ವಿಷಯಕ್ಕೆ ಹೋಗು

ತೇಜೋಮಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೂರ್ಯನ ಸುತ್ತಲಿನ ತೇಜೋಮಂಡಲ

ತೇಜೋಮಂಡಲವು (ಪರಿಧಿ) ಸೂರ್ಯನ ಬೆಳಕು ಮತ್ತು ವಾಯುಮಂಡಲದಲ್ಲಿ ತೇಲಾಡುತ್ತಿರುವ ಹಿಮ ಸ್ಫಟಿಕಗಳು ಪರಸ್ಪರ ಪ್ರಭಾವ ಬೀರುವುದರಿಂದ ಸೃಷ್ಟಿಯಾಗುವ ದ್ಯುತಿ ವಿದ್ಯಮಾನಗಳ ವರ್ಗದ ಹೆಸರಾಗಿದೆ. ತೇಜೋಮಂಡಲಗಳು ಬಣ್ಣದ ಅಥವಾ ಬಿಳಿ ಉಂಗುರಗಳಿಂದ ಹಿಡಿದು ಆಕಾಶದಲ್ಲಿನ ವೃತ್ತ ಖಂಡಗಳು ಹಾಗೂ ಕಲೆಗಳವರೆಗೆ ವ್ಯಾಪಿಸುವ ಅನೇಕ ರೂಪಗಳನ್ನು ಹೊಂದಿರಬಹುದು. ಅನೇಕ ತೇಜೋಮಂಡಲಗಳು ಸೂರ್ಯ ಅಥವಾ ಚಂದ್ರನ ಹತ್ತಿರ ಕಾಣಿಸುತ್ತವೆ, ಆದರೆ ಇತರ ತೇಜೋಮಂಡಲಗಳು ಬೇರೆಡೆ ಅಥವಾ ಆಕಾಶದ ವಿರುದ್ಧ ಭಾಗದಲ್ಲಿ ಕೂಡ ಉಂಟಾಗುತ್ತವೆ. ಅತ್ಯಂತ ಪರಿಚಿತ ತೇಜೋಮಂಡಲ ಪ್ರಕಾರಗಳಲ್ಲಿ ವೃತ್ತಾಕಾರದ ತೇಜೋಮಂಡಲ, ಪ್ರಕಾಶ ಸ್ತಂಭಗಳು, ಮತ್ತು ಮಿಥ್ಯಾ ಸೂರ್ಯಗಳು ಸೇರಿವೆ, ಆದರೆ ಇತರ ಅನೇಕ ತೇಜೋಮಂಡಲಗಳು ಸಂಭವಿಸುತ್ತವೆ; ಕೆಲವು ಸಾಕಷ್ಟು ಸಾಮಾನ್ಯವಾಗಿದ್ದರೆ ಬೇರೆಯವು (ಅತ್ಯಂತ) ಅಪರೂಪವಾಗಿರುತ್ತವೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]