ಥೈರಾಯಿಡ್ ಗ್ರಂಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥೈರಾಯಿಡ್ ಗ್ರಂಥಿ
ಮಾನವನ ಗಂಟಲಲ್ಲಿ ಮುಂಭಾಗದಲ್ಲಿ ಕಾಣಿಸಿಕೊಳ್ಳುವ ಥೈರಾಯಿಡ್ ಗ್ರಂಥಿ.
ಇದು ಮಾನವನ ಗಂಟಲ ಶ್ವಾಸನಾಳದಲ್ಲಿ ಕಾಣಿಸಿಕೊಳ್ಳುವ ಥೈರಾಯಿಡ್ ಗ್ರಂಥಿಶ್ವಾಸನಾಳ
ಲ್ಯಾಟಿನ್ ಗ್ಲಾಂಡುಲಾ ಥೈರಾಡಿಯ
System ಹಾರ್ಮೋನು ವ್ಯವಸ್ಥೆ
Artery ಉನ್ನತ, ಕೆಳಮಟ್ಟದ ಥೈರಾಯ್ಡ್ ಅಪಧಮನಿಗಳು
Vein ಥೈರಾಯ್ಡ್ ಅಪಧಮನಿಯ ಉನ್ನತಮಟ್ಟ, ಥೈರಾಯ್ಡ್ ಅಪಧಮನಿಯ ಮಧ್ಯಮಮಟ್ಟ,
Precursor ಥೈರಾಯ್ಡ್ ಡೈವರ್ಟಿಕ್ಯುಲಮ್ (2ರ ಒಳಗೆಎಂಡೋಡರ್ಮ್‌ನ ಒಂದು ವಿಸ್ತರಣೆ ದನಿ ಕಮಾನು)
MeSH + ಗ್ರಂಥಿ ಥೈರಾಯ್ಡ್ + ಗ್ರಂಥಿ
Dorlands/Elsevier ಥೈರಾಯ್ಡ್ ಗ್ರಂಥಿ

ಥೈರಾಯಿಡ್ ಗ್ರಂಥಿಯು ಕುತ್ತಿಗೆಯಲ್ಲಿ ಶ್ವಾಸನಾಳದ ಮುಂದೆ ಗಂಟಲಿನ ಕೆಳಗೆ ಇದೆ. ಈ ಗ್ರಂಥಿಯು ಥ್ಐರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ. ಇದು ಅಯೋಡಿನ್ ಇಂದ ಕೂಡಿದ ಅಮೈನೋ ಆಮ್ಲವಾಗಿದೆ. ಥೈರಾಕ್ಸಿನ್ ದೇಹದಲ್ಲಿ ನಡೆಯುವ ಚಯಾಪಚನೆಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಉತ್ಕರ್ಷೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಸ್ವಾಭಾವಿಕವಾದ ದೇಹದ ಬೆಳವಣಿಗೆಗೆ ಮತ್ತು ಅಭಿವ್ಋಧ್ದಿಗೆ ಈ ಹಾರ್ಮೋನು ಅವಶ್ಯಕ. ಇದು ವ್ಯಕ್ತಿಯ ಬೆಳವಣಿಗೆಯ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುವುದರಿಂದ ಇದನ್ನು ವ್ಯಕ್ತಿತ್ವದ ಹಾರ್ಮೋನು ಎಂದು ಕರೆಯಲಾಗುತ್ತದೆ. ಥೈರಾಯಿಡ್ ಗ್ರಂಥಿಯಲ್ಲಿ ದೋಷ ಉಂಟಾದರೆ ಥೈರಾಕ್ಸಿನ್ ಅಗತ್ಯಕ್ಕಿಂತ ಕಡಿಮೆ ಉತ್ಪತ್ತಿಯಾಗಬಹುದು. ಈ ವೈಪರಿತ್ಯಗಳನ್ನು ಹೈಪೋಥೈರಾಯಿಡಿಸಮ್ ಮತ್ತು ಹೈಪರ್ ಥೈರಾಯಿಡಿಸಮ್ ಎಂದು ವಿಂಗಡಿಸಬಹುದು.[೧]

ಹೈಪೋಥೈರಾಯಿಡಿಸಮ್[ಬದಲಾಯಿಸಿ]

ದೇಹದ ಸುದಾರಣಾ ಅವಶ್ಯಕತೆಗಳಿಗೆ ಸಾಕಾಗುವಷ್ಟು ಥೈರಾಕ್ಸಿನ್ ಉತ್ಪತ್ತಿ ಮಾಡಲು ಅಸಮರ್ಥವಾಗಿರುವ ಥೈರಾಯಿಡ್ ಗ್ರಂಥಿಯ ಸ್ಥಿತಿಯೇ ಹೈಪೋಥೈರಾಯಿಡಿಸಮ್. ಈ ಅಸಮರ್ಥತೆಯಿಂದ ಈ ಕೆಳಗಿನ ತೊಂದರೆಗಳಾಗುತ್ತವೆ.

ಸರಳ ಗಾಯಿಟರ್[ಬದಲಾಯಿಸಿ]

ಥೈರಾಯಿಡ್ ಗ್ರಂಥಿಯ ಬೆಳವಣಿಗೆಯು ಸಹಜವಾಗಿರದಿದ್ದರೆ, ಅದು ವಿಸ್ತಾರಗೊಂಡು ಕತ್ತಿನಲ್ಲಿ ಊತವುಂಟಾಗುತ್ತದೆ. ಇದೇ ಗಾಯಿಟರ್ ರೋಗ. ದೇಹಕ್ಕೆ ಅಗತ್ಯವಾಗುವ ಪ್ರಮಾಣದಲ್ಲಿ ಥೈರಾಕ್ಸಿನ್ನನ್ನು ಉತ್ಪಾದಿಸಲು ಥೈರಾಯಿಡ್ ಗ್ರಂಥಿಯು ಹೀಗೆ ಊದಿಕೊಳ್ಳುವುದು. ನೀರು ಮತ್ತು ಆಹಾರದೊಡನೆ ಅಯೋಡಿನ್ ಅಂಶ ಸೇವಿಸುವುದರಿಂದ ಗಾಯಿಟರನ್ನು ವಾಸಿ ಮಾಡಬಹುದು. ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಸಾಕಾದಷ್ಟು ಅಯೋಡಿನ್ ಇಲ್ಲದ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಗಾಯಿಟರ್ ಹೆಚ್ಚಾಗಿ ಕಂಡು ಬರುತ್ತದೆ. ಕೆಲವು ಪ್ರದೇಶಗಳಿಗೆ ಮಾತ್ರ ಈ ರೋಗ ಸೀಮಿತವಾಗಿರುವುದರಿಂದ ಇದನ್ನು ಸ್ಥಾನುಕ ವ್ಯಾದಿ ಎನ್ನುವರು. ಸಮುದ್ರದ ತೀರದಲ್ಲಿ ಅಯೋಡಿನ್ ಪ್ರಮಾಣದ ಕೊರತೆ ಇರುವುದಿಲ್ಲ.

ಮಿಕ್ಸೆಡಿಮಾ[ಬದಲಾಯಿಸಿ]

ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಕಾರ್ಯ ಕ್ಷೀಣವಾಗುವುದರಿಂದ ಈ ಪರಿಸ್ಥಿತಿಯುಂಟಾಗುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯ ಬೆಳವಣಿಗೆ ಕುಂಠಿತವಾಗುತ್ತದೆ.ಇದರ ಲಕ್ಷಣಗಳೆಂದರೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕುಂದುವಿಕೆ, ದೇಹದ ತೂಕ ಹೆಚ್ಚಾಗುವಿಕೆ, ಚರ್ಮ ದಪ್ಪವಾಗುವಿಕೆ, ಕಡಿಮೆಯಾದ ಹೃದಯ ಬಡಿತ ಮತ್ತು ತಗ್ಗಿದ ನೆಗಡಿ ನಿರೋಧಿಸುವ ಶಕ್ತಿ. ಇಂತಹ ವ್ಯಕ್ತಿಗೆ ಸೂಕ್ತ ಪ್ರಮಾಣದಲ್ಲಿ ಥೈರಾಕ್ಸಿನ್ನನ್ನು ಕೊಟ್ಟು ಈ ಪರಿಸ್ಥಿತಿಯನ್ನು ನಿಯಂತ್ರಿಸಬಹುದು.

ಕ್ರಿಟೆನಿಸಮ್[ಬದಲಾಯಿಸಿ]

ನವಜಾತ ಶಿಶುವಿನಲ್ಲಿ ಥೈರಾಕ್ಸಿನ್ ಉತ್ಪಾದನೆಯು ಕಡಿಮೆಯಾಗಿದ್ದು ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಕ್ರಿಟೆನಿಸಮ್ ರೋಗ ಉಂಟಾಗುತ್ತದೆ. ಬೆಳವಣಿಗೆಯು ಕುಂಠಿತವಾಗಿ ಮಾನಸಿಕ ಅಭಿವೃದ್ಧಿಯು ಬಹಳವಿಳಂಬವಾಗುತ್ತದೆ. ಈ ರೋಗದ ಇತರ ಲಕ್ಷಣಗಳೆಂದರೆ ಬಾಗಿರುವ ಕಾಲುಗಳು, ದೋಷಪೂರಿತ ಹಲ್ಲುಗಳು, ನಾಲಿಗೆಯು ವಿಸ್ತರಿಸಿ ಹೊರ ಚಾಚಿರುವುದು ಮತ್ತು ಚರ್ಮವು ಒರಟಾಗಿ ತೊಗಲಿನಂತಿರುವುದು. ಸಕಾಲಿಕ ವೈದ್ಯಕೀಯ ಚಿಕಿತ್ಸೆಯಿಂದ ಈ ರೋಗವನ್ನು ವಾಸಿ ಮಾಡಬಹುದು.

ಹೇಪರ್ ಥೈರಾಯಿಡಿಸಮ್[ಬದಲಾಯಿಸಿ]

ಥೈರಾಯಿಡ್ ಗ್ರಂಥಿಯ ವಿಸ್ತರಣೆಯಿಂದ ಅಥವಾ ಅದರ ಕಾರ್ಯಾತಿರೇಕದಿಂದ ಈ ಪರಿಸ್ಥಿತಿ ಒದಗುತ್ತದೆ. ಈ ಸನ್ನಿವೇಶದಲ್ಲಿ ಅಗತ್ಯವಾದ ಪ್ರಮಾಣಕ್ಕಿಂತಲೂ ಅಧಿಕವಾಗಿ ಥೈರಾಕ್ಸಿನ್ ಉತ್ಪತ್ತಿಯಾಗುತ್ತದೆ. ಇದರಿಂದ ಚಯಾಪಚನೆಯ ಕ್ರಿಯೆಯ ವೇಗವು ಹೆಚ್ಚಾಗಿ ಶಾಖೋತ್ಪಾದನೆಯೂ ಹೆಚ್ಚುತ್ತದೆ. ಈ ಪರಿಸ್ಥತಿಯ ಇತರ ಚಿಹ್ನೆಗಳೆಂದರೆ ಕಣ್ಣು ಗುಡ್ಡೆಗಳು ಮುಂದೆ ಚಾಚುವುದು, ರಕ್ತ ಒತ್ತಡದ ಏರಿಕೆ, ಮಾನಸಿಕ ಒತ್ತಡ, ಉದ್ರೇಕಗಿಳ್ಳುವ ಸ್ವಭಾವ, ವಿಪರೀತ ಬೆವರುವಿಕೆ, ದೇಹದ ತೂಕನಷ್ಟ ಮತ್ತು ಆಯಾಸ. ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಇದನ್ನು ಗುಣಪಡಿಸಬಹುದು.[೨]

ಉಲ್ಲೇಖ[ಬದಲಾಯಿಸಿ]

  1. http://www.webmd.com/women/guide/understanding-thyroid-problems-basics#1
  2. http://www.webmd.com/women/guide/understanding-thyroid-problems-basics#1