ಥಿಯಾಡರ್ ಕ್ರಾಮರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಥಿಯಾಡರ್ ಕ್ರಾಮರ್ (1897-1958) : ಆಸ್ಟ್ರಿಯದ ಜಾನಪದ ಕವಿ. ಇಂಗ್ಲೆಂಡಿನಲ್ಲಿ ನೆಲೆಸಿದವ.

ಥಿಯಾಡರ್ ಕ್ರಾಮರ್ ನ ಸ್ಮಾರಕ

ಬದುಕು[ಬದಲಾಯಿಸಿ]

ಹಳ್ಳಿಯ ವೈದ್ಯನ ಮಗನಾಗಿ ಹುಟ್ಟಿದ ಈತ ಒಂದನೆಯ ಮಹಾಯುದ್ಧದಲ್ಲಿ ಅಂಗವಿಕಲನಾದ. ಅನಂತರ ಪುಸ್ತಕ ವ್ಯಾಪಾರಿಯಾಗಿ ಜೀವನ ನಡೆಸಿದ. ಅದರಲ್ಲೂ ವಿಫಲನಾಗಿ ಸಣ್ಣ ಪುಟ್ಟ ಹುದ್ದೆಗಳಲ್ಲಿದ್ದ. ಆದರೆ 1930ರಲ್ಲಿ ಆದ ಆರ್ಥಿಕಮೌಲ್ಯ ಕುಸಿತದಿಂದಾಗಿ ಕೆಲಸ ಕಳೆದುಕೊಂಡ. ಎರಡನೆಯ ಮಹಾಯುದ್ಧದಲ್ಲಿ ಹಿಟ್ಲರ್ ಆಸ್ಟ್ರಿಯವನ್ನು ಆಕ್ರಮಿಸಿದಾಗ, ನಾಜಿಗಳಿಂದ ತಪ್ಪಿಸಿಕೊಂಡು ಇಂಗ್ಲೆಂಡಿಗೆ ತೆರಳಿ, ಅಲ್ಲಿ ಗಿಲ್‍ಫರ್ಡ್ ವೃತ್ತಿಶಿಕ್ಷಣಶಾಲೆಯಲ್ಲಿ ಗ್ರಂಥಪಾಲನಾದ.

ಹೋರಾಟ ಮತ್ತು ಸಾಹಿತ್ಯ[ಬದಲಾಯಿಸಿ]

ಕ್ರಾಮರನದು ಹೋರಾಟದ ಬದುಕು. ವಿಧಿಯೆದುರು ಸೆಣಸಿದುದೇ ಅಲ್ಲದೆ, ಕ್ರೌರ್ಯ, ದಬ್ಬಾಳಿಕೆ, ಕೃತಕತೆಯ ವಿರುದ್ಧವೂ ಈತ ಹೋರಾಡಿದ. ತನ್ನ ಜೀವನದುದ್ದಕ್ಕೂ ದುರ್ಬಲರು ಹಾಗೂ ಶ್ರೀಸಾಮಾನ್ಯರ ಪರವಾಗಿ ಕಾದಾಡಿದ. ಆದರೂ ಈತ ತನ್ನ ಲೇಖಣಿಯನ್ನು ಸಮಾಜದ ವಿರುದ್ಧ ಬಳಸಿದವನಲ್ಲ. ಆಸ್ಟ್ರಿಯದ ವಿಯನ್ನ ನಗರದ ಹೊರವಲಯಗಳಲ್ಲಿ ವಾಸಿಸುವ ಜನರ ಜೀವನವನ್ನು ಈತ ಯಾವ ವಕ್ರೋಕ್ತಿಯೂ ಇಲ್ಲದೆ ಸರಳವಾಗಿ ನಿರೂಪಿಸಿದ್ದಾನೆ, ತನ್ನ ಕೃತಿಗಳಲ್ಲಿ ಜನಜೀವನಕ್ಕೆ ಕೈಗನ್ನಡಿಯಾದ ಈತನ ಕೃತಿಗಳು ಸಾಹಿತ್ಯ ಲೋಕದಲ್ಲಿ ಕೋಲಾಹಲವನ್ನುಂಟು ಮಾಡಿ ಯಶಸ್ಸು ತಂದವು. ಅನೇಕ ಪ್ರಶಸ್ತಿಗಳು ಈತನ ಪಾಲಿನವಾದವು. ಇಂಗ್ಲೆಂಡಿನಲ್ಲಿ ನೆಲೆಸಿದ್ದರೂ ಕ್ರಾಮರ್‍ನ ಹೃದಯ ವಿಯನ್ನದಲ್ಲೇ ಇತ್ತು. ಆಧುನಿಕ ಜಾನಪದ ಗೀತೆಗಳನ್ನು ಸರಳ ಹಾಗೂ ಮಧುರವಾದ ಶೈಲಿಯಲ್ಲಿ ಬರೆದ ಕೆಲವೇ ಕವಿಗಳಲ್ಲಿ ಈತನೂ ಒಬ್ಬ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: