ವಿಷಯಕ್ಕೆ ಹೋಗು

ತಮಿಳು ಲಿಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಮಿಳು ಲಿಪಿ ಎಂಬುದು ತಮಿಳು ಭಾಷೆಯನ್ನು ಬರೆಯುವ ಲಿಪಿಯಾಗಿದೆ. ಇದಲ್ಲದೆ, ಅಲ್ಪಸಂಖ್ಯಾತ ಭಾಷೆಗಳಾದ ಸೌರಾಷ್ಟ್ರ, ಬಡಗ, ಇರುಲಾ ಮತ್ತು ಪನಿಯಾಗಳನ್ನು ಸಹ ತಮಿಳಿನಲ್ಲಿ ಬರೆಯಲಾಗುತ್ತದೆ.[೧] ಈ ಲಿಪಿಯನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ತಮಿಳು ಭಾಷೆ ಬರೆಯಲು ಬಳಸಲಾಗುತ್ತಿತ್ತು. ಈ ಲಿಪಿಯು ಗ್ರಂಥ ಲಿಪಿ ಮತ್ತು ಬ್ರಾಹ್ಮಿ ಲಿಪಿಯಿಂದ ವಿಕಸನಗೊಂಡಿತು. ಇದು ಶಬ್ದ ಅವಲಂಬಿತ ಭಾಷೆಯಾಗಿದೆ, ವರ್ಣಮಾಲೆಯದಲ್ಲ. ಇದನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಲಿಪಿಗಳು ಮನುಷ್ಯರ ಸೃಷ್ಟಿ ಎಂದು ನಮಗೆ ತಿಳಿದಿದೆ. ಕೆಲವು ಪುರಾತನ ಲೇಖನಗಳ ಪ್ರಕಾರ - ಎಲ್ಲಾ ಭಾರತೀಯ ಲಿಪಿಗಳು ಬ್ರಾಹ್ಮಿ ಲಿಪಿಯಿಂದ ವಿಕಸನಗೊಂಡಿವೆ. ಲಿಪಿಯಲ್ಲಿ ಮೂರು ಪ್ರಮುಖ ಕುಟುಂಬಗಳಿವೆ: 1. ದೇವನಾಗರಿ: ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಹಿಂದಿ, ಗುಜರಾತಿ, ಬಂಗಾಳಿ, ಮರಾಠಿ, ಡೋಗ್ರಿ, ಪಂಜಾಬಿ ಮುಂತಾದ ಭಾಷೆಗಳ ಆಧಾರವಾಗಿದೆ. 2. ದ್ರಾವಿಡ: ಕನ್ನಡ ಮತ್ತು ತೆಲುಗು ಭಾಷೆಯ ಆಧಾರ. 3. ಗ್ರಂಥ ಲಿಪಿಯು ದ್ರಾವಿಡ ಭಾಷೆಗಳಾದ ತಮಿಳು ಮತ್ತು ಮಲಯಾಳಂನ ಉಪವಿಭಾಗವಾಗಿದೆ.

ಸ್ವರಗಳು

[ಬದಲಾಯಿಸಿ]
ಸ್ವರ ಕನ್ನಡದಲ್ಲಿ ಪ ವ್ಯಂಜನದ ಜೊತೆ
அ ಅ ப (ಪ)
ஆ ಆ பா (ಪಾ)
இ ಇ பி (ಪಿ)
ஈ ಈ பீ (ಪೀ)
உ ಉ பு (ಪು)
ஊ ಊ பூ (ಪೂ)
எ ಎ பெ (ಪೆ)
ஏ ಏ பே (ಪೇ)
ஐ ಐ பை (ಪೈ)
ஒ ಒ பொ (ಪೊ)
ஓ ಓ போ (ಪೋ)
ஔ ಔ பௌ (ಪೌ)

ವ್ಯಂಜನಗಳು

[ಬದಲಾಯಿಸಿ]
ವ್ಯಂಜನ ಕನ್ನಡದಲ್ಲಿ
ஃ ಃ
க் ಕ್, ಖ್, ಗ್, ಘ್
ங் ಙ್
ச் ಚ್, ಛ್, ಶ್
ஞ் ಞ್
ட் ಟ್, ಠ್, ಡ್, ಢ್
ண் ಣ್
த் ತ್, ಥ್, ದ್, ಧ್
ந் ನ್
ப் ಪ್, ಬ್, ಭ್
ம் ಮ್
ய் ಯ್
ர் ರ್
ல் ಲ್
வ் ವ್
ழ் ೞ್
ள் ಳ್
ற் ಱ್
ன் ನ಼್/ ಮ್

ಕಾಗುಣಿತ

[ಬದಲಾಯಿಸಿ]
ಕ್+ ಸ್ವರ ಕನ್ನಡದಲ್ಲಿ
க ಕ
கா ಕಾ
கி ಕಿ
கீ ಕೀ
கு ಕು
கூ ಕೂ
கெ ಕೆ
கே ಕೇ
கை ಕೈ
கொ ಕೊ
கோ ಕೋ
கௌ ಕೌ

ಗ್ರಂಥ ಲಿಪಿಯಲ್ಲಿ

[ಬದಲಾಯಿಸಿ]
ವ್ಯಂಜನ ಕನ್ನಡದಲ್ಲಿ
ஜ் ಜ್
ஶ் ಶ್
ஷ் ಷ್
ஸ் ಸ್
ஹ் ಹ್
க்ஷ் ಕ್ಷ್
ஸ்ரீ ಶ್ರೀ.

ತಮಿಳು ಸಂಖ್ಯೆಗಳು

[ಬದಲಾಯಿಸಿ]
ಕನ್ನಡ ದಲ್ಲಿ ೧ ೨ ೩ ೪ ೫ ೬ ೭ ೮ ೯ ೧೦ ೧೦೦ ೧೦೦೦
ತಮಿಳು ௧ ௨ ௩ ௪ ௫ ௬ ௭ ௮ ௯ ௧० ௧०० ௧०००

ಉಲ್ಲೇಖಗಳು

[ಬದಲಾಯಿಸಿ]
  1. ↑ Official languages Archived 2005-09-28 at Archive-It. UNESCO. Abgerufen am 10. Mai 2007