ತ್ರಿವಿಕ್ರಮ್ ಶೀನಿವಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತ್ರಿವಿಕ್ರಮ್ ಶೀನಿವಾಸ್
ಜನನ
ತ್ರಿವಿಕ್ರಮ್ ಶೀನಿವಾಸ್

ಹೈದರಾಬಾದ್
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆB.Sc
ಉದ್ಯೋಗನಿರ್ದೇಶಕ


ತ್ರಿವಿಕ್ರಮ್ ಅವರು " ಅಕೆಲ್ಲ ನಾಗ ಶೀನಿವಾಸ ಶರ್ಮ" ಎಂದು ಆಂಧ್ರಪ್ರದೇಶದ ತೆಲಗು ಮಾತನಾದುವ ಕುಟುಂಬದವರಾದ "ಉದಯ ಭಸ್ಕರ್ ರಾವ್" ಮತ್ತು "ನರಸಮ್ಮ" ಅವರ ಮಗನಾಗಿ 'ಭಿಮವರಂ' ಅಲ್ಲಿ ಜನನ ಪಡೆದಿದ್ದರು. ಅವರು "ಬಿ.ಎಂ.ಆರ್ ಪ್ರೌಢಶಾಲೆ" ನಲ್ಲಿ ಶಾಲೆಯನ್ನು ಮುಗಿಸಿದರು. ಅವರ ಇಂಟರ್ಮೀಡಿಯೇಟ್ ಅನ್ನು ಭೀಮಾವರದ " ಡಿ. ಎಸ್.ಆರ್ ಕಾಲೇಜಿ" ನಲ್ಲಿ ಮಾಡಿದ್ದರು. ಅದೇ "ಡಿ. ಎಸ್. ಅರ್ ಕಾಲೆಜಿ" ನಲ್ಲಿ "ಬಿ.ಎಸ್ ಸಿ" ಮುಗಿಸಿದರು. ಅವರು ......................ಪದವಿಯನ್ನು ಪರಮಣು ಭೌತಶಾಸ್ತ್ರದಲ್ಲಿ ಚಿನ್ನದ ಪದವಿಯನ್ನು ಆಂಧ್ರ ಯೂನಿವೆರ್ಸಿಟಿಯಲ್ಲಿ ಪಡೆದರು.

ತ್ರಿವಿಕ್ರಮ್ ಮತ್ತು ನಟ "ಸುನಿಲ್" ಅವರು ಭೀಮವರಂನ ಒಂದೇ ಕಾಲೇಜಿನಿಂದು ಪದವಿ ಪಡೆದಿದ್ದರು. ಅವರು ಆತ್ಮೀಯ ಗೆಲೆಯರಾಗಿದ್ದರು ಮತ್ತು ಸಿನಿಮಾರಂಗದ ಜೀವನದ ಮೊದಲನೆಯ ಸಮಯದಲ್ಲಿ ಒಂದೇ ಕೊಠಡಿಯಲ್ಲಿ ನಿವಾಸಿಸುತ್ತಿದ್ದರು. ಸುನಿಲ್ ಅವರು ತ್ರಿವಿಕ್ರಮ್ ಅವರನ್ನು ಬಹಳ ಪ್ರಭಾವಿಕ ಮನುಷ್ಯ ಎಂದು ಹೆಳುತ್ತಾರೆ. ತ್ರಿವಿಕ್ರಮ್ ಶಾಲೆಯಲ್ಲಿ ಅಧ್ಯಾಪಕರಾಗಿ ಕೊಡ ಕೆಲಸ ಮಾಡುತ್ತಿದ್ದರು. ಅವರು ಗಣಿತ ಮತ್ತು ವಿಜ್ಞಾನ ಹೇಳಿಕೊಡುತ್ತಿದ್ದರು. ಅವರು ಪಾಠ ಮಾದುವ ಪದ್ದತಿ ಬಹಳ ಹೊಸ ರೀತಿಯದಾಗಿದ್ದು, ಅವರು ಹೇಳಿ ಕೊಡುತ್ತಿದ್ದು ಮಕ್ಕಳಿಗೆ ಬಹಳ ಸುಲಭವಾಗಿ ಅರ್ಥವಾಗುತ್ತಿತ್ತು. ನಂತರ ಅವರು ಹೈದರಾಬಾದಿಗೆ ಬಂದು, ಸುನಿಲ ರವರ ಜೊತೆ ವಾಸಿಸುತಾ, ದೈನಿಕ ಧಾರವಾಹಿಗಳಿಗೆ ಕಥೆ ಬರೆಯುತ್ತಿದ್ದರು.

ಸುನಿಲ್ ಅವರನ್ನು ನಟ "ಗೌತಮ್ ರಾಜು" ಅವರಿಗೆ ಪರಿಚಯಿಸಿದರು, ಅವರನ್ನು ತಮ್ಮ ಮಕ್ಕಳಿಗೆ "ಭೊದನ" ಹೇಳಿ ಕೊಡುವಂತೆ ಕೇಳಿಕೊಂದರು.ಇದರ ಅಂತರದ ಸಮಯದಲ್ಲಿ ತ್ರಿವಿಕ್ರಮ್ ಅವರು "ರೋಡ್" ಎಂಬ ಸಣ್ಣ ಕಥೆಯು ತೆಲಗು ವಾರದ ಮುಖ್ಯ ಪತಿಕೆ ಒಂದರಲ್ಲಿ ಬಿಡುಗಡೆ ಆಯಿತು. ಅವರನ್ನು ಚಿಯಾನ್ ವಿಕ್ರಮ್ ನಟಿಸುವ ಒಂದು ಸಿನಿಮಾಗೆ ಆಮಂರ್ತಿಸಿದರು. ಆ ಚಿತ್ರ "ಸ್ಲಿಪಿಂಗ್ ವಿಡ್ ದಿ ಎನಿಮಿ" ಎಂಬ ಒಂದು ಗ್ರಂಥದ ಕುರಿತಾಗಿತ್ತು.

ವೈಯಕ್ತಿಕ ಜೀವನ[ಬದಲಾಯಿಸಿ]

ತ್ರಿವಿಕ್ರಮ್ ಅವರು ಶ್ರೀ ವೆನ್ನೆಲಾ ಸೀತಾ ರಾಮ ಶಾಸ್ತ್ರಿ ಅವರ ಸಹೋದರಿಯಾ "ಸೌಜನ್ಯ"ಅನ್ನು ೧೧ ಅಕಟೋಬರ್ ೨೦೦೨ ಅಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು.

ವೃತ್ತಿ[ಬದಲಾಯಿಸಿ]

ಸ್ಕ್ರೀನ್ ರೈಟಿಂಗ್ ಮತ್ತು ಡಯಲಾಗ್ ರೈಟಿಂಗ್

ತ್ರಿವಿಕ್ರಮ್ ಅವರಿಗೆ ಸಿನಿಮಾಗಳಿಗೆ ಡಯಲಾಗ್ ಬರೆಯುವ ಆಲೋಚನೆಗಳು ಇರಲಿಲ್ಲ, ಆದರೆ ನಿರ್ದೇಶನ ಮಾಡುವ ಆಸಕ್ತಿ ಇತ್ತು. ನಟ ಗೌತಮ್ ರಾಜು ಅವರು ತ್ರಿವಿಕ್ರಮಾ ಶ್ರೀನಿವಾಸ್ ಅವರನ್ನು "ಟಿ. ಡಿ. ವಿ ಪ್ರಸಾದ್" ಅವರಿಗೆ ಪರಿಚಯಿಸಿದರು, ಆದ್ದರಿಂದ ತ್ರಿವಿಕ್ರಮ್ ಅವ್ರನ್ನು ಮಾಡುತ್ತಿದ್ದ ಸಿನಿಮಾದ ಕ್ಲಯ್ ಮ್ಯಕ್ಸ್ ಗೆ ಸಂಭಾಷನೆ ಬರೆಯಲು ಹೇಳಿದರು. ಪ್ರಸಾದ್ ಅವರು ತ್ರಿವಿಕ್ರಮ್ ಅವರ ಕೆಲಸದಿಂದ ಪ್ರಭಾವಿಕರಾಗಿ, "ಕೆ. ವಿಜಯ್ ಭಸ್ಕರ್" ಅವರ ಜೋತೆ ಸಹ ನಿರ್ದೇಶಕರಾಗಿ ಕೆಲಸ ಮಾದಲು ಹೇಳಿದರು. ಈ ಸಿನಿಮಾ ಮಾದುವ ಸಮಯದಲ್ಲಿ ತ್ರಿವಿಕ್ರಮ್ ಅವರಿಗೆ "ಸ್ವಯಂವರಂ" ಸಿನಿಮಾಗೆ ಡಯಲಾಗ್ ಬರೆಯಲು ಆಹ್ವಾನಿಸಿದರು. "ಸ್ವಯಂವರಂ" ಚಿತ್ರಕ್ಕೆ ಅವರು ಮೊದಲ ಭಾರಿಗೆ ಡಯಲಾಗನ್ನು ಬರೆಯಲು ಅವಕಾಶ ದೊರೆಯಿತು.

"ಸ್ವಯಂವರಂ" ಚಿತ್ರಕ್ಕೆ ಇವರು ಮೊದಲ ಭಾರಿಗೆ ಸಂಭಾಷಣೆ ಬರೆದಿದ್ದರೂ, ಮೊದಲನೆಯಾಗಿ ಬಿಡುಗಡೆ ಆಗಿದ್ದ ಚಿತ್ರ "ನುವ್ವೆ ಕಾವಾಲಿ" . ತ್ರಿವಿಕ್ರಮ್ ಅವರು "ಚಿರು ನವ್ವುತೋ", "ನುವ್ವು ನಾಕು ನಚ್ಚವು", "ಮಲ್ಲೆಶ್ವರಿ", ಮತ್ತು "ಮನ್ ಮಥುಡು" ಚಿತ್ರಗಲಿಗೆ ಡಯಲಾಗ್ ಬರೆಯಲು ಹೋಗಿದ್ದರು. ಅವರು ತೆಲೆಗು ಚಿತ್ರ "ವಾಸು" ಎನ್ನುವುದಕ್ಕೆ ದಯಲಾಗ್ ಬರೆದರು. ಈ ಚಿತ್ರದ ನಟ "ವೆಂಕಟೇಶ್"ಮತ್ತು "ಭುಮಿಕಾ ಚಾವಲ್" ಇದನ್ನು ನಿರ್ದೇಶಿಸಿದವರು "ವಿ. ಕರುನಾಕರನ್". ಅವರು ಡಯಲಾಗ್ ಬರೆಹಗಾರ ಆಗಿದ್ದರೂ, ಹಾಡನ್ನು ಸಹ ಬರೆದಿದ್ದರು, "ಒಕ ರಾಜು ಒಕ ರಾನಿ" ಚಿತ್ರಕ್ಕೆ ಹಾಡನ್ನು ಬರೆದಿದ್ದರು. ಅವರ ಚೊಚ್ಛಲ ಚಿತ್ರವಾದ "ನುವ್ವೇ ನುವ್ವೇ" ಅಲ್ಲಿ "ಕಂಪ್ಯೂಟರ್ಸು ಅಡರ್ಸು ಸೈನ್ ಸು"ಎಂಬ ಹಾಡಿನ ಒಂದು ಭಾಗವನ್ನು ಹಾದಿದರು.

ಸಿನಿಮಾರಂಗ ಮತ್ತು ಶೈಲಿ[ಬದಲಾಯಿಸಿ]

ತ್ರಿವಿಕ್ರಮ್ ಅವರಿಗೆ ಅವರ ಚೊಚ್ಚಲ ಚಿತ್ರವಾದ "ನುವ್ವೇ ನುವ್ವೇ" ಚಿತ್ರಕ್ಕೆ ಪ್ರಶಂಸೆ ಪಡೆದಿದ್ದರು. ಆ ಚಿತ್ರದ ಮನೆಯವರ ಅಕ್ಕರೆ ಮತ್ತು ಹೆಚ್ಚು ಪ್ರಮಾಣದ ಹಾಸ್ಯಕ್ಕೆ ಪ್ರಶಂಸೆ ನೀಡಿದ್ದರು. ಇದರ ನಂತರ "ಅತಡು" ಚಿತ್ರದ ತಾಂತ್ರಿಕ ಪ್ರಮಾಣಿತಕ್ಕೆ ಪ್ರಶಂಸೆ ಪಡೆದಿತ್ತು. ಈ ಚಿತ್ರದಿಂದ ರೊ. ೧೪೦ ಮಿಲಿಯನ್ ಅಷ್ಟು ದೊರಕಿ, ೨೦೦೫ರ ಚಿತ್ರರಂಗದ ಒಂದು ದೊಡ್ದ ತೆಲುಗು ಚಿತ್ರ. ಈ ಚಿತ್ರವು ತಮಿಳು, ಮಲಯಳಂ ಮತ್ತು ಹಿಂದಿ ಭಾಷೆಗೆ ಭಾಷಾಂತರಿಸಿದ್ದಾರೆ. ಈ ಚಿತ್ರವು ತೆಲುಗು ಚಿತ್ರಗಳ ಮೊದಲನೆಯ ಚಿತ್ರವು ಪೊಲ್ಯಾಂಡ್ ಅಲ್ಲಿ ಬಿಡುಗಡೆ ಆಗಿತ್ತು.

ತ್ರಿವಿಕ್ರಮ್ ಅವರ ನಂತರದ ಚಿತ್ರ "ಜಲ್ಸಾ" ಅತಿ ಹೆಚ್ಚಾಗಿ ನಿರೀಕ್ಷೆಯಲ್ಲಿದ್ದು ೨೦೦೮ರಲ್ಲಿ ೧೦೦೦ ರಂಗಮಂದಿರಗಳಲ್ಲಿ ಬಿದುಗದೆ ಆಗಿತ್ತು. "ಜಲ್ಸ" ಚಿತ್ರದ ನಂತರ "ಖಲೇಜಾ" ಚಿತ್ರ ೭ ಅಕ್ಟೋಬರ್ ೨೦೧೦ರಂದು ಬಿದುಗಡೆ ಆಯಿತು. ಅದರಲ್ಲಿ ತ್ರಿವಿಕ್ರಮ್ "ಮಹೇಶ್ ಬಾಬು" ನಿರ್ದೇಶನ ಮಾದಿದ್ದರು.

ಇದರ ನಂತರ ಚಿತ್ರ "ಜುಲಾಯಿ" ಅದರಲ್ಲಿ ನಟನಾಗಿ "ಅಲ್ಲೂ ಅರ್ಜುನ್" ಮತ್ತು ನಟಿಯಾಗಿ "ಇಲಿಯಾನ" ಕೂಡ ಒಂದು ದೊಡ್ಡ ಚರಿತ್ರೆ ಸ್ರುಷ್ಟಿಸಿತ್ತು ತೆಲಗು ಚಿತ್ರರಂಗದಲ್ಲಿ. ನಂತರ "ಅತ್ತಾರಿಂಟಿಕಿ ದಾರೆದಿ" ಎಂಬ ಚಿತ್ರದಲ್ಲಿ "ಪವನ್ ಕಲ್ಯಣ್" ಮತ್ತು "ಸಮಂತಾ ರುತ್ ಪ್ರಭು" ನಟಿಸಿದರು. ಈ ಚಿತ್ರವು ಹೆಚ್ಚಿನ ನಿರೀಕ್ಷನೆಯಲ್ಲಿ ಬಿಡುಗಡೆಯಾಗಿ, ತೆಲಗು ಚಿತ್ರರಂಗದಲ್ಲಿ ಒಂದು ಸಾಧನೆಯನ್ನು ಮಾಡಿತ್ತು. ಈ ಚಿತ್ರದ ಒಂದು ಕಳ್ಳತನದ ವಿಡಿಯೋ ಬಿಡುಗಡೆಯಾಗಿದ್ದರೂ, ೯೦ ನಿಮಿಷದ ಚಿತ್ರ ಬಿಡುಗಡೆಯಾಗಿದ್ದೂ ಸಹ ೧೦೦ ಕೊಟಿ ಲಾಭ ಪಡೆಯಿತು. ಅವರ ನಂತರ ಚಿತ್ರ "ಸನ್ ಆಫ್ ಸತ್ಯ ಮೂರ್ತಿ" ನಿರ್ದೇಶಿಸಿದರು. ಅದರಲ್ಲಿ "ಅಲ್ಲೂ ಅರ್ಜುನ್" ಮತ್ತು "ಸಮಂತಾ ರುತ್ ಪ್ರಭು" ನಟ ನಟಿಯರಾಗಿ ನಟಿಸಿದರು. ಈ ಚಿತ್ರವು ೯ ಏಪ್ರಿಲ್ ೨೦೧೫ ಅಂದು ಬಿದುಗಡೆಯಾಗಿ ಜನರಿಂದ ಮೆಚ್ಚುಗೆ ಪಡೆದಿದ್ದರು. ಅವರ ಇತ್ತೀಚಿನ ಚಿತ್ರ "ಅ ಆ" ಚಿತ್ರದ ನಿರ್ದೇಶನ ಮಾಡಿದ್ದು ಇದರ ನಟ ನಟಿಯಾಗಿ "ನಿತಿನ್" ಮತ್ತು "ಸಮಂತಾ" ಸಹ ಜನರ ಮೆಚ್ಚುಗೆ ಪಡೆದಿತ್ತು.

ಪ್ರಶಸ್ತಿಗಳು[ಬದಲಾಯಿಸಿ]

ನಂದಿ ಪ್ರಶಸ್ತಿ[ಬದಲಾಯಿಸಿ]

  • ೨೦೦೦ರಲ್ಲಿ, "ಅತ್ಯುತ್ತಮ ಸಂಭಾಷಣೆ ಬರಹಗಾರ"
  • ೨೦೦೦ರಲ್ಲಿ,ಚಿರು ನವ್ವುತೋ, "ಅತ್ಯುತ್ತಮ ಸಂಭಾಷಣೆ ಬರಹಗಾರ"
  • ೨೦೦೧ರಲ್ಲಿ, "ಅತ್ಯುತ್ತಮ ಸಂಭಾಷಣೆ ಬರಹಗಾರ", "ನಿವ್ವು ನಾಕು ನಚ್ಚಾವು"
  • ೨೦೦೨ರಲ್ಲಿ, "ಅತ್ಯುತ್ತಮ ಸಂಭಾಷಣೆ ಬರಹಗಾರ", "ನುವ್ವೆ ನುವ್ವೆ"
  • ೨೦೦೪ರಲ್ಲಿ, "ಅತ್ಯುತ್ತಮ ಸಂಭಾಷಣೆ ಬರಹಗಾರ", "ಮಲ್ಲೇಶ್ವರಿ"
  • ೨೦೦೫ರಲ್ಲಿ, "ಅತ್ಯುತ್ತಮ ಸಂಭಾಷಣೆ ಬರಹಗಾರ", "ಅತಡು"

ಫಿಲಿಮ್ ಫೇರ್ ಪ್ರಶಸ್ತಿ[ಬದಲಾಯಿಸಿ]

  • ೨೦೦೫ರಲ್ಲಿ, "ಉತ್ತಮ ನಿರ್ದೇಶಕ- ತೆಲುಗು", "ಅತಡು"
  • ೨೦೧೫ರಲ್ಲಿ, "ಉತ್ತಮ ನಿರ್ದೇಶಕ- ತೆಲುಗು", "ಅತ್ತಾರಿಂಟಿಕಿ ದಾರೇದಿ"

ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್- "ಉತ್ತಮ ನಿರ್ದೇಶಕ- ತೆಲುಗು", "ಅತ್ತಾರಿಂಟಿಕಿ ದಾರೇದಿ" ೨೦೦೫ರಲ್ಲಿ, ವಂಶೀ ಇಂಟರ್ ನ್ಯಾಷನಲ್ ಫಿಲಮ್ ಪ್ರಶಸ್ತಿ - "ಉತ್ತಮ ನಿರ್ದೇಶಕ- ತೆಲುಗು", "ಅತದು"[೧]

ಉಲೆನ್ಕನಗಲು[ಬದಲಾಯಿಸಿ]