ವಿಷಯಕ್ಕೆ ಹೋಗು

ತುಂಗನಾಥ

Coordinates: 30°29′22″N 79°12′55″E / 30.48944°N 79.21528°E / 30.48944; 79.21528
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತುಂಗನಾಥ
Tungnath
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/India Uttarakhand" does not exist.
ಹೆಸರು
ಸರಿಯಾದ ಹೆಸರುತುಂಗನಾಥ ದೇವಸ್ಥಾನ
ಭೂಗೋಳ
ಕಕ್ಷೆಗಳು30°29′22″N 79°12′55″E / 30.48944°N 79.21528°E / 30.48944; 79.21528[೧]
ದೇಶಭಾರತ
ರಾಜ್ಯಉಟ್ಟರಾಖಂಡ್
ಎತ್ತರ3,680 m (12,073 ft)
ವಾಸ್ತುಶಿಲ್ಪ
ವಾಸ್ತುಶಿಲ್ಪ ಶೈಲಿನಾರ್ತ್ ಇಂಡಿಯನ್ ಆರ್ಕಿಟೆಕ್ಚರ್
ಇತಿಹಾಸ ಮತ್ತು ಆಡಳಿತ
ನಿರ್ಮಾಣUnknown
ಸೃಷ್ಟಿಕರ್ತPandavas

ತುಂಗನಾಥ ಭಾರತಉತ್ತರಾಖಂಡ ರಾಜ್ಯದಲ್ಲಿನ ಒಂದು ಪವಿತ್ರ ಕ್ಷೇತ್ರ. ತುಂಗನಾಥ ಪಂಚ ಕೇದಾರಗಳ ಪೈಕಿ ಒಂದು. ಸಮುದ್ರಮಟ್ಟದಿಂದ ೩೬೮೦ ಮೀಟರ್‌ ಎತ್ತರದಲ್ಲಿರುವ ತುಂಗನಾಥ ದೇವಾಲಯವು ಹಿಮಾಲಯದ ಅದ್ಭುತ ಪ್ರಕೃತಿಯ ಮಧ್ಯೆ ಇರುವ ಶಿವಾಲಯವಾಗಿದೆ. ಅಲ್ಲದೆ ಇದು ಹಿಮಾಲಯದಲ್ಲಿ ಅತಿ ಎತ್ತರದಲ್ಲಿರುವ ದೇವಾಲಯವು ಸಹ ಆಗಿದೆ. ತುಂಗನಾಥ ಶಿಖರದಿಂದ ಉಗಮಿಸುವ ಮೂರು ಝರಿಗಳು ಒಗ್ಗೂಡಿ ಮುಂದೆ ಆಕಾಶಕಾಮಿನಿ ನದಿಯಾಗುವುದು. ಚೋಪ್ಟಾ ಪಟ್ಟಣದಿಂದ ೩ ಕಿ.ಮೀ. ಗಳಷ್ಟು ಪರ್ವತದ ಏರುದಾರಿಯನ್ನು ಕಾಲುನಡೆಯಲ್ಲಿ ಕ್ರಮಿಸಿ ತುಂಗನಾಥವನ್ನು ತಲುಪಬಹುದು. ಚಂದ್ರಶಿಲಾ ಶಿಖರದ ಕೊಂಚ ಕೆಳಭಾಗದಲ್ಲಿರುವ ತುಂಗನಾಥ ದೇವಾಲಯವು ಕರಿಕಲ್ಲಿನಿಂದ ನಿರ್ಮಾಣಗೊಂಡಿದ್ದು ಪ್ರಾಚೀನ ವಾಸ್ತುಶೈಲಿಯ ಉತ್ತಮ ಪ್ರತೀಕವೆನಿಸಿದೆ. ಈ ಪ್ರದೇಶದಿಂದ ಹಿಮಾಲಯದ ಶಿಖರಮಾಲೆಗಳ ಸುಂದರ ನೋಟ ಲಭ್ಯ. ತುಂಗನಾಥಕ್ಕೆ ೨೩೨ ಕಿ.ಮೀ. ದೂರದಲ್ಲಿರುವ ಡೆಹ್ರಾಡೂನ್ ಅತಿ ಸಮೀಪದ ವಿಮಾನನಿಲ್ದಾಣವಾಗಿದ್ದರೆ ೨೧೫ ಕಿ.ಮೀ. ದೂರದ ರಿಷಿಕೇಶ ಅತ್ಯಂತ ನಿಕಟವಾದ ರೈಲು ನಿಲ್ದಾಣ.

ತುಂಗನಾಥ ದೇವಾಲಯ

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ತುಂಗನಾಥ&oldid=778938" ಇಂದ ಪಡೆಯಲ್ಪಟ್ಟಿದೆ