ತ್ಯಾಗರ್ತಿ
ತ್ಯಾಗರ್ತಿ ಎಂಬ ಊರು ಕರ್ನಾಟಕ ರಾಜ್ಯದ ಸಾಗರ ತಾಲ್ಲೂಕಿನಲ್ಲಿದೆ.
ತ್ಯಾಗರ್ತೆಶ್ವರ ಮಹಾರಾಜಾನಿಂದ ತ್ಯಾಗರ್ತಿ ಎಂಬ ಹೆಸರು ಬಂದಿತು ಎನ್ನುವ ಮಾತಿದೆ. ತ್ಯಾಗರ್ತಿ ಗ್ರಾಮ ಸಾಗರದಿಂದ 17 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಇತಿಹಾಸ ಪ್ರಸಿದ್ಧ ಕಾಳೆಶ್ವರ ದೇವಾಲಯ, ಜನಾರ್ಧನ ದೇವಾಲಯ ಮತ್ತು ಮಾರಿಕಾಂಬಾ ದೇವಾಲಯಗಳಿವೆ.
ಕಂದಾಯ ದಾಖಲಾತಿ ಪ್ರಕಾರ ಇನಾಮ್ ಗ್ರಾಮವಾದ ತ್ಯಾಗರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ಐನೂರಕ್ಕೂ ಅಧಿಕ ಮನೆಗಳಿವೆ. ಇಲ್ಲ ಜಾತಿ ಧರ್ಮದವರು ಒಗ್ಗೂಡಿ ಪ್ರತಿ ವರ್ಷ ಶ್ರೀರಾಮನವಮಿ, ಎಳೆ ಅಷ್ಟಮಿ, ಕಾರ್ತಿಕ ದೀಪೋತ್ಸವ, ಸಾರ್ವಜನಿಕ ಗಣೇಶೋತ್ಸವ ಮುಂತಾದ ಹಬ್ಬಗಳನ್ನು ವಿಜೃಂಭಣೆ ಯಿಂದ ಆಚರಿಸುತ್ತಾರೆ.
ಪೂರ್ಣಚಂದ್ರ ತೇಜಸ್ವಿಯವರ ಬೆಳ್ಳಂದೂರಿನ ನರಭಕ್ಷಕ ಪುಸ್ತಕದಲ್ಲಿ ತ್ಯಾಗರ್ತಿಯ ಉಲ್ಲೇಖವಿದೆ. ಇಲ್ಲಿ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ ಹಾಗೂ ಸರ್ಕಾರಿ ಪ್ರಥಮಿಕ ಮತ್ತು ಪ್ರೌಢ ಶಾಲೆಗಳಿವೆ. ತ್ಯಾಗರ್ತಿಯಲ್ಲಿ ನರಹರಿ ಸಚ್ಚಿದನಂದ ಸದ್ಗುರು ಆಶ್ರಮದ ಶ್ರೀಧರ ದೀಕ್ಷಿತರು ಆಧ್ಯಾತ್ಮ ಕೇಂದ್ರ ನಡೆಸುತ್ತಾ ಪಂಚಿಕರಣ ವಿಷಯವನ್ನು ಭೋದಿಸುತ್ತಾರೆ. ತ್ಯಾಗರ್ತಿಯ ಸೋಮವಾರದ ಸಂತೆ, ಐದು ವರ್ಷಕ್ಕೊಮ್ಮೆ ಬರುವ ಮಾರಿಜಾತ್ರೆ, ವಾರ್ಷಿಕ ಶನಿದೇವರ ಜಾತ್ರೆ ಅತ್ಯಂತ ವಿಶೇಷ.
ತ್ಯಾಗರ್ತಿಯ ಪ್ರಮುಖ ಸ್ಥಳಗಳು ಮುಕುಪ್ಪೆ ಸರ್ಕಲ್, ಮಾರಿಗುಡಿ ಸರ್ಕಲ್, ಮಾರಿಗುಡಿ ತವರುಮನೆ, ಬ್ರಾಹ್ಮಣರ ಕೇರಿ, ಮ್ಯಾದರ ಕೇರಿ, ಮಿಲ್ ಸರ್ಕಲ್, ಅಗಸರ ಹೊಳೆ, ರಾಮತೀರ್ಥ ಶನಿದೇವರ ಗುಡಿ ತಿಮ್ಮಪ್ಪನ ಗುಡಿ ಲಾವಿಗ್ಗೆರೆ ರಸ್ತೆ ಕುಡಿಗೆರೆ ರಸ್ತೆ ಹೊಸಂತೆ ರಸ್ತೆ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |