ದರಬಾರ ವಿದ್ಯಾಸಂಸ್ಥೆ, ವಿಜಯಪುರ

ವಿಕಿಪೀಡಿಯ ಇಂದ
Jump to navigation Jump to search

ದರಬಾರ ವಿದ್ಯಾಸಂಸ್ಥೆಯು ವಿಜಯಪುರ ನಗರದಲ್ಲಿ 1932ರಲ್ಲಿ ಸ್ಥಾಪನೆಯಾಯಿತು.

ಸಾಧನೆ[ಬದಲಾಯಿಸಿ]

ಇಬ್ಬರು ಶಿಕ್ಷಕರಿಗೆ ರಾಷ್ಟ್ರಪತಿ ಗೌರವ. ಮೂವರಿಗೆ ಕರ್ನಾಟಕ ರಾಜ್ಯೋತ್ಸವ, ಮತ್ತೊಬ್ಬರಿಗೆ ಸಂಗೀತ ಅಕಾಡೆಮಿ ಪ್ರಶಸ್ತಿ. ಇನ್ನು ವಿದ್ಯಾರ್ಥಿಗಳಲ್ಲಿ ಒಬ್ಬರು ಕೇಂದ್ರ ಸಚಿವರಾದರೆ, ಇನ್ನೊಬ್ಬರು ರಾಜ್ಯದಲ್ಲಿ ಹಾಲಿ ಸಚಿವ, ಮತ್ತೊಬ್ಬರು ಶಾಸಕರು. ಇವರೊಟ್ಟಿಗೆ ವಿಜ್ಞಾನಿಗಳು, ಐಎಎಸ್‌, ಐಪಿಎಸ್‌ ಅಧಿಧಿಕಾರಿಗಳು, ವೈದ್ಯರು, ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹಾಗೂ ಸಾಹಿತಿಗಳನ್ನು ನಾಡಿ ಸೇವೆಗೆ ಅರ್ಪಿಸಿದ ಹಿರಿಮೆ ಈ ಜ್ಞಾನ ದೇಗುಲದ್ದು.

ರಾಜಕೀಯ

ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಹಾಲಿ ವಿಧಾನಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಕೇಂದ್ರದ ಮಾಜಿ ಸಚಿವರು. ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ತನ್ಮೂಲಕ ಈ ಶಾಲೆ ರಾಜಕೀಯ ರಂಗಕ್ಕೂ ವಿಶಿಷ್ಠ ಕೊಡುಗೆ ನೀಡಿದ್ದು ವಿಶೇಷ.

ರಾಜ್ಯೋತ್ಸವ ಪ್ರಶಸ್ತಿ

ಸಂಗೀತ ಶಿಕ್ಷಕರಾಗಿದ್ದ ಪಂ.ಬಸವರಾಜ ಹೆರಕಲ್‌ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದರು. ನಂತರದ ದಿನಗಳಲ್ಲಿ ಶಿಕ್ಷಕರಾಗಿದ್ದುಕೊಂಡೇ ರಂಗಭೂಮಿ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡ ನಿವೃತ್ತ ಮುಖ್ಯಶಿಕ್ಷಕ ಜಿ.ಎನ್‌.ದೇಶಪಾಂಡೆ, ರಂಗಭೂಮಿಗೆ ನೀಡಿದ ವಿಶಿಷ್ಠ ಕೊಡುಗೆಗೆ 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಇದೇ ಶಾಲೆಯ ಚಿತ್ರಕಲಾ ಶಿಕ್ಷಕ ಮನೋಹರ ಕೆ.ಪತ್ತಾರ, ಪರಿಸರ ಸ್ನೇಹಿ ವಿಗ್ರಹ ತಯಾರಿಸಿ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗುವ ಮೂಲಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಬದ್ಧತೆಗೆ ಹೆಚ್ಚಿನ ರಂಗು ತುಂಬಿದ್ದಾರೆ.

ತಮ್ಮಲ್ಲಿನ ವಿದ್ವತ್‌ ಮತ್ತು ಆಡಳಿತಾತ್ಮಕ ಜಾಣ್ಮೆಯಿಂದ 1960ರ ದಶಕದಲ್ಲೇ ಶಾಲೆಯ ಮುಖ್ಯಶಿಕ್ಷಕರಾಗಿದ್ದ ದಿ. ಜಿ.ಜೆ.ಮಂಗಲಗಿ ರಾಷ್ಟ್ರಪತಿ ಪ್ರಶಸ್ತಿ ಪಡೆದಿದ್ದರು. ಇವರಿಗೂ ಮುನ್ನ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ. ವಿ.ಎನ್‌.ತೊರಗಲ್‌ ಅವರು 1942ರ ಭಾರತ ಬಿಟ್ಟು ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದು ವಿಶೇಷ. ಇವರೊಟ್ಟಿಗೆ ಸಂಗೀತ ಶಿಕ್ಷಕಿ ಲತಾ ಜಹಾಗೀರದಾರ ಅವರು ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿಯೊಂದಿಗೆ ಕೀರ್ತಿ ಹೆಚ್ಚಿಸಿದ್ದು ವಿಶೇಷ.

ಇವರೆಲ್ಲರ ಜತೆಗೆ ಶಿಕ್ಷಕರಾಗಿದ್ದ ಭೀಮಸೇನ ಗೋಡ್ಕಿಂಡಿ, ಪ್ರಾಚಾರ್ಯರಾಗಿದ್ದ ಖೇಡೆ ವಾಮನಾಚಾರ್ಯ, ಮೋಹನ ತಿಳಗೂಳ, ವಿಠ್ಠಲ ಮೇಡೆದಾರ ಅಲಕು ಕವಿ, ಸಾಹಿತಿ, ಹೋರಾಟಗಾರರಾಗಿ ಕನ್ನಡ ಭಾಷೆ ಶ್ರೀಮಂತಗೊಳಿಸಿದ್ದಾರೆ. ಇಂಥ ಶ್ರೇಷ್ಠ ಶಿಕ್ಷಕ ವೃಂದ ಹೊಂದಿದ್ದ ದರಬಾರ ವಿದ್ಯಾಸಂಸ್ಥೆಯಲ್ಲಿ ಓದಿದ ಬಹುತೇಕ ವಿದ್ಯಾರ್ಥಿಗಳಲ್ಲಿ ಅನೇಕರು ವಿಜ್ಞಾನಿಗಳಾಗಿದ್ದಾರೆ. ಕೆಲವರು ಐಎಎಸ್‌, ಐಪಿಎಸ್‌ ಅಧಿಧಿಕಾರಿಗಳು, ಡಾ.ಎಲ್‌.ಎಚ್‌.ಬಿದರಿಯಂಥವರು ವೈದ್ಯರಾಗಿದ್ದರೆ, ಆಟೋಟದಲ್ಲಿ ಪ್ರೇಮಲತಾ ಸುರೇಬಾನ, ಶಾಹೀರಾ ಅತ್ತಾರ, ರಾಮೇಶ್ವರಿ ಗಾಯಕವಾಡ, ವಿನೋದ ಕೋಟ್ಯಾಳ ಮತ್ತಿತರರು ಮಿಂಚಿದ್ದು ವಿಶೇಷ. ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಇಷ್ಟೊಂದು ಪ್ರತಿಭೆಗಳನ್ನು ಸೃಷ್ಠಿಸಿದ ಶ್ರೇಯಸ್ಸು ಈ ವಿದ್ಯಾಸಂಸ್ಥೆಗೆ ಸಲ್ಲುತ್ತದೆ. ಸಂಸ್ಥಾಪಕ ದಿ. ವಿ.ಬಿ.ದರಬಾರ ಮುಂದಾಲೋಚನೆ ಹಾಗೂ ಶೈಕ್ಷಣಿಕ ಕಳಕಳಿಯಿಂದ 1937ರಲ್ಲಿ ಸ್ಥಾಪನೆಗೊಂಡ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರದ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿ.

ನಮ್ಮ ಸಂಸ್ಥೆ ಸಾಧಕ ಶಿಕ್ಷ ಕರು ಹಾಗೂ ವಿದ್ಯಾರ್ಥಿಗಳ ಕಣಜ. ಇಬ್ಬರು ಶಿಕ್ಷಕರು ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರರಾದರೆ, ಮೂವರು ಶಿಕ್ಷಕರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಥ ಶಿಕ್ಷಕರ ಗರಡಿಯಲ್ಲಿ ಪಳಗಿದ ಮೂವರು ವಿದ್ಯಾರ್ಥಿಗಳನ್ನು ರಾಜಕೀಯ ರಂಗಕ್ಕೆ ಕೊಡುಗೆ ನೀಡಿದ ಹಿರಿಮೆ ನಮ್ಮ ಸಂಸ್ಥೆಯದ್ದು.

ಅಂತರ್ಜಾಲ ತಾಣ[ಬದಲಾಯಿಸಿ]

ದರಬಾರ ವಿದ್ಯಾಸಂಸ್ಥೆ, ವಿಜಯಪುರದ ಅಂತರ್ಜಾಲ ತಾಣ