ವಿಷಯಕ್ಕೆ ಹೋಗು

ದಿವ್ಯಾವತಾರ ಶ್ರೀನಿತ್ಯನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಗವಾನ್ ನಿತ್ಯಾನಂದ
ಭಗವಾನ್ ನಿತ್ಯಾನಂದ
ಜನನ೧೮೭೯
ತುನೇರಿ, ಕೊಯೊಲ್ಯಾಂಡಿ, ಕೇರಳ, ಭಾರತ
ಮರಣ೧೯೬೧ ಆಗಸ್ಟ್, ೮
ಗನೇಶ್‌ಪುರಿ, ಮಹಾರಾಷ್ಟ್ರ, ಭಾರತ

ಭಗವಾನ್ ನಿತ್ಯಾನಂದ (ನವೆಂಬರ್/ಡಿಸೆಂಬರ್ ೧೯೮೭ - ೧೯೬೧ ಆಗಸ್ಟ್ ೮) ಒಬ್ಬ ಭಾರತದ ಗುರುವಾಗಿದ್ದರು. ಅವನ ಬೋಧನೆಗಳನ್ನು "ಚಿದಕಾಶ್ ಗೀತಾ"ದಲ್ಲಿ ಪ್ರಕಟಗೊಂಡಿತ್ತು.[] ನಿತ್ಯಾನಂದ ಕೊಯೊಲ್ಯಾಂಡಿ , ಕೇರಳ, ದಕ್ಷಿಣ ಭಾರತದಲ್ಲಿ ಜನಿಸಿದರು.[]bb

ದಿವ್ಯಾವತಾರ ಶ್ರೀನಿತ್ಯನಂದ ಲೋಕ ಕಲ್ಯಾಣಕ್ಕಾಗಿ, ಸಜ್ಜನರ ಉದ್ಧೇಶದಿಂದ ಭಗವಂತ ಬೂಮಿಯಲ್ಲಿ ಅವತರಿಸುತ್ತಿರುತ್ತಾನೆ. ಆತನ ಅವತಾರವು ಅತಿಮಾನುಷವಾಗಿ ಹೋರ ಹೊಮ್ಮಿದಾಗ ಸಜ್ಜನರು ಭಗವಂತನನ್ನು ಗುರುತಿಸುವರು. ಶ್ರೀನಿತ್ಯನಂದ ಸ್ವಾಮಿಯವರು ಕಲಿಯುಗಕ್ಕೆ ಮಾರ್ಗದರ್ಶನ ನೀಡುವ ಅವತಾರವು ಅವತರಿಸಿದರು. ಅವರು ಸ್ವಾನಂದಾಮೃತದ ತನ್ಮಯದ ಸ್ಥಿತಿಯನ್ನು ಅಜ್ಞಾನಿಗಳು ಭ್ರಾಂತರಾಗಿ ಕಂಡರು. ನಿತ್ಯನಂದ ಜನ್ಮದಾತರ ವಿವರ ಸಿಗುವುದಿಲ್ಲ.


ಬಾಲ್ಯ

[ಬದಲಾಯಿಸಿ]

ಉನ್ನಿಅಮ್ಮ ಮತ್ತು ಚತುನಾಯರ್ ಎನ್ನುವ ಬಡಕೂಲಿ ಕಾರ್ಮಕರಿಗೆ ಕ್ಯೊಲಾಂಡಿ ಅಯ್ಯಪ್ಪ ದೇಗುಲದ ಬಳಿ ಶ್ರೀನಿತ್ಯನಂದರು ದೊರಕಿದರು. ಬಳಿಕ ಕೋಜೆಕೋಡ್ ಜಿಲ್ಲೆಯ ಪ್ರಸಿದ್ಧ ವಕಿಲರಾದ ಈಶ್ವರ ಅಯ್ಯರ್‌ರೆನ್ನುವ ಬ್ರಾಹ್ಮಣರ ಮನೆಯಲ್ಲಿ "ರಾಮನ್" ಎಂಬ ಹೆಸರಿನ್ನಲ್ಲಿ ವಕೀಲರ ಸ್ವಂತ ಮಗುವಿನಂತೆ ಬೆಳೆದರು. ಇದು ಇಪ್ಪತ್ತನೆ ಶತಮಾನದ ಆದಿಯಲ್ಲಿ(೧೯೦೫-೧೯೦೬) ಭಾರತಾಂಬೆಯು ಕಂಡ ದರ್ಶನ. ಬಾಲ್ಯ ಲೀಲೆಗಳೆಂಬ ಅಮಾನುಷ ವ್ಯಕ್ತಿತ್ವದ ಪರಿಚೆಯವು ಅಯ್ಯರರಿಗೆ ಆಗುತ್ತಿದ್ದಂತೆ ರಾಮನನ್ನು ಅತೀವ ಭಕ್ತಿಯಿಂದ ನೋಡಿಕೊಂಡರು. ಈಶ್ವರ ಅಯ್ಯರರು ಸೂರ್ಯದೇವರ ಉಪಾಸಕರು. ಅವರು ಸೂರ್ಯನನ್ನು ಸುರ್ಯನಾರಾಯಣ ರೂಪದಿಂದ ನೋಡಬೇಕೆಂಬ ಆಸೆಯನ್ನು ಬಾಲಕ ರಾಮನಲ್ಲಿ ಕೇಳುವರು. ಆಗ ಅಸಾದೃಶ ಆನಂದದೊಂದಿಗೆ ಸೂರ್ಯನಾರಾಯಣ ದಿವ್ಯದರ್ಶವನ್ನು ಅಯ್ಯರರು ಪಡೆದರು. ಇದ್ದನ್ನು ಕರುಣಿಸಿದ "ರಾಮನ್"ನ ಹೆಸರು "ನಿತ್ಯಾನಂದ"ನಾಗಿರು ಎಂದು ಹೇಳಿದರು.ಅವಧೂತ ನಿತ್ಯಾನಂದರಿಗೆ ಸೃಷ್ಟಿಯ ಎಲ್ಲದರ ಸಂರಕ್ಷಣೆಯ ಹೊರೆ ಇತ್ತು. ಹಾವು, ಹುಲಿ, ಸಿಂಹಗಳಲ್ಲದೇ ಹಲವು ಪಂಚಭೂತಾತ್ಮಕ ಜಿವಾತ್ಮಗಳನ್ನು ತನ್ನದೇ ವಿಶೇಷ ಕರುಣೆಯಲ್ಲಿ ಉದ್ಧರಿಸುತ್ತಿದ್ದರು. ನಿತ್ಯಾನಂದರಿಗೆ ಗೋವುಗಳೆಂದರೆ ಅತೀವ ಮಮತೆ. ಬಾಲಕನಾಗಿದ್ದಾಗ ಗೋವುಗಳನ್ನು ದೂರದ ಬೇಟ್ಟಗಳಿಗೆ ಕರೆದುಕೊಂಡು ಹೋಗಿ ಹುಲ್ಲು ಮೇಯಿಸುತ್ತಿದ್ದರು.ತಮ್ಮ ಅವಧೂತ ಸ್ಥಿತಿಯ ಸಂಚಾರದಲ್ಲಿ ಅವರ ಅಹಾರ ಕೇವಲ "ಗಂಜಲ". ಹುಬ್ಬಳಿಯಲ್ಲಿ ಮುಂಜಾನೆಯ ಸಮಯದಲ್ಲಿ ರಸ್ತೆಗಳಲ್ಲಿ ಗೋವುಗಳ ಗಂಜಲು ಭೂಮಿಗೆ ಸ್ಪರ್ಶಿಸುವ ಮೋದಲೇ ಎರಡು ಕೈಗಳಿಂದ ಹಿಡಿದು ಸ್ವೀಕರಿಸುತ್ತಿದ್ದರು.[]


ಶ್ರೀನಿತ್ಯನಂದರ ಪವಾಡಗಳು

[ಬದಲಾಯಿಸಿ]

ಪಾತಂಜಲಿಯ ಯೋಗ ಶಾಸ್ತ್ರದಲ್ಲಿವಿವರಿಸಿದ ಎಲ್ಲಾ ಯೋಗಿಗಳ ಲಕ್ಷಣವನ್ನು ನಿತ್ಯಾನಂದರು ತೋರುತ್ತಿದ್ದರು. ಅಷ್ಟ ಸಿದ್ಧಿಗಳನ್ನು ಕರಗತ ಮಾಡಿಕೊಂಡು ಹಲವು ಪವಾಡಗಳನ್ನು ತೋರಿಸಿದ್ದಲ್ಲದೆ. ಅವುಗಳನ್ನು ಸಾಕ್ಷಿಯಾಗಿ ಮುಂದಿನ ಜನಾಂಗಕ್ಕೆ ನೀಡಿರುವರು. ವೇಗವಾಗಿ ಬರುತ್ತಿರುವ ರೈಲನ್ನು ನಿಲ್ಲಿಸಿರುವುದು, ಒಮ್ಮೆಗೆ ಹಲವು ಕಡೆಗಳಲ್ಲಿ ಕಾಣಿಸುಕೋಳ್ಳುವುದು, ಗಂಗೆಯ ಮೇಲೆ ನಡೆದುಕೊಂಡು ಹೋಗುವುದು, ಕ್ಷಣ ಮಾತ್ರದಲ್ಲಿ ಎತ್ತರವಾದ ವೃಕ್ಷಗಳ ಗೆಲ್ಲುಗಳಲ್ಲಿ ಸೂಕ್ಷ್ಮ ಶರೀರದಿಂದ ಮಲಗುವುದು. ವೃಕ್ಷದ ಮೇಲೆ ನಿಂತು ಅದರ ಎಲೆಗಳನ್ನು ಕೆಲಗೆ ನಿಂತು ಪ್ರಾರ್ಥಿಸಿದ ಭಕ್ತರಿಗೆ ಕೊಟ್ಟು ಅವರ ಇಷ್ಟಾರ್ಥಗಳನ್ನು ಈಡೇರಿಸುವುದು. ದೃಷ್ಟಿ ಕಳದುಕೊಂಡ ಭಕ್ತನಿಗೆ ತನ್ನ ಹಸ್ತದ ಸ್ಪರ್ಶದಿಂದ ಕಣ್ಣುಗಳನ್ನು ಅನುಗ್ರಹಿಸಿರುವುದು. ಮೃತಗೊಂಡ ವ್ಯಕ್ತಿಯನ್ನು ಜೀವಂತನನ್ನಾಗಿ ಮಾಡಿರುವುದು. ಲಂಗೋಟಿಯಿಂದ ಒಸ ರುಪಾಯಿ ನೋಟುಗಳನ್ನು, ವಸ್ತುಗಳನ್ನು ತೆಗೆದುಕೋಡುವುದು. ಬರಿಗೈಯಿಂದ ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚುತ್ತಿದ್ದರು. ಇತ್ಯಾದಿ ಲೆಕ್ಕವಿಲ್ಲದಷ್ಟು ಪವಾಡಗಳು ಮಾಡಿ ತೋರಿಸಿರುವರು. ಗಣೇಶಪುರಿಯಲ್ಲಿ ೩೬೦ ಬಿಸಿನೀರ ಕುಂಡಗಳಿವೆ. ಈ ಬಿಸಿನೀರ ಕುಂಡಗಳಿಗೆ ಹಿಂದೆ ವಶಿಷ್ಟರು ನಡೆಸಿದ ಮಹಾಯಜ್ಞದಲ್ಲಿ ಯೋಗಿಗಳು ಸ್ನಾನ ಮಾಡಿದ ತೀರ್ಥವೆಂಬ ಮಹಿಮೆ ಇದೆ. ಇವುಗಲ್ಲಿನ ಸ್ನಾನವು ಪಾಪ ಹಾರಕ, ರೋಗ ನಿವಾರಕ. ಹಲವು ಪವಾಡಗಳನ್ನು ನಿತ್ಯಾನಂದರು ಈ ಬಿಸಿನೀರ ಕುಂಡಗಳ ಬಳಿ ಭಕ್ತರಿಗೆ ತೋರಿಸಿರುವರು. ಗಣೇಶಪುರಿಯಲ್ಲಿ ಬಿಸಿನೀರ ಕುಂಡ ಸ್ನಾನ ಪಾಪನಾಶಕವಾದರೆ ಕಾಂಞಂಗಾಡಿನ ಗುರುಮನದಲ್ಲಿ ಪಾಪನಾಶಿನಿ ಗಂಗೆಯು ಪಾಪ, ರೋಗಗಳ ನಾಶಾಕ, ಇವೆರಡು ಶ್ರೀ ಸದ್ಗುರುವಿನ ಕರುಣೆಯ ನಿರಂತರ ಧಾರೆಯಾಗಿ ಭಕ್ತರನ್ನು ಉದ್ಧರಿಸುತ್ತಲಿವೆ.


ವಿದೇಶದ ಪ್ರವಾಸಗಳು

[ಬದಲಾಯಿಸಿ]

ನಿತ್ಯನಂದರು ನಿರ್ಲ್ಲಿಪ್ತ ಪರಿವ್ರಾಜಕರಾಗಿ ಜೀವನ ಸಂಚಾರದಲ್ಲಿ ದೇಶವಿಡಿ ತಿರುಗಿದ್ದರು. ಶ್ರೀಲಂಕ ಮತ್ತು ಬರ್ಮಾದೇಶಗಳಿಗೂ ಹೋಗಿದ್ದರು. ಬರ್ಮದಲ್ಲಿ ಸಾರ್ವಜನಿಕರಿಗೆ ಶುಚಿತ್ವದ ಕಡೆ ಗಮನವಿರಿಸಿಕೊಳ್ಳಲು ಕಲಿಸುತ್ತಿದ್ದರು. ಅವರೆ ಸ್ವತಃ ರಸ್ತೆ, ಶೌಚಾಲಯವನ್ನು ಸ್ವಚ್ಛಗೋಳಿಸಿ ತೋರಿಸುತ್ತಿದ್ದರು. ಶ್ರೀಲಂಕಾದ ಜನರು ನಿಸ್ವಾರ್ಥ ಸೇವೆಯಲಿ ತೊಡಗಿಸಿಕೊಂಡು ನಿತ್ಯಾನಂದರ ದೈವಿಕ ತೇಜಸ್ಸನ್ನು ಗುರುತಿಸತೋಡಗಿದರು.

ಬ್ರಿಟಿಷರ ಆಡಲಿತದಲ್ಲಿ

[ಬದಲಾಯಿಸಿ]

ಆ ಕಾಳದ ಪ್ರಸಿದ್ಧ ವ್ಯಕ್ತಿಗಳಾದ, ಮಹಾತ್ಮಾ ಗಾಂಧಿ,ಚೆನ್ಮಯಾನಂದ, ಬ್ರಿಟಿಷ್ ಗವರ್ನರ್ಗಳು, ತ್ರಿಮಠಾಧಿಪತಿಗಳು, ಶೈವ, ವೈಷ್ಣವ, ಶರಣರಲ್ಲದೆ, ನಾಥಪಂಥದವರು, ದಾಸವರೇಣ್ಯರು ಮಹಿಮರಾದ ಬ್ರಹ್ಮ ಶ್ರೀ ನಾರಾಯಣ ಗುರುಗಳು, ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬಾ, ಶ್ರೀ ಶಿವಾನಂದ ಅವಧೂತರು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹೀಗೆ ದೇಶ-ವಿದೇಶದಲ್ಲಿ ಎಲ್ಲರೂ ಶ್ರೀ ನಿತ್ಯಾನಂದರ ಸಂದರ್ಶನದಿಂದ ಪ್ರಭಾವಿತರಾಗಿದ್ದರು.

ನಿತ್ಯನಂದರು ನಿರ್ಭಯರಾಗಿ ಬ್ರಿಟಿಷರ ಅಧಿಕಾರವಧಿಯಲ್ಲಿ ಮಾಡುತ್ತಿರುವ ಕೆಲಸವನ್ನು ನೋಡಿ ಅದರ ವಿರುದ್ಧ ಸರಕಾರಕ್ಕೆ ದೂರು ಕೋಡಲಾಗಿತ್ತು. ಆಗಿನ ಬ್ರಿಟಿಷ್ ಜಿಲ್ಲಾಧಿಕಾರಿ ಗೋನ್ ಎನ್ನುವವರು ಬಂದು ಪರಿಶೀಲಿಸಿ ನಿತ್ಯನಂದರ ಮಹಿಮೆಗೆ ಆಕರ್ಷಿತವಾಗಿ ಇವರೊಬ್ಬ ಮಹಾತ್ಮ ಯಾರು ತೊಂದರೆ ಕೊಡಬೇಡಿ ಎಂದು ಹೇಳಿ ‍‍‍‍ಕಾಂಞಂಗಾಡಿನ ಜಾಗವನ್ನು ಆಶ್ರಮಕ್ಕೆ ನೀಡಿದರು ಆತನು ಪುನಃ ಹಿಂತಿರುಗುವಾಗ ಆಶ್ರಮಕ್ಕೆ ನಿತ್ಯಾನಂದರು ಮಾಡಿರುವ ರಸ್ತೆಗೆ ಗೋನ್ ರಸ್ತೆ ಎನ್ನುವ ಫಲಕವು ವಿಸ್ಮಯ ರೀತಿಯಲ್ಲಿ ಕಾಣಿಸಿಕೊಂಡಿತ್ತು.

ಆಶ್ರಮದ ಸೇವೆಗಳು

[ಬದಲಾಯಿಸಿ]

ಶ್ರೀ ನಿತ್ಯಾನಂದರು ಮುಂಬಯಿಯ ಗಣೇಶಪುರಿಯಲ್ಲಿ ಸುಮಾರು ೨೫ ವರ್ಷವಿದ್ದು ಅಲ್ಲಿನ ಆಶ್ರಮ ಮತ್ತು ವಜ್ರೇಶ್ವರಿಯನ್ನು ಸಮೃದ್ಧಗೊಳಿಸಿದರು. ಶಾಲೆ, ಆಸ್ಪತ್ರೆ, ಮಂದಿರ, ರಸ್ತೆಗಳನ್ನು ಅಬಿವೃದ್ಧಿಗೊಳಿಸಿದರು. ದೇಶ ವಿದೇಶಗಳಿಂದ ಬರುವ ಭಕ್ತರ ಅನುಕೂಲಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸಿದ್ದರು. ಇವರಿಗೆ ಮಕ್ಕಳೆಂದರೆ ಬಲುಪ್ರೀತಿ. ಮಕ್ಕಳಿಗಾಗಿ ನಿತ್ಯ ಅನ್ನಸಂತರ್ಪಣೆಯ "ಬಾಲಭೋಜನ"ದ ವ್ಯವಸ್ಥೆಯನ್ನು ಆಶ್ರಮದಲ್ಲಿ ಮಾಡಿರುತ್ತಾರೆ. ಬಡವರಿಗೆ ಅನ್ನಸಂತರ್ಪಣೆ ಮಾಡಲು ಭಕ್ತರನ್ನು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಸಂಚಾರದಲ್ಲಿ ಹಲವು ಕ್ಷೇತ್ರಗಳಲ್ಲಿ ಈಗಲೂ ಸಾಧುಮಠವು ನಿತ್ಯಾನಂದರು ಪ್ರಾರಂಭಿಸಿದ ಅನ್ನದಾನವನ್ನು ಮುಂದುವರಿಸುತ್ತಿದ್ದಾರೆ. ಶ್ರೀ ನಿತ್ಯಾನಂದರಂತೆ ಸಂತರಾಗಿ ಆಶ್ರಮಗಳನ್ನು ನಡೆಸಿಕೊಂಡು ಬಂದು ಈಗಲೂ ಹಲವರಿಗೆ ಮಾರ್ಗದರ್ಶಕರಾಗಿ ನಿಂತಿದ್ದಾರೆ.

ಬೋಧನೆ

[ಬದಲಾಯಿಸಿ]

ಶ್ರೀ ನಿತ್ಯಾನಂದರು ಮಂಗಳೂರಿನಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿನ ಭಕ್ತೆ, ಶ್ರೀ ತುಳಸೀ ಅಮ್ಮನವರಿಗೆ ಅನುಗ್ರಹಿಸಿದ ತತ್ವಗಳ "ಚಿದಾಕಾಶ ಗೀತಾ" ಎಂದು ಪ್ರಖ್ಯಾತವಾಗಿದೆ.[] ಇದರಲ್ಲಿ ಜನರ ಆಡುಭಾಷೆಯಲ್ಲಿ ಅರ್ಥವಾಗುವಂತೆ ಆಧ್ಯಾತ್ಯದ ವಿಚಾರಗಳನ್ನು ಹೇಳಲಾಗಿದೆ. ಮುಖ್ಯವಾಗಿ ವ್ಯಕ್ತಿ ತನ್ನ ಬಾಹ್ಯಜಗತ್ತಿನ ಆಸಕ್ತಿಗಳಿಗಿಂತಲೂ ಆಂತರಿಕವಾದ ಆತ್ಮಜ್ಞಾನದ ಕಡೆ ಒಲವು ಅರಿಸಬೇಕೆಂದು ಹೇಳುತ್ತಿದ್ದರು. "ಶುದ್ಧಭಾವನೆಯನ್ನು" ವೃದ್ಧಿಸಿಕೋಳ್ಳಲು ನಾಮನ್ಮರಣೆಗೆ ಒತ್ತುಕೊಟ್ಟಿರುವರು. ಸಾಧಕರಿಗೆ ಪ್ರಾಣಾಯಾಮದ ಓಂಕಾರದ ಧ್ಯಾನದಿಂದ ಆತ್ಮಜಾಗೃತಿಗೋಳಿಸುವ ರಾಜಯೋಗವನ್ನು ಬೋದಿಸಿರುವರು.

ಯಾರಿಂದಲೂ ಎನನ್ನೂ ಪಡೆದುಕೊಳ್ಳದೇ ತನ್ನಿಂದಲೇ ಎಲ್ಲರಿಗೂ ಕೊಡುತ್ತಿರುವ ಅಮೋಘ ಮಹಾತ್ಮ ನಿತ್ಯಾನಂದರ ಚರಿತೆಯಲ್ಲಿದೆ. ಅತಿ ಸರಳರಾಗಿ ಲಂಗೋಟಿಯಲ್ಲಿ ಇದ್ದು ಪಂಭೂತಾತ್ಮಕವಾದ ಜಗತ್ತಿನಿಂದ ಅತೀತವಾದ ಆನಂದ ಪ್ರಜ್ಞೆಯಲ್ಲಿ ನೆಲನಿಂತ ಮಹಾನ್ ಸದ್ಗುರು ನಿತ್ಯಾನಂದರ ಆರಾಧನಾ ಸ್ವರ್ಣ ಮಹೋತ್ಸವದಲ್ಲಿ ಬಾಗಿಗಳಾಗಿ ಧನ್ಯರಾಗೋಣ. ಅಂತಹ ಅವಧೂತ ನಿತ್ಯಾನಂದರು ೮ ಆಗಸ್ಟ್ ೧೯೬೧ ರಲ್ಲಿ ಸಮಾದಿ ಸ್ವೀಕರಿಸಿದರು. ಓಂ ನಮೊ: ಭಗವತೇ ನಿತ್ಯಾನಂದಾಯ

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ವೀಡಿಯೊ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2015-10-29. Retrieved 2015-11-19.
  2. http://www.siddhayoga.org/bhagavan-nityananda
  3. http://www.nityanandatradition.org/nityananda/about.html
  4. http://bhagawannityananda.org/


Hatengdi, M.U. (1990). ನಿತ್ಯಾನಂದ: ಡಿವೈನ್ ಇರುವಿಕೆ. ರುದ್ರ ಪ್ರೆಸ್ [೧] ದಿವ್ಯಾವತಾರ ಶ್ರೀನಿತ್ಯನಂದ-ಪ್ರಾಯೋಜನ: ಶ್ರೀ ನಿತ್ಯಾನಂದ ಸ್ವಾಮೀ ಚರಣದಾಸ 1. Jump up↑ http://www.questebook.org/1zyocx.pdf Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.