ಡೋಂಗರ್‌ಗಢ್
ಡೋಂಗರ್‌ಗಢ್ ಭಾರತದ ಛತ್ತೀಸ್‌ಗಢ ರಾಜ್ಯದ ರಾಜ್‍ನಂದಗಾಂವ್ ಜಿಲ್ಲೆಯ ಒಂದು ಪಟ್ಟಣ. ಇದು ಬಂಬ್ಲೇಶ್ವರಿ ದೇವಾಲಯ ಮತ್ತು ಚಂದ್ರಗಿರಿ ಜೈನ ದೇವಾಲಯದ ತಾಣವಾಗಿದೆ. ಭವ್ಯವಾದ ಪರ್ವತಗಳು ಮತ್ತು ಕೊಳಗಳನ್ನು ಹೊಂದಿರುವ ಡೋಂಗರ್‌ಗಢ್ ಈ ಪದಗಳಿಂದ ಬಂದಿದೆ: ಡೋಂಗರ್ ಎಂದರೆ 'ಪರ್ವತಗಳು' ಮತ್ತು ಗಢ್ ಎಂದರೆ 'ಕೋಟೆ'. ಇದು ಛತ್ತೀಸ್‌ಗಢದ ಅತ್ಯುತ್ತಮ ಪ್ರವಾಸೋದ್ಯಮ ಸ್ಥಳವಾಗಿದೆ.[೧]
ಮಾ ಬಮ್ಲೇಶ್ವರಿ ದೇವಿ ದೇವಸ್ಥಾನವು[೨] 1,600 feet (490 m) ) ಎತ್ತರದ ಗುಡ್ಡದ ತುದಿಯ ಮೇಲೆ ನೆಲೆಗೊಂಡಿದೆ. ಇದು ಜನಪ್ರಿಯ ಹೆಗ್ಗುರುತಾಗಿದೆ. ಇದು ಹೆಚ್ಚಿನ ಆಧ್ಯಾತ್ಮಿಕ ಪ್ರಾಮುಖ್ಯವನ್ನು ಹೊಂದಿದೆ ಮತ್ತು ಹಲವಾರು ದಂತಕಥೆಗಳು ಈ ದೇವಾಲಯದೊಂದಿಗೆ ಸಂಬಂಧ ಹೊಂದಿವೆ. ಹತ್ತಿರದ ಮತ್ತೊಂದು ಪ್ರಮುಖ ದೇವಾಲಯವೆಂದರೆ ಛೋಟಿ ಬಮ್ಲೇಶ್ವರಿ ದೇವಸ್ಥಾನ. ನವರಾತ್ರಿಯ ಸಮಯದಲ್ಲಿ ಈ ದೇವಾಲಯಗಳಿಗೆ ಭಕ್ತರು ಹರಿದು ಬರುತ್ತಾರೆ. ಶಿವ್‍ಜಿ ದೇವಸ್ಥಾನ ಮತ್ತು ಹನುಮಂತನಿಗೆ ಸಮರ್ಪಿತವಾದ ದೇವಾಲಯಗಳೂ ಇಲ್ಲಿವೆ. ರಜ್ಜುಪಥವು ಹೆಚ್ಚುವರಿ ಆಕರ್ಷಣೆಯಾಗಿದೆ ಮತ್ತು ಇದು ಛತ್ತೀಸ್‌ಗಢದ ಏಕೈಕ ಪ್ರಯಾಣಿಕ ರಜ್ಜುಪಥವಾಗಿದೆ.
ಪಟ್ಟಣವು ಧಾರ್ಮಿಕ ಸಾಮರಸ್ಯಕ್ಕೆ ಪರಿಚಿತವಾಗಿದೆ. ಪ್ರಗ್ಯಾಗಿರಿ ಗುಡ್ಡದ ತುದಿಯಲ್ಲಿರುವ 30 ಅಡಿ ಎತ್ತರದ ಬುದ್ಧನ ಪ್ರತಿಮೆಯು ಪಟ್ಟಣದ ಮತ್ತೊಂದು ಆಕರ್ಷಣೆಯಾಗಿದೆ. ಇದು ಪಟ್ಟಣದ ಎಲ್ಲಾ 06 ಪ್ರಮುಖ ಬೆಟ್ಟಗಳಿಂದ ಗೋಚರಿಸುತ್ತದೆ. ಇವುಗಳ ಜೊತೆಗೆ ಚಂದ್ರಗಿರಿ ಎಂದು ಕರೆಯಲ್ಪಡುವ ಗುಡ್ಡದ ಮೇಲೆ ಜೈನ ಮಂದಿರವೂ ನಿರ್ಮಾಣವಾಗುತ್ತಿದೆ.[೩] ಈ ದೇವಾಲಯವು ತೀರ್ಥಂಕರರಾದ ಚಂದ್ರಪ್ರಭುಜಿಯ ಪುರಾತನ ಪ್ರತಿಮೆಗಾಗಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ.
ಚಿತ್ರಸಂಪುಟ
[ಬದಲಾಯಿಸಿ]-
ಬಂಬ್ಲೇಶ್ವರಿ ದೇವಸ್ಥಾನದ ದಾರಿ
-
ದೇವಿ ಬಂಬ್ಲೇಶ್ವರಿ
-
ಬಂಬ್ಲೇಶ್ವರಿ ದೇವಸ್ಥಾನದಿಂದ ಡೋಂಗರ್ಗಢ್ಗೆ ರಜ್ಜುಪಥ
-
ಡೋಂಗರ್ಗಢ್ನಿಂದ ಬಂಬ್ಲೇಶ್ವರಿ ದೇವಸ್ಥಾನಕ್ಕೆ ಹಾದುಹೋಗುವ ದಾರಿ
-
ಪ್ರಗ್ಯಾಗಿರಿಯಲ್ಲಿ ಬುದ್ಧನ ಪ್ರತಿಮೆ
-
ಪ್ರಗ್ಯಾಗಿರಿ ಉದ್ಯಾನ
-
ರಾಕ್ ಪ್ರಗ್ಯಾಗಿರಿ
-
ಪ್ರಗ್ಯಾಗಿರಿಯಿಂದ ಬಂಬ್ಲೇಶ್ವರಿಯ ದರ್ಶನ
-
ವಿವರಗಳು ಪ್ರಗ್ಯಾಗಿರಿಯಲ್ಲಿ
-
ಪ್ರಗ್ಯಾಗಿರಿಯ ಪ್ರವೇಶದ್ವಾರ
-
ಬುದ್ಧನ ಪ್ರತಿಮೆ ಪ್ರಗ್ಯಾಗಿರಿಯಲ್ಲಿ
-
ಪ್ರಗ್ಯಾಗಿರಿಯಲ್ಲಿ ಸೂಚನಾಫಲಕ
ಉಲ್ಲೇಖಗಳು
[ಬದಲಾಯಿಸಿ]- ↑ "Welcome to cgg Tourism - Official Website of Department of Tourism, Government of cgg". cgg Tourism (in ಇಂಗ್ಲಿಷ್). Retrieved 2021-09-01.
- ↑ "Maa Bamleshwari Devi Temple Dongargarh". The Backpack Diaries. 2018-04-20. Archived from the original on 2018-09-25. Retrieved 2022-11-30.
- ↑ "Vidyasagar Ji Maharaj | Vidyasagar Ji Maharaj Pravachan | Jain Religion In Hindi". Vidyasagar Ji Maharaj | Vidyasagar Ji Maharaj Pravachan | Jain Religion In Hindi (in ಅಮೆರಿಕನ್ ಇಂಗ್ಲಿಷ್). Retrieved 2019-07-20.