ವಿಷಯಕ್ಕೆ ಹೋಗು

ದರ್ಶನ್ ರಂಗನಾಥನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದರ್ಶನ್ ರಂಗನಾಥನ್
ಜನನಜೂನ್ ೪,೧೯೪೧
ದೆಹಲಿ
ಮರಣಜೂನ್ ೪,೨೦೦೧
ವೃತ್ತಿವಿಜ್ಞಾನಿ
ರಾಷ್ಟ್ರೀಯತೆಭಾರತೀಯ
ವಿಷಯಇಂಗಾಲೀಯ ರಸಾಯನಶಾಸ್ತ್ರ

ದರ್ಶನ್ ರಂಗನಾಥನ್, ಭಾರತ ಕಂಡ ಅತ್ಯಂತ ಉನ್ನತವಾದ ಮಹಿಳಾ ವಿಜ್ಞಾನಿ ಮತ್ತು ರಸಾಯನಶಾಸ್ತ್ರ ಪ್ರವೀಣೆ . ಇಂಗಾಲೀಯ ರಸಾಯನಶಾಸ್ತ್ರದಲ್ಲಿ ಪದವಿಯನ್ನು ಹೊಂದು, ಜೈವಿಕ ರಸಾಯನಶಾಸ್ತ್ರದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ದರ್ಶನ್ ರಂಗನಾಥನ್ ಅವರು ಹೈಬ್ರಿಡ್ ಪೆಪ್ಟೈಡ್ ಮತ್ತು ಸಂಯೋಗದ "ಪ್ರೊಟೀನ್ ಫೋಲ್ಡಿಂಗ್ ಪ್ರವರ್ತಕ ಕೆಲಸ" ಮತ್ತು ಸುಪ್ರಮಾಲಿಕ್ಯುಲಾರ್ ಸಭೆಗಳು, ಅಣು ವಿನ್ಯಾಸ, ಪ್ರಮುಖ ಜೈವಿಕ ಪ್ರಕ್ರಿಯೆಗಳ ರಾಸಾಯನಿಕ ಸಿಮ್ಯುಲೇಶನ್, ಸಂಯೋಜನೆ, ಜೈವಿಕ ಸಾವಯವ ರಸಾಯನಶಾಸ್ತ್ರ. ನ್ಯಾನೊಟ್ಯೂಬ್ಗಳ ಉತ್ಪತ್ತಿ ವಿಷಯಗಳಲ್ಲಿ ಒಂದು ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಭಾರತದಲ್ಲಿ ಗುರುತಿಸಲ್ಪಡುವ ಉನ್ನತವಾದ ಹತ್ತು ಮಹಿಳಾ ವಿಜ್ಞಾನಿಗಳಲ್ಲಿ ದರ್ಶನ್ ರಂಗನಾಥನ್ ಕೂಡ ಒಬ್ಬರು.

ಶಾಂತಿ ಸ್ವರೂಪ್ ಮತ್ತು ವಿದ್ಯಾವತಿ ಮರ್ಕನ್ ದಂಪತಿಗಳಿಗೆ ಜೂನ್ ೪, ೧೯೪೧ರಂದು ದೆಹಲಿಯಲ್ಲಿ ದರ್ಶನ್ ಮರ್ಕನ್ ಜನಿಸಿದರು. ದೆಹಲಿಯಲ್ಲಿಯೇ ಇವರು ಯೌವ್ವನಾವಸ್ಥೆಯನ್ನು ಕಳೆದರು. ಐಐಟಿ ಕಾನ್ಪುರದಲ್ಲಿ ಬೋಧನಾ ವಿಭಾಗದ ಸದಸ್ಯರಾಗಿದ್ದ ಸುಬ್ರಮಣಿಯ್ಯ ರಂಗನಾಥನ್ ಅವರೊಂದಿಗೆ ವಿವಾಹವಾಯಿತು. ಆನಂದ್ ಎಂಬ ಒಬ್ಬ ಮಗನಿದ್ದಾನೆ.

ವಿದ್ಯಾಭ್ಯಾಸ ಮತ್ತು ವೃತ್ತಿ

[ಬದಲಾಯಿಸಿ]

ದೆಹಲಿಯಲ್ಲಿ ಶಾಲಾ ಮತ್ತು ಕಾಲೇಜು ವ್ಯಾಸಂಗ ಮಾಡಿದ ದರ್ಶನ್ ರಂಗನಾಥನ್ ಅವರು ಮುಂದೆ ರಸಾಯನಶಾಸ್ತ್ರದಲ್ಲಿ ಪದವಿಯನ್ನು ಪಡೆದು ಉಪನ್ಯಾಸಕರಾಗಿ ಮಿರಾಂಡ ಹೌಸ್ ಸೇರಿದರು ನಂತರ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದರು. ದೆಹಲಿ ವಿಶ್ವವಿದ್ಯಾಲಯದಿಂದ ಪ್ರೊಫೆಸರ್ ಟಿ.ಆರ್.ಶೇಷಾದ್ರಿ ಅವರ ನೇತೃತ್ವದ ಅಡಿಯಲ್ಲಿ ೧೯೭೬ರಲ್ಲಿ ಪಿ.ಎಚ್‍ಡಿ ಪದವಿಯನ್ನು ಪಡೆದುಕೊಂಡರು. ರಾಯಲ್ ಕಮಿಷನ್ ಫಾರ್ ದ ಎಕ್ಸಿಬಿಷನ್ ಆಫ಼್ ೧೮೫೧ ವತಿಯಿಂದ ೧೮೫೧ ರಿಸರ್ಚ್ ಫೆಲೋಶಿಪ್ ಅನ್ನು ಪಡೆದು [] , ಅಮೇರಿಕದಲ್ಲಿ ಸ್ನಾತಕೋತರ ಪದವಿಯನ್ನು ಇಂಪಿರಿಯಲ್ ಕಾಲೇಜ್ ಆಫ಼್ ಲಂಡನ್ ನ ಪ್ರೊಫೆಸರ್ ಡಿ.ಎಚ್.ಆರ್. ಬಾರ್ಟನ್ ಅವರ ಅಡಿಯಲ್ಲಿ ಪಡೆದುಕೊಂಡರು. ೧೯೬೯ ರಲ್ಲಿ ಭಾರತಕ್ಕೆ ಮರಳಿದರು. ನಂತರದ ವರ್ಷದಲ್ಲಿ ಐಐಟಿ ಕಾನ್ಪುರದಲ್ಲಿ ಸ್ವತಂತ್ರವಾಗಿ ಸಂಶೋಧನೆಯನ್ನು ಆರಂಭಿಸಿದರು. ಒಂದು ಅಲಿಖಿತ ನಿಯಮದ ಅನುಸಾರವಾಗಿ ಒಂದೇ ಇಲಾಖೆಯಲ್ಲಿ ದಂಪತಿಗಳು ಸಿಬ್ಬಂದಿ ವರ್ಗವನ್ನು ಸೇರಲಾಗದ ಕಾರಣದಿಂದಾಗಿ ದರ್ಶನ್ ರಂಗನಾಥನ್ ಸಿಬ್ಬಂದಿ ವರ್ಗವನ್ನು ಸೇರಲು ಆಗಲಿಲ್ಲ [] ಇದರಿಂದಾಗಿ ಅವರ ಸಂಶೋಧನೆಗೆ ಬೇಕಾದ ಧನಸಹಾಯವನ್ನು ಹಲವು ಸ್ವತಂತ್ರ ಶಿಷ್ಯಾವೃತ್ತಿಗಳಿಂದ ಪಡೆದುಕೊಂಡರು. ಮೊದಲಾಗಿ ಪ್ರೊಟಿನ್ ಫೋಲ್ಡಿಂಗ್‍ನಲ್ಲಿ ಕೆಲಸ ಆರಂಭಿಸಿದರು. ತನ್ನ ಪತಿಯೊಂದಿಗೆ ಪ್ರಸ್ತುತ ಇಂಗಾಲೀಯ ರಸಾಯನಶಾಸ್ತ್ರದ ವಿಷಯಗಳ ಮುಖ್ಯಾಂಶಗಳನ್ನು ಸಂಪಾದಿಸಿದರು. ತನ್ನ ವೃತ್ತಿಜೀವನದ ಅಭಿವೃದ್ಧಿಗಾಗಿ , ಅವರು ಸ್ವಯಂ ಜೋಡಣೆ ಪೆಪ್ಟೈಡ್ ಬಳಸಿಕೊಂಡು ವಿವಿಧ ನ್ಯಾನೋ ರಚನೆಗಳಿಗೆ ವಿವಿಧ ಪ್ರೋಟೀನ್ ವಿನ್ಯಾಸ ಮತ್ತು ವಿನ್ಯಾಸ ತಜ್ಞವನ್ನು ಕಂಡುಹಿಡಿದರು. ೧೯೯೩ರಲ್ಲಿ ತಿರುವನಂತಪುರದಲ್ಲಿರುವ ಪ್ರಾದೇಶಿಕ ಸಂಶೋಧನ ಘಟಕದಲ್ಲಿ ಕೆಲಸಕ್ಕೆ ಸೇರಿದರು. ಈ ಅವಧಿಯಲ್ಲಿ , ಅವರು ಅಮೇರಿಕಾದ ನೌಕಾ ರೀಸರ್ಚ್ ಲ್ಯಾಬೋರೇಟರಿಯ ಇಸಾಬೆಲ್ಲಾ Karle ಅವರೊಂದಿಗೆ ಸಹಯೋಗಗಳನ್ನು ನಡೆಸಿದರು. ಅಂತಿಮವಾಗಿ ೧೯೯೮ ರಲ್ಲಿ ಹೈದರಬಾದ್‍ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯುಟ್ ಆಫ಼್ ಕೆಮಿಕಲ್ ಟೆಕ್ನಾಲಜಿಯಲ್ಲಿ (ಐಐಸಿಟಿ) ನಿರ್ದೇಶಕರಾಗಿ ಆಯ್ಕೆಗೊಂಡರು.[]

ಕೆಲಸ ಮತ್ತು ಸಾಧನೆಗಳು

[ಬದಲಾಯಿಸಿ]

ದರ್ಶನ್ ರಂಗನಾಥನ್ ಅವರಿಗೆ ಪ್ರಯೋಗಾಲಯದಲ್ಲಿ ನೈಸರ್ಗಿಕ ಬಯೋಕೆಮಿಕಲ್ ಪ್ರತಿಕ್ರಿಯೆಗಳನ್ನು ಮರುಸೃಷ್ಟಿಸುವುದರ ಬಗ್ಗೆ ವಿಶೇಷ ಉತ್ಸಾಹವಾಗಿತ್ತು. ಅವರು ಔಷಧೀಯ ಮಹತ್ವವನ್ನು ಹೊಂದಿರುವಂತಹ ಹಿಸ್ಟಡಿನ್ ಮತ್ತು ಹಿಸ್ಟಮಿನ್‍ನ ಒಂದು ಪದಾರ್ಥವಾದ imidazole ನ ಸ್ವಾಯತ್ತ ಸಂತಾನೋತ್ಪತ್ತಿ ಪ್ರೋಟೋಕಾಲ್‍ ಅನ್ನು ಸೃಷ್ಟಿಸಿ ಯಶಸ್ವಿಯಾದರು. ವರ್ಕಿಂಗ್ ಸಿಮ್ಯುಲೇಶನ್ ಆಫ಼್ ಯೂರಿಯ ಸೈಕಲ್ ಅನ್ನು ಅಭಿವೃದ್ಧಿಗೊಳಿಸಿದರು. ಜರ್ನಲ್ ಆಫ಼್ ಅಮೆರಿಕನ್ ಕೆಮಿಕಲ್ ಸೊಸೈಟಿಯಲ್ಲಿ ೧೧ ಸಂಶೋಧನ ಪತ್ರಿಕೆಗಳನ್ನು, ಜರ್ನಲ್ ಆಫ಼್ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ೬ ಸಂಶೋಧನ ಪತ್ರಿಕೆಗಳನ್ನು ಸಂಪಾದಿಸಿದ ಕೀರ್ತಿ ಇವರದ್ದು. ಪತಿ ಸುಬ್ರಮಣಿಯ್ಯ ರಂಗನಾಥನ್ ಅವರೊಂದಿಗೆ ಇವರು ಸಹ ಲೇಖಕರಾಗಿ ೧೯೭೨ರಲ್ಲಿ ಚ್ಯಾಲೆಂಜಿಗ್ ಪ್ರಾಬ್ಲಮ್ಸ್ ಇನ್ ಆರ್ಗ್ಯಾನಿಕ್ ರಿಯಾಕ್ಷನ್ ಮೆಕ್ಯಾನಿಸಮ್ಸ್ (Challenging problems in organic reaction mechanisms), ೧೯೭೬ರಲ್ಲಿ ಆರ್ಟ್ ಇನ್ ಬಯೋಸಿಂತಸಿಸ್: ದ ಸಿಂತೆಟಿಕ್ ಕೆಮಿಸ್ಟ್‌ಸ್ ಚ್ಯಾಲೆಂಜ್ (Art in biosynthesis: the synthetic chemist's challenge), ೧೯೮೦ರಲ್ಲಿ ಫ಼ರ್ದರ್ ಚ್ಯಾಲೆಂಜಿಗ್ ಪ್ರಾಬ್ಲಮ್ಸ್ ಇನ್ ಆರ್ಗ್ಯಾನಿಕ್ ರಿಯಾಕ್ಷನ್ ಮೆಕ್ಯಾನಿಸಮ್ಸ್ (Further challenging problems in organic reaction mechanisms) ಪುಸ್ತಕಗಳನ್ನು ಪ್ರಕಟಿಸಿದ್ದಾರೆ.[]

ಪ್ರಶಸ್ತಿ ಮತ್ತು ಪುರಸ್ಕಾರಗಳು

[ಬದಲಾಯಿಸಿ]

ಇವರಿಗೆ ೧೯೯೧ ರಲ್ಲಿ ಇಂಡಿಯನ್ ಅಕಾಡೆಮಿಯ ಫೆಲೋಶಿಫ್‍ಗೆ ಆಯ್ಕೆಯಾದರು. ನಂತರ ೧೯೯೬ ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ ನ ಫೆಲೋಶಿಫ್ ಅನ್ನು ಪಡೆದುಕೊಂಡರು. ೧೯೯೯ ರಲ್ಲಿ ಜೈವಿಕ ಇಂಗಾಲೀಯ ರಸಾಯನಶಾಸ್ತ್ರದಲ್ಲಿನ ತನ್ನ ಕೆಲಸಕ್ಕೆ ಎ.ವಿ. ರಮ ರಾವ್ ಫೌಂಡೆಷನ್ ಅವಾರ್ಡ್, ೨೦೦೦ ರಲ್ಲಿ ಜವಾಹರಲಾಲ್ ನೆಹರು ಜನ್ಮ ಶತಮಾನೋತ್ಸವ ಸಂರ್ದಶಕ ಫೆಲೋಶಿಪ್ , ನಂತರ ೨೦೦೦ ರಂದು ಇರಾನ್‍ ನಲ್ಲಿ ನಡೆದ ತರ್ಡ್ ವರ್ಲ್ಡ್ ಅಕಾಡೆಮೆ ಆಫ಼್ ಸೈನ್ಸಸ್ ಇನ್ ಕೆಮಿಸ್ಟರಿ (ಟಿ.ಡ್ಬ್ಲೂ.ಎ.ಎಸ್.)ಯ ಸಭೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದಲ್ಲದೆ ಸುಖ್‍ದೇವ್ ಎನ್ಡೊಮೆಂಟ್ ಲೆಚ್ಚರ್‍ಶಿಪ್ ಗಳನ್ನು ಇವರು ಗಳಿಸಿದ್ದಾರೆ.[]

ದರ್ಶನ್ ರಂಗನಾಥನ್ ಅವರು ಸ್ತನ ಕ್ಯಾನ್ಸರ್‍ನಿಂದಾಗಿ ಜೂನ್ ೪, ೨೦೦೧ರಲ್ಲಿ ತಮ್ಮ ಅರವತ್ತನೆಯ ವಯಸ್ಸಿಗೆ ಕೊನೆಯುಸಿರೆಳೆದರು. ಆಕೆಯ ಸಾವಿನ ನಂತರ 2001 ರಲ್ಲಿ ಇವರ ಪತಿ "ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ಉದ್ದಾಮ ಕೊಡುಗೆಗಳನ್ನು ನೀಡಿದ ಮಹಿಳಾ ವಿಜ್ಞಾನಿಗಳಿಗೆ ದ್ವೈವಾರ್ಷಿಕ "ಪ್ರೊಫೆಸರ್ ದರ್ಶನ್ ರಂಗನಾಥನ್ ಸ್ಮಾರಕ ಉಪನ್ಯಾಸ" ("ಪ್ರೊಫ಼ೆಸರ್ ದರ್ಶನ್ ರಂಗನಾಥನ್ ಮೆಮೋರಿಯಲ್ ಲೆಕ್ಚರ್") ಅನ್ನು ಸ್ಥಾಪಿಸಿದರು.[]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://www.wikiwand.com/en/1851_Research_Fellowship
  2. ದರ್ಶನ್ ರಂಗಾನಾಥನ್ ಅವರ ಕೊಡುಗೆಗಳು http://vijeejournalist.com/2011/03/lilavatis-daughters-3/ Archived 2015-10-22 ವೇಬ್ಯಾಕ್ ಮೆಷಿನ್ ನಲ್ಲಿ.
  3. ದರ್ಶನ್ ರಂಗನಾಥನ್ ಅವರ ಜೀವನ http://www.streeshakti.com/bookD.aspx?author=1
  4. ದರ್ಶನ್ ರಂಗನಾಥನ್ ಅವರ ಪುಸ್ತಕಗಳು iupac.org/publications/pac/68/3/0671/pdf/
  5. ದರ್ಶನ್ ರಂಗನಾಥನ್ ಅವರ ಪ್ರಶಸ್ತಿಗಳು http://www.streeshakti.com/bookD.aspx?author=1
  6. ದರ್ಶನ್ ರಂಗನಾಥನ್ ಅವರ ಮರಣ http://www.thealternative.in/society/10-indian-women-scientists-you-should-be-proud-of/ Archived 2015-12-05 ವೇಬ್ಯಾಕ್ ಮೆಷಿನ್ ನಲ್ಲಿ.