ದಾದಾ ಹರಿರ್ ವಾವ್
ಗೋಚರ
ದಾದಾ ಹರಿರ್ ವಾವ್ (ಗುಜರಾತಿ: દાદા હરિર વાવ) ಭಾರತದ ಗುಜರಾತ್ ರಾಜ್ಯದ ಅಹ್ಮದಾಬಾದ್ನಿಂದ ೧೫ ಕಿ.ಮಿ. ದೂರದಲ್ಲಿರುವ ಅಸರ್ವಾ ಪ್ರದೇಶದಲ್ಲಿರುವ ಒಂದು ಮೆಟ್ಟಿಲುಬಾವಿಯಾಗಿದೆ.
ಮೆಟ್ಟಿಲುಬಾವಿಯಲ್ಲಿರುವ ಪರ್ಷಿಯನ್ ಶಾಸನದ ಪರಕಾರ ಈ ಮೆಟ್ಟಿಲುಬಾವಿಯನ್ನು ಮಹ್ಮೂದ್ ಬೇಗಡಾನ ಮನೆಯ ಮಹಿಳೆಯಾಗಿದ್ದ ಧಾಯಿ ಹರಿರ್ ೧೪೮೫ರಲ್ಲಿ ಕಟ್ಟಿಸಿದರು.[೧] ಅವಳು ಅರಸರ ಜನಾನಾದ ಮೇಲ್ವಿಚಾರಕಿಯಾಗಿದ್ದಳು.
ಸೋಲಂಕಿ ವಾಸ್ತುಕಲಾ ಶೈಲಿಯಲ್ಲಿ ಮರಳುಗಲ್ಲನ್ನು ಬಳಸಿ ನಿರ್ಮಿಸಲ್ಪಟ್ಟಿರುವ ದಾದಾ ಹರಿರ್ ವಾವ್ ಐದು ಅಂತಸ್ತುಗಳಷ್ಟು ಆಳವಿದೆ. ನಕ್ಷೆ ಪ್ರಕಾರ ಮೇಲ್ಭಾಗದಲ್ಲಿ ಅಷ್ಟಭುಜಗಳನ್ನು ಹೊಂದಿದೆ ಮತ್ತು ಸಂಕೀರ್ಣವಾಗಿ ಕೆತ್ತಲ್ಪಟ್ಟ ಹೆಚ್ಚಿನ ಸಂಖ್ಯೆಯ ಕಂಬಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಪ್ರತಿ ಅಂತಸ್ತು ಜನರು ಸಭೆ ಸೇರುವಷ್ಟು ವಿಶಾಲವಾಗಿದೆ. ಆ ಮಟ್ಟದಲ್ಲಿ ಅಂತರ್ಜಲವನ್ನು ಪಡೆಯಲು ಇದನ್ನು ಆಳವಾಗಿ ಅಗೆಯಲಾಯಿತು ಮತ್ತು ವರ್ಷದಲ್ಲಿ ಬೀಳುವ ಮಳೆಯ ಕಾರಣ ನೀರಿನ ಮಟ್ಟದಲ್ಲಿ ಆಗುವ ಕಾಲಿಕ ಏರಿಳಿತಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿತು.
ಉಲ್ಲೇಖಗಳು
[ಬದಲಾಯಿಸಿ]- ↑ Gazetteer of the Bombay Presidency: Ahmedabad. Government Central Press. 1879. p. 282.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Dada Harir Vav Archived 2021-05-14 ವೇಬ್ಯಾಕ್ ಮೆಷಿನ್ ನಲ್ಲಿ.
- Ranked #19 out of 121 things to do in Ahmedabad
- Dada Harir Stepwell on Gujarat Tourism Official Website
- Bad times for Dada Hari ni Vav in Gujarat
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |