ಡ್ವೈಟ್ ಡಿ. ಐಸೆನ್‌ಹೋವರ್
ಡ್ವೈಟ್ ಡಿ. ಐಸೆನ್‌ಹೋವರ್ | |
---|---|
Official portrait, 1959 | |
ಅಧಿಕಾರ ಅವಧಿ January 20, 1953 – January 20, 1961 | |
ಉಪ ರಾಷ್ಟ್ರಪತಿ | Richard Nixon |
ಪೂರ್ವಾಧಿಕಾರಿ | Harry S. Truman |
ಉತ್ತರಾಧಿಕಾರಿ | John F. Kennedy |
ಅಧಿಕಾರ ಅವಧಿ April 2, 1951 – May 30, 1952 | |
ರಾಷ್ಟ್ರಪತಿ | Harry S. Truman |
ಪ್ರತಿನಿಧಿ | Bernard Montgomery |
ಪೂರ್ವಾಧಿಕಾರಿ | Position established |
ಉತ್ತರಾಧಿಕಾರಿ | Matthew Ridgway |
ಅಧಿಕಾರ ಅವಧಿ November 19, 1945 – February 6, 1948 | |
ರಾಷ್ಟ್ರಪತಿ | Harry S. Truman |
ಪ್ರತಿನಿಧಿ | J. Lawton Collins |
ಪೂರ್ವಾಧಿಕಾರಿ | George C. Marshall |
ಉತ್ತರಾಧಿಕಾರಿ | Omar Bradley |
ಅಧಿಕಾರ ಅವಧಿ May 8, 1945 – November 10, 1945 | |
ರಾಷ್ಟ್ರಪತಿ | Harry S. Truman |
ಪೂರ್ವಾಧಿಕಾರಿ | Position established |
ಉತ್ತರಾಧಿಕಾರಿ | George S. Patton (acting) |
ಅಧಿಕಾರ ಅವಧಿ June 7, 1948 – January 19, 1953 | |
ಪೂರ್ವಾಧಿಕಾರಿ | Frank D. Fackenthal (acting) |
ಉತ್ತರಾಧಿಕಾರಿ | Grayson L. Kirk |
ವೈಯಕ್ತಿಕ ಮಾಹಿತಿ | |
ಜನನ | David Dwight Eisenhower ೧೪ ಅಕ್ಟೋಬರ್ ೧೮೯೦ Denison, Texas, US |
ಮರಣ | March 28, 1969 Washington, D.C., US | (aged 78)
ಸಮಾಧಿ ಸ್ಥಳ | Dwight D. Eisenhower Presidential Library, Museum and Boyhood Home |
ರಾಜಕೀಯ ಪಕ್ಷ | Republican (from 1952) |
ಇತರೆ ರಾಜಕೀಯ ಸಂಲಗ್ನತೆಗಳು |
Democratic (1909)[೧] |
ಸಂಗಾತಿ(ಗಳು) |
Mamie Doud (ವಿವಾಹ:July 1, 1916) |
ಮಕ್ಕಳು | |
ವೃತ್ತಿ |
|
ಸಹಿ | |
ಮಿಲಿಟರಿ ಸೇವೆ | |
ಅಡ್ಡಹೆಸರು(ಗಳು) | "Ike"[೩] |
Allegiance | United States |
ಸೇವೆ/ಶಾಖೆ | United States Army |
ವರ್ಷಗಳ ಸೇವೆ |
|
Rank | General of the Army |
Battles/wars |
ಐಸೆನ್ಹೌವರ್, ಡ್ವೈಟ್ ಡೇವಿಡ್: 1890-1969. ಅಮೆರಿಕನ್ ಜನರಲ್, ಅಮೆರಿಕ ಸಂಯುಕ್ತಸಂಸ್ಥಾನದ 33ನೆಯ ಅಧ್ಯಕ್ಷ.
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಐಸೆನ್ಹೌವರ್ ಜನ್ಮ ಟೆಕ್ಸಾಸ್ ರಾಜ್ಯದ ಡೆನಿಸನಿನಲ್ಲಿ. ತಂದೆ ಡೇವಿಡ್ ಐಸೆನ್ಹೌವರ್. ಡ್ವೈಟ್ ಐಸೆನ್ಹೌವರ್ ಎರಡು ವರ್ಷಗಳ ಮಗುವಾಗಿದ್ದಾಗ ಈ ಸಂಸಾರ ಅಡಿಲೀನಿಗೆ ಬಂತು. ಡೇವಿಡ್ ಐಸೆನ್ಹೌವರನ ದೊಡ್ಡ ಸಂಸಾರಕ್ಕೆ ಆಗ ಸರ್ವದಾ ಬಡತನ. ಆರು ಮಂದಿ ಗಂಡುಮಕ್ಕಳೂ ತಂದೆಯೊಂದಿಗೆ ದುಡಿಯಬೇಕಾದ ಪರಿಸ್ಥಿತಿಯಿತ್ತು. ತಂದೆ ತಾಯಿಯರ ಪ್ರೋತ್ಸಾಹದಿಂದ ಐಸೆನ್ಹೌವರ್ ವಿದ್ಯಾಭ್ಯಾಸ ನಡೆಯಿತು. 1915ರಲ್ಲಿ ವೆಸ್ಟ್‌ಪಾಯಿಂಟ್ ಮಿಲಿಟರಿ ಅಕೆಡಮಿಯಲ್ಲಿ ಪದವಿ ಸಂಪಾದಿಸಿ ಯೋಧನಾಗಿ ಜೀವನವನ್ನಾರಂಭಿಸಿದ ಐಸೆನ್ಹೌವರ್ ಒಂದನೆಯ ಮಹಾಯುದ್ಧ ಕಾಲದಲ್ಲಿ ಟ್ಯಾಂಕ್ ಯುದ್ಧತಂತ್ರದ ಬೋಧಕನಾಗಿ ಹೆಸರು ಗಳಿಸಿದನಾದರೂ ಯುದ್ಧರಂಗದಲ್ಲಿ ಹೋರಾಡಿದವರ ಸಾಹಸದ ಮುಂದೆ ಐಸೆನ್ಹೌವರ್ ಕೀರ್ತಿ ಅಷ್ಟಾಗಿ ಪ್ರಕಾಶಕ್ಕೆ ಬರಲಿಲ್ಲ. ಒಳ್ಳೆಯ ಮೈಕಟ್ಟಿದ್ದ ಐಸೆನ್ಹೌವರ್ ಎಲ್ಲ ಆಟಗಳಲ್ಲೂ ನಿಷ್ಣಾತನಾಗಿದ್ದ. ಸೇನೆಯ ಫುಟ್ಬಾಲ್ ತಂಡದಲ್ಲಿ ಈತನೂ ಇದ್ದ.
ರಾಜಕೀಯ ಜೀವನ
[ಬದಲಾಯಿಸಿ]ಎರಡು ಮಹಾಯುದ್ಧಗಳ ನಡುವಣ ಕಾಲದಲ್ಲಿ ಐಸೆನ್ಹೌವರ್ ಅಮೆರಿಕನ್ ಮಹಾದಂಡನಾಯಕ ಮೆಕಾರ್ಥರನ ಸಿಬ್ಬಂದಿಯಲ್ಲೊಬ್ಬನಾಗಿದ್ದು ವಾಷಿಂಗ್ಟನ್ ಫಿಲಿಪೀನ್ಸ್‌ಗಳಲ್ಲಿ ದುಡಿದು ತನ್ನ ಮೇಲಧಿಕಾರಿಯ ಗಮನ ಸೆಳೆದನಾದರೂ ಮೂವತ್ತು ವರ್ಷ ಕಾಲವಾದ ಮೇಲೂ ಆತ ಲೆಫ್ಟಿನೆಂಟ್ ಕರ್ನಲ್ ದರ್ಜೆಯಿಂದ ಮೇಲೇರಿರಲಿಲ್ಲ. ಆಗ ಈತನ ವಯಸ್ಸು 50. 1941 ಬಂತು. ಆಗ ಇವನ ಶಕ್ತಿಪ್ರಕಾಶನಕ್ಕೆ ಅವಕಾಶ ದೊರಕಿತು. ಐಸೆನ್ಹೌವರ್ ಕರ್ನಲ್ ಆದ. ಅನಂತರ ಬ್ರಿಗೇಡಿಯರ್ ಜನರಲ್ ಹುದ್ದೆಯೂ ಬಂತು. ಪೆರ್ಲ್ ಹಾರ್ಬರಿನಲ್ಲಿ ಜಪಾನೀಯರು ಅಮೆರಿಕನ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದಾಗ ಅಮೆರಿಕವೂ ಯುದ್ಧದಲ್ಲಿ ಧುಮುಕಿತು. ಐಸೆನ್ಹೌವರ್ನ ಯೋಗ್ಯತೆಯನ್ನು ಅಮೆರಿಕನ್ ಸೇನೆಯ ಪ್ರಧಾನ ದಂಡನಾಯಕನಾಗಿದ್ದ ಜಾರ್ಜ್ ಮಾರ್ಷಲ್ ಗುರುತಿಸಿ ಅವನನ್ನು ಮೇಲೆತ್ತಿ ಯುರೋಪಿನಲ್ಲಿದ್ದ ಅಮೆರಿಕನ್ ಸೇನೆಗಳ ನಾಯಕನಾಗಿ ನೇಮಿಸಿದ. ಮೊದಲು ಐರೋಪ್ಯ ಯುದ್ಧರಂಗ ಕ್ಕಿಳಿದು ನಾಜಿ಼ಗಳನ್ನು ಸೋಲಿಸಿ ಅನಂತರ ಪೆಸಿಫಿಕ್ ರಂಗದಲ್ಲಿ ಯುದ್ಧ ಬಿರುಸು ಮಾಡಬೇಕೆಂಬ ಅಂಶವನ್ನು ಐಸೆನ್ಹೌವರ್ ಮನಗಂಡಿದ್ದ. ಯುರೋಪಿನ ಆಕ್ರಮಣಕ್ಕೆ ಹಂಚಿಕೆ ತಯಾರಿಸಿದ್ದ. ಇದರಿಂದ ಐಸೆನ್ ಹೌವರ್ ಬಗ್ಗೆ ವಿಶ್ವಾಸ ವೃದ್ಧಿ ಯಾಯಿತು. ಐಸೆನ್ಹೌವರ್ನ ಸ್ನೇಹಪರತೆ, ದೃಢಚಿತ್ತ ಇವು ಪ್ರಕಾಶಗೊಂಡದ್ದು ಆಗ. ಯುದ್ಧ ಮಿತ್ರರ ಐಕಮತ್ಯಕ್ಕಾಗಿ ಐಸೆನ್ಹೌವರ್ ದುಡಿದ. ಅಮೆರಿಕನ್ ಮತ್ತು ಬ್ರಿಟಿಷ್ ಸಂಯುಕ್ತ ಸೇನೆಗಳ ಅಧಿಪತಿಯಾಗಿ ಉತ್ತರ ಆಫ್ರಿಕದ ಆಕ್ರಮಣ ಕಾರ್ಯದಲ್ಲಿ ಈತ ತೋರಿದ ಎದೆಗಾರಿಕೆ ಹಾಗೂ ತಂತ್ರನೈಪುಣ್ಯ ಅಸಾಧಾರಣ. ತನ್ನ ಎರಡನೆಯ ಪ್ರಯತ್ನದಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿಸಿ ಟ್ಯೂನಿಸಿನಿಂದ ಮುಂದುವರಿದು ಆರೇ ವಾರಗಳಲ್ಲಿ ಸಿಸಿಲಿಯನ್ನಾಕ್ರಮಿಸಿದ. ಮಿತ್ರಪಕ್ಷದ ಸೈನ್ಯಗಳ ದಂಡನಾಯಕನಾಗಿ ಒಮ್ಮತದಿಂದ ಚುನಾಯಿತನಾದ. 1944ರಲ್ಲಿ ನಾರ್ಮಂಡಿಯಲ್ಲಿ ಮಿತ್ರಸೈನ್ಯ ಇಳಿಯಿತು. ಜರ್ಮನಿ ಸೋತು ಶರಣಾಗತವಾಗಲು ಈ ಯುದ್ಧ ತಂತ್ರವೂ ಕಾರಣ. ಎರಡನೆಯ ಮಹಾಯುದ್ಧ ಮುಗಿದ ಮೇಲೆ, 1948ರಲ್ಲಿ ಈತ ಕೊಲಂಬಿಯ ವಿಶ್ವವಿದ್ಯಾನಿಲಯದ ಅಧ್ಯಕ್ಷನಾದ. ಈತ ಉತ್ತರ ಅಟ್ಲಾಂಟಿಕ್ ಕೌಲು ಸಂಸ್ಥೆಯ ಸಂಯುಕ್ತ ಪಡೆಗಳ ಪರಮೋನ್ನತ ದಂಡನಾಯಕನಾಗಿ ನೇಮಕವಾದದ್ದು 1951ರಲ್ಲಿ. 1952ರಲ್ಲಿ ಅಮೆರಿಕದ ಜನಪ್ರಿಯತೆಯನ್ನು ಗಳಿಸಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷತೆಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಗೆದ್ದನಲ್ಲದೆ 1956ರಲ್ಲಿ ಮತ್ತೆ ಅಧ್ಯಕ್ಷನಾದ.
ಐಸೆನ್ಹೌವರ್ ಯೋಧನಾಗಿದ್ದರೂ ಶಾಂತಿಪ್ರಿಯ; ಅಧ್ಯಕ್ಷನಾಗಿದ್ದರೂ ರಾಜಕೀಯ ಅವನಿಗೆ ಸೇರುತ್ತಿರಲಿಲ್ಲ. ಅಮೆರಿಕದ ರಾಜಕಾರಣದಲ್ಲಿ ಐಸೆನ್ಹೌವರ್ ಮುಂದುವರಿದದ್ದು ವೈಯಕ್ತಿಕ ಪ್ರಭಾವದಿಂದಲೇ. ಕೋಟ್ಯಂತರ ಡಾಲರುಗಳನ್ನು ಯುದ್ಧಕ್ಕಾಗಿ ವೆಚ್ಚಮಾಡುವುದನ್ನು ಆತ ಒಪ್ಪುತ್ತಿರಲಿಲ್ಲ.
ಆಡಳಿತ
[ಬದಲಾಯಿಸಿ]ತನ್ನ ಅಧಿಕಾರದ ಕಾಲದಲ್ಲಿ ಮಹತ್ತ್ವದ ಕ್ರಮಗಳನ್ನೇನೂ ಕೈಗೊಳ್ಳಲಿಲ್ಲವೆಂದು ಐಸೆನ್ಹೌವರ್ ಬಗ್ಗೆ ಒಂದು ಟೀಕೆಯುಂಟು. ವಿಯೆಟ್ನಾಂ ಯುದ್ಧದ ಉಗಮ ಚಿಹ್ನೆಗಳು ಕಾಣಿಸಿಕೊಂಡದ್ದು ಇವನ ಕಾಲದಲ್ಲಿ. ರಾಷ್ಟ್ರಭದ್ರತೆ, ವಿದ್ಯಾಭಿವೃದ್ಧಿ, ವಸತಿನಿರ್ಮಾಣ, ನಗರ ನೈರ್ಮಲ್ಯ, ಸಾರ್ವಜನಿಕ ಆರೋಗ್ಯ ಮುಂತಾದ ವಿಷಯಗಳಿಗೆ ಹೆಚ್ಚು ಗಮನಕೊಟ್ಟು, ದಕ್ಷಿಣದ ಪ್ರಾಂತ್ಯಗಳಲ್ಲಿ ರೂಢಿಯಲ್ಲಿದ್ದ. ನೀಗ್ರೋಗಳನ್ನು ಬಿಳಿಯರಿಂದ ಪ್ರತ್ಯೇಕಿಸುವ, ವರ್ಣನೀತಿಯನ್ನು ಉಗ್ರವಾಗಿ ಖಂಡಿಸಿದ; ರಾಷ್ಟ್ರಜೀವನದಲ್ಲಿ ವರ್ಣೀಯರ ಮತ್ತು ಬಿಳಿಯರ ಮೂಲಾಧಾರ ಹಕ್ಕುಗಳು ಒಂದೇ ಎಂದು ಸಾರಿದ. ಶಿಕ್ಷಣ ಸಂಸ್ಥೆಗಳಲ್ಲಿ ಬಿಳಿಯರು ಮತ್ತು ನೀಗ್ರೋಗಳಿಗೆ ಸಮಾನಾವಕಾಶವಿರಬೇಕು ಎಂದು ಆಜ್ಞೆ ಹೊರಡಿಸಿದ; ಇದನ್ನು ವಿರೋಧಿಸಿ ಗಲಭೆಯೆಬ್ಬಿಸಿದವರನ್ನು ದಂಡಿಸಿದ. 1938ರಲ್ಲಿ ಅಲಾಸ್ಕ ಮತ್ತು ಹವಾಯ್ ಸಂಯುಕ್ತ ಸಂಸ್ಥಾನಕ್ಕೆ ಸೇರಿದುವು. ಕಮ್ಯೂನಿಸ್ಟ್ ತತ್ತ್ವದ ವ್ಯಾಪ್ತಿಯನ್ನು ತಡೆಗಟ್ಟುವುದು ಈತನ ವಿದೇಶಾಂಗ ನೀತಿಯಾಗಿದ್ದರೂ ಆಗ್ನೇಯ ಏಷ್ಯದ ರಾಜ್ಯಗಳ ಆರ್ಥಿಕಾಭಿವೃದ್ಧಿಗಾಗಿ ಉದಾರವಾಗಿ ಸಾಲ ನೀಡಿದ್ದೂ ಕಮ್ಯೂನಿಸ್ಟ್ ರಾಷ್ಟ್ರಗಳು ಆ ರಾಜ್ಯಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸಿದರೆ ಸೈನಿಕ ನೆರವು ನೀಡುವುದಾಗಿ ಅವುಗಳಿಗೆ ಭರವಸೆ ನೀಡಿದ್ದೂ ಅಲ್ಲದೆ 1956ರ ಸೂಯೆಜ್ó ಕಾಲುವೆ ಬಿಕ್ಕಟ್ಟನ್ನು ಬಗೆಹರಿಸಲೆತ್ನಿಸಿದ್ದೂ ಚಿಯಾಂಗ್-ಕೈŠಷೇಕನ ಸಹಾಯಕ್ಕೆ ಅಮೆರಿಕ ನುಗ್ಗುವುದೆಂದು ಘೋಷಿಸಿ ಚೀನೀ ದಾಳಿಯನ್ನು ತಪ್ಪಿಸಿದ್ದೂ ಐಸೆನ್ಹೌವರ್ ಕೈಕೊಂಡ ಕೆಲವು ಕ್ರಮಗಳು. ಕಮ್ಯೂನಿಸ್ಟ್ ರಾಜ್ಯವಾದ ಹಂಗರಿಯಲ್ಲಿ ಬಂಡಾಯವೆದ್ದದ್ದೂ ಈತನ ಅಧಿಕಾರದ ಕಾಲದಲ್ಲೆ. ಮುಂದಿನ ಅಧ್ಯಕ್ಷನಾದ ಕೆನೆಡಿಯ ಕಾಲದಲ್ಲಿ ಸಂಭವಿಸಿದ ಕ್ಯೂಬ ಹಗರಣವೂ ಐಸೆನ್ಹೌವರ್ ಅಧಿಕಾರದ ಅವಧಿಯಲ್ಲೇ ಆರಂಭವಾಯಿತು. ಆದರೆ ಸೋವಿಯತ್ ರಷ್ಯದ ಪ್ರಧಾನಿಯಾಗಿದ್ದ ಖ್ರುಶ್ಚಾಫ್ ಬರ್ಲಿನ್ ದಿಗ್ಭಂಧನದ ಬೆದರಿಕೆ ಹಾಕಿದಾಗ ಐಸೆನ್ಹೌವರನ ನೇರ ಪ್ರವೇಶದಿಂದ ಅದು ಪರಿಹಾರವಾಯಿತು. ಖ್ರುಶ್ಚಾಫ್ ಅಮೆರಿಕಕ್ಕೆ ಭೇಟಿ ನೀಡಿದ. ಐಸೆನ್ಹೌವರನೂ ರಷ್ಯದ ಸಂದರ್ಶನ ಮಾಡಲಿದ್ದು, ಈ ರಾಷ್ಟ್ರ ನಾಯಕರ ವೈಯಕ್ತಿಕ ಸ್ನೇಹದ ತಳಹದಿಯ ಮೇಲೆ ಅಂತಾರಾಷ್ಟ್ರೀಯ ಸೌಹಾರ್ದ ಬೆಳೆಯುವ ಸೂಚನೆಗಳು ಕಂಡು ಬಂದಿದ್ದುವು. ಆದರೆ ಅಷ್ಟರಲ್ಲೆ ಅಮೆರಿಕನ್ ಗೂಢಚರ್ಯೆಯ ವಿಮಾನವೊಂದು ತನ್ನ ಪ್ರದೇಶವನ್ನು ಪ್ರವೇಶಿಸಿತೆಂಬ ಕಾರಣದಿಂದ ಸೋವಿಯತ್ ದೇಶ ಅದನ್ನು ಹೊಡೆದುರುಳಿಸಿತು. ಮತ್ತೆ ವಿರಸ ಮೂಡಿತು. ಐಸೆನ್ಹೌವರನ ರಷ್ಯ ಭೇಟಿ ರದ್ದಾಯಿತು.
ಈತ ಅಧ್ಯಕ್ಷನಾಗಿದ್ದಾಗ ದೊಡ್ಡ ಯುದ್ಧವೇನೂ ಆಗಲಿಲ್ಲ. ಆದರೆ ಶಾಂತಿ ಭದ್ರವಾಗುವ ಭರವಸೆಯೂ ದೊರಕಲಿಲ್ಲ. ಐಸೆನ್ಹೌವರ್ ಒಳ್ಳೆಯ ಯೋಧನಾದರೂ ಆತನಿಗೆ ಯುದ್ಧ ಬೇಕಿರಲಿಲ್ಲ; ಯುದ್ಧವಾಗಲೇಬಾರದು-ಎಂಬುದು ಅವನ ಆಶಯ. ಯುದ್ಧವೆಂದರೆ ಏನೆಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು.
ನೇರ ನಡೆ, ನೇರ ನುಡಿ, ಸರಳಜೀವನ-ಇವುಗಳಿಂದ ಎಲ್ಲರ ಪ್ರೀತಿಗಳಿಸಿದ್ದವನು ಐಸೆನ್ಹೌವರ್. ಈತನ ಅಡ್ಡ ಹೆಸರು ‘ಐಕ್’.
ಉಲ್ಲೇಖಗಳು
[ಬದಲಾಯಿಸಿ]- ↑ Ferrell, Robert H. (1990). "Eisenhower Was a Democrat" (PDF). Kansas History. 13: 134. Retrieved 2 June 2024.
- ↑ "Post-presidential years". The Eisenhower Presidential Library and Museum. Archived from the original on October 23, 2013. Retrieved September 5, 2012.
- ↑ "The Eisenhowers". Dwight D. Eisenhower Presidential Library, Museum and Boyhood Home. Archived from the original on August 18, 2021. Retrieved October 1, 2021.