ತಲೆಹಿಡುಕತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಲೆಹಿಡುಕತನ ಎಂದರೆ ಒಬ್ಬ ಗ್ರಾಹಕನೊಂದಿಗೆ ಲೈಂಗಿಕ ಕ್ರಿಯೆಯ ಏರ್ಪಾಟಿನಲ್ಲಿ ಹಾದರಗಿತ್ತಿ ಅಥವಾ ವೇಶ್ಯೆಯನ್ನು ಒದಗಿಸುವಲ್ಲಿ ಸಹಾಯಮಾಡುವುದು ಅಥವಾ ಒದಗಿಸುವುದು.[೧] ತಲೆಹಿಡುಕ ಅಥವಾ ತಲೆಹಿಡುಕಿಯು (ಕುಂಟಣಿ) ವೇಶ್ಯೆಯರ ದಳ್ಳಾಳಿಯಾಗಿದ್ದು ಅವರ ಸಂಪಾದನೆಯ ಸ್ವಲ್ಪ ಭಾಗವನ್ನು ಪಡೆಯುತ್ತಾನೆ(ಳೆ). ತಲೆಹಿಡುಕನು ಈ ಹಣವನ್ನು ಜಾಹೀರಾತು ಸೇವೆಗಳು, ದೈಹಿಕ ರಕ್ಷಣೆ, ವೇಶ್ಯೆಯು ಗ್ರಾಹಕರನ್ನು ಆಕರ್ಷಿಸಲು ಸ್ಥಳವನ್ನು ಒದಗಿಸುವುದಕ್ಕೆ ಅಥವಾ ಸಂಭಾವ್ಯವಾಗಿ ಏಕಸ್ವಾಮ್ಯ ಪಡೆಯುವುದಕ್ಕೆ ಪ್ರತಿಯಾಗಿ ಸ್ವೀಕರಿಸಬಹುದು. ವೇಶ್ಯಾವೃತ್ತಿಯಂತೆ, ತಲೆಹಿಡುಕ ಅಥವಾ ತಲೆಹಿಡುಕಿಯ ಕೆಲವು ಕಾರ್ಯಗಳ ಕಾನೂನುಬದ್ಧತೆಯು ಒಂದು ಪ್ರದೇಶದಿಂದ ಮತ್ತೊಂದಕ್ಕೆ ಬದಲಾಗುತ್ತದೆ. ತಲೆಹಿಡುಕತನದ ಉದಾಹರಣೆಗಳಲ್ಲಿ, ಸಂಭೋಗವನ್ನು ಕೋರುವ ಉದ್ದೇಶಕ್ಕಾಗಿ ಒಬ್ಬ ವ್ಯಕ್ತಿಯನ್ನು ಒಂದು ದೇಶದೊಳಗೆ ಕಾನೂನುಬಾಹಿರವಾಗಿ ತರುವುದು; ವೇಶ್ಯಾವೃತ್ತಿ ವ್ಯವಹಾರವನ್ನು ನಡೆಸುವುದು; ಒಬ್ಬ ವೇಶ್ಯೆಯನ್ನು ಅವಳ ಏರ್ಪಾಟಿನ ಸ್ಥಳಕ್ಕೆ ಸಾಗಿಸುವುದು; ಮತ್ತೊಬ್ಬರ ವೇಶ್ಯಾವೃತ್ತಿಯಿಂದ ಆರ್ಥಿಕ ಲಾಭವನ್ನು ಪಡೆದುಕೊಳ್ಳುವುದು ಸೇರಿವೆ.

ಉಲ್ಲೇಖಗಳು[ಬದಲಾಯಿಸಿ]

  1. Garner, B. & Black, H. (2004). Black's Law Dictionary. Belmont: Thomson/West.