಕೇಮ್ ಫ್ರಾಮ್ ಒಟರ್ ಸ್ಪೇಸ್ ; ಐ, ದಿ ಜುರಿ ; ದಿ ಸ್ಟ್ರೇಂಜರ್ ವೊರ್ ಎ ಗನ್ ; ಇನ್ ಫೆರ್ನೊ ; ಕಿಸ್ ಮಿ, ಕೇಟ್ ; ಮತ್ತು ಇನ್ನೂ ಹಲವಾರಿದ್ದವು.

ಈ ಸಿನೆರಮಾದಿಂದ ಸ್ಪೂರ್ತಿ ಪಡೆದ ಚಲನಚಿತ್ರ ಉದ್ಯಮವು ಶೀಘ್ರದಲ್ಲೇ ಕಡಿಮೆ ವೆಚ್ಚದ ವಿಶಾಲ ಪರದೆಯ ವಿಧಾನಗಳನ್ನು ಬಳಸಿಕೊಂಡಿತು.20 ಥ್ ಸೆಂಚುರಿ-ಫಾಕ್ಸ್ ನ ಸಿನೆಮಾಸ್ಕೋಪ್ ನಾಲ್ಕು ಮ್ಯಾಗ್ನೆಟಿಕ್ ಸೌಂಡ್ ಟ್ರ್ಯಾಕ್ ಗಳನ್ನೊಳಗೊಂಡಿತ್ತು. ಅದರ 35-ಎಂಎಂ ಗುಣಮಟ್ಟದ ಶ್ರೇಣಿ,ಈ ಸಿನೆಮಾಸ್ಕೋಪ್ ಮತ್ತು ಅದರ ಸ್ಟಿರಿಯಿಫೊನಿಕ್ ಧ್ವನಿಯು ಇಂದಿನ ಸಿನೆಮಾ ದ್ವನಿಪಥದ ಜಾಡನ್ನೇ ಹೋಲುತ್ತದೆ. ಅದೇ ಕಂಪನಿಯಿಂದ ಸಿನೆಮಾಸ್ಕೋಪ್ 55 ನ್ನು ನಿರ್ಮಿಸಲಾಯಿತು.ಅದರಲ್ಲೇ ಉತ್ತಮ ಪದ್ದತಿ ಅಳವಡಿಕೆಗೆ ಕಾರಣವಾಯಿತು.(35 ಎಂಎಂ ಬದಲಾಗಿ 55 ಎಂಎಂ)ಇದರ ಬದಲಾಗಿ 6-ಟ್ರ್ಯಾಕ್ ಸ್ಟಿರಿಯೊವನ್ನು ಅಳವಡಿಸಲಾಗಿತ್ತು. ಆದರೆ ಚಿತ್ರವು ಪ್ರಯೋಗಕ್ಕೆ ಹೊಂದಾಣಿಕೆಯಾಗದೇ ಈ ವಿಧಾನವು ಯಶಸ್ಸು ಕಾಣಲಿಲ್ಲ.ಇದರಲ್ಲಿ ಎರಡು ಚಿತ್ರಗಳನ್ನು ಮಾಡಲಾಗಿತ್ತಾದರೂ ನಂತರ ಅವುಗಳನ್ನು 35ಎಂಎಂಗೆ ಇಳಿಸಲಾಯಿತು.ಆ ಚಿತ್ರಗಳೆಂದರೆ ಕರೌಸೆಲ್ ಮತ್ತು ದಿ ಕಿಂಗ್ ಅಂಡ್ ಐ . ಇದರ ಪ್ರಾಥಮಿಕ ಪ್ರದರ್ಶನ ಕರೌಸೆಲ್ ನಲ್ಲಿ ಆರು-ಟ್ರ್ಯಾಕ್ ಮ್ಯಾಗ್ನೆಟಿಕ್ ಪೂರ್ಣ-ಪ್ರಮಾಣದ ಬಂಧಿಯಾದ ಧ್ವನಿಪಥ ಒಳಗೊಂಡಿತ್ತು.ಅಲ್ಲದೇ 1961 ರಲ್ಲಿ ದಿ ಕಿಂಗ್ ಅಂಡ್ ಐ ನ್ನು ಮರುಬಿಡುಗಡೆ ಮಾಡಲಾಯಿತು.ಇದನ್ನು 70 ಎಂಎಂ ಗೆ "ವಿಸ್ತರಿಸಿ"ಆರು-ಟ್ರ್ಯಾಕ್ ಸ್ಟಿರಿಯೊ ಸೌಂಡ್ ಟ್ರ್ಯಾಕ್ ಬಳಸಲಾಗಿತ್ತು.

ಹೇಗೆಯಾದರೂ 1954 ರಲ್ಲಿ ಚಲನಚಿತ್ರಗಳನ್ನು ಸ್ಟಿರಿರ್ಯೊದಲ್ಲಿ ಮುದ್ರಿಸಲಾಗಿತ್ತು.(ಸಿನೆರಮಾದಲ್ಲಿ ತೋರಿದವುಗಳ ಹೊರತುಪಡಿಸಿ)ಸ್ಟಿರಿಯೊಗಳಿಗೆ ಸಿದ್ದವಾಗಿರದ ಚಿತ್ರಮಂದಿರಗಳಲ್ಲಿ ಅಥವಾ ಅದನ್ನು ಅಳವಡಿಸಲು ಹಿಂದೇಟು ಹಾಕಿದ ಕಡೆಗಳಲ್ಲಿ ಇದು ಬಳಕೆಯಾಗಿಲ್ಲ.[೨೩] ಆಗಿನ 1975,ರ ಅವಧಿಯ ವರೆಗೆ ಯಾವಾಗ ಡೊಲ್ಬಿ ಸ್ಟಿರಿಯೊ ವನ್ನು ಮೊದಲ ಬಾರಿಗೆ ಚಲನಚಿತ್ರಗಳಲ್ಲಿ ಅಳವಡಿಸಲಾಗಿತ್ತು.ಆಗ ಕೆಲವು ಸ್ಟಿರಿಯೊಫೊನಿಕ್ ಧ್ವನಿಯುಳ್ಳದ್ದಾಗಿದ್ದವು.ಆಗ ಸ್ಟಿರಿಯೊಫೊನಿಕ್ ಸೌಂಡ್ ಟ್ರ್ಯಾಕ್ ಅಲ್ಬಮ್ಗಳನ್ನು ಮಾಡಲಾಯಿತು.ಉದಾಹರಣೆಗೆ ಜೆಫಿಫ್ರೆಲ್ಲಿ'ಯ ರೊಮಿಯೊ ಅಂಡ್ ಜುಲಿಯಟ್ —ಗಳನ್ನು ಇನ್ನೂ ಮನೌರಲ್ ಧ್ವನಿಗಳಲ್ಲೇ ಬಿಡುಗಡೆ ಮಾಡಲಾಗುತ್ತಿದೆ,[೨೪] ಈ ಸ್ಟಿರಿಯೊ ಧ್ವನಿಯನ್ನು ಬಹುತೇಕ ಅಧಿಕ ವೆಚ್ಚದ ಸಂಗೀತಗಳಿಗೆ ಮೀಸಲಿಡಲಾಗಿದೆ,ಉದಾಹರಣೆಗಾಗಿ ವೆಸ್ಟ್ ಸೈಡ್ ಸ್ಟೊರಿ ,[೨೪] ಮೈ ಫೇರ್ ಲೇಡಿ ,[೨೪] ಅಥವಾ ಕೇಮ್ ಲೊಟ್ ;[೨೪] ಮಹಗ್ರಂಥಗಳ ಆಧಾರದ ಉದಾಹರಣೆಗಾಗಿ ಬೆನ್-ಹರ್ [೨೪] ಅಥವಾ ಕ್ಲಿಯೊಪಾತ್ರ ;[೨೪] ಅಥವಾ ರಂಗನಾಟಕಗಳ ಪ್ರಬಲ ಧ್ವನಿ ಅವಲಂಬಿತ ಪ್ರದರ್ಶನಗಳು ಅಥವಾ ಸಂಗೀತ ಮೂಲದ ಉದಾಹರಣೆಗೆ ದಿ ಗ್ರಾಜುವೇಟ್ ,[೨೪] ಅದರ ಸೈಮೊನ್ ಅಂಡ್ ಗಾರ್ಫುಂಕೆ ಧ್ವನಿಮುದ್ರಣಗಳು ಪರಿಚಿತವಾದವು. ಇಂದು ಎಲ್ಲಾ ಚಿತ್ರಗಳು ಸಾಮಾನ್ಯವೆನ್ನುವಂತೆ ಸ್ಟಿರಿಯೊಫೊನಿಕ್ ಸೌಂಡ್ ನಲ್ಲೇ ಬಿಡುಗಡೆ ಕಾಣುತ್ತವೆ.

ನಿರ್ಮಾಪಕರು 70 ಎಂಎಂ ಚಿತ್ರಗಳಲ್ಲಿನ ಅನುಕೂಲ ಬಳಸಿ ಮ್ಯಾಗ್ನೆಟಿಕ್ ಸೌಂಡ್ ಟ್ರ್ಯಾಕ್ಸ್ ಗಳನ್ನು ಚಲನಚಿತ್ರಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ.ನಿರ್ಮಾಣಗಳು 65 ಎಂಎಂ (ಅಥವಾ 35ಎಂಎಂ ನಂತರ 70 ಎಂಎಂ ಗಳಾಗಿ ವಿಸ್ತಾರ ಪಡೆದವು)ಇವುಗಳ ಮರುಮಿಶ್ರಣದೊಂದಿಗೆ ಸ್ಟಿರಿಯೊಗೆ ಅಳವಡಿಸಲು ಪ್ರಾರಂಭಿಸಲಾಯಿತು.ಆದರೆ 30ಎಂಎಂ ಗಳು ಮುದ್ರಣ-ಇಳಿಕೆ ಕಂಡರೂ ಅದು ಮೊನೊ ಅಥವಾ ನಾಲ್ಕು-ಟ್ರ್ಯಾಕ್ ಧ್ವನಿಪಥ ಹೊಂದಿತ್ತು.

ಗ್ರಾಹಕರ ಮಾಧ್ಯಮ

[ಬದಲಾಯಿಸಿ]

ಆಗ 1940 ರಿಂದ 1970 ರ ವರೆಗೆ ಸ್ಟಿರಿಯೊಫೊನಿಕ್ ಸೌಂಡ್ ಹಲವು ತಾಂತ್ರಿಕ ತೊಂದರೆಗಳನ್ನು ಅನುಭವಿಸಬೇಕಾಯಿತು.ಇವುಗಳ ಮುದ್ರಣ ಮತ್ತು ಮರುಮಿಶ್ರಣ ಹಲವು ಚಾನಲ್ ಗಳಲ್ಲಿ ಒಂದುಗೂಡಿಸಲು ಸಾಧ್ಯವಾಗದಾಯಿತು.ಆಗಲೇ ಹೊಸ ಆಡಿಯೊ ಮಾಧ್ಯಮ ಮತ್ತು ಉಪಕರಣಗಳಿಗೆ ದಾರಿಯಾಯಿತು. ಒಂದು ಅಂದಾಜಿನ ಪ್ರಕಾರ ಮೊನೊಫೊನಿಕ್ ಪದ್ದತಿಗಿಂತ ಸ್ಟಿರಿಯೊ ಪದ್ದತಿ ದುಬಾರಿ ವೆಚ್ಚದ್ದಾಗಿದೆ.ಆಧುನಿಕ ಗಟ್ಟಿಧ್ವನಿವರ್ಧಕಗಳ ಅಳವಡಿಕೆ ಸಹಜವಾಗಿದೆ.ಇದು ಎರಡು ಸ್ಪೀಕರ್ ಪದ್ದತಿ ಅಳವಡಿಕೆಗೆ ಪೂರಕವಾಗಿತ್ತು. ಆದರೆ ಇದು ಗ್ರಾಹಕ ಮಟ್ಟದಲ್ಲಿ ಹೇಗೆ ಕೆಲಸಮಾಡಿ ಪ್ರತಿಕ್ರಿಯೆ ಪಡೆದಿದೆ ಎಂಬುದು ಸ್ಪಷ್ಟವಾಗಿಲ್ಲ.ಆದರೆ ಮೊದಲ ಪದ್ದತಿಗಿಂತ ಎರಡುಪಟ್ಟು ವೆಚ್ಚದ ಧ್ವನಿಮುದ್ರಣ ಇದಾಗಿದ್ದು ಮಾತ್ರ ಸತ್ಯ.

ಎಮೊರಿ ಕುಕ್ (1913–2002)ಆಗ 1952 ರಲ್ಲಿ ಹೊಸ ಪ್ರತಿಕ್ರಿಯೆ ಪಡೆಯುವಲ್ಲಿ ಅವರು ಪ್ರಸಿದ್ದರಾಗಿದ್ದರಲ್ಲದೇ ಅದರ ಸುಧಾರಣೆಗೆ ಯತ್ನಿಸಿದರು.ಟೇಪ್ ಮುದ್ರಣದಿಂದ ಅದನ್ನು ವಿನ್ಯಲ್ (ಸೂಕ್ಷ್ಮ ಧ್ವನಿಗ್ರಹಣ) ದ "ಸ್ಥಳೀಯಧ್ವನಿ ಹಿಡಿಯುವ" ವಿಧಾನ ಪರಿಚಯಿಸಿದರು. ಈ ಮುದ್ರಣ ವಿಧಾನವು ಎರಡು ವಿಶೇಷ ಪ್ರತ್ಯೇಕ ಚಾನಲ್ ಗಳನ್ನೊಳಗೊಂಡಿದ್ದು ಒಂದಕ್ಕೊಂದು ಪರಸ್ಪರವಾಗಿವೆ. ಪ್ರತಿ ಶಬ್ದಸೂಚಕವು ನೆಡುವ ಸೂಜಿಯನ್ನೊಳಗೊಂಡಿದೆ.ಹೀಗೆ ಪ್ರತಿಸೂಜಿಯು ವಿಸ್ತೃತ ಧ್ವನಿಮತ್ತು ಸ್ಪೀಕರಗೆ ಕೊಂಡಿಯಾಗಿರುತ್ತದೆ ಈ ಸಿದ್ದತೆಯ ವಿಧಾನವನ್ನು ನ್ಯುಯಾರ್ಕ್ ಆಡಿಯೊ ಮೇಳದಲ್ಲಿನ ಕುಕ್ಕರ್ ಕಟ್ಟರ್ ಮೇಲ್ತುದಿಯುಳ್ಳ ಮುದ್ರಣಗಳ ಮಾರಾಟದಲ್ಲಿ ಪ್ರದರ್ಶಿಸಲಾಯಿತು.ಇಂತಹ ಮುದ್ರಣ ಮತ್ತು ಉಪಕರಣಗಳು ಸುಧಾರಣೆ ಕಂಡಾಗ ವಾಣಿಜ್ಯಿಕವಾಗಿ ಹೊರಬಂದವು. ಕುಕ್ ಹಲವು ಧ್ವನಿಮುದ್ರಣ ಮಾಡಿ ಸೈ ಎನಿಸಿಕೊಂಡಿದ್ದಾರೆ.ರೈಲ್ವೆ ಶಬ್ದ ಹಿಡಿದು ಗುಡುಗುಸಿಡಿಲಿನ ಅಬ್ಬರದ ಶಬ್ದದೊಂದಿಗೆ ಮುದ್ರಣದ ದಾಖಲೆ ಮಾಡಿ ಇದನ್ನು ಪ್ರದರ್ಶಿಸಿದ್ದಾರೆ. (ಆಗ ಕುಕ್ ಬಳಸಿದ "ಸ್ಥಳೀಯ ಧ್ವನಿ"ಪ್ರಕಾರವನ್ನು ಆಧುನಿಕ ಸೌಂಡ್ ಟ್ರ್ಯಾಕ್ ಬಳಕೆಗೆ ಹೋಲಿಸಿ ಗೊಂದಲಕ್ಕೀಡಾಗಬಾರದು.ಕಿವಿಗಳಲ್ಲಿ ಎರಡು ಇಯರ್ ಫೊನ್ ಬಳಸಿ ಕೇಳುಗನಿಗೆ ಅನುಕೂಲ ಮಾಡಲಾಗಿತ್ತು. ಕುಕ್ ಅನುಕೂಲಕರ ಸಂವಹನದ ಮೈಕ್ರೊಫೊನ್ಸ್ ಬಳಸಿದರಾದರೂ ಈ ಸ್ಟಿರಿಯೊ ಮುದ್ರಣಕ್ಕೆ "ಬೈನೌರಲ್"ಎಂದು ಕರೆದರು) ಕುಕ್ 1953 ರ ಹೊತ್ತಿಗೆ ಸುಮಾರು 25 ಸ್ಟಿರಿಯೊ ರೆಕಾರ್ಡ್ಸ್ ಗಳ ಪಟ್ಟಿ ಸಿದ್ದಪಡಿಸಿದರು.ಆಗ ಆಡಿಯೊಫೈಲ್ ಗಳನ್ನು ಮಾರಾಟಕ್ಕಿಡಲಾಯಿತು.[೨೫]

ಸ್ಟಿರಿಯೊ ಮ್ಯಾಗ್ನೆಟಿಕ್ ಟೇಪ್ ಮುದ್ರಣವನ್ನು ಎರಡು ರೆಕಾರ್ಡಿಂಗ್ ಗಳ ಒಟ್ಟು ಸೇರಿಸಿ ಅಲ್ಲದೇ ಅದನ್ನು ಹಿನ್ನಲೆಯಾಗಿ 1/4 ಇಂಚುಗಳ ಗುಣಮಟ್ಟದ ಟೇಪ್ ಬಳಸಲಾಯಿತು.ಇದನ್ನು 1952 ರಲ್ಲಿ ಪ್ರದರ್ಶಿಸಲಾಯಿತು.[೨೬] ಅದೇ ಸಂದರ್ಭದಲ್ಲಿ ರೆಮಿಂಗ್ಟನ್ ರೆಕಾರ್ಡ್ಸ್ 1953 ರಲ್ಲಿ ಅದರ ಸಂಗೀತ ಗೋಷ್ಟಿಗಳನ್ನು ಮುದ್ರಿಸಲು ಆರಂಭಿಸಿತು.ಇವುಗಳನ್ನು ಕಲಾವಿದರ ತಂಡವಾದ ಥೊರ್ ಜಾನ್ಸನ್ ಮತ್ತು ಸಿನಿಸಿನ್ನಾಟಿ ಸಿಂಫನಿ ಆರ್ಕೆಸ್ಟ್ರಾ ದವರು ಈ ಸಂಗೀತ ಪ್ರದರ್ಶನ ಮಾಡಿದ್ದರು. ಆ ವರ್ಷದ ಕೊನೆಯಲ್ಲಿ RCA ವಿಕ್ಟರ್ಕೆಲವು ಸ್ಟಿರಿಯೊ ಟೇಪಿಂಗ್ ಗಳ ಪ್ರಯೋಗ ಮಾಡಿತು.ಅದಕ್ಕೆ ಲೆಯೊಪೊಲ್ಡ್ ಸ್ಟೊಕೊವ್ಸ್ಕಿ ಮತ್ತು ನ್ಯುಯಾರ್ಕ್ ಸಂಗೀತಗಾರರ ಗುಂಪು ನೆರವಾಯಿತು. ಆಗ RCA 1954 ರಲ್ಲಿ ಬಾಸ್ಟನ್ ಸಿಂಫನಿ ಆರ್ಕೆಸ್ಟ್ರಾ ವನ್ನು ಟೇಪ್ ಮಾಡಿತ್ತು.ಇದನ್ನು ಚಾರ್ಲ್ಸ್ ಮುಂಚ್ ಅವರ ತಂಡ ಬೆರ್ಲಿಯೊಜ್ ನ ಡ್ಯಮ್ನೇಶನ್ ಆಫ್ ಫೌಸ್ಟ್ ನಲ್ಲಿ ನಡೆಸಿಕೊಟ್ಟಿತ್ತು.ಇದು ಕಂಪನಿಯು ನಿರಂತರವಾಗಿ ಧ್ವನಿಮುದ್ರಣ ಕಾರ್ಯದಲ್ಲಿ ತೊಡುಗುವಂತೆ ಮಾಡಿತು. ಇದಾದ ಅಲ್ಪಾವಧಿಯಲ್ಲಿಯೇ ಆರ್ಟುರೊ ಟೊಸ್ಕ್ಯಾನಿಯನ್ ನ ಕೊನೆಯ ಎರಡು ಸಾರ್ವಜನಿಕ ಸಂಗೀತ ಕಾರ್ಯಕ್ರಮಗಳು ಸ್ಟಿರಿಯೊಫೊನಿಕ್ ಮ್ಯಾಗ್ನೆಟಿಕ್ ಟೇಪ್ ನಲ್ಲಿ ಧ್ವನಿಮುದ್ರಣ ಕಂಡವು. ಆದರೆ ಅವುಗಳು 1987 ಮತ್ತು 2007 ರ ವರೆಗೆ ಅನುಕ್ರಮವಾಗಿ ಸ್ಟಿರಿಯೊದಲ್ಲಿ ಬಿಡುಗಡೆ ಕಾಣಲಿಲ್ಲ. ಅದೇ ವೇಳೆಗೆ UK ನಲ್ಲಿ ಡೆಕ್ಕಾ ರೆಕಾರ್ಡ್ಸ್ ಸ್ಟಿರಿಯೊದಲ್ಲಿ 1954ರ ಮಧ್ಯಭಾಗದಲ್ಲಿ ಮುದ್ರಣ ಮಾಡಲು ಆರಂಭಿಸಿತು. ಕಂಪನಿಗಳಾದ ಕನ್ಸರ್ ಟೇಪ್ಸ್ ಮತ್ತು RCA ವಿಕ್ಟರ್ ಗಳು 1954 ರಲ್ಲಿ ಎರಡು ಟ್ರ್ಯಾಕ್ ಗಳ ಪೂರ್ವ ನಿರ್ಧರಿತ ಮುದ್ರಣದ ಸ್ಟಿರಿಯೊಫೊನಿಕ್ ಟೇಪ್ ಗಳ ಬಿಡುಗಡೆ ಮಾಡಿದವು.ಪ್ರತಿ-ರೀಲ್ ನಿಂದ ರೀಲ್ ವರೆಗಿನ ಅದರ ಧ್ವನಿಪಥ ಜಾಡು ಮಾನ್ಯುರಲ್ ವೆಚ್ಚಕ್ಕಿಂತ ಎರಡು ಪಟ್ಟು ಖರ್ಚಿನಲ್ಲಿ ಮುದ್ರಣ ಕಾಣಬೇಕಾಯಿತು.[೨೭] ಗಂಭೀರ ಆಡಿಯೊಫೈಲ್ಸ್ ಗಳನ್ನು ಜನ ಸಂಗ್ರಹಿಸಿ ನಂತರ ಅದನ್ನು "ಆರಂಭಿಕ ಅಳವಡಿಕೆಗಳು" ಎಂದು ಕರೆಯಲಾಯಿತಾದರೂ ಜನ ಅವುಗಳನ್ನು ಖರೀದಿಸಿದರು.ಹೀಗಾಗಿ ಅವು ಕೆಲವು ಜನರ ದೈನಂದಿನ ಬದುಕಿನ ಕೊಠಡಿಯಲ್ಲಿ ತಮ್ಮ ವಾಸ ಕಂಡವು.[೨೮] ನಂತರ 1957 ರ ಅವಧಿ ಅಂತ್ಯಕ್ಕೆ ಸ್ಟಿರಿಯೊ ರೆಕಾರ್ಡಿಂಗ್ ಸಂಗೀತ ವಹಿವಾಟಿನ ಲೋಕದಲ್ಲಿ ವ್ಯಾಪಕವಾಯಿತು.

ಲೇಬಲ್ ಅಂಡ್ ಸ್ಲೀವ್ ಫ್ರಾಮ್ ಆಡಿಯೊ ಫಿಡೆಲಿಟಿ ರೆಕಾರ್ಡ್ಸ್ ಸೆಕೆಂಡ್ ಸ್ಟಿರಿಯೊ ಡೆಮಾನ್ ಸ್ಟ್ರೇಶನ್ ರೆಕಾರ್ಡ್,ca. 1958.

ಸಣ್ಣ ಪ್ರಮಾಣದ ವ್ಯಾಪಾರಿ ಮುದ್ರೆಯ ಆಡಿಯೊ ಫಿಡೆಲೆಟಿ ರೆಕಾರ್ಡ್ಸ್ ಮೊದಲ ಬೃಹತ್ ಪ್ರಮಾಣದ ನಿರ್ಮಾಣದ ಸ್ಟಿರಿಯೊಫೊನಿಕ್ ಡಿಸ್ಕ್ ಗಳನ್ನು ನವೆಂಬರ್ 1957 ರಲ್ಲಿ ಸಾರ್ವಜನಿಕಗೊಳಿಸಿತು. ಸಿಡ್ನಿ ಫ್ರೆಯ್ ಈ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ವೆಸ್ಟ್ರೆಕ್ಸ್ ನ್ನು ಸ್ವಾಧೀನಪಡಿಸಿಕೊಂಡರು.(ಇದರ ಮಾಲೀಕರೆಂದರೆ ಎರಡು ಸ್ಟಿರಿಯೊ ಡಿಸ್ಕ್-ಕಟ್ಟಿಂಗ್ ವಿಧಾನಗಳ ನಿರ್ಮಾಪಕರು ಮತ್ತು ಪೈಪೋಟಿದಾರರಾಗಿದ್ದರು.)ತಮ್ಮ ಮುದ್ರಣ ಟೇಪ್ ಗಳನ್ನು ಯಾವುದೇ ಮೊದಲ ರೆಕಾರ್ಡ್ಸ್ ಬರುವ ಮುಂಚೆ ಸಾರ್ವಜನಿಕ ವಲಯಕ್ಕೆ ಪರಿಚಯಿಸಿದರು.[೨೯][೩೦] ಮೊದಲ ಬದಿ 1 ರಲ್ಲಿ ಡ್ಯುಕ್ಸ್ ಆಫ್ ಡಿಕ್ಸಿಲೆಂಡ್ ಮತ್ತು ಬದಿ 2 ರಲ್ಲಿ ರೈಲ್ವೆ ಪಥದ ಶಬ್ದ ಗ್ರಹಣದ ಮುದ್ರಣವಿತ್ತು. ಇದರ ಪ್ರದರ್ಶನವನ್ನು ನ್ಯುಯಾರ್ಕ್ ನಗರದ ಸಾರ್ವಜನಿಕರಿಗೆ ಡಿಸೆಂಬರ್ 13,1957 ರಲ್ಲಿ ಟೈಮ್ಸ್ ಆಡಿಟೊರಿಯಮ್ ನಲ್ಲಿ ಆಯೋಜಿಸಲಾಗಿತ್ತು.ಮೊದಲ ಆರಂಭಿಕ [೩೧] 500 ನಕಲುಗಳನ್ನು ಆ ವೇಳೆಗೆ ಒದಗಿಸಲಾಯಿತು. ಮೂರು ದಿನಗಳ ನಂತರ ಫ್ರೆಯ್ ವ್ಯಾಪಾರಿ ವಿಷಯದ ಪತ್ರಿಕೆ ಬಿಲ್ ಬೋರ್ಡ್ ನಲ್ಲಿ ಜಾಹಿರಾತು ನೀಡಿದ.ಯಾರೇ ಕಂಪನಿಯವರು ತಮ್ಮ ಲೆಟರ್ ಹೆಡ್ ಗಳಲ್ಲಿ ಮನವಿ ಸಲ್ಲಿಸಿದರೆ ಅವರಿಗೆ ಉಚಿತ ನಕಲುಪ್ರತಿ ನೀಡುವುದಾಗಿ ಘೋಷಿಸಿದ.[೩೨][೩೩]

ಇದು ದೊಡ್ಡ ಪ್ರಮಾಣದ ಪ್ರಚಾರ ನೀಡಲು ಸಮರ್ಥವಾಯಿತು.[೩೪] ಸ್ಟಿರಿಯೊ ಫೊನೊಗ್ರಾಫ್ ಉಪಕರಣಕ್ಕೆ ಯಾವುದೇ ಆಯ್ಕೆ ಇರಲಿಲ್ಲ.ಆಡಿಯೊ ಫಿಡೆಲ್ಟಿ ರೆಕಾರ್ಡ್ಸ್ ಗಳ ಮುದ್ರಣದಲ್ಲಿ ಇದು ಇರುತ್ತದೆ. ಈ ಪ್ರದರ್ಶನದ ಡಿಸ್ಕ್ ಗಳ ಬಿಡುಗಡೆ ನಂತರ ಇನ್ನುಳಿದ ಜನಪ್ರಿಯ ಅಂಶವೆಂದರೆ ಸ್ಟಿರಿಯೊ ಡಿಸ್ಕ್ ಗಳು ಕೊಂಚ ಕಡಿಮೆ ಬೆಲೆಗೆ ದೊರೆಯುವಂತೆ ಮಾಡುವುದು.ಅದರಲ್ಲೂ ಮ್ಯಾಗ್ನೆಟಿಕ್ ಕಾರ್ಟ್ರಿಜ್ ಸ್ಟಿರೊಗಳನ್ನು ಡಿಸ್ಕ್ ಗಳ ಮೂಲಕ ಕೇಳುವ ಪರಿಕರದ ಬೆಲೆಯನ್ನು ಜೂನ್ 1958 ರಲ್ಲಿ $250 ರಿಂದ $29.95 ವರೆಗಿನ ನಿಗದಿಗೆ ನಿರ್ಧರಿಸಲಾಯಿತು.[೩೫] ಮೊದಲ ನಾಲ್ಕು ದೊಡ್ಡ-ಪ್ರಮಾಣದಲ್ಲಿ ಸ್ಟಿರಿಯೊಫೊನಿಕ್ ಡಿಸ್ಕ್ ಗಳ ಲಭ್ಯತೆಯನ್ನು ಖರೀದಿಸುವ ಸಾರ್ವಜನಿಕರಿಗೆ ಒದಗಿಸಲಾಯಿತು .ಇದನ್ನು ಮಾರ್ಚ್ 1958 ರ ವೇಳೆಗೆ ಬಹಿರಂಗಪಡಿಸಲಾಯಿತು.ಜಾನಿ ಪುಲೆಯೊ ಮತ್ತು ಆತನ ಹಾರ್ಮೊನಿಕಾ ಗ್ಯಾಂಗ್ ವ್ಯಾಲ್ಯುಮ್ 1 (AFSD 5830)ನ್ನು ನೀಡಲಾಯಿತು.ರೇಲ್ ರೋಡ್-ಸೌಂಡ್ಸ್ ಆಫ್ ಎ ವ್ಯಾನಿಶಿಂಗ್ ಎರಾ (AFSD 5843),ಲೈನಿಯಲ್-ಲೈನಿಯಲ್ ಹ್ಯಾಂಪ್ಟನ್ ಅಂಡ್ ಹೀಸ್ ಆರ್ಕೆಸ್ಟ್ರಾ (AFSD 5849) ಮತ್ತು ಮಾರ್ಚಿಂಗ್ ಅಲಾಂಗ್ ಉಯಿತ್ ದಿ ಡ್ಯುಕ್ಸ್ ಆಫ್ ಡಿಕ್ಸಿಲ್ಯಾಂಡ್ ವ್ಯಾಲ್ಯುಮ್ 3 (AFSD 5851)ಇತ್ಯಾದಿಗಳು ಪಟ್ಟಿಯಲ್ಲಿದ್ದವು. ಮಾರ್ಚ್ ಅಂತ್ಯದ ವೇಳೆಗೆ ಕಂಪನಿಯು ಇನ್ನೂ ನಾಲ್ಕು LPs ಗಳನ್ನು ದೊರೆಯುವಂತೆ ಮಾಡಿತು.[೩೬]

ಹೀಗೆ 1968 ರ ಹೊತ್ತಿಗೆ ಪ್ರಮುಖ ಧ್ವನಿಮುದ್ರಣಗಳು ಮೊನೌರಲ್ ಡಿಸ್ಕ್ಸ್ ಗಳ ತಯಾರಿಕೆಯನ್ನು ಸ್ಥಗಿತಗೊಳಿಸಿದವು.[೩೭][೩೮][೩೯]

ಆರಂಭಿಕ ಪ್ರಸಾರ ವೈಖರಿ

[ಬದಲಾಯಿಸಿ]

ರೇಡಿಯೊ :ಇದನ್ನು ಡಿಸೆಂಬರ್ 1925,ರಲ್ಲಿ BBCಯ ಪ್ರಾಯೋಗಿಕ ಪ್ರಸರಣಾ ಕೇಂದ್ರ 5XX ಮೂಲಕ ಡಾವೆಂಟ್ರಿ ನಾರ್ಥ್ ಅಂಪ್ಟೊನಿಶೈರ್ ನಲ್ಲಿ ಮಾಡಲಾಯಿತು.ಇಲ್ಲಿ ಇದು ಮ್ಯಾಂಚೆಸ್ಟರ್ ನಿಂದ ಮೊದಲ ಬಾರಿಗೆ ಸರ್ ಹ್ಯಾಮಿಲ್ಟನ್ ಹಾರ್ಟಿ ಅವರು ನಡೆಸಿದ ರೇಡಿಯೊದ ಮೊದಲ ಸಂಗೀತ ಕಾರ್ಯಕ್ರಮವಾಗಿತ್ತು.ಇದನ್ನು 5XX ನ ಸಹಾಯದಿಂದ ಸೂಕ್ತ ಚಾನಲ್ ನಲ್ಲಿ ಪ್ರಸಾರ ಮಾಡಲಾಯಿತು.ರಾಷ್ಟ್ರೀಯವಾಗಿ ದೂರತರಂಗಾಂತರ ಮತ್ತು ಸ್ಥಳೀಯ BBC ಕೇಂದ್ರಗಳು ಮಧ್ಯಮ ತರಂಗಾಂತರಗಳಲ್ಲಿ ಎಡ ಚಾನಲ್ ನಲ್ಲಿ ಪ್ರಸಾರ ಮಾಡಲಾಯಿತು. ನಂತರ BBC ಯು ಇದನ್ನು 1926 ರಲ್ಲಿ ಪ್ರಯೋಗವನ್ನು ಪುನಃ ಲಂಡನ್ ನಲ್ಲಿ 2LO ಡಾವೆಂಟ್ರಿಯಲ್ಲಿ 5XX ಗಳನ್ನು ಬಳಸಿ ಮರುಪ್ರಸಾರ ಮಾಡಿತು. ಇಂತಹ ಪ್ರಾಯೋಗಿಕ ಎಫ್ ಎಂ ಸ್ಟಿರಿಯೊ ಪ್ರಸಾರಗಳನ್ನು ಲಂಡನ್ ಪ್ರದೇಶದಲ್ಲಿ 1958 ರಲ್ಲಿ ಪ್ರಸಾರ ಮಾಡಲಾಯಿತು.ಅದಲ್ಲದೇ ನಿಯಮಿತ ಶನಿವಾರ ಬೆಳಗ್ಗೆಯ ಪ್ರದರ್ಶನಾ ಪ್ರಾತ್ಯಕ್ಷಿಕೆ ರೂಪದ ಪ್ರಸಾರಗಳನ್ನು ಟೀವಿ ಧ್ವನಿ ಮತ್ತು ಮಧ್ಯಮ ತರಂಗಾಂತರ ಅಲೆ (AM) ರೇಡಿಯೊಗೆ ಬಳಸಿ ಎರಡು ಚಾನಲ್ ಗಳನ್ನು ಮರುಪ್ರಸಾರಗೊಳಿಸಲಾಯಿತು.ಮೊದಲ ಬಾರಿಗೆ BBC ಯಲ್ಲಿ ಥರ್ಡ್ ಪ್ರೊಗ್ರಾಮ್ ಜಾಲವನ್ನು ಎಫ್ ಎಂ ಸ್ಟಿರಿಯೊ ಸಿಗ್ನಲ್ ಗಳ ಬಳಸಿ ಆಗಸ್ಟ್ 28,1962 ರಲ್ಲಿ ಮಾಡಲಾಯಿತು.

ಶಿಕ್ಯಾಗೊ AM ರೇಡಿಯೊ ಕೇಂದ್ರ WGN (ಮತ್ತು ಅದರ ಸಹಸಂಸ್ಥೆ FM ಕೇಂದ್ರ, WGNB) ಗಳು ಒಂದು ಗಂಟೆ ಅವಧಿಯ ಸ್ಟಿರಿಯೊಫೊನಿಕ್ ಪ್ರದರ್ಶನಾ ಪ್ರಸಾರಕ್ಕೆ ಮೇ 22,1952 ರಲ್ಲಿ ಮುಂದಾಗಿದ್ದವು.ಇದರಲ್ಲಿ ಒಂದು AM ಕೇಂದ್ರದಿಂದ ಆಡಿಯೊ ಚಾನಲ್ ಪ್ರಸಾರ ಇನ್ನೊಂದು ಆಡಿಯೊ ಚಾನಲ್ ನ್ನು ಎಫ್ ಎಂ ಕೇಂದ್ರದಿಂದ ಪ್ರಸಾರಕ್ಕೆ ಬಳಸಿಕೊಳ್ಳಲಾಗಿತ್ತು.[೪೦] ನ್ಯುಯಾರ್ಕ್ ಸಿಟಿಯ WQXR ಅದರ ಮೊದಲ ಸ್ಟಿರಿಯೊಫೊನಿಕ್ ಪ್ರಸಾರವನ್ನು ಅಕ್ಟೋಬರ್ 1952 ಮತ್ತು 1954 ರಲ್ಲಿ ಆರಂಭಿಕವಾಗಿ ಕೈಗೆತ್ತಿಕೊಂಡಿತು.ಹೀಗೆ ಅದು ತನ್ನೆಲ್ಲಾ ಸಂಗೀತ ಕಾರ್ಯಕ್ರಮಗಳನ್ನು ಸ್ಟಿರಿಯೊಫೊನಿಕ್ ಧ್ವನಿ ಮೇಲೆ ಪ್ರಸಾರ ಮಾಡಿತ್ತು.ಇದಕ್ಕಾಗಿ ಅದು ಎರಡು ಆಡಿಯೊ ಚಾನಲ್ ಗಳನ್ನು ಅದರ AM ಮತ್ತು FM ಕೇಂದ್ರಗಳ ನೆರವನ್ನೂ ಪಡೆದಿತ್ತು.[೪೧] ರೆನ್ಸೆಲ್ಲೆಯರ್ ಪಾಲಿಟೆಕ್ನಿಕ್ ಇನ್ ಸ್ಟಿಟ್ಯುಟ್ ತನ್ನ ಸಾಪ್ತಾಹಿಕ ನೇರ ಸ್ಟಿರಿಯೊ ಪ್ರಸಾರಗಳನ್ನು ನವೆಂಬರ್ 1952 ರಲ್ಲಿ ಆರಂಭಿಸಿತು.ಕ್ಯಾಂಪಸ್ ಮೂಲದ ಎರಡು AM ಕೇಂದ್ರಗಳನ್ನು ಬಳಸಿಕೊಂಡಿತ್ತು, ಆದರೆ ಅದರ ಪ್ರಸಾರ ವ್ಯಾಪ್ತಿ ಕ್ಯಾಂಪಸ್ ದಾಟಿರಲಿಲ್ಲ.[೪೨]

ಆಗ ಆರು ಸ್ಪರ್ಧಾತ್ಮಕ FM ಗಳ ವಿಧಾನಗಳನ್ನು ಪಿಟ್ಸ್ ಬರ್ಗ್, ಪೆನ್ಸೆಲ್ವೇನಿಯಾ ದಲ್ಲಿ KDKA-FM ನ ಮೇಲೆ ಜುಲೈ ಮತ್ತು ಆಗಸ್ಟ 1960 ರಲ್ಲಿ ಪರೀಕ್ಷೆ ಮಾಡಲಾಯಿತು.[೪೩] ದಿ ಫೆಡೆರಲ್ ಕಮ್ಯುನಿಕೇಶನ್ಸ್ ಕಮಿಶನ್ ಸ್ಟಿರಿಯೊಫೊನಿಕ್ ಟೆಕ್ನಿಕಲ್ ಗುಣಮಟ್ಟದ ಶ್ರೇಣಿಗಳನ್ನು ಏಪ್ರಿಲ್ 1961 ರಲ್ಲಿ ಘೋಷಿಸಿತು.ಲೈಸನ್ಸ್ ಪಡೆದ ಸ್ಟಿರಿಯೊಫೊನಿಕ್ FM ರೇಡಿಯೊ ಪ್ರಸಾರವು ಆಗ ಜೂನ್ 1,1961 ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರಾರಂಭಗೊಂಡಿತು.[೪೪] WEFM (ಚಿಕ್ಯಾಗೊ ಪ್ರದೇಶದಲ್ಲಿ) ಮತ್ತು WGFM (ಶೆನೆಕ್ಟೆಡಿ, ನ್ಯುಯಾರ್ಕ್) ನಲ್ಲಿನವುಗಳನ್ನು ಮೊದಲ ಸ್ಟಿರಿಯೊ ಕೇಂದ್ರಗಳೆಂದು ವರದಿ ಮಾಡಲಾಯಿತು.[೪೫]

HH ಸ್ಕಾಟ್ ಮಾಡೆಲ್ 350, ca. 1961: ಮೊದಲ FM ಮಲ್ಟಿಪ್ಲೆಕ್ಸ್ ಸ್ಟಿರಿಯೊ ಟರ್ನರ್ US ನಲ್ಲಿ

ಟೆಲೆವಿಜನ್: ಡಿಸೆಂಬರ್ 11, 1952 ರಲ್ಲಿ ಸಂಪೂರ್ಣ ಆವೃತ್ತ ದೂರದರ್ಶಕ ಪ್ರಸಾರವು ಕಾರ್ಮೆನ್ ದ್ದಾಗಿತ್ತು, ಇದನ್ನು ನ್ಯುಯಾರ್ಕ್ ಸಿಟಿಯಲ್ಲಿನ ಮೆಟ್ರೊಪಾಲಿಟಿನ್ ಒಪೆರಾ ಹೌಸ್ ದಿಂದ ಯುನೈಟೆಡ್ ಸ್ಟೇಟ್ಸ್ ಆದ್ಯಂತ 31 ಕೇಂದ್ರಗಳಲ್ಲಿ ಸ್ಟಿರಿಯೊಫೊನಿಕ್ ಕೇಂದ್ರಗಳಲ್ಲಿ ಪ್ರಸಾರ ಮಾಡಲಾಯಿತು.ಈ ವಿಧಾನವನ್ನು RCAಅಭಿವೃದ್ಧಿಪಡಿಸಿತ್ತು.[೪೬] ದಿ ಪ್ಲಿಮೌತ್ ಶೊ ದ ಸಂದರ್ಭದಲ್ಲಿ ಮೊದಲ ಹಲವು ಪ್ರದರ್ಶನಗಳು 1958-59 ರಲ್ಲಿ ಅದೇ ರೀತಿ (AKA ದಿ ಲಾರೆನ್ಸ್ ವೆಲ್ಕ್ ಶೊ ಇದು ABC (ಅಮೆರಿಕಾ)ಮೇಲೆ ಪ್ರಸಾರ ದೊಂದಿಗೆ ಪ್ರಸಾರ ಕಂಡಿತ್ತು.ಇವು ಸ್ಟಿರಿಯೊಫೊನಿಕ್ ಧ್ವನಿ ಮೇಲೆ 75 ಮಿಡಿಯಾ ಮಾರ್ಕೆಟ್ಟ್ ಗಳ ಮೂಲಕ ಒಂದು ಟೆಲೆವಿಜನ್ ಆಡಿಯೊ ಪ್ರಸಾರ ಕೈಗೊಂಡವು.ಇನ್ನೊಂದನ್ನು ABC ರೇಡಿಯೊ ನೆಟ್ವರ್ಕ್ ಜಾಲದ ಮೂಲಕ ಪ್ರಸಾರ ಮಾಡಲಾಗಿತ್ತು.[೪೭][೪೮] ಅದೇ ಪದ್ದತಿಯಂತೆ NBC ಟೆಲಿವಿಜನ್ ಮತ್ತು NBC ರೇಡಿಯೊ ಜಾಲಗಳು ದಿ ಜಾರ್ಜ್ ಗೊಬೆಲ್ ಶೊ ವನ್ನು ಅಕ್ಟೋಬರ್ 21 1958 ರಲ್ಲಿ ಎರಡು ಮೂರು ವಿಂಗಡಿತ ಅವಧಿಯಲ್ಲಿ ಸ್ಟಿರಿಯೊ ಧ್ವನಿ ಮೂಲಕ ನೀಡಿದವು.[೪೯] ಅದಲ್ಲದೇ ABC ಯ ವಾಲ್ಟ್ ಡಿಸ್ನೆಯ್ ಪ್ರಜೆಂಟ್ಸ್ ದಿ ಪೀಟರ್ ಚಿಕೊವಸ್ಕಿ ಸ್ಟೊರಿ ಯನ್ನು ಜನವರಿ 1959 ರಲ್ಲಿ ಸ್ಟಿರಿಯೊ ಪ್ರಸಾರ ಮಾಡಿತು.ಅದರೊಂದಿಗೆ ಇದರಲ್ಲಿ ಡಿಸ್ನೆಯ್ ನ ಇತ್ತೀಚಿನ ಆನಿಮೇಟೆಡ್ ಸನ್ನಿವೇಶಗಳನ್ನೂ ಅಳವಡಿಸಲಾಗಿತ್ತು.ಸ್ಲೀಪಿಂಗ್ ಬ್ಯುಟಿ -ಇಲ್ಲಿ ABC ಯ ಅಂಗಗಳಾದ AM ಮತ್ತು FM ಕೇಂದ್ರಗಳಲ್ಲಿ ಅದರ ಎಡಬಲ ಆಡಿಯೊ ಚಾನಲ್ ಗಳಿಗೆ ಅವಕಾಶ ಒದಗಿಸಲಾಗಿತ್ತು.

ನಂತರ 1961 ರಲ್ಲಿ FM ಸ್ಟಿರಿಯೊ ಅಭಿವೃದ್ಧಿಯಾದ ನಂತರ ಕೆಲವು ಸಂಗೀತ-ಆಧಾರಿತ ಟೀವಿ ಶೊಗಳ ಪ್ರಸಾರ ನಡೆಯಿತು.ಇದರಲ್ಲಿ ಸೈಮಲ್ ಕಾಸ್ಟ್ ಯಿಂಗ್ (ರೇಡಿಯೊ-ಟೀವಿಗಳಲ್ಲಿ ಏಕಕಾಲಕ್ಕೆ ಪ್ರಸಾರ)ಇಲ್ಲಿ ಶೊ ನಡೆದ ಆಡಿಯೊ ಭಾಗವನ್ನು ಸ್ಥಳೀಯ FM ಸ್ಟಿರಿಯೊ ಕೇಂದ್ರ ಪ್ರಸಾರ ಮಾಡುತ್ತದೆ.[೫೦] ಇಂತಹ ಶೊಗಳನ್ನು 1960 ಮತ್ತು 1970 ರಲ್ಲಿ ಒಟ್ಟುಸೇರಿಸಿ ರೀಲ್-ಟು-ರೀಲ್ ಟೇಪ್ ನ್ನು ಅಂಚೆ ಮೂಲಕ FM ಕೇಂದ್ರಕ್ಕೆ ಒದಗಿಸಲಾಗುತ್ತದೆ.(ಈ ಸಂಗೀತ ಅಥವಾ ಸಂಗೀತಗೋಷ್ಟಿ ಸ್ಥಳೀಯವಾಗಿರದಿದ್ದರೆ ಈ ವ್ಯವಸ್ಥೆ) ಅದಾದ ಬಳಿಕ 1980 ರಲ್ಲಿ ಉಪಗ್ರಹ ವಿತರಣಾ ಸೌಲಭ್ಯದ ಮೂಲಕ ಟೆಲೇಜನ್ ಮತ್ತು ರೇಡಿಯೊ ಕಾರ್ಯಕ್ರಮಗಳನ್ನು ಒಂದುಗೂಡಿಸುವ ಶ್ರಮದಾಯಕ ಕಾರ್ಯಕ್ಕೆ ವಿದಾಯ ಹೇಳಲಾಯಿತು. ಈ ತರಹದ ಕೊನೆಯ ಕಾರ್ಯಕ್ರಮ ಸೈಮಲ್ ಕಾಸ್ಟ್ NBC ಮೇಲೆ ಪ್ರಸಾರ ಕಂಡಿದ್ದೆಂದರೆ ಫ್ರೈಡೇ ನೈಟ್ ವಿಡಿಯೊಸ್ ; ಇದನ್ನು FCC ಯಿಂದ MTS ಸ್ಟಿರಿಯೊಸಮ್ಮತಿಗೆ ಕೆಲವು ಅವಧಿ ಮುಂಚೆಯೇ ಇದರ ಪ್ರಸಾರ ಮಾಡಲಾಗಿತ್ತು.

ಕೇಬಲ್ ಟೀವಿ ಪ್ರಸಾರ ವಿಧಾನಗಳಲ್ಲಿಯೂ ಹಲವಾರು ಸ್ಟಿರಿಯೊ ಕಾರ್ಯಕ್ರಮಗಳ ಬಳಕೆಯ ಉಪಯೋಗ ಪಡೆಯಲಾಯಿತು.MTS ಸ್ಟಿರಿಯೊ ಮಾಡ್ಯುಲೇಟರ್ಸ್ (ಧ್ವನಿ ಏರಿಳಿಕೆ ವ್ಯವಸ್ಥೆಗಳು) ಬೆಲೆಗಳು ಇಳಿಯುವ ವರೆಗೂ ಇದು ಒಂದು ಅಯೋಜಿತ ಕಾರ್ಯಕ್ರಮ ಎನಿಸಿತ್ತು. ಮೊದಲ ಸ್ಟಿರಿಯೊ ಕೇಬಲ್ ಕೇಂದ್ರಗಳಲ್ಲಿ ದಿ ಮೂವಿ ಚಾನಲ್ ಒಂದಾಗಿತ್ತು.ಇದರಲ್ಲಿ ಅತಿ ಜನಪ್ರಿಯ ಕೇಬಲ್ ಟೀವಿ ಸ್ಟೇಶನ್ ಇದು ಅಧಿಕ ಸ್ಟಿರಿಯೊ ಮಾಡ್ಯುಲೇಶನ್ ಕೇಂದ್ರವೆಂದರೆ MTVಅದು ಸೈಮಲ್ ಕಾಸ್ಟಿಂಗ್ ವಿಧಾನ ಬಳಸಿತ್ತು.

ಜಪಾನಿಯರು ಸಹ ಮಲ್ಟಿಪ್ಲೆಕ್ಸ್ (ಸ್ಟಿರಿಯೊ)ಧ್ವನಿ ಪ್ರಸಾರವನ್ನು 1978 [೫೧] ರಲ್ಲಿ ಮಾಡಿತು.ನಂತರ 1982 ರಲ್ಲಿ ಸ್ಟಿರಿಯೊ ಧ್ವನಿಮೂಲಕ ಪ್ರಸಾರ ನಿಯಮಿತವಾಯಿತು.[೫೨] ಬಳಿಕ 1984 ರಲ್ಲಿ ಕಾರ್ಯಕ್ರಮಗಳ 12% ರಷ್ಟು ಅಥವಾ ಪ್ರತಿವಾರದ 14 ಅಥವಾ 15 ಗಂಟೆಗಳ ಪ್ರತಿ ಕೇಂದ್ರದ ಕಾರ್ಯಕ್ರಮಗಳನ್ನು ಮಲ್ಟಿಪ್ಲೆಕ್ಸ್ ತಂತ್ರಜ್ಞಾನ ಬಳಸಿ ಪ್ರಸಾರ ಮಾಡಲಾಯಿತು. ಪಶ್ಚಿಮ ಜರ್ಮನಿ ಯ ದ್ವೀತೀಯ ಟೆಲೆವಿಜನ್ ಜಾಲ, ZDF,1984 ರಲ್ಲಿ ಸ್ಟಿರಿಯೊ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿತು.[೫೧]

MTS: ಟೆಲೆವಿಜನ್ ಗಾಗಿ ಸ್ಟಿರಿಯೊ

ದಿ ನ್ಯುಯಾರ್ಕ್ ಟೈಮ್ಸ್ 1979 ರಲ್ಲಿ ವರದಿ ಮಾಡಿದಂತೆ [ಟೆಲಿವಿಜನ್]ಉದ್ಯಮವು ಸಾಮಾನ್ಯವಾಗಿ ಉನ್ನತ ದರ್ಜೆಯ ಧ್ವನಿ ವಿಧಾನಗಳ ಆಧುನಿಕರಣದಿಂದಾಗಿಯೇ ತನ್ನ ಅಸ್ತಿತ್ವ ಪಡೆಯಿತು.ಈಗಿನ ಧ್ವನಿ [ಉನ್ನತೀಕರಣ]ದ ಅಭಿವೃದ್ಧಿ ಅಲ್ಲಿನ ತಾಂತ್ರಿಕ ವರ್ಗದವರು ತೀವ್ರವಾಗಿ ಬೆಳೆಯುತ್ತಿರುವ ಟೆಲೆವಿಜನ್ ಉದ್ಯಮ ಪ್ರಗತಿ ಕಂಡಿತು.ಹೀಗೆ ದೂರದರ್ಶನವು ಈ ಸಂದರ್ಭದಲ್ಲಿ ಸವಾಲನ್ನೆದುರಿಸಬೇಕಾಯಿತು.ಉದಾಹರಣೆಗೆ ವಿಡಿಯೊ ಡಿಸ್ಕ್ ಎನ್ನಬಹುದು.[೫೩]

ಮಲ್ಟಿಚಾನಲ್ ಟೆಲೆವಿಜನ್ ಸೌಂಡ್ ,ಇದು MTS ಎಂದು ಪರಿಚಿತವಾಗಿದೆ. (ಆಗಾಗ ಇನ್ನೂ ಅದನ್ನುBTSC ,ಎಂದು ಗುರುತಿಸಲಾಗುತ್ತಿದೆ.ಬ್ರಾಡ್ ಕಾಸ್ಟ್ ಟೆಲೆವಿಜನ್ ಸಿಸ್ಟೆಮ್ ಕಮೀಟೀ ಇದಕ್ಕೆ ಕತೃವಾಗಿದೆ.),ಇದನ್ನು ಸಂಖ್ಯಾನಿಗದಿಕರಣ ಎಂದು ಹೆಚ್ಚುವರಿ ಚಾನಲ್ ಗಳು ಆಡಿಯೊ ದಲ್ಲಿ ಒಂದು NTSC-ಆಕಾರದಲ್ಲಿ ದೊರೆಯುತ್ತವೆ.ಇಲ್ಲಿಯೂ ಆಡಿಯೊ ಕ್ಯಾರಿಯರ್ ಗಳ ವಿಭಾಗಗಳಿವೆ. ಇದು FCCಯಿಂದ ಅಳವಡಿಸಲ್ಪಟ್ಟಿದ್ದು ಯುನೈಟೆಡ್ ಸ್ಟೇಟ್ಸ್ ನಲ್ಲಿನ ಟೆಲೆವಿಜನ್ ಪ್ರಸಾರದ ಗುಣಮಟ್ಟದ ದರ್ಜೆಯನ್ನು 1984 ರಲ್ಲಿ ವ್ಯಾಖ್ಯಾನಿಸಿ ವಿವರಿಸಲು ತಿಳಿಸಿದೆ. ವಿರಳವಾಗಿ ಪ್ರಸಾರದ ಜಾಲದ ಟೆಲೆವಿಜನ್ ಪ್ರಸಾರದ ಆಡಿಯೊ ಸ್ಟಿರಿಯೊವನ್ನು NBC ಯಲ್ಲಿ ಜುಲೈ 26,1984 ರಲ್ಲಿ ಆರಂಭಿಸಿತು.ಇದನ್ನು ಟುನೈಟ್ ಶೊ ದಿಂದ ಆರಂಭ ಮಾಡಲಾಯಿತು.ಆದ್ದರಿಂದ ಈ ವೇಳೆಯಲ್ಲಿ ನ್ಯುಯಾರ್ಕ್ ಸಿಟಿಯ ಅಂಗಸಂಸ್ಥೆಯಾಗಿ WNBCಈ ಕೇಂದ್ರಕ್ಕೆ ಸ್ಟಿರಿಯೊ ಪ್ರಸಾರದ ಸಾಮರ್ಥ್ಯಕ್ಕೆ ಹೆಸರಾಯಿತು ಎನ್ನಬಹುದು.[೫೪] ಬಳಿಕ 1985 ರಲ್ಲಿ ನಿಯಮಿತ ಸ್ಟಿರಿಯೊ ಕಾರ್ಯಕ್ರಮಗಳ ಪ್ರಸಾರವಾಯಿತು.

ಸಾಮಾನ್ಯ ವ್ಯಾಖ್ಯಾನ

[ಬದಲಾಯಿಸಿ]
ಲೇಬಲ್ ಫಾರ್ 2.0 ಸೌಂಡ್(ಸ್ಟಿರಿಯೊ).

ಸಾಮಾನ್ಯ ಅರ್ಥದಲ್ಲಿ ಒಂದು "ಸ್ಟಿರಿಯೊ" ಎಂದರೆ ಎರಡು ಚಾನಲ್ ಗಳ ಮರುಉತ್ಪನ್ನದ(ನಿರ್ಮಾಣ) ವಿಧಾನವಾಗಿದೆ.ಅದೇ ರೀತಿ "ಸ್ಟಿರಿಯೊ ರೆಕಾರ್ಡಿಂಗ್"ಒಂದು ಎರಡು ಚಾನಲ್ ಗಳ ಧ್ವನಿಮುದ್ರಣಗಳ ವಿಧಾನವಾಗಿದೆ. ಇದು ಹಲವು ಗೊಂದಲಗಳಿಗೆ ದಾರಿ ಮಾಡಿಕೊಡುತ್ತದೆ.ಆದರೆ ಐದು (ಅಥವಾ ಹೆಚ್ಚು)-ಚಾನಲ್ ಗಳ ಹೋಮ್ ಥೆಯೆಟರ್ ಗಳನ್ನು ಜನಪ್ರಿಯವಾಗಿ "ಸ್ಟಿರಿಯೊ" ಎಂದು ಕರೆಯಲಾಗುವುದಿಲ್ಲ. ಇಲ್ಲಿ ಪ್ರಮುಖವಾಗಿ ಟಿಪ್ಪಣಿ ಮಾಡುವುದೆಂದರೆ ಬಹುತೇಕ ಚಲನಚಿತ್ರ ಧ್ವನಿಪಥಗಳನ್ನು ಸ್ಟಿರಿಯೊ ತಂತ್ರಜ್ಞಾನದ ಮೇಲೆ ಮಾಡಲಾಗುವುದಿಲ್ಲ.ಅವು ಸ್ಟಿರಿಯೊ ಮರುನಿರ್ಮಾಣದ ಸಾಮರ್ಥ್ಯ ಹೊಂದಿದ್ದರೂ ಹಲವಾರು ಹೋಮ್ ಥೆಯೆಟರ್ ಗಳಲ್ಲಿ ಇದು ಸಾಮಾನ್ಯವಾಗಿಲ್ಲ.

ಬಹಳಷ್ಟು ಎರಡು-ಚಾನಲ್ ಧ್ವನಿಮುದ್ರಣದ ರೆಕಾರ್ಡಿಂಗ್ಸ್ ಗಳು ಅಪರೂಪದ ಪ್ರಸಂಗದಲ್ಲಿ ಮಾತ್ರ ಈ ಮುದ್ರಣಕ್ಕೆ ಅವಕಾಶವಿದೆ. ಇನ್ನುಳಿದಂತೆ ಪಾಪ್ ಸಂಗೀತದಲ್ಲಿ ಧ್ವನಿಮುದ್ರಣವು ನಿಕಟಧ್ವನಿವರ್ಧಕಗಳ ತಂತ್ರಜ್ಞಾನ ಬಳಸಿ ಮಾಡಲಾಗುತ್ತದೆ.ಇದು ಕೃತಕ ಸಂಜ್ಞೆ-ಸಂಕೇತಗಳನ್ನು ಪ್ರತ್ಯೇಕಿಸಿ ಹಲವು ಧ್ವನಿಜಾಡಿನಲ್ಲಿ ಹಾಯುವಂತೆ ಮಾಡುತ್ತದೆ. ವೈಯಕ್ತಿಕ ಧ್ವನಿಜಾಡುಗಳು (ಅದರಲ್ಲಿ ನೂರಾರಿರಬಹುದು)ನಂತರ ಅವುಗಳನ್ನು "ಮಿಶ್ರಣಗೊಳಿಸಿ" ಎರಡು ಚಾನಲ್ ಗಳಲ್ಲಿ ಭಟ್ಟಿ ಇಳಿಸಲಾಗುತ್ತದೆ. "ಎಡ-ಬಲ" ಸಂಕೇತ ಪಟ್ಟಿಗಳ ಪ್ಯಾನಿಂಗ್ ನಿಯಂತ್ರಕಗಳನ್ನು ಉಪಯೋಗಿಸಲಾಗುತ್ತದೆ.ಆಡಿಯೊ ಎಂಜನೀಯರ್ ಗಳು ಯಾವ ಧ್ವನಿಪಥದ ಜಾಡನ್ನು ಸ್ಟಿರಿಯೊ "ಪ್ರತಿಬಿಂಬ"ವನ್ನಾಗಿ ಎಲ್ಲಿಡಬೇಕೆಂಬುದನ್ನು ನಿರ್ಧರಿಸುತ್ತಾರೆ. ಈ ಅಂತಿಮ ನಿರ್ಮಾಣವು ಈ ಕಾರ್ಯವಿಧಾನವನ್ನು ಸಣ್ಣ ಪ್ರಮಾಣದಲ್ಲಿ ಇಲ್ಲವೆ ಯಾವುದೇ ಹೋಲಿಕೆಯಿಲ್ಲದೇ ತನ್ನ ಭೌತಿಕ ಮತ್ತು ಅದರ ತರಂಗದ ಸಂಭಂಧವನ್ನು ಅಲ್ಲಿ ಕಾಣಬಹುದಾಗಿದೆ.ನೈಜವಾದ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಂಗೀತಗಾರರ ಧ್ವನಿಪಥ ಮತ್ತು ಅದರ ಧ್ವನಿಮುದ್ರಣದ ಸಾಮ್ಯತೆಗಳನ್ನು ಅಂದಾಜಿಸಬಹುದಾಗಿದೆ.ಒಂದೇ ಹಾಡನ್ನು ವಿವಿಧ ಧ್ವನಿಪಥಗಳಲ್ಲಿ ಮುದ್ರಣ ಮಾಡಿ ವಾಣಿಜ್ಯಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತದ ಧ್ವನಿಮುದ್ರಣಗಳು ಅಪವಾದಗಳೆನಿಸುತ್ತವೆ. ಅವುಗಳನ್ನು ಬಹುತೇಕ "ನೇರ" ಧ್ವನಿಮುದ್ರಣದಲ್ಲಿ ಮಾಡಲಾಗುತ್ತದೆ.ನಿಜವಾದ ಸಂಗೀತಗಾರರ ಭೌತಿಕ ಮತ್ತು ವನ್ನು ತೋರಿಸುತ್ತದೆ.ಮೂಲ ಪ್ರದರ್ಶನದ ವೇಳೆಯಲ್ಲಿ ಅದರ ಮುದ್ರಣದ ದಾಖಲೆಗಳನ್ನು ನೋಡಿಕೊಳ್ಳಲಾಗುತ್ತದೆ.

ಸಮಸ್ಥಿತಿ.

[ಬದಲಾಯಿಸಿ]

ಸಮತೋಲನ ಅಂದರೆ ಸ್ಟಿರಿಯೊದಲ್ಲಿ ಮರುಉತ್ಪಾದಿಸಲ್ಪಟ್ಟ ಸ್ಟಿರಿಯೊ ಆಡಿಯೊ ರೆಕಾರ್ಡಿಂಗ್ ನಲ್ಲಿನ ಸಂಜ್ಞೆಗಳೆನಿಸಿವೆ. ಸಾಮಾನ್ಯವಾಗಿ ಮಾದರಿ ಎನ್ನುವಂತೆ ಸಮತೋಲನ ನಿಯಂತ್ರಣವು ಅದರ ಕೇಂದ್ರಭಾಗದಲ್ಲಿರುತ್ತದೆ.ಅದು 0 dBಆಗಿ ಎರಡೂ ವಾಹಕಗಳಲ್ಲಿ ಪಸರಿಸುತ್ತದೆ.ಒಂದು ವಾಹಕವು ಸೂಕ್ತ ರೀತಿಯಲ್ಲಿರುವಂತೆ ನೋಡಿಕೊಳ್ಳುವ ನಿಯಂತ್ರಣವು ಇನ್ನೊಂದನ್ನು 0 dB ಗೆ ಇರುವಂತೆ ಮಾಡುತ್ತದೆ.[೫೫]

ನೋಡಿಪ್ಯಾನ್ನಿಂಗ್ ನ್ನೂ.

ಇವನ್ನೂ ಗಮನಿಸಿ

[ಬದಲಾಯಿಸಿ]
  • 3D ಆಡಿಯೊ ಇಫೆಕ್ಟ್
  • ಎಂಬಿಯೊಫೊನಿಕ್ಸ್ – ಬೈನ್ಯುವರಲ್ ಉಯಿತ್ ಸ್ಪೀಕರ್ಸ್, ನಾಟ್ ಹೆಡ್ ಫೊನ್ಸ್
  • ಆಂಬಿಸೊನಿಕ್ಸ್–ಜನರ್ ಲೈಜಡ್ MS-ಸ್ಟಿರಿಯೊ ಟು ಥ್ರೀ ಡೈಮೆನ್ ಸನ್ಸ್
  • ಬೈನ್ಯುರಲ್ ರೆಕಾರ್ಡಿಂಗ್
  • ಬ್ಲುಮಿಲಿಯನ್ ಪೇರ್
  • ಕ್ರಾಸ್ ಫೀಡ್
  • ಹೈ-ಫೈ
  • ಜಂಟಿ ಸ್ಟಿರಿಯೊ
  • ಕ್ವಾಡ್ರಾಫೊನಿಕ್
  • ಸ್ಟಿರಿಯೊ ಫೊಟೊಗ್ರಾಫಿ
  • ಸ್ಟಿರಿಯೊಗ್ರಾಫಿಕ್ ಪ್ರೊಜೆಕ್ಸನ್
  • ಸಬ್ ವೂಫರ್ (ಸ್ಟಿರಿಯೊ ಸೆಪರೇಶನ್)
  • ಸರೌಂಡ್ ಸೌಂಡ್

ಉಲ್ಲೇಖಗಳು

[ಬದಲಾಯಿಸಿ]
  1. "Alan Blumlein—The Man who Invented Stereo". AbbeyRoad. Retrieved 2009-05-18. In his short life, Blumlein devised over 120 patents and is considered one of the most significant engineers of his time.
  2. ಉದಾಹರಣೆಗಾಗಿ, ಐವರಲ್ಲಿ ಮೂವರು ಆಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಪಿಕ್ಚರ್ 1955 ರಲ್ಲಿ ಬಹುವಾಹಿನಿಯ ಧ್ವನಿ ; ಅದೇ ರೀತಿ, ಐವರಲ್ಲಿ ಮೂವರು 1956 ರ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದರು.
  3. στερεός, ಹೆನ್ರಿ ಜಾರ್ಜ್ ಲಿಡ್ಡೆಲ್, ರಾಬರ್ಟ್ ಸ್ಕಾಟ್, ಏ ಗ್ರೀಕ್-ಇಂಗ್ಲಿಷ್ ಲೆಕ್ಸಿಕಾನ್, ಪೆರ್ಸಯುಸ್ ಡಿಜಿಟಲ್ ಲೈಬ್ರರಿಯಲ್ಲಿ
  4. [4] ^ μαίνομαι, ಹೆನ್ರಿ ಜಾರ್ಜ್ ಲಿಡ್ಡೆಲ್, ರಿಪೋರ್ಟ್ ಸ್ಕಾಟ್, ಎ ಗ್ರಿಕ್- ಇಂಗ್ಲೀಶ್ ಲೆಕ್ಸಿಕನ್, ಆನ್ ಪ್ರೆಶರ್ ಡಿಜಿಟಲ್ ಲೈಬ್ರರಿ
  5. ಫೊರಮ್ ಫರ್ ಮೈಕ್ರೊಫೊನೊಫ್ಮಮ್ ಅಂಡ್ ಟೊನ್ ಸ್ಟುಡಿಯೊ ಟೆಕ್ನಿಕ್.ಎಬರ್‌ಹಾರ್ಡ್‌ ಸೆಂಗ್‌ಪೀಲ್‌
  6. ಸ್ಯುಡೊ -ಸ್ಟಿರಿಯೊ
  7. "ಹೈಪರ್ ಪ್ರಿಜಮ್ ಮ್ಯಾನುಪುಲೇಶನ್ ಪ್ರೊಸೆಸ್—ಕ್ವಾಸಿ ಸ್ಟಿರಿಯೊ". Archived from the original on 2008-03-31. Retrieved 2010-12-29.
  8. "ಎ ರಿವಿವ್ ಅಂಡ್ ಆನ್ ಎಕ್ಸ್ಟ್ಯೆನ್ಸನಾಫ್ ಸ್ಯುಡೊ ಸ್ಟಿರಿಯೊ..." Archived from the original on 2007-12-06. Retrieved 2010-12-29.
  9. ಸ್ಯುಡೊ-ಸ್ಟಿರಿಯೊ ಸರ್ಕ್ಯುಟ್—ಪೇಟೆಂಟ್ 6636608
  10. "ಸೈಕೊ ಅಸ್ಕೊಸ್ಟಿಕ್ ಸುಡೊ-ಸ್ಟಿರಿಯೊ ಫೊಲ್ಡ್ ಸಿಸ್ಟೆಮ್". Archived from the original on 2008-12-04. Retrieved 2010-12-29.
  11. "ಸ್ಯುಡೊ ಸ್ಟಿರಿಯೊ , ಟೈಮ್ ಮ್ಯಾಗ್ಜಿನ್, ಜ. 20, 1961". Archived from the original on 2011-11-28. Retrieved 2010-12-29.
  12. "Stereo disc recording". Retrieved 4 October 2006.
  13. ಅರ್ಲಿ ರೇಡಿಯೊ ಹಿಸ್ಟ್ರಿ. ಸೈಂಟಿಫಿಕ್ ಅಮೆರಿಕನ್, ಡಿಸೆಂಬರ್ 31, 1881, ಪು.422–23. ದಿ ಟೆಲಿಫೊನ್ ಆಟ್ ದಿ ಪ್ಯಾರಿಸ್ ಒಪೆರಾ ಹಿಂಪಡೆದಿದ್ದು ಮಾರ್ಚ್ 27, 2009.
  14. "ಕೋರ್ಟ್ ಸರ್ಕ್ಯುಲರ್", ದಿ ಟೈಮ್ಸ್ (ಲಂಡನ್), ನ. 6, 1895, p. 7. "ಪೊಸ್ಟ್ ಆಫೀಸ್ ಎಲೆಕ್ಟ್ರಿಕಲ್ ಎಂಜನೀಯರ್ಸ್. ದಿ ಎಲೆಕ್ಟ್ರೊಫೊನ್ಸ್ ಸರ್ವಿಸ್ ",ದಿ ಟೈಮ್ಸ್ (ಲಂಡನ್), ಜ.15, 1913, p. 24. "ವೈಯರ್ಡ್ ವೈಯರ್ ಲೆಸ್", ದಿ ಟೈಮ್ಸ್ (ಲಂಡನ್), ಜೂನ್ 22, 1925, p. 8.
  15. ಡ್ಯುಕೆ ಎಲ್ಲಿಂಗ್ಟನ್ ಮತ್ತು ಆತನ ವಾದ್ಯವೃಂದ ಕೆಲವು ಆಕಸ್ಮಿಕ ಸ್ಟಿರಿಯೊ ರೆಕಾರಡಿಂಗ್ ಗಳನ್ನು ಮಾಡಿತು.(ಇದರಲ್ಲಿ ಬಹುತೇಕ "ಈಸ್ಟ್ ಸೇಂಟ್ . ಲೂಯಿಸ್ ಟೂಡಲ್-o", "ಲೊಟ್ ಒ' ಫಿಂಗರ್ಸ್", "ಬ್ಲ್ಯಾಕ್ ಅಂಡ್ ಟ್ಯಾನ್ ಫ್ಯಾಂಟ್ಸ್") ಫೆಬ್ರವರಿ 3, 1932,ರಲ್ಲಿ RCA ವಿಕ್ಟರ್ ಗಾಗಿ. ಆ ಸಂದರ್ಭದಲ್ಲಿ ಧ್ವನಿ ಮುದ್ರಣವನ್ನು ಒಂದಕ್ಕಿಂತ ಎರಡು ಮೈಕ್ರೊಫೊನ್ ಬಳಸಿ ಮತ್ತು ಡಿಸ್ಕ್ ಕಟ್ಟರ್ ಬಳಸಿ ದಾಖಲಿಸಲಾಗುತ್ತಿತ್ತು. ವಿಭಿನ್ನ ಆವೃತ್ತಿಗಳನ್ನು ಪ್ರತ್ಯೇಕಿಸಿ ನೋಡಿ ವಿಭಾಗಿಸಲಾಗುತ್ತದೆ.ಇದರಲ್ಲಿ ಯಾವುದು ಉತ್ತಮ ಮೈಕ್ರೊಫೊನ್ ಎಂಬ ಸ್ಥಾನ ಪಡೆಯುತ್ತದೆ ಎಂಬುದನ್ನು ನೋಡಲಾಗುತ್ತದೆ. ಮೂಲ ಧ್ವನಿಸುರಳಿ ದಾಖಲೆಗೆ ಏನಾದರೂ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತಾ ಅಂಶಗಳ ಅಳವಡಿಕೆ ಈ ಧ್ವನಿ ಮುದ್ರಿಕೆಗಳು ಅಪರೂಪದ್ದಾಗಿದ್ದರೂ ಅವುಗಳೆರಡರ ಆವೃತ್ತಿಗಳು ತಮ್ಮದೇ ಆದ ಸಾಮರ್ಥ್ಯದ ಗೋಚರತೆ ಪಡೆದಿವೆ.ಪ್ರತಿಯೊಂದರಲ್ಲಿಯೇ ಧ್ವನಿ ಮಿಶ್ರಣವು ಬೇರೆ ಬೇರೆಯಾಗಿರುತ್ತದೆ. ಎರಡು ಧ್ವನಿಮುದ್ರಿಕೆಗಳ ಸಂಯೋಜಿತ ಮಾಡುವ ಕ್ರಿಯೆಯೇ ಸ್ಟಿರಿಯೊ ದಿ ರಿಜಲ್ಟಿಂಗ್ ರೆಕಾರ್ಡಿಂಗ್ ಈಸ್ ಅವೈಲೇಬಲ್ ಆನ್ ದಿ 22-CD ಸೆಟ್ "ದಿ ಡ್ಯುಕ್ ಎಲ್ಲಿಂಗ್ಟನ್ ಸೆಂಟೆನ್ನೆಯಿಯಲ್ ಎಡಿಶನ್".
  16. ಬಿ.ಬಿ. ಬಾಯುರ್, "ಸಮ್ ಟೆಕ್ನಿಕ್ಸ್ ಟುವರ್ಡ್ಸ್ ಬೆಟರ್ ಸ್ಟಿರಿಯೊಫೊನಿಕ್ ಪರೆಸ್ಪೆಕ್ಟಿವ್",IEEE ಟ್ರ್ಯಾನ್ಸಾಕ್ಶನ್ಸ್ ಆನ್ ಆಡಿಯೊ , ಮೇ–ಜೂನ್ 1963, p. 89.
  17. "ರೇಡಿಯೊ ಆಡ್ಸ್ ಥರ್ಡ್ ಡೈಮೆನ್ಸನ್", ಪಾಪ್ಯುಪಲರ್ ಸೈನ್ಸ್ , ಜ. 1953, p. 106.
  18. "ಸೌಂಡ್ ವೇವ್ಜ್ 'ರಾಕ್' ಕಾರ್ನೆಗಿ ಹಾಲ್ ಆಸ್'ಎನ್ ಹಾನ್ಸ್ಡ್ ಮ್ಯುಜಿಕ್' ಈಸ್ ಪ್ಲೇಯ್ಡ್", ದಿ ನ್ಯುಯಾರ್ಕ್ ಟೈಮ್ಸ್ , ಏಪ್ರಿಲ್ 10, 1940, p. 25.
  19. "ನಿವ್ ಸೌಂಡ್ ಇಫೆಕ್ಟ್ಸ್ ಅಚಿವ್ಡ್ ಇನ್ ಫಿಲ್ಮ್", ದಿ ನ್ಯುಯಾರ್ಕ್ ಟೈಮ್ಸ್ , ಅ. 12, 1937, p. 27.
  20. ನೆಲ್ಸನ್ ಬಿ.ಬೆಲ್,"ರಾಪಿಡ್ ಸ್ಟ್ರೈಡ್ಸ್ ಆರ್ ಬೀಯಿಂಗ್ ಮೇಡ್ ಇನ್ ಡೆವಲ್ಪ್ ಮೆಂಟ್ ಆಫ್ ಸೌಂಡ್ ಟ್ರ್ಯಾಕ್",ದಿ ವಾಶಿಂಗ್ ಟನ್ ಪೊಸ್ಟ್ ,ಏಪ್ರಿಲ್ 11, 1937, p. TR1.
  21. ಮೋಶನ್ ಪಿಕ್ಚರ್ಸ ಹೆರಾಲ್ಡ್ , ಸೆಪ್ಟೆಂಬರ್ 11, 1937, p. 40.
  22. ಆಂಡ್ರಿವ್ ಆರ್. ಬೂನೆ, "ಮಿಕಿ ಮೌಸ್ ಗೋಜ್ ಕ್ಲಾಸಿಕಲ್", ಪಾಪ್ಯುಪಲರ್ ಸೈನ್ಸ್ , ಜನವರಿ 1941, p. 65.
  23. http://www.widescreenmuseum.com/widescreen/wingcs5.htm
  24. ೨೪.೦ ೨೪.೧ ೨೪.೨ ೨೪.೩ ೨೪.೪ ೨೪.೫ ೨೪.೬ [49] ^ [28] ^ http://www.imdb.com/title/tt0299537/
  25. "ಕಮರ್ಸಿಯಲ್ ಬೈನ್ಯುರಲ್ ಸೌಂಡ್ ನಾಟ್ ಫಾರ್ ಆಫ್", ಬಿಲ್ ಬೋರ್ಡ್ , ಅ. 24, 1953, p. 15.
  26. "ಅಡ್ವೆಂಚರ್ಸ್ ಇನ್ ಸೌಂಡ್", ಪಾಪ್ಯುಪಲರ್ ಮೆಕ್ಯಾನಿಕ್ಸ್ , ಸೆಪ್ಟೆಂಬರ್ 1952, p. 216.
  27. "ಟೇಪ್ ಟೃಇಡ್ ಗ್ರುಪ್ ಟು ಫಿಕ್ಸ್ ಸ್ಟ್ಯಾಂಡರ್ಡ್ಸ್",ಬಿಲ್ ಬೋರ್ಡ್ , ಜುಲೈ 10, 1954, p. 34.
  28. "ಹೈ-ಫೈ: ಟು-ಚಾನಲ್ ಕಾಮೊಶನ್", }ದಿ ನ್ಯುಯಾರ್ಕ್ ಟೈಮ್ಸ್ , ನವೆಂಬರ್ 17, 1957, p. XX1.
  29. ಜಾಜ್ ಬೀಟ್ 2007-10-26
  30. "ಹ್ಯಾರೆ ಆರ್. ಪೊರ್ಟರ್ ಹಿಸ್ಟ್ರಿ". Archived from the original on 2004-01-26. Retrieved 2010-12-29.
  31. "}ಮಾಸ್ ಪ್ರೊಡ್ಯುಸ್ಡ್ ಸ್ಟಿರಿಯೊ ಡಿಸ್ಕ್ ಈಸ್ ಡೆಮಾನ್ ಸ್ಟ್ರೇಟೆಡ್," ಬಿಲ್ ಬೋರ್ಡ್, ಡಿ. 16, 1957, p. 27.
  32. ಆಡಿಯೊ ಫಿಡಿಲಿಟಿ ಅಡ್ವರ್ ಟೈಜ್ ಮೆಂಟ್, ಬಿಲ್ ಬೋರ್ಡ್, ಡಿ. 16, 1957, p. 33.
  33. "ಮಾಸ್ ಪ್ರೊಡ್ಯುಸ್ಡ್ ಸ್ಟಿರಿಯೊ ಡಿಸ್ಕ್ ಈಸ್ ಡೆಮಾನನ್ ಸ್ಟ್ರೇಟೆಡ್", ಬಿಲ್ ಬೋರ್ಡ್, ಡಿ. 16, 1957, p. 27.
  34. ಅಲ್ಫ್ರೆಡ್ ಆರ್. ಜಿಪ್ಸರ್, "ಸ್ಟಿರಿಯೊಫೊನಿಕ್ ಸೌಂಡ್ ವೇಟಿಂಗ್ ಫಾರ್ ಎ ಬೂಮ್", ದಿ ನ್ಯುಯಾರ್ಕ್ಸ್ ಟೈಮ್ಸ್ , ಆ 24, 1958, p. F1.
  35. "ಆಡಿಯೊ ಫಿಡಿಲಿಟಿ ಬಾಂಬ್ ಸೆಲ್ ಹ್ಯಾಡ್ ಇಂಡಸ್ಟ್ರಿ ಅಗೊಗ್", ಬಿಲ್ ಬೋರ್ಡ್ , ಡಿ. 22, 1962, p. 36.
  36. "CBS ಡಿಸ್ಕ್ಲೊಸೆಸ್ ಸ್ಟಿರಿಯೊ ಸ್ಟೆಪ್," ಬಿಲ್ ಬೋರ್ಡ್ , ಮಾರ್ಚ್ 31, 1958, p. 9.
  37. ಸಿಲ್ವನ್ ಫಾಕ್ಸ್,"ಡಿಸ್ಕ್ಸ್ ಟುಡೆ: ನಿವ್ ಸೌಂಡ್ಸ್ ಅಂಡ್ ಟೆಕ್ನಾಲಜಿ ಸ್ಪಿನ್ ಲಾಂಗ್-ಪ್ಲಯಿಂಗ್ ರೆಕಾರ್ಡ್ ಆಫ್ ಪ್ರೊಸ್ಪರಿಟಿ ", ದಿ ನ್ಯುಯಾರ್ಕ್ಸ್ ಟೈಮ್ಸ್ , ಆ 28, 1967, p. 35.
  38. RCA ವಿಕ್ಟರ್ ರೆಡ್ ಸೀಲ್ ಲೇಬಲೊಗ್ರಾಫಿ(1950–1967) Archived 2012-01-11 ವೇಬ್ಯಾಕ್ ಮೆಷಿನ್ ನಲ್ಲಿ..
  39. "Mfrs. ಸ್ಟ್ರ್ಯಾಂಗಲ್ ಮೊನೌರಲ್", ಬಿಲ್ ಬೋರ್ಡ್ , ಜ. 6, 1968, p. 1.
  40. W-G-N ಅಂಡ್ WGNB ಟು ಅನ್ವೆಲ್ ನಿವ್ New 'ವಿಜ್ವಲ್' ಸೌಂಡ್",ದಿ ಚಿಕ್ಯಾಗೊ ಟ್ರಿಬೂನ್ , ಮೇ 19, 1952, p. B-6.
  41. "ನಿವ್ಜ್ ಆಫ್ of TV ಅಂಡ್ ರೇಡಿಯೊ", ದಿ ನ್ಯುಯಾರ್ಕ್ ಟೈಮ್ಸ್ , ಅ. 26, 1952, p. X-11. "ಬೈನ್ಯುರಲ್ ಡೈವೈಸಿಸ್", ದಿ ನ್ಯುಯಾರ್ಕ್ಸ್ ಟೈಮ್ಸ್ , ಮಾರ್ಚ್ 21, 1954, p. XX-9.
  42. "ಬೈನುರಿಯಲ್ ಮ್ಯುಜಿಕ್ ಆನ್ ದಿ ಕ್ಯಾಂಪಸ್",ಪಾಪ್ಯುಪಲರ್ ಸೈನ್ಸ್, ಏಪ್ರಿಲ್ 1953, p. 20.
  43. "Commentary: Dick Burden on FM Stereo Revisited". RADIOWORLD. February 1, 2007. Archived from the original on ಸೆಪ್ಟೆಂಬರ್ 10, 2012. Retrieved September 22, 2009.
  44. "ಕನ್ವರ್ಜನ್ ಟು ಸ್ಟಿರಿಯೊ ಬ್ರಾಡ್ ಕಾಸ್ಟ್ಸ್ ಆನ್ FM ಈಸ್ ಅಪ್ರೂವ್ಡ್ ಬೈ F.C.C.", ದಿ ನ್ಯುಯಾರ್ಕ್ಸ್ ಟೈಮ್ಸ್ , ಏಪ್ರಿಲ್ 20, 1961, p. 67.
  45. "ಸ್ಟಿರಿಯೊಫೊನಿಕ್ FM ಬ್ರಾಡ್ ಕಾಸ್ಟ್ ಬಿಗನ್ ಬೈ WEFM", ದಿ ಚಿಕ್ಯಾಗೊ ಟ್ರಿಬೂನ್ , ಜೂನ್ 2, 1961, p. B-10.
  46. "ಥಿಯೆಟರ್ ಟು ಹ್ಯಾವ್ ಸ್ಪೆಸಿಯಲ್ ಸೌಂಡ್ ಸಿಸ್ಟೆಮ್ ಫಾರ್ TV", ಲಾಸ್ ಎಂಜಿಲ್ಸ್ ಟೈಮ್ಸ್ , ಡಿ. 5, 1952, p. B-8.
  47. "ಎ ಟೆಲೆವಿಜನ್ ಫಸ್ಟ್ ! ವೆಲ್ಕ್ ಗೋಜ್ ಸ್ಟಿರಿಯೊಫೊನಿಕ್" (ಜಾಹೀರಾತು), ಲಾಸ್ ಎಂಜಿಲ್ಸ್ ಟೈಮ್ಸ್ , ಸೆಪ್ಟೆಂಬರ್ 10, 1958, p. A-7.
  48. "ಡೀಲರ್ಸ್: ಲಾರೆನ್ಸ್ ವೆಲ್ಕ್ ಲೀಡ್ಸ ಇನ್ ಸ್ಟಿರಿಯೊ!" (ಜಾಹೀರಾತು), ಬಿಲ್ ಬೋರ್ಡ್ , ಅ. 13, 1958, p. 23.
  49. "ಎಕ್ಸ್ಪೆಕ್ಟ್ ಜೇಂಟ್ TV ಸ್ಟಿರಿಯೊ ಆಡಿಯನ್ಸ್", ಬಿಲ್ ಬೋರ್ಡ್ , ಅ. 20, 1958, p. 12.
  50. ಉದಾಹರಣೆಗೆ: ಜಾಕ್ ಗೌಲ್ಡ್, "TV: ಹ್ಯಾಪಿ ಮ್ಯಾರೇಜ್ ಉಯಿತ್ FM ಸ್ಟಿರಿಯೊ", ದಿ ನ್ಯುಯಾರ್ಕ್ಸ್ ಟೈಮ್ಸ್ , ಡಿ. 26, 1967, p. 67.
  51. ೫೧.೦ ೫೧.೧ "ಜಪಾನ್ಸ್ ಸ್ಟಿರಿಯೊ TV ಸಿಸ್ಟೆಮ್", ದಿ ನ್ಯುಯಾರ್ಕ್ಸ್ ಟೈಮ್ಸ್ , ಜೂನ್ 16, 1984.
  52. ಕ್ರೊನೊಮಿಡಿಯಾ: 1982.
  53. ಲೆಸ್ ಬ್ರೌನ್, "ಹೈ-ಫೈ ಸ್ಟಿರಿಯೊ TV ಕಮಿಂಗ್ ಇನ್ 2 ಟು 4 ಇಯರ್ಸ್", ದಿ ನ್ಯುಯಾರ್ಕ್ಸ್ ಟೈಮ್ಸ್ , ಅ. 25, 1979, p. C-18.
  54. ಪೀಟರ್ ಡಬ್ಲ್ಯು. ಕಪ್ಲಾನ್, "TV ನೋಟ್ಸ್", ನ್ಯುಯಾರ್ಕ್ ಟೈಮ್ಸ್ , ಜುಲೈ 28, 1984, sec. 1, p. 46.
  55. "Rane Professional Audio Reference Home". Archived from the original on 2013-05-30. Retrieved 2008-01-20.

ಬಾಹ್ಯ ಕೊಂಡಿಗಳು

[ಬದಲಾಯಿಸಿ]