ವಿಷಯಕ್ಕೆ ಹೋಗು

ತೊಣಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೊಣಚಿಗಳು ಡಿಪ್ಟೆರಾ ಕೀಟ ಗಣದಲ್ಲಿ ಟ್ಯಾಬನಿಡೇ ಕುಟುಂಬದಲ್ಲಿನ ಒಂಟಿ ಜೋಡಿ ರೆಕ್ಕೆಗಳಿರುವ ನೊಣಗಳು. ಇವು ಹಲವುವೇಳೆ ದೊಡ್ಡದಾಗಿದ್ದು ಹಾರಾಟದಲ್ಲಿ ವೇಗವಾಗಿ ಚಲಿಸುತ್ತವೆ. ಹೆಣ್ಣುಗಳು ರಕ್ತವನ್ನು ಪಡೆಯಲು ಕುದುರೆಗಳು, ದನಗಳು, ನಾಯಿಗಳಂತಹ ಪ್ರಾಣಿಗಳನ್ನು ಕಚ್ಚುತ್ತವೆ ಮತ್ತು ಮನುಷ್ಯರನ್ನೂ ಕಚ್ಚುತ್ತವೆ.[] ಇವು ಬಿಸಿಲಿನಲ್ಲಿ ಹಾರಾಡಲು ಇಷ್ಟಪಡುತ್ತವೆ ಮತ್ತು ಕತ್ತಲೆಯ, ನೆರಳಿರುವ ಪ್ರದೇಶಗಳನ್ನು ತಪ್ಪಿಸುತ್ತವೆ, ಮತ್ತು ರಾತ್ರಿಯ ಹೊತ್ತು ನಿಷ್ಕ್ರಿಯವಾಗಿರುತ್ತವೆ. ಇವು ವಿಶ್ವದಾದ್ಯಂತ ಕೆಲವು ದ್ವೀಪಗಳು ಹಾಗೂ ಧ್ರುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆಲ್ಲ ಕಡೆ ಕಂಡುಬರುತ್ತವೆ.

ಹೆಣ್ಣು ತೊಣಚಿಗಳು ರಕ್ತದ ಮೂಲಕ ಹರಡುವ ರೋಗಗಳನ್ನು ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ತಮ್ಮ ಕುಡಿಯುವ ರೂಢಿಯಿಂದ ಸಾಗಿಸಬಲ್ಲವು. ರೋಗಗಳು ಉಂಟಾಗುವ ಪ್ರದೇಶಗಳಲ್ಲಿ, ಇವುಗಳು ಕುದುರೆ ಕುಟುಂಬದ ಸಾಂಕ್ರಾಮಿಕ ಅನೀಮಿಯಾ ವೈರಾಣುವನ್ನು, ದನಗಳು ಹಾಗೂ ಕುರಿಗಳಲ್ಲಿ ನೆರಡಿ ರೋಗವನ್ನು ಸಾಗಿಸುವುದು ತಿಳಿದುಬಂದಿದೆ. ಇವು ದನಗಳ ಬೆಳವಣಿಗೆ ದರಗಳನ್ನು ಕಡಿಮೆ ಮಾಡಬಲ್ಲವು ಮತ್ತು ಸೂಕ್ತವಾದ ಆವಾಸಸ್ಥಳಗಳನ್ನು ಒದಗಿಸದಿದ್ದರೆ ಆಕಳುಗಳ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಬಲ್ಲವು. ಕನ್ನಡನಾಡಿನ ಹಳ್ಳಿಗಳಲ್ಲಿ ಇವುಗಳನ್ನು 'ಕಡಿನೊಣ' ಎನ್ನುವರು. ಇವು ಸುಮಾರು ಎರಡು ಸೆಂಟಿಮೀಟರ್ ಉದ್ದ ಇರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ತೊಣಚಿ&oldid=933404" ಇಂದ ಪಡೆಯಲ್ಪಟ್ಟಿದೆ