ವಿಷಯಕ್ಕೆ ಹೋಗು

ದಂಟು (ಸೊಪ್ಪು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಂಟು ಮೂಲಿಕೆಗಳ ಒಂದು ಜಗದ್ವ್ಯಾಪಕ ಪಂಗಡ. ನೇರಳೆ ಮತ್ತು ಕೆಂಪಿನಿಂದ ಬಂಗಾರದ ಬಣ್ಣದವರೆಗೆ ವ್ಯಾಪಿಸುವ ಹೂಜೋಡಣೆಗಳು ಮತ್ತು ಎಲೆಗೊಂಚಲಿನ ಜೊತೆಗೆ ಸರಿಸುಮಾರು ೬೦ ಜಾತಿಗಳನ್ನು ಗುರುತಿಸಲಾಗಿದೆ. ಈ ಪಂಗಡದ ಸದಸ್ಯಸಸ್ಯಗಳು ನಿಕಟವಾಗಿ ಸಂಬಂಧಿತವಾದ ಸೆಲೋಸಿಯಾ ಪಂಗಡದ ಸದಸ್ಯಸಸ್ಯಗಳೊಂದಿಗೆ ಅನೇಕ ಲಕ್ಷಣಗಳು ಮತ್ತು ಬಳಕೆಗಳನ್ನು ಹಂಚಿಕೊಂಡಿವೆ.