ಥೋಮಸ್ ಹಿಲ್ ಗ್ರೀನ್
ಜೀವನ ಚರಿತ್ರೆ
[ಬದಲಾಯಿಸಿ]ಟಿ. ಎಚ್. ಗ್ರೀನ್‍ನು ಯಾರ್ಕ್ ಷಯರ್ ರೆಕ್ಟರ್ ಮಗನಾಗಿ ೧೯೩೬ರ ಎಪ್ರಿಲ್ ೧೭ರಂದು ಜನಿಸಿದರು. ಆತ ಶಿಕ್ಷಣವನ್ನು ರುಗ್ ಬೈ ಮತ್ತು ಬಾಲಿಯೋಲ್ ಮಹಾವಿದ್ಯಾಲಯ ಮತ್ತು ಆಕ್ಸ್ ಫರ್ಡ್ ಗಳಲ್ಲಿ ಪೂರೈಸಿದರು. ಅನಂತರ ಅವರದೇ ಕಾಲೇಜಿನಲ್ಲಿ ಟ್ಯೂಟರ್ ಆಗಿ ಆಯ್ಕೆಯಾದರು ಮತ್ತು ವಿಶ್ವವಿದ್ಯಾನಿಲಯ ಬಂದೂಕು ದಳ ಸೇರಲು ಆಮಂತ್ರಿತರಾದರು.
ಟಿ. ಎಚ್. ಗ್ರೀನ್ ಓರ್ವ ಶ್ರೇಷ್ಠ ತತ್ವಜ್ಞಾನಿಯಾಗಿ ತನ್ನ ದೇಶದ ರಾಜಕೀಯ ವ್ಯವಹಾರದಲ್ಲಿ ತೀವ್ರ ಆಸಕ್ತಿ ವಹಿಸಿದರು. ಅವರು ತಮ್ಮ ಸಮಕಾಲೀನ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುದಕ್ಕೆ ಪ್ರಯತ್ನಿಸದರು.
ಉತ್ತಮ ಕೆಲಸಗಳನ್ನು ಮಾಡಿದ ಹಿನ್ನಲೆಯಲ್ಲಿ ಅವರು ಆಕ್ಸ್ ಫರ್ಡ್ ಟೌನ್ ಕೌನ್ಸಿಲಿಗೆ ಚುನಾಯಿಸಲ್ಪಟ್ಟರು. ಅವರು ಅಲ್ಪಾದಾಯವುಳ್ಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ವಿಸ್ತರಿಸುದಕ್ಕೆ ತುಂಬಾ ಮುತುವರ್ಜಿ ವಹಿಸಿದ ಮತ್ತು ಬರ್ಮಿಂಗ್ ಹ್ಯಾಮ್ ನ ಶಾಲೆಗಳ ಆಡಳಿತ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸಿದರು. ಅವರ ಪ್ರಕಾರ ಉತ್ತಮ ಸರ್ಕಾರದ ತಳಹದಿಯು ಸ್ಥಳೀಯ ಸರ್ಕಾರಗಳಿಂದ ನಿರ್ಧರಿಸಲ್ಪಡುತ್ತದೆ.
ಪುಸ್ತಕ
[ಬದಲಾಯಿಸಿ]- ರಾಜಕೀಯ ಬಾಧ್ಯತೆಯ ತತ್ವಗಳು