ತೇರಾ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೇರಾ ಕೋಟೆಯು ಭಾರತದ ಗುಜರಾತ್‌ ರಾಜ್ಯದ ಕಚ್‌ನಲ್ಲಿರುವ ಅನೇಕ ಕೋಟೆಗಳಲ್ಲಿ ಒಂದಾಗಿದೆ. ಇದು ನೈಋತ್ಯ ಕಚ್‌ನಲ್ಲಿ ಅಬ್ದಾಸಾ ತಾಲೂಕಿನ ತೇರಾ ಗ್ರಾಮದ ಬಳಿ ಇದೆ.

ಸ್ಥಳ[ಬದಲಾಯಿಸಿ]

ತೇರಾ ಕೋಟೆಯು ಭುಜ್ ಪಟ್ಟಣದ ಪಶ್ಚಿಮಕ್ಕೆ ಎಂಭತ್ತೈದು ಕಿಲೋಮೀಟರ್ ದೂರದಲ್ಲಿದೆ. ಇದು ತ್ರೇತಾರಾ (ಮೂರು ಸರೋವರಗಳು) ಅಂದರೆ ಚಟ್ಟಸರ್, ಸುಮೇರಸರ್ ಮತ್ತು ಚಟಾಸರ್ ದಡದಲ್ಲಿರುವ ತನ್ನ ಸ್ಥಾನದಿಂದ ಕಚ್‌ನ ಬಯಲು ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ಆಕ್ರಮಿಸಿಕೊಂಡಿದೆ. [೧] [೨]

ಇತಿಹಾಸ[ಬದಲಾಯಿಸಿ]

ತೇರಾ ಕೋಟೆಯನ್ನು ಜಡೇಜಾ ಮುಖ್ಯಸ್ಥರೊಬ್ಬರು ನಿರ್ಮಿಸಿದರು. ಒಂದನೇ ದೇಶಲ್ಜಿ (೧೭೧೮-೧೭೪೧)ಯ ಆಳ್ವಿಕೆಯಲ್ಲಿ ತೇರಾ ಎಸ್ಟೇಟ್ ನೀಡಲಾಯಿತು. [೩]

ಮಹಾರಾವ್ ಲಖ್ಪಟ್ಜಿ (೧೭೪೧-೧೭೬೦) ಆಳ್ವಿಕೆಯಲ್ಲಿ ನಡೆದ ಯುದ್ಧದಲ್ಲಿ ತೇರಾ ಕೋಟೆಯು ಬಹಳ ಹಾನಿಗೊಳಗಾಗಿತ್ತು. ತೇರಾ ಎಸ್ಟೇಟ್‌ನ ಮುಖ್ಯಸ್ಥರಾದ ಸುಮ್ರಾಜಿ ಠಾಕೋರ್ ಅವರು ಕಚ್‌ನ ರಾವ್ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ದಂಗೆಯನ್ನು ನಿಗ್ರಹಿಸಲು ತೇರಾ ಕೋಟೆಗೆ ಸೈನ್ಯವನ್ನು ಕಳುಹಿಸಿಲಾಯಿತು. ಕಚ್ ಇತಿಹಾಸದಲ್ಲಿ ಮೊದಲ ಬಾರಿಗೆ, ಫಿರಂಗಿಗಳನ್ನು ಯುದ್ಧದಲ್ಲಿ ಬಳಸಲಾಯಿತು. ಈ ಫಿರಂಗಿಯನ್ನು ಪ್ರಸಿದ್ಧ ರಾಮ್ ಸಿಂಗ್ ಮಲಮ್ ಸ್ಥಾಪಿಸಿದರು. [೪] ಫಿರಂಗಿಯ ಶಕ್ತಿಯು ಕೋಟೆಯ ಹೆಚ್ಚಿನ ಭಾಗವನ್ನು ನಾಶಪಡಿಸಿತು. ಮೂರು ತಿಂಗಳ ಮುತ್ತಿಗೆಯ ನಂತರ ಯುದ್ಧವು ಕೊನೆಗೊಂಡಿತು, ಸುಮ್ರಾಜಿ ಶರಣಾದರು, ಮತ್ತು ಅವರ ಹೇಳಿಕೆಗಳಿಗೆ ಔಪಚಾರಿಕವಾಗಿ ಕ್ಷಮೆಯಾಚಿಸಿದರು. [೫]

೧೮೧೯ ರ ರಾನ್ ಆಫ್ ಕಚ್ ಭೂಕಂಪದಲ್ಲಿ ಕೋಟೆಯ ಗೋಡೆಗಳು ಹಾನಿಗೊಳಗಾದವು. ನಂತರ ಆ ಎಲ್ಲ ಕೋಟೆಗಳನ್ನು ಸರಿಪಡಿಸಲಾಯಿತು. [೬]

ಉಲ್ಲೇಖಗಳು[ಬದಲಾಯಿಸಿ]

  1. Tera fort | Tera fort in Kutchh Gujarat India | Fort of Kutchh | Fort of Gujarat | Nri Gujarati Tourism Places Tera fort
  2. Forts & Fortresses | KutchForever.com
  3. "History of Kutch". KutchForever.com.
  4. Lethbridge, Roper (1893). The Golden Book of India: A Genealogical and Biographical Dictionary of the Ruling Princes, Chiefs, Nobles, and Other Personages, Titled Or Decorated, of the Indian Empire. London: Macmillan. p. 274. OCLC 3104377.
  5. Williams, L. F. Rushbrook (1958). The Black Hills: Kutch in History and Legend: A study in Indian local loyalties. Weidenfeld and Nicolson. p. 137.
  6. Gazetteer of the Bombay Presidency: Cutch, Palanpur, and Mahi Kantha. Printed at the Government Central Press. 1880. p. 252.