ವಿಷಯಕ್ಕೆ ಹೋಗು

ದಿಂಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾಸಿಗೆಯ ಮೇಲಿನ ದಿಂಬುಗಳು

ದಿಂಬು ಎಂದರೆ ಆರಾಮ, ಚಿಕಿತ್ಸೆ, ಅಲಂಕಾರ ಅಥವಾ ಆಟಕ್ಕಾಗಿ ಶರೀರಕ್ಕೆ ವಿಶ್ರಾಂತ ಸ್ಥಿತಿಯಲ್ಲಿ ನೀಡುವ ಆಧಾರ. ಮಾನವರು ಸೇರಿದಂತೆ ಅನೇಕ ಜೀವಜಾತಿಗಳು ದಿಂಬುಗಳನ್ನು ಬಳಸುತ್ತವೆ. ಕೆಲವು ಬಗೆಗಳ ದಿಂಬುಗಳಲ್ಲಿ ಥ್ರೋ ಪಿಲೊಗಳು ಮತ್ತು ಅಲಂಕಾರಿಕ ದಿಂಬುಗಳು ಸೇರಿವೆ.[೧] ಮಲಗಲು ನೆರವಾಗುವ ದಿಂಬುಗಳು ಹಾಸಿಗೆ ವಸ್ತುಗಳ ಒಂದು ರೂಪವಾಗಿವೆ ಮತ್ತು ತಲೆ ಹಾಗೂ ಕುತ್ತಿಗೆಗೆ ಆಧಾರ ನೀಡುತ್ತವೆ. ಇತರ ಬಗೆಗಳ ದಿಂಬುಗಳನ್ನು ಅಡ್ಡಾದಾಗ ಅಥವಾ ಕುಳಿತಾಗ ಶರೀರಕ್ಕೆ ಆಧಾರ ನೀಡಲು ವಿನ್ಯಾಸಗೊಳಿಸಲಾಗಿರುತ್ತದೆ. ಹಾಸಿಗೆಗಳು, ಒರಗು ಮಂಚಗಳು ಅಥವಾ ಕುರ್ಚಿಗಳ ಮೇಲೆ ಬಳಸಲಾದ ಅಲಂಕಾರಿಕ ದಿಂಬುಗಳನ್ನು ಕುಶನ್‍ಗಳು ಎಂದೂ ನಿರ್ದೇಶಿಸಲಾಗುತ್ತದೆ.

ಸಮಕಾಲೀನ ಪಾಶ್ಚಾತ್ಯ ಸಂಸ್ಕೃತಿಯಲ್ಲಿ, ದಿಂಬುಗಳು ಸರಳ ಅಥವಾ ಪುನರಾವರ್ತಕ ಮಾದರಿಯುಳ್ಳ ಬಟ್ಟೆಯ ಆವರಣವನ್ನು (ದಿಂಬುಚೀಲ ಎಂದು ಕರೆಯಲ್ಪಡುತ್ತದೆ) ಹೊಂದಿರುತ್ತವೆ. ಇದು ಮೃದುವಾದ ತುಂಬು ಪದಾರ್ಥವನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಸಂಶ್ಲೇಷಿತ ಮತ್ತು ಸಾಮಾನ್ಯವಾಗಿ ಗಾತ್ರಗಳು ಹಾಗೂ ಆಕಾರದಲ್ಲಿ ಪ್ರಮಾಣೀಕೃತವಾದದ್ದು. ಐತಿಹಾಸಿಕವಾಗಿ ದಿಂಬುಗಳನ್ನು ಬಗೆಬಗೆಯ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿದೆ ಮತ್ತು ಅನೇಕ ಸಂಸ್ಕೃತಿಗಳು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ದಿಂಬುಗಳನ್ನು ಬಳಸುವುದನ್ನು ಮುಂದುವರಿಸಿವೆ.

ದಿಂಬುಗಳು ಬಟ್ಟೆಯ ಹೊದಿಕೆ ಅಥವಾ ಆವರಣದಿಂದ ಸುತ್ತುವರಿಯಲ್ಪಟ್ಟ ತುಂಬು ವಸ್ತುವನ್ನು ಹೊಂದಿರುತ್ತವೆ. ದಿಂಬಿನ ಹೊದಿಕೆಗಳನ್ನು ರೇಷ್ಮೆಯಂತಹ ಬಟ್ಟೆಯಿಂದ ತಯಾರಿಸಲಾಗುತ್ತದೆ. ಇದನ್ನು ದಿಂಬುಚೀಲ ಅಥವಾ ದಿಂಬುಹೊದಿಕೆ ಎಂದು ಕರೆಯಲಾಗುತ್ತದೆ. ಕೆಲವು ದಿಂಬುಗಳು ಶ್ಯಾಮ್ ಎಂದು ಕರೆಯಲ್ಪಡುವ ಹೆಚ್ಚು ಮೋಹಕ ಹೊದಿಕೆಯನ್ನು ಹೊಂದಿರುತ್ತವೆ. ಇದು ಎಲ್ಲ ಬದಿಗಳಲ್ಲೂ ಮುಚ್ಚಿದ್ದು ಸಾಮಾನ್ಯವಾಗಿ ಹಿಂಬದಿಯಲ್ಲಿ ಒಂದು ಸೀಳನ್ನು ಹೊಂದಿರುತ್ತದೆ ಮತ್ತು ಇದರ ಮೂಲಕ ದಿಂಬನ್ನು ಒಳಗೆ ಕೂರಿಸಲಾಗುತ್ತದೆ. ಆಯತಾಕಾರದ ಪ್ರಮಾಣಕ ಹಾಸಿಗೆ ದಿಂಬುಚೀಲಗಳು ಸಾಮಾನ್ಯವಾಗಿ ಜಿಪ್‍ಗಳನ್ನು ಹೊಂದಿರುವುದಿಲ್ಲ. ಬದಲಾಗಿ ಯಾವಾಗಲೂ ತೆರೆದಿರುವ ಒಂದು ಬದಿಯನ್ನು ಹೊಂದಿರುತ್ತವೆ. ಹಲವುವೇಳೆ, ಜಿಪ್ ಇರುವ ದಿಂಬು ರಕ್ಷಕವನ್ನು ಸಾಮಾನ್ಯ ದಿಂಬುಗಳ ಸುತ್ತ ಇರಿಸಲಾಗುತ್ತದೆ ಮತ್ತು ಪ್ರತಿಯಾಗಿ ಹೊದಿಕೆಯು ರಕ್ಷಕವನ್ನು ಆವರಿಸುತ್ತದೆ.

ತುಂಬುವಸ್ತುಗಳನ್ನು ಆರಾಮ, ಸ್ಥಿತಿಸ್ಥಾಪಕತ್ವ, ವೆಚ್ಚ ಮತ್ತು ಸ್ವಲ್ಪಮಟ್ಟಿಗೆ ನೈತಿಕ ಹಾಗೂ ಆರೋಗ್ಯದ ಕಾರಣಗಳ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ. ಅತ್ಯಂತ ಸಾಮಾನ್ಯ ಸಂಶ್ಲೇಷಿತ ತುಂಬುವಸ್ತುಗಳೆಂದರೆ ಫ಼ೋಮ್, ಸಂಶ್ಲೇಷಿತ ಪ್ಲಾಸ್ಟಿಕ್ ನಾರುಗಳು (ಸಾಮಾನ್ಯವಾಗಿ ಪಾಲಿಯೆಸ್ಟರ್) ಮತ್ತು ಸ್ನಿಗ್ಧ ಸ್ಥಿತಿಸ್ಥಾಪಕ ಫ಼ೋಮ್ ಹಾಗೂ ಲೇಟೆಕ್ಸ್.

ಉಲ್ಲೇಖಗಳು[ಬದಲಾಯಿಸಿ]

  1. Crickette M. Sanz; Josep Call; Christophe Boesch (7 March 2013). Tool Use in Animals: Cognition and Ecology. Cambridge University Press. pp. 184–. ISBN 978-1-107-01119-9.
"https://kn.wikipedia.org/w/index.php?title=ದಿಂಬು&oldid=884403" ಇಂದ ಪಡೆಯಲ್ಪಟ್ಟಿದೆ