ಡೋಂಗ್ರಿ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೋಂಗ್ರಿ ಕೋಟೆ

ಡೋಂಗ್ರಿ ಕೋಟೆ ಅಥವಾ ಡೋಂಗ್ರಿ ಹಿಲ್ ಕೋಟೆಯನ್ನು ಸ್ಥಳೀಯವಾಗಿ ಜಂಜಿರ ಧವರಿ ಕೋಟೆ ಎಂದು ಕರೆಯಲಾಗುತ್ತದೆ. ಈ ಕೋಟೆಯು ಭಾರತದ ಮುಂಬೈನಲ್ಲಿದೆ. ಇದು ೧೭೩೯ ರಲ್ಲಿ ನಿಮಾ‍೯ಣವಾದ ಕೋಟೆಯಾಗಿದೆ . [೧] ಇದು ಡೋಂಗ್ರ ಪ್ರದೇಶದಲ್ಲಿದೆ. ಇದು ಮರಾಠರ ಆಳ್ವಿಕೆಗೆ ಒಳಪಟ್ಟಿತ್ತು. ಅಲ್ಲಿರುವ ಸ್ಥಳೀಯರು ಚರ್ಚ್ ಮತ್ತು ಕೋಟೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು. ಪ್ರತಿ ವರ್ಷ, ಅಕ್ಟೋಬರ್ ತಿಂಗಳಿನಲ್ಲಿ, ಫಾತಿಮಾ ಮಾತೆಯ ಹಬ್ಬವನ್ನು ಅಲ್ಲಿ ಆಚರಿಸಲಾಗುತ್ತದೆ. ದೂರದ ಹಳ್ಳಿಗಳಿಂದ ಅನೇಕ ಜನರು ತಮ್ಮ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಈ ಕೋಟೆಯಿಂದ ಸುತ್ತಮುತ್ತಲಿನ ನೋಟವನ್ನು ಪಡೆಯಬಹುದು. ಕೋಟೆಯ ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ, ಉತ್ತರದಲ್ಲಿ ವಸೈ ಕೋಟೆ, ಪೂರ್ವದಲ್ಲಿ ಬೊರಿವಲಿ ರಾಷ್ಟ್ರೀಯ ಉದ್ಯಾನವನ ಮತ್ತು ದಕ್ಷಿಣದಲ್ಲಿ ಎಸ್ಸೆಲ್ ವರ್ಲ್ಡ್ ಮತ್ತು ವಾಟರ್ ಕಿಂಗ್ಡಮ್ ಇದೆ. [೨] [೩]

ಉಲ್ಲೇಖಗಳು[ಬದಲಾಯಿಸಿ]

  1. "Forts in Mumbai and Maharashtra to get a revamp". The Times of India. Retrieved 2017-06-19.
  2. "History of Dongri Fortification".
  3. "dongri fort".