ತೀವ್ರ ಉಸಿರಾಟ ತೊಂದರೆಯ ಬಳಲಿಕೆಯ ಲಕ್ಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Adult respiratory distress syndrome
Classification and external resources
Chest x-ray of patient with ARDS
ICD-10J80
ICD-9518.5, 518.82
DiseasesDB892
MedlinePlus000103
eMedicinemed/70
MeSHD012128

ತೀವ್ರ ಉಸಿರಾಟ ತೊಂದರೆಯ ಬಳಲಿಕೆಯ ಲಕ್ಷಣ (ARDS ), ಅದಲ್ಲದೇ ಇದನ್ನುತೀವ್ರ ಉಸಿರಾಟ ತೊಂದರೆಯ ಲಕ್ಷಣ (RDS )ಎನ್ನುತ್ತಾರೆ. ಅಥವಾ ಪ್ರೌಢಾವಸ್ಥೆಗೆ ತಲುಪಿದ ತೀವ್ರ ಉಸಿರಾಟ ತೊಂದರೆಯ ಲಕ್ಷಣ (ವ್ಯತಿರಿಕ್ತವಾಗಿ IRDS) ಇದು ಶ್ವಾಸಕೋಶದ ಗಂಭೀರ ಗಾಯಗಳಿಂದ ಉಂಟಾಗುವ ವಿವಿಧ ಪ್ರತಿಕ್ರಿಯೆಗಳನ್ನು ಇದು ಸೂಚಿಸುತ್ತದೆ.

ARDS ಎಂಬುದು ಶ್ವಾಸಕೋಶದ ಗಂಭೀರ ರೋಗವಾಗಿದ್ದು ಇದು ನೇರ ಮತ್ತು ಪರೋಕ್ಷ ಕಾರಣಗಳಿಂದಾಗಿ ಬರುತ್ತದೆ. ಇದು ಉರಿಯೂತ ಉಂಟು ಮಾಡುವ ಶ್ವಾಸಕೋಶ ಗ್ರಂಥಿಯ ಊತದಿಂದ ಪರೆಂಕಿಮಾ ಕಟುವೇದನೆ ಉಂಟಾಗುತ್ತದೆ.ಇದು ದೇಹದಲ್ಲಿನ ಅನಿಲ ವಿನಿಮಯ ಕಾರ್ಯದಲ್ಲಿ ಕೆರಳಿಸುವ ಉರಿಯ ಮಾಧ್ಯಮಗಳನ್ನು ಬಿಡುಗಡೆ ಮಾಡುತ್ತದೆ,ಇದರಿಂದಾಗಿ ಹೈಪೊಕ್ಸೆಮಿಯಾ ಅಂದರೆ ಆಮ್ಲಜನಕದ ತೀವ್ರ ಕೊರತೆಉಂಟಾಗಿ ಹಲವಾರು ಅಂಗಾಂಶಗಳ ಕಾರ್ಯ ವಿಫಲತೆ ಕಾಣಿಸುತ್ತದೆ. ಈ ಸಂದರ್ಭದಲ್ಲಿ ಇದು ಮಾರಣಾಂತಿಕವಾಗಿರುತ್ತದೆ;ತಕ್ಷಣವೇ ಯಾಂತ್ರಿಕ ರೀತಿಯ ಉಸಿರಾಟಕ್ಕೆ ಗಾಳಿ ಪೂರೈಕೆ ಮಾಡಬೇಕಾಗುತ್ತದೆ.ಅದಲ್ಲದೇ ಕೂಡಲೇ ತೀವ್ರ ನಿಗಾ ಘಟಕಕ್ಕೆ ದಾಖಲಿಸಬೇಕಾಗುತ್ತದೆ. ಕಡಿಮೆ ಗಂಭೀರ ರೂಪದ ಪರಿಸ್ಥಿತಿಗೆ ತೀವ್ರ ಶ್ವಾಸಕೋಶ ಗಾಯ (ALI )ಎಂದು ಹೇಳುತ್ತಾರೆ.

ARDS ಲಕ್ಷಣವನ್ನು ಈ ಹಿಂದೆ ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿನ ಉಸಿರಾಟ ಬಳಲಿಕೆ ಲಕ್ಷಣ ವೆಂದು ಕರೆಯಲಾಗುತ್ತದೆ.ಯಾಕೆಂದರೆ ಇದನ್ನು ಶಿಶುವಿನ ಉಸಿರಾಟ ಬಳಲಿಕೆ ತೊಂದರೆಯ ಲಕ್ಷಣಕ್ಕೆ ಹೋಲಿಸಲಾಗದು.ಇದು ನವಜಾತ ಶಿಶುಗಳಲ್ಲಿನ ಉಸಿರಾಟಕ್ಕೆ ಸಂಭಂಧಿಸಿದ ತೊಂದರೆಯಾಗಿದೆ. ಈ ತೆರನಾದ ಶ್ವಾಸನಾಳದ ಬಳಲಿಕೆ ಲಕ್ಷಣವು ಮಕ್ಕಳಲ್ಲಿಯೂ ಕಂಡು ಬರುತ್ತದೆ.ಇಂತಹ ARDS ಮುಂದೆ ಉಲ್ಬಣಗೊಂಡು ತೀವ್ರ ತೆರವಾದ ವೇದನೆಯ ಪ್ರೌಢಾವಸ್ಥೆ ಗೆ ತಲಪುವ ಲಕ್ಷಣಗಳಿರುತ್ತವೆ. ಆದ್ದರಿಂದ ಶಿಶುವಿನ ಮತ್ತು ವಯಸ್ಕರ ಈ ಉಸಿರಾಟ ತೊಂದರೆಗಳು ವ್ಯತ್ಯಾಸಗೊಳ್ಳುತ್ತವೆ.

ವ್ಯಾಖ್ಯಾನ[ಬದಲಾಯಿಸಿ]

ಐತಿಹಾಸಿಕ ಹಿನ್ನೆಲೆ[ಬದಲಾಯಿಸಿ]

ತೀವ್ರ ಉಸಿರಾಟ ತೊಂದರೆಯ ಬಳಲಿಕೆಯ ಲಕ್ಷಣವು ಮೊದಲ ಬಾರಿಗೆ 1967 ರಲ್ಲಿ ಆಶ್ಬಾಘ್ ಅವರಿಂದ ವ್ಯಾಖ್ಯಾನಿಸಲ್ಪಟ್ಟಿತು.ಎಟ್ ಆಲ್. [೧][೨] ಆರಂಭಿಕವಾಗಿ ಇದಕ್ಕೆ ಯಾವುದೇ ವ್ಯಾಖ್ಯೆ ಇರಲಿಲ್ಲ;ಇದರಿಂದಾಗಿ ಇದರ ಹರಡುವ ವ್ಯಾಪ್ತಿ ಮತ್ತು ಮರಣ ಪ್ರಮಾಣ ದ ವಿಷಯಗಳ ಬಗ್ಗೆ ವಿವಾದಯುಂಟಾಗಿತ್ತು. ನಂತರ 1988 ರಲ್ಲಿ ವಿಸ್ತೃತ ವ್ಯಾಖ್ಯಾನವೊಂದನ್ನು ಪ್ರಸ್ತಾಪಿಸಲಾಯಿತು.ಅದು ಭೌತಿಕ ಶರೀರದ ಉಸಿರಾಟದ ಏರುಪೇರಿನ ವಿವರಣೆ ನೀಡಿತು.

ಈ ಉಸಿರಾಟ ಬಳಲಿಕೆಯಲ್ಲಿ ರೋಗಿಗಳ ಶ್ವಾಸನಾಳಗಳು ಕುಸಿದು ಹೋಗುತ್ತವೆ,ಆಗ ಮತ್ತೊಂದು ನಾಳದ ಒಳತೂರಿಕೆ ಅತ್ಯಗತ್ಯ. ಉಸಿರಾಟದ ಈ ತಡೆಯಲ್ಲಿ ದೇಹಕ್ಕೆ ಬೇಕಾಗುವ ಆಮ್ಲಜನಕ ಪೂರೈಕೆ ವಿಳಂಬವಾಗುತ್ತದೆ.ಇದರಲ್ಲಿ ಇಂಗಾಲದ ಡೈಆಕ್ಸೈಡ್ CO2 ಶೇಖರವಾಗಿ, ಆಗ ಕಾರ್ಬೊನೇಟ್ ದ್ರವಗಳನ್ನು ನೀಡಬೇಕಾಗುತ್ತದೆ.ಈ ಮೂಲಕ ಮತ್ತೆ ಆಮ್ಲಗಳ ಮೂಲಕ ಉಸಿರಾಟದ ಸುಲಭತೆಗೆ ಯತ್ನಿಸಬೇಕಾಗುತ್ತದೆ. ಉಸಿರಾಟದ ಈ ಬಳಲಿಕೆಯು ತುರ್ತು ವೈದ್ಯಕೀಯ ನೆರವನ್ನು ಬಯಸುತ್ತದೆ.ಶ್ವಾಸನಾಳದ ಕೊಳವೆ ಊದಿಕೊಳ್ಳಲು ಆರಂಭಿಸುವ ಮೊದಲೇ ನಾಳ ತೂರಿಸಿ ಸುಗಮ ಉಸಿರಾಟಕ್ಕೆ ದಾರಿ ಮಾಡಿಕೊಡಬೇಕಾಗುತ್ತದೆ.ಇಲ್ಲದಿದ್ದರೆ ಈ ಗಾಳಿ ಹೋಗುವ ಮಾರ್ಗ ಸಂಪೂರ್ಣ ಮುಚ್ಚಿ ಹೋಗುವ ಸಾಧ್ಯತೆ ಇರುತ್ತದೆ.

ಸುಮಾರು 1994 ರಲ್ಲಿ ಅಮೆರಿಕನ್-ಯುರೊಪಿಯನ್ ಒಮ್ಮತಾಭಿಪ್ರಾಯದ ಸಮಾವೇಶದ ಸಮಿತಿಯಲ್ಲಿ ಹೊಸ ವ್ಯಾಖ್ಯಾನವನ್ನು ಶಿಫಾರಸು ಮಾಡಲಾಯಿತು.[೧][೩] ಅದು ಎರಡು ಅನುಕೂಲಗಳನ್ನು ಹೊಂದಿದೆ:1 ಇದು ಶ್ವಾಸನಾಳದ ಗಂಭೀರ ಗಾಯಗಳನ್ನು ಗುರುತಿಸುತ್ತದೆ,2 ಇದು ಉಪಯೋಗಿಸಲು ಸರಳವಾಗಿದೆ.[೪]

ARDS ಪರಿಣಾಮವು ಅಪಧಮನಿಗಳ ಭಾಗದಲ್ಲಿ ಆಮ್ಲಜನಕ ಹರಿಯುವ ವೇಗವನ್ನು ಅವಲಂಬಿಸಿದೆ.(PaO2)ಒಂದೇ ಕ್ಷಣದಲ್ಲಿ ಆಮ್ಲಜನಕದ ಪೂರೈಕೆಯು (FiO2)200 mmHg ಕ್ಕಿಂತ ಕಡಿಮೆಯಾಗಿರುತ್ತದೆ.ಅದರ ಎರಡು ಭಾಗದಲ್ಲಿನ ಅಂಗಾಂಗ ಕುಳಿ ರಚನೆಯಲ್ಲಿ ಇದು ಶುದ್ದೀಕರಣ ಮಾಡದೇ ಇರುವುದನ್ನು ಎದೆಯ ಎಕ್ಸ್-ರೇ ಕಿರಣಗಳ ಮೂಲಕ ನೋಡಬಹುದು. ಹೀಗೆ ಶುದ್ದೀಕರಿಸುವ ಅಂಗಾಂಶದ ನಿಷ್ಕ್ರಿಯತೆಯು ಅಭಿಧಮನಿಯ ವಿಫಲತೆಗೂ ಕಾರಣವಾಗುತ್ತದೆ.ಆದರೆ ಹೃದಯದ ಚಟುವಟಿಕೆಯು ARDS ನಲ್ಲಿ ಸಾಮಾನ್ಯವಾಗಿರುತ್ತದೆ.(18 mmHg ಗಿಂತ ಕಡಿಮೆ)ಅಂದರೆ ಅಪಧಮನಿಯ ಒತ್ತಡ ಕೂಡ ಅಷ್ಟಾಗಿ ಇರುವದಿಲ್ಲ.ಆದರೆ ಇದು ಎಡಭಾಗದ ರಕ್ತನಾಳಗಳಲ್ಲಿ ಅಡಚಣೆಯನ್ನುಂಟು ಮಾಡುತ್ತದೆ.

ಒಂದು PaO2/FiO2ಗಳ ಅನುಪಾತವು 300 mmHg ಗಿಂತ ಕಡಿಮೆ ಇದ್ದು ಇದು ಎರಡೂ ಕಡೆಗೆ ಹರಿವ ಆಮ್ಲಜನಕದ ಅಡತಡೆಯಾಗಿರುತ್ತದೆ.ಈ ಲಕ್ಷಣ ತೀವ್ರ ಶ್ವಾಸಕೋಶ ಗಾಯ (ALI)ವಾದುದನ್ನು ತೋರಿಸುತ್ತದೆ. ಈ ಹಿಂದೆ ಈ ಲಕ್ಷಣವನ್ನು ARDS ನಿಂದ ಭಿನ್ನವಾಗಿದೆ ಎನ್ನಲಾಗುತಿತ್ತು.ಆದರೆ ALI ಕೇವಲ ARDS ಬರುವ ಪೂರ್ವಸೂಚನೆಯಾಗಿದೆ.

ಕಳೆದ 1967 ಮತ್ತು 1994 ರ ನಂತರದ ಒಮ್ಮತ[ಬದಲಾಯಿಸಿ]

ARDS ನ್ನು ಇಂತಹ ಲಕ್ಷಣಗಳೆಂದು ಗುರುತಿಸಬಹುದು:[೧][೩]

  • ತೀವ್ರ ದಾಳಿ ಲಕ್ಷಣ
  • ವಿಕಿರಣದ ಎದೆ ಪರೀಕ್ಷೆಯಲ್ಲಿ ಎರಡೂ ಮಾರ್ಗಗಳ ಗಾಳಿ ಶುದ್ದೀಕರಣದ ಅಸ್ಪಷ್ಟತೆ
  • ಶ್ವಾಸ ನಾಳದ ಅಪಧಮನಿ ಬೆಣೆಯಾಕಾರದ ಜೋಡಣೆ ಒತ್ತಡ < 18 mmHg (ಇದನ್ನು ಶ್ವಾಸನಾಳ ಅಪಧಮನಿ ತಂತಿಹಾಕುವ ಮೂಲಕ ನಿರ್ಮಿಸಿಬಹುದಾಗಿದೆ.),ಇಂತಹ ಮಾಹಿತಿಗಳ ಸೂಕ್ಷ್ಮ ಪರಿಶೀಲನೆಯ ಮೂಲಕ ಶ್ವಾಸಕೋಶ ದ ನಾಳ ಗ್ರಂಥಿಗಳ ಶಕ್ತಿಯನ್ನು ಪರಿಗಣಿಸುವ ಮುಖಾಂತರ ವೈದ್ಯಕೀಯ ಪರಿಹಾರಗಳನ್ನು ಪಡೆಯಬಹುದಾಗಿದೆ.ನಿಷ್ಕ್ರಿಯ ಗಾಳಿಕೊಳವೆಗಳಿಗೆ ಚಟುವಟಿಕೆ ತುಂಬಬಹುದಾಗಿದೆ.
  • ಒಂದು ವೇಳೆ PaO2:FiO2 < 300 mmHg (40 kPa) ಆಗಿದ್ದರೆ ತೀವ್ರ ಶ್ವಾಸ ಕೋಶ ಗಾಯ (ALI) ಇದೆ ಎಂದು ಗೊತ್ತಾಗುತ್ತದೆ.
  • ಒಂದು ವೇಳೆ PaO2:FiO2 < 200 mmHg (26.7 kPa) ಈ ಲಕ್ಷಣ ಕಾಣಿಸಿದರೆ ತೀವ್ರ ಉಸಿರಾಟ ತೊಂದರೆಯ ಬಳಲಿಕೆಯ ಲಕ್ಷಣ (ARDS)ಇದೆ ಎನ್ನಲಾಗುತ್ತದೆ.

ಇದನ್ನು ಸಾರಾಂಶದಲ್ಲಿ ಮತ್ತು ಸುಲಭಗೊಳಿಸುವ ರೀತಿಯಲ್ಲಿ ಹೇಳುವುದಾದರೆ ಇದು ತೀವ್ರ (ವೇಗದ ದಾಳಿ)ಲಕ್ಷಣವು (ಲಕ್ಷಣಗಳ ಸಂಗ್ರಹ)ಇದು ದೊಡ್ಡ ಪ್ರಮಾಣದಲ್ಲಿ ಶ್ವಾಸಕೋಶಗಳ ಮೇಲೆ ದುಷ್ಪರಿಣಾಮ ಆಗಿ ಆಗ ಆಮ್ಲಜನಕದ ಕೊರತೆಯಿಂದ ಅಡಚಣೆಯುಂಟಾದರೆ ಅದು ಹೃದಯ ವೈಫಲ್ಯವಲ್ಲ.

ಲಕ್ಷಣಗಳು[ಬದಲಾಯಿಸಿ]

ARDS ಇದು ಯಾವುದೇ ಗಂಭೀರ ಗಾಯವಾದ 24 ಗಂಟೆಗಳೊಳಗಾಗಿ ಉಂಟಾಗಬಹುದು.(ಅಪಘಾತ,ಸುಟ್ಟ ಗಾಯಗಳು,ಮಹತ್ವಾಕಾಂಕ್ಷೆ,ಅತಿ ರಕ್ತಸ್ರಾವ,ಮಾದಕಔಷಧಿ/ವಿಪರೀತ ಮದ್ಯಪಾನ)ಅಥವಾ ಗಂಭೀರ ಕಾಯಿಲೆ (ನಂಜುಕಾರಿ ಕಾಮಾಲೆ,ಕೀವು ತುಂಬಿಕೊಂಡ ಅಂಗಾಂಶ,ತೀವ್ರ ಅಪಧಮನಿ ಅಡತಡೆ)ಇತ್ಯಾದಿ ಮೂಲ ಕಾರಣಗಳಾಗಿವೆ. ARDS ನ ರೋಗಿಗಳಲ್ಲಿ ಸಾಮಾನ್ಯವಾಗಿ ಉಸಿರಾಟದಲ್ಲಿನ ತೀವ್ರ ಕೊರತೆ,ವೇಗವಾಗಿ ಉಸಿರಾಡಲಾಗದ ಸ್ಥಿತಿ,ಅಲ್ಲದೇ ಮೇಲಿಂದ ಮೇಲೆ ಗೊಂದಲಕ್ಕೀಡಾಗುವುದು ಸಾಮಾನ್ಯವಾಗಿರುತ್ತದೆ.

ಸುಧೀರ್ಘ ಕಾಲದ ಕಾಯಿಲೆಗಳು ಉದಾಹರಣೆಗೆ ಮಲೇರಿಯಾ, ARDS ನ್ನು ಉತ್ತೇಜಿಸಬಹುದು.ಅಲ್ಲದೇ ನಂಜುರೋಗ,ವಿಷಕಾರಿ ಸಂಯುಕ್ತಗಳಿಂದ ಇದು ಉಂಟಾಗಬಹುದು. ನೋಡಿ ಮಲೇರಿಯಾ ರೋಗಿಯಲ್ಲಿನ ARDS ತೋರಿರುವ ಕ್ಷಕಿರಣ Archived 2010-08-10 ವೇಬ್ಯಾಕ್ ಮೆಷಿನ್ ನಲ್ಲಿ..

ರೋಗ ನಿರ್ಣಯ[ಬದಲಾಯಿಸಿ]

ಒಂದು ಅಪಧಮನಿಯ ರಕ್ತದಲ್ಲಿನ ಅನಿಲದ ವಿಶ್ಲೇಷಣೆ ಮತ್ತು ಎದೆ ವಿಕಿರಣದ ಎಕ್ಸ್ ರೇ ಮೂಲಕ ಇದರ ಸಾಮಾನ್ಯ ಲಕ್ಷಣಗಳನ್ನು ಪತ್ತೆಹಚ್ಚಬಹುದು. ಆದರೂ ಕೂಡಾ ತೀವ್ರ ಆಮ್ಲಜನಕ ತೊಂದರೆ ಲಕ್ಷಣ ಹೈಪೊಕ್ಸಿಮಿಯಾ ಎಂಬುದನ್ನು ಇದರಲ್ಲಿ ಸೇರಿಸಲಾಗಿದೆ.ನಿಖರವಾದ ಅಸ್ತವ್ಯಸ್ತತೆಯನ್ನು PaO2ಮೂಲಕ ಪದ್ದತಿಗನುಗುಣವಾಗಿ ಅಭ್ಯಸಿಸಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆಮ್ಲಜನಕದ ತೀವ್ರ ಕೊರತೆಯನ್ನು ಗಾಳಿ ಪೂರೈಕೆಯ ವ್ಯವಸ್ಥೆಯೊಂದಿಗೆ ಹೋಲಿಸಲಾಗದು. ಯಾವುದೇ PaO2 ದ ಪ್ರಮಾಣವು 100 (ಸಾಮಾನ್ಯವಾಗಿ ಒಂದು ಹಂತಕ್ಕೆ ಬರುವಾಗ ಅದರ ಪ್ರಮಾಣವು 100% ಕ್ಕಿಂತ ಕಡಿಮೆಯಾಗಿರುತ್ತದೆ.ಹೀಗೆ ಪೂರೈಕೆಯ 50% ರ ಪರಿಮಾಣದಲ್ಲಿ ಕೊರತೆಯಾದಾಗ ಅದು ARDS ನ ಲಕ್ಷಣಗಳಲ್ಲೊಂದಾಗುತ್ತದೆ.ಇದನ್ನು ಯಾವುದೇ ವೆಂಟಿಲೇಶನ್ (ಕೃತಕ ಗಾಳಿ)ನೆರವಿಲ್ಲದೇ ಅಧಿಕ ಆಮ್ಲಜನಕದ ಹರಿವಿಗೆ ಅನುಕೂಲ ಮಾಡಬಹುದಾಗಿದೆ.

ಇಲ್ಲಿ ಹೃದಯಕ್ಕೆ ಸಂಭಂಧಿಸಿದ ನ್ಯೂನತೆಯ ಕಾರಣವನ್ನು ಇಲ್ಲಿ ಹೊರಗಿಡಲಾಗುತ್ತದೆ. ಇದನ್ನು ಶ್ವಾಸನಾಳದ ಅಪಧಮನಿ ತಂತಿ ಬಳಸಿ ಅದರ ಬೆಣೆಯ ಮೇಲಿನ ಒತ್ತಡದ ಅಳತೆಯನ್ನು ಗ್ರಹಿಸಬಹುದಾಗಿದೆ. ಆದರೆ ಸದ್ಯ ಈ ತೀವ್ರ ಉಸಿರಾಟದ ತೊಂದರೆ ಪತ್ತೆಹಚ್ಚಲು ತಂತಿ ತೂರಿಸುವುದಕ್ಕಿಂತ ಇನ್ನೂ ಅಧಿಕಸುಧಾರಿತ ಕ್ರಮಗಳು ಜಾರಿಯಲ್ಲಿವೆ.ರೋಗಿಯ ಸಂಪೂರ್ಣ ಈ ರೋಗದ ಗುಣಲಕ್ಷಣಗಳ ಕಂಡು ಹಿಡಿಯಲು ಬೇರೆಯದೇ ಸರಳ ವಿಧಾನವಿದ್ದು ಅದರ ಮೂಲಕ ARDS ನಂತಹ ಮಾರಣಾಂತಿಕ ಲಕ್ಷಣಗಳನ್ನು ಕಾಣಬಹುದು.

ಬಹುತೇಕ ಪ್ರಕರಣಗಳಲ್ಲಿ ಸರಳ ಎದೆ ಭಾಗದ ಸರಳ ಎಕ್ಸ್-ರೇ; ಸುಲಭವಾಗಿ ಶುದ್ದಗಾಳಿಯ ಪ್ರಮಾಣ ಮತ್ತು ದೇಹದ ಪೂರೈಕೆಯ ಪರಿಮಾಣವನ್ನೂ ತಿಳಿಯಬಹುದಾಗಿದೆ. ಇನ್ನೂ CT ಸ್ಕ್ಯಾನಿಂಗ್ ನಲ್ಲಿ ಅದರ ಸೂಕ್ಷ್ಮ ಭಾಗಗಳನ್ನೂ ತಲುಪಿ ARDS ನಲ್ಲಿನ ಶ್ವಾಸಕೋಶದ ಪರೆಂಕಿಮಾ ಎಷ್ಟರ ಮಟ್ಟಿಗೆ ಇದೆ ಎಂಬುದನ್ನೂ ಹೇಳಬಹುದಾಗಿದೆ.

ರೋಗಶರೀರಶಾಸ್ತ್ರ[ಬದಲಾಯಿಸಿ]

ಒಂದು ವೈದ್ಯಕೀಯ ರೋಗ ನಿರ್ಣಯಶಾಸ್ತ್ರದ ARDS ಪ್ರತಿಬಿಂಬ

ಈ ARDS ಪತ್ತೆಹಚ್ಚುವ ವಿಧಾನದಲ್ಲಿ ರೋಗ ನಿದಾನ ಕೇಂದ್ರದಲ್ಲಿ ಪ್ರಯೋಗಕ್ಕೆ ಒಳಗಾಗುತ್ತದೆ. ಇದರಲ್ಲಿ ಬಿಳಿರಕ್ತಕಣದ ಕಾಮಾಲೆ,ರಹಸ್ಯ ಮೂಲದ ಸಂಗ್ರಹಿತ ಕಾಮಾಲೆ,ತೀವ್ರ ತಂತುವಿನಲ್ಲಿಯ ಸಂಗ್ರಹಿತ ಕಾಮಾಲೆ ಮತ್ತು ಕೊರತೆಯ ರಕ್ತನಾಳದ ರಚನಾ ವಿಧಾನದ ಹಾನಿ(DAD)ಇವುಗಳನ್ನೊಳಗೊಂಡಿದೆ. ಇವೆಲ್ಲ ಲಕ್ಷಣಗಳಿಗೆ ರೋಅಗ ಪತ್ತೆ ಮಾಡುವ ರೋಗ ನಿದಾನ ಶಾಸ್ತ್ರವು DAD ಜೊತೆಯಲ್ಲಿ ARDS ನ್ನು ಗುರುತಿಸುತ್ತದೆ.

DAD ನ ಲಕ್ಷಣದಲ್ಲಿ ಶ್ವಾಸಕೋಶದ ಉರಿಯೂತ ಉಂಟಾಗುವುದು ಕಂಡು ಬರುತ್ತದೆ. ಈ ಊತಕಗಳು ಉರಿಯನ್ನುಂಟು ಮಾಡುವುದಲ್ಲದೇ ಆರಂಭದಲ್ಲಿ ರೋಗ ಪ್ರತಿರೋಧಕಗಳನ್ನು ಅಲ್ಲದೇ ಇನ್ನುಳಿದ ಉರಿಯೂತದ ಮಾಧ್ಯಮಗಳನ್ನು ಬಿಡುಗಡೆ ಮಾಡುತ್ತವೆ.ಅದೇ ಭಾಗದಲ್ಲಿರುವ ನಿಜಕವಚ ತೊಗಟೆಗಳು ಮತ್ತು ನಿರ್ನಾಳ ಭಾಗದ ಕೋಶಗಳನ್ನು ಒಳಗೊಂಡಿರುತ್ತದೆ.

ನ್ಯುಟ್ರೊಫಿಲಿಸ್ ಗಳು ಅಥವಾ ಪೂರಕ ಪ್ರೊಟೀನ್ ಗಳು ಮತ್ತು ಕೆಲವು ರಕ್ತಕೋಶಗಳ ತಕ್ಷಣ ವರ್ಗಾವಣೆ ನಡೆಯುತ್ತದೆ.ಇದರಲ್ಲಿ ರೋಗ ನಿದಾನದ ತುರ್ತನ್ನು ಇಲ್ಲಿ ಕಾಣಬಹುದಾಗಿದೆ.

ಹೀಗೆ ಅದರ ಹಿಂದಿನ ಇತಿಹಾಸ ನೋಡಿ ಸಣ್ಣ ಕುಳಿಗಳಲ್ಲಾದ ಹಾನಿಯನ್ನು ತಪ್ಪಿಸಬಹುದಾಗಿದೆ.ಅದರಲ್ಲಿನ ಸದೃಶ್ಯ ಪೊರೆ ರಚನೆಯಾಗಿದ್ದ ಆಕಾರವನ್ನು ನೋಡಬಹುದಾಗಿದೆ.

ಯಾವ ಕಾರಣದಿಂದ ಈ ಕಾಯಿಲೆ ಉತ್ತೇಜಿತಗೊಳ್ಳುತ್ತದೆ ಎಂದು ಹೇಳಲಾಗದಿದ್ದರೂ ಇತ್ತೀಚಿನ ಸಂಶೋಧನೆಗಳ ಪ್ರಕಾರ ಉರಿಯೂತದ ಪ್ರಮಾಣ ಹಾಗು ಯಾಂತ್ರಿಕವಾಗಿರುವ ಒತ್ತಡವನ್ನು ಗ್ರಹಿಸಬಹುದಾಗಿದೆ.

ಉರಿಯೂತ[ಬದಲಾಯಿಸಿ]

ಈ ಉರಿಯೂತವು ಕೀವು ತುಂಬಿದ ಅಂಗಾಂಶದಿಂದಾಗಿ,ಅದರ ಭಾಗಗಳ ನಿಷ್ಕ್ರಿಯೆಗೊಳಿಸುತ್ತದೆ.ಅಂಗಾಂಶ ಭಾಗದ ಕುಳಿಯಲ್ಲಿ ಸಂಗ್ರಹಿಸಿದ ಮತ್ತು ಹಾನಿಸರಿಪಡಿಸಲಾಗದ ಶ್ವಾಸಕೋಶದ ಅಸ್ತವ್ಯಸ್ತತೆಯಾಗಿದ್ದರೆ ಅದನ್ನು ತುರ್ತಾಗಿ ನಿರ್ವಹಿಸಬೇಕಾಗುತ್ತದೆ. ಈ ನಿಷ್ಕ್ರಿಯೆಯು II ನೆಯ ಪ್ರಕಾರದಾದರೆ ಶ್ವಾಸನಾಳದ ಸೂಕ್ಷ್ಮ ಕೋಶಗಳೂ ಸಹ ಅಲ್ಲಿರುತ್ತವೆ.ಇದರಿಂದಾಗಿ ರೋಗ ನಿರೋಧಕತೆಯ ಸಾಂದ್ರತೆಯ ಸ್ರಾವಕಗಳು ಬೇಕಾಗುವ ದ್ರವದ ಪ್ರಮಾಣವನ್ನು ತಗ್ಗಿಸಿ ಬಿಡುತ್ತವೆ. ಈ ಸಂದರ್ಭದಲ್ಲಿ ಆಮ್ಲಜನಕದ ಉತ್ತೇಜಿತ ಕೇಂದ್ರೀಕರಣವನ್ನು ಹೆಚ್ಚಿಸಲಾಗುತ್ತದೆ;ಇದು ರೋಗನಿರೋಧಕ ಕೋಶಗಳಲ್ಲಿ 'ಉಸಿರಾಟದ ಸಿಡಿತ'ವನ್ನುಂಟು ಮಾಡುವ ಸವಲತ್ತು ವಿಧಾನ ಬಳಸಲಾಗುತ್ತದೆ.

ಎರಡನೆಯ ಹಂತದಲ್ಲಿ,ಅಂಗಾಂಶ ಜೀವಕೋಶಗಳ ನಿಷ್ಕ್ರಿಯತೆಯು ಕೋಶಗಳಲ್ಲಿ ಉರಿ ಮತ್ತು ರೋಗನಿರೋಧಕದ ಒಳಜೀವಕೋಶಗಳಿಗೆ ಈ ರೋಗ ಕಾರಣವು ಪ್ರವೇಶ ಪಡೆಯುತ್ತದೆ. ಈ ಶ್ವಾಸನಾಳ ತೀವ್ರ ನೋವು ಅಂಗಾಂಶ ಕುಳಿಗಳನ್ನು ದಪ್ಪನಾಗಿಸುತ್ತದೆ,ಇದರ ಮಧ್ಯೆ ಒಂದು ಖಾಲಿ ಜಾಗ ನಿರ್ಮಾಣವಾಗುತ್ತದೆ.ಆಗ ಆಮ್ಲಜನಕವುರಕ್ತಕ್ಕೆ ಹರಿಯಲು ಅಡತಡೆ ನಿವಾರಿಸಲಾಗುತ್ತದೆ. ಇದು ಜೀವಕೋಶಗಳಿಗೆ ಹೋಗುವ ಅನಿಲ ವಿನಿಮಯ ಮಾರ್ಗಕ್ಕೆ ಒಯ್ಯುತ್ತದೆ.ಇದರೊಡನೆ ಉಸಿರಾಟದ ಕಾರ್ಯ ಹೆಚ್ಚಳವಾಗುತ್ತದೆ.ಹೀಗೆ ವಾಯು ಮಾರ್ಗದ ಎಳೆ ತಂತುವಿನ ವಿಧಾನವನ್ನು ಅನುಸರಿಸುತ್ತದೆ.

ಹೆಚ್ಚೆಂದರೆ ಈ ಕೊರತೆಯ ಲಕ್ಷಣವು ಅಗತ್ಯ ಉತ್ಪಾದಕವನ್ನು ಕಡಿಮೆ ಮಾಡಿ ಎರಡನೆಯ ಹಂತದ II ನಿಮೊಸೈಟ್ಸ್ ಅಂಗಾಂಶ ಕುಳಿ ಕಾರ್ಯ ಕುಸಿಯಬಹುದು,ಅಥವಾ ಸಂಪೂರ್ಣವಾಗಿ ಪ್ರವಾಹ ರೀತಿಯ ಅಡತಡೆಯ ಅವಘಡವಾಗಬಹುದು. ಈ ಗಾಳಿಯ ಕೊರತೆ ಯ ಪರಿಸ್ಥಿತಿ ARDS ನಲ್ಲಿ ಮತ್ತೆ ಬಲಗಡೆಯಿಂದ-ಎಡಗಡೆಗೆ ಹರಿವಿನ ಮೂಲಕ ತನ್ನ ಲಕ್ಷಣ ತೋರುತ್ತದೆ.ಹೀಗೆ ಶ್ವಾಸನಾಳದಲ್ಲಿರುವ ಸಣ್ಣ ಸ್ನಾಯು ಕಡಿಮೆ ಗಾಳಿಯನ್ನು ಪಡೆಯುತ್ತದೆ'ಅಲ್ಲಿ ಆಮ್ಲಜನಕ ರಕ್ತದೊಂದಿಗೆ ಹೋಗದೇ ಶ್ವಾಸ ನಾಳದ ಒಳಭಾಗದಲ್ಲಿ ಹೆಚ್ಚಿನ ಹರಿವನ್ನುಂಟು ಮಾಡುತ್ತದೆ.

ಹೀಗೆ ಕುಸಿದು ಹೋದ ಆ ಸಣ್ಣ ಸ್ನಾಯು (ಮತ್ತು ಸಣ್ಣ ಶಾಖೆಯಂತಿರುವ ಸ್ನಾಯು ಭಾಗವು)ಗಾಳಿ ವಿನಿಮಯಕ್ಕೆ ಅವಕಾಶ ನೀಡುವುದಿಲ್ಲ. ಯಾವುದೇ ರೋಗಿಗಳಲ್ಲಿ ಈ ತೆರನಾದ (ಪಾವೊ)PaO2 60 ರಷ್ಟರದ mmHg (8.0 kPa)ಪ್ರಮಾಣದ ಬೆಳವಣಿಗೆಯು ಸಾಮಾನ್ಯವಾಗಿರುವಂತಹದ್ದೇನಲ್ಲ.ಆದರೆ ಇಲ್ಲಿ 100% ರಷ್ಟು ಆಮ್ಲಜನಕವನ್ನು ಗಾಳಿ ವ್ಯವಸ್ಥೆ ಮೂಲಕ ನೀಡಿದರೂ ಇಲ್ಲಿ ಅಡಚಣೆ ತಪ್ಪಿದ್ದಲ್ಲ.

ಗಾಳಿ ಹರಿಯುವುದರ ಹಾನಿಯಂದ ರೋಗಿ ಯಾವ ರೀತಿಯ ಸಂಕಷ್ಟ ಎದುರಿಸುತ್ತಿದ್ದಾನೆಂಬುದನ್ನು ಆತನ ಕಾಯಿಲೆ ಮಟ್ಟ ಮತ್ತು ಇನ್ನುಳಿದ ಪರಿಸ್ಥಿಗಳನ್ನು ಅವಲಂಬಿಸಿದೆ. ನ್ಯುಮೇನಿಯಾದಿಂದ ಪ್ರಚೋದನೆಯಾದ ARDS ಯಾವಾಗಲೂ, ಉದಾಹರಣೆಗಾಗಿ ನಾಳದ ಮೂಲಕ ಹಾಯುವ ಗಾಳಿಯನ್ನು ಶುದ್ದೀಕರಸಲು ವಿಫಲವಾದಾಗ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಇವುಗಳು ಸಾಮಾನ್ಯವಾಗಿ ಕೆಳಭಾಗದ ಹಾಲೆಗಳ ಮೇಲೆ ವಿತರಿಸಲ್ಪಡುತ್ತವೆ.ಅವು ತಮ್ಮ ಸ್ಥಿತಿಗನುಗುಣವಾಗಿ ವಿವಿಧ ಅಂಗಾಂಶದ ಕುಳಿಗಳ ಮೇಲೆ ಅಲ್ಲದೇ ಆರಂಭಿಕವಾಗಿ ಪರಿಣಾಮಕ್ಕೀಡಾದ ಭಾಗದ ಮೇಲೆ ವರ್ತಿಸುತ್ತವೆ.

ಕೀವು ತುಂಬಿದ ಹುಣ್ಣುಗಳು ಅಥವಾ ಅಪಘಾತ-ಮೂಲಕ ಪರಿಣಾಮಕ್ಕೊಳಗಾಗಿರುವ ARDS ಇವು ಹೆಚ್ಚು ಪ್ಯಾಚ್ ನಂತಿರುವುದಲ್ಲದೇ ಪ್ರಸರಣಗೊಳ್ಳುತ್ತವೆ. ಹಿಂಭಾಗದ ಮತ್ತು ಮೂಲ ಭಾಗಗಳು ಯಾವಾಗಲೂ ಹೆಚ್ಚು ದುಷ್ಪರಿಣಾಮಕ್ಕೊಳಗಾಗುತ್ತವೆ.ಆದರೆ ಅಂಗಾಂಶ ಕಣಗಳ ವಿತರಣೆ ಅಸಮರ್ಪಕವಾಗಿರುತ್ತದೆ.

ಗಾಳಿ ಹರಿಯುವುದರ ವ್ಯವಸ್ಥೆಯ ಹಾನಿಯಿಂದ ಶ್ವಾಸಕೋಶದ ಯಾಂತ್ರಿಕ ವಿಧಾನದ ಮಹತ್ವದ ಬದಲಾವಣೆಗಳು ಕಾಣುತ್ತವೆ. ಇಂತಹ ಬದಲಾಯಿಸುವಿಕೆಗಳು ಉರಿಯೂತದ ಪ್ರಕರಣದಲ್ಲಿ ತಮ್ಮ ಅಧಿಕ ಪ್ರಭಾವ ತೋರುತ್ತವೆ.ಗಾಳಿ ವ್ಯವಸ್ಥೆ ಮೂಲಕ ಚಿಕಿತ್ಸೆ ಪಡೆಯುವ ರೋಗಿಗಳಲ್ಲಿ ARDS ನ ಅಧಿಕತೆ ಕಾಣುವುದು ಸಹಜವಾಗಿದೆ.

ಯಾಂತ್ರಿಕ ವಿಧಾನದ ಒತ್ತಡ[ಬದಲಾಯಿಸಿ]

ಯಾಂತ್ರಿಕ ವಿಧಾನದ ಗಾಳಿ ನೀಡುವ ವ್ಯವಸ್ಥೆಯ ಚಿಕಿತ್ಸೆಯು ARDS ಕಾಯಿಲೆಯವರಲ್ಲಿ ಅಗತ್ಯವಾಗಿದೆ.(ಯಾಕೆಂದರೆ ಉಸಿರಾಟದ ಗಾಳಿ ತೊಂದರೆ ಕಾಯಿಲೆ)ಇಲ್ಲಿ ಉಲ್ಬಣವಾಗುತ್ತದೆ.ಹೀಗೆ ಉಸಿರಾಟದ ಕಾರ್ಯಚಟುವಟಿಕೆಯು (WOB)ಬದುಕಿನೊಂದಿಗೆ ಸ್ಪರ್ಧಾತ್ಮಕ ರೀತಿಯಲ್ಲಿನ ಮಟ್ಟ ಮುಟ್ಟುತ್ತದೆ. ಹೀಗೆ ಯಾಂತ್ರಿಕ ಗಾಳಿ ಉಸಿರಾಟದ ವ್ಯವಸ್ಥೆಯಿಂದ ಉಸಿರಾಟಕ್ಕೆ ನೆರವಾಗುವ ಮಾಂಸ-ಖಂಡದ ಸ್ನಾಯು ಭಾಗಗಳಿಗೆ ವಿಶ್ರಾಂತಿ ನೀಡಲಾಗುತ್ತದೆ.ಇದರಿಂದ ರೋಗಿಯ ನೈಸರ್ಗಿಕ ಗಾಳಿ ಮಾರ್ಗಗಳನ್ನು ರಕ್ಷಿಸಲಾಗುತ್ತದೆ.

ಆದಾಗ್ಯೂ ಈ ಯಾಂತ್ರಿಕ ಗಾಳಿ ವ್ಯವಸ್ಥೆಯು ಅಪಾಯಕಾರಿಯಾಗಿ ಬೆಳೆಯಬಹುದು ಇಲ್ಲವೆ ARDS ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣ ಮಾಡಬಹುದು.[೧]

ನಂಜುಕಾರಕಗಳ ಹೆಚ್ಚಳವಲ್ಲದೇ ಈ ಆಕ್ರಮಣಕಾರಿ ಎನಿಸುವ ಗಾಳಿ ವ್ಯವಸ್ಥೆ ಚಿಕಿತ್ಸೆಯು ಶ್ವಾಸನಾಳದ ಗಾಳಿ ಕೊಳವೆಗೆ ನಳಿಕೆ ತೂರಿಸುವ ಕ್ರಿಯೆಯು ಶ್ವಾಸಕೋಶದ ಚಲನೆಯನ್ನು ARDS ನಲ್ಲಿ ತೀವ್ರಗೊಳಿಸುತ್ತದೆ.ಇದರಿಂದ ಈ ತಾಂತ್ರಿಕತೆಗಳನ್ನು ಬಳಸುವುದರಿಂದ ಮರಣ ಪ್ರಮಾಣದಲ್ಲಿ ಏರಿಕೆಯಾಗುತ್ತದೆ.[೧]

ಅಮಾಟೊ ಎಟ್ ಆಲ್ 1998 ರಲ್ಲಿ ಈ ಕಾಯಿಲೆಯವರಿಗೆ ಕಡಿಮೆ ವೇಗ ತೀವ್ರತೆಯ ಗಾಳಿ ಪ್ರಮಾಣಗಳ (V t) (6 mL·kg−1).[೧][೫] ಪೂರೈಕೆಯಿಂದ ಅವರಲ್ಲಿ ಸುಧಾರಣೆ ಕಾಣಬಹುದೆಂದು ಅವರು ವಿಷಯ ಮಂಡಿಸಿದರು ಇದರ ಫಲಿತಾಂಶಗಳನ್ನು NIH 2000 ರಲ್ಲಿ ಪ್ರಾಯೋಜಿಸಿದ ಅಧ್ಯಯನದಿಂದ ಧೃಢಪಡಿಸಲಾಯಿತು.[೬] ಇವೆರಡೂ ಅಧ್ಯಯನದ ಬಗೆಗೆ ವಿವಿಧ ಕಾರಣಗಳಿಗಾಗಿ ವ್ಯಾಪಕ ಟೀಕೆಗಳು ಬಂದವು.ಆದರೆ ಈ ಕಡಿಮೆ ವೇಗದ ಗಾಳಿ ವ್ಯವಸ್ಥೆ ಬಗ್ಗೆ ಪ್ರಯೋಗ ಮಾಡಿದವರಲ್ಲಿ ಈ ಕೃತಿಕಾರರು ಮೊದಲಿಗರಲ್ಲ.ಆದರೂ ಅವರು ಅಲ್ಪ ಪ್ರಮಾಣದ ಗಾಳಿ ನೀಡಿಕೆ ಹಾಗು ARDS ಗಳ ಮೇಲೆ ವಿಶೇಷ ಬೆಳಕು ಚೆಲ್ಲಿದರು.

ಈ ವೆಂಟಿಲೇಟರ್ ವ್ಯವಸ್ಥೆಗಳ ಮೂಲಕ ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಅದರ ಸಣ್ಣ ಸ್ನಾಯುವಿಗೆ ಪೆಟ್ಟಾಗಬಹುದು.ಇದು ಶ್ವಾಸನಾಳದ ತೂರು ಕೊಳವೆಭಾಗದ ನಾಳಕ್ಕೆ ಹಾನಿಯನ್ನುಂಟು ಮಾಡಬಹುದು. ಇದರ ವಾಯು ಒತ್ತಡವು ಕುಸಿದ ಮತ್ತು ಗಾಳಿ ಹರಿವನ್ನು ಬಿಡುವ ಸ್ನಾಯುಗಳ ಅಂತರಮುಖಾಮುಖಿಯಾದಂತೆ ಇಲ್ಲಿ ಗೋಚರಿಸುತ್ತದೆ.ಇದು ಗಾಳಿ ಮಾರ್ಗದ ಘಟಕಗಳ ವೈಫಲ್ಯಕ್ಕೆ ಕಾರಣವಾಗಬಹುದು.ಸುತ್ತಲಿನ ರಕ್ತಅಂಗಾಂಶಗಳ ಗಡಸುಗೊಳ್ಳುವಿಕೆಯಿಂದ 'ಬಿರುಸಾದ'ಮಾರ್ಗ ಸೃಷ್ಟಿಗೊಳ್ಳುತ್ತದೆ. ಕಿರುಗುಳಿ ಅಂಗಾಂಶದ ಸುತ್ತಲಿನ ಈ ಮುಖಾಮುಖಿಯು ಕಡಿಮೆ ಒತ್ತಡವನ್ನುಂಟುಮಾಡುತ್ತದೆ.

ಈ ಕಡಿಮೆ ಒತ್ತಡವು ವರ್ಗಾವಣೆ ಸಂಕೇತದ ವಿಧಾನವನ್ನು ಅಂಗಾಂಶದ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ.ಇದರಿಂದಾಗಿ ಉರಿಯೂತದ ಮಾಧ್ಯಮಗಳ ಬಿಡುಗಡೆಯಾಗುತ್ತದೆ.

ಇಂತಹ ಒತ್ತಡವನ್ನು ಶ್ವಾಸನಾಳದ ನಳಿಕೆ ಒತ್ತಡ (ಅಂದರೆ (ಗಾಳಿ ಒತ್ತಡ) (P lಎನ್ನುತ್ತಾರೆ.)ವೆಂಟಿಲೇಟರ್ ನಿಂದಾಗಿ ನಿರ್ಮಾಣವಾಗುತ್ತದೆ,ಅಥವಾ ಇದು ಚಕ್ರೀಯ ವ್ಯತ್ಯಾಸಗಳನ್ನು ತೋರಿಸುತ್ತದೆ. ಕಡಿಮೆ ವೆಂಟಿಲೇಟೆಡ್ ಅಥವಾ ಕಡಿಮೆ ಯಾಂತ್ರಿಕ ಗಾಳಿ ಪಡೆವ ರೋಗಿಗಳಲ್ಲಿ ಉತ್ತಮ ಪ್ರತಿಕ್ರಿಯೆ ಮೂಡಿಬಂದಿದೆ.ಆ ಕೆಳಮುಖ ಪ್ರಮಾಣ V t ಆಗಿದೆ. ಇದರಲ್ಲಿ ಅಧಿಕ ಪರಿಣಾಮಕಾರಿಯಾಗಿದೆ.ಆವಾಗ ಈ ಲಾಭದ ಅನುಕೂಲಕ್ಕಾಗಿ ಅದನ್ನು ಒತ್ತಡ ತಡೆಯುವ ಪರಿಣಾಮಕಾರಿ P lಫಲಿತಾಂಶ ಪಡೆಯಲು ಸಾಧ್ಯವಿದೆ. ವರ್ಗಾವಣೆಯ ಶ್ವಾಸನಾಳ ಮಾರ್ಗದ ಒತ್ತಡ,ದ ಒಂದು ಪರೋಕ್ಷ ಚಟುವಟಿಕೆ ಯು V t ಪ್ರಮಾಣಗಳನ್ನು ಆ ವೆಂಟಿಲೇಟರ್ ಮೂಲಕ ಅಳವಡಿಸಲ್ಪಡುತ್ತದೆ.ಕೇವಲ ಸಮಸ್ಥಿತಿಯ ಒತ್ತಡಗಳು ಪ್ರಾಯೋಗಿಕವಾಗಿರುತ್ತವೆ.(ಇದೊಂದು ಪರ್ಯಾಯವಾಗಿ ನಿಜವಾದ P l) ಒತ್ತಡಗಳ ಕಡಿಮೆಯೆಂದರೆ 32 cmH2O (3.1 kPa) ಪ್ರಮಾಣವು ಬದುಕಿನ ಶೇಕಡಾವಾರನ್ನು ಹೆಚ್ಚಿಸಿದೆ.

ಇದೇ ರೀತಿಯಲ್ಲಿ P l ಸಮೀಕರಣವನ್ನು ಸಣ್ಣ ಗುಳಿಗಳ ಮೇಲೆ ಬರುವ ಒತ್ತಡವನ್ನು ಶ್ವಾಸಕೋಶ ನಾಳದ ಯಾವ ಭಾಗದ ಮೇಲ್ಮೈಗೆ ಇದು ತೆರೆದುಕೊಂಡಿದೆ ಎಂಬುದನ್ನು ತಿಳಿಯಲಾಗುತ್ತದೆ. ARDS ನ್ನು ಸಾಮಾನ್ಯವಾಗಿ ಗಾಳಿ ಮಾರ್ಗದಲ್ಲಿನ ಸಾಂಪ್ರದಾಯಿಕವಲ್ಲದ ಅಂಗಾಂಶಗಳ ಕಡಿಮೆಯಾಗುವಿಕೆ ಲಕ್ಷಣ ಎನ್ನಲಾಗುತ್ತದೆ.ಇದು ಮೇಲ್ಮಟ್ಟದ ಒತ್ತಡ ಪ್ರವೃತ್ತಿ P l ಇಲ್ಲಿವರೆಗೆ ಬೆಳೆದು ಅದೇ ತೆರನಾದ V t,ಮತ್ತು ಅದರೆಡೆಗಿನ ಅಧಿಕ ಒತ್ತಡವನ್ನು ಕಡಿಮೆ ರೋಗಪೂರಿತ ಘಟಕಗಳ ಬೀಳುವಂತೆ ನೋಡಿಕೊಳ್ಳುತ್ತದೆ.

ಕುಳಿ ಮಾರ್ಗದಲ್ಲಿ ಅಸಮವಲ್ಲದ ಅಥವಾ ಅಸಂಪ್ರಯದಾಯಕವಲ್ಲದ ಇದು ವಿವಿಧ ಹಂತಗಳಲ್ಲಿ ತನ್ನ ಗುರುತ್ವವನ್ನು ಸಾಧಿಸಿ ಯಾವ ವಿಧದಲ್ಲಿ ಒಡ್ಡಿಕೊಳ್ಳಬೇಕೆಂಬುದನ್ನು ವಿವರಿಸುತ್ತದೆ.ಇದು ವಿಭಿನ್ನ ಹರಿಯುವಿಕೆಯ ಒತ್ತಡಗಳ ಮಾರ್ಗಗಳ ಮೂಲಕ ರಕ್ತ ಪರಿಚಲನೆಯಾಗುತ್ತದೆ. ಅಂತಿಮವಾಗಿ ಉದರ ಒತ್ತಡವು ಶ್ವಾಸನಳಿಕೆಯ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗಿ ಶ್ವಾಸಕೋಶದ ಕುಳಿಗಳ ಮೇಲೆ ತನ್ನ ಪರಿಣಾಮ ಬೀರುತ್ತದೆ.ಇದರ ಒತ್ತಡ ಹೆಚ್ಚಾದಾಗ ಈ ಶ್ವಾಸನಾಳ ಮಾರ್ಗದ ಘಟಕಗಳು ಕುಸಿದುಹೋಗುತ್ತವೆ.

ಹೀಗೆ ವಿಭಿನ್ನ ಮಾರ್ಗ ಕುಳಿಯ ಯಾಂತ್ರಿಕ ಅಂಶಗಳು ಆವಾಗ ಅಡತಡೆಗೆ ಸಿಲುಕುತ್ತವೆ.ಇದರಲ್ಲಿ ವೇಳೆಯ ಸ್ಥಿರತೆಗಳು (ಇವು ಮಾರ್ಗ ಕುಳಿಯ ಸ್ನಾಯುಬಂಧಕಗಳ ಒಟ್ಟುಸೇರುವಿಕೆಯ ಸಹನೀಯ ವಾತಾವರಣವನ್ನುಂಟು ಮಾಡುತ್ತವೆ. ಬಹುಕಾಲದ ನಿರಂತರ ಹರಿವಿನ ಸಣ್ಣ ಗಾಳಿ ಮಾರ್ಗದಲ್ಲಿ ಉಬ್ಬರದ ಸ್ಥಿತಿಯಲ್ಲಿರುವಾಗ ಅದರ ಸುತ್ತಲಿನ ಭಾಗವು ತನ್ನ ಸೂಚನೆಯನ್ನು ತೋರುತ್ತದೆ.ಇಲ್ಲಿ ನೀರಿನ ಅಥವಾ ಪರಿಚಲನೆಯಂತೆ ನೀರು-ಗಾಳಿ ಮುಖಾಮುಖಿಯಾಗುವ ಸಾಧ್ಯತೆ ಇದೆ.(ಮೇಲ್ಭಾಗದ ಹರಿವಿನ ನಷ್ಟ ಉಂಟಾಗುತ್ತದೆ)

ಸಣ್ಣ ಹರಿವಿನ ಮಾರ್ಗವು ಮುಕ್ತವಾಗಿ ತೆರೆದಿದ್ದು ಧನಾತ್ಮಕ ಕೊನೆ-ಅಂಚಿನ ಉಸಿರು ನಾಳದ ಒತ್ತಡವಾಗಿ ಮಾರ್ಪಡಲು ಅದು ಹರಿವನ್ನು ಸುಗಮಗೊಳಿಸುತ್ತದೆ.ಸದ್ಯ ಆಧುನಿಕ ಕೃತಕ ಗಾಳಿ ಸೇವನೆಯ ವ್ಯವಸ್ಥೆಯು ತಾತ್ಕಾಲಿಕವಾಗಿ ಉಸಿರಾಟದ ಚಕ್ರದಲ್ಲಿ ಸಹಾಯಕವಾಗುತ್ತದೆ. ಇದು ರೋಗಕಾರಕ ಕೋಶಗಳು ನಿಧಾನವಾಗಿ ಕುಸಿಯುವಂತಾಗಲು ಹೆಚ್ಚಿನ ಮಟ್ಟದ ಒತ್ತಡ ಚಕ್ರೀಯತೆಯ ಅಗತ್ಯವನ್ನು ಹೇಳುತ್ತದೆ.ಹೀಗಾಗಿ ಈ ಸಮೀಕರಣವು P l/ಸಮಸ್ಥಿಗೆ ತರಬಲ್ಲದು. ಹೊಸ ಕೃತಕ ಗಾಳಿ ವ್ಯವಸ್ಥೆಯಲ್ಲಿನ ಅಳವಡಿಕೆಗಳು ಗಾಳಿ ಒತ್ತಡವನ್ನು ಗರಿಷ್ಟಗೊಳಿಸಲು ಕುಸಿದ ಶ್ವಾಸಕೋಶದ ಘಟಕಗಳನ್ನು ಕಡಿಮೆ ಒತ್ತಡದ ಸ್ಥಿತಿಗೆ ಒಯ್ಯುತ್ತದೆ.ಇದು ಮುಚ್ಚಿಹೋದ ಗಾಳಿ ಕವಾಟಗಳನ್ನು ತೆರೆಯಲು ನೆರವಾಗುತ್ತದೆ.

ಅದರಲ್ಲಿನ ರೋಗಕಾರಕ ಭಾಗವು ಸಾಂಪ್ರದಾಯಿಕವಲ್ಲದ ಗಾಳಿ ಮಾರ್ಗಗಳ ಮೂಲಕ ಆಮ್ಲಜನಕ ಪೂರೈಸಿ ಅಲ್ಲಿ ಗ್ರಾಹ್ಯ ಮತ್ತು ಅದರ ಪರಿಣಾಮಕ್ಕೆ ಕಾರಣವಾಗುತ್ತವೆ. ಇದು ವೈದ್ಯಕೀಯ ಪ್ರಾಯೋಗಿಕ ವಿಧಾನದಲ್ಲಿ ಸೂಕ್ತವಾದಾಗ ಕೃತಕ ಗಾಳಿ ಪಡೆದ ರೋಗದ ಕೋಶ ಮಾರ್ಗವು ಇದನ್ನು ರೋಗ ನಿವಾರಣಾ ಪ್ರಕ್ರಿಯೆಯಲ್ಲಿ ಅದೇ ಗುರಿ ಸಾಧಿತವಾಗುವಂತೆ ಮಾಡುತ್ತದೆ.

ಮುನ್ನಡೆ[ಬದಲಾಯಿಸಿ]

ಈ ರೋಗಕ್ಕೆ ಕಾರಣವಾಗುವ ಲಕ್ಷಣಗಳು ಅಥವಾ ಗಾಯದ ಅಂಶವನ್ನು ತೆಗೆದು ಹಾಕದಿದ್ದರೆ,ARDS ನಿಂದಾಗಿ ಶ್ವಾಸಕೋಶದಿಂದ ಉರಿಯೂತದ ಪರಿಣಾಮಗಳುಂಟಾಗುತ್ತವೆ.ಇದು ಮುಂದೆ ವ್ಯವಸ್ಥಿತವಾಗಿ ಉರಿಯೂತದ ಪ್ರಕ್ರಿಯೆಯ ಲಕ್ಷಣ ತೋರುತ್ತದೆ.(ಅಥವಾ ಶ್ವಾಸನಾಳದ ನಂಜಾದರೆ ಅದು ಕೀವು ತುಂಬಿದ ಸ್ಥಿತಿಗೆ ಒಯ್ಯುತ್ತದೆ)[೧] ಇದಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳು ಆಘಾತ ಮತ್ತು/ಅಥವಾ ಬಹು ಅಂಗಾಂಶ ವಿಫಲತೆಗೆ ಕಾರಣಗಳನ್ನು ಹುಡುಕುತ್ತಿದ್ದು ಕೀವಿನಿಂದಾದ ಹುಣ್ಣು ಮಾಯಲು ಸೂಕ್ತ ರೋಗ ನಿದಾನ ವೈದ್ಯಕೀಯ ಕ್ರಮವನ್ನು ಅನುಸರಿಸಲಾಗುತ್ತದೆ.

ಈ ವಿಫಲತೆಯಿಂದಾಗಿ ಆಮ್ಲಜನಕದ ಸಾಗಾಟ ವ್ಯತ್ಯವಾಗುತ್ತದೆ;ARDS ನಲ್ಲಿನ ಪ್ರಮುಖ ಸಮಸ್ಯೆ ಎಂದರೆ ಇದೇ ಉಸಿರಾಟದದೊಂದಿಗೆ ಅತ್ಯಧಿಕ ಆಸಿಡಿಟಿ ಸಮಸ್ಯೆ.ಶ್ವಾಸನಾಳದ ಅನುಮತಿ ನೀಡುವ ಗಾಳಿ ಮಾರ್ಗವು ಉರಿಯೂತದ ಗಾಯದಿಂದಾಗಿ ARDS ನಲ್ಲಿ ಪ್ರಮುಖ ಅಪಾಯಕಾರಿಯಾಗಿದೆ.ಇದು ಅನುಮತಿ ಮಟ್ಟ ಮೀರಿದ ಇಂಗಾಲಡೈಆಕ್ಸೈಡ್ ನ ಅಧಿಕ ಪ್ರಮಾಣವನ್ನು ಲಕ್ಷಣವಾಗಿ ತೋರುತ್ತದೆ.

ತೀವ್ರತರವಾದ ಕಾಯಿಲೆಯು 'ನಿರ್ನಾಳ ಗ್ರಂಥಿಯ ರೋಗಜನ್ಯ'ಭಾಗವಾಗುತ್ತದೆ.ಇಲ್ಲಿ ಕೀವು ತುಂಬಿದ ಹುಣ್ಣಿನ ಭಾಗವು SIRS ನೊಂದಿಗೆ ತೀವ್ರ ಮಟ್ಟಕ್ಕೆ ಮುಟ್ಟಿ ಶ್ವಾಸನಾಳದ ನಿಷ್ಕ್ರಿಯತೆಗೆ ಕಾರಣವಾಗುತ್ತದೆ.ಇದು ಮುಂದೆ ಆಮ್ಲಜನಕದ ಹರಿವಿಗೆ ಅಡ್ಡಿಯನ್ನುಂಟು ಮಾಡುತ್ತದೆ.

ಚಿಕಿತ್ಸೆ[ಬದಲಾಯಿಸಿ]

ಜನರಲ್ (ಸಾಮಾನ್ಯ)[ಬದಲಾಯಿಸಿ]

ಈ ತೀವ್ರ ಉಸಿರಾಟ ತೊಂದರೆಯ ಬಳಲಿಕೆಯ ಲಕ್ಷಣ ಕಂಡ ಕೂಡಲೇ ಯಾಂತ್ರಿಕ ಗಾಳಿ ವ್ಯವಸ್ಥೆ ಮಾಡಿ ತೀವ್ರ ನಿಗಾ ಘಟಕದಲ್ಲಿಡಲಾಗುತ್ತದೆ. ಈ ಗಾಳಿ ವ್ಯವಸ್ಥೆಯನ್ನು ಶ್ವಾಸನಾಳದ ಮೂಲಕ ನಾಳ ತೂರಿಸುವ ಅಥವಾ ಸಣ್ಣ ಶಸ್ತ್ರಚಿಕಿತ್ಸೆ ಮೂಲಕ ಇದನ್ನು ಸುದೀರ್ಘ ಉಸಿರಾಟ ಕಾಯಿಲೆ ಲಕ್ಷಣದಲ್ಲಿ ಬಳಸಬಹುದಾಗಿದೆ.(≥2 ವಾರಗಳು)ತೀವ್ರವಾದಾಗ ಈ ಕೃತಕ ಗಾಳಿ ವ್ಯವಸ್ಥೆ ಅನಿವಾರ್ಯವಾಗುತ್ತದೆ.

ಕಾಯಿಲೆಯ ಪ್ರಾರಂಭದಲ್ಲಿ ಅತಿ-ಆಕ್ರಮಣಕಾರಿಯೆನಿಸುವ ವೆಂಟಿಲೇಶನ್ ಅಥವಾ ಗಾಳಿ ವ್ಯವಸ್ಥೆ ಅಗತ್ಯವಿದ್ದರೂ ಕಾಯಿಲೆ ಮುಂದುವರೆಯುವ ಪ್ರಮಾಣವನ್ನು ಕಡಿಮೆ ಮಾಡಬಹುದು.(ಒಂದು ಸಾಮಾನ್ಯ ಮಾದರಿ ನುಮೊನೊಯಾಗಳು,ಶ್ವಾಸನಾಳದ ಬಿಗಿಗೊಳ್ಳುವಿಕೆ ಇವು ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಯಾದ ರೋಗಿಗಳಲ್ಲಿ ಕಂಡು ಬರುತ್ತದೆ.

ಕಾಯಿಲೆಯ ಕಾರಣವನ್ನು ಕಂಡು ಹಿಡಿಯಲು ಮೊದಲ ವಿಧಾನದೊಂದಿಗೆ ARDS ನ ಚಿತ್ರಣವನ್ನು ಸ್ಪಷ್ಟವಾಗಿ ತಿಳಿಯಬೇಕಾಗುತ್ತದೆ.

ಕೂಡಲೇ ನಂಜುನಿವಾರಕಗಳನ್ನು ನೀಡಿ ಯಾವ ಅಂಗಾಂಗದಲ್ಲಿ ಈ ಲಕ್ಷಣವನ್ನು ಕಾಣಲಾಗಿದೆ ಎಂದು ತಿಳಿಯುವ ಫಲಿತಾಂಶವನ್ನು ಪ್ರಾಯೋಗಿಕ ಸಂಸ್ಕರಣದ ಮೇಲೆ ಲಭ್ಯತೆ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಪ್ರಯೋಗದ ನಂತರದ ಫಲಿತಾಂಶಗಳ ಮೇಲಿನ ಚಿಕಿತ್ಸೆಗಳು ಅಲ್ಲಿನ ಅಂಗಾಂಶದ ಮೇಲಿನ ಪರಿಣಾಮ ಗಳನ್ನು ಅನುಸರಿಸಿ ಸೂಕ್ತವಾಗಿ ಮಾಡಬೇಕಾಗುತ್ತದೆ. ಸುಮಾರು 60% ಕ್ಕಿಂತ ಅಧಿಕ ARDS ನ ರೋಗಿಗಳು (ಗಾಳಿ ತೂರುವ ಮಾರ್ಗ)ದ ಶ್ವಾಸನಾಳದ ನಂಜಿಗೆ ಒಳಗಾಗುತ್ತಾರೆ.ಶ್ವಾಸಕೋಶದ ಗಾಯದ ನಂತರ ಇಲ್ಲವೆ ಅದರ ಮುಂಚಿನ ಪರಿಣಾಮಗಳಿಗೆ ಈಡಾಗುತ್ತಾರೆ.

ನಂಜಿನ ಮೂಲವನ್ನು ತೆಗೆದು ಹಾಕಲು ಸಾಧ್ಯವಿರುವ ಶಸ್ತ್ರ ಚಿಕಿತ್ಸೆಯನ್ನು ಮಾಡಲೇಬೇಕಾಗುತ್ತದೆ. ಯಾವಾಗ ಕೀವು ತುಂಬಿದ ಹುಣ್ಣು ಇದೆ ಎಂದು ಗೊತ್ತಾದಾಗ ಅಲ್ಲಿನ ಅಂಗಾಂಶಗಳ ಪರಿಸ್ಥಿತಿ ನೋಡಿ ಚಿಕಿತ್ಸೆಗೆ ಮುಂದಾಗಬೇಕಾಗುತ್ತದೆ.

ಸಾಮಾನ್ಯವಾಗಿ ಕೃತಕ ಗಾಳಿ ಇಲ್ಲವೆ ಯಾಂತ್ರಿಕ ಗಾಳಿ ವ್ಯವಸ್ಥೆಯನ್ನು ಒಂದು ಪೂರಕ ವಿಧಾನವೆಂದು ಅನುಸರಿಸಲಾಗುತ್ತೆ.ಅದರ ನಂತರ ಔಷಧೀಯ ಕ್ರಮಗಳಿಗೆ ನೀವು ಅದರ ಮುಂದಿನ ಫಲಿತಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು.ಆದರೂ ಈ ಪ್ರಕ್ರಿಯೆಗಳು ಅಷ್ಟಾಗಿ ಸಷ್ಟವಾಗಿಲ್ಲ. ಸದ್ಯ ಈ ಗಾಳಿ ನೀಡುವ ವ್ಯವಸ್ಥೆಯ ವಿಧಾನವು ಸೂಕ್ತವಾದುದೆಂಬ ಚರ್ಚೆಗಳೂ ನಡೆದಿವೆ.ನಿಜವಾದ ಚಿಕಿತ್ಸಾ ವಿಧಾನವನ್ನು ಅನುಸರಿಸಿದರೆ ರೋಗಿಯನ್ನು ಪ್ರಾಣಾಪಾಯದಿಂದ ತಪ್ಪಿಸಬಹುದು

ಯಾಂತ್ರಿಕ ಗಾಳಿ ಪೂರೈಕೆ (ವೆಂಟಿಲೇಶನ್ )[ಬದಲಾಯಿಸಿ]

ಒಟ್ಟಾರೆ ಇದರ ಉದ್ದೇಶವೆಂದರೆ ಉಸಿರಾಟದ ಬಳಲಿಕೆ ಹೋಗಿಸಲು ತೀವ್ರ ಗತಿಯಲ್ಲಿ ವೆಂಟಿಲೇಶನ್ ವಿಧಾನದ ಮೂಲಕ ಉಸಿರಾಟಕ್ಕೆ ಅನುವು ಮಾಡಿಕೊಡಬೇಕಾದುದು ಪ್ರಥಮ ಚಿಕಿತ್ಸೆ ಎನಿಸಿದೆ. ಇದರಲ್ಲಿ ಮೂರು ಮಾನಕಗಳನ್ನು ಕಡ್ಡಾಯಗೊಳಿಸಲಾಗುತ್ತದೆ:(ಧನಾತ್ಮಕ ಗಾಳಿ ಒತ್ತಡ-ತುದಿ ತಲುಪಿ ರೋಗಿಗೆ ನಿರಾಳತೆ ನೀಡುವುದು.ಶ್ವಾಸನಾಳದ ಗಾಳಿ ಕುಳಿ ಸ್ನಾಯುಗಳ ಗರಿಷ್ಟ ಕಾರ್ಯ ನೋಡಿಕೊಳ್ಳುವುದು)ಅದಕ್ಕಾಗಿ ಗಾಳಿ ಮಾರ್ಗದ ಅಂಗಾಂಶಗಳನ್ನು ಸುರಕ್ಷಿತವಾಗಿಡಬೇಕಾಗುತ್ತದೆ.(ಇಲ್ಲಿ ಸಂಭವನೀಯ ಪರಿಣಾಮಗಳಿಗೆ ಕಾಯಬಹುದು.(ಇಲ್ಲಿ ಪ್ರಯೋಗದಿಂದ ಪಡೆದ ಫಲಿತಾಂಶಗಳ ಆಧಾರ ಅಗತ್ಯವಾಗಿದೆ.)[೭]

ಸಾಂಪ್ರದಾಯಿಕ ಚಿಕಿತ್ಸಾ ಕ್ರಮ ಗಾಳಿ ಹರಿವಿನ ಸಾಂದ್ರತೆಗಳನ್ನು (V t) ಇದರ ಮೂಲಕ 12-15 ml/kg.ಅವಲಂಬಿಸಿರುತ್ತದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಅತಿ ಹೆಚ್ಚಿನ ಗಾಳಿ ಹರಿಯುವಿಕೆ ಪ್ರಚೋದನೆಯು ಒಮ್ಮೊಮ್ಮೆ ವಾಲ್ಟ್ರೊಮಾ (ಶ್ವಾಸಕೋಶದ ಎರಡನೆಯ ಗಾಯಕ್ಕೆ ದಾರಿಯಾಗಬಹುದು.) ಈ ARDS ವೈದ್ಯಕೀಯ ಪರೀಕ್ಷಾ ಜಾಲವು ಅಥವಾ ARDSNet Archived 2010-07-21 ವೇಬ್ಯಾಕ್ ಮೆಷಿನ್ ನಲ್ಲಿ. ಇದರ ಬಗೆಗಿನ ಒಂದು ಗುರುತಿನ ಚಿನ್ಹೆಯಾಗಿದ್ದು,ಅದರ ಬಗೆಗಿನ ಪ್ರಯೋಗವು ಸುಧಾರಿತ ಮರಣ ಪ್ರಮಾಣ ತೋರಿದ್ದು ಕೂಡ ಈಗಿರುವ ಸಾಕ್ಷ್ಯವಾಗಿದೆ.ಗಾಳಿ ಹರಿಯುವಿಕೆಯನ್ನು ಶ್ವಾಸನಾಳದ ಮೂಲಕ ಇದರ 6 ml/kg ದರದಲ್ಲಿ ನೀಡಿದಾಗ ಸಾಂಪ್ರದಾಯಿಕ 12 ml/kg ಒತ್ತಡ ಹರಿವನ್ನು ಒದಗಿಸುವುದೂ ಒಂದು ವಿಧಾನವಾಗಿದೆ. ಕಡಿಮೆ ಒತ್ತಡ ಹರಿವಿನ ಪ್ರಮಾಣದ (V t) ಇವು ಹೆಚ್ಚು ಪ್ರಮಾಣದ ಇಂಗಾಲ ಡೈಆಕ್ಸೈಡ್ ಶೇಖರಣಕ್ಕೆ ಕಾರಣವಾಗಬಹುದು.ಮತ್ತು ಶ್ವಾಸಕೋಶದ ಕುಸಿತ[೧] ವು ಅದರ ಒಳಗಡೆಯ ಸತ್ತ ಕೋಶಗಳಿಂದಾಗಿ ಅಧಿಕ ಸತ್ತ ಕೋಶದ ಜಾಗಕ್ಕೆ ಕಾರಣವಾಗಬಹುದು.

ಕಡಿಮೆ ಪ್ರಮಾಣದ ಗಾಳಿ ಹರಿವನ್ನು ವೆಂಟಿಲೇಶನ್ ಮೂಲಕ ನೀಡಿದಾಗ ಸಾವಿನ ಪ್ರಕರಣಗಳು ಕಡಿಮೆಯಾಗಬಹುದು.ಇದರ ಬಗ್ಗೆ ಇತ್ತೀಚಿಗೆ ARDSnet ಮೂಲಕ NIH ಪ್ರಾಯೋಜಿತ ಪ್ರಯೋಗದಲ್ಲಿ ARDS ನ ಉಲ್ಬಣತೆ ಪ್ರಮಾಣವನ್ನು ಕಂಡು ಹಿಡಿಯಲಾಗಿದೆ.ಇಲ್ಲಿ 30 cm ಕ್ಕಿಂತ H2O ಕಡಿಮೆ ಪ್ರಮಾಣದ ವೆಂಟಿಲೇಶನ್ ಉಸಿರಾಟದ ಗತಿಗೆ ಪರ್ಯಾವವಾಗುತ್ತದೆಂಬುದು ಒಂದು ಫಲಿತಾಂಶದ ಅಧ್ಯಯನವಾಗಿದೆ.ARDSnet ನಲ್ಲಿ ದೊರಕಿದ ಅಂಕಿಅಂಶಗಳನ್ನು ನೋಡಿ ಒಷಧೋಪಚಾರವನ್ನು ಶಿಫಾರಸು ಮಾಡಬಹುದು.ಇದಕ್ಕಾಗಿ ರೋಗಿಯ ರೋಗದ ಪ್ರಭಾವ,ಸುರಕ್ಷತಾ ಮಟ್ಟ ಮೀರದ ಚಿಕಿತ್ಸೆ,ಇತ್ಯಾದಿಗಳನ್ನು ಗಮನಿಸಬೇಕಾಗುತ್ತದೆ.(ಇದಕ್ಕಾಗಿ ಹೆಗೆರ್ ಎಟ್ ಆಲ್ ನ ಅಮೆರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್ 2005 ನೋಡಬಹುದು)

APRV ಶ್ವಾಸ ನಾಳ ಮಾರ್ಗದ ಗಾಳಿ ಒತ್ತಡದ ವೆಂಟಿಲೇಶನ್ (ಏರ್ ವೆ ಪ್ರೆಸ್ಸರ್ ರಿಲೀಜ್ ವೆಂಟಿಲೇಶನ್) ಮತ್ತು ARDS / ALI[ಬದಲಾಯಿಸಿ]

ಈ ARDS ನ ಪರಿಸ್ಥಿಯಲ್ಲಿ ಅದರ ಬಳಲಿಕೆಯಿಂದಾಗುವ ಸಾವಿನಪ್ರಮಾಣವನ್ನು ನಿಖರವಾಗಿ ಕಡಿಮೆ ಮಾಡುವುದು ಅಸಾಧ್ಯ ಮಾತು.ಆದರೆ ARDSNet Archived 2010-07-21 ವೇಬ್ಯಾಕ್ ಮೆಷಿನ್ ನಲ್ಲಿ. ನ ಅಂಕಿಅಂಶಗಳ ಪ್ರಾಯೋಗಿಕ ಗಾತ್ರದ ಮೇಲೆ ಅದರ ಪ್ರಮಾಣವನ್ನು ಅಂದಾಜಿಸಬಹುದಾಗಿದೆ. ಆದರೆ ಗಾತ್ರ ನಿಯಂತ್ರಿತ ವೆಂಟಿಲೇಶನ್ ಗೆ ಪರ್ಯಾಯವಾಗಿ ಇನ್ಯಾವ ಗಾಳಿ ನೀಡಿಕೆ ಚಿಕಿತ್ಸೆ ಪರಿಣಾಮಕಾರಿಯಾಗದೆನ್ನಲಾಗಿದೆ.

ಕೆಲವು ವೃತ್ತಿನಿರತರು ಏರ್ ಒತ್ತಡದ (APRV)ಬಿಡುಗಡೆಯನ್ನು ವೆಂಟಿಲೇಶನ್ ಮೂಲಕ ಮಾಡಲು ಇಚ್ಚಿಸುತ್ತಾರೆ. APRV Archived 2009-03-05 ವೇಬ್ಯಾಕ್ ಮೆಷಿನ್ ನಲ್ಲಿ. ನ ವೆಂಟಿಲೇಶನ್ ನಾನುಕೂಲಗಳೆಂದರೆ: ಇಳಿಮುಖವಾಗುವ ಗಾಳಿ ಪ್ರಮಾಣ, ಕಡಿಮೆಗೊಳಿಸಿದ ಸೂಕ್ಷ್ಮ ವೆಂಟಿಲೇಶನ್ , ಕಡಿಮೆಗೊಳಿಸಿದ ಸತ್ತ-ಕೋಶಜಾಗದ ವೆಂಟಿಲೇಶನ್ , ಸ್ವಾಭಾವಿಕ ಉಸಿರಾಟಕ್ಕೆ ಅನುಕೂಲ, ಸುಮಾರು ಪ್ರತಿದಿನ 24 ಗಂಟೆ ಚಿಕಿತ್ಸಾ ವಿಧಾನ ಅಳವಡಿಕೆ, ಕಡಿಮೆಗೊಳಿಸಿದ ನೋವುನಿವಾರಕ, ನರಕೋಶದ ಅಡತಡೆಗಳ ನಿವಾರಣೆ, ಅಗತ್ಯ ಗಾಳಿ ಪೂರೈಕೆಯ ರಕ್ತದಲ್ಲಿನ ಅನಿಲ ಸಾಗಣೆ ಫಲಿತಾಂಶಗಳು, ಯಾಂತ್ರಿಕವಾಗಿ FRC ನ್ನು ಉಳಿಸಬಹುದು(ಫಂಕ್ಷನಲ್ ರೆಡ್ಯುವಲ್ ಕೆಪಾಸಿಟಿ), ಹೃದಯ ಸಂಭಂಧಿತವುಗಳ ಮೇಲೆ ಉತ್ತಮ ಪರಿಣಾಮ(ಪ್ರತಿ ಸ್ವಾಭಾವಿಕ ಉಸಿರಾಟಕ್ಕೂ ಋಣಾತ್ಮಕ ಪರಿಣಾಮಗಳ ತಡೆಯುವಿಕೆ,ಮೂಲ ಅಂಗಾಂಶದ ಸುರಕ್ಷತೆ), ಅಧಿಕ ಜೀವಕೋಶಗಳ ಕ್ರಿಯಾತ್ಮಕತೆ,ಮತ್ತು ಅಂಗಾಂಶಗಳ ಸಕ್ರಿಯತೆ, ಉತ್ತಮ ಮೂತ್ರ ಹರಿಯಲು ಅನುಕೂಲ,ಹೀಗೆ ಮೂತ್ರ ಪಿಂಡದ ಕಾರ್ಯಕ್ಕೂ ಅನುವಾಗುತ್ತದೆ.

ಈ ARDS ನ ಸರಾಸರಿ ರೋಗಿಗಳು ಸುಮಾರು 8 ರಿಂದ 11 ದಿನಗಳ ವರೆಗೆ ಯಾಂತ್ರಿಕ ಗಾಳಿ ಪೂರೈಕೆ ಮೇಲೆ ಇಡಲಾಗುತ್ತದೆ;ಇಲ್ಲಿ APRV ನ ಒತ್ತಡವು ಉತ್ತಮ ಫಲಿತಾ6ಸಹ್ಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ನೀಡಬಹುದಾಗಿದೆ.

ಸದ್ಯ APRV ಯು ARDSNet ವಿಧಾನಕ್ಕೆ ಹೋಲಿಸಿದರೆ ಕಡಿಮೆ ಪ್ರಮಾಣದ ಸಾವಿನ ದರವನ್ನು ತರಬಲ್ಲದೇ ಎಂಬುದನ್ನು ಸಾಬೀತು ಮಾಡಬೇಕಾಗಿದೆ. ಇದಕ್ಕಾಗಿ ವೈದ್ಯಕೀಯ ವಲಯದಲ್ಲಿ ಕಡಿಮೆ ಮಟ್ಟದ ರಾಜಕೀಯ ಇಚ್ಚೆ ಇದೆ ಎಂಬುದು ಕಾಣುತ್ತದೆ,APRV ನಲ್ಲಿ ಕಂಡ ಯಶಸ್ವುಗಳ ಬಗ್ಗೆ ತೀವ್ರವಾದ ಗಮನ ಹರಿಸಬೇಕಾದ ಅಗತ್ಯವಿದೆ.

ಧನಾತ್ಮಕ ಕೊನೆಯ ಶ್ವಾಸಕೋಶದ ತುದಿಯ ಒತ್ತಡ ಪ್ರಮಾಣ[ಬದಲಾಯಿಸಿ]

ಧನಾತ್ಮಕ ಕೊನೆಯ ಶ್ವಾಸಕೋಶದ ತುದಿಯ ಒತ್ತಡ ಪ್ರಮಾಣ (PEEP) ಇದನ್ನು ARDS ರೋಗಿಗಳಲ್ಲಿ ಯಾಂತ್ರಿಕ-ಗಾಳಿ ನೀಡುವ ವಿಧಾನದ ಮೂಲಕ ಆಮ್ಲಜನಕದ ಹರಿವಿನ ಗತಿಯನ್ನು ಸುಧಾರಿಸಬಹುದಾಗಿದೆ. ಹೀಗೆ ARDS,ನಲ್ಲಿ ಮೂರು ಅಂಗಾಂಶದ ವಿಭಜಿತ ವಿಭಾಗಗಳನ್ನು ವಿಭಿನ್ನಗೊಳಿಸಬಹುದು. ಅಲ್ಲಿನ ಆಮ್ಲಜನಕ ಸಾಗಣೆಯ ಮಾರ್ಗದ ಸ್ನಾಯುಗಳಲ್ಲಿ ಒತ್ತಡ ರೂಪಿಸಿ ಅದರ ಗಾಳಿ ವಿನಿಮಯಕ್ಕೆ ಒತ್ತು ನೀಡಲಾಗುತ್ತದೆ,ವೆಂಟಿಲೇಟರ್ ಮೂಲದ ಈ ಆಮ್ಲಜನಕ ವಿನಿಮಯವು "ಅಗತ್ಯವಿದ್ದಲ್ಲಿ ಅಳವಡಿಕೆ"ಯಾಗಿ ಗಾಳಿ ಕುಲಿಗಳ ಮೂಲಕ ಸರಾಗವಾಗಿ ಸಂಚರಿಸುವುದರೊಂದಿಗೆ ನಿರಾಳತೆ ನೀಡುತ್ತವೆ. ಶ್ವಾಸನಾಳದ ಗ್ರಂಥಿಯಲ್ಲಿನ ನಿರಂತರ ಕ್ರಿಯಾಶೀಲತೆಗೆ ಕೆಲವನ್ನು ಚಿಕಿತ್ಸಾ ವಿಧಾನದ ಮೂಲಕ ಅಳವಡಿಸಿಕೊಳ್ಲಬೇಕಾಗುತ್ತದೆ.ಕಡಿಮೆ ಪ್ರಮಾಣದ ಜೀವಕೋಶಗಳ ಹಾನಿಗೆ ಕೂಡ ಈ PEEP ನ್ನು ಕನಿಷ್ಟಗೊಳಿಸಲಾಗುತ್ತದೆ.ಆಗ ಗಾಳಿ ಚಲಿಸಲು ಅದರ ಮಾರ್ಗ ಹಿಡಿದಿಡುವ ಸಣ್ಣ ಬಾಸ್ಕೆಟ್ ನಂತಹ ಸ್ನಾಯುಅದರ ಮೂಲಕ ಸರಾಗ ಉಸಿರಾಟಕ್ಕೆ ದಾರಿ ಮಾಡಿಕೊಡಬೇಕಾಗುತ್ತದೆ. ಆಗ ಈ PEEP ಯನ್ನು ಉನ್ನತ ಮಟ್ಟಕ್ಕೇರಿಸಿದಾಗ ಅದರ ಪ್ರಮಾಣವು ಒಂದು ಸೆಕೆಂದು ಅಥವಾ ನಿಮಿಷಗಳ ವರೆಗಿನ ಅವಧಿಯಲ್ಲಿ ಮುಂದುವರೆಯುತ್ತದೆ.ಈ PEEP ಯನ್ನು ಕೆಳಮಟ್ಟಕ್ಕೆ ಇಳಿಸುವ ಸಂದರ್ಭದಲ್ಲಿ ಅದರ ಪರಿಣಾಮಗಳನ್ನು ಗಮನಿಸುವುದು ಅಗತ್ಯವಾಗಿದೆ. ಅಂತಿಮವಾಗಿ,ಈ PEEP ಹಾನಿಕಾರವಾಗಿ ಪರಿಣಮಿಸಬಹುದು. ಅತಿಯಾದ PEEP ಗಾಳಿ ಒತ್ತಡದ ಚಲನಶೀಲತೆ ಅಧಿಗೊಳಿಸಿದಾಗ ಅದರ ಜೀವಕೋಶದ ಹಾನಿಗೆ ಕಾರಣವಾಗುವ ಸಂಭವ ಹೆಚ್ಚು. ಗಾಳಿ ಸರಬರಾಜಿನ ಬಾಸ್ಕೆಟ್ ನಂತಹ ಸ್ನಾಯು ಕುಳಿ ಮಾರ್ಗಳು ಸಾಮಾನ್ಯ ರೀತಿ ಕಳೆದುಕೊಂಡು ಹಾನಿಗೊಳಗಾಗಬಹುದು.ಇದು DAD ನ ಸ್ಥಿತಿಗೆ ಕಾರಣವಾಗಲೂ ಸಾಧ್ಯತೆ ಇದೆ.

'ಅತ್ಯುತ್ತಮ PEEP'ಯನ್ನು 'ಕೆಲವು ಪ್ರಮಾಣೀಕೃತ'cmH2O ಎಂದು ವ್ಯಾಖ್ಯಾನಿಸಬಹುದು.ಇದು ಗಾಳಿ ಹರಿವಿನ ಏರಿಕೆಯ ಬಿಂದು ಆಗಿ (LIP)ಸಾಂಕೇತಿಕ ಸಿಗ್ ಮೊಡೆಲ್ ಮಾಧ್ಯಮದ ಒತ್ತಡ ಗಾತ್ರದ ಬಿಂದುವಾಗಿರುತ್ತದೆ.ಇಲ್ಲಿ ಶ್ವಾಸಕೋಶದ ತಿರುವಿನಲ್ಲಿ ಇದರ ಚಲನೆ ಗಮನಿಸಲು ಅವಕಾಶವಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ LIP ಬಿಂದುವಿನ ಅಂಶದಲ್ಲ್ಲಿರುವ ಒತ್ತಡವು ಅದಕ್ಕಿಂತ ಯಾವುದೇ ರೀತಿಯ ಗಾಳಿ ಒತ್ತಡಕ್ಕಿಂತ ಉತ್ತಮ ಪ್ರಕ್ರಿಯೆಯಾಗಿದೆ.ಕುಸಿದು ಹೋದ ಕೋಶ ಪರಿಧಿಯ ಮೂಲದಲ್ಲಿ ಅದರಲ್ಲೂ ಮಹತ್ವದ ಅಂಶವೆಂದರೆ ಇವುಗಳನ್ನು ಒಟ್ಟಾಗಿ ಅಭ್ಯಸಿಸಿ ಅದರ ಘಟಕದ ಮೂಲಕ ನೀಡುವುದು ಸಾಮಾನಯವಾಗಿ.ಇಡೀ ಗಾಳಿ ಚಲನೆಯ ಒತ್ತಡದ ನಿರಂತರತೆಯನ್ನು ಕಾಪಾಡುವುದು ಒಂದು ವಿಧಾನವೆನಿಸಿದೆ. ಇದನ್ನು ಪತ್ತೆ ಹಚ್ಚಲು ಹಲವು ನಿಯಮ ಮೀರಿದ ವಿಧಾನಗಳ ಬಳಸಿದರೂ ಒತ್ತಡ-ಗಾತ್ರದ ತಿರುವನ್ನು ಸಂಪೂರ್ಣವಾಗಿ ಪತ್ತೆ ಮಾಡುವುದು ಸಾಧ್ಯವಿಲ್ಲ.ಇಲ್ಲಿ ಕೆಲವನ್ನು ಕನಿಷ್ಟ PEEP ನ್ನು ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಕೆಲವು ಹೊಸ ವೆಂಟಿಲೇಶನ್ ಗಳು ಒತ್ತಡ-ಗಾತ್ರ ಪ್ರಮಾಣದ ಅಳತೆಗೆ ಸ್ವಯಂಸ್ಪೂರ್ತಿಯಾಗಿ ಅಲ್ಲಿನ ಜಾಗವನ್ನು ಗುರುತಿಸುತ್ತದೆ. ಸತತವಾಗಿ ಇದರ ಪತ್ತೆಗೆ 'ನಿರಂತರ' ವಿಧಾನದ ಅಳವಡಿಕೆಯು ವಿಶ್ಲೇಷಣೆಯನ್ನು ನವೀಕರಿಸುತ್ತದೆ.ಇದು ಇನ್ನೊಂದರ ಹುಟ್ಟಿಗೆ ಕಾರಣವಾಗುತ್ತದೆ.

PEEP ನ್ನು ಸತತವಾದ ನಿರಂತರ ಪ್ರಕ್ರಿಯೆಯಲ್ಲಿ ಉಪಯೋಗಿಸಬಹುದು. ಕೆಲವು ಕೃತಿಕಾರರ ಪ್ರಕಾರ 'ಇದರಲ್ಲಿ ಕಡಿಮೆ ಅವಧಿ ವಿಧಾನ'( ಅಂದರೆ ವಿರಳ ಸಮಯದ ಅಧಿಕ ಪ್ರಮಾಣದ ನಿರಂತರ ಗಾಳಿ ಮಾರ್ಗದ ಚಲನಶೀಲತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ 50 cmH2O (4.9 kPa),ಒತ್ತಡದ ಘಟಕದ)ಒಟ್ಟಾರೆಯನ್ನು ಹಿಂದಿನ ವೆಂಟಿಲೇಶನ್ ಪ್ರಕ್ರಿಯೆಗೆ ಒಳಪಟ್ಟಿದ್ದನ್ನು ನಮೂದಿಸಲಾಗುತ್ತದೆ. ಇಲ್ಲಿ ಅಂತಿಮವಾಗಿ PEEP ಮಟ್ಟವನ್ನು ಅದರ PaO2 ಗಾತ್ರದ ಇಳಿಯುವ ಮೊದಲೇ ಗಮನಿಸಲಾಗುವುದು.(ಅಥವಾ ಸತತವಾದ ಅಗತ್ಯ ರಕ್ತಕ್ಕೆ ಬೇಕಾದ ಆಮ್ಲಜನಕವನ್ನು ಒಂದು ಬಿಂದುವಿಗೆ ತಂದು ನಿಲ್ಲಿಸುತ್ತದೆ.)ಇಳಿಮುಖದ ಪ್ರಯೋಗದಲ್ಲಿ ಇದು ಕಂಡು ಬರುತ್ತದೆ.

ನೈಸರ್ಗಿಕ PEEP (iPEEP)ಅಥವಾ ಸ್ವಯಂ PEEP ನ್ನು ಸೇಂಟ್ ಪೌಲ್ ರೆಗೆನ್ಸ್ ಆಸ್ಪತ್ರೆಯ ಜಾನ್ ಮಾರಿನಿ ವ್ಯಾಖ್ಯಾನಿಸಿದ್ದಾರೆ.ಇದು ರೋಗಿಗಳಲ್ಲಿ ನೈಸರ್ಗಿಕವಾದ ಕೊಡುಗೆಗೆ ನೆರವಾದರೂ ಸಂಪೂರ್ಣ ಪ್ರಯೋಜನ ಅದರ ಸಂದರ್ಭಕ್ಕೆ ಬಿಟ್ಟದ್ದಾಗಿದೆ. ಗಾಳಿ ಚಲನೆಯನ್ನು ಕೃತಕ ಯಾಂತ್ರಿಕ ವೆಂಟಿಲೇಶನ್ ಮೂಲಕ ನೀಡಿದಾಗ ಅದರ ಅತಿಯಾದ ತರಂಗದ ಅಲೆಗಳ ಸೆಳೆತದಲ್ಲಿ ಅದು ಉತ್ತಮ ಕೆಲಸ ಮಾಡುವ ಸಾಧ್ಯತೆ ಹೆಚ್ಚು.ಶ್ವಾಸಕೋಶದ ಕಾರ್ಯ ಅಡತಡೆ ಪ್ರಕರಣದಲ್ಲಿ ಇದು ಸಹಜವಾಗುತ್ತದೆ.ಈ iPEEP ವಿಧಾನದ ಪೂರಕ ಕ್ರಿಯೆಯನ್ನು ಅಂದಾಜಿಸಿ ಅಳತೆ ಮಾಡಿ ARDS ರೋಗಿಗಳಲ್ಲಿನ ಗಾಳಿ ಪೂರೈಕೆಯ ಪ್ರಮಾಣವನ್ನು ನೋಡಬಹುದಾಗಿದೆ.ಇಲ್ಲಿನ ಈ ವಿಧಾನ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಹೇಳಲಾಗದು. ARDS ನ ರೋಗಿಗಳಲ್ಲಿನ ಚಿಕಿತ್ಸಾ ವಿಧಾನವನ್ನು ಎಷ್ಟರ ಮಟ್ಟಿಗೆ ಉಅಪ್ಯೋಗಿಸಲಾಗಿದೆ ಎಂಬುದನ್ನು ಅಳತೆ ಮಾಡುವುದು ಅಗತ್ಯವಿದೆ.ಇದಕ್ಕಾಗಿ ಉನ್ನತ ಮಟ್ಟದ ಗಾಳಿ ಚಲನಶೀಲತೆ (ಅವಧಿಗನುಸಾರವಾದ ತರಂಗ/ಏರಿಳಿತ ದ ವೆಂಟಿಲೇಶನ್ ಮೂಲಕ ಗಾಳಿಯನ್ನು ತೂರಿಸಿದಾಗಿನ ಚಿಕಿತ್ಸಾ ವಿಧಾನ.

ಸುಧಾರಣಾ ಚಿನ್ಹೆಗಳ ಕಾಣಲು PEEP ವಿಧಾನ ಬಳಸುವಾಗ ಅನುಕೂಲಗಳು ಮತ್ತು ಕೆಲಮಟ್ಟಿಗಿನ ಅನಾನುಕೂಲಗಳು ಅನಿವಾರ್ಯವಾಗುತ್ತವೆ.

ಪೀಡಿತ ಪರಿಸ್ಥಿತಿ[ಬದಲಾಯಿಸಿ]

ತೀವ್ರ ಉಸಿರಾಟ ತೊಂದರೆಯ ಬಳಲಿಕೆಯ ಲಕ್ಷಣದಲ್ಲಿ ಶ್ವಾಸಕೋಶದ ಶುದ್ದೀಕರ ಅಂಗಗಳ ತೀವ್ರತೆ ಪ್ರಮಾಣವು ಉಸಿರಾಟದ ವೇಗಕ್ಕೆ ಒಂದೇ ಸಮವಾಗಿ ಇರಲಾರದು. ರೋಗ ಪೀಡಿತ ಭಾಗದ ಸುಧಾರಣೆಗೆ (ಇಳಿಮುಖಗೊಳಿಸಲು)ಅದಕ್ಕೆ ಆಮ್ಲಜನಜಕದ ಕೊರತೆ ತುಂಬಲು ಕವಾಟುಗಳ ಪ್ರಚೋದನೆಗೆ ಸರಿಯಾದ ಅಂಗಾಂಶ ಭಾಗಗಳಿಗೆ ಗಾಳಿ ಸೇರಿಸಬೇಕಾಗುತ್ತದೆ. ಆದರೆ ಈ ಹೈಪೊಕ್ಸಿಮಿಯಾವು ಹೊರಬಂದರೂ ಒಟ್ಟಾರೆ ಬದುಕುಳಿಯುವ ಪ್ರಮಾಣದಲ್ಲಿ ಅಂತಹ ವ್ಯತ್ಯಾಸವಿಲ್ಲ.[೧][೮]

ದ್ರವ ನೀಡಿಕೆ ನಿರ್ವಹಣೆ[ಬದಲಾಯಿಸಿ]

ಹಲವಾರು ಅಧ್ಯಯನದ ಪ್ರಕಾರ ಹಲವಾರು ರೋಗಿಗಳಲ್ಲಿ ತೂಕ ಕಳೆದುಕೊಂಡವರಲ್ಲಿ ಮತ್ತು ದ್ರವ ಪ್ರಮಾಣದ ಕಡಿಮೆ ಇರುವರಲ್ಲಿ ಇದರ ದುಷ್ಪರಿಣಾಮ ಕಡಿಮೆಯಾಗಿದೆ.ಶ್ವಾಸನಾಳದ ಸ್ನಾಯು ಒತ್ತಡವು ದ್ರವ ಪದಾರ್ಥಗಳ ಹಗುರತೆಯಿಂದ ಅಥವಾ ದ್ರವಗಳ ಶೇಖರಣೆ ಪ್ರಮಾಣದಲ್ಲಿನ ಇಳಿಕೆ ಈ ಕಾಯಿಲೆಗೆ ಸ್ವಲ್ಪ ಅನುಕೂಲಕರವಾಗಿದೆ.[೧]

ಕೊರ್ಟಿಕೊಸ್ಟೆರಾಯಿಡ್ಸ್[ಬದಲಾಯಿಸಿ]

ಎ ಮೆಡುರಿ ಎಟ್ ಆಲ್ ಅಧ್ಯಯನದ ಪ್ರಕಾರ ಸಾಮಾನ್ಯ ಪ್ರಮಾಣದ ಕ್ರೊಟಿಕೊಸ್ಟಿರೈಯ್ಡ್ ಬಳಸುವುದರಿಂದ ARDS ನ್ನು ಹೆಚ್ಚು ಪ್ರಮಾಣದ ಸುಧಾರಿತ ಸ್ಥಿತಿಗೆ ತರಬಹುದಾಗಿದೆ. ಮೊದಲ ನೀಡಿಕೆ ಪ್ರಮಾಣದ ಮೆಥೊಲ್ಪೆರೆಡ್ದ್ನಿಸೊಲಿಯನ್ 2 mg/kg ಪ್ರತಿನಿತ್ಯ ಆಗಿರುತ್ತದೆ. ಸುಮಾರು3-5 ದಿನಗಳಲ್ಲಿ ಪ್ರತಿಕ್ರಿಯೆ ಕಾಣಿಸುತ್ತದೆ. ಒಂದೆರಡು ವಾರಗಳಲ್ಲಿ ಮೆಥೊಲ್ಪೆರೆಡ್ದ್ನಿಸೊಲಿಯನ್ ನ ಈ ಪ್ರಮಾಣವನ್ನು 0.5-1.0 mg ಯಂತೆ ಪ್ರತಿನಿತ್ಯ ನೀಡಬೇಕಾಗುತ್ತದೆ. ಸುಮಾರಾಗಿ ARDS ಪೀಡಿತರು ಅತಿಯಾದ ಕ್ಪ್ರ್ಟಿಕೊಸ್ಟೆರೊಯ್ಡ್ (ಕೃತಕ ಶಕ್ತಿ ನೀಡಿಕೆ ರಾಸಾಯನಿಕಗಳು) ಪ್ರಮಾಣ ನೀಡುವುದರಿಂದ ಲಾಭ ಪಡೆಯಲಾರರು.[೧][೯] ಒಂದು ಕೇಂದ್ರದಲ್ಲಿನ ಸಣ್ಣ ಪ್ರಮಾಣದ ರೋಗಿಗಳ ಮೇಲೆ ನಡೆಸಿದ ಅಧ್ಯಯನ ಇದಾಗಿದೆ. ಆದರೆ ಇತ್ತೀಚಿನ NIH ಆಯೋಜಿತ ವಿವಿಧ ಉದ್ದೇಶದ ARDSnet LAZARUS ನ ಅಧ್ಯಯನವು ಈ ಪ್ರಕ್ರಿಯೆಗಳು ARDS ನಲ್ಲಿ ಅಷ್ಟಾಗಿ ಉಪ್ಯೋಗಕ್ಕೆ ಬಾರದವಾಗಿವೆ.

ನೈಟ್ರಿಕ್ ಆಕ್ಸೈಡ್[ಬದಲಾಯಿಸಿ]

ಒಳಸೇವಿಸಿದ ನೈಟ್ರಿಕ್ ಆಕ್ಸೈಡ್ (NO)ಶಕ್ತಿಯುತವಾಗಿ ಶ್ವಾಸನಾಳದ ಉಪಶಮನಕವಾಗಿ ವರ್ತಿಸುತ್ತದೆ. ವೇಗವಾದ ಹೇಮೊಗ್ಲೊಬಿನ್ ಸಾಗಾಟ ವ್ಯವಸ್ಥಿತ ಪರಿಣಾಮಗಳನ್ನು ತಡೆಯುತ್ತದೆ. ಇದು ಗಾಳಿ ವಿನಿಮಯವನ್ನು ಆದಷ್ಟು ವೆಂಟಲೇಟೆಡ್ ಭಾಗದಲ್ಲಿ ಹೆಚ್ಚಿಸಬೇಕಾದ ಅಗತ್ಯವಿದೆ. ಆದರೆ ಈ ಬಗ್ಗೆ ಧನಾತ್ಮಕ ಫಲಿತಾಂಶ ನೀಡುವ ದೊಡ್ಡ ಅಧ್ಯಯನಗಳು ನಡೆದಿಲ್ಲ. ಆದ್ದರಿಂದ ಇದರ ಉಪಯುಕ್ತತೆಯನ್ನು ಏಕರೀತಿಯ ರೂಪದಲ್ಲಿ ಪರಿಗ್ರಹಿಸಬೇಕು.

ಸಂಯೋಜಿತ ಬೈಸ್ಮೆಸಿಲೇಟ್ ಇಲ್ಲಿ ರಾಸಾಯನಿಕತೆಯನ್ನು ನಿಯಂತ್ರಿಸಿ ಅದರ ಉಸಿರಾಟ ಮತ್ತು ಅದರ ಪರ್ಯಾಯ ಕಾರ್ಯಗಳಿಗೆ ನೆರವಾಗುತ್ತದೆ. ಶ್ವಾಸನಾಳದ ಶಕ್ತಿ ವರ್ಧನೆಗೆ NO (ನೈಟ್ರಿಕ್ ಆಕ್ಸೈಡ್ )ಪರಿಣಾಮವನ್ನು ಸಹ ಪರಿಗಣಿಸಿ ಶ್ವಾಸನಾಳದ ಗ್ರಂಥಿಕೋಶಗಳನ್ನು ಸಶಕ್ತನಾಗಿಸಬೇಕಾಗುತ್ತದೆ. ಆದರೆ ARDS ಪ್ರಕರಣದಲ್ಲಿ ಈ ಸಂಯೋಜನೆ ಉಪಯುಕ್ತವಾದುದೇ ಎಂಬುದು ಗೊತ್ತಾಗಿಲ್ಲ.[೧]

ಮೇಲ್ಮೈ ಸಾಂದ್ರತೆ ಪ್ರಮಾಣ ಕಡಿಮೆ ಮಾಡುವ ಚಿಕಿತ್ಸೆ[ಬದಲಾಯಿಸಿ]

ಇವತ್ತಿನ ದಿನಾಂಕದ ವರೆಗೂ ನಿಯಂತ್ರಿತ ವೈದ್ಯಕೀಯ ಪ್ರಯೋಗ ಮಹತ್ವದ ಪ್ರಗತಿ ತೋರಿಲ್ಲ.ಸಾವಿನ ಪ್ರಮಾಣವು ARDS ನಲ್ಲಿ ಯಥಾಸ್ಥಿತಿ ಇರುವುದನ್ನು ತಪ್ಪಿಸಬೇಕಾಗಿದೆ.[೧]

ತೊಡಕುಗಳು[ಬದಲಾಯಿಸಿ]

ARDS ಒಂದು ಅತ್ಯಂತ ತೀವ್ರವಾದ ಲಕ್ಷಣವಾಗಿದ್ದು, ಇದು ತುರ್ತು ನಿಗಾ ಮತ್ತು ಆಕ್ರಮಣ ರೀತಿಯ ಚಿಕಿತ್ಸೆಯನ್ನುನ್ ಬಯಸುತ್ತದೆ.ಆದರೆ ಇದು ಅಪಾಯಗಳಿಲ್ಲದೇ ಇಲ್ಲ. ಇದರಲ್ಲಿನ ತೊಡಕುಗಳನ್ನು ಹೀಗೆ ಪರಿಗಣಿಸಲಾಗುತ್ತದೆ:[೧]

  • ಶ್ವಾಸನಾಳ: ವಾಯುಭಾರ ವೇದನೆ (ಸಾಮಾನ್ಯ ಕುಸಿತ ಪೆಟ್ಟು), ಶ್ವಾಸನಾಳದ ರಕ್ತದ ಗಡ್ಡೆ (PE), ಶ್ವಾಸನಾಳದ ತಂತು ಸಿಕ್ಕು, ವಾಯು,ಗಾಳಿ ವ್ಯವಸ್ಥೆ-ಸಂಭಂಧಿಸಿದ ನ್ಯುಮೊನಿಯಾ (VAP).
  • ಗ್ರ್ಯಾಸ್ಟ್ರೊಇಂಟೈಸ್ಟೈನಲ್: ರಕ್ತಕಣ ಹೆಪ್ಪುಗಟ್ಟುವಿಕೆ(ಹುಣ್ಣು), ನಿಷ್ಕ್ರಿಯತೆ, ಅನಿಯಂತ್ರಿತ ಪರಿಚಾಲನೆ, ಬ್ಯಾಕ್ಟೀರಿಯಾಗಳ ಸ್ಥಾನ ಪಲ್ಲಟ.
  • ಹೃದಯಕ್ಕೆ: ಹೃದಯ ಸ್ನಾಯುಗಳ ಏರುಪೇರು, ಹೃದಯದ ಕವಾಟುಗಳ ನಿಷ್ಕ್ರಿಯತೆ.
  • ಮೂತ್ರಪಿಂಡ: ತೀವ್ರ ಮೂತ್ರಪಿಂಡದ ವಿಫಲತೆ (ARF), ದ್ರವ ಸಮತೋಲನದ ಕಾರ್ಯ.
  • ಯಾಂತ್ರಿಕತೆ: ರಕ್ತನಾಳದ ಗಾಯ, ಶ್ವಾಸಕೋಶ-ಎದೆಗೂಡಿನ ಮಧ್ಯದ ಗಾಳಿ(ಇಲ್ಲಿ ನಿಯಂತ್ರಣಕ್ಕಾಗಿ ತಂತಿಗಳ ತೂರಿಕೆ), ಶ್ವಾಸನಾಳದ ಗಾಯ/ನಾಳದ ಅತಿಸಂಕೋಚ(ಒಳಗೆ ತಂತಿ ತೂರಿಸಿದಸ್ ಪರಿಣಾಮ ಮತ್ತು/ಅಥವಾ ಶ್ವಾಸನಾಳದ ಕೊಳವೆಯ ಉರಿ.
  • ಪೌಷ್ಟಿಕಾಂಶಕ್ಕೆ ಸಂಭಂಧಿಸಿದ: ಅಪೌಷ್ಟಿಕಾಂಶಕ್ಕೆ (ತೀರ ಉಲ್ಬಣ ಸ್ಥಿತಿ), ಸಾಮಾನ್ಯ ಶಕ್ತಿ ನೀಡುವ ಶರೀರದ ವಿದ್ಯುತ ಕೊರತೆ.

ಸೋಂಕುಶಾಸ್ತ್ರ[ಬದಲಾಯಿಸಿ]

ವಾರ್ಷಿಕ ಸಂಭವನೀಯ ಪ್ರಕರಣ ARDS ನದು ಸುಮಾರು 1.5–13.5 ಅಂದರೆ ಪ್ರತಿ 100,000 ಜನರಲ್ಲಿ ಈ ಪ್ರಮಾಣವೆನ್ನಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಇನ್ನೊಂದು ಉದಾಹರಣೆಯಲ್ಲಿ ತೀವ್ರ ನಿಗಾ ಘಟಕ(ICU),ದಲ್ಲಿನ ಪ್ರಮಾಣ ಯಾಂತ್ರಿಕವಾಗಿ ಗಾಳಿ ಪೂರೈಕೆ ಪ್ರಕರಣಗಳಲ್ಲಿನ ಅಪ್ರಮಾಣ ಅಧಿಕವಾಗಿದೆ. ಬ್ರುಯುನ್-ಬ್ಯುಸಿಯನ್ಎಟ್ ಆಲ್. (2004) ಒಂದು ತೀವ್ರ ಶ್ವಾಸಕೋಶದ ಗಾಯದ ಬಗ್ಗೆ ವರದಿ ಮಾಡಿದ.(ALI) (ಕೆಳಗೆ ನೋಡಿ)ಈ ಗಾಳಿ ಅಥವಾ ಆಮ್ಲಜನಕದ ವ್ಯವಸ್ಥೆಗಾಗಿ ಪ್ರವೇಶ ಪಡೆದವರು ಕನಿಷ್ಟ ಅದರಲ್ಲಿನ 16.1% ರೋಗಿಗಳು ಸುಮಾರು 4 ತಾಸುಗಳ ವರೆಗೆ ನಿಗಾ ಘಟಕದಲ್ಲಿ ಇರಿಸಲಾಗಿತ್ತೆಂದು ಹೇಳಲಾಗಿದೆ. ಇದರಲ್ಲಿನ ಅರ್ಧಕ್ಕಿಂತ ಹೆಚ್ಚು ರೋಗಿಗಳು ARDS ನ ಲಕ್ಷಣಗಳ ಹೆಚ್ಚಳ ಕಾಣುತ್ತಾರೆ.

ಯಾಂತ್ರಿಕ ಗಾಳಿ(ಆಮ್ಲಜನಕ)ವ್ಯವಸ್ಥೆ, ಹುಣ್ಣುಗಾಯ,ಕೀವುಗಾಯ, ನ್ಯುನೊನಿಯಾ, ಆಘಾತ, ಶ್ವಾಸೋಶ್ಚಾಸ, ಅಪಘಾತದ ಪೆಟ್ಟು (ಪ್ರಮುಖವಾಗಿ ಶ್ವಾಸಕೋಶದ ಒಳಗಾಯ), ದೊಡ್ಡ ಶತ್ರಚಿಕಿತ್ಸೆ, ಬೃಹತ್ ಪ್ರಮಾಣದ ರಕ್ತ ವರ್ಗಾವಣೆ, ಹೊಗೆ ಉಚ್ವಾಸ, ಔಷಧಿಯ ತೀಕ್ಷ್ಣ ಪ್ರತಿಕ್ರಿಯೆ ಅಥವಾ ಅತಿ ಹೆಚ್ಚು ಪ್ರಮಾಣದ ಸೇವನೆ, ರಕ್ತದಲ್ಲಿರುವ ಕೊಬ್ಬಿನ ಪ್ರಮಾಣ ಅಲ್ಲದೇ ರಕ್ತ ಮರುಬದಲಾವಣೆ ಶ್ವಾಸನಾಳದ ನ್ಯೂನತೆಯಲ್ಲಿ ಶ್ವಾಸಕೋಶದ ಕಸಿಯ ನಂತರ ಅಥವಾ ಈ ಮೂಲಕ ಶ್ವಾಸನಾಳದ ಗೋಡೆ ಮೂಲಕ ಇದು ARDS ನ್ನು ಉತ್ತೇಜಿಸುತ್ತದೆ.ನಿಮೊನಿಯಾ ಮತ್ತು ಹುಣ್ಣುಗಾಯಗಳು ಇದಕ್ಕೆ ಮೂಲ ಕಾರಣವಾಗಿವೆ.ಸುಮಾರು 60% ರಷ್ಟು ರೋಗಿಗಳಲ್ಲಿ ಇದು ಕಾಣಿಸುತ್ತದೆ. ಕಾಮಾಲೆ ಅಥವಾ ನ್ಯುಮೊನಿಯಾ ಮತ್ತು ಕೀವು ತುಂಬಿದ ಅಂಗಾಂಶದ ಬಾವು ಈ ARDS ನ ತೊಂದರೆಗಳಿಗೆ ಈಡು ಮಾಡಬಹುದು.

ಯಾಂತ್ರಿಕ ಗಾಳಿ ವ್ಯವಸ್ಥೆ ಕಲ್ಪಿಸುವ ಸಂದರ್ಭದಲ್ಲಿನ ಉದರದ ಮೇಲಿನ ಒತ್ತಡ ಕೂಡ ARDS ನ ಉಲ್ಬಣಕ್ಕೆ ಕಾರಣವಾಗಬಹುದು.

ಈ ಮರಣ ಪ್ರಮಾಣದ ದರ 30% ರಿಂದ 85% ರವರೆಗೆ ವ್ಯತ್ಯಾಸಗೊಳ್ಳುತ್ತದೆ.[ಸೂಕ್ತ ಉಲ್ಲೇಖನ ಬೇಕು] ಸಾಮಾನ್ಯ ಚಿಕಿತ್ಸಾ ವಾಡಿಕೆಯಲ್ಲಿ ಸರಾಸರಿ ನಿಯಂತ್ರಿತ ಪ್ರಯೋಗಗಳನ್ನು ವೈದ್ಯಕೀಯ ಸಾಹಿತ್ಯದಲ್ಲಿ ನೋಡಿದಾಗ ಮರಣದ ಪ್ರಮಾಣಗಳು ಕಡಿಮೆ ಇದ್ದು ರೋಗಿಗಳ ಸಂಪೂರ್ಣ ಶುಶ್ರೂಷತೆಗೆ ಆದ್ಯತೆ ನೀಡಲಾಗಿದೆ. ಇದು ಬಹುಶಃ ಪ್ರವೇಶಾವಕಾಶದ ನೊಂದಾವಣೆ ಬಗ್ಗೆ ಇರುವ ಕಠಿಣ ನಿಯಮಗಳು ಸರ್ವೇಕ್ಷಣಾ ಅಧ್ಯಯನಗಳು ಸುಮಾರು 50%-60% ರಷ್ಟು ಮರಣದ ಪ್ರಮಾಣ ವರದಿ ಮಾಡುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಉಲ್ಲೇಖಗಳು[ಬದಲಾಯಿಸಿ]

  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ Irwin RS, Rippe JM (2003). Irwin and Rippe's Intensive Care Medicine (5th ed.). Lippincott Williams & Wilkins. ISBN 0-7817-3548-3.
  2. Ashbaugh D, Bigelow D, Petty T, Levine B (1967). "Acute respiratory distress in adults". Lancet. 2 (7511): 319–23. doi:10.1016/S0140-6736(67)90168-7. PMID 4143721.{{cite journal}}: CS1 maint: multiple names: authors list (link)
  3. ೩.೦ ೩.೧ Bernard G, Artigas A, Brigham K, Carlet J, Falke K, Hudson L, Lamy M, Legall J, Morris A, Spragg R (1994). "The American-European Consensus Conference on ARDS. Definitions, mechanisms, relevant outcomes, and clinical trial coordination". Am J Respir Crit Care Med. 149 (3 Pt 1): 818–24. PMID 7509706.{{cite journal}}: CS1 maint: multiple names: authors list (link)
  4. Ware L, Matthay M (2000). "The acute respiratory distress syndrome". N Engl J Med. 342 (18): 1334–49. doi:10.1056/NEJM200005043421806. PMID 10793167.
  5. Amato M, Barbas C, Medeiros D, Magaldi R, Schettino G, Lorenzi-Filho G, Kairalla R, Deheinzelin D, Munoz C, Oliveira R, Takagaki T, Carvalho C (1998). "Effect of a protective-ventilation strategy on mortality in the acute respiratory distress syndrome". N Engl J Med. 338 (6): 347–54. doi:10.1056/NEJM199802053380602. PMID 9449727.{{cite journal}}: CS1 maint: multiple names: authors list (link)
  6. MacIntyre N (2000). "Mechanical ventilation strategies for lung protection". Semin Respir Crit Care Med. 21 (3): 215–22. doi:10.1055/s-2000-9850. PMID 16088734.
  7. Malhotra A (2007). "Low-tidal-volume ventilation in the acute respiratory distress syndrome". N Engl J Med. 357 (11): 1113–20. doi:10.1056/NEJMct074213. PMC 2287190. PMID 17855672.
  8. Gattinoni L, Tognoni G, Pesenti A, Taccone P, Mascheroni D, Labarta V, Malacrida R, Di Giulio P, Fumagalli R, Pelosi P, Brazzi L, Latini R (2001). "Effect of prone positioning on the survival of patients with acute respiratory failure". N Engl J Med. 345 (8): 568–73. doi:10.1056/NEJMoa010043. PMID 11529210.{{cite journal}}: CS1 maint: multiple names: authors list (link)
  9. Meduri G, Tolley E, Chrousos G, Stentz F (2002). "Prolonged methylprednisolone treatment suppresses systemic inflammation in patients with unresolving acute respiratory distress syndrome: evidence for inadequate endogenous glucocorticoid secretion and inflammation-induced immune cell resistance to glucocorticoids". Am J Respir Crit Care Med. 165 (7): 983–91. PMID 11934726.{{cite journal}}: CS1 maint: multiple names: authors list (link)

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]