ದಳ್ಳಾಳಿ ರುಸುಮು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಳ್ಳಾಳಿ ರುಸುಮು ಕೊಡಲಾದ ಸೇವೆಗಳಿಗೆ ಅಥವಾ ಮಾರಾಟಮಾಡಲಾದ ಉತ್ಪನ್ನಗಳಿಗೆ ನೀಡಲಾದ ಚರ ಸಂದಾಯದ ಸಂಭಾವನೆಯ ಒಂದು ರೂಪ. ದಳ್ಳಾಳಿ ರುಸುಮುಗಳು ಮಾರಾಟಗಾರರನ್ನು ಪ್ರೇರೇಪಿಸುವ ಮತ್ತು ಪುರಸ್ಕರಿಸುವ ಒಂದು ಸಾಮಾನ್ಯ ವಿಧಾನವಾಗಿವೆ. ನಿರ್ದಿಷ್ಟ ಮಾರಾಟ ವರ್ತನೆಗಳನ್ನು ಪ್ರೋತ್ಸಾಹಿಸಲು ಕೂಡ ದಳ್ಳಾಳಿ ರುಸುಮುಗಳನ್ನು ವಿನ್ಯಾಸಗೊಳಿಸಲಾಗಿರಬಹುದು. ಉದಾಹರಣೆಗೆ, ಭಾರೀ ರಿಯಾಯಿತಿಗಳನ್ನು ನೀಡುವಾಗ ದಳ್ಳಾಳಿ ರುಸುಮುಗಳನ್ನು ಕಡಿಮೆ ಮಾಡಬಹುದು. ಅಥವಾ ಸಂಸ್ಥೆಯು ಪ್ರಚಾರಮಾಡಲು ಬಯಸುವ ನಿರ್ದಿಷ್ಟ ಉತ್ಪನ್ನಗಳನ್ನು ಮಾರಾಟ ಮಾಡುವಾಗ ದಳ್ಳಾಳಿ ರುಸುಮುಗಳನ್ನು ಹೆಚ್ಚಿಸಬಹುದು. ದಳ್ಳಾಳಿ ರುಸುಮುಗಳನ್ನು ಸಾಮಾನ್ಯವಾಗಿ ಮಾರಾಟ ಪ್ರೋತ್ಸಾಹ ಕಾರ್ಯಕ್ರಮದ ಚೌಕಟ್ಟಿನಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಇದು ಒಂದು ಅಥವಾ ಅನೇಕ ರುಸುಮು ಯೋಜನೆಗಳನ್ನು ಒಳಗೊಳ್ಳಬಹುದು (ಸಾಮಾನ್ಯವಾಗಿ ಪ್ರತಿಯೊಂದು ಪ್ರಾಂತ್ಯ, ಸ್ಥಾನ ಅಥವಾ ಉತ್ಪನ್ನಗಳ ಸಂಯೋಜನೆಯ ಮೇಲೆ ಆಧಾರಿತವಾಗಿರುತ್ತದೆ).

ಸಂದಾಯಗಳನ್ನು ಹಲವುವೇಳೆ ಆದಾಯದ ಪ್ರತಿಶತವನ್ನು ಬಳಸಿ ಲೆಕ್ಕಹಾಕಲಾಗುತ್ತದೆ. ಇದು ವ್ಯಾಪಾರಸಂಸ್ಥೆಗಳಿಗೆ ಮೂಲಧನ-ದಳ್ಳಾಳಿ ಸಮಸ್ಯೆಯನ್ನು ಉದ್ಯೋಗಿಗಳ ಹಿತಾಸಕ್ತಿಗಳನ್ನು ವ್ಯಾಪಾರಸಂಸ್ಥೆಯ ಹಿತಾಸಕ್ತಿಗಳೊಂದಿಗೆ ಪುನಃ ಸರಿಹೊಂದಿಸಲು ಪ್ರಯತ್ನಿಸುವ ಮೂಲಕ ಪರಿಹರಿಸುವ ದಾರಿಯಾಗಿರುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. McConnell, Campbell R.; Brue, Stanley L. (2008). Economics (17th ed.). New York, NY: McGraw-Hill/Irwin. ISBN 978-0-07-329392-9.