ದಯಾಮರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುಥೆನೇಶಿಯ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಯಾಮರಣ ಪದಕ್ಕೆ ಉತ್ತಮ ಸಾವು ಎಂಬ ಅರ್ಥವಿದೆ.ದಯಾಮರಣವನ್ನು ಜೀವನ ನಡೆಸಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಅವರ ನೋವಿನ ಜೀವನ ಕೊನೆಗಾಣಿಸುವ ನೆಲೆಯಲ್ಲಿ ಒದಗಿಸಲಾಗುತ್ತದೆ. ದಯಾಮರಣ ವಿಷಯ ಸಂಭಂದಿಸಿ ಬೇರೆ ಬೇರೆ ರಾಷ್ಟ್ರಗಳಲ್ಲಿ ತಮ್ಮದೇ ಆದ ಕಾನೂನು ವ್ಯವಸ್ಥೆ ಜಾರಿಯಲ್ಲದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಭಾರತ ಮಾನವೀಯ ಮೌಲ್ಯಗಳಿಗೆ ಸಾಕಷ್ಟು ಪ್ರಾಮುಖ್ಯುತೆ ಇತ್ತ ರಾಷ್ಡ. ಈ ನೆಲೆಯಲ್ಲಿ ನಮ್ಮ ಸರ್ವೋಚ್ಛ ನ್ಯಾಯಾಲಯ ದಯಾಮರಣಕ್ಕೆ ಭಾರತದಲ್ಲಿ ಮಾನ್ಯತೆ ನೀಡಿಲ್ಲ. ದಯಾಮರಣವನ್ನು ಕಾನೂನಿನ ಮಾನ್ಯತೆ ಪಡೆದು ತಜ್ಞವೈದ್ಯರ ಸಹಾಯದೊಂದಿಗೆ ನಡೆಸಲಾಗುವ ಆತ್ಮಹತ್ಯೆ ಎಂದೂ ವ್ಯಾಖ್ಯಾನಿಸಬಹುದು. ಇಲ್ಲಿ ರೋಗಿಯ ಬೇಡಿಕೆಯ ಮೇರೆಗೆ ವೈದ್ಯರು ದಯಾಮರಣವನ್ನು ಆತನ ಆರೋಗ್ಯ ಸ್ಥಿತಿ ಆದರಿಸಿ ಒದಗಿಸುತ್ತಾರೆ.

ದಯಾಮರಣದಲ್ಲಿ ಮುಖ್ಯವಾಗಿ ಎರಡು ವಿಧ ಗೋಚರಿಸುತ್ತದೆ. ಒಂದು ಸ್ವಘೋಷಿತ ದಯಾಮರಣ ಮತ್ತು ಪರೋಕ್ಷ ದಯಾಮರಣ. ಸ್ವಘೋಷಿತ ದಯಾಮರಣದಲ್ಲಿ ರೋಗಿಯು ತನ್ನ ನೋವಿನ ಜೀವನವನ್ನು ಮುಂದುವರಿಸಲಾಗದ ಸ್ಥಿತಿಯಲ್ಲಿ ಸಾವಿಗಾಗಿ ಸಲ್ಲಿಸುವ ಬೇಡಿಕೆಯಾಗಿದೆ.ಪರೋಕ್ಷ ದಯಾಮರಣದಲ್ಲಿ ರೋಗಿಯು ತನ್ನ ಭಾವನೆಯನ್ನು ವ್ಯಕ್ತಪಡಿಸಲಾಗದ ಸ್ಥಿತಿಯಲ್ಲಿದ್ದು ಆತನ ಮನೆಯವರು ಆತನ ಸಾವಿಗಾಗಿ ಸಲ್ಲಿಸುವ ಬೇಡಿಕೆಯಾಗಿದೆ. ಇಲ್ಲಿ ಹೆಚ್ಚಿನ ರಾಷ್ಡ್ರಗಳು ಪರೋಕ್ಷ ದಯಾಮರಣವನ್ನು ಕೊಲೆ ಎಂದು ಪರಿಗಣಿಸಿ ಮಾನ್ಯತೆ ನೀಡಿಲ್ಲ. ಇಂತಹ ರಾಷ್ಟ್ರಗಳ ಸಾಲಿನಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಗಳೂ ಸೇರಿ ಕೊಂಡಿವೆ.ಇತಿಹಾಸ ಹೇಳುವಂತೆ ಯುಥೆನೇಶಿಯ ಪ್ರಕಾರವು ಪ್ರಾಚೀನ ಗ್ರೀಸ್ ಮತ್ತು ರೋಮ್ ರಾಷ್ಟ್ರಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ.ಆ ಕಾಲದಲ್ಲಿ ಸಾಕ್ರೆಟಿಸ್ ಸೇರಿದಂತೆ ಪ್ಲೇಟೋ ಮೊದಲಾದ ತತ್ವಜ್ನಾನಿಗಳಿಂದಲೂ ದಯಾಮರಣ ಮಾನ್ಯತೆ ಪಡೆದಿತ್ತು.

ಅಮೇರಿಕ ಮೂಲದ ಜ್ಯುಡಿಯೋ ಕ್ರಿಶ್ಚಿಯನ್ ಸಮುದಾಯವು ದಯಾಮರಣವನ್ನು ಬಲವಾಗಿ ವಿರೋಧಿಸಿದೆ. ಈ ಧರ್ಮ ಹೇಳುವಂತೆ ದಯಾಮರಣದಲ್ಲಿ ಪಾಲ್ಗೊಳ್ಳುವುದು ಪಾಪ.ಅಮೇರಿಕ ಮೂಲದ ಫ್ಲೆರಿಕ್ಸ್ ಅಡ್ಲೆರ್ ಪ್ರಪ್ರಥಮಬಾರಿಗೆ ದಯಾಮರಣದ ಅನುಷ್ಠಾನದ ಅವಶ್ಯಕತೆಯ ಕುರಿತಾಗಿ ವಿಶ್ವದ ಗಮನ ಸೆಳೆದವರು. ದಯಾಮರಣ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಅರುಣಾ ಶ್ಯಾನುಭೋಗ್ ಪ್ರಕರಣವು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಈ ಪ್ರಕರಣದ ಕುರಿತು ತೀರ್ಪು ನೀಡುವವೇಳೆ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಭಾರತದಲ್ಲಿ ಅವಕಾಶ ಒದಗಿಸಲಾಗದೇ ಇರುವುದರ ಕುರಿತಾಗಿ ಸ್ಪಷ್ಟನೆ ನೀಡಿತ್ತು.

ದಯಾಮರಣ ನೀಡುವ ಪ್ರಕ್ರಿಯೆಯನ್ನು ಹಲವುರೀತಿಯಲ್ಲಿ ಅನುಸರಿಸಲಾಗುತ್ತಿದ್ದು, ಮುಖ್ಯವಾಗಿ ರೋಗಿಗೆ ಈಗಾಗಲೇ ಒದಗಿಸಡಲಾಗುವ ತಾತ್ಕಾಲಿಕ ಜೀವ ಉಳಿಸುವ ಔಷಧ ಉಪಚಾರಗಳನ್ನು ಸ್ಥಗಿತಗೊಳಿಸುವ ಮೂಲಕ ಹಾಗೂ ವಿಷದ ಸಿರಿಂಜನ್ನು ನೀಡುವ ಮೂಲಕ ಹಾಗೂ ಹಲವು ಇತರ ವಿಧಾನಗಳ ಮೂಲಕ ದಯಾಮರಣವನ್ನು ಹೊರ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ.

"https://kn.wikipedia.org/w/index.php?title=ದಯಾಮರಣ&oldid=642074" ಇಂದ ಪಡೆಯಲ್ಪಟ್ಟಿದೆ