ದಯಾನಂದ ಕಾಮತ್

ವಿಕಿಪೀಡಿಯ ಇಂದ
Jump to navigation Jump to search
ದಯಾನಂದ ಕಾಮತ್
ಜನ್ಮ ನಾಮದಯಾನಂದ
ಮತ್ತೊಂದು ಹೆಸರುಮಂಗಳೂರು ದಯಾನಂದ ಕಾಮತ್‌, ಭಾರತದ ಗ್ಯಾರಿ ಸೋಬರ್ಸ್
ಮೂಲಸ್ಥಳಮಂಗಳೂರು, ಕರ್ನಾಟಕ,
ವೃತ್ತಿಗಳುಕ್ರಿಕೆಟ್

ಕರ್ನಾಟಕದ ಮಾಜಿ ರಣಜಿ ಆಟಗಾರ ದಯಾನಂದ ಕಾಮತ್, ಇವರು ಉಪೇಂದ್ರ ಕಾಮತ್‌ ಮತ್ತು ಇಂದಿರಾ ಬಾಯಿ ರವರ ಮಗ. ಹುಟ್ಟಿದು ೧೯೪೩, ನವೆಂಬರ್‌ ೪ ರಂದು. ಇವರು ಜನವರಿ ೧೯ ೨೦೧೧ ರಂದು ತೀರಿಕೋಂಡರು. ಇವರು ೬೭ ವರ್ಷ ೭೬ ದಿನಗಳು ಜೀವನ ನಡೆಸಿದರು. ೧೯೬೩-೬೪ರಣಜಿಗೆ ಆಯ್ಕೆ, ೧೯೬೯ರ ತನಕ ಅವಕಾಶ. ೧೯೬೬-೬೯ರ ತನಕ ದಕ್ಷಿಣ ವಲಯ ತಂಡವನ್ನು ಪ್ರತಿನಿಧಿಸಿದರು. ಬರೋಡದಲ್ಲಿ ನಡೆದ ಪಂದ್ಯದಲ್ಲಿ ಪಶ್ಚಿಮ ವಲಯದ ವಿರುದ್ಧ ಪದ್ಮಾಕರ್‌ ಶಿವಾಲ್ಕರ್‌ ಓವರ್‌ನಲ್ಲಿ ೫ ಸಿಕ್ಸ್‌ರ್‌ ಸಿಡಿಸಿದ್ದು ಕಾಮತ್‌ ಅವರ ಅಮೋಘ ಸಾಧನೆಗಳಲ್ಲೊಂದು. ಅದು ಇಂದಿಗೂ ದಾಖಲೆಯಾಗಿ ಉಳಿದಿದೆ. ಖ್ಯಾತ ರಣಜಿ ಆಟಗಾರರಾದ ಪಟೌಡಿ, ಎಂ.ಎಲ್‌. ಜಯಸಿಂಹ, ಅಬಿದ್‌ ಅಲಿ, ಬುಧಿ ಕುಂದರನ್‌ ಕೂಡ ಇವರ ಸಹ ಆಟಗಾರರಾಗಿದ್ದರು.