ಡೇವಿ ಡಿ ಬ್ಯೂಲ್
ಡೇವಿ ಡಿ ಬ್ಯೂಲ್ (ಜನನ 7 ನವೆಂಬರ್ 1981) ಅವರು ಬೆಲ್ಜಿಯಂನ ಮಾಜಿ ವೃತ್ತಿಪರ ಫುಟ್ಬಾಲ್ ಆಟಗಾರ. ಅವರು ಬೆಲ್ಜಿಯಂನ ಫುಟ್‌ಬಾಲ್ ತಂಡದಲ್ಲಿ ಬಲ ಮಿಡ್‌ಫೀಲ್ಡರ್ ಆಗಿ ಆಡುತ್ತಿದ್ದರು.
ವೃತ್ತಿ
[ಬದಲಾಯಿಸಿ]ಡಿ ಬ್ಯೂಲ್ ಅವರು ಬೆಲ್ಜಿಯಂನ ಹ್ಯಾಮೆ ಎಂಬಲ್ಲಿ ಜನಿಸಿದರು. ಅವರು 6 ನೇ ವಯಸ್ಸಿನಲ್ಲಿ ಹ್ಯಾಮೆಯನ್ನು ತೊರೆದರು ಮತ್ತು 1992 ರಲ್ಲಿ ಲೋಕರೆನ್ ಗೆ ತೆರಳಿದರು. ಆರು ವರ್ಷಗಳ ನಂತರ ಅವರು ಫುಟ್‌ಬಾಲ್ ಕ್ಲಬ್‌ನ ಮೊದಲ ತಂಡವನ್ನು ಪ್ರವೇಶಿಸಿದರು. ಅವರು ಲೋಕರೆನ್‌ಗಾಗಿ ಒಟ್ಟು 128 ಪಂದ್ಯಗಳನ್ನು ಆಡಿದ್ದಾರೆ. 2002-03 ಸಾಲಿನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅವರ ಕ್ಲಬ್ ಮೂರನೇ ಸ್ಥಾನದ ಸಾಧನೆಯನ್ನು ಮಾಡುವಲ್ಲಿ ಡಿ ಬ್ಯೂಲ್ ರವರು ಪರಮುಖ ಪಾತ್ರವನ್ನು ವಹಿಸಿದ್ದರು. ಮತ್ತು ಅವರು ಆ ವರ್ಷದ ಬೆಲ್ಜಿಯನ್ ಯುವ ವೃತ್ತಿಪರ ಫುಟ್ಬಾಲ್ ಆಟಗಾರ ಎಂದು ಗುರುತಿಸಲ್ಪಟ್ಟರು.[೧] ಅವರು 2004 ರವರೆಗೆ ಲೋಕರೆನ್‌ನಲ್ಲಿಯೇ ಇದ್ದರು, ತದನಂತರ ಜೆಂಟ್‌ಗೆ ತೆರಳಿದರು. ಜೆಂಟ್ ಫುಟ್‌ಬಾಲ್ ಕ್ಲಬ್ ಮೂಲಕ ಅವರು 2007-08ರ ಬೆಲ್ಜಿಯನ್ ಫುಟ್‌ಬಾಲ್ ಕಪ್ ಚಾಂಪಿಯನ್ಶಿಪ್ನ ಫೈನಲ್ ಸುತ್ತನ್ನು ಪ್ರವೇಶಿಸಿದರು. 2006 ಮತ್ತು 2007 ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. 2009 ರಲ್ಲಿ Kortrijk ಗೆ ತೆರಳಿದ ಅವರು, 2011 ರವರೆಗೆ ಅಲ್ಲಿಯೇ ಇದ್ದರು. [೨] ಮುಂದೆ, ಅವರು ಎರೆಡಿವಿಸಿಯ ರೋಡಾಗೆ ಸೇರಿದರು. [೨] ರೋಡಾದಲ್ಲಿ ಅವರು ಮೊದಲ ವರ್ಷದಲ್ಲಿ 24 ಪಂದ್ಯಗಳನ್ನು ಆಡಿದರು ಮತ್ತು 4 ಗೋಲುಗಳನ್ನು ಗಳಿಸಿದರು. [೩] ತದನಂತರ 2014 ರಲ್ಲಿ ಅವರು ಬೀರ್‌ಶಾಟ್ ವಿಲ್ರಿಜ್‌ಗೆ ತೆರಳಿದರು. 2017 ರಲ್ಲಿ ಡಿ ಬ್ಯೂಲ್ ರವರು ಆಟಗಾರರಾಗಿ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಕೊನೆಗೊಳಿಸಿದರು.
ಅಂತರರಾಷ್ಟ್ರೀಯ ವೃತ್ತಿಜೀವನ
[ಬದಲಾಯಿಸಿ]ಲೊಕೆರೆನ್‌ನಲ್ಲಿ ಅವರ ವೃತ್ತಿ ಜೀವನದ ಉತ್ತುಂಗದಲ್ಲಿ ಅವರು ಬೆಲ್ಜಿಯಂನ ರಾಷ್ಟ್ರೀಯ ಫುಟ್‌ಬಾಲ್ ತಂಡಕ್ಕೆ ಆಯ್ಕೆಯಾದರು, [೪] ಆದರೆ ತರಬೇತಿಯ ಸಮಯದಲ್ಲಿ ಗಾಯಗೊಂಡರು ಮತ್ತು ಆದ್ದರಿಂದ ರಾಷ್ಟ್ರೀಯ ತಂಡದೊಂದಿಗೆ ಚೊಚ್ಚಲ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. [೫]
ಕ್ಲಬ್
[ಬದಲಾಯಿಸಿ]- ಲೋಕರೆನ್
- ಬೆಲ್ಜಿಯನ್ ಮೊದಲ ವಿಭಾಗ ಎ ಮೂರನೇ ಸ್ಥಾನ: 2002–03
- ಜೆಂಟ್
- ಬೆಲ್ಜಿಯನ್ ಕಪ್ ರನ್ನರ್ ಅಪ್: 2007–08
- UEFA ಇಂಟರ್ಟೋಟೊ ಕಪ್ ರನ್ನರ್-ಅಪ್: 2006, 2007
ವೈಯಕ್ತಿಕ
[ಬದಲಾಯಿಸಿ]- ವರ್ಷದ ಬೆಲ್ಜಿಯನ್ ಯುವ ವೃತ್ತಿಪರ ಫುಟ್ಬಾಲ್ ಆಟಗಾರ : 2002–03 [೪]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Voetbal ಅಂತರಾಷ್ಟ್ರೀಯ ಪ್ರೊಫೈಲ್ Archived 2015-07-21 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ https://www.eurosport.com/football/davy-de-beule_prs205807/person.shtml
- ↑ ೨.೦ ೨.೧ "Davy de Beule". Kicker. Retrieved 30 November 2021.
- ↑ "Davy De Beule". Soccerway. Retrieved 30 November 2021.
- ↑ ೪.೦ ೪.೧ "Davy De Beule (Sp. Lokeren) over de tijd van toen: "De voodoo-gebruiken van de Afrikanen, daar moet je de charme van inzien"". Retrieved 30 November 2021."Davy De Beule (Sp. Lokeren) over de tijd van toen: "De voodoo-gebruiken van de Afrikanen, daar moet je de charme van inzien"". Retrieved 30 November 2021.
- ↑ Van den Broeck, David. "Hoe zou het nog zijn met voetballer Davy De Beule? "De stallen van ons paardenhotel uitmesten, doe ik zonder morren"". Het Nieuwsblad. Retrieved 30 November 2021.Van den Broeck, David. "Hoe zou het nog zijn met voetballer Davy De Beule? "De stallen van ons paardenhotel uitmesten, doe ik zonder morren"". Het Nieuwsblad. Retrieved 30 November 2021.