ತೆರೆದ ಹಸ್ತ ಸ್ಮಾರಕ
ಕಲಾವಿದ | ಲೆ ಕಾರ್ಬುಸಿಯರ್ |
---|---|
ವರ್ಷ | ೧೯೬೪ |
ಉದ್ದಳತೆ | ೨೬ m (85 ft) |
ಸ್ಥಳ | ಚಂಡೀಗಡ |
ತೆರೆದ ಹಸ್ತ ಸ್ಮಾರಕವು ಭಾರತದ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡ ನಗರದಲ್ಲಿರುವ ಸಂಕೇತಿಕ ರಚನೆಯಾಗಿದೆ. ಈ ಸ್ಮಾರಕವನ್ನು ಲೆ ಕಾರ್ಬುಸಿಯರ್ ಎಂಬ ಫ್ರಾನ್ಸಿನ ವಾಸ್ತುಶಿಲ್ಪಿಯು ವಿನ್ಯಾಸ ಮಾಡಿದ್ದಾರೆ. ಇದು ಈಗಿನ ಚಂಡೀಗಡ ಸರ್ಕಾರದ ಲಾಂಛನವಾಗಿದ್ದು, "ಕೊಡುವ ಮತ್ತು ಸ್ವೀಕರಿಸುವ ಹಸ್ತ; ಶಾಂತಿ ಹಾಗೂ ಸಮೃದ್ದಿ, ಮತ್ತು ಮಾನವಕುಲದ ಐಕ್ಯತೆಯನ್ನು" ಸಾರುವ ಸಂಕೇತವಾಗಿದೆ..[೧] ಇದು ೨೬ ಮೀ(೮೫ ಅಡಿ) ಉದ್ದವಿದ್ದು, ಲೆ ಕಾರ್ಬುಸಿಯರ್‍ಅವರ ಅನೇಕ ತೆರೆದ ಹಸ್ತ ಸ್ಮಾರಕಗಳಲ್ಲಿ ಅತಿ ದೊಡ್ಡದಾಗಿದೆ.[೨] ಲೋಹದ ರಚನೆಯು ೧೪ ಮೀ(೬೪ ಅಡಿ) ಉದ್ದವಿದ್ದು, ೫೦ ಟನ್‍ಗಳಷ್ಟು ತೂಕವಿದೆ ಮತ್ತು ಗಾಳಿ ಬೀಸಿದಾಗ ತಿರುಗುವ ಹಾಗೆ ರೂಪಿಸಲಾಗಿದೆ.[೧][೩][೪]
ಸಂಕೇತ
[ಬದಲಾಯಿಸಿ]ಚಂಡೀಗಡದಲ್ಲಿನ ತೆರೆದ ಹಸ್ತವು(ಲ ಮೇನ್ ಔರ್ಟೆ) ಲೆ ಕಾರ್ಬುಸಿಯರ್‍ಅವರ ವಿನ್ಯಾಸಗಳಲ್ಲಿ ಪುನರಾವರ್ತಿಸುವ ತಿರುಳಾಗಿದೆ. ಇವರಿಗೆ ಈ ರಚನೆಯು, "ಶಾಂತಿ ಮತ್ತು ಸಾಮರಸ್ಯದ, ಮುಕ್ತವಾಗಿ ಕೊಡುವ ಮತ್ತು ಸ್ವೀಕರಿಸುವ ಸಂಕೇತವಾಗಿದೆ.[೨]
ಸ್ಥಳ
[ಬದಲಾಯಿಸಿ]ತೆರೆದ ಹಸ್ತವು ಚಂಡೀಗಡದ ಕ್ಯಾಪಿಟಲ್ ಸಂಕೀರ್ಣದ ಸೆಕ್ಟರ್ ೧ ರಲ್ಲಿದೆ. ಇದರ ಹಿಂದೆಯೆ ಹಿಮಾಲಯ ಪರ್ವತ ಶ್ರೇಣಿಯ ಶಿವಾಲಿಕ ಬೆಟ್ಟಗಳಿವೆ.[೪][೫]
ಚಂಡೀಗಡ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ ೨೨ ಮತ್ತು ೨೧ರ(ಚಂಡೀಗಡ - ಮನಾಲಿ) ಮೂಲಕ ತಲುಪಬಹುದಾಗಿದೆ.
ರೂಪವೈಶಿಷ್ಟ್ಯಗಳು
[ಬದಲಾಯಿಸಿ]ಮುಕ್ತ ಹಸ್ತ ಸ್ಮಾರಕವು ೧೨.೫ × ೯ ಮೀ (೪೧ ಅಡಿ × ೩೦ ಅಡಿ) ಕಂದಕದ ಮೇಲೆ ೨೬ ಮೀ (೮೫ ಅಡಿ) ಎತ್ತರವಿದೆ.[೫] ಕಾಂಕ್ರೀಟ್ ನಿಲುಗಟ್ಟೆಯ ಮೇಲೆ ನಿಲ್ಲಿಸಿದ ಲೋಹದ ವಾಯು ದಿಕ್ಸೂಚಿಯು ೧೪ ಮೀ (೪೬ ಅಡಿ) ಉದ್ದವಿದ್ದು, ೫೦ ಟನ್‍ಗಳಷ್ಟು ತೂಕವಿದೆ ಮತ್ತು ಹಾರುವ ಹಕ್ಕಿಯ ಹಾಗೆ ಕಾಣುತ್ತದೆ.[೬] ಸ್ಮಾರಕವನ್ನು ಶೀಟ್ ಲೋಹದಿಂದ ನಂಗಲ್‍ನಲ್ಲಿರುವ ಭಾಕ್ರ ನಂಗಲ್ ನಿರ್ವಹಣಾ ಸಮಿತಿಯ ಯಂತ್ರ-ನಿರ್ಮಾಣ ಸ್ಥಳದಲ್ಲಿ ಹ್ಯಾಂಡ್-ಕ್ಯಾಷ್ಟ್ ಮಾಡಲಾಗಿದೆ. ವಾಯು ದಿಕ್ಸೂಚಿಯ ಮೇಲ್ಮೈಯನ್ನು ಪಾಲಿಷ್ ಮಾಡಿದ ಸ್ಟೀಲ್‍ನಿಂದ ಹೊದಿಸಲಾಗಿದೆ ಮತ್ತು ಗಾಳಿ ಬೀಸಿದಾಗ ಸರಾಗವಾಗಿ ತಿರುಗಲು ಬಾಲ್ ಬಿಯರಿಂಗ್‍ಗಳಿರುವ ಸ್ಟೀಲ್ ಶಾಷ್ಟ್ ಮೇಲೆ ಜೋಡಿಸಲಾಗಿದೆ.[೫]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Betts & McCulloch 2014, p. 61-62.
- ↑ ೨.೦ ೨.೧ Shipman 2014, p. 7.
- ↑ Jarzombek & Prakash 2011, p. 1931.
- ↑ ೪.೦ ೪.೧ "Capitol Complex". Tourism Department Government of Chandigarh.
- ↑ ೫.೦ ೫.೧ ೫.೨ Sharma 2010, p. 132.
- ↑ Betts & McCulloch 2014, p. 61.