ವಿಷಯಕ್ಕೆ ಹೋಗು

ಥಾರ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥಾರ್

ಥಾರ್೨೦೧೧ರಲ್ಲಿ ಅಮೇರಿಕನ್ ಸೂಪರ್‍ಹಿರೊ ಚಲನಚಿತ್ರವಾದ ಥಾರ್ ಮಾರ್‍ವೆಲ್‍ ಕಾಮಿಕ್ಸ್‍ನ ಮುಖ್ಯ ಪಾತ್ರವಾದ ಥಾರ್ ಮೇಲೆ ಚಿತ್ರಿಸಲಾಗಿದೆ.ಮಾರ್‍ವೆಲ್‍ ಸಿನಮ್ಯಾಟಿಕ್ ಯುನಿವರ್ಸ್‍ ಹಾಗು ಪ್ಯಾರಮೌಂಟ್ ಪಿಚರ್ಸ್ ಈ ಚಿತ್ರವನ್ನು ನಿರ್ಮಾಪಿಸಿ ಮತ್ತು ವಿತರಣೆ ಮಾಡಿದ್ದಾರೆ.[]ಕೆನ್ನೆತ್ ಬ್ರಾನಘ್ ಈ ಚಿತ್ರಕ್ಕೆ ನಿರ್ಮಾಪಕರು, ಅಶ್ಲೇಯ್ ಎಡ್‍ವರ್ಡ್ ಮಿಲ್ಲರ್‍,ಡಾನ್ ಪೇನ್ ಮತ್ತು ಜ಼್ಯಕ್ ಸ್ಟೆನ್ಟ್ಜ್ರರವರು ಬರೆದಿದ್ದಾರೆ. ಕ್ರಿಸ್‍ ಹೆಮ್ಸ್‍ವಾರ್ಥ್ ಮುಖ್ಯ ನಟನಾಗಿ ನಾಟಾಲಿ ಪೊರ್ಟ್‍ಮ್ಯಾನ್ ನಟಿಯಾಗಿ ಭಾಗವಹಿಸಿದ್ದರೆ.[]ಟಾಮ್ ಹಿಡ್‍ಲ್‍ಸ್ಟನ್,ಸ್ಟೆಲ್ಲಾನ್,ಕಾಮ್ ಫ಼ಿಓರೆ,ಇಡ್ರಿಸ್ ಎಲ್ಬಾ,ರೇ ಸ್ಟಿವನ್ಸನ್,ಕೇಟ್ ಡೆನ್‍ನಿನ್ಗಸ್,ರೆನೆ ರುಸೋ,ಆಂಥೋನಿ ಹಾಪ್ಕಿನ್ಸ್ ಚಿತ್ರಕೊಟಕ್ಕೆ ಸೇರಿದವರು.ಚಿತ್ರದಲ್ಲಿ ಥಾರ್ ಭೊಮಿಯ ಮೇಲೆ ಅಸ್ಗರ್ಡ್‍ನಿಂದ ಬಹಿಷ್ಕರಿಸಲಾಗಿದ್ದಾನೆ,ಶಕ್ತಿಹೀನನಾಗಿದ್ದಾನೆ,ತನ್ನ ಚಮತ್ಕಾರಿ ಸುತ್ತಿಗೆಯನ್ನು ಕಳೆದುಕೊಳ್ಳುತಾನೆ.ತಮ್ಮನಾದ ಲೋಕಿ ದ್ವೇಷಬಹೆದು ಅಸ್ಗರ್ಡ್‍ನ ಕಿರೀಟವನ್ನು ಪಡೆಯಲು ಪಿತೂರಿ ನೆಡೆಸಿರುತ್ತಾನೆ. ಥಾರ್ ತನ್ನ ಶಕ್ತಿಪ್ರದರ್ಶನೆ ಮಾಡಿ ಈ ಕಿರೀಟವನ್ನು ಪಡೆಯಲೇ ಬೇಕು ಇಲ್ಲದಿದ್ದರೆ ಮರುಕವಿಲ್ಲದ ಲೋಕಿಗೆ ಆ ಪದವಿ ಸಿಗುವುದು. ಈ ಚಿತ್ರವನ್ನು ಸ್ಯಮ್ ರೈಮಿ ೧೯೯೧ರಲ್ಲೆ ಪ್ರಾರಂಭಿಸಿ ನಿಲ್ಲಿಸಿದ್ದರು.೨೦೧೦ರಲ್ಲೆ ಬಿಡುಗಡೆಯಾಗ ಬೇಕಿದ್ದ ಈ ಚಿತ್ರವನ್ನು ೨೦೧೧ಕ್ಕೆ ನೂಕಲಾಗಿತ್ತು. ನಿರ್ಮಾಪಕರ ಬದಲಾವಣೆ ಈ ಅಡ್ಡಿಗೆ ಕಾರಣವಾಗಿತ್ತು.ಕ್ಯಾಲಿಫೋರ್ನಿಯಾ ಮತ್ತು ನ್ಯೂ ಮೆ‍ಕ್ಸಿಕೊದಲ್ಲಿ ಚಿತ್ರೀಕರಣ ನೆಡೆಸಲಾಗಿತ್ತು.ನಂತರ ೩ಡಿ ಚಿತ್ರಕ್ಕೆ ರೂಪಿಸಲಾಗಿತ್ತು. ಈ ಚಿತ್ರವನ್ನು ಏಪ್ರಿಲ್‍ ೧೧,೨೦೧೧ರಂದು ಸಿಡನಿ,ಆಸ್ಟ್ರೇಲಿಯಾ ಮತ್ತು ಮೇ ೬,೨೦೧೧ರಂದು ಯುನೈಟೆಡ್ ಸ್ಟೆಟ್ಸ್‍ನಲ್ಲಿ ಬಿಡುಗಡೆ ಮಾಡಿದರು.ಅತಿ ಹೆಚ್ಚು ಜನಪ್ರಿಯತೆ ಹಾಗು ಹಣವನ್ನುಗಳಿಸಿದ ಈ ಚಿತ್ರದ ೨ ಉತ್ತರಭಾಗಗಳನ್ನು ಬಿಡುಗಡೆ ಮಾಡಲಾಯಿತು. ಥಾರ್:ದಿ ಡಾರ್ಕ್ ವರ್ಲ್ಡ್ ನವೆಂಬರ್ ೮,೨೦೧೩ ಮತ್ತು ಥಾರ್:ರಾಗ್ನರಾಕ್ ನವೆಂಬರ್ ೩,೨೦೧೭ರಂದು ಬಿಡುಗಡೆ ಮಾಡಲಾಯಿತು.

ಕಥಾವಸ್ತು

[ಬದಲಾಯಿಸಿ]

೯೬೫ ಎಡಿ ಅಲ್ಲಿ,ಓಡಿನ್,ಅಸ್ಗರ್ಡ್‍ನ ರಾಜನು ಜೊಟುಹ್ನೆಯಿಮ್ ಫ಼್ರಾಸ್ಟ್ ಜೈಯಂಟ್ಸ್ ಹಾಗು ಅವರ ನಾಯಕನಾದ ಲುಫ್ಯ್‍ದ ಮೇಲೆ ಯುದ್ಧ ಮಾಡುತ್ತಾನೆ.ಅವರನ್ನು ೯ ಲೋಕಗಳನ್ನು ಪಡೆಯದಂತೆ ಮಾಡುತ್ತಾನೆ.ಫ಼್ರಾಸ್ಟ್ ಜೈಯಂಟ್ಸ್‍ರವರ್ ಶಕ್ತಿಕೇಂದ್ರವಾಗಿದ್ದ ಕ್ಯಾಸ್ಕೆಟ್ ಆಫ಼್ ವಿಂಟ್‍ರ್ಸನನ್ನು ವಶಕ್ಕೆ ಪಡೆಯುತ್ತಾರೆ.ನಂತರ ಹಲವು ವರ್ಷಗಳು ಕಳೆದ ಮೇಲೆ ಥಾರ್ ರಾಜನಾಗುದಕ್ಕೆ ಎಲ್ಲಾ ಸಿದ್ಧತೆಯನ್ನು ನೆಡೆಸಿರುತ್ತಾನೆ ಆದರೆ ಮತ್ತೆ ಫ಼್ರಾಸ್ಟ್ ಜೈಯಂಟ್ಸ ಆಕ್ರಮಣದಿಂದ ಎಲ್ಲಾ ಸಿದ್ಧತೆಗಳು ವ್ಯರ್ಥವಾಗುತ್ತವೆ.ಥಾರ್‍ನನ್ನು ಲುಫ್ಯನ ಹತ್ತಿರ ಕಳಿಸಿ,ಮಹನಾದ ಲೋಕಿ ಹಾಗು ಮೂವರು ಸೈನಿಕರಾದ ವೊಲ್‍ಸ್ಟಾಗ್,ಫ಼ಾನ್ಡ್‍ರಾಲ್,ಹೊಗನ್ರನ್ನು ರಾಜ ಥಾರ್ ರಕ್ಷಣೆಗಾಗಿ ಕಳುಹಿಸುತ್ತಾನೆ. ಆದರೆ ಅಲ್ಲಿ ಯುದ್ಧ ಪ್ರಾರಂಭವಾಗುತ್ತದೆ.ರಾಜನೇ ಬಂದು ಎಲ್ಲರನ್ನು ರಕ್ಷಿಸುತ್ತಾನೆ. ಆದರೆ ಥಾರ್‍ನಿಂದ ಆಗಿರುವ ಈ ಯುದ್ಧದ ಪರಿನಾಮವಾಗಿ ಥಾರ್‍ನನ್ನು ಶಕ್ತಿಹೀನನಾಗಿ ಹಾಗು ಅವನ ಸುತ್ತಿಗೆಯನ್ನು ಸೊಕ್ತವಾದವನಿಗೆ ಮಾತ್ರ ದೊರೆಯಬೇಕು ಎಂದು ಮಂತ್ರವನ್ನು ಹಾಕಿ ರಾಜನು ಥಾರ್‍ ಮತ್ತು ಅವನ ಸುತ್ತಿಗೆಯನ್ನು ಭೂಮಿಗೆ ಬಹಿಷ್ಕರಿಸುತ್ತಾನೆ. ಥಾರ್ ಮೆಕ್ಸಿಕೋನಲ್ಲಿ ಸಾಧಾರಣ ಮಾನವನಾಗಿ ಜಾಗೃನಾಗುತ್ತಾನೆ. ಅವನ ಸುತ್ತಿಗೆಯು ಶೀಲ್ಡ್‍ಯಂಬ ಸಂಸ್ಥೆಯ ನಾಯಕನಾದ ಫಿಲ್ ಕೌಲ್ಸನ ತನ್ನ ಮಾರ್ಗದರ್ಶನದಲ್ಲಿ ಹಿಡಿಸಿರುತ್ತಾನೆ. ಫಿಲ್ ಡಾ|ಜೆನ್ ಫಾಸ್ಟರ್ ಅವರ ಹಲವು ಅಂತರಿಕ್ಷ ಸಂಶೋಧನೆಯನ್ನು ದುರುಪಯೋಗಿಸಿ ಥಾರ್‍ ಬಿದ್ದ ಆ ವರ್ಮ್ ಹೊಲ್‍ನ ಬಗ್ಗೆ ತಿಳಿದುಕೋಳುತ್ತಾನೆ. ಫಾಸ್ಟರ್,ಡಾರ್ಸಿ ಮತ್ತು ಶಿಕ್ಷಕ ಏರಿಕ್ ಥಾರ್‍ನನ್ನು ರಕ್ಷಿಸುತ್ತಾರೆ.ಥಾರ್ ತನ್ನ ಸುತ್ತಿಗೆಯನ್ನು ಪಡೆಯಲು ಯತ್ನಿಸಿದಾಗ ಅವನ ಕೈಯಿಂದ ಸುತ್ತಿಗೆ ಅಲ್ಲಾಡುವುದಿಲ್ಲಾ. ಫಿಲ್ ಥಾರ್‍ನನ್ನು ಬಂಧಿಸುತ್ತಾನೆ.ತನ್ನ ಹಣೆಬರಹವನ್ನು ಒಪ್ಪಿಕೊಂಡು ಫಾಸ್ಟರ್‍ಳ ಜೊತೆ ಪ್ರೇಮಕ್ಕೆ ಶರಣಾಗುತ್ತಾನೆ. ಅಸ್ಗರ್ಡ್‍ನಲ್ಲಿ ಲೋಕಿ ತನ್ನ ನಿಜವಾದ ತಂದೆ ಲುಫ್ಯಯಂದು ತಿಳಿದು ಆಕ್ರೋಶದಿಂದ ಓಡಿನ್ ಓಡಿನ್ ಸ್ಲೀಪ್‍ನಲ್ಲಿ ಮುಳುಗಿದಾಗ ಲುಫ್ಯ ಓಡಿನ್‍ನನ್ನು ಸಾಯಿಸಲು ಪಿತೂರಿ ನೆಡೆಸುತ್ತಾನೆ.ಮೂರು ಸೈನಿಕರು ಇದನೆಲ್ಲಾ ಕಂಡು ಥಾರ್‍ನನ್ನು ಅಸ್ಗರ್ಡ್‍ಗೆ ತರಲು ಹೆಇಂಡಾಲ್‍ನನ್ನು ಬೈಫ್ರ್ವ್ಸ್ಟ್ ತೆರೆದು ಅವರನ್ನು ಭೂಮಿಗೆ ಹೋಗಲು ದಾರಿ ಮಾಡಬೇಕುಯಂದು ಬಯಸುತ್ತಾರೆ.ಇದನ್ನು ತಿಳಿದ ಲೋಕಿ ಒಬ್ಬ ವಿನಾಶಕಾರಿ ರಾಕ್ಶಸನನ್ನ ಭೂಮಿಗೆ ಕಳಿಸುತ್ತಾನೆ. ವೀರ ಸೈನಿಕರನ್ನು ಸೊಲಿಸಿ ವಿಜಯನಾದ ರಾಕ್ಷಸನನ್ನು ಕಂಡು ಥಾರ್‍ ಆತ್ಮಸಮರ್ಪಣೆಯನ್ನು ಮಾಡಲು ಯತ್ನಿಸಿದಾಗ ಅವನ ಸುತ್ತಿಗೆಯೂ ಈ ತ್ಯಾಗವನ್ನು ಕಂಡು ಥಾರ್‍ ಸೂಕ್ತನೆಂದು ಪರಿಗನಿಸಿ ಥಾರ್ ಹತ್ತಿರ ಬರುತ್ತದೆ.ಥಾರ್‍ನ ಶಕ್ತಿಯೂ ಹಿಂದಿರುಗುತ್ತದೆ.ಆ ರಾಕ್ಷಸನನ್ನ ಸಂಹರಿಸಿ ಅಸ್ಗರ್ಡ್‍ಗೆ ತೆರಳುತ್ತಾನೆ.ಲೋಕಿಯನ್ನು ಸಿಂಹಾಸನದ ದೊರೆಯಾಗಿ ಕಂಡು ಉಗ್ರನಾಗಿ ಥಾರ್‍ ಆತನನ್ನು ಸಂಹರಿಸಲು ಪ್ರಯತ್ನಿಸುತ್ತಾನೆ.ಆದರೆ ಇಬ್ಬರು ಬೈಫ್ರ್ವ್ಸ್ಟ್‍ನ ಸೆಳೆತಕ್ಕೆ ಸಿಲುಕಿ ಹೊರಬರಲು ಯತ್ನಿಸುತ್ತಾರೆ.ರಾಜನು ಇಬ್ಬರನ್ನು ರಕ್ಷಿಸಲು ಬಂದಾಗ ಲೋಕಿ ತನ್ನ ರಾಜನಾಗುವ ಆಸೆಯನ್ನು ತಂದೆಯ ಬಳಿ ಹೇಳಿಕೊಳ್ಳುತ್ತಾನೆ.ರಾಜನು ನಿರಾಕರಿಸಿದಾಗ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾನೆ. ಲುಫ್ಯನ ಸಹಾಯದಿಂದ ಅವನನ್ನೇ ಛಲಿಸಿ ಸಾಯಿಸಿದ ಕುಮಾರನು ಅಂತ್ಯವನ್ನು ಕಾಣುತ್ತಾನೆ. ಭೂಮಿಯ ಮೇಲೆ ನಿಕ್‍ ಫಿಯುರಿ ನೀಲವಾದ ಒಂದು ಆಕರ್ಷಕವಾದ ಘನದ ಕುರಿತು ಚರ್ಚಿಸುತ್ತಾನೆ.

ಉಲ್ಲೇಖ

[ಬದಲಾಯಿಸಿ]

[] [] []