ವಿಷಯಕ್ಕೆ ಹೋಗು

ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ, ವಿಜಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ
ಸ್ಥಾಪನೆ೨೦೧೦
ಸ್ಥಳತಾಳಿಕೋಟಿ
ವಿದ್ಯಾರ್ಥಿಗಳ ಸಂಖ್ಯೆ೧೦೦೦

ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ೨೦೧೦ ರಲ್ಲಿ ಪ್ರಾರಂಭವಾಯಿತು. ಇದು ಬಿಜಾಪುರ ಜಿಲ್ಲೆಯ ತಾಳಿಕೋಟಿ ನಗರದಲ್ಲಿ ಇದೆ. ಸಂಸ್ಥೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿದೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ನವದೆಹಲಿಯು ಅನುಮೋದನೆ ನೀಡಿದೆ. ಸಂಸ್ಥೆಯು ಬಿಜಾಪುರ ಜಿಲ್ಲೆಯ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ.

ಕಾಲೇಜು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಅದ್ದೂರಿ ಮೂಲಭೂತ ಒದಗಿಸುತ್ತದೆ. ಸುಸಜ್ಜಿತ ಪ್ರಯೋಗಾಲಯಗಳು, ಕಂಪ್ಯೂಟರ್ ಸೆಂಟರ್, ಆಡಿಟೋರಿಯಂ, ಕ್ಯಾಂಟೀನ್, ಸೆಂಟ್ರಲ್ ಕಂಪ್ಯೂಟರ್ ಸೆಲ್, ಪರೀಕ್ಷೆ ಮತ್ತು ಉಪನ್ಯಾಸ ಹಾಲ್, ವಸತಿಗೃಹಗಳು, ಕ್ರೀಡೆ ಮತ್ತು ಆಟದ ಮೈದಾನ ಇದೆ.

ವಿಭಾಗಗಳು

[ಬದಲಾಯಿಸಿ]
  1. ಸಿವಿಲ್ ಎಂಜಿನಿಯರಿಂಗ್
  2. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  3. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  4. ಯಾಂತ್ರಿಕ ಎಂಜಿನಿಯರಿಂಗ್
  5. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್

ಮಹಾವಿದ್ಯಾಲಯವು ೨೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು ಮೈದಾನ ಇದೆ.

ಗ್ರಂಥಾಲಯ

[ಬದಲಾಯಿಸಿ]

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

[ಬದಲಾಯಿಸಿ]

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗ, ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ.